ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 1/1 ಪು. 24-26
  • “ಸಣ್ಣ ಮಕ್ಕಳ ಬಾಯಿಂದ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸಣ್ಣ ಮಕ್ಕಳ ಬಾಯಿಂದ”
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಒಳ್ಳೆಯ ನಡತೆಯು ಒಂದು ಸಾಕ್ಷಿಯನ್ನು ನೀಡುತ್ತದೆ
  • ಪರಿಣಾಮಕಾರಿ ಎಳೆಯ ಸಾಕ್ಷಿಗಳು
  • ಎಳೆಯರ ಧೈರ್ಯ ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುತ್ತದೆ
ಕಾವಲಿನಬುರುಜು—1995
w95 1/1 ಪು. 24-26

“ಸಣ್ಣ ಮಕ್ಕಳ ಬಾಯಿಂದ”

ಸಮುವೇಲನು ಒಬ್ಬ ಎಳೆಯ ಹುಡುಗನಾಗಿದ್ದಾಗ, ಮಹಾ ಯಾಜಕನಾದ ಏಲಿಯನ ಪುತ್ರರ ದುಷ್ಟತ್ವವಿದ್ದಾಗ್ಯೂ ಅವನು ಸರಿಯಾದ ಸೂತ್ರಗಳಿಗೆ ಬಲವಾಗಿ ಅಂಟಿಕೊಂಡನು. (1 ಸಮುವೇಲ 2:22; 3:1) ಎಲೀಷನ ದಿನಗಳಲ್ಲಿ, ಸಿರಿಯಾದಲ್ಲಿದ್ದ ಒಬ್ಬ ಚಿಕ್ಕ ಇಸ್ರಾಯೇಲ್ಯ ಸೆರೆಯಾಳು, ತನ್ನ ಒಡತಿಗೆ ಧೈರ್ಯದ ಸಾಕ್ಷಿಯನ್ನು ಕೊಟ್ಟಳು. (2 ಅರಸು 5:2-4) ಯೇಸು 12 ವರ್ಷ ಪ್ರಾಯದವನಾಗಿದ್ದಾಗ, ಇಸ್ರಾಯೇಲಿನ ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳಿ, ಪ್ರೇಕ್ಷಕರನ್ನು ದಂಗುಬಡಿಸಿದ ಉತ್ತರಗಳನ್ನು ಕೊಡುತ್ತಾ ಅವರೊಂದಿಗೆ ಧೈರ್ಯದಿಂದ ಮಾತಾಡಿದನು. (ಲೂಕ 2:46-48) ಇತಿಹಾಸದಲ್ಲೆಲ್ಲಾ ಆತನ ಎಳೆಯ ಆರಾಧಕರು ಯೆಹೋವನನ್ನು ನಂಬಿಗಸ್ತರಾಗಿ ಸೇವಿಸಿದ್ದಾರೆ.

ಅದೇ ರೀತಿಯ ನಂಬಿಗಸ್ತ ಮನೋವೃತ್ತಿಯನ್ನು ಇಂದಿನ ಎಳೆಯರು ತೋರಿಸುತ್ತಾರೋ? ಖಂಡಿತವಾಗಿ ಹೌದು! ಅನೇಕಾನೇಕ ವಿಶ್ವಾಸಿ ಎಳೆಯರು ಯೆಹೋವನ ಸೇವೆಯಲ್ಲಿ “ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳು” ತ್ತಿದ್ದಾರೆ ಎಂದು ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸುಗಳಿಂದ ಬಂದ ವರದಿಗಳು ತೋರಿಸುತ್ತವೆ. (ಕೀರ್ತನೆ 110:3) ಅವರ ಪ್ರಯತ್ನಗಳ ಉತ್ತಮ ಫಲಿತಾಂಶಗಳು ಎಲ್ಲಾ ಕ್ರೈಸ್ತರನ್ನು, ಎಳೆಯರು ಮತ್ತು ವೃದ್ಧರನ್ನು “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ” ಇರುವಂತೆ ಉತ್ತೇಜಿಸುತ್ತವೆ.—ಗಲಾತ್ಯ 6:9.

