ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕಾರ್ಯ
    ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು
    • ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕಾರ್ಯ

      ಸಾಕ್ಷಿಯ ಕಾರ್ಯವು ನಡೆಸಲ್ಪಡುತ್ತಿರುವ ಇನ್ನೂರಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ, ಅದನ್ನು ನಿರ್ದೇಶಿಸಲು ಅನೇಕ ಸಂಬಂಧಕಗಳನ್ನು ಬಳಸಲಾಗಿದೆ. ನ್ಯೂ ಯಾರ್ಕಿನ ಬ್ರೂಕ್ಲಿನ್‌ನ ಲೋಕ ಕೇಂದ್ರಾಲಯದಲ್ಲಿರುವ ಆಡಳಿತ ಮಂಡಳಿಯಿಂದ ಸಮಗ್ರವಾದ ನಿರ್ದೇಶನವು ಬರುತ್ತದೆ. ಲೋಕಾದ್ಯಂತದ 15 ಯಾ ಹೆಚ್ಚಿನ “ವಲಯ (ಸೋನ್‌) ಗಳಿಗೆ”, ಪ್ರತಿ ವಲಯದಲ್ಲಿರುವ ಬ್ರಾಂಚ್‌ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡಿಸಲು, ಪ್ರತಿನಿಧಿಗಳನ್ನು ಆಡಳಿತ ಮಂಡಳಿಯು ಪ್ರತಿ ವರ್ಷ ಕಳುಹಿಸುತ್ತದೆ. ಬ್ರಾಂಚ್‌ ಆಫೀಸುಗಳಲ್ಲಿ ತಮ್ಮ ಅಧಿಕಾರವ್ಯಾಪ್ತಿಯೊಳಗಿರುವ ದೇಶಗಳಲ್ಲಿ ಕಾರ್ಯದ ಮೇಲ್ವಿಚಾರಣೆ ನಡಿಸಲು, ಮೂರರಿಂದ ಏಳರ ತನಕ ಸದಸ್ಯರುಗಳಿರುವ ಬ್ರಾಂಚ್‌ ಕಮಿಟಿಗಳಿರುತ್ತವೆ. ಬ್ರಾಂಚ್‌ಗಳಲ್ಲಿ ಅನೇಕವುಗಳಿಗೆ ಮುದ್ರಣದ ಸೌಕರ್ಯಗಳಿದ್ದು, ಕೆಲವು ಅತಿ ವೇಗದ ರೋಟರಿ ಪ್ರೆಸ್ಸುಗಳನ್ನು ಚಲಾಯಿಸುತ್ತವೆ. ಪ್ರತಿಯೊಂದು ಬ್ರಾಂಚ್‌ನಿಂದ ಉಸ್ತುವಾರಿನೋಡಿಕೊಳ್ಳಲ್ಪಡುವ ದೇಶ ಯಾ ಪ್ರದೇಶವನ್ನು ಡಿಸ್ಟ್ರಿಕ್ಟ್‌ಗಳನ್ನಾಗಿ, ಮತ್ತು ಡಿಸ್ಟ್ರಿಕ್ಟ್‌ಗಳನ್ನು ಪ್ರತಿಯಾಗಿ ಸರ್ಕಿಟುಗಳನ್ನಾಗಿ ವಿಭಾಜಿಸಲಾಗಿದೆ. ಪ್ರತಿ ಸರ್ಕಿಟಿನಲ್ಲಿ ಸುಮಾರು 20 ಸಭೆಗಳಿರುತ್ತವೆ. ಒಬ್ಬ ಡಿಸ್ಟ್ರಿಕ್ಟ್‌ಮೇಲ್ವಿಚಾರಕನು ಅವನ ಡಿಸ್ಟ್ರಿಕ್ಟ್‌ನಲ್ಲಿರುವ ಸರ್ಕಿಟುಗಳನ್ನು ಸರದಿಯಲ್ಲಿ ಸಂದರ್ಶಿಸುತ್ತಾನೆ. ಪ್ರತಿ ಸರ್ಕಿಟಿನಲ್ಲಿ ವಾರ್ಷಿಕವಾಗಿ ಎರಡು ಸಮ್ಮೇಳನಗಳು ನಡೆಯುತ್ತವೆ. ಅಲ್ಲಿಯೂ ಕೂಡ ಒಬ್ಬ ಸರ್ಕಿಟ್‌ ಮೇಲ್ವಿಚಾರಕನು ಇರುವನು, ಮತ್ತು ಅವನು ತನ್ನ ಸರ್ಕಿಟಿನಲ್ಲಿರುವ ಪ್ರತಿ ಸಭೆಯನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡಾವರ್ತಿ ಸಂದರ್ಶಿಸಿ, ಆ ಸಭೆಗೆ ನೇಮಕ ಮಾಡಿದ ಕಾರ್ಯಕ್ಷೇತ್ರದಲ್ಲಿ ಸಾರುವ ಕಾರ್ಯವನ್ನು ಸಂಸ್ಥಾಪಿಸಲು ಮತ್ತು ಮಾಡಲು ಸಾಕ್ಷಿಗಳಿಗೆ ನೆರವನ್ನೀಯುವನು.

