-
ಕೆಟ್ಟ ವಿಷಯವನ್ನು ಏಕೆ ವರದಿಸಬೇಕು?ಕಾವಲಿನಬುರುಜು—1997 | ಆಗಸ್ಟ್ 15
-
-
ಆರಾಧನೆಗೆ ಹಿಂದಿರುಗಲು ಅಪೇಕ್ಷಿಸದೆ, ತಪ್ಪುಕೃತ್ಯದಲ್ಲಿ ಕಠಿನ ಹೃದಯಿಗಳಾಗಿ ಪರಿಣಮಿಸಬಹುದು.—ಇಬ್ರಿಯ 10:26-29.
ತಪ್ಪುಕೃತ್ಯದ ವರದಿಮಾಡುವಿಕೆಯು, ತಪ್ಪಿತಸ್ಥನಿಗಾಗಿರುವ ನಿಷ್ಕಪಟ ಚಿಂತೆಯ ಒಂದು ಕೃತ್ಯವಾಗಿದೆ. ಯಾಕೋಬನು ಬರೆದುದು: “ನನ್ನ ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯಮಾರ್ಗವನ್ನು ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ—ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಿರಿ.”—ಯಾಕೋಬ 5:19, 20.
ಹಾಗಾದರೆ, ಕೆಟ್ಟ ವಿಷಯವನ್ನು ಏಕೆ ವರದಿಸಬೇಕು? ಏಕೆಂದರೆ ಅದು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ನಿಜವಾಗಿಯೂ, ತಪ್ಪುಕೃತ್ಯವನ್ನು ವರದಿಸುವುದು, ದೇವರ ಕಡೆಗೆ, ಸಭೆಯ ಕಡೆಗೆ, ಹಾಗೂ ತಪ್ಪಿತಸ್ಥನ ಕಡೆಗೆ ತೋರಿಸಲ್ಪಡುವ ಕ್ರಿಸ್ತೀಯ ತತ್ವಾಧಾರಿತ ಪ್ರೀತಿಯ ಒಂದು ಕೃತ್ಯವಾಗಿದೆ. ಸಭೆಯ ಪ್ರತಿಯೊಬ್ಬ ಸದಸ್ಯನೂ ದೇವರ ನೀತಿಯ ಮಟ್ಟಗಳನ್ನು ನಿಷ್ಠೆಯಿಂದ ಎತ್ತಿಹಿಡಿಯುವಾಗ, ಇಡೀ ಸಭೆಯನ್ನು ಯೆಹೋವನು ಹೇರಳವಾಗಿ ಆಶೀರ್ವದಿಸುವನು. ಅಪೊಸ್ತಲ ಪೌಲನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ಯಾರೂ ನಿಮ್ಮ ಮೇಲೆ ತಪ್ಪುಹೊರಿಸಲಾಗದಂತೆ ಆತನು [ಯೆಹೋವನು] ನಿಮ್ಮನ್ನು ಕಡೇ ವರೆಗೂ ದೃಢಪಡಿಸುವನು.”—1 ಕೊರಿಂಥ 1:8.
-
-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—1997 | ಆಗಸ್ಟ್ 15
-
-
ವಾಚಕರಿಂದ ಪ್ರಶ್ನೆಗಳು
ಚತುರಕ್ಷರಿ (ದೇವರ ನಾಮದ ನಾಲ್ಕು ಹೀಬ್ರು ಅಕ್ಷರಗಳು), ಶೆಮ್-ಟಾಬ್ ಬೆನ್ ಐಸಕ್ ಇಬ್ನ್ ಶಾಪ್ರುಟ್ ಎಂಬ 14ನೆಯ ಶತಮಾನದ ಯೆಹೂದಿ ವೈದ್ಯನಿಂದ ನಕಲುಮಾಡಲ್ಪಟ್ಟ ಮತ್ತಾಯನ ಹೀಬ್ರು ಗ್ರಂಥಪಾಠದಲ್ಲಿ ಕಂಡುಬರುತ್ತದೊ?
ಇಲ್ಲ, ಅದು ಕಂಡುಬರುವುದಿಲ್ಲ. ಆದಾಗಲೂ, ಆಗಸ್ಟ್ 15, 1996ರ ಕಾವಲಿನಬುರುಜು ಪತ್ರಿಕೆಯ ಪುಟ 13ರಲ್ಲಿ ತೋರಿಸಲ್ಪಟ್ಟಂತೆ, ಮತ್ತಾಯನ ಈ ಗ್ರಂಥಪಾಠವು, ಹಾಶ್‌ಶೆಮ್ ಎಂಬ ಪದವನ್ನು (ಪೂರ್ಣವಾಗಿ ಅಥವಾ ಸಂಕ್ಷಿಪ್ತವಾಗಿ) 19 ಸಲ ಉಪಯೋಗಿಸುತ್ತದೆ.