ಆರು ವರ್ಷ ಪ್ರಾಯದವಳಾಗಿದ್ದಾಗ ಒಬ್ಬ ಪ್ರಚಾರಕಳಾದ ಮತ್ತು ತನ್ನ ತರಗತಿಯಲ್ಲಿರುವ ಎಲ್ಲರಿಗೆ ಸಾಕ್ಷಿ ಕೊಡುವುದನ್ನು ತನ್ನ ಧ್ಯೇಯವನ್ನಾಗಿ ಮಾಡಿದ ಒಬ್ಬ ಚಿಕ್ಕ ಜಪಾನಿ ಹುಡುಗಿ ಆಯೂಮೀ, ಒಂದು ಒಳ್ಳೇ ಉದಾಹರಣೆಯಾಗಿದ್ದಾಳೆ. ಕ್ಲಾಸ್‌ರೂಮಿನ ಗ್ರಂಥಾಲಯದಲ್ಲಿ ಹಲವಾರು ಪ್ರಕಾಶನಗಳನ್ನು ಇಡಲು ಅವಳಿಗೆ ಅನುಮತಿ ಸಿಕ್ಕಿತು, ಮತ್ತು ಅವಳ ಶಾಲಾಸಂಗಾತಿಗಳು ಕೇಳಬಹುದಾದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಅವಳು ತನ್ನನ್ನು ತಯಾರಿಸಿಕೊಳ್ಳುವಂತಾಯಿತು. ಬಹುತೇಕ ಅವಳ ಎಲ್ಲಾ ಸಹಪಾಠಿಗಳಿಗೆ ಮತ್ತು ಅಧ್ಯಾಪಿಕೆಗೂ ಪ್ರಕಾಶನಗಳ ಒಳ್ಳೆಯ ಪರಿಚಯವಾಯಿತು. ಪ್ರಾಥಮಿಕ ಶಾಲೆಯಲ್ಲಿ ಅವಳು ಕಳೆದ ಆರು ವರ್ಷಗಳಲ್ಲಿ, ಆಯೂಮೀ 13 ಬೈಬಲ್‌ ಅಧ್ಯಯನಗಳನ್ನು ಏರ್ಪಡಿಸಿದಳು. ಅವಳು ನಾಲ್ಕನೆಯ ತರಗತಿಯಲ್ಲಿದ್ದಾಗ ದೀಕ್ಷಾಸ್ನಾನ ಹೊಂದಿದಳು ಮತ್ತು ಅವಳ ಸ್ನೇಹಿತೆಯರಲ್ಲಿ ಅವಳು ಅಭ್ಯಾಸಿಸಿದ ಒಬ್ಬಳು ಆರನೆಯ ತರಗತಿಯಲ್ಲಿದ್ದಾಗ ದೀಕ್ಷಾಸ್ನಾನ ಹೊಂದಿದಳು. ಇನ್ನೂ ಹೆಚ್ಚಾಗಿ, ಈ ಬೈಬಲ್‌ ವಿದ್ಯಾರ್ಥಿಯ ತಾಯಿ ಮತ್ತು ಇಬ್ಬರು ಅಕ್ಕಂದಿರು ಸಹ ಅಭ್ಯಾಸಿಸಿ ದೀಕ್ಷಾಸ್ನಾನ ಹೊಂದಿದರು.

ಒಳ್ಳೆಯ ನಡತೆಯು ಒಂದು ಸಾಕ್ಷಿಯನ್ನು ನೀಡುತ್ತದೆ

“ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ” ಎಂದು ಅಪೊಸ್ತಲ ಪೇತ್ರನು ಹೇಳಿದನು, ಮತ್ತು ಎಳೆಯ ಕ್ರೈಸ್ತರು ಈ ಆಜ್ಞೆಯನ್ನು ಗಂಭೀರವಾಗಿ ತಗೆದುಕೊಳ್ಳುತ್ತಾರೆ. (1 ಪೇತ್ರ 2:12) ಫಲಸ್ವರೂಪವಾಗಿ, ಅವರ ಒಳ್ಳೆಯ ನಡತೆಯು ಅನೇಕ ಸಲ ಒಂದು ಉತ್ತಮ ಸಾಕ್ಷಿಯನ್ನು ಕೊಡುತ್ತದೆ. ಕ್ಯಾಮರೂನ್‌ ಎಂಬ ಆಫ್ರಿಕನ್‌ ದೇಶದಲ್ಲಿ, ಒಬ್ಬ ಮನುಷ್ಯನು ಯೆಹೋವನ ಸಾಕ್ಷಿಗಳ ಸಭಾ ಕೂಟಕ್ಕೆ ಎರಡನೆಯ ಸಲ ಬಂದು ಒಂದು ಚಿಕ್ಕ ಹುಡುಗಿಯ ಬದಿಯಲ್ಲಿ ಕುಳಿತುಕೊಂಡನು. ಭಾಷಣಕರ್ತನು ಸಭಿಕರಿಗೆ ಬೈಬಲಿನಲ್ಲಿ ಒಂದು ಭಾಗವನ್ನು ತೆರೆಯಲು ಆಮಂತ್ರಿಸಿದಾಗ, ಆ ಚಿಕ್ಕ ಹುಡುಗಿಯು ತನ್ನ ಸ್ವಂತ ಬೈಬಲಿನಲ್ಲಿ ಕೂಡಲೇ ಆ ವಚನವನ್ನು ಕಂಡುಹಿಡಿದು ವಾಚನವನ್ನು ಲಕ್ಷ್ಯವಿಟ್ಟು ಅನುಸರಿಸುವದನ್ನು ಆ ಮನುಷ್ಯನು ಗಮನಿಸಿದನು. ಅವಳ ಮನೋಭಾವನೆಯು ಅವನನ್ನು ಎಷ್ಟು ಪ್ರಭಾವಿಸಿತೆಂದರೆ, ಕೂಟದ ಸಮಾಪ್ತಿಯಲ್ಲಿ ಅವನು ಭಾಷಣಕರ್ತನ ಹತ್ತಿರ ಹೋಗಿ, ಹೀಗೆ ಹೇಳಿದನು: “ಈ ಚಿಕ್ಕ ಹುಡುಗಿಯು ನಾನು ನಿಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸಲು ಬಯಸುವಂತೆ ಮಾಡಿದ್ದಾಳೆ.”

