ಯೆಹೋವನ ಸಾಕ್ಷಿಗಳಿಂದ ತೊಡಗಿ ರಕ್ತರಹಿತ ಶಸ್ತ್ರ ಚಿಕಿತ್ಸೆಯ ಮಾರ್ಗಕಲ್ಪಿಸುವುದು
ಇತ್ತೀಚಿನ ವರುಷಗಳಲ್ಲಿ ರಕ್ತಪೂರಣವನ್ನು ಅಂಗೀಕರಿಸದಿರುವ ಕಾರಣ ಯೆಹೋವನ ಸಾಕ್ಷಿಗಳು ಪದೇ ಪದೇ ಮಾಧ್ಯಮಗಳಲ್ಲಿ ಮೇಲ್ಪಂಕ್ತಿಗಳನ್ನು ಪಡೆದಿದ್ದಾರೆ. ಅವರ ರಕ್ತ ನಿರಾಕರಣೆಯ ಕಾರಣವು ಶಾಸ್ತ್ರಾಧಾರಿತವಾದರೂ, ಮಾನ್ಯ ಮಾಡಲಾಗಿರುವ ಶಾರೀರಿಕ ಅಪಾಯಗಳೂ ಇವೆ. (ಆದಿಕಾಂಡ 9:3, 4; ಯಾಜಕಕಾಂಡ 17:10-12; ಅ. ಕೃತ್ಯಗಳು 15:28, 29) ಅವರ ಈ ನೆಲೆ ಅವರನ್ನು ಡಾಕ್ಟರರು, ಆಸ್ಪತ್ರೆಗಳು, ಮತ್ತು ಕೋರ್ಟುಗಳೊಂದಿಗೆ ಮುಕಾಬಿಲೆಗೆ ತಂದಿದೆ. ವಯಸ್ಕ ಸಾಕ್ಷಿಗಳಿಗೆ, ರಕ್ತವನ್ನು ನಿರಾಕರಿಸಿದ ಕಾರಣ ಶಸ್ತ್ರ ಚಿಕಿತ್ಸೆಗಳನ್ನು ಅಲ್ಲಗಳೆಯಲಾಗಿದೆ; ಅವರ ಮಕ್ಕಳು ಕೋರ್ಟಿನ ಆಜ್ಞೆಗೆ ಅಧೀನರಾಗುವಂತೆ ಬಲಾತ್ಕರಿಸಲ್ಪಟ್ಟಿದ್ದಾರೆ.
ಈಗ ಈ ರಕ್ತಪೂರಣದ ನೆಲೆಯಲ್ಲಿ ತುಸು ಬದಲಾವಣೆಯಿದೆ. ರಕ್ತ ಸರಬರಾಯಿಗಳು ಅನೇಕ ವೇಳೆ ಮಾಲಿನ್ಯವುಳ್ಳದ್ದಾಗಿವೆ. ರಕ್ತಪೂರಣದಿಂದ ರೋಗಗಳು—ಹಲವು ಮಾರಕ—ರವಾನಿಸಲ್ಪಡುತ್ತವೆ. ರಕ್ತವು ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿರುವುದರಿಂದ ಮತ್ತು ಅದನ್ನು ಮಾಮೂಲಾಗಿ ಉಪಯೋಗಿಸುವುದರಿಂದ ಲೋಭವು ಇದರ ಅಂಶವಾಗಿ ಶಸ್ತ್ರಚಿಕಿತ್ಸೆ ಅನಾವಶ್ಯಕ ಅಪಾಯವನ್ನು ಕೂಡಿಸುತ್ತದೆ.a ಈ ಮತ್ತು ಇತರ ಕಾರಣಗಳಿಂದಾಗಿ, ಯೆಹೋವನ ಸಾಕ್ಷಿಗಳಲ್ಲದೆ ಇತರ ಅನೇಕರು ಸಾಮಾನ್ಯ ರಕ್ತಪೂರಣದ ಅಂಗೀಕಾರದ ಕುರಿತು ಪುನರ್ಯೋಚಿಸುತ್ತಿದ್ದಾರೆ.
ಯೆಹೋವನ ಸಾಕ್ಷಿಗಳು ಇದೆಲ್ಲದರ್ದಲ್ಲಿ ಒಂದು ಪಾತ್ರ ವಹಿಸಿದ್ದಾರೆ. ಅವರಲ್ಲಿ ಸಾವಿರಾರು ಜನರಿಗೆ ಶಸ್ತ್ರಚಿಕಿತ್ಸೆಯಾಗಿದೆ, ಮತ್ತು ಬಹುತೇಕ ಸಂದರ್ಭಗಳಲ್ಲಿ ಅವರು ರಕ್ತಪೂರಣ ಪಡೆದ ಜನರಿಗಿಂತಲೂ ಹೆಚ್ಚು ವೇಗವಾಗಿ ಗುಣಹೊಂದಿದ್ದಾರೆ. ಶಸ್ತ್ರ ಚಿಕಿತ್ಸಕರು ಕಡಮೆ ರಕ್ತನಷ್ಟವನ್ನು ತೀರಾ ಕಡಮೆ ಮಾಡಿ ಶಸ್ತ್ರಕ್ರಿಯೆ ಮಾಡಬಲ್ಲರೆಂದೂ ಕೆಲವು ಸಂದರ್ಭಗಳಲ್ಲಿ ರಕ್ತಾಂಕಗಳು ಈ ಹಿಂದೆ ಭದ್ರವೆಂದೆಣಿಸಿರುವುದಕ್ಕಿಂತಲೂ ಹೆಚ್ಚು ಕೆಳಗಿಳಿಯಸಾಧ್ಯವಿದೆಯೆಂದೂ ಸಾಕ್ಷಿಗಳ ಅನುಭವ ತೋರಿಸುತ್ತದೆ. ಇದಲ್ಲದೆ, ಅವರ ಕೇಸುಗಳು, ಈಗ ಅನೇಕ ಅನ್ಯಮಾರ್ಗಗಳು ಲಭ್ಯವೆಂದೂ ತೋರಿಸಿ, ಹೀಗೆ ಖರ್ಚನ್ನು ಕಡಮೆ ಮಾಡಿ ರಕ್ತಪೂರಣಗಳ ಅಪಾಯವನ್ನು ತೊಲಗಿಸಿವೆ. ಅವರ ಕೋರ್ಟು ವಿಜಯಗಳು, ರೋಗಿಗಳಿಗೆ ಕೆಲವು ನಿರ್ದಿಷ್ಟ ವೈದ್ಯಕೀಯ ವಿಧಾನಗಳನ್ನು ಅಂಗೀಕರಿಸುವ ಯಾ ನಿರಾಕರಿಸುವ ಹಕ್ಕನ್ನು ಹಿಂದಿರುಗಿಸಿವೆ.
