ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 5/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ‘ಆ ದಿನ ನಿಮಗೆ ಜ್ಞಾಪಕಾರ್ಥವಾಗಿರಬೇಕು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಸೇಡರಿನಿಂದ ರಕ್ಷಣೆಗೆ
    ಕಾವಲಿನಬುರುಜು—1991
  • ಸ್ಮಾರಕ ಸಮಯದಲ್ಲಿ ‘ನಾವೇನಾಗಿದ್ದೇವೆಂದು ಪರೀಕ್ಷಿಸಿಕೊಳ್ಳುವುದು.’
    ಕಾವಲಿನಬುರುಜು—1991
  • ಕರ್ತನ ಸಂಧ್ಯಾ ಭೋಜನ—ದೇವರಿಗೆ ಗೌರವ ತರುವ ಒಂದು ಆಚರಣೆ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು—1993
w93 5/1 ಪು. 31

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತನೊಬ್ಬನು ಅಸ್ವಸ್ಥನಾಗಿರುವುದಾದರೆ ಯಾ ಸಂಚಾರದಲ್ಲಿರುವುದಾದರೆ, ಮತ್ತು ಹೀಗೆ ಸ್ಮಾರಕಾಚರಣೆಯಲ್ಲಿರಲು ಅಸಾಧ್ಯವಾದರೆ, ಅದನ್ನು ಒಂದು ತಿಂಗಳ ನಂತರ ಅವನು ಆಚರಿಸತಕ್ಕದ್ದೋ?

ಪ್ರಾಚೀನ ಇಸ್ರಾಯೇಲಿನಲ್ಲಿ ಪಸ್ಕಹಬ್ಬವು ನೈಸಾನ್‌ (ಯಾ ಆಬೀಬ್‌) ಹೆಸರಿನ ಪ್ರಥಮ ತಿಂಗಳ 14 ನೆಯ ದಿನದಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುತ್ತಿತ್ತು. ಆದರೆ ಅರಣ್ಯಕಾಂಡ 9:10, 11 ರಲ್ಲಿ ಒಂದು ವಿಶೇಷ ನಿಬಂಧನೆಯನ್ನು ನಾವು ಕಂಡುಕೊಳ್ಳುತ್ತೇವೆ: “ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು—ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಶವಸೋಂಕಿದದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಕೂಡ ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇ ಬೇಕು. ಅಂಥವರು ಎರಡನೆಯ ತಿಂಗಳಿನ [ಅಯ್ಯರ್‌ ಯಾ ಚೀವ್‌ ಎಂಬ ಹೆಸರುಳ್ಳ] ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಅದನ್ನು ಆಚರಿಸಬೇಕು ಆ ಪಶುವಿನ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಂಗಡ ಊಟಮಾಡಬೇಕು.”

ಅನುಕೂಲತೆಯ ಮೇಲೆ ಹೊಂದಿಕೊಂಡು ಯಾವನೇ ಇಸ್ರಾಯೇಲನು ಯಾ ಕುಟುಂಬವು ಸ್ವತಂತ್ರವಾಗಿ ಆರಿಸಿಕೊಳ್ಳಲು ಪಸ್ಕಹಬ್ಬಕ್ಕಾಗಿ ಎರಡು ಪರ್ಯಾಯವಾದ ತಾರೀಕುಗಳನ್ನು (ನೈಸಾನ್‌ 14 ಯಾ ಚೀವ್‌ 14) ಇದು ಸ್ಥಾಪಿಸಲಿಲ್ಲವೆಂಬುದನ್ನು ಗಮನಿಸಿರಿ. ಎರಡನೆಯ ತಿಂಗಳ ಪಸ್ಕಹಬ್ಬವೊಂದರ ಈ ನಿಬಂಧನೆಯು ಸೀಮಿತವಾಗಿತ್ತು. ನೈಸಾನ್‌ 14 ರಂದು ಔಪಚಾರಿಕವಾಗಿ ಅಶುದ್ಧವಾಗಿರುವ ಯಾ ಎಲ್ಲಿ ಕ್ರಮದ ಆಚರಣೆಯು ನಡೆಯುತ್ತಿತ್ತೋ ಅಲ್ಲಿಂದ ಬಹುದೂರದಲ್ಲಿರುವ ಇಸ್ರಾಯೇಲ್ಯನೊಬ್ಬನಿಗೆ ಅದೊಂದು ವಿನಾಯಿತಿ ಆಗಿತ್ತು.