      ಸ್ಥಳಿಕ ಸಭೆಯು ಅದರ ರಾಜ್ಯ ಸಭಾಗೃಹದೊಂದಿಗೆ ನಿಮ್ಮ ಸಮುದಾಯದಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ಇರುವ ಕೇಂದ್ರವಾಗಿರುತ್ತದೆ. ಪ್ರತಿ ಸಭೆಯ ಕೆಳಗಿರುವ ಪ್ರದೇಶವನ್ನು ಸಣ್ಣ ಟೆರಿಟೊರಿಗಳಾಗಿ ನಕ್ಷೆ ಮಾಡಲಾಗುತ್ತದೆ. ಅಲ್ಲಿನ ಪ್ರತಿಯೊಂದು ಮನೆಯಲ್ಲಿರುವ ವ್ಯಕ್ತಿಗಳಿಗೆ ಭೇಟಿಮಾಡಲು ಮತ್ತು ಅವರೊಂದಿಗೆ ಮಾತಾಡಲು ಪ್ರಯತ್ನಿಸುವ ವೈಯಕ್ತಿಕ ಸಾಕ್ಷಿಗಳಿಗೆ ಇವುಗಳ ನೇಮಕಾತಿ ಮಾಡಲಾಗುತ್ತದೆ. ಕೊಂಚವೇ ಮಂದಿಯಿಂದ ಸುಮಾರು 200 ರಷ್ಟು ಸಾಕ್ಷಿಗಳಿರುವ ಪ್ರತಿ ಸಭೆಯಲ್ಲಿ ವಿವಿಧ ಕರ್ತವ್ಯಗಳನ್ನು ನೋಡಿಕೊಳ್ಳಲು ಹಿರಿಯರು ನೇಮಿಸಲ್ಪಟ್ಟಿದ್ದಾರೆ. ಯೆಹೋವನ ಸಾಕ್ಷಿಗಳ ಸಂಸ್ಥೆಯಲ್ಲಿ ಸುವಾರ್ತೆಯ ವೈಯಕ್ತಿಕ ಘೋಷಕನು ಪ್ರಮುಖನು ಆಗಿದ್ದಾನೆ. ಸಾಕ್ಷಿಗಳಲ್ಲಿ ಪ್ರತಿಯೊಬ್ಬನು, ಅವನ ಸೇವೆಯನ್ನು ಲೋಕ ಕೇಂದ್ರಾಲಯದಲ್ಲಿ, ಶಾಖೆಗಳಲ್ಲಿ, ಯಾ ಸಭೆಗಳಲ್ಲಿ ಮಾಡುತ್ತಿರಲಿ, ದೇವರ ರಾಜ್ಯದ ಕುರಿತು ಇತರರಿಗೆ ವೈಯಕ್ತಿಕವಾಗಿ ಹೇಳುವ ಈ ಕ್ಷೇತ್ರ ಕಾರ್ಯವನ್ನು ಮಾಡುತ್ತಾನೆ.