ಯೆಹೋವನ ಸಾಕ್ಷಿಗಳು ಇವುಗಳಲ್ಲಿ ಹೆಚ್ಚಿನದನ್ನು ಸಾಧಿಸಿದ್ದು ಡಾಕ್ಟರರು ಮತ್ತು ಆಸ್ಪತ್ರೆಗಳೊಂದಿಗೆ ಸಹಕಾರದಿಂದ ವ್ಯವಹರಿಸುವ ಮೂಲಕವೇ. ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಜಾಗತಿಕ ಕೇಂದ್ರ ಕಾರ್ಯಾಲಯಗಳಲ್ಲಿ ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸೆಸ್ (HIS) ಎಂಬ ಇಲಾಖೆಯನ್ನು ಸ್ಥಾಪಿಸಿದ್ದಾರೆ. ಈ ಇಲಾಖೆಯ ಪ್ರತಿನಿಧಿಗಳು ಲೋಕದ ಅನೇಕ ಭಾಗಗಳಲ್ಲಿ ದೇಶಗಳನ್ನು ಸಂದರ್ಶಿಸಿ, ವಾಚ್ ಟವರ್ ಸೊಸೈಟಿಯ ಕೆಲವು ಬ್ರಾಂಚ್ ಆಫೀಸುಗಳಲ್ಲಿ ಮಾಹಿತಿ ಕೂಟಗಳನ್ನು ನಡೆಸಿ, ಅವಶ್ಯ ಬೀಳುವಂತೆ ಆಸ್ಪತ್ರೆ ಮತ್ತು ಡಾಕ್ಟರರನ್ನು ಸಂಪರ್ಕಿಸಲು ಹಾಸ್ಪಿಟಲ್ ಲೀಏಸಾನ್ ಕಮಿಟಿಗಳನ್ನು ರಚಿಸಿದ್ದಾರೆ. ಹೆಚ್ಚು ದೊಡ್ಡ ಬ್ರಾಂಚ್ ಆಫೀಸುಗಳನ್ನು ಸಂದರ್ಶಿಸುವಾಗ, ಈ ಎಚ್ಐಎಸ್ ಪ್ರತಿನಿಧಿಗಳು ತಾವು ಬೀಳ್ಕೊಟ್ಟ ಮೇಲೆ ಕಾರ್ಯ ನಡೆಸುವಂತೆ ಒಂದು ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸೆಸ್ ಡೆಸ್ಕನ್ನೂ ಸ್ಥಾಪಿಸುತ್ತಾರೆ.
ಈ ಮಾಹಿತಿ ಕೂಟಗಳು ಕಮಿಟಿಗಳನ್ನು, ಅವುಗಳು ಡಾಕ್ಟರರೊಂದಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಮಾತಾಡಿ, ರಕ್ತಪೂರಣಕ್ಕಿರುವ ಯೋಗ್ಯ ಅನ್ಯಮಾರ್ಗಗಳನ್ನು ಚರ್ಚಿಸಿ, ಸೂಕ್ಷ್ಮ ಶಸ್ತ್ರಕ್ರಿಯಾ ನೈಪುಣ್ಯಗಳು ರಕ್ತನಷ್ಟವನ್ನು ತೀರಾ ಕಡಮೆ ಮಾಡಬಲ್ಲದೆಂದು ವಿವರಿಸಲು ತರಬೇತು ಮಾಡುತ್ತಾರೆ. ಕೊನೆಗೆ, ಈ ಭೇಟಿ ನೀಡುವ ಎಚ್ಐಎಸ್ ಸದಸ್ಯರು, ಹೊಸ ಲೀಏಸಾನ್ ಕಮಿಟಿಗಳನ್ನು ಡಾಕ್ಟರರ ಮತ್ತು ಆಸ್ಪತ್ರೆಯ ಆಡಳಿತಗಾರರ ಬಳಿಗೆ ಮಾತನಾಡಲು ಕರೆದುಕೊಂಡು ಹೋಗಿ ಅವುಗಳಿಗೆ ಕೆಲಸದ ತರಬೇತನ್ನು ಕೊಡುತ್ತಾರೆ.
ಆರಂಭವಾಗಿ, ಅಮೆರಿಕದಲ್ಲಿ 18 ಮಾಹಿತಿ ಕೂಟಗಳು ನಡೆಸಲ್ಪಟ್ಟವು. ಆ ಬಳಿಕ, ಪೆಸಿಫಿಕ್ ವಲಯದಲ್ಲಿ, ಆಸ್ಟ್ರೇಲಿಯ, ಜಪಾನ್, ಫಿಲಿಪ್ಪೀನ್ಸ್, ಮತ್ತು ಹವಾಯಿ ದೇಶಗಳಲ್ಲಿ ಒಂದೊಂದರಂತೆ ನಾಲ್ಕು ಕೂಟಗಳು, ಆ ವಲಯದಲ್ಲಿ ವಾಚ್ ಟವರ್ ಸೊಸೈಟಿಯ ಎಂಟು ಬ್ರಾಂಚುಗಳ ಪ್ರಯೋಜನಾರ್ಥವಾಗಿ ನಡೆಸಲ್ಪಟ್ಟವು.b ನೊವೆಂಬರ್ ಮತ್ತು ಡಿಸೆಂಬರ್ 1990ರಲ್ಲಿ, ಏಚ್ಐಎಸ್ನ ಮೂವರು ಸದಸ್ಯರು ಯೂರೋಪ್, ಲ್ಯಾಟಿನ್ ಅಮೆರಿಕ, ಮತ್ತು ಕೆರಿಬಿಯನ್ನಲ್ಲಿ ಇನ್ನೂ ಹತ್ತು ಮಾಹಿತಿ ಕೂಟಗಳನ್ನು ನಡೆಸಿದರು. ಆ ಕೂಟಗಳ ಪರಿಣಾಮಗಳ ಕುರಿತ ವರದಿ ಈ ಕೆಳಗಿದೆ.
ಯೂರೋಪಿನಲ್ಲಿ ಐದು ಕೂಟಗಳು—ಇಂಗ್ಲೆಂಡ್, ಸ್ವೀಡನ್, ಫ್ರಾನ್ಸ್, ಜರ್ಮನಿ, ಮತ್ತು ಸ್ಪೆಯ್ನ್ನಲ್ಲಿ ಒಂದೊಂದು—ನಡೆದುವು. ಈ ಐದು ಕೂಟಗಳು ವಾಚ್ ಟವರ್ ಸೊಸೈಟಿಯ 20 ಬ್ರಾಂಚ್ಗಳಿಗೆ ಶಿಕ್ಷಣ ಕೊಟ್ಟು, ಹಾಸ್ಪಿಟಲ್ ಲೀಏಸಾನ್ ಕಮಿಟಿಯ ಕೆಲಸಕ್ಕಾಗಿ 1,700ಕ್ಕೂ ಹೆಚ್ಚು ಹಿರಿಯರನ್ನು ತರಬೇತುಗೊಳಿಸಿದುವು.
