2001ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲೆ
1 ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಾವೆಲ್ಲರೂ ಸಾಧ್ಯವಾದಷ್ಟು ಪೂರ್ಣವಾಗಿ ಏಕೆ ಭಾಗವಹಿಸಬೇಕು ಎಂಬುದಕ್ಕೆ ಅನೇಕ ಶಾಸ್ತ್ರೀಯ ಕಾರಣಗಳಿವೆ.—ಜ್ಞಾನೋ. 15:23; ಮತ್ತಾ. 28:19, 20; ಅ. ಕೃ. 15:32; 1 ತಿಮೊ. 4:12, 13; 2 ತಿಮೊ. 2:2; 1 ಪೇತ್ರ 3:15.
2 ವಾರದ ಬೈಬಲ್ ವಾಚನಕ್ಕಾಗಿರುವ ಕಾರ್ಯಕ್ರಮವು ಬಹಳ ಸಮಯದಿಂದಲೂ ಶಾಲೆಯ ವೈಶಿಷ್ಟ್ಯವಾಗಿದೆ. ಇದು ಪ್ರತಿದಿನವೂ ಒಂದು ಪುಟವನ್ನು ಓದುವುದಕ್ಕೆ ಸರಿಸಮವಾಗಿರುತ್ತದೆ. ಈ ವರ್ಷದಿಂದ, ಪ್ರತಿ ಲಿಖಿತ ಪುನರ್ವಿಮರ್ಶೆಯ ವಾರಕ್ಕಾಗಿ ಬೈಬಲ್ ವಾಚನವನ್ನು ನೇಮಿಸಲಾಗಿದೆ. ಕಳೆದ ಮೂರು ವರ್ಷಗಳಿಗೆ ಶೆಡ್ಯೂಲ್ ಮಾಡಲ್ಪಟ್ಟ ಹೆಚ್ಚಿನ ಬೈಬಲ್ ವಾಚನವು ಮುಗಿದಿದೆ. ಆದರೆ, ನೀವು ಶೆಡ್ಯೂಲಿನಲ್ಲಿ ಕೊಟ್ಟಿರುವ ಭಾಗಕ್ಕಿಂತಲೂ ಹೆಚ್ಚಿನ ಭಾಗವನ್ನು ಓದಲು ಇಷ್ಟಪಡುವುದಾದರೆ, ನೀವು ನಿಮ್ಮ ಸ್ವಂತ ವಾಚನಾ ಶೆಡ್ಯೂಲನ್ನು ಮಾಡಿಕೊಳ್ಳಬಹುದು.
3 ನೇಮಕ ನಂ. 2, ಸಹೋದರರಿಗೆ ದೇವರ ವಾಕ್ಯದ ಕುರಿತಾಗಿ ‘ಪ್ರಸಂಗವನ್ನು’ ನೀಡಲು ತರಬೇತಿಯನ್ನು ನೀಡುತ್ತದೆ. (1 ತಿಮೊ. 4:13) ನಿಮಗೆ ಬೈಬಲ್ ಓದುವಿಕೆಯ ಭಾಗವಿರುವುದಾದರೆ, ಅದನ್ನು ಪುನಃ ಪುನಃ ಗಟ್ಟಿಸ್ವರದಲ್ಲಿ ಓದಿ ಅಭ್ಯಾಸಮಾಡಿಕೊಳ್ಳಿರಿ. ನಿಮ್ಮ ಉಚ್ಚಾರಣೆ, ಸ್ವರಭಾರದ ಏರಿಳಿತಗಳು ಹಾಗೂ ಚೆನ್ನಾಗಿ ಓದಲಿಕ್ಕಾಗಿ ಬೇಕಾದ ಇತರ ಅಂಶಗಳನ್ನು ಉತ್ತಮಗೊಳಿಸಲು ಸ್ಕೂಲ್ ಗೈಡ್ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಹಲವಾರು ಸಲಹೆಗಳನ್ನು ನೀವು ಉಪಯೋಗಿಸಸಾಧ್ಯವಿದೆ.
4 ನೇಮಕ ನಂ. 3 ಮತ್ತು ನಂ. 4 ಹಲವಾರು ಬ್ರೋಷರುಗಳು ಹಾಗೂ ಮಹಾನ್ ಪುರುಷ ಪುಸ್ತಕದ ಮೇಲಾಧಾರಿಸಿವೆ. ನಿಗದಿತ ಸಮಯದಲ್ಲಿ ಪರಿಗಣಿಸಬೇಕಾಗಿರುವುದಕ್ಕಿಂತಲೂ ಹೆಚ್ಚಿನ ವಿಷಯವು ನಿಮಗೆ ಕೊಡಲ್ಪಟ್ಟಿರುವಲ್ಲಿ, ನಿಮ್ಮ ಸಭೆಯ ಟೆರಿಟೊರಿಗೆ ಪ್ರಾಯೋಗಿಕವಾಗಿರುವಂತಹ ವಿಷಯವನ್ನು ಆರಿಸಿಕೊಂಡರೇ ಸಾಕು. ನಿಮ್ಮ ಟೆರಿಟೊರಿಗೆ ತಕ್ಕದ್ದಾಗಿರುವ ಸೆಟಿಂಗ್ ಅನ್ನು ಉಪಯೋಗಿಸಬಹುದು.
5 ಶಾಲೆಯಲ್ಲಿ ನಿಮಗೆ ನೀಡಲಾಗುವ ಎಲ್ಲ ನೇಮಕಗಳನ್ನು ಮಾಡಲು ಸಾಧ್ಯವಾದಷ್ಟು ಪ್ರಯತ್ನಪಡಿರಿ. ಚೆನ್ನಾಗಿ ತಯಾರಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ ಹಾಗೂ ಹೃದಯದಾಳದಿಂದ ಮಾತಾಡಿರಿ. ಆಗ ನೀವು ಸಭೆಗೆ ಉತ್ತೇಜನವನ್ನು ನೀಡುವವರಾಗಿರುವಿರಿ ಮತ್ತು ಇಸವಿ 2001ರ ಸಮಯದಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಹೃತ್ಪೂರ್ವಕದಿಂದ ಭಾಗವಹಿಸುವ ಮೂಲಕ ವೈಯಕ್ತಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳುವಿರಿ.