ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 3/8 ಪು. 24-25
  • ಜಲಪ್ರಳಯ ಸತ್ಯವೊ ಕಲ್ಪನಾ ಕಥೆಯೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಲಪ್ರಳಯ ಸತ್ಯವೊ ಕಲ್ಪನಾ ಕಥೆಯೊ?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಶ್ವಾಸಾರ್ಹ ವಿವರಗಳು
  • ಪ್ರಾಮಾಣ್ಯ ದೃಢೀಕರಿಸಲ್ಪಡುವುದು
  • ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನೋಹ ಮತ್ತು ಜಲಪ್ರಳಯ ಸತ್ಯವೋ ಮಿಥ್ಯೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನೋಹನ ನಂಬಿಕೆಯು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೋಹನ ದಿನಚರಿ ಪುಸ್ತಕ ಇದರಲ್ಲಿ ನಮಗೆ ಮಹತ್ವಪೂರ್ಣವಾಗಿರುವ ವಿಷಯವಿದೆಯೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಎಚ್ಚರ!—1997
g97 3/8 ಪು. 24-25

ಬೈಬಲಿನ ದೃಷ್ಟಿಕೋನ

ಜಲಪ್ರಳಯ ಸತ್ಯವೊ ಕಲ್ಪನಾ ಕಥೆಯೊ?

‘ಮತ್ತು ಸಕಲ ಪ್ರಾಣಿಗಳು ಜೊತೆಜೊತೆಯಾಗಿ ನೋಹನ ಬಳಿ ನಾವೆಯೊಳಗೆ ಹೋದವು.’—ಆದಿಕಾಂಡ 7:8, 9.

ನೋಹನ ದಿನದ ಜಲಪ್ರಳಯದ ಕುರಿತು ಕೇಳದವರು ಯಾರು? ನೀವು ಪ್ರಾಯಶಃ ಆ ಕಥೆಯನ್ನು ಶೈಶವದಿಂದಲೂ ಕೇಳಿರಬಹುದು. ಹೌದು, ಜಲಪ್ರಳಯದ ಕುರಿತು ತನಿಖೆ ಮಾಡಲು ನೀವು ಸ್ಥಳಿಕ ಗ್ರಂಥಾಲಯಕ್ಕೆ ಹೋಗುವಲ್ಲಿ, ಆ ವಿಷಯದಲ್ಲಿ ವಯಸ್ಕರಿಗಾಗಿ ಬರೆಯಲ್ಪಟ್ಟಿರುವುದಕ್ಕಿಂತ ಎಷ್ಟೋ ಹೆಚ್ಚು ಪುಸ್ತಕಗಳು ಮಕ್ಕಳಿಗಾಗಿ ಬರೆಯಲ್ಪಟ್ಟಿವೆಯೆಂದು ನೀವು ಕಂಡುಕೊಳ್ಳಬಹುದು. ಹೀಗಿರುವುದರಿಂದ, ನೀವು ಜಲಪ್ರಳಯದ ವೃತ್ತಾಂತವನ್ನು ಕೇವಲ ಮಲಗುವ ಹೊತ್ತಿನ ಕಥೆಯಾಗಿ ಪರಿಗಣಿಸಲು ನಿರ್ಣಯಿಸಬಹುದು. ನೋಹನ ಕಾಲದ ಜಲಪ್ರಳಯದ ವೃತ್ತಾಂತವು, ಬೈಬಲಿನಲ್ಲಿ ಉಳಿದಿರುವ ಹೆಚ್ಚಿನ ವೃತ್ತಾಂತಗಳೊಂದಿಗೆ, ಬರಿಯ ಕಲ್ಪನಾ ಕಥೆಯಾಗಿದೆ, ಇಲ್ಲವೆ, ಹೆಚ್ಚೆಂದರೆ ಮನುಷ್ಯನು ಕಟ್ಟಿದ ನೀತಿ ಪಾಠವಾಗಿದೆ ಎಂಬುದು ಅನೇಕರ ಅಭಿಪ್ರಾಯ.

