ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ನೀಡುವುದು
1 “ನ್ಯೂ ವರ್ಲ್ಡ್ [ಟ್ರಾನ್ಸ್ಲೇಶನ್] ಬೈಬಲನ್ನು ಹೊಂದಿರುವುದು ಸಾರ್ಥಕವಾಗಿದೆ. ಅದು ಸ್ವಾರಸ್ಯಕರವಾದದ್ದೂ ಸಜೀವವಾದದ್ದೂ ಆಗಿದೆ ಮತ್ತು ಓದುವವನನ್ನು ಆಲೋಚಿಸಿ, ಅಧ್ಯಯನಿಸುವಂತೆ ಮಾಡುತ್ತದೆ. ಇದು ಮಹಾನ್ ವಿಮರ್ಶಕರ ಕೃತಿಯಲ್ಲ, ಬದಲಿಗೆ ದೇವರನ್ನು ಮತ್ತು ಆತನ ವಾಕ್ಯವನ್ನು ಸನ್ಮಾನಿಸುವ ವಿದ್ವಾಂಸರ ಕೃತಿಯಾಗಿದೆ.” ಹೀಗೆ ಒಬ್ಬ ಪ್ರಸಿದ್ಧ ಹೀಬ್ರೂ ಮತ್ತು ಗ್ರೀಕ್ ವ್ಯಾಖ್ಯಾನಕಾರನು ಹೇಳಿದನು. ನಾವೂ ಇದಕ್ಕೆ ಸಮ್ಮತಿಸುತ್ತೇವೆ. ಡಿಸೆಂಬರ್ ತಿಂಗಳಿನಲ್ಲಿ ನಾವು ಜ್ಞಾನ ಪುಸ್ತಕದೊಂದಿಗೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ನೀಡುವಾಗ, ಇತರರು ಸಹ ಇದೇ ರೀತಿಯ ಗಣ್ಯತೆಯನ್ನು ತೋರಿಸುವಂತೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ?
2 “ನನ್ನ ಹತ್ತಿರ ಈಗಾಗಲೇ ಬೈಬಲಿದೆ. ಮತ್ತೊಂದು ಬೈಬಲಿನ ಅಗತ್ಯವಿಲ್ಲ” ಎಂದು ಕೆಲವರು ಹೇಳಬಹುದು. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲು ಕೇವಲ ಇನ್ನೊಂದು ಬೈಬಲ್ ಆಗಿರುವುದಿಲ್ಲ ಎಂಬುದನ್ನು ಅವರು ನೋಡುವಂತೆ ಸಹಾಯಮಾಡುವುದೇ ನಮ್ಮ ಕೆಲಸವಾಗಿದೆ. ಅದು ಮೂಲಗ್ರಂಥದ ಅರ್ಥವನ್ನು ನಿಷ್ಕೃಷ್ಟವಾಗಿ ಹಾಗೆಯೇ ಉಳಿಸುವ, ಇಂದಿನ ಭಾಷೆಯಲ್ಲಿ ಒಂದು ಅಕ್ಷರಾರ್ಥಕ ತರ್ಜುಮೆಯಾಗಿದೆ. ಭಾಷಾಂತರಿಸಲಾಗಿರುವ ಕೆಲವೊಂದು ಪದಗಳನ್ನು ಹೋಲಿಸುವ ಮೂಲಕ ಅದರ ಹಿರಿಮೆಯ ಒಂದು ಅಂಶವನ್ನು ತೋರಿಸಸಾಧ್ಯವಿದೆ. ಉದಾಹರಣೆಗೆ 1 ಕೊರಿಂಥ 10:25ರಲ್ಲಿರುವ “shambles” (ಕಿಂಗ್ ಜೇಮ್ಸ್ ವರ್ಷನ್) ಎಂಬ ಪದವನ್ನು “meat market” (ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್) ಎಂದು ಭಾಷಾಂತರಿಸಲಾಗಿದೆ.
3 ಬೈಬಲನ್ನು ಓದುವುದೇ ಕೆಲವು ಮಂದಿ, ಅದರಲ್ಲೂ ದಿನನಿತ್ಯದ ಜೀವನಕ್ಕಾಗಿರುವ ಬೈಬಲಿನ ತತ್ವಗಳನ್ನು ಅರ್ಥಮಾಡಿಕೊಳ್ಳುವವರು ಇನ್ನೂ ಕಡಿಮೆ. ದೇವರ ವಾಕ್ಯವು ತಮ್ಮ ಜೀವಿತಗಳಲ್ಲಿ ಒಳ್ಳೆಯ ಪ್ರಭಾವವನ್ನು ಬೀರಬಲ್ಲದು ಮತ್ತು ಪ್ರಾಮಾಣಿಕತೆ, ನೈತಿಕತೆ ಹಾಗೂ ಕುಟುಂಬ ಜೀವಿತದ ಕುರಿತಾಗಿರುವ ಅದರ ಸಲಹೆಯನ್ನು ಅನುಸರಿಸುವುದು ಇಂದಿನ ಸಮಸ್ಯೆಗಳನ್ನು ನಿಭಾಯಿಸುವಂತೆ ತಮಗೆ ಸಹಾಯಮಾಡಬಲ್ಲದು ಎಂಬುದನ್ನು ಅವರು ತಿಳಿದುಕೊಳ್ಳುವ ಅಗತ್ಯವಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ?