ಇದನ್ನು ವ್ಯಾಪಕವಾಗಿ ಬಳಸಿದ ಕೇವಲ ಒಂದು ದಾಖಲಿಸಲ್ಪಟ್ಟ ಸಂಭವವು, ಹುಳಿಯಿಲ್ಲದ ರೊಟ್ಟಿಗಳ ಹಬ್ಬದಾಚರಣೆಯನ್ನು ನಂಬಿಗಸ್ತ ಅರಸ ಹಿಜ್ಕೀಯನು ಪುನರೂರ್ಜಿತಗೊಳಿಸಿದ ಸಮಯದಲ್ಲಿ ಆಗಿದೆ. ಮೊದಲನೆಯ ತಿಂಗಳಲ್ಲಿ ಸಿದ್ಧರಾಗಿರಲು ಅಲ್ಲಿ ಸಮಯವಿರಲಿಲ್ಲ (ಯಾಜಕರು ಸಿದ್ಧರಾಗಿರಲಿಲ್ಲ, ಮತ್ತು ಜನರು ಕೂಡಿಸಲ್ಪಟ್ಟಿರಲ್ಲಿಲ), ಆದುದರಿಂದ ಅದನ್ನು ಎರಡನೆಯ ತಿಂಗಳ 14 ನೆಯ ದಿನದಲ್ಲಿ ನಡಿಸಲಾಯಿತು.—2 ಪೂರ್ವಕಾಲವೃತ್ತಾಂತ 29:17; 30:1-5.

ಅಂತಹ ಅಪವಾದಾತ್ಮಕ ಪರಿಸ್ಥಿತಿಗಳಲ್ಲದೇ, ಯೆಹೂದ್ಯರು ಪಸ್ಕಹಬ್ಬವನ್ನು ದೇವರು ನೇಮಿಸಿದ ತೇದಿಯಲ್ಲಿ ಪರಿಪಾಲಿಸಿದರು. (ವಿಮೋಚನಕಾಂಡ 12:17-20, 41, 42; ಯಾಜಕಕಾಂಡ 23:5) ಯೇಸು ಮತ್ತು ಅವನ ಶಿಷ್ಯರು ನಿಯಮಶಾಸ್ತ್ರವು ಅಪೇಕ್ಷಿಸಿದಂತೆ ಆಚರಿಸಿದರಲ್ಲದೆ, ಈ ತಾರೀಕನ್ನು ಸಾಂದರ್ಭಿಕವಾಗಿ ಪರಿಗಣಿಸಲಿಲ್ಲ. ಲೂಕನು ವರದಿಸುವುದು: “ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವಸಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯ ತಕ್ಕ ದಿವಸ ಬಂದಾಗ ಯೇಸು ಪೇತ್ರನಿಗೂ ಯೋಹಾನನಿಗೂ—ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ ಎಂದು ಹೇಳಿ ಅವರನ್ನು ಕಳುಹಿಸಿದನು.”—ಲೂಕ 22:7, 8.