ಆಶ್ಚರ್ಯಕರವಾಗಿ, ತಮ್ಮ ಧಾರ್ಮಿಕ ನಂಬಿಕೆಗಳನ್ನು ಬೈಬಲಿನ ಮೇಲೆ ಆಧಾರಿಸುತ್ತೇವೆಂದು ವಾದಿಸುವ ಕೆಲವರೂ, ಜಲಪ್ರಳಯವು ನಿಜವಾಗಿ ಸಂಭವಿಸಿತೆಂಬುದನ್ನು ಸಂದೇಹಿಸುತ್ತಾರೆ. ನೋಹನ ಕಥೆಯು ಇತಿಹಾಸದಂತೆ ಅಲ್ಲ, ಬದಲಾಗಿ “ಸಾಂಕೇತಿಕ ಕಥೆಯಂತೆ ಅಥವಾ ಸಾಹಿತ್ಯಾತ್ಮಕ ರೂಪದಲ್ಲಿ” ಅರ್ಥವಿವರಿಸಲ್ಪಡಲು ಕೊಡಲ್ಪಟ್ಟಿದೆ, ಎಂದು ಕ್ಯಾಥೊಲಿಕ್‌ ಪಾದ್ರಿ ಎಡ್ವರ್ಡ್‌ ಜೆ. ಮಕ್ಲೇನ್‌ ಒಮ್ಮೆ ಹೇಳಿದರು.

ಆದರೂ, ಬೈಬಲಿನಲ್ಲಿರುವ ಜಲಪ್ರಳಯದ ಕಥನವು ಕೇವಲ ಒಂದು ಸಾಂಕೇತಿಕ ಕಥೆಯಾಗಿದ್ದು, ಎಂದಿಗೂ ಅಕ್ಷರಾರ್ಥವಾಗಿ ಪರಿಗಣಿಸಲ್ಪಡಬಾರದೆಂಬುದನ್ನು ಅರ್ಥೈಸುತ್ತದೊ? ಬೈಬಲ್‌ ತಾನೇ ಅಂತಹ ನೋಟವನ್ನು ಅನುಮತಿಸುತ್ತದೊ?

ವಿಶ್ವಾಸಾರ್ಹ ವಿವರಗಳು

ಆದಿಕಾಂಡ ಪುಸ್ತಕದಲ್ಲಿ ಮೋಶೆ ಮಾಡಿರುವ ದಾಖಲೆಯನ್ನು ಪ್ರಥಮವಾಗಿ ಪರಿಗಣಿಸಿರಿ. ಅಲ್ಲಿ, ಸುರಿಮಳೆ ಆರಂಭವಾದ ನಿರ್ದಿಷ್ಟ ವರ್ಷ, ತಿಂಗಳು ಮತ್ತು ದಿನ, ನಾವೆಯು ನೆಲಮುಟ್ಟಿದ ಸಮಯ, ಭೂಮಿ ಒಣಗಿದ ಸಮಯ—ಇವನ್ನೆಲ್ಲ ಕಂಡುಕೊಳ್ಳುತ್ತೇವೆ. (ಆದಿಕಾಂಡ 7:11; 8:4, 13, 14) ಆದಿಕಾಂಡದಲ್ಲಿ ಬೇರೆ ಕಡೆಗಳಲ್ಲಿ ನಿರ್ದಿಷ್ಟ ತಾರೀಖುಗಳು ಸದಾ ದಾಖಲೆ ಮಾಡಲ್ಪಟ್ಟಿಲ್ಲವಾದರೂ, ಆ ಜಲಪ್ರಳಯವನ್ನು ಒಂದು ನಿಜ ಘಟನೆಯಾಗಿ ಮೋಶೆಯು ವೀಕ್ಷಿಸಿದನೆಂಬ ವಾಸ್ತವಾಂಶವನ್ನು ಈ ತಾರೀಖುಗಳು ಒತ್ತಿಹೇಳುತ್ತವೆ. ಬೈಬಲು ಕೊಡುವ ಈ ಸತ್ಯದ ನಾದವನ್ನು, ಅನೇಕ ಕಟ್ಟುಕಥೆಗಳ ಪ್ರಾತಿನಿಧಿಕ ಆರಂಭದ ಮಾತುಗಳಾದ, “ಒಂದಾನೊಂದು ಕಾಲದಲ್ಲಿ . . . ” ಎಂಬುದರೊಂದಿಗೆ ಹೋಲಿಸಿರಿ.