ದಕ್ಷಿಣ ಆಫ್ರಿಕದಲ್ಲಿ ಒಂದು ಶಾಲೆಯಿದೆ, ಅದರಲ್ಲಿ 25 ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳ ಮಕ್ಕಳಾಗಿದ್ದಾರೆ. ಅವರ ಒಳ್ಳೆಯ ನಡತೆಯು ಯೆಹೋವನ ಸಾಕ್ಷಿಗಳಿಗೆ ಒಂದು ಒಳ್ಳೆಯ ಖ್ಯಾತಿಯಲ್ಲಿ ಫಲಿಸಿದೆ. ಒಬ್ಬ ಅಧ್ಯಾಪಿಕೆ, ವಿಶೇಷವಾಗಿ ತನ್ನ ಸ್ವಂತ ಚರ್ಚು ಎಳೆಯರಿಗೆ ಸಹಾಯ ಮಾಡುವದರಲ್ಲಿ ಅಸಮರ್ಥವಾಗಿ ಪರಿಣಮಿಸಿರುವಾಗ, ಸಾಕ್ಷಿಗಳಿಗೆ ತಮ್ಮ ಮಕ್ಕಳನ್ನು ಇಷ್ಟು ಚೆನ್ನಾಗಿ ತರಬೇತಿಗೊಳಿಸಲು ಹೇಗೆ ಸಾಧ್ಯವಾಗುತ್ತದೆಂದು ತನಗೆ ಅರ್ಥವಾಗುವದಿಲ್ಲವೆಂದು ಒಬ್ಬ ಸಾಕ್ಷಿ ಹೆತ್ತವಳಿಗೆ ತಿಳಿಸಿದಳು. ಒಬ್ಬ ಹೊಸ ಶಿಕ್ಷಕಿ ಶಾಲೆಯಲ್ಲಿ ಸಹಾಯ ಮಾಡಲು ಬಂದಳು ಮತ್ತು ಸಾಕ್ಷಿ ಮಕ್ಕಳ ಒಳ್ಳೆಯ ನಡತೆಯನ್ನು ಕೂಡಲೇ ಗಮನಿಸಿದಳು. ತಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕಾಗುವದೆಂದು ಅವಳು ಸಾಕ್ಷಿ ಹುಡುಗರಲ್ಲಿ ಒಬ್ಬನನ್ನು ಕೇಳಿದಳು. ಅವಳಿಗೆ ಒಂದು ಬೈಬಲ್‌ ಅಧ್ಯಯನವಿರಬೇಕೆಂದು ಅವನು ವಿವರಿಸಿದನು, ಮತ್ತು ತನ್ನ ಹೆತ್ತವರು ಆಸಕ್ತಿಯನ್ನು ಹಿಂಬಾಲಿಸುವಂತೆ ಅವನು ಏರ್ಪಡಿಸಿದನು.

ಕೊಸ್ಟರೀಕದಲ್ಲಿ ರೀಗೋಬೆರ್‌ಟೋ ತನ್ನ ಇಬ್ಬರು ಸಹಪಾಠಿಗಳು ತ್ರಯೈಕ್ಯ, ಆತ್ಮ ಮತ್ತು ನರಕಾಗ್ನಿಯ ಕುರಿತಾದ ತನ್ನ ಪ್ರಶ್ನೆಗಳನ್ನು ಉತ್ತರಿಸಲು ಬೈಬಲನ್ನು ಉಪಯೋಗಿಸಿದಾಗ ಸತ್ಯದ ನಾದವನ್ನು ಗುರುತಿಸಿದನು. ಶಾಸ್ತ್ರವಚನಗಳನ್ನು ಉಪಯೋಗಿಸುವ ಅವರ ಸಾಮರ್ಥ್ಯದ ಕಾರಣದಿಂದ ಮಾತ್ರವಲ್ಲ ಆದರೆ ಅವರ ಅತ್ಯುತ್ತಮ ನಡತೆಯು ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಆತನು ನೋಡಿದಂಥದಕ್ಕಿಂತ ಎಷ್ಟೋ ಭಿನ್ನವಾಗಿದದರ್ದಿಂದ ಅವರು ಹೇಳಿದ ವಿಷಯಗಳು ಅವನ ಮೇಲೆ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರಿದವು. ಕುಟುಂಬದ ವಿರೋಧದ ಮಧ್ಯೆಯೂ ರೀಗೋಬೆರ್‌ಟೋ ತನ್ನ ಬೈಬಲ್‌ ಅಧ್ಯಯನದಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡುತ್ತಿದ್ದಾನೆ.