ಯೆಹೋವನ ಸಾಕ್ಷಿಗಳು, ರಕ್ತದ ವಿಷಯದಲ್ಲಿ ಅವರ ಸ್ಥಿರ ನೆಲೆಯಿಂದಾಗಿ, ವೈದ್ಯಕೀಯ ವೃತ್ತಿ ರಕ್ತರಹಿತ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಪ್ರಗತಿ ಹೊಂದುವಂತೆ ಸಹಾಯ ಮಾಡಿದೆ ಎಂದು ಒಬ್ಬ ಫ್ರೆಂಚ್ ಸರ್ಜನ್ ಒಪ್ಪಿಕೊಂಡರು. ಇನ್ನಾವ ಧರ್ಮವೂ ಅದರ ಜನರು ಕಷ್ಟಕರವಾದ ವಿವಾದಾಂಶವನ್ನು ನಿಭಾಯಿಸುವಂತೆ ಸಹಾಯಮಾಡಲು ಅಷ್ಟರ ಮಟ್ಟಿಗೆ ಮುಂದುವರಿದದ್ದಿಲ್ಲವೆಂದು ಅವರಂದರು.
ಈ ವಿಷಯದಲ್ಲಿ ಸ್ಪೆಯ್ನ್ನ ಮಡ್ರಿಡ್ನಲ್ಲಿರುವ ಅತಿ ಮುಂಬರಿದ ಆಸ್ಪತ್ರೆ ಸಾಕ್ಷಿಗಳನ್ನು ಬಹಳ ವಿರೋಧಿಸುತ್ತಿತ್ತು. ಬೆನ್ನೆಲುಬಿನ ಶಸ್ತ್ರಚಿಕಿತ್ಸೆ ಬೇಕಾಗಿದ್ದ ಒಬ್ಬಳು ಸಾಕ್ಷಿ ರಕ್ತಪೂರಣವನ್ನು ನಿರಾಕರಿಸಿದ ಕಾರಣ ಅವಳಿಗೆ ಚಿಕಿತ್ಸೆ ಅಲ್ಲಗಳೆಯಲ್ಪಟ್ಟಿತು. ಆಸ್ಪತ್ರೆಯನ್ನು ಬಿಟ್ಟುಹೋಗಲು ಆಕೆ ಒಪ್ಪದಿದ್ದಾಗ, ಅವರು ಆಹಾರ ಮತ್ತು ಪಾನೀಯಗಳನ್ನು ಕೊಡದೆ ಅವಳು ಬಿಟ್ಟು ಹೋಗುವಂತೆ ಬಲಾತ್ಕರಿಸಿದರು. ಆದರೆ ಏಚ್ಐಎಸ್ ಸದಸ್ಯರು ಭೇಟಿನಿಶ್ಚಯದ ಏರ್ಪಾಡು ಮಾಡಿ ಅಲ್ಲಿಯ ಮೆಡಿಕಲ್ ಡೈರೆಕ್ಟರ್ ಮತ್ತು ಶಸ್ತ್ರಚಿಕಿತ್ಸಾ ಮುಖ್ಯಾಧಿಕಾರಿಯೊಂದಿಗೆ ಎರಡು ತಾಸು ಕೂಟ ನಡೆಸಿದರು. ಪಲಿತಾಂಶವೊ? ಅವರು ಶಸ್ತ್ರಚಿಕಿತ್ಸೆಗೆ ಒಪ್ಪಿ ಹೊರಹಾಕಿದ ಸಾಕ್ಷಿ ಶಸ್ತ್ರಚಿಕಿತ್ಸೆಗಾಗಿ ಬರುವಂತೆ ಫೋನ್ ಮಾಡಿದರು.
ಇಟೆಲಿಯಲ್ಲಿ ಸಾಕ್ಷಿಗಳು ಮಾಹಿತಿ ಕೂಟದಿಂದ ಬಂದೊಡನೆ ಒಂದು ಅಪಕ್ವ ಶಿಶುವಿಗೆ ಬಲಾತ್ಕಾರದಿಂದ ರಕ್ತಪೂರಣ ಮಾಡುವ ಪ್ರಯತ್ನವನ್ನು ಮುಕಾಬಿಲೆ ಮಾಡಿದರು. ಅವರು ಹೇಳಿದಂತೆ: “ಮಾಹಿತಿ ಕೂಟದಲ್ಲಿ ನಮಗೆ ದೊರೆತ ಮಾಹಿತಿಯಿಂದಾಗಿ, ನಾವು ಪರಿಸ್ಥಿತಿಯನ್ನು ಶಾಂತಗೊಳಿಸಲು ಸಾಧ್ಯವಾಯಿತು ಮತ್ತು ಮಗುವಿಗೆ ರಕ್ತವಿಲ್ಲದೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಲಾಯಿತು.”
ಲ್ಯಾಟಿನ್ ಅಮೆರಿಕ ಮತ್ತು ಕೆರಿಬೀಯನ್ಗೆ
ಮುಂದಿನ ಐದು ಮಾಹಿತಿ ಕೂಟಗಳು ಮೆಕ್ಸಿಕೊ, ಆರ್ಜೆಂಟೀನ, ಬ್ರೆಸೀಲ್, ಎಕಡ್ವಾರ್, ಮತ್ತು ಪೋರ್ಟೋ ರಿಕೊ ದೇಶಗಳಲ್ಲಿ ನಡೆದುವು. ಈ ಐದು ಮಾಹಿತಿ ಕೂಟಗಳಿಂದ ಮೂವತ್ತೈದು ಬ್ರಾಂಚುಗಳು ಪ್ರಯೋಜನ ಪಡೆದುವು.
