ಪಯನೀಯರರ ತಾಸಿನ ಆವಶ್ಯಕತೆಗಳಲ್ಲಿ ಬದಲಾವಣೆ
1 ಸಭೆಯಲ್ಲಿ ಶ್ರಮಪಟ್ಟು ಕೆಲಸಮಾಡುವ ಕ್ರಮದ ಮತ್ತು ಆಕ್ಸಿಲಿಯರಿ ಪಯನೀಯರರಿಗಾಗಿ ನಾವೆಲ್ಲರೂ ಗಣ್ಯತೆಯನ್ನು ತೋರಿಸುತ್ತವೆ. ಟೆರಿಟೊರಿಯು ಚಿಕ್ಕದಾಗಿದ್ದು, ಕ್ರಮವಾಗಿ ಪದೇ ಪದೇ ಅಲ್ಲಿಯೇ ಸಾಕ್ಷಿನೀಡುವಾಗಲೂ, ಪಯನೀಯರರು ತಮ್ಮ ಹುರುಪಿನ ರಾಜ್ಯ ಸೇವೆಯಿಂದ ಒಂದು ಉತ್ತಮ ಉದಾಹರಣೆಯನ್ನು ಇಟ್ಟಿದ್ದಾರೆ. ‘ನೇಮಿಸಲ್ಪಟ್ಟವರನ್ನು’ ಹುಡುಕುವುದರಲ್ಲಿ ಕಾರ್ಯಮಗ್ನರಾಗಿರುವಂತೆ ಅವರು ಎಲ್ಲ ಪ್ರಚಾರಕರನ್ನು ಉತ್ತೇಜಿಸಿದ್ದಾರೆ.—ಅ. ಕೃತ್ಯಗಳು 13:48.
2 ಪಯನೀಯರರು ಎದುರಿಸುವ ಅನೇಕ ಕಷ್ಟತೊಂದರೆಗಳನ್ನು ಸೊಸೈಟಿಯು ಗಮನಿಸಿದೆ. ವಿಶೇಷವಾಗಿ, ಪೂರ್ಣಸಮಯದ ಸೇವೆಯಲ್ಲಿ ಉಳಿಯಸಾಧ್ಯವಾಗುವಂತೆ ತಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ, ಪಾರ್ಟ್ಟೈಮ್ ಕೆಲಸವನ್ನು ಕಂಡುಕೊಳ್ಳುವ ಸಮಸ್ಯೆಯ ಕುರಿತು ಸೊಸೈಟಿಗೆ ಚೆನ್ನಾಗಿ ಗೊತ್ತಿದೆ. ಅನೇಕರು ಪಯನೀಯರ್ ಸೇವೆಯನ್ನು ಮಾಡಲು ತುಂಬ ಇಷ್ಟಪಡುತ್ತಾರದರೂ, ಅನೇಕ ದೇಶಗಲ್ಲಿರುವ ಇಂದಿನ ಆರ್ಥಿಕ ಸ್ಥಿತಿಯು, ಆ ಸೇವೆಯನ್ನು ಮಾಡಲು ತುಂಬ ಕಷ್ಟಕರವನ್ನಾಗಿ ಮಾಡಿದೆ. ಇತ್ತೀಚಿನ ತಿಂಗಳುಗಳಲ್ಲಿ, ಇವುಗಳನ್ನು ಮತ್ತು ಇನ್ನಿತರ ಅಂಶಗಳನ್ನು ತುಂಬ ಜಾಗರೂಕವಾಗಿ ಪರಿಗಣಿಸಲಾಗಿದೆ.
3 ಆದುದರಿಂದ, ಈ ಮೇಲೆ ತಿಳಿಸಲ್ಪಟ್ಟ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಕ್ರಮದ ಮತ್ತು ಆಕ್ಸಿಲಿಯರಿ ಪಯನೀಯರರ ತಾಸಿನ ಆವಶ್ಯಕತೆಯನ್ನು ಸೊಸೈಟಿಯು ಕಡಿಮೆಮಾಡಿದೆ. 1999ರ ಕ್ಯಾಲೆಂಡರ್ ವರ್ಷದಿಂದ ಆರಂಭಿಸಿ, ಕ್ರಮದ ಪಯನೀಯರರ ಆವಶ್ಯಕತೆಯು ಪ್ರತಿ ತಿಂಗಳಿಗೆ 70 ತಾಸುಗಳು ಅಥವಾ ವರ್ಷವೊಂದಕ್ಕೆ 840 ತಾಸುಗಳಾಗಿರುತ್ತದೆ. ಆಕ್ಸಿಲಿಯರ್ ಪಯನೀಯರರಿಗೆ ತಿಂಗಳಿಗೆ 50 ತಾಸುಗಳ ಆವಶ್ಯಕತೆಯಿದೆ. ವಿಶೇಷ ಪಯನೀಯರರು ಮತ್ತು ಮಿಷನೆರಿಗಳಿಗೆ ಆವಶ್ಯಕವಾಗಿರುವ ತಾಸಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ, ಏಕೆಂದರೆ ಅವರ ಮೂಲಭೂತ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವುದರಲ್ಲಿ ಸಹಾಯಮಾಡಲು ಸೊಸೈಟಿಯು ಒದಗಿಸುವಿಕೆಯನ್ನು ಮಾಡಿದೆ. ಹೀಗೆ ಅವರು ತಮ್ಮ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚು ಏಕಾಗ್ರತೆಯನ್ನು ನೀಡಸಾಧ್ಯವಿದೆ.
4 ತಾಸಿನ ಆವಶ್ಯಕತೆಗಳಲ್ಲಿನ ಈ ಬದಲಾವಣೆಯು, ಈ ಅಮೂಲ್ಯ ಸೇವಾ ಸುಯೋಗದಲ್ಲಿಯೇ ಉಳಿಯಲು ಹೆಚ್ಚಿನ ಪಯನೀಯರರಿಗೆ ಸಹಾಯಮಾಡುವುದು ಎಂಬ ನಂಬಿಕೆಯಿದೆ. ಅನೇಕ ಪ್ರಚಾರಕರು ಕ್ರಮದ ಮತ್ತು ಆಕ್ಸಿಲಿಯರಿ ಸೇವೆಯನ್ನು ಆರಂಭಿಸುವಂತೆ ಇದು ಅವಕಾಶವನ್ನು ನೀಡುವುದು. ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದು ಎಂಥ ಒಂದು ಆಶೀರ್ವಾದವಾಗಿರುವುದು!