ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಆಶ್ರಯನಗರ”ದಲ್ಲಿ ಉಳಿದುಕೊಂಡು ಜೀವಿಸಿರಿ!
    ಕಾವಲಿನಬುರುಜು—1995 | ನವೆಂಬರ್‌ 15
    • 20. ರಕ್ತದ ಮುಯ್ಯಿಗಾರನಿಂದ ಸಂರಕ್ಷಣೆಯನ್ನು ಪಡೆಯಲಿಕ್ಕಾಗಿ ಸೂಚಿತರೂಪದ ಆಶ್ರಯನಗರದಲ್ಲಿರುವವರು ಏನು ಮಾಡಬೇಕು?

      20 ರಕ್ತದ ಮುಯ್ಯಿಗಾರನಿಂದ ಸಂರಕ್ಷಣೆಯನ್ನು ಪಡೆಯಲಿಕ್ಕಾಗಿ, ಉದ್ದೇಶರಹಿತ ಕೊಲೆಗಾರರು ಆಶ್ರಯನಗರವೊಂದರಲ್ಲಿ ಉಳಿಯಬೇಕಿತ್ತು ಮತ್ತು ಅದರ ಹುಲ್ಲುಗಾವಲು ಪ್ರದೇಶಗಳ ಆಚೆ ಅಲೆದಾಡಬಾರದಿತ್ತು. ಸೂಚಿತರೂಪದ ಆಶ್ರಯನಗರದಲ್ಲಿರುವವರ ಕುರಿತೇನು? ರಕ್ತದ ಮಹಾ ಮುಯ್ಯಿಗಾರನಿಂದ ರಕ್ಷಣೆಗಾಗಿ ಅವರು ನಗರವನ್ನು ಬಿಡಬಾರದು. ಹಾಗೆ ಹೇಳುವುದಾದರೆ, ಹುಲ್ಲುಗಾವಲು ಪ್ರದೇಶಗಳ ಅಂಚಿಗೆ ಹೋಗುವಂತಿರುವ ಆಕರ್ಷಣೆಗಳ ವಿರುದ್ಧ ಅವರು ಎಚ್ಚರವಾಗಿರಬೇಕು ನಿಶ್ಚಯ. ತಮ್ಮ ಹೃದಯಗಳಲ್ಲಿ ಸೈತಾನನ ಲೋಕಕ್ಕಾಗಿ ಪ್ರೀತಿಯು ಬೆಳೆಯುವಂತೆ ಬಿಡದಿರಲು ಅವರು ಜಾಗರೂಕರಾಗಿರಬೇಕು. ಇದು ಪ್ರಾರ್ಥನೆ ಮತ್ತು ಪ್ರಯತ್ನವನ್ನು ಕೇಳಿಕೊಳ್ಳಬಹುದು, ಆದರೆ ಅವರ ಜೀವಗಳು ಅದರ ಮೇಲೆ ಅವಲಂಬಿಸಿರುತ್ತವೆ.—1 ಯೋಹಾನ 2:15-17; 5:19.

  • ಫಲವತತ್ತೆಯ ಹಾಗೂ ಯುದ್ಧದ ದೇವತೆಗಳು
    ಕಾವಲಿನಬುರುಜು—1995 | ನವೆಂಬರ್‌ 15
    • ಫಲವತತ್ತೆಯ ಹಾಗೂ ಯುದ್ಧದ ದೇವತೆಗಳು

      ಸಿರಿಯದ ಎಬದ್ಲ ಬಳಿ ಒಂದು ಪ್ರಾಕ್ತನಶಾಸ್ತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ, ಫಲವತತ್ತೆಯ ಮತ್ತು ಯುದ್ಧದ ಬಬಿಲೋನ್ಯ ದೇವತೆಯಾದ ಇಶಾರ್ಟ್‌ ಅನ್ನು ಚಿತ್ರಿಸುವ ಒಂದು ಅವಶಿಷ್ಟವನ್ನು ಕಂಡುಕೊಳ್ಳಲಾಯಿತು. ಪ್ರಾಕ್ತನಶಾಸ್ತ್ರಜ್ಞರಾದ ಪಾವೊಲೊ ಮಾಟೀಯೈ ಅದನ್ನು, “ಒಂದು ಎತ್ತರವಾದ ತೆಳ್ಳನೆಯ ಆಧಾರದ ಮೇಲೆ ಅದರ ತಲೆ ಜೋಡಿಸಲ್ಪಟ್ಟಿರುವ . . . ಏಕೈಕ ದಿವ್ಯ ಪ್ರತಿಮೆಯ ಮುಂದೆ, ಮುಸುಕು ಹಾಕಿರುವ ಒಬ್ಬ ಪುರೋಹಿತೆಯನ್ನು ಚಿತ್ರಿಸುವ ಒಂದು ಕರ್ಮಾಚರಣೆಯ ದೃಶ್ಯವುಳ್ಳ ಸಿಲಿಂಡರಾಕಾರದ ಮುದ್ರೆ,” ಎಂಬುದಾಗಿ ವರ್ಣಿಸಿದರು.