ಸ್ಪೆಯಿನ್‌ನಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು—ಅವರಲ್ಲಿ ಒಬ್ಬನು ಒಂಬತ್ತು ವರ್ಷ ಪ್ರಾಯದವನು—ಓನೋಫ್ರೆ ಎಂಬ ಮನುಷ್ಯನನ್ನು ಸಂದರ್ಶಿಸಿದರು. ವಯಸ್ಕ ಸಾಕ್ಷಿಯು ಹೆಚ್ಚಾಗಿ ಮಾತಾಡುತ್ತಿದ್ದರೂ, ಈ ಎಳೆಯ ಸಾಕ್ಷಿಯು ಶಾಸ್ತ್ರವಚನಗಳಲ್ಲಿ ಅವನನ್ನು ಅನುಸರಿಸಿದನು ಮತ್ತು ಸ್ಮರಣೆಯಿಂದ ಕೆಲವು ಬೈಬಲ್‌ ವಚನಗಳನ್ನು ಉಲ್ಲೇಖಿಸಿದನು. ಓನೋಫ್ರೆ ಪ್ರಭಾವಿತನಾದನು. ಆ ಎಳೆಯ ಹುಡುಗನು ಶಾಸ್ತ್ರವಚನಗಳನ್ನು ಇಷ್ಟು ಚೆನ್ನಾಗಿ ನಿರ್ವಹಿಸಲು ಕಲಿತ ಸ್ಥಳದಲ್ಲೇ ತಾನೂ ಬೈಬಲನ್ನು ಅಭ್ಯಾಸಿಸಲು ಬಯಸುತ್ತೇನೆಂದು ಅವನು ನಿರ್ಧರಿಸಿದನು. ಅದಕ್ಕಾಗಿ, ಅವನು ಮುಂದಿನ ಅದಿತ್ಯವಾರ ಬೆಳ್ಳಿಗೆ ಬೇಗನೇ ರಾಜ್ಯ ಸಭಾಗೃಹಕ್ಕೆ ಹೋದನು. ಅವನು ಮಧ್ಯಾಹ್ನ—ಸಾಕ್ಷಿಗಳು ತಮ್ಮ ಕೂಟಗಳಿಗೆ ಬರುವ—ತನಕ ಹೊರಗೆ ಕಾಯಬೇಕಾಯಿತು. ಅಂದಿನಿಂದ, ಅವನು ಒಳ್ಳೆಯ ಪ್ರಗತಿಯನ್ನು ಮಾಡಿದನು ಮತ್ತು ಇತ್ತೀಚೆಗೆ ತನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದನು.

ಪರಿಣಾಮಕಾರಿ ಎಳೆಯ ಸಾಕ್ಷಿಗಳು

ಹೌದು, ದೀನಹೃದಯದ ಜನರನ್ನು ತಲಪಲು ಯೆಹೋವನು ಎಳೆಯರನ್ನು ಹಾಗೂ ವಯಸ್ಕರನ್ನು ಉಪಯೋಗಿಸುತ್ತಾನೆ. ಹಂಗೆರಿಯಿಂದ ಬಂದ ಒಂದು ಅನುಭವದಿಂದ ಇದು ಇನ್ನೂ ಹೆಚ್ಚಾಗಿ ತೋರಿಸಲ್ಪಟ್ಟಿದೆ. ಅಲ್ಲಿ, ಹತ್ತು ವರ್ಷ ವಯಸ್ಸಿನ ಒಬ್ಬ ನಿರ್ದಿಷ್ಟ ರೋಗಿಯನ್ನು ಕಾಣಲು ಭೇಟಿಕಾರರು ಬಂದಾಗಲೆಲ್ಲಾ ಊಟ ಹಾಗೂ ಓದಲಿಕ್ಕಾಗಿ ವಿಷಯಗಳನ್ನು ಅವರು ತರುತ್ತಿದ್ದರೆಂದು ಆಸ್ಪತ್ರೆಯ ದಾದಿಯೊಬ್ಬಳು ಗಮನಿಸಿದಳು. ಕುತೂಹಲ ಕೆರಳಿಸಲ್ಪಟ್ಟವಳಾಗಿ, ಈ ಎಳೆಯ ಹುಡುಗಿ ಏನು ಓದುತ್ತಿರಬಹುದೆಂದು ಅವಳು ಕೌತುಕಪಟಳ್ಟು ಮತ್ತು ಅದು ಒಂದು ಬೈಬಲಾಗಿತ್ತೆಂದು ಕಂಡುಹಿಡಿದಳು. ದಾದಿಯು ಅವಳೊಂದಿಗೆ ಮಾತಾಡಿದಳು ಮತ್ತು ಅನಂತರ ಹೇಳಿದ್ದು: “ಮೊದಲನೆಯ ಕ್ಷಣದಿಂದಲೇ ಅವಳು ನಿಜವಾಗಿಯೂ ನನಗೆ ಕಲಿಸಲಾರಂಭಿಸಿದಳು.” ಎಳೆಯ ಹುಡುಗಿಯು ಆಸ್ಪತ್ರೆಯನ್ನು ಬಿಟ್ಟು ಹೋದಾಗ, ಅವಳು ದಾದಿಯನ್ನು ಒಂದು ಅಧಿವೇಶನಕ್ಕೆ ಹಾಜರಾಗಲು ಆಮಂತ್ರಿಸಿದಳು, ಆದರೆ ಆ ದಾದಿಯು ಅವಳ ಆಮಂತ್ರಣವನ್ನು ನಿರಾಕರಿಸಿದಳು. ಆದರೂ, ನಂತರ, ಅವಳು “ಶುದ್ಧ ಭಾಷೆ” ಜಿಲ್ಲಾ ಅಧಿವೇಶನವನ್ನು ಹಾಜರಾಗಲು ಒಪ್ಪಿದಳು. ಅನಂತರ ಬೇಗನೇ, ಅವಳು ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಿದಳು, ಮತ್ತು ಒಂದು ವರ್ಷದ ನಂತರ ಅವಳು ದೀಕ್ಷಾಸ್ನಾನ ಹೊಂದಿದ್ದಳು—ಇದೆಲ್ಲವು ಒಂದು ಚಿಕ್ಕ ಹುಡುಗಿಯು ಆಸ್ಪತ್ರೆಯಲ್ಲಿ ತನ್ನ ಸಮಯವನ್ನು ಬೈಬಲ್‌ ಸಾಹಿತ್ಯವನ್ನು ಓದಲು ಉಪಯೋಗಿಸಿದರ ಪರಿಣಾಮ.