ಮೆಕ್ಸಿಕೊ ಸಿಟಿ ರಕ್ತನಿಧಿಯ ಡೈರೆಕ್ಟರು, ರಕ್ತರಹಿತ ಶಸ್ತ್ರಚಿಕಿತ್ಸೆಯಲ್ಲಿ ಯೆಹೋವನ ಸಾಕ್ಷಿಗಳೆ ನುಗ್ಗುಮೊನೆಯೆಂದೂ, ಈಗ ಅವರ ಮಾರ್ಗಕಲ್ಪಿಸುವ ಪ್ರಯತ್ನಗಳಿಂದಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ನೈಪುಣ್ಯವಿರುವುದರಿಂದ ಇತರರೂ ಪ್ರಯೋಜನ ಪಡೆಯುವಂತಾಗಿದೆಯೆಂದೂ ಹೇಳಿದರು. ಅವರು ರಕ್ತಸ್ರಾವದ ಕೇಸುಗಳ ಚಿಕಿತ್ಸೆ ಮಾಡಲು ಅನ್ಯ ವಿಧಾನಗಳ ಪಟ್ಟಿ ಮಾಡಿರುವ ಏಚ್ಐಎಸ್ ಹಾಳೆಯನ್ನು ನೋಡಿದರು.c ಬಳಿಕ ಅವರಂದದ್ದು: “ಮೆಕ್ಸಿಕೊ ಸಿಟಿಯ ಪ್ರತಿ ಆಸ್ಪತ್ರೆಯ ನೋಟೀಸ್ ಬೋರ್ಡುಗಳಿಗಾಗಿ ನನಗೆ ಇದನ್ನು ನಕಲು ಮಾಡಲು ಮನಸ್ಸಿದೆ. ಡಾಕ್ಟರರು ತಮ್ಮ ಮಾಹಿತಿಗಾಗಿ ನಕಲು ಮಾಡುವಂತೆಯೂ ನಾನು ಕೇಳಿಕೊಳ್ಳುತ್ತೇನೆ. ಆಮೇಲೆ, ಇನ್ನು ಮುಂದೆ ಅವರು ರಕ್ತಕ್ಕಾಗಿ ಈ ರಕ್ತನಿಧಿಗೆ ಕರೆ ಕೊಡುವಾಗ, ಅವರು ಆ ಹಾಳೆಯನ್ನು ತೆಗೆದುಕೊಳ್ಳುವಂತೆ ಮೊದಲು ಕೇಳಿ, ಬಳಿಕ, “ನೀವು ಇದನ್ನು ಉಪಯೋಗಿಸಿದಿರೊ? ಇದನ್ನು ಪ್ರಯತ್ನಿಸಿದ್ದೀರೊ?” ಎಂದು ಕೇಳುವೆವು. ಈ ಅನ್ಯಮಾರ್ಗಗಳನ್ನು ಮೊದಲು ಅವರು ಉಪಯೋಗಿಸದೆ ಇದ್ದಿರುವಲ್ಲಿ, ಅವರು ಉಪಯೋಗಿಸುವ ತನಕ ಅವರು ನಮ್ಮಿಂದ ರಕ್ತವನ್ನು ಪಡೆಯುವುದಿಲ್ಲ!”
ಉತ್ತರ ಆರ್ಜೆಂಟೀನದ ರಕ್ತನಿಧಿಯ ಡೈರೆಕ್ಟರು ಸಹ ಸಹಾಯ ಪ್ರವೃತ್ತಿಯವರಾಗಿದ್ದರು. ಈ ಪ್ರದೇಶದಲ್ಲಿ ಇರುವ ಒಂದು ಕಾರ್ಯನೀತಿ ಏನೆಂದರೆ, ಸರಕಾರ ನಡೆಸುವ ಆಸ್ಪತ್ರೆಗೆ ಯಾವನೇ ಬರಲಿ, ಅವನು ಮೊದಲಾಗಿಯೆ ಅವನ ಸಂಬಂಧಿಗಳಾಗಲಿ, ಮಿತ್ರರಾಗಲಿ ಎರಡು ಯೂನಿಟ್ ರಕ್ತವನ್ನು ದಾನಮಾಡುವಂತೆ ಏರ್ಪಡಿಸಬೇಕು, ಇಲ್ಲದಿರುವಲ್ಲಿ ಅವನಿಗೆ ಚಿಕಿತ್ಸೆ ಅಲ್ಲಗಳೆಯಲಾಗುವುದು. ಸಾಕ್ಷಿಗಳು ಇದಕ್ಕೆ ಒಪ್ಪದಿರುವುದರಿಂದ ಅವರಿಗೆ ಶಸ್ತ್ರಚಿಕಿತ್ಸೆ ನಿರಾಕರಿಸಲ್ಪಡುತ್ತಿತ್ತು. ಆದರೆ, ರಕ್ತೋಪಯೋಗದ ಕುರಿತು ನಮ್ಮ ಯಥಾರ್ಥ ನಂಬಿಕೆಯನ್ನು ವಿವರಿಸಿದ ಬಳಿಕ, ಡೈರೆಕ್ಟರು ಆ ಕಾರ್ಯನೀತಿಯನ್ನು ಮುಂದೆ ಪುನಃ ಬರೆಯುವಾಗ ಅದನ್ನು ಬದಲಾಯಿಸಲು ಏರ್ಪಡಿಸಿದರು. ಈ ಮಧ್ಯೆ, ಆಸ್ಪತ್ರೆಗೆ ಸೇರಿಸಲ್ಪಡುವಾಗ ತಮ್ಮ ಎಡ್ವಾನ್ಸ್ ಮೆಡಿಕಲ್ ಡಿರೆಕ್ಟಿವ್ (Advance Medical Directive) ಕಾರ್ಡನ್ನು ತೋರಿಸುವ ಸಾಕ್ಷಿಗಳು ರಕ್ತದಾನ ಮಾಡುವ ಆವಶ್ಯಕತೆಯಿಂದ ವಿನಾಯಿತಿ ಪಡೆಯುವರು.
ಎಕಡ್ವಾರ್ನಲ್ಲಿ, ಸಾಕ್ಷಿಗಳಿಗೆ ಮತ್ತು ಸಾಕ್ಷ್ಯೇತರರಿಗೆ ರಕ್ತದ ಉಪಯೋಗವಿಲ್ಲದೆ 2,500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಕ್ರಮಗಳನ್ನು ನಡೆಸಿದ ಒಬ್ಬ ಪ್ರಮುಖ ಮತ್ತು ಪ್ರಭಾವಶಾಲಿ ಡಾಕ್ಟರರಿದ್ದಾರೆ. ರಕ್ತ ಸರಬರಾಯಿಯಿಂದ ರೋಗಿಗಳಿಗಿರುವ ಅನೇಕ ಅಪಾಯಗಳ ಕಾರಣ ತಾನು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಪ್ರೋತ್ಸಾಹಿಸುವರೆ ಒಂದು ಚಳವಳಿಯನ್ನು ಆ ದೇಶದಲ್ಲಿ ಯೋಜಿಸುತ್ತಿದ್ದೇನೆಂದು ಅವರು ಹೇಳಿದರು.