      ಕಂಡುಹಿಡಿತವು ಮಹತ್ವದ್ದಾಗಿದೆ, ಏಕೆಂದರೆ ಪ್ರತಿಮೆಯು ಸಾ.ಶ.ಪೂ 18ನೆಯ ಶತಮಾನದ ಆರಂಭಕ್ಕೆ ಸಂಬಂಧಪಟ್ಟಿರುತ್ತದೆ. ಮಾಟೀಯೈ ಅವರಿಗನುಸಾರ, ಇಶಾರ್ಟ್‌ ದೇವತೆಯ ಆರಾಧನೆಯು ಸುಮಾರು 2,000 ವರ್ಷಗಳ ಕಾಲ ವ್ಯಾಪಿಸಿತ್ತೆಂಬುದಕ್ಕೆ ಇದು “ನಿರ್ಣಾಯಕ ಪ್ರಮಾಣವನ್ನು” ನೀಡುತ್ತದೆ.

      ಇಶಾರ್ಟ್‌ ದೇವತೆಯ ಆರಾಧನೆಯು ಬಾಬೆಲಿನಲ್ಲಿ ಆರಂಭವಾಯಿತು ಮತ್ತು ಅನಂತರದ ಶತಮಾನಗಳಲ್ಲಿ ರೋಮನ್‌ ಸಾಮ್ರಾಜ್ಯದಾದ್ಯಂತ ಹರಡಿತು. ವಾಗ್ದತ್ತ ದೇಶದಿಂದ ಸುಳ್ಳು ಧರ್ಮದ ಪ್ರತಿಯೊಂದು ಲಕ್ಷಣವನ್ನು ನಿರ್ಮೂಲ ಮಾಡಬೇಕೆಂದು ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟನು, ಆದರೆ ಹಾಗೆ ಮಾಡಲು ಅವರು ತಪ್ಪಿಹೋದ ಕಾರಣ, ಅಷ್ಟೋರೆತ್‌ (ಇಶಾರ್ಟ್‌ ದೇವತೆಯ ಕಾನಾನ್ಯ ಪ್ರತಿರೂಪ) ದೇವತೆಯ ಆರಾಧನೆಯು ಅವರಿಗೊಂದು ಪಾಶವಾಯಿತು.—ಧರ್ಮೋಪದೇಶಕಾಂಡ 7:2, 5; ನ್ಯಾಯಸ್ಥಾಪಕರು 10:6.

      ಇಶಾರ್ಟ್‌ ಮತ್ತು ಆಕೆಯ ಪ್ರತಿರೂಪವಾದ ಅಷ್ಟೋರೆತ್‌ ಇನ್ನುಮುಂದೆ ಅಸ್ತಿತ್ವದಲ್ಲಿರದಿದ್ದರೂ, ಅವರು ಪ್ರತಿನಿಧಿಸಿದ ಲಕ್ಷಣಗಳು—ಅನೈತಿಕತೆ ಮತ್ತು ಹಿಂಸಾಚಾರ—ಬಹಳವಾಗಿ ಹಬ್ಬಿರುತ್ತವೆ. ಆಧುನಿಕ ಸಮಾಜವು, ಫಲವತತ್ತೆಯ ಮತ್ತು ಯುದ್ಧದ ಈ ದೇವತೆಗಳನ್ನು ಆರಾಧಿಸಿದ ಆ ಪ್ರಾಚೀನ ನಾಗರಿಕತೆಗಳಿಂದ ನಿಜವಾಗಿಯೂ ಬಹಳ ಭಿನ್ನವಾಗಿದೆಯೊ ಎಂದು ನಾವು ಸೂಕ್ತವಾಗಿಯೇ ಕೇಳಬಹುದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