      ಈ ಚಟುವಟಿಕೆಯ ವರದಿಗಳು ಕಟ್ಟಕಡೆಗೆ ಲೋಕ ಕೇಂದ್ರಾಲಯಕ್ಕೆ ತಲುಪುತ್ತವೆ, ಮತ್ತು ವಾರ್ಷಿಕವಾಗಿ ವರ್ಷಪುಸ್ತಕ ವೊಂದು ಸಂಕಲಿಸಲ್ಪಟ್ಟು, ಪ್ರಕಾಶಿಸಲ್ಪಡುತ್ತದೆ. ಪ್ರತಿ ವರ್ಷ ಜನವರಿ 1ರ ಕಾವಲಿನಬುರುಜು ಸಂಚಿಕೆಯಲ್ಲಿ ಒಂದು ತಖ್ತೆಯು ಕೂಡ ಪ್ರಕಟಿಸಲ್ಪಡುತ್ತದೆ. ಯೆಹೋವ ಮತ್ತು ಕ್ರಿಸ್ತ ಯೇಸುವಿನ ಅಧೀನದಲ್ಲಿರುವ ಆತನ ರಾಜ್ಯದ ಕುರಿತು ಸಾಕ್ಷಿ ನೀಡುವುದರಲ್ಲಿ ಪ್ರತಿ ವರ್ಷದ ಸಾಧನೆಗಳ ಸವಿವರವಾದ ವರದಿಯನ್ನು ಇವೆರಡು ಪ್ರಕಾಶನಗಳು ನೀಡುತ್ತವೆ. ಇಸವಿ 1994ರ ವರ್ಷಪುಸ್ತಕವು 1993 ರಲ್ಲಿ 1,18,65,765 ಮಂದಿ ಸಾಕ್ಷಿಗಳು ಮತ್ತು ಆಸಕ್ತ ವ್ಯಕ್ತಿಗಳು ಯೇಸುವಿನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಿದ್ದರು ಎಂದು ವರದಿಸಿದೆ. ಇಸವಿ 1993ರ ಸೇವಾ ವರುಷದಲ್ಲಿ, ಯೆಹೋವನ ಸಾಕ್ಷಿಗಳು ಸುವಾರ್ತೆಯನ್ನು ಘೋಷಿಸಲು 1,05,70,00,000 ಕ್ಕಿಂತಲೂ ಅಧಿಕ ತಾಸುಗಳನ್ನು ವ್ಯಯಿಸಿದರು ಮತ್ತು 2,96,004 ಮಂದಿ ಹೊಸಬರು ದೀಕ್ಷಾಸ್ನಾನ ಹೊಂದಿದರು. ಸಾಹಿತ್ಯಗಳ ಕೊಡಿಗೆಯ ಜುಮ್ಲಾವು ನೂರಾರು ಲಕ್ಷಗಟ್ಟಲೆ ಪ್ರತಿಗಳಾಗಿದ್ದವು.

  • ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು
    ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು
    • ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು

      ನಿರ್ದಿಷ್ಟ ಪ್ರಶ್ನೆಗಳು ಆಗಿಂದಾಗ್ಗೆ ಇತರವುಗಳಿಗಿಂತ ಹೆಚ್ಚಾಗಿ ಎದ್ದು ಬರುತ್ತವೆ. ಅವುಗಳಲ್ಲಿ ಕೆಲವು ಇಲ್ಲಿ ಪರಿಗಣಿಸಲ್ಪಟ್ಟಿವೆ.

      ದೇವರು ಪ್ರೀತಿಯಾಗಿದ್ದರೆ, ಅವನು ದುಷ್ಟತನವನ್ನು ಏಕೆರ ಅನುಮತಿಸುತ್ತಾನೆ?