ಎಕಡ್ವಾರ್ನಲ್ಲಿ ಮಾಹಿತಿ ಕೂಟ ನಡೆದ ಬಳಿಕ, ಈ ಪ್ರತಿಪಾದನೆಗೆ ಹಾಜರಾದ ಒಬ್ಬ ಸರ್ಜನರು ಹೇಳಿದ್ದು: “ಈ ಜನರು ವೈದ್ಯಶಾಸ್ತ್ರದ ಸಂಶೋಧನೆಯಲ್ಲಿ ಇಂಥ ಸಾಮರ್ಥ್ಯಕ್ಕೆ ಶಕ್ತರಾಗಿರುವುದಾದರೆ, ಇದು ಅವರ ಬೈಬಲ್ ಅಧ್ಯಯನ ಅರ್ಥಗರ್ಭಿತವೆಂದು ಹೇಳಿ, ಅವರ ಧರ್ಮವು ಸಂಶೋಧನಾರ್ಹವೆಂದು ನನಗನಿಸುವಂತೆ ಮಾಡುತ್ತದೆ.”
ಪೋರ್ಟೋ ರಿಕೊದಲ್ಲಿ ಮನೋಭಾವದಲ್ಲಿ ಇಷ್ಟಕರವಾದ ಬದಲಾವಣೆ ಕಂಡುಬಂತು. ಈ ಹಿಂದೆ, ವಯಸ್ಕ ಸಾಕ್ಷಿಗಳನ್ನು ಕೆಲವು ವೇಳೆ ಮಂಚಕ್ಕೆ ಬಿಗಿದು ಬಲಾತ್ಕಾರದಿಂದ ರಕ್ತವನ್ನು ಕೊಡಲಾಗುತ್ತಿತ್ತು; ಇವರಲ್ಲಿ ಕೆಲವರು ಆ ಬಳಿಕ ಸತ್ತಿದ್ದರು. ಏಚ್ಐಎಸ್ ಪ್ರತಿನಿಧಿಗಳು, ಪೋರ್ಟೋ ರಿಕೊ ಹಾಸ್ಪಿಟಲ್ ಅಸೋಸಿಯೋಷನಿನ ಉಪಾಧ್ಯಕ್ಷ ಮತ್ತು ವಕೀಲರೊಡನೆ ಭೇಟಿ ಮಾಡಿದರು. ಈ ವಕೀಲರು ಆಸ್ಪತ್ರೆಯ ಆಡಳಿತಗಾರರೂ ಆಗಿದ್ದರು. ಔಪಚಾರಿಕವಾಗಿ ಪರಿಚಯಿಸಲ್ಪಟ್ಟ ಬಳಿಕ ಮತ್ತು ಏಚ್ಐಎಸ್ ಪ್ರತಿಪಾದನೆ ಆರಂಭವಾಗುವ ಮೊದಲು, ತಮಗೇನೋ ಹೇಳಲಿಕ್ಕಿದೆಯೆಂದು ವಕೀಲರಂದರು. ಸಾಕ್ಷಿಗಳಿಗೆ ಆಶ್ಚರ್ಯವಾಗುವಂತೆ ಅವರು, ಆ ದ್ವೀಪದ ಆಸ್ಪತ್ರೆಗಳಲ್ಲಿ ರೋಗಿಗಳ ಹಕ್ಕುಗಳನ್ನು ಅಭಿವೃದ್ಧಿ ಪಡಿಸುವ ಒಂದು ಯೋಜನೆಯನ್ನು ವರ್ಣಿಸತೊಡಗಿದರು, ಮತ್ತು ಇದರಲ್ಲಿ ಪ್ರತಿಪಾದನೆಯ ಮುಖ್ಯಾಂಶಗಳು ಅಡಕವಾಗಿದ್ದುವು! ಅವರೊಂದಿಗೆ ಬಿಡಲ್ಪಟ್ಟಿದ್ದ ಮಾಹಿತಿಯಲ್ಲಿ ಕೆಲವನ್ನು ನಕಲು ಮಾಡಲು ಅಪ್ಪಣೆಯನ್ನೂ ಅವರು ಕೇಳಿದರು; ಹಾಸ್ಪಿಟಲ್ ಅಸೋಸಿಯೇಷನ್ ಪತ್ರಿಕೆಗಾಗಿ ತಯಾರಿಸಲ್ಪಡುತ್ತಿರುವ ಒಂದು ಲೇಖನದಲ್ಲಿ ಅದನ್ನು ಸೇರಿಸಲಿಕ್ಕೆ ಅವರು ಅಪೇಕ್ಷೆಪಟ್ಟರು.
ಅಮೆರಿಕದಲ್ಲಿ ದೊರೆತಿರುವ ಫಲಿತಾಂಶಗಳು
ಒಬ್ಬ ಡಾಕ್ಟರರು—ತನ್ನ ಆಸ್ಪತ್ರೆಯ ಸರ್ಜರಿ ಇಲಾಖೆಯ ಅಧ್ಯಕ್ಷರಾದ ಜೇಮ್ಸ್ ಜೆ. ರೈಲಿ—ಸ್ಥಳೀಕ ಲೀಏಸಾನ್ ಕಮಿಟಿಗೆ ಈ ಗಮನಾರ್ಹ ಹೇಳಿಕೆಯನ್ನಿತ್ತರು: “ನಾನು ಗ್ರಹಿಸುವ ಪ್ರಕಾರ ನೀವು ರಕ್ತೋಪಯೋಗದ ವಿಷಯದಲ್ಲಿ ವೈದ್ಯಕೀಯ ಮತ್ತು ನ್ಯಾಯಶಾಸ್ತ್ರೀಯ ಮಾಹಿತಿಯ ಅಗ್ರ ಭಾಗದಲ್ಲಿದ್ದೀರಿ.”
ವಾಷಿಂಗ್ಟನ್, ಡಿ.ಸಿ. ಪ್ರದೇಶದ ಒಂದು ದೊಡ್ಡ ಆಸ್ಪತ್ರೆಯಲ್ಲಿ, ಹಾಸ್ಪಿಟಲ್ ಲೀಏಸಾನ್ ಕಮಿಟಿ, ಆಡಳಿತಗಾರರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಒಂದು ಗುಂಪನ್ನು ಭೇಟಿಮಾಡಿದರು. ಇವರು ತಾವು ಬೆಂಬಲ ನೀಡುತ್ತೇವೆಂದು ಮಾತುಕೊಟ್ಟು, “ತನ್ನ ಸ್ವಂತ ಜನರಿಗೆ ಅವಶ್ಯವಿರುವ ಸಮಯದಲ್ಲಿ ಇಂಥ ಆಸರೆ ಕೊಡುವ ಏರ್ಪಾಡಿನ ಮೂಲಕ ವಾಚ್ಟವರಿಗಿರುವ ಬದ್ಧತೆ”ಯನ್ನು ತಾವು ಗಣ್ಯ ಮಾಡುತ್ತೇವೆಂದು ವಿಶೇಷವಾಗಿ ವ್ಯಕ್ತಪಡಿಸಿದರು.