ಇನ್ನೊಂದು ಉದಾಹರಣೆಯಾಗಿ, ನಾವೆಯನ್ನೇ ತೆಗೆದುಕೊಳ್ಳಿ. ಬೈಬಲು, ಸುಮಾರು 437 ಅಡಿಗಳ, ಉದ್ದಕ್ಕೆ ಎತ್ತರ 10ಕ್ಕೆ 1ರ ಪ್ರಮಾಣವಿರುವ, ಉದ್ದಕ್ಕೆ ಅಗಲ 6ಕ್ಕೆ 1ರ ಪ್ರಮಾಣವಿರುವ ಒಂದು ಹಡಗನ್ನು ವರ್ಣಿಸುತ್ತದೆ. (ಆದಿಕಾಂಡ 6:15) ಆದರೆ, ನೋಹನು ನೌಕಾ ಶಿಲ್ಪಿಯಾಗಿರಲಿಲ್ಲ. ಮತ್ತು ಅದು 4,000ಕ್ಕೂ ಹೆಚ್ಚು ವರ್ಷಗಳಿಗೂ ಹಿಂದೆ ಎಂಬುದು ಜ್ಞಾಪಕದಲ್ಲಿರಲಿ! ಆದರೂ, ನಾವೆಯಾಗಿ ಅದು ಮಾಡಲಿದ್ದ ಕೆಲಸಕ್ಕೆ ಬೇಕಾಗಿದ್ದ ಆದರ್ಶಪ್ರಮಾಣದಲ್ಲಿ ಆ ನಾವೆಯು ಕಟ್ಟಲ್ಪಟ್ಟಿತು. ವಾಸ್ತವದಲ್ಲಿ, ಆಧುನಿಕ ನೌಕಾ ವಾಸ್ತುಶಿಲ್ಪಿಗಳು, ಈ ರೀತಿಯ ಪ್ರಮಾಣಗಳು, ವಿಶಾಲ ಸಮುದ್ರದಲ್ಲಿ ರಚನಾ ಭದ್ರತೆ ಮತ್ತು ಸ್ಥಿರತೆಗೆ ಯೋಗ್ಯವಾಗಿದೆಯೆಂದು ಕಂಡುಹಿಡಿದಿದ್ದಾರೆ. ನೋಹನು ನಾವೆಯನ್ನು ಕಟ್ಟಲು ಎಷ್ಟು ಸಮಯವನ್ನು ವ್ಯಯಿಸಿದನೆಂದು ಬೈಬಲು ನಿಖರವಾಗಿ ಹೇಳುವುದಿಲ್ಲವಾದರೂ, ವೃತ್ತಾಂತವು ರಚನೆಗಾಗಿ 50 ಅಥವಾ 60 ವರ್ಷಗಳನ್ನು ಅನುಮತಿಸುತ್ತದೆ. (ಆದಿಕಾಂಡ 5:32; 7:6) ಈ ಸಂಗತಿಗಳು, ಬಾಬೆಲಿನ ಗಿಲ್‌ಗಮೇಷ್‌ ಪುರಾಣ ಕಾವ್ಯದಲ್ಲಿ ಕಂಡುಬರುವ ಪ್ರಸಿದ್ಧ ಕಥೆಯೊಂದಿಗೆ ತೀರ ವ್ಯತಿರಿಕ್ತವಾಗಿ ನಿಲ್ಲುತ್ತವೆ. ಆ ಕಾವ್ಯವು ಭಾರೀ, ಒಡ್ಡೊಡ್ಡಾದ, ಪ್ರತಿಯೊಂದು ಬದಿಯಲ್ಲಿ ಸುಮಾರು 60 ಮೀಟರುಗಳಷ್ಟಿದ್ದ ಮತ್ತು ಕೇವಲ ಏಳು ದಿವಸಗಳಲ್ಲಿ ಕಟ್ಟಲ್ಪಟ್ಟ ಘನಾಕೃತಿಯನ್ನು ವರ್ಣಿಸುತ್ತದೆ. ಆ ಬಬಿಲೋನ್ಯ ಐತಿಹ್ಯಕ್ಕೆ ಅಸದೃಶವಾಗಿ, ಬೈಬಲಿನ ಜಲಪ್ರಳಯ ವೃತ್ತಾಂತವು ಅದರ ನಿಷ್ಕೃಷ್ಟತೆಯಲ್ಲಿ ಭರವಸೆಯನ್ನು ಹುಟ್ಟಿಸುತ್ತದೆ.

