“ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ”
1 ಸಮಯವು ಗತಿಸಿದಂತೆ, ಪ್ರಾಮುಖ್ಯ ಸಂಗತಿಗಳ ಮಹತ್ವವು ಕುಂದುವಂತೆ ಬಿಡುವ ಪ್ರವೃತ್ತಿ ಮನುಷ್ಯರಿಗಿದೆ. “ಕರ್ತನ ಸಂಧ್ಯಾ ಭೋಜನ” (NW)ವನ್ನು ಆರಂಭಿಸುವಾಗ, ಯೇಸು ತನ್ನ ಶಿಷ್ಯರಿಗೆ “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಆಜ್ಞಾಪಿಸಲು ಇದು ಒಂದು ಕಾರಣವಾಗಿತ್ತು. ಅಂದಿನಿಂದ, ಯೇಸುವಿನ ಮರಣದ ವಾರ್ಷಿಕೋತ್ಸವದಂದು, ಕ್ರೈಸ್ತರು ವಿಧೇಯತೆಯಿಂದ “ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿ”ಸುತ್ತಾ ಇದ್ದಾರೆ.—1 ಕೊರಿಂ. 11:20, 23-26.
2 ಈಗ ಬಲು ಬೇಗನೆ, ‘ಚಿಕ್ಕ ಹಿಂಡಿನ’ ಕಡಿಮೆಯಾಗುತ್ತಿರುವ ಉಳಿಕೆಯವರಲ್ಲಿ ಕೊನೆಯವರನ್ನು ಯೇಸು ಸ್ವರ್ಗೀಯ ವಾಸಸ್ಥಾನಕ್ಕೆ ಸೇರಿಸಿಕೊಳ್ಳುವನು. (ಲೂಕ 12:32; ಯೋಹಾ. 14:2, 3) ಈ ವರ್ಷ ಏಪ್ರಿಲ್ 11ರಂದು ಹೆಚ್ಚುತ್ತಿರುವ ‘ಬೇರೆ ಕುರಿಗಳ’ ಮಹಾ ಸಮೂಹದವರೊಂದಿಗೆ ಅಭಿಷಿಕ್ತ ಉಳಿಕೆಯವರು, ಪುನಃ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವ ಸುಯೋಗವನ್ನು ಹೊಂದುವರು. (ಯೋಹಾ. 10:16; ಪ್ರಕ. 7:9, 10) ಮಾನವಕುಲಕ್ಕಾಗಿ ತನ್ನ ಏಕಜಾತ ಪುತ್ರನನ್ನು ಕಳುಹಿಸುವುದರಲ್ಲಿ ಯೆಹೋವನ ಮಹಾ ಪ್ರೀತಿಗಾಗಿರುವ ಗಣ್ಯತೆಯು ಬಲಪಡಿಸಲ್ಪಡುವುದು. ಯೇಸುವಿನ ಮಾದರಿ, ಅವನ ಪ್ರೀತಿ, ಪ್ರಾಯಶ್ಚಿತ್ತವನ್ನು ಒದಗಿಸಲಿಕ್ಕಾಗಿ ಮರಣದ ತನಕ ಅವನು ತೋರಿಸಿದ ನಂಬಿಗಸ್ತಿಕೆ, ಮತ್ತು ದೇವರ ಸ್ಥಾಪಿತ ರಾಜ್ಯದ ರಾಜನಾಗಿ ಅವನು ಈಗ ಆಳುತ್ತಿರುವ ವಿಷಯ ಹಾಗೂ ಆ ರಾಜ್ಯವು ಮಾನವಕುಲಕ್ಕೆ ತರುವ ಆಶೀರ್ವಾದಗಳನ್ನು ಎತ್ತಿಹೇಳಲಾಗುವುದು. ನಿಜವಾಗಿಯೂ ಸ್ಮರಣಯೋಗ್ಯವಾದ ಒಂದು ಸಂದರ್ಭ!