ಕ್ರೈಸ್ತರು ಇಂದು ಕರ್ತನ ಸಂಜಾಭೋಜನವೆಂದು ತಿಳಿದಿರುವ ವಾರ್ಷಿಕಾಚರಣೆಯನ್ನು, ಯೇಸುವು ಆ ಸಂದರ್ಭದಲ್ಲಿ ಸ್ಥಾಪಿಸಿದನು. ಕ್ರೈಸ್ತರ ಹಾಜರಿಯ ಮೂಲ್ಯವನ್ನು ಅಧಿಕ ಒತ್ತಾಗಿ ಹೇಳಬೇಕೆಂದೇನೂ ಇಲ್ಲ. ಅದು ಯೆಹೋವನ ಸಾಕ್ಷಿಗಳಿಗೆ ವರ್ಷದ ಅತ್ಯಂತ ಪ್ರಾಮುಖ್ಯ ಘಟನೆ ಆಗಿದೆ. ಯೇಸುವಿನ ಮಾತುಗಳು ಯಾಕೆಂದು ತೋರಿಸುತ್ತವೆ; ಅವನಂದದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಆದಕಾರಣ, ಯಾವುದೇ ಪೂರ್ವ ನಿರ್ಧರಿತ ನೇಮಕಗಳಿಂದ ಆಚರಣೆಯ ತಾರೀಕನ್ನು ಸ್ವತಂತ್ರವಾಗಿಡಲು ಯೆಹೋವನ ಸಾಕ್ಷಿಗಳಲ್ಲಿ ಪ್ರತಿಯೊಬ್ಬನು ತಿಂಗಳುಗಳ ಮೊದಲೇ ಯೋಜಿಸತಕ್ಕದ್ದು. ಎಪ್ರಿಲ್‌ 6, 1993 ರ ಮಂಗಳವಾರ ಸೂರ್ಯಾಸ್ತಮಾನದ ನಂತರ ಸ್ಥಳೀಕವಾಗಿ ಕರ್ತನ ಸಂಜಾಭೋಜನವು ಆಚರಿಸಲ್ಪಡುವುದು.

ಅನಾರೋಗ್ಯ ಯಾ ಪ್ರಯಾಣದ ಸಂಕ್ಲಿಷ್ಟತೆಗಳಂತಹ ಅನಿರೀಕ್ಷಿತವಾದ ಕೆಲವು ಪರಿಸ್ಥಿತಿಯ ವಿರಳ ವಿದ್ಯಮಾನಗಳಲ್ಲಿ, ಅವನು ಯಾ ಅವಳು ಮುನ್ನೇರ್ಪಾಡು ಮಾಡಿದ ಹಾಜರಾತಿಗೆ ಕ್ರೈಸ್ತನೊಬ್ಬನನ್ನು ತಡೆಯಬಹುದು. ಅಂತಹ ಸನ್ನಿವೇಶದಲ್ಲಿ ಏನು ಮಾಡತಕ್ಕದ್ದು?

ಆಚರಣೆಯ ಸಮಯದಲ್ಲಿ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಿಮದ್ಯವು ದಾಟಿಸಲ್ಪಡುತ್ತದೆ, ಮತ್ತು ದೇವರ ಆತ್ಮನಿಂದ ಅಭಿಷೇಕಿತರಾದವರು ಮತ್ತು ಪರಲೋಕದ ಜೀವಿತಕ್ಕೆ ಆರಿಸಲ್ಪಟ್ಟವರು ಪಾಲಿಗರಾಗುತ್ತಾರೆ. (ಮತ್ತಾಯ 26:26-29; ಲೂಕ 22:28-30) ಪ್ರತಿವರ್ಷ ಪಾಲಿಗನಾಗುವ ಒಬ್ಬನು ಈ ವರ್ಷ ಮನೆಯಲ್ಲಿ ಯಾ ಆಸ್ಪತ್ರೆಯಲ್ಲಿ ರೋಗಶಯ್ಯೆಯಲ್ಲಿ ನಿರ್ಬಂಧಿಲ್ಪಟ್ಟಿರುವುದಾದರೆ, ಸ್ಥಳೀಕ ಸಭೆಯ ಹಿರಿಯರು, ರೊಟ್ಟಿ ಮತ್ತು ದ್ರಾಕ್ಷಿಮದ್ಯದ ಕೆಲವನ್ನು ರೋಗಿಗೆ ಕೊಂಡೊಯ್ಯಲು, ವಿಷಯದ ಮೇಲಿನ ತಕ್ಕದಾದ ಬೈಬಲ್‌ ವಚನಗಳನ್ನು ಚರ್ಚಿಸಲು ಮತ್ತು ಕುರುಹುಗಳನ್ನು ನೀಡಲು ತಮ್ಮಲ್ಲೊಬ್ಬರನ್ನು ಏರ್ಪಡಿಸುವರು. ಅವನ ಸ್ವಂತ ಸಭೆಯಿಂದ ಅಭಿಷಿಕ್ತ ಕ್ರೈಸ್ತನೊಬ್ಬನು ದೂರದಲ್ಲಿರುವುದಾದರೆ, ಆ ತಾರೀಕಿನಲ್ಲಿ ಎಲ್ಲಿರುತ್ತಾನೋ, ಆ ವಠಾರದಲ್ಲಿರುವ ಸಭೆಯೊಂದಕ್ಕೆ ಹೋಗುವಂತೆ ಅವನು ಏರ್ಪಡಿಸತಕ್ಕದ್ದು.