ಆದಿಕಾಂಡ ವೃತ್ತಾಂತವನ್ನು ಬಿಟ್ಟು, ಶಾಸ್ತ್ರಗಳು ನೋಹ ಅಥವಾ ಭೌಗೋಳಿಕ ಜಲಪ್ರಳಯವನ್ನು ಹತ್ತು ಬಾರಿ ಸೂಚಿಸುತ್ತವೆ. ಈ ಉಲ್ಲೇಖಗಳು, ಪ್ರೇರಿತ ಲೇಖಕರು ಜಲಪ್ರಳಯವನ್ನು ನಿಜ ಇತಿಹಾಸವಾಗಿ ವೀಕ್ಷಿಸಿದರೆಂದು ಸೂಚಿಸುತ್ತವೊ ಅಥವಾ ಕಲ್ಪನಾ ಕಥೆಯಾಗಿ ವೀಕ್ಷಿಸಿದರೆಂದು ಸೂಚಿಸುತ್ತವೊ?

ಪ್ರಾಮಾಣ್ಯ ದೃಢೀಕರಿಸಲ್ಪಡುವುದು

ಶಾಸ್ತ್ರಗಳಲ್ಲಿ, ಇಸ್ರಾಯೇಲ್‌ ಜನಾಂಗದ ಎರಡು ವಂಶಾವಳಿಗಳಲ್ಲಿ ನೋಹನು ತೋರಿಬರುತ್ತಾನೆ; ಎರಡನೆಯದು ಯೇಸು ಕ್ರಿಸ್ತನಲ್ಲಿ ಕೊನೆಗೊಳ್ಳುತ್ತದೆ. (1 ಪೂರ್ವಕಾಲವೃತ್ತಾಂತ 1:4; ಲೂಕ 3:36) ಈ ವಂಶಾವಳಿಗಳ ಸಂಗ್ರಾಹಕರಾದ ಎಜ್ರ ಮತ್ತು ಲೂಕರಿಬ್ಬರೂ ನಿಪುಣ ಇತಿಹಾಸಕಾರರಾಗಿದ್ದರು ಮತ್ತು ನೋಹನು ನಿಜ ವ್ಯಕ್ತಿಯಾಗಿದ್ದನೆಂದು ಅವರು ನಂಬಿದ್ದಿರಬೇಕು.

ಬೈಬಲಿನ ಬೇರೆ ಕಡೆಗಳಲ್ಲಿ, ನೋಹನನ್ನು ಇತರ ಐತಿಹಾಸಿಕ ವ್ಯಕ್ತಿಗಳೊಂದಿಗೆ ಪಟ್ಟಿಮಾಡಲಾಗಿದ್ದು, ಅವನು ನೀತಿ ಮತ್ತು ನಂಬಿಕೆಯ ಮನುಷ್ಯನೆಂದು ಉಲ್ಲೇಖಿಸಲಾಗಿದೆ. (ಯೆಹೆಜ್ಕೇಲ 14:14, 20; ಇಬ್ರಿಯ 11:7) ಬೈಬಲ್‌ ಲೇಖಕರು, ಒಬ್ಬ ಕಾಲ್ಪನಿಕ ವ್ಯಕ್ತಿಯನ್ನು ಅನುಸರಿಸಲು ಆದರ್ಶಪ್ರಾಯನಾಗಿರುವವನಂತೆ ತೋರಿಸುವುದು ವಿವೇಕಯುತವಾಗಿದ್ದೀತೊ? ಇಲ್ಲ, ಏಕೆಂದರೆ ಇದು ಬೈಬಲ್‌ ಓದುಗರು, ನಂಬಿಕೆಯು ಮನುಷ್ಯಶಕ್ತಿಗೆ ಮೀರಿದ್ದು ಮತ್ತು ಅದು ಕಾದಂಬರಿ ಪಾತ್ರಧಾರಿಗಳಿಂದ ಮಾತ್ರ ಪ್ರದರ್ಶಿಸಲ್ಪಡಬಲ್ಲದೆಂದು ಅವರು ತೀರ್ಮಾನಿಸುವಂತೆ ಸುಲಭವಾಗಿ ನಡೆಸಬಲ್ಲದು. ನೋಹನು ಮತ್ತು ಇತರ ನಂಬಿಗಸ್ತ ಸ್ತ್ರೀಪುರುಷರ ಪಟ್ಟಿಯು ಅಲ್ಲಿ ಕೊಡಲ್ಪಟ್ಟಿದೆ; ಏಕೆಂದರೆ ಅವರು ನಮ್ಮಂತೆಯೇ ದೌರ್ಬಲ್ಯಗಳು ಮತ್ತು ಭಾವನೆಗಳಿದ್ದ ಮಾನವರಾಗಿದ್ದರು.—ಇಬ್ರಿಯ 12:1; ಹೋಲಿಸಿ ಯಾಕೋಬ 5:17.