ಎಲ್‌ ಸಾಲ್ವಡೋರ್‌ನಲ್ಲಿ, ಆನಾ ರೂಟ್‌ ಪ್ರೌಢಶಾಲೆಯಲ್ಲಿ ತನ್ನ ಎರಡನೆಯ ವರ್ಷದಲ್ಲಿದ್ದಳು. ಅವರು ಬಯಸುವುದಾದರೆ ಓದುವಂತೆ ಅವಳು ಇತರರಿಗಾಗಿ ತನ್ನ ಡೆಸ್ಕಿನ ಮೇಲೆ ಬೈಬಲ್‌ ಸಾಹಿತ್ಯವನ್ನು ಬಿಟ್ಟುಹೋಗುವ ಅಭ್ಯಾಸ ಅವಳಿಗಿತ್ತು. ಸಾಹಿತ್ಯವು ಕಾಣೆಯಾಗಿ, ಪುನಃ ಸ್ವಲ್ಪ ಸಮಯದ ನಂತರ ತೋರಿಬರುವದನ್ನು ಗಮನಿಸುತ್ತಾ, ಒಬ್ಬ ಸಹಪಾಠಿ ಎವ್‌ಲಿನ್‌ ಅದನ್ನು ಓದುತ್ತಿದ್ದಳು ಎಂದು ಆನಾ ರೂಟ್‌ಳು ಕಂಡುಹಿಡಿದಳು. ಸ್ವಲ್ಪ ಸಮಯದಲ್ಲೇ, ಎವ್‌ಲಿನ್‌ ಒಂದು ಅಧ್ಯಯನವನ್ನು ಸ್ವೀಕರಿಸಿದಳು ಮತ್ತು ಸಭಾ ಕೂಟಗಳನ್ನು ಹಾಜರಾಗಲು ಆರಂಭಿಸಿದಳು. ಕಟ್ಟಕಡೆಗೆ, ಅವಳು ದೀಕ್ಷಾಸ್ನಾನ ಪಡೆದುಕೊಂಡಳು, ಮತ್ತು ಈಗ ಅವಳು ಒಬ್ಬ ಕ್ರಮದ ಆಕ್ಸಿಲಿಯರಿ ಪಯನೀಯರಳೋಪಾದಿ ಸೇವೆ ಸಲ್ಲಿಸುತ್ತಿದ್ದಾಳೆ. ಆನಾ ರೂಟ್‌ ಒಬ್ಬ ಕ್ರಮದ ಪಯನೀಯರಾಗಿದ್ದಾಳೆ.

ಪ್ಯಾನಮದಲ್ಲಿ ಒಬ್ಬ ಸಹೋದರಿಯು ಒಬ್ಬ ಹೆಂಗಸಿನೊಂದಿಗೆ ಒಂದು ಅಭ್ಯಾಸವನ್ನು ಆರಂಭಿಸಿದಳು. ಆಕೆಯ ಗಂಡ ಸತ್ಯವನ್ನು ಎಷ್ಟು ವಿರೋಧಿಸಿದನಂದರೆ ಅಭ್ಯಾಸವು ಬಹುಮಟ್ಟಿಗೆ ನಿಂತಿತು. ಆದರೂ, ಗಂಡನ ಮನೋಭಾವವು ಕ್ರಮೇಣ ಮೃದುವಾಗತೊಡಗಿತು. ಸ್ವಲ್ಪ ಸಮಯಾನಂತರ, ಒಬ್ಬ ಸಾಕ್ಷಿಯಾಗಿರುವ ಅವನ ಸ್ವಂತ ಅಣ್ಣನು ತನ್ನ ಮನೆಯಲ್ಲಿ ಕನ್ನಗಳ್ಳರ ಅಪಾಯಸೂಚನೆ ಕೊಡುವ ಅಲಾರ್ಮನ್ನು ಅಳವಡಿಸಲು ಕೇಳಿಕೊಂಡನು. ಅವನು ಅಲಾರ್ಮನ್ನು ಅಳವಡಿಸುತ್ತಿದ್ದಾಗ, ಅವನ 9 ವರ್ಷ ಪ್ರಾಯದ ಸೋದರಮಗಳು ಬೇಸರದ ಮುಖವುಳ್ಳವಳಾಗಿ ಮನೆಗೆ ಬಂದಳು. ಏನಾಯಿತೆಂದು ಅವನು ಅವಳನ್ನು ಕೇಳಿದನು, ಮತ್ತು ಆಕೆ ಮತ್ತು ಆಕೆಯ ಅಕ್ಕ ಒಂದು ಬೈಬಲ್‌ ಅಭ್ಯಾಸವನ್ನು ನಡಿಸಲು ಹೋಗಿದ್ದರು ಆದರೆ ಆ ವ್ಯಕ್ತಿಯು ಮನೆಯಲ್ಲಿರಲಿಲ್ಲ, ಆದುದರಿಂದ ಅವಳು ಆ ದಿನ ಯೆಹೋವನಿಗಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅವಳು ಹೇಳಿದಳು. ಅವಳ ಚಿಕ್ಕಪ್ಪ ಹೀಗೆ ಹೇಳಿದನು: “ನನಗೆ ಯಾಕೆ ಸಾರಬಾರದು? ಆಗ ನೀನು ಯೆಹೋವನಿಗಾಗಿ ಏನನ್ನಾದರೂ ಮಾಡುವಿ.” ಅವನ ಸೋದರಮಗಳು ಸಂತೋಷದಿಂದ ತನ್ನ ಬೈಬಲನ್ನು ತರಲು ಓಡಿದಳು, ಮತ್ತು ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು.