ಹಾಶ್‌ಶೆಮ್ ಎಂಬ ಹೀಬ್ರು ಪದದ ಅರ್ಥ, “ನಾಮ” ಎಂದಾಗಿದೆ. ಇದು ನಿಶ್ಚಯವಾಗಿಯೂ ದೈವಿಕ ನಾಮವನ್ನು ಸೂಚಿಸುತ್ತದೆ. ಉದಾಹರಣೆಗಾಗಿ, ಶೆಮ್-ಟಾಬ್‌ನ ಗ್ರಂಥಪಾಠದಲ್ಲಿ, ಮತ್ತಾಯ 3:3ರಲ್ಲಿ ಹಾಶ್‌ಶೆಮ್ ಪದದ ಒಂದು ಸಂಕ್ಷಿಪ್ತ ರೂಪವು ತೋರಿಬರುತ್ತದೆ. ಆ ವಚನಭಾಗದಲ್ಲಿ ಮತ್ತಾಯನು ಯೆಶಾಯ 40:3ನ್ನು ಉದ್ಧರಿಸಿದನು. ಎಲ್ಲಿ ಚತುರಕ್ಷರಿಯು ಕಂಡುಬರುತ್ತದೊ ಆ ಹೀಬ್ರು ಶಾಸ್ತ್ರಗಳಿಂದ ಮತ್ತಾಯನು ಒಂದು ವಚನವನ್ನು ಉದ್ಧರಿಸಿದಾಗ, ಅವನು ತನ್ನ ಸುವಾರ್ತೆ ಪುಸ್ತಕದಲ್ಲಿ ಆ ದೈವಿಕ ನಾಮವನ್ನು ಸೇರಿಸಿದನೆಂಬ ತೀರ್ಮಾನಕ್ಕೆ ಬರುವುದು ಸಮಂಜಸ. ಆದುದರಿಂದ ಶೆಮ್-ಟಾಬ್ ಸಾದರಪಡಿಸಿದ ಹೀಬ್ರು ಗ್ರಂಥಪಾಠವು ಚತುರಕ್ಷರಿಯನ್ನು ಉಪಯೋಗಿಸದಿದ್ದರೂ, ಮತ್ತಾಯ 3:3ರಲ್ಲಿ “ನಾಮ” ಎಂಬ ಪದದ ಅದರ ಬಳಕೆಯು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ “ಯೆಹೋವ” ಎಂಬ ಹೆಸರಿನ ಬಳಕೆಯನ್ನು ಬೆಂಬಲಿಸುತ್ತದೆ.
ಶೆಮ್-ಟಾಬ್ ಮತ್ತಾಯನ ಹೀಬ್ರು ಗ್ರಂಥಪಾಠವನ್ನು, ಎವೆನ್ ಬೊಚಾನ್ ಎಂಬ ತನ್ನ ವಾದಕಥೆಯ ಕೃತಿಯಲ್ಲಿ ನಕಲುಮಾಡಿದನು. ಆದರೆ ಆ ಹೀಬ್ರು ಗ್ರಂಥಪಾಠದ ಮೂಲವೇನಾಗಿತ್ತು? ಈ ವಿಷಯವನ್ನು ವಿಸ್ತೃತವಾಗಿ ಸಂಶೋಧಿಸಿರುವ ಪ್ರೊಫೆಸರ್ ಜಾರ್ಜ್ ಹಾವರ್ಡ್ ಸೂಚಿಸುವುದೇನೆಂದರೆ, “ಶೆಮ್-ಟಾಬ್‌ನ ಮತ್ತಾಯ ಪುಸ್ತಕದ ಹೀಬ್ರು ಗ್ರಂಥಪಾಠವು, ಕ್ರೈಸ್ತ ಶಕದ ಪ್ರಥಮ ನಾಲ್ಕು ಶತಮಾನಗಳೊಳಗಿನ ಯಾವುದೊ ಸಮಯಕ್ಕೆ ಕಾಲನಿರ್ದೇಶಿಸುತ್ತದೆ.”a ಇತರರು ಅವರೊಂದಿಗೆ ಈ ವಿಷಯದಲ್ಲಿ ಅಸಮ್ಮತಿಸಬಹುದು.
