ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮನಸ್ಸಾಕ್ಷಿ ಒಂದು ಹೊರೆಯೊ ಇಲ್ಲವೆ ಆಸ್ತಿಯೊ?
    ಕಾವಲಿನಬುರುಜು—1997 | ಆಗಸ್ಟ್‌ 1
    • ಆಸ್ತಿಯಾಗಿದೆ. ಅದು ನಮಗೆ ಸಂಕಟವನ್ನು ಉಂಟುಮಾಡಬಲ್ಲದು ನಿಜ. ಆದರೆ ಯೋಗ್ಯವಾಗಿ ಅದಕ್ಕೆ ಕಿವಿಗೊಡುವಾಗ, ಅದು ಆಳವಾದ ತೃಪ್ತಿ ಮತ್ತು ಆಂತರಿಕ ಶಾಂತಿಯ ಅನಿಸಿಕೆಗಳಿಂದಲೂ ನಮಗೆ ಪ್ರತಿಫಲ ನೀಡಬಲ್ಲದು. ಅದು ನಮ್ಮನ್ನು ಮಾರ್ಗದರ್ಶಿಸಿ, ಸಂರಕ್ಷಿಸಿ, ಪ್ರಚೋದಿಸಬಲ್ಲದು. ದಿ ಇಂಟರ್‌ಪ್ರೆಟರ್ಸ್‌ ಬೈಬಲ್‌ ಹೇಳಿಕೆ ನೀಡುವುದು: “ವ್ಯಕ್ತಿಯೊಬ್ಬನು, ತಾನು ಮಾಡುವ ಮತ್ತು ಮಾಡಬೇಕೆಂದು ಭಾವಿಸಿಕೊಳ್ಳುವುದರ ನಡುವಿನ ಅಂತರವನ್ನು ಮುಚ್ಚಲು ಪ್ರಯತ್ನಿಸುವಾಗ ಮಾತ್ರ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಸಾಧ್ಯವಿದೆ.” ಒಬ್ಬನು ಆ ಅಂತರವನ್ನು ಹೇಗೆ ಮುಚ್ಚಬಲ್ಲನು? ನಮ್ಮ ಮನಸ್ಸಾಕ್ಷಿಯನ್ನು ರೂಪಿಸಿ, ತರಬೇತುಗೊಳಿಸುವುದು ಸಾಧ್ಯವೊ? ಈ ಪ್ರಶ್ನೆಗಳು, ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವವು.

  • ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ವಿಧ
    ಕಾವಲಿನಬುರುಜು—1997 | ಆಗಸ್ಟ್‌ 1
    • ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ವಿಧ

      “ಶುದ್ಧವಾದ ಮನಸ್ಸಾಕ್ಷಿಯು, ಅತ್ಯುತ್ತಮವಾದ ತಲೆದಿಂಬಾಗಿದೆ.” ಈ ಹಳೆಯ ನಾಣ್ಣುಡಿಯು ಒಂದು ಮಹತ್ವದ ನಿಜತ್ವವನ್ನು ಎತ್ತಿತೋರಿಸುತ್ತದೆ: ನಮ್ಮ ಮನಸ್ಸಾಕ್ಷಿಗೆ ನಾವು ಕಿವಿಗೊಡುವಾಗ, ನಾವು ಆಂತರಿಕ ಶಾಂತಿ ಮತ್ತು ಸಾಮರಸ್ಯವನ್ನು ಅನುಭವಿಸುತ್ತೇವೆ.