ಅವಳ ತಾಯಿ (ಆ ಮನುಷ್ಯನ ಅತಿಗ್ತೆ) ಕಿವಿಗೊಡುತ್ತಾ ಇದ್ದಳು. ಇದೆಲ್ಲವು ಕೇವಲ ಒಂದು ತಮಾಷೆ ಎಂದು ಅವಳು ನೆನಸಿದಳು, ಆದರೆ ಆ ಮನುಷ್ಯನು ಅವಳ ಮನೆಗೆ ಹೋದಾಗ, ಪ್ರತಿ ಸಲ ಅವನು ತನ್ನ ಸೋದರಮಗಳೊಡನೆ ಒಂದು ಬೈಬಲಭ್ಯಾಸಕ್ಕಾಗಿ ಕೇಳುತ್ತಿದ್ದನು. ಅವಳ ಮೈದುನನು ನಿಜವಾಗಿಯೂ ಗಂಭೀರನಾಗಿದ್ದನು ಮತ್ತು ಕೆಲವು ಕಷ್ಟಕರ ಪ್ರಶ್ನೆಗಳು ಅವನಲ್ಲಿದ್ದವು ಎಂದು ತಾಯಿ ಕಂಡಾಗ, ಅವಳ ಮಗಳು ಉಪಸ್ಥಿತಳಿರುವಾಗ ಅವಳು ಸ್ವತಃ ಅಭ್ಯಾಸವನ್ನು ನಡಿಸಲು ನಿರ್ಣಯಿಸಿದಳು. ಅವನು ವಾರದಲ್ಲಿ ಎರಡು ಸಲ ಅಭ್ಯಾಸಿಸಲು ಆರಂಭಿಸಿದನು ಮತ್ತು ತೀವ್ರ ಪ್ರಗತಿಯನ್ನು ಮಾಡಿದನು. ಕೊನೆಗೆ, ಅವನು ಸಮರ್ಪಣೆಯ ಹಂತದ ತನಕ ಮುಟ್ಟಿದನು ಮತ್ತು ತನ್ನ ಹೆಂಡತಿಯು ದೀಕ್ಷಾಸ್ನಾನಪಡೆದುಕೊಂಡ ಅದೇ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಹೊಂದಿದನು—ಅವನ ಎಳೆಯ ಸೋದರಮಗಳ ಉತ್ತಮ ಮನೋಭಾವದ ಕಾರಣದಿಂದ.

ಎಳೆಯರ ಧೈರ್ಯ ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುತ್ತದೆ

ಬೈಬಲು ಹೇಳುವದು: “ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.” (ಕೀರ್ತನೆ 27:14) ಈ ಮಾತುಗಳು ದೇವರ ಎಲ್ಲಾ ಸೇವಕರಿಗೆ ಅನ್ವಯಿಸುತ್ತದೆ, ಮತ್ತು ಎಳೆಯರು ಹಾಗೂ ವಯಸ್ಕರು ಅವುಗಳನ್ನು ಕಳೆದ ವರ್ಷದಲ್ಲಿ ಅನ್ವಯಿಸಿದರು. ಆಸ್ಟ್ರೇಲಿಯದಲ್ಲಿ ಒಬ್ಬ 5 ವರ್ಷ ಪ್ರಾಯದ ಹುಡುಗಿಯು ಒಂದು ಹೊಸ ಶಾಲೆಗೆ ಹೋಗಲು ಆರಂಭಿಸಿದಾಗ, ಅವಳ ತಾಯಿಯು ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನು ವಿವರಿಸಲು ಶಿಕ್ಷಕಿಯ ಹತ್ತಿರ ಹೋದರು. ಶಿಕ್ಷಕಿಯು ಹೇಳಿದ್ದು: “ನೀವು ಏನನ್ನು ನಂಬುತ್ತೀರಿ ಎಂದು ನನಗೆ ಈಗಾಗಲೇ ತಿಳಿದಿದೆ. ನಿಮ್ಮ ಮಗಳು ನನಗೆ ಎಲ್ಲವನ್ನೂ ವಿವರಿಸಿದ್ದಾಳೆ.” ಈ ಎಳೆಯ ಹುಡುಗಿಯು ತನ್ನ ನಂಬಿಕೆಯನ್ನು ವಿವರಿಸಲು ತನ್ನಷ್ಟಕ್ಕೆ ಶಿಕ್ಷಕಿಯನ್ನು ಸಮೀಪಿಸಲು ಅಂಜುಬುರುಕಳಾಗಿರಲಿಲ್ಲ.