ಉಳಿದ ಶಾಸ್ತ್ರೀಯ ಉಲ್ಲೇಖಗಳಲ್ಲಿ, ನೋಹನ ಸುತ್ತಮುತ್ತಲಿದ್ದ ನಂಬಿಕೆಹೀನ ಸಂತತಿಯ ಮೇಲೆ ದೇವರು ತಂದ ನಾಶನದ ಪೂರ್ವಾಪರ ಸಂದರ್ಭದಲ್ಲಿ, ನೋಹ ಮತ್ತು ಜಲಪ್ರಳಯವು ಉಲ್ಲೇಖಿಸಲ್ಪಟ್ಟಿದೆ. ಲೂಕ 17:26, 27 ದಾಖಲೆ ಮಾಡಿರುವ, ಜಲಪ್ರಳಯದ ಕುರಿತ ಯೇಸುವಿನ ಸೂಚನೆಯನ್ನು ಗಮನಿಸಿ: “ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವದು. ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಲಯವು ಬಂದು ಎಲ್ಲರನ್ನು ನಾಶಮಾಡಿತು.”

ಯೇಸು ಕ್ರಿಸ್ತನು, ತನ್ನ ಭೂಜೀವಿತಕ್ಕೆ ಮೊದಲು ಸ್ವರ್ಗದಲ್ಲಿ ಅಸ್ತಿತ್ವದಲ್ಲಿದ್ದುದರಿಂದ, ತಾನು ವರ್ಣಿಸಿದ ಘಟನೆಗಳಿಗೆ ಪ್ರತ್ಯಕ್ಷಸಾಕ್ಷಿಯಾಗಿದ್ದನು. (ಯೋಹಾನ 8:58) ಜಲಪ್ರಳಯವು ಬರಿಯ ಕಲ್ಪನಾ ಕಥೆಯಾಗಿದ್ದರೆ, ಯೇಸು ಒಂದೋ ತನ್ನ ಭಾವೀ ಸಾನ್ನಿಧ್ಯವು ನಟನೆಯಾಗಿದೆ ಎಂದು ಸೂಚಿಸಿದನು ಇಲ್ಲವೆ ಅಸತ್ಯವನ್ನು ನುಡಿಯುತ್ತಿದ್ದನು. ಆದರೆ ಇವೆರಡು ತೀರ್ಮಾನಗಳೂ ಶಾಸ್ತ್ರದ ಉಳಿದ ಭಾಗಗಳೊಂದಿಗೆ ಹೊಂದಿಕೆಯಾಗುವುದಿಲ್ಲ. (1 ಪೇತ್ರ 2:22; 2 ಪೇತ್ರ 3:3-7) ಆದಕಾರಣ ಯೇಸು ಕ್ರಿಸ್ತನು, ವೈಯಕ್ತಿಕ ಅವಲೋಕನದ ಫಲಿತಾಂಶವಾಗಿ, ಭೌಗೋಳಿಕ ಜಲಪ್ರಳಯದ ಕುರಿತ ಬೈಬಲ್‌ ವೃತ್ತಾಂತವು ಸಪ್ರಮಾಣವಾದ ಇತಿಹಾಸವೆಂದು ನಂಬಿದನು. ಸತ್ಯ ಕ್ರೈಸ್ತರಿಗಾದರೊ, ಇದು ನಿಸ್ಸಂದೇಹವಾಗಿ, ನೋಹನ ದಿನದ ಜಲಪ್ರಳಯವು ಕಲ್ಪನಾ ಕಥೆಯಲ್ಲ, ವಾಸ್ತವವಾಗಿತ್ತೆಂಬುದಕ್ಕೆ ಅತಿ ನಿರ್ಣಾಯಕವಾದ ಸಾಕ್ಷ್ಯವಾಗಿದೆ.

[ಪುಟ 35 ರಲ್ಲಿರುವ ಚಿತ್ರ ಕೃಪೆ]

L. Chapons/Illustrirte Familien-Bibel nach der deutschen Uebersetzung Dr. Martin Luthers

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