      ಆದರೆ, ಎಲ್ಲರೂ ಹಾಗೆ ಮಾಡಲು ಆರಿಸಿಕೊಳ್ಳುವುದಿಲ್ಲ. ಆ್ಯಡಾಲ್ಫ್‌ ಹಿಟ್ಲರ್‌, ಮನಸ್ಸಾಕ್ಷಿ ಎಂಬುದಾಗಿ ವಿದಿತವಾಗಿರುವ, ಕೆಳಮಟ್ಟದ ಭ್ರಾಂತಿ, ಇಲ್ಲವೆ ಭ್ರಮೆಯಿಂದ ಮನುಷ್ಯನನ್ನು ವಿಮೋಚಿಸುವ ಆಯೋಗವನ್ನು ಸ್ವತಃ ಅಂಗೀಕರಿಸಿದನು. ಅವನ ಭೀತಿಯ ಆಳಿಕೆಯು, ಮನುಷ್ಯರು ತಮ್ಮ ಮನಸ್ಸಾಕ್ಷಿಯನ್ನು ತ್ಯಜಿಸುವಾಗ, ಎಷ್ಟು ಕ್ರೂರಿಗಳಾಗಸಾಧ್ಯವಿದೆ ಎಂಬುದರ ಒಂದು ಮರಗಟ್ಟಿಸುವ ನಸುನೋಟವನ್ನು ಒದಗಿಸುತ್ತದೆ. ಇಂದಿನ ಅನೇಕ ಹಿಂಸಾತ್ಮಕ ಅಪರಾಧಿಗಳು—ಮರುಕವಿಲ್ಲದೆ ಬಲಾತ್ಕಾರ ಸಂಭೋಗ ಮತ್ತು ಕೊಲೆ ಮಾಡುವವರು—ಏಕಪ್ರಕಾರವಾಗಿ ನಿಷ್ಠುರರಾಗಿದ್ದಾರೆ. ಈ ಅಪರಾಧಿಗಳಲ್ಲಿ ಹೆಚ್ಚಿನವರು ಬಹಳ ಎಳೆಯರಾಗಿದ್ದಾರೆ. ಆದುದರಿಂದಲೇ, ಈ ಸಂಗತಿಯನ್ನು ಅಧ್ಯಯನಿಸುತ್ತಿರುವ ಒಂದು ಪುಸ್ತಕವು, ಮನಸ್ಸಾಕ್ಷಿಯಿಲ್ಲದ ಮಕ್ಕಳು (ಇಂಗ್ಲಿಷ್‌) ಎಂಬ ಉಪಶಿರೋನಾಮವನ್ನು ಹೊಂದಿತ್ತು.

      ಅಧಿಕಾಂಶ ಜನರು ಒಂದು ಹಿಂಸಾತ್ಮಕ ಅಪರಾಧವನ್ನು ಗೈಯುವುದರ ಬಗ್ಗೆ ಎಂದಿಗೂ ಯೋಚಿಸಲಾರರಾದರೂ, ಅನೇಕರಿಗೆ ಲೈಂಗಿಕ ಅನೈತಿಕತೆಯಲ್ಲಿ ತೊಡಗುವುದು, ಸುಳ್ಳಾಡುವುದು, ಇಲ್ಲವೆ ಮೋಸಮಾಡುವುದರ ಬಗ್ಗೆ ಯಾವುದೇ ಅಳುಕು ಇರುವುದಿಲ್ಲ. ನೈತಿಕ ಮಟ್ಟಗಳು ಲೋಕವ್ಯಾಪಕವಾಗಿ ಕ್ಷೀಣಿಸುತ್ತಾ ಇವೆ. ಸತ್ಯ ಆರಾಧನೆಯಲ್ಲಾಗಲಿದ್ದ ಮಹಾ ಧರ್ಮಭ್ರಷ್ಟತೆಯನ್ನು ಸೂಚಿಸುತ್ತಾ, ಕೆಲವು ಕ್ರೈಸ್ತರು ಲೋಕದ ಪ್ರಭಾವಕ್ಕೆ ಒಳಗಾಗಿ, ಹೀಗೆ “ಸ್ವಂತ ಮನಸ್ಸಿನಲ್ಲಿ ಅಪರಾಧಿಗಳೆಂಬ ಬರೆಯುಳ್ಳವ”ರಾಗುವರೆಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 4:2) ಭ್ರಷ್ಟತೆಯ ಬೆದರಿಕೆಯು ಇಂದು, ಈ “ಕಡೇ ದಿವಸಗಳಲ್ಲಿ” ಇನ್ನೂ ಮಹತ್ತರವಾಗಿದೆ. (2 ತಿಮೊಥೆಯ 3:1) ಆದುದರಿಂದ ತಮ್ಮ ಮನಸ್ಸಾಕ್ಷಿಯನ್ನು ಸಂರಕ್ಷಿಸಲು ಕ್ರೈಸ್ತರು ಹೆಣಗಾಡಬೇಕು. ಅದನ್ನು ತರಬೇತುಗೊಳಿಸುವ ಹಾಗೂ ವಿಕಸಿಸಿಕೊಳ್ಳುವ ಮೂಲಕ ನಾವು ಇದನ್ನು ಮಾಡಬಲ್ಲೆವು.