ವಿಸ್ಕಾನ್ಸಿನ್ನ ಒಂದು ಆಸ್ಪತ್ರೆಯ ರೋಗಿ ಪರಾಮರಿಕೆ ಇಲಾಖೆಯ ಮುಖ್ಯಸ್ಥೆ, ಯೆಹೋವನ ಸಾಕ್ಷಿಗಳ ವಿಷಯ ಅವಳಿಗೆ ಎಷ್ಟು ತಪ್ಪು ತಿಳಿವಳಿಕೆಯಿತ್ತು ಎಂಬುದನ್ನು ತಿಳಿಸಿದಳು. ಹಾಸ್ಪಿಟಲ್ ಲಿಏಸಾನ್ ಕಮಿಟಿಯು “ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಎಲ್ಲರಿಗೆ ಈ ಸಂದೇಶವನ್ನು ಮುಟ್ಟಿಸುವುದರಲ್ಲಿ ಮುನ್ನುಗ್ಗ”ಬೇಕೆಂದು ಆಕೆ ಪ್ರೋತ್ಸಾಹಿಸಿದಳು.
ಏಚ್ಐಎಸ್ನ ಒಂದು ಕೆಲಸಾಂಶ, ವೈದ್ಯಕೀಯ ಮತ್ತು ನ್ಯಾಯಶಾಸ್ತ್ರೀಯ ಮಾಹಿತಿಗಳನ್ನು ನಿಯಮಿತ ಡಾಕ್ಟರರು, ಆಸ್ಪತ್ರೆಗಳು ಮತ್ತು ಹಾಸ್ಪಿಟಲ್ ಮತ್ತು ಮೆಡಿಕಲ್ ಅಸೋಸಿಯೇಷನ್ಗಳಿಗೆ ರವಾನಿಸುವುದಾಗಿದೆ. ಮೇರಿಲೆಂಡಿನ ಬಾಲಿಮ್ಟೋರಿನ ಒಂದು ಆಸ್ಪತ್ರೆಯ ಕಾನೂನಿನ ಹೊಣೆಗಾರಿಕೆಯಿಂದ ತಪ್ಪಿಸುವ ರಿಸ್ಕ್ ಮ್ಯಾನೆಜರನೊಬ್ಬನು ಹೇಳಿದ್ದು: “ರಕ್ತಪೂರಣಗಳ ಮತ್ತು ಯೆಹೋವನ ಸಾಕ್ಷಿಗಳ ಕುರಿತು ನನ್ನ ಗಮನಕ್ಕೆ ತರಿಸಿದ ಸವಿಸ್ತಾರವಾದ ಲೇಖನಗಳಿಗಾಗಿ ಉಪಕಾರ. ನಮ್ಮ ಆಸ್ಪತ್ರೆ ಯೆಹೋವ ಸಾಕ್ಷಿಗಳ ಚಿಕಿತ್ಸೆಯ ಸಂಬಂಧದಲ್ಲಿ ತಮ್ಮ ಕಾರ್ಯನೀತಿಯನ್ನು ಬದಲಾಯಿಸುವರೆ ನೆರವಾಗಲು ಈ ಮಾಹಿತಿ ತೀರಾ ಸಹಾಯಕರವಾಗಿರುವುದು.”
ಕೇವಲ ಅಮೆರಿಕದಲ್ಲಿ, ಸುಮಾರು 10,000 ಡಾಕ್ಟರರು ಯೆಹೋವನ ಸಾಕ್ಷಿಗಳಿಗೆ ರಕ್ತರಹಿತ ಶಸ್ತ್ರಚಿಕಿತ್ಸೆ ಮಾಡಲು ಬಯಸುವವರ ಪಟ್ಟಿಯಲ್ಲಿದ್ದಾರೆ.
ಇಷ್ಟರ ವರೆಗೆ, ಈ ತನಕ ನಡೆಸಿರುವ 32 ಮಾಹಿತಿ ಕೂಟಗಳ ಮೂಲಕ, ಲೋಕದ ವಿವಿಧ ಭಾಗಗಳ ಯೆಹೋವನ ಸಾಕ್ಷಿಗಳ ಆವಶ್ಯಕತೆಗಳನ್ನು ಪೂರೈಸಲು 62 ಬ್ರಾಂಚ್ ಆಫೀಸುಗಳಲ್ಲಿ ಲಿಏಸಾನ್ ಕಮಿಟಿಗಳನ್ನು ಸ್ಥಾಪಿಸಲಾಗಿದೆ. ಲಕ್ಷಾಂತರ ಜನ ಯೆಹೋವನ ಸಾಕ್ಷಿಗಳನ್ನು ಪರಾಮರಿಸಲು ಇವೀಗ ಸಿದ್ಧವಾಗಿವೆ. ಬಂದಿರುವ ಫಲಿತಾಂಶಗಳು, ಯೆಹೋವನು ನಿಶ್ಚಯವಾಗಿಯೂ ಈ ಏಚ್ಐಎಸ್ನ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆಂದು ಸೂಚಿಸುತ್ತವೆ. (g91 11/22)
[ಅಧ್ಯಯನ ಪ್ರಶ್ನೆಗಳು]
a ವಿವರಣೆಗಾಗಿ ಅಕ್ಟೋಬರ 8, 1991ರ ಅವೇಕ್! ಪುಟ 2-15 ನೋಡಿ.
b ಈ ದೇಶಗಳ ವರದಿಗಾಗಿ, ನೊವೆಂಬರ್ 22, 1990ರ ಅವೇಕ್!ನಲ್ಲಿ “ಬ್ರಿಜಿಂಗ್ ದ ಗ್ಯಾಪ್ ಬಿಟ್ವೀನ್ ಡಾಕ್ಟರ್ಸ್ ಆ್ಯಂಡ್ ವಿಟ್ನೆಸ್ ಪೇಷೆಂಟ್ಸ್” ಎಂಬ ಲೇಖನ ನೋಡಿ.
c ಈ ಹಾಳೆಯನ್ನು ಈ ಪತ್ರಿಕೆಯ ಹತ್ತನೆಯ ಪುಟದಲ್ಲಿ ಪುನಃ ಮುದ್ರಿಸಲಾಗಿದೆ.