3 ಈಗಲೇ ತಯಾರಿಮಾಡಿರಿ: ಜ್ಞಾಪಕದ ಈ ಕಾಲವನ್ನು, ನಮಗೆ ಮತ್ತು ನಮ್ಮೊಂದಿಗೆ ಸಹವಾಸಿಸುವವರೆಲ್ಲರಿಗೆ ಮಹಾ ಆನಂದ ಮತ್ತು ಕೃತಜ್ಞತೆಯ ಸಮಯವನ್ನಾಗಿ ಮಾಡಲು ನಾವೆಲ್ಲರೂ ಕೆಲಸಮಾಡೋಣ. ಯೇಸುವಿನ ಶುಶ್ರೂಷೆಯ ಕೊನೆಯ ಕೆಲವು ದಿನಗಳ ಮತ್ತು ಅವನ ಮರಣಕ್ಕೆ ನಡಿಸಿದಂತಹ ಘಟನೆಗಳ ಕುರಿತಾದ ಬೈಬಲ್ ವೃತ್ತಾಂತಗಳನ್ನು ಪುನಃ ಓದುವ ಮೂಲಕ ನಾವು ಯೇಸುವಿನ ಮರಣಕ್ಕಾಗಿರುವ ನಮ್ಮ ಗಣ್ಯತೆಯನ್ನು ವರ್ಧಿಸಸಾಧ್ಯವಿದೆ. ಜ್ಞಾಪಕದ ಮುಂಚಿನ ಕೆಲವು ವಾರಗಳಲ್ಲಿ ನಮ್ಮ ಕುಟುಂಬ ಅಭ್ಯಾಸವನ್ನು, ಮಹಾನ್ ಪುರುಷ ಪುಸ್ತಕದ 112-16ನೆಯ ಅಧ್ಯಾಯಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಮೀಸಲಾಗಿಡಬಹುದು.
4 ಈ ಸಂದರ್ಭಕ್ಕಾಗಿ ಗಣ್ಯತೆಯನ್ನು ಕಟ್ಟಲು, ಆಮಂತ್ರಿಸಲು ಮತ್ತು ಸ್ವಾಗತಿಸಲ್ಪಟ್ಟಿರುವ ಅನಿಸಿಕೆಯನ್ನುಂಟುಮಾಡಲು ನೀವು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಲ್ಲಿ, ಜ್ಞಾಪಕಕ್ಕೆ ಬರಬಹುದಾದ ಎಷ್ಟು ಮಂದಿಯ ಪರಿಚಯ ನಿಮಗಿದೆ? ಈಗಲೇ ಒಂದು ಪಟ್ಟಿಯನ್ನು ಮಾಡಿರಿ, ಮತ್ತು ಅವರು ಬರುವಂತೆ ಸಹಾಯಮಾಡಲು ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿರಿ. ತದನಂತರ, ಅವರು ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಅವರನ್ನು ಉತ್ತೇಜಿಸುವ ಮೂಲಕ, ಅವರು ಆತ್ಮಿಕವಾಗಿ ಬೆಳೆಯುತ್ತಾ ಇರುವಂತೆ ಅವರಿಗೆ ಸಹಾಯಮಾಡಿರಿ.
5 ಜ್ಞಾಪಕದ ಕಾಲದಲ್ಲಿ, ಪ್ರತಿಯೊಬ್ಬರ ಸಾರುವಿಕೆಯ ಅವಕಾಶಗಳನ್ನು ಹೆಚ್ಚಿಸಲು ವಿಶೇಷ ಏರ್ಪಾಡುಗಳು ಮಾಡಲ್ಪಡುವವು. ಒಳ್ಳೆಯ ಕಾರ್ಯತಖ್ತೆಯನ್ನು ಮಾಡುವ ಮೂಲಕ, ನೀವು ಏಪ್ರಿಲ್, ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಬಲ್ಲಿರೊ? ಯೇಸುವಿನ ಯಜ್ಞವು ನಮಗೆ ಅರ್ಥೈಸುವಂತಹದ್ದೆಲ್ಲವನ್ನೂ ನಾವು ಗಣ್ಯತಾಪೂರ್ವಕವಾಗಿ ನೆನಸಿಕೊಳ್ಳುತ್ತೇವೆಂಬುದನ್ನು ತೋರಿಸುವ ಅತ್ಯುತ್ತಮ ವಿಧಗಳಲ್ಲಿ ಒಂದು, ನಮ್ಮ ದೇವರಾದ ಯೆಹೋವನ ಮತ್ತು ಆತನ ಮಗನ ಮುಖಾಂತರ ಆ ರಾಜ್ಯ ಆಳ್ವಿಕೆಯು ತರುವ ಆಶೀರ್ವಾದಗಳ ಕುರಿತು ಮಾತಾಡುವುದೇ ಆಗಿದೆ.—ಕೀರ್ತ. 79:13; 147:1.