      ಮನಸ್ಸು, ಹೃದಯ, ಮತ್ತು ನಿಮ್ಮ ಮನಸ್ಸಾಕ್ಷಿ

      ಅಪೊಸ್ತಲ ಪೌಲನು ಹೇಳಿದ್ದು: “ಈ ಮಾತನ್ನು ಸುಳ್ಳಾಡದೆ ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ; ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಸಾಕ್ಷಿ.” (ರೋಮಾಪುರ 9:1) ಆದುದರಿಂದ ಮನಸ್ಸಾಕ್ಷಿಯು ಸಾಕ್ಷಿನೀಡಬಲ್ಲದು. ಅದು ನಡತೆಯ ರೀತಿಯನ್ನು ಪರಿಶೀಲಿಸಿ, ಅದನ್ನು ಒಪ್ಪಬಲ್ಲದು ಇಲ್ಲವೆ ಖಂಡಿಸಬಲ್ಲದು. ಸರಿ ಹಾಗೂ ತಪ್ಪಿನ ವಿಷಯದಲ್ಲಿರುವ ನಮ್ಮ ಪ್ರಜ್ಞೆಯಲ್ಲಿ ಹೆಚ್ಚಿನದ್ದು, ನಮ್ಮ ಸೃಷ್ಟಿಕರ್ತನಿಂದ ನಮ್ಮಲ್ಲಿ ಇರಿಸಲ್ಪಟ್ಟಿದೆ. ಆದರೂ, ನಮ್ಮ ಮನಸ್ಸಾಕ್ಷಿಯನ್ನು ರೂಪಿಸಿ, ತರಬೇತುಗೊಳಿಸಸಾಧ್ಯವಿದೆ. ಹೇಗೆ? ದೇವರ ವಾಕ್ಯದಿಂದ ನಿಷ್ಕೃಷ್ಟ ಜ್ಞಾನವನ್ನು ನಾವು ಪಡೆದುಕೊಳ್ಳುವ ಮೂಲಕವೇ. “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ರೋಮಾಪುರ 12:2) ನಿಮ್ಮ ಮನಸ್ಸಿನಲ್ಲಿ ನೀವು ದೇವರ ಆಲೋಚನೆಗಳನ್ನು ಮತ್ತು ಚಿತ್ತವನ್ನು ನೆಲೆಗೊಳಿಸಿದಂತೆ, ನಿಮ್ಮ ಮನಸ್ಸಾಕ್ಷಿಯು ಹೆಚ್ಚು ದೈವಿಕವಾದ ವಿಧದಲ್ಲಿ ಕಾರ್ಯನಡಿಸಲು ಆರಂಭಿಸುತ್ತದೆ.

      ಯೆಹೋವನ ಸಾಕ್ಷಿಗಳು ಲೋಕದ ಸುತ್ತಲೂ ಲಕ್ಷಾಂತರ ಜನರಿಗೆ, ‘ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳಲು’ ಸಹಾಯ ಮಾಡಿದ್ದಾರೆ. (ಯೋಹಾನ 17:3) ತಮ್ಮ ಉಚಿತ ಮನೆ ಬೈಬಲ್‌ ಅಧ್ಯಯನದ ಏರ್ಪಾಡಿನ ಮೂಲಕ, ಲೈಂಗಿಕತೆ, ಮದ್ಯಪಾನೀಯಗಳು, ವಿವಾಹ, ವ್ಯಾಪಾರ ವ್ಯವಹಾರಗಳು,

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