ರೊಮೇನಿಯಾದಲ್ಲಿ 5 ವರ್ಷ ಪ್ರಾಯದ ಆಂಡ್ರೇಯಳು ಸಹ ಧೈರ್ಯವನ್ನು ತೋರಿಸಿದಳು. ತನ್ನ ತಾಯಿಯು ಒಬ್ಬಳು ಸಾಕ್ಷಿಯಾಗಲು ಈಸರ್ನ್ಟ್‌ ಆರ್ತೊಡಾಕ್ಸ್‌ ಧರ್ಮವನ್ನು ಬಿಟ್ಟಾಗ, ಅವಳ ನೆರೆಯವರು ಅವಳಿಗೆ ಕಿವಿಗೊಡಲು ನಿರಾಕರಿಸಿದರು. ಒಂದು ದಿನ ಸಭಾ ಪುಸ್ತಕ ಅಭ್ಯಾಸದಲ್ಲಿ, ಒಬ್ಬನ ನೆರೆಯವರಿಗೆ ಸಾರುವ ಅಗತ್ಯವನ್ನು ಸೇವಾ ಮೇಲ್ವಿಚಾರಕನು ಒತ್ತಿ ಹೇಳುವದನ್ನು ಆಂಡ್ರೇಯ ಕೇಳಿದಳು. ಅವಳು ಇದರ ಕುರಿತಾಗಿ ಗಂಭೀರವಾಗಿ ಯೋಚಿಸಿದಳು ಮತ್ತು ಮನೆಗೆ ಹಿಂದಿರುಗಿದಾಗ ಅವಳು ತನ್ನ ತಾಯಿಗೆ ಹೇಳಿದ್ದು: “ನೀನು ಕೆಲಸಕ್ಕೆ ಹೋದ ಮೇಲೆ, ನಾನು ಎದ್ದು ನೀನು ಮಾಡುವಂತೆಯೇ ನನ್ನ ಬ್ಯಾಗನ್ನು ಸಾಹಿತ್ಯದೊಂದಿಗೆ ತುಂಬಿಸುವೆನು ಅಮ್ಮ, ಮತ್ತು ನೆರೆಯವರೊಂದಿಗೆ ಸತ್ಯದ ಕುರಿತಾಗಿ ಮಾತಾಡಲು ನನಗೆ ಸಹಾಯ ಮಾಡುವಂತೆ ನಾನು ಯೆಹೋವನಿಗೆ ಪ್ರಾರ್ಥಿಸುವೆನು.”

ಮರುದಿನ ಆಂಡ್ರೇಯ ತಾನು ಮಾತುಕೊಟ್ಟಂತೆಯೇ ಮಾಡಿದಳು. ಅನಂತರ, ತನ್ನ ಧೈರ್ಯವನ್ನು ಒಟ್ಟುಗೂಡಿಸಿ, ಒಬ್ಬ ನೆರೆಯವನ ಗಂಟೆಯನ್ನು ಬಾರಿಸಿದಳು. ನೆರೆಯವರು ಬಾಗಿಲು ಕರೆಗೆ ಓಗೊಟ್ಟಾಗ, ಈ ಚಿಕ್ಕ ಹುಡುಗಿ ಹೇಳಿದ್ದು: “ನನ್ನ ತಾಯಿ ಒಬ್ಬ ಸಾಕ್ಷಿಯಾದಂದಿನಿಂದ ನೀವು ಅವಳನ್ನು ಇಷ್ಟಪಡುವದಿಲ್ಲವೆಂದು ನಾನು ಬಲ್ಲೆ. ಇದು ಅವಳನ್ನು ಕ್ಷೋಭೆಗೊಳಿಸುತ್ತದೆ, ಆದರೆ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ನಿಮಗೆ ತಿಳಿಯಬೇಕೆಂದು ನನ್ನ ಬಯಕೆ.” ಅನಂತರ, ಆಂಡ್ರೇಯಳು ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುತ್ತಾ ಹೋದಳು. ಒಂದು ದಿನದಲ್ಲಿ, ಅವಳು ಆರು ಪುಸ್ತಕಗಳು, ಆರು ಪತ್ರಿಕೆಗಳು, ನಾಲ್ಕು ಪುಸ್ತಿಕೆಗಳು ಮತ್ತು ನಾಲ್ಕು ಕಿರುಹೊತ್ತಿಗೆಗಳನ್ನು ಹಂಚಿದಳು. ಅಂದಿನಿಂದ, ಅವಳು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿದ್ದಾಳೆ.