ಹಾವರ್ಡ್ ಅವಲೋಕಿಸುವುದು: “ಶೇಮ್-ಟಾಬ್‌ನ ಈ ಗ್ರಂಥಪಾಠದಲ್ಲಿ ಸೇರಿಸಲ್ಪಟ್ಟಿರುವ ಮತ್ತಾಯ ಪುಸ್ತಕದ ಹೀಬ್ರು ಗ್ರಂಥಪಾಠವು, ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಸಪ್ರಮಾಣದ ಮತ್ತಾಯನ ಪುಸ್ತಕಕ್ಕೆ ಹೋಲಿಕೆಯಲ್ಲಿ ಅದರ ಅನೇಕ ಭಿನ್ನತೆಗಳಿಂದಾಗಿ ವಿಶೇಷವಾಗಿ ನಿರೂಪಿಸಲ್ಪಟ್ಟಿದೆ.” ಉದಾಹರಣೆಗಾಗಿ, ಶೇಮ್-ಟಾಬ್‌ನ ಗ್ರಂಥಪಾಠಕ್ಕನುಸಾರ, ಯೇಸು ಯೋಹಾನನ ಕುರಿತು ಹೇಳಿದ್ದು: “ಸ್ತ್ರೀಯರಿಂದ ಹುಟ್ಟಿದವರಲ್ಲೆರಲ್ಲಿ, ಸ್ನಾನಿತ ಯೋಹಾನನಿಗಿಂತಲೂ ಶ್ರೇಷ್ಠನಾದ ಯಾವ ವ್ಯಕ್ತಿಯೂ ಎದ್ದಿಲ್ಲವೆಂದು ನಿಮಗೆ ನಿಜವಾಗಿಯೂ ಹೇಳುತ್ತೇನೆ.” ಅದು ಯೇಸುವಿನ ಮುಂದಿನ ಮಾತುಗಳನ್ನು ಬಿಟ್ಟುಬಿಡುತ್ತದೆ: “ಆದರೂ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 11:11) ಕೊಂಚಮಟ್ಟಿಗೆ ತದ್ರೀತಿಯ ವಿಧದಲ್ಲಿ, ಈಗಲೂ ಇರುವ ಹೀಬ್ರು ಶಾಸ್ತ್ರಗಳ ಹೀಬ್ರು ಗ್ರಂಥಪಾಠದಲ್ಲಿ ಮತ್ತು ಗ್ರೀಕ್ ಸೆಪ್ಟೂಅಜಿಂಟ್ ವರ್ಷನ್‌ನ ಅದಕ್ಕೆ ಅನುರೂಪವಾಗಿರುವ ಗ್ರಂಥಪಾಠದಲ್ಲಿನ ಶಬ್ದರಚನೆಯ ನಡುವೆ ಅನೇಕ ವ್ಯತ್ಯಾಸಗಳು ಇವೆ. ನಾವು ಅವುಗಳ ವ್ಯತ್ಯಾಸಗಳನ್ನು ಅಂಗೀಕರಿಸುತ್ತೇವಾದರೂ, ಅಂತಹ ಪುರಾತನ ಗ್ರಂಥಪಾಠಗಳು, ತುಲನಾತ್ಮಕ ಅಧ್ಯಯನದಲ್ಲಿ ಒಂದು ಸ್ಥಾನವನ್ನು ಹೊಂದಿರುತ್ತವೆ.
ಈಗಾಗಲೇ ತಿಳಿಸಲ್ಪಟ್ಟಿರುವಂತೆ, ಮತ್ತಾಯನ ಪುಸ್ತಕದ ಶೆಮ್-ಟಾಬ್‌ನ ಗ್ರಂಥಪಾಠವು, ಮತ್ತಾಯನು ಎಲ್ಲಿ ವಾಸ್ತವದಲ್ಲಿ ಚತುರಕ್ಷರಿಯನ್ನು ಉಪಯೋಗಿಸಿದನೆಂದು ನಂಬಲು ಸಕಾರಣವಿದೆಯೊ ಅಲ್ಲಿ, “ನಾಮ” ಎಂಬ ಪದವನ್ನು ಸೇರಿಸುತ್ತದೆ. ಹೀಗೆ, 1950ರಂದಿನಿಂದ, ಶೆಮ್-ಟಾಬ್‌ನ ಗ್ರಂಥಪಾಠವು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ದೈವಿಕ ನಾಮವನ್ನು ಬಳಸಲಿಕ್ಕಾಗಿ ಒಂದು ಆಧಾರದೋಪಾದಿ ಉಪಯೋಗಿಸಲ್ಪಟ್ಟಿದೆ, ಮತ್ತು ಇದು ಈಗಲೂ ದ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚ್‌ರ್ಸ್—ವಿದ್ ರೆಫರೆನ್ಸಸ್‌ನಲ್ಲಿ ಉಲ್ಲೇಖಿಸಲ್ಪಟ್ಟಿದೆ.b
-