ಈ ನೋಟದೊಂದಿಗೆ, ಅರಣ್ಯಕಾಂಡ 9:10, 11 ರಲ್ಲಿರುವ ಆಜ್ಞೆಯ ಮತ್ತು 2 ಪೂರ್ವಕಾಲವೃತ್ತಾಂತ 30:1-3, 15 ರ ಉದಾಹರಣೆಯ ಹೊಂದಿಕೆಯಲ್ಲಿ, ಕೇವಲ ಅತಿ ಅಪವಾದಾತ್ಮಕವಾದ ಪರಿಸ್ಥಿತಿಗಳಲ್ಲಿ, ಅಭಿಷಿಕ್ತ ಕ್ರೈಸ್ತನೊಬ್ಬನು ಕರ್ತನ ಸಂಜಾಭೋಜನವನ್ನು 30 ದಿನಗಳ ನಂತರ (ಒಂದು ಚಾಂದ್ರಮಾನ ತಿಂಗಳು) ಆಚರಿಸುವನು.

ಪರದೈಸ ಭೂಮಿಯ ಮೇಲೆ ನಿತ್ಯ ಜೀವದ ನಿರೀಕ್ಷೆಯೊಂದಿಗಿನ ಯೇಸುವಿನ “ಬೇರೆ ಕುರಿ”ಗಳ ವರ್ಗದವರಾದರೋ, ರೊಟ್ಟಿ ಮತ್ತು ದ್ರಾಕ್ಷಿಮದ್ಯದಲ್ಲಿ ಪಾಲಿಗರಾಗುವ ಆಜ್ಞೆಯ ಕೆಳಗೆ ಇಲ್ಲ. (ಯೋಹಾನ 10:16) ವಾರ್ಷಿಕ ಆಚರಣೆಗೆ ಹಾಜರಾಗುವುದು ಪ್ರಾಮುಖ್ಯವಾಗಿ ಇದೆ, ಆದರೆ ಅವರು ಕುರುಹುಗಳಲ್ಲಿ ಪಾಲಿಗರಾಗುವುದಿಲ್ಲ. ಆದುದರಿಂದ ಅವರಲ್ಲಿ ಒಬ್ಬನು ಅಸ್ವಸ್ಥನಾದರೆ ಯಾ ಪ್ರಯಾಣಿಸುತ್ತಿರುವುದಾದರೆ ಮತ್ತು ಹೀಗೆ ಆ ಸಾಯಂಕಾಲ ಯಾವುದೇ ಒಂದು ಸಭೆಯೊಂದಿಗೆ ಇಲ್ಲದಿರುವುದಾದರೆ, ಅವನು ಯಾ ಅವಳು ತಕ್ಕದಾದ ಶಾಸ್ತ್ರವಚನಗಳನ್ನು (ಯೇಸುವು ಆಚರಣೆಯನ್ನು ಸ್ಥಾಪಿಸಿದ ದಾಖಲೆಯ ಸಹಿತ) ಸ್ವಂತವಾಗಿ ಓದಸಾಧ್ಯವಿದೆ ಮತ್ತು ಲೋಕವ್ಯಾಪಕ ಘಟನೆಯ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸಬಹುದು. ಆದರೆ ಈ ವಿದ್ಯಮಾನದಲ್ಲಿ ಒಂದು ತಿಂಗಳ ನಂತರ ಒಂದು ಕೂಟ ಯಾ ವಿಶೇಷ ಬೈಬಲಿನ ಚರ್ಚೆಯ ಅಧಿಕ ಯಾವುದೇ ಏರ್ಪಾಡನ್ನು ಮಾಡುವ ಅಗತ್ಯವೇನೂ ಇಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