4 ಸೂಚಿಸಲ್ಪಟ್ಟಿರುವ ನಿರೂಪಣೆ: “ಇಂದಿನ ನೈತಿಕ ಮೌಲ್ಯಗಳು ಇಷ್ಟೊಂದು ತೀವ್ರವಾಗಿ ಬದಲಾಗುತ್ತಿರುವುದರಿಂದ ಮತ್ತು ನಮ್ಮ ಭವಿಷ್ಯತ್ತಿನ ಕುರಿತು ಅನಿಶ್ಚಿತತೆಯಿರುವುದರಿಂದ, ಜೀವಿತದಲ್ಲಿ ಭರವಸಾರ್ಹವಾದ ಮಾರ್ಗದರ್ಶನದ ಅಗತ್ಯ ನಮಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರೋ? [ಉತ್ತರಕ್ಕಾಗಿ ಕಾಯಿರಿ.] ಬೈಬಲು ಇರುವ ಪುಸ್ತಕಗಳಲ್ಲಿಯೇ ಅತ್ಯಂತ ಹಳೆಯ ಪುಸ್ತಕವಾಗಿರುವುದಾದರೂ, ಆಧುನಿಕ ಜೀವನಕ್ಕಾಗಿ ಮತ್ತು ಸಂತೋಷಭರಿತ ಕುಟುಂಬ ಜೀವಿತಕ್ಕಾಗಿ ಪ್ರಾಯೋಗಿಕ ಸಲಹೆಯನ್ನು ಕೊಡುತ್ತದೆ.” ಅನಂತರ ಜ್ಞಾನ ಪುಸ್ತಕದಲ್ಲಿರುವ 2ನೇ ಅಧ್ಯಾಯಕ್ಕೆ ತಿರುಗಿಸಿ, 2 ತಿಮೊಥೆಯ 3:16, 17ನ್ನು ಸೇರಿಸಿ, ಪ್ಯಾರಗ್ರಾಫ್ 10ನ್ನು ಮತ್ತು ಪ್ಯಾರಗ್ರಾಫ್ 11ರ ಮೊದಲ ವಾಕ್ಯವನ್ನು ಓದಿರಿ. ವ್ಯಕ್ತಿಯು ಆಸಕ್ತಿಯನ್ನು ತೋರಿಸುವುದಾದರೆ, ಜ್ಞಾನ ಪುಸ್ತಕವನ್ನು ನೀಡಿ, ಉಚಿತ ಮನೆ ಬೈಬಲ್ ಅಭ್ಯಾಸದ ಏರ್ಪಾಡಿನ ಬಗ್ಗೆ ವಿವರಿಸಿರಿ ಮತ್ತು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ನೀಡಿರಿ. ಅಪೇಕ್ಷಿಸು ಬ್ರೋಷರಿನಲ್ಲಿ ಅಭ್ಯಾಸವನ್ನು ಮಾಡುವುದು ಉತ್ತಮವೆಂದು ನೀವು ನೆನಸುವುದಾದರೆ, ಹಾಗೆ ಮಾಡಬಹುದು. ರೀಸನಿಂಗ್ ಪುಸ್ತಕದಲ್ಲಿ 9-15ನೇ ಪುಟಗಳಲ್ಲಿ ಇನ್ನೂ ಹೆಚ್ಚಿನ ತಕ್ಕದಾದ ಪೀಠಿಕೆಗಳನ್ನು ನೀವು ಕಂಡುಕೊಳ್ಳುವಿರಿ.
5 ಅತ್ಯುತ್ಕೃಷ್ಟವಾದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿಗಾಗಿರುವ ನಮ್ಮ ಗಣ್ಯತೆಯನ್ನು ನಾವು ತೋರಿಸೋಣ. ಡಿಸೆಂಬರ್ ತಿಂಗಳಿನಲ್ಲಿ ಅದನ್ನು ಹುರುಪಿನಿಂದ ನೀಡುವ ಮೂಲಕ ನಾವಿದನ್ನು ಮಾಡಸಾಧ್ಯವಿದೆ.