[ಪುಟ 10 ರಲ್ಲಿರುವ ಚೌಕ]
ರಕ್ತಪೂರಣವಿಲ್ಲದೆ ರಕ್ತಸ್ರಾವವನ್ನು ತಡೆಯುವುದು ಮತ್ತು ನಿಯಂತ್ರಿಸುವುದು
1. ಶಸ್ತ್ರಚಿಕಿತ್ಸೆಯ ಸಾಧನಗಳು:
ಎ. ಎಲೆಕ್ಟ್ರೋಕಾಟರಿ (ವಿದ್ಯುತ್ ಸುಡಿಗೆ)
ಬಿ. ಲೇಸರ್ ಶಸ್ತ್ರಚಿಕಿತ್ಸೆ
ಸಿ. ಆರ್ಗನ್ ಬೀಮ್ ಕೋಆ್ಯಗ್ಯುಲೇಟರ್ (ರಕ್ತ ಘನೀಕಾರಕ)
ಡಿ. ಗ್ಯಾಮ ನೈಫ್ ರೇಡಿಯೊಸರ್ಜರಿ (ಗ್ಯಾಮ ಚೂರಿ ರೇಡಿಯೊ ಶಸ್ತ್ರಚಿಕಿತ್ಸೆ)
2. ಆಂತರಿಕ ರಕ್ತಸ್ರಾವವನ್ನು ಕಂಡುಹಿಡಿದು ನಿರೋಧಿಸುವ ವಿಧಾನಗಳು ಮತ್ತು ಸಾಧನಗಳು:
ಎ. ಎಂಡೋಸ್ಕೊಪಿ (ಅಂತರ್ದರ್ಶಕ, ಆಂತರಿಕ ರಕ್ತಸ್ರಾವದ ಸ್ಥಳವನ್ನು ಕಂಡುಹಿಡಿಯಲು.
ಬಿ. ಫೆಕ್ಲ್ಸಿಬ್ಲ್ ಸಕ್ಷನ್ ಕೊಆ್ಯಗ್ಯುಲೇಟರ್ ಎಲೆಕ್ಟ್ರಾಡ್ (ಹೀರಿಕೆ ಘನೀಕಾರಕವಾದ ಬಾಗು ವಿದ್ಯುತ್ಧ್ರುವ)
ಸಿ. ಆರ್ಟೀರಿಯಲ್ ಎಂಬೊಲೈಸೇಷನ್ (ಧಮನಿಬಂಧ)
ಡಿ. ಕಂಟ್ರೋಲ್ಡ್ ಹೈಪೊಟೆನ್ಶನ್ (ನಿಯಂತ್ರಿತ ಕಮ್ಮಿ ರಕ್ತದೊತ್ತಡ, ರಕ್ತಸ್ರಾವ ನಿಲ್ಲಿಸಲ್ಪಡುವ ತನಕ)
ಇ. ಟಿಸ್ಯು ಆ್ಯಢೀಸಿವ್ (ಅಂಗಕಟ್ಟು ಅಂಟು)
3. ಶಸ್ತ್ರಚಿಕಿತ್ಸೆ ಮತ್ತು ಸಂವೇದನಹಾರಿ ವಿಧಾನಗಳು:
ಎ. ಹೈಪೊಟೆನ್ಸಿವ್ ಆ್ಯನಸೀಸ್ಟಿಯ (ರಕ್ತದೊತ್ತಡ ಕಮ್ಮಿ ಮಾಡುವ ಸಂವೇದನ ಸುಪ್ತಿ)
ಬಿ. ಹೈಪೊತೆರ್ಮಿಯ (ಶರೀರದ ತಾಪಮಾನವನ್ನು ಕೆಳಗಿಳಿಸುವುದು)
ಸಿ. ಇಂಟ್ರಆಪರೆಟಿವ್ ಹಿಮೊಡೈಲ್ಯೂಷನ್ (ಶಸ್ತ್ರಚಿಕಿತ್ಸೆಯ ಸಮಯ ರಕ್ತದ್ರವ ವರ್ಧನ)
ಡಿ. ಇಂಟ್ರಆಪರೇಟಿವ್ ಬ್ಲಡ್ ಸಾಲ್ವೇಜ್ ಯಂತ್ರಗಳು, ಉದಾಹರಣೆಗೆ “ಸೆಲ್ ಸೇವರ್” (ಶಸ್ತ್ರಚಿಕಿತ್ಸೆಯ ಸಮಯ ರಕ್ತ ಉಳಿಸುವ ಯಂತ್ರಗಳು).
ಇ. ಮೆಟಿಕ್ಯುಲಸ್ ಹೀಮೊಸೇಸ್ಟಿಸ್ ಆ್ಯಂಡ್ ಆಪರೇಟಿವ್ ಟೆಕ್ನೀಕ್ (ಸೂಕ್ಷ್ಮ ರೀತಿಯಲ್ಲಿ ರಕ್ತಸ್ರಾವ ತಡೆಯುವ ಮತ್ತು ಶಸ್ತ್ರಚಿಕಿತ್ಸಾ ವಿಧಾನ)
ಎಫ್. ಶಸ್ತ್ರಚಿಕಿತ್ಸಾ ಸಮಯವನ್ನು ಕಮ್ಮಿ ಮಾಡಲು ಚಿಕಿತ್ಸಾ ತಂಡದಲ್ಲಿ ಹೆಚ್ಚು ಸದಸ್ಯರು
4. ಕಾರ್ಯಪರೀಕ್ಷಾ ಸಲಕರಣೆಗಳು:
ಎ. ಟ್ರಾನ್ಸ್ಕ್ಯುಟೇನಿಯಸ್ ಆಕ್ಸಿಜನ್ ಮಾನಿಟರ್ (ಚರ್ಮ ಹೊಗುವ ಆಮ್ಲಜನಕ ಪರೀಕ್ಷಕ)
ಬಿ. ಆಕ್ಸೀಮಿಟರ್ (ರಕ್ತಪರಿಚಲನೆಯಲ್ಲಿ ಆಮ್ಲಜನಕ ಸಂಪೂರಣ ಎಷ್ಟರ ಮಟ್ಟಕ್ಕಿದೆ ಮುಂದುವರಿಯುತ್ತಾ ಅಳೆಯುವ ಒಂದು ಸಾಧನ)
5. ಗಾತ್ರ ವಿಸ್ತಾರಕಗಳು:
ಎ. ಕ್ರಿಸಲ್ಟೈಡ್ಸ್ (ಸ್ಫಟಿಕಕಾರಕಗಳು)
(1) ರಿಂಗರ್ಸ್ ಲ್ಯಾಕ್ಟೇಟ್
(2) ನಾರ್ಮಲ್ ಸೆಲೈನ್ (ಸಾಮಾನ್ಯ ಲವಣ)
ಬಿ. ಕಾಲೈಡ್ಸ್ (ಅಸ್ಫಟಿಕಗಳು)
(1) ಡೆಕ್ಸ್ಟ್ರಾನ್
(2) ಜೆಲಟಿನ್
(3) ಹೆಟಸ್ಟಾರ್ಚ್ (ಗಾತ್ರ ವಿಸ್ತಾರಕ ಷ್ಟಿ)