ರುಆಂಡದಲ್ಲಿ ನಮ್ಮ ಸಹೋದರರು ಅಲ್ಲಿರುವ ಹೋರಾಟದ ಕಾರಣ ಮಹತ್ತಾದ ಧೈರ್ಯವನ್ನು ತೋರಿಸಬೇಕಾಗುತ್ತದೆ. ಒಂದು ಸಂದರ್ಭದಲ್ಲಿ ಸಾಕ್ಷಿಗಳ ಒಂದು ಕುಟುಂಬವನ್ನು ಒಂದು ಕೋಣೆಯೊಳಗೆ ಹಾಕಲಾಯಿತು ಮತ್ತು ಸೈನಿಕರು ಅವರನ್ನು ಅಲ್ಲಿ ಕೊಲ್ಲಲು ತಯಾರಾಗುತ್ತಿದ್ದರು. ಕುಟುಂಬವು ಮೊದಲು ಪ್ರಾರ್ಥಿಸಲು ಅನುಮತಿಯನ್ನು ಕೇಳಿತು. ಇದನ್ನು ಅನುಮತಿಸಲಾಯಿತು, ಮತ್ತು ಎಲ್ಲರೂ—6 ವರ್ಷ ಪ್ರಾಯದ ಮಗಳು ಡೆಬಾರಳನ್ನು ಬಿಟ್ಟು—ಮೌನವಾಗಿ ಪ್ರಾರ್ಥಿಸಿದರು. ಒಂದು ವರದಿಗನುಸಾರ ಡೆಬಾರಳು ಗಟ್ಟಿಯಾಗಿ ಪ್ರಾರ್ಥಿಸಿದ್ದು: “ಯೆಹೋವನೇ, ಈ ವಾರದಲ್ಲಿ ಪಪ್ಪ ಮತ್ತು ನಾನು ಐದು ಪತ್ರಿಕೆಗಳನ್ನು ನೀಡಿದ್ದೆವು. ಈ ಜನರಿಗೆ ಸತ್ಯವನ್ನು ಕಲಿಸಲು ಮತ್ತು ಜೀವವನ್ನು ಪಡೆಯಲು ನಾವು ಹೇಗೆ ಹಿಂದಿರುಗಿ ಹೋಗಬಲ್ಲೆವು? ಅದಲ್ಲದೆ, ಈಗ ನಾನು ಒಬ್ಬ ಪ್ರಚಾರಕಳಾಗುವುದು ಹೇಗೆ? ನಿನ್ನನ್ನು ಸೇವಿಸಲು ನಾನು ದೀಕ್ಷಾಸ್ನಾನವಾಗಲು ಬಯಸುತ್ತಿದ್ದೆ.” ಇದನ್ನು ಕೇಳಿದಾಗ ಒಬ್ಬ ಸೈನಿಕನು ಹೇಳಿದ್ದು: “ಈ ಚಿಕ್ಕ ಹುಡುಗಿಯಿಂದಾಗಿ ನಾವು ನಿಮ್ಮನ್ನು ಕೊಲಲ್ಲಾರೆವು.” ಡೆಬಾರ ಪ್ರತಿಕ್ರಿಯಿಸಿದ್ದು: “ಉಪಕಾರ.” ಕುಟುಂಬವನ್ನು ಉಳಿಸಲಾಯಿತು.

ತನ್ನ ಭೂಜೀವಿತದ ಅಂತ್ಯದ ಸಮೀಪದಲ್ಲಿ, ಯೇಸು ಯೆರೂಸಲೇಮಿನೊಳಗೆ ತನ್ನ ವಿಜಯೋತ್ಸವದ ಪ್ರವೇಶವನ್ನು ಮಾಡಿದಾಗ, ಅವನು ಬಹು ದೊಡ್ಡ ಮತ್ತು ಜಯಘೋಷ ಮಾಡುತ್ತಿದ್ದ ಜನರ ಗುಂಪಿನಿಂದ ಅಭಿವಂದಿಸಲ್ಪಟ್ಟನು. ಜನರ ಗುಂಪುಗಳು ಮಕ್ಕಳು ಹಾಗೂ ವಯಸ್ಕರಿಂದ ಉಂಟುಮಾಡಲ್ಪಟ್ಟಿದ್ದವು. ದಾಖಲೆಯ ಪ್ರಕಾರ, ಎಳೆಯ ಹುಡುಗರು “ದಾವೀದನ ಕುಮಾರನಿಗೆ ಜಯಜಯವೆಂದು ದೇವಾಲಯದಲ್ಲಿ ಕೂಗು” ತ್ತಿದ್ದರು! ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಇದನ್ನು ಪ್ರತಿಭಟಿಸಿದಾಗ, ಯೇಸು ಪ್ರತೀಕರಿಸಿದ್ದು: “ಸಣ್ಣ ಮಕ್ಕಳ ಬಾಯಿಂದಲೂ ಮೊಲೇ ಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ದಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ?”—ಮತ್ತಾಯ 21:15, 16.

ಯೇಸುವಿನ ಮಾತುಗಳು ಇಂದೂ ಸತ್ಯವಾಗಿವೆ ಎಂದು ನೋಡುವುದು ಪುಳಕಿತಗೊಳಿಸುವದಿಲ್ಲವೇ? “ಸಣ್ಣ ಮಕ್ಕಳ ಬಾಯಿಂದಲೂ ಮತ್ತು ಮೊಲೇಕೂಸುಗಳ ಬಾಯಿಂದಲೂ”—ಮತ್ತು ಹದಿವಯಸ್ಕರು ಹಾಗೂ ಗಂಡಸರೂ ಹೆಂಗಸರೂ, ಎಂದು ನಾವು ಕೂಡಿಸಬಹುದು—ಯೆಹೋವನು ಸ್ತುತಿಯನ್ನು ಒದಗಿಸಿದ್ದಾನೆ. ನಿಜವಾಗಿಯೂ, ಯೆಹೋವನನ್ನು ಸ್ತುತಿಸುವ ವಿಷಯದಲ್ಲಿ ಯಾವ ಕನಿಷ್ಠ ವಯಸ್ಸೂ ಇಲ್ಲ.—ಯೋವೇಲ 2:28, 29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