      ದೇವರು ದುಷ್ಟತನಕ್ಕೆ ಅನುಮತಿಯನ್ನೀಯುತ್ತಾನೆ ನಿಜ, ಮತ್ತು ಭೂಮಿಯ ಮೇಲಿನ ಲಕ್ಷಾಂತರ ಮಂದಿ ಅದರ ಹವ್ಯಾಸವನ್ನು ಸ್ವೇಚ್ಛೆಯಿಂದ ಮಾಡುತ್ತಾರೆ. ಉದಾಹರಣೆಗೆ, ಅವರು ಯುದ್ಧಗಳನ್ನು ಘೋಷಿಸುತ್ತಾರೆ, ಮಕ್ಕಳ ಮೇಲೆ ಬಾಂಬ್‌ಗಳನ್ನು ಎಸೆಯುತ್ತಾರೆ, ಭೂಮಿಯನ್ನು ಸುಡುತ್ತಾರೆ, ಮತ್ತು ಕ್ಷಾಮಕ್ಕೆ ಕಾರಣರಾಗುತ್ತಾರೆ. ಲಕ್ಷಾಂತರ ಮಂದಿ ಧೂಮ್ರಪಾನ ಮಾಡುತ್ತಾರೆ ಮತ್ತು ಶ್ವಾಸಕೋಶದ ಕ್ಯಾನ್ಸರನ್ನು ಪಡೆಯುತ್ತಾರೆ, ವ್ಯಭಿಚಾರಗೈಯುತ್ತಾರೆ ಮತ್ತು ರತಿರೋಗಗಳನ್ನು ಪಡೆಯುತ್ತಾರೆ, ಅತಿರೇಕವಾಗಿ ಮದ್ಯಪಾನ ಮಾಡುತ್ತಾರೆ ಮತ್ತು ಯಕೃತ್ತಿನ ಸಿರೋಸಿಸ್‌ ಪಡೆಯುತ್ತಾರೆ, ಮತ್ತು ಹೀಗೆ ಮುಂದುವರಿಯುತ್ತಾ ಇದೆ. ಅಂತಹ ವ್ಯಕ್ತಿಗಳು ಎಲ್ಲಾ ದುಷ್ಟತನವು ನಿಲ್ಲಿಸಲ್ಪಡಬೇಕೆಂದು ನಿಜವಾಗಿಯೂ ಬಯಸುವುದಿಲ್ಲ. ಅದರ ಮೇಲಿನ ದಂಡನೆಗಳು ಮಾತ್ರವೇ ತೆಗೆಯಲ್ಪಡಬೇಕೆಂದು ಅವರು ಬಯಸುತ್ತಾರೆ. ಅವರೇನನ್ನು ಬಿತ್ತುತ್ತಾರೋ ಅದನ್ನವರು ಕೊಯ್ಯುವಾಗ, “ನನಗೆ ಯಾಕೆ?” ಎಂದು ಅವರು ಕೂಗುತ್ತಾರೆ, ಮತ್ತು ಅವರು ಜ್ಞಾನೋಕ್ತಿ 19:3 ರಲ್ಲಿ ಹೇಳಿದಂತೆ, ದೇವರನ್ನು ದೂಷಿಸುತ್ತಾರೆ: “ಒಬ್ಬ ಮನುಷ್ಯನ ಸ್ವಂತ ಮೂರ್ಖತನ ಆತನ ಜೀವವನ್ನು ಧ್ವಂಸಮಾಡುತ್ತದೆ, ಮತ್ತು ಆಗ ಆತನು ಕರ್ತನ ವಿರುದ್ಧ ಅಸೂಯೆಯಿಂದ ನಡೆದುಕೊಳ್ಳುತ್ತಾನೆ.” (ದಿ ನ್ಯೂ ಇಂಗ್ಲಿಷ್‌ ಬೈಬಲ್‌) ಮತ್ತು ದೇವರು ಅವರ ಕೆಟ್ಟತನವನ್ನು ನಿಲ್ಲಿಸಿದರೆ, ಅದನ್ನು ಮಾಡಿದ್ದರಿಂದ ತಮ್ಮ ಸ್ವಾತಂತ್ರ್ಯ ನಷ್ಟಗೊಂಡದ್ದಕ್ಕಾಗಿ ಅವರು ಪ್ರತಿಭಟಿಸುವರು!

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