6. ಕೆಮಿಕಲ್ ಹೀಮೊಸ್ಟ್ಯಾಟ್ಸ್ (ರಾಸಾಯನಿಕ ರಕ್ತಸ್ರಾವ ನಿರೋಧಕ ವಸ್ತುಗಳು):
ಎ. ಅವಿಟೀನ್
ಬಿ. ಜೆಲ್ಫೋಮ್
ಸಿ. ಆಕ್ಸಿಸೆಲ್
ಡಿ. ಸರ್ಜಿಸೆಲ್
ಇ. ಇತರ ಅನೇಕ
7. ಹೀಮೊಗ್ಲೋಬಿನ್ ಕಮ್ಮಿಗೆ ಚಿಕಿತ್ಸಕಗಳು:
ಎ. ಆಮ್ಲಜನಕ
ಬಿ. ಹೈಪರ್ಬ್ಯಾರಿಕ್ ಆಕ್ಸಿಜನ್ ಚೇಂಬರ್ (ಸಾಮಾನ್ಯಕ್ಕೂ ಜಾಸ್ತಿ ಒತ್ತಡದ ಆಮ್ಲಜನಕ ಕುಹರ)
ಸಿ. ಐಅರ್ನ್ ಡೆಕ್ಸ್ಟ್ರನ್
ಡಿ. ಫೋಲಿಕ್ ಆ್ಯಸಿಡ್
ಇ. ಎರಿತ್ರಾಪೊಯಿಟಿನ್—ರಕ್ತವನ್ನು ಉತ್ಪಾದಿಸುವ ಎಲುಬಿನ ನೆಣವನ್ನು ಉದ್ರೇಕಿಸುತ್ತದೆ
ಎಫ್. ಆನಬಾಲಿಕ್ ಸಿರ್ಟಾಯ್ಡ್ಸ್; ಡೆಕಡ್ಯೂರಬಾಲಿನ್ ಅಥವಾ ಕೃತಕವಾಗಿ ಬೆಳೆತದ ಚೋದಕಸ್ರಾವ
ಜಿ. ವಿಟಮಿನ್ ಬಿ-12 ಇಂಟ್ರಮಸ್ಕ್ಯುಲರ್ ಇಂಜೆಕ್ಷನ್
ಏಚ್. ವಿಟಮಿನ್ ಸಿ
ಐ. ವಿಟಮಿನ್ ಇ (ವಿಶೇಷವಾಗಿ ಹೊಸದಾಗಿ ಜನಿಸಿದವುಗಳಲ್ಲಿ)
8. ಬಾಹ್ಯ ಕ್ರಮಗಳು:
ಎ. ರಕ್ತಸ್ರಾವ ತಡೆಯಲು:
(1) ನೇರವಾಗಿ ಒತ್ತಡ ಹಾಕುವುದು
(2) ಐಸ್ ಕಟ್ಟುವುದು
(3) ದೇಹವಿನ್ಯಾಸ (ಉದಾಹರಣೆಗೆ, ರಕ್ತಸ್ರಾವವನ್ನು ನಿಧಾನಿಸಲು ಗಾಯವಾದ ಅಂಗಭಾಗವನ್ನು ಎತ್ತುವುದು)
ಬಿ. ಸುಸ್ತು ಧಕ್ಕೆಗೆ:
(1) ಕಾಲುಗಳಿಗೆ ಬೀಗಿಸಸಾಧ್ಯವಿರುವ ಕಟ್ಟುಗಳನ್ನು ಕಟ್ಟಿರಿ
(2) ಬೀಗಿಸಸಾಧ್ಯವಿರುವ ಷರಾಯಿಗಳು
(3) ರಕ್ತದೊತ್ತಡವನ್ನು ಒಂದೇ ರೀತಿ ಇಟ್ಟುಕೊಳ್ಳಲು ಎರಡು ಕಾಲುಗಳನ್ನೂ ಎತ್ತುವುದು
9. ರಕ್ತಸಮಸ್ಯೆಗಳಿರುವ ರೋಗಿಗಳಿಗೆ ಔಷಧಗಳು:
ಎ. ಡಿಡಿಎವಿಪಿ, ಡೆಸ್ಮೊಪ್ರೆಸಿನ್
ಬಿ. ಇ-ಆ್ಯಮಿನೊಕ್ಯಾಪ್ರಾಯ್ಕ್ ಆ್ಯಸಿಡ್
ಸಿ. ವಿಟಮಿನ್ ಕೆ
ಡಿ. ಬಯೋಫೆವ್ಲೊನೊಯಿಯ್ಡ್ಸ್
ಇ. ಕಾರ್ಬಸೊಕ್ರೋಮ್ ಸ್ಯಾಲಿಸೈಕ್ಲೇಟ್
ಎಫ್. ಟ್ರ್ಯಾನೆಕ್ಸ್ಯಾಮಿಕ್ ಆ್ಯಸಿಡ್
ಜಿ. ಡ್ಯಾನ್ಸಾಲ್
10. ಇತರ ವಿಷಯಗಳು:
ಎ. ರಕ್ತದೊತ್ತಡದಲ್ಲಿ ಮರ್ಕ್ಯುರಿಯಲ್ಲಿ 90-100 ಮಿಲಿಮೀಟರಿನ ಒಂದು ಹಾಳತದ ಇಳಿತವು ಕಡಿದ ಅಪಧಮನಿಯ ರಕ್ತಸ್ರಾವವನ್ನು ನೈಸರ್ಗಿಕವಾಗಿ ಹೆಪ್ಪುಗಟ್ಟಿಸಲು ಸಹಾಯ ಮಾಡಬಹುದು
ಬಿ. ಶಸ್ತ್ರಚಿಕಿತ್ಸೆಗೆ ಕಡಮೆ ಪಕ್ಷ 10 ಗ್ರ್ಯಾಮ್ ಹೀಮೊಗ್ಲೋಬಿನ್ ಬೇಕೆಂಬ ನಿಯಮಕ್ಕೆ ಯಾವ ಸಪ್ರಮಾಣವಾದ ವೈಜ್ಞಾನಿಕ ಆಧಾರವೂ ಇಲ್ಲ
ಸಿ. ಶಸ್ತ್ರಚಿಕಿತ್ಸೆಯಲ್ಲಿ ರೋಗಿಗಳು 1.8ರಷ್ಟು ಕಮ್ಮಿ ಹೀಮೊಗ್ಲೋಬಿನ್ ಇದ್ದಾಗಲೂ ಬದುಕಿ ಉಳಿದಿದ್ದಾರೆ
ಡಿ. ಹೀಮೊಗ್ಲೋಬಿನ್ನ ಕಮ್ಮಿಯಿಂದ ರಕ್ತಪ್ರವಾಹದ ನಿರೋಧಕತೆ ಕಮ್ಮಿಯಾಗುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು ಕಡಮೆ ಮಾಡಿ ಅಂಗಸತದ್ವ ನೆನೆಯುವಿಕೆ ಮತ್ತು ಆಮ್ಲಜನಕದ ಒದಗಿಸುವಿಕೆಯನ್ನು ಹೆಚ್ಚಿಸುತ್ತದೆ