ಪೋರ್ಚುಗಲ್ನಲ್ಲಿ ಬೈಬಲ್ ಸತ್ಯವನ್ನು ಹಬ್ಬಿಸುವುದು
ಉತ್ತರದಲ್ಲಿರುವ ಕಾಮಿನ್ಯಾದಿಂದ ದಕ್ಷಿಣದ ವಿಲ ರಿಆಲ್ ಡ ಸಾಂಟೂ ಆಂಟಾನ್ಯೂದ ವರೆಗೆ, ಸಾವಿರಾರು ವರ್ಣರಂಜಿತ ಮೀನು ಹಿಡಿಯುವ ದೋಣಿಗಳು ಪೋರ್ಚುಗಲ್ನ ಅಟ್ಲಾಂಟಿಕ್ ತೀರದ 800 ಕಿಲೊಮೀಟರುಗಳಷ್ಟು ಕ್ಷೇತ್ರದಲ್ಲಿ, ಅಲ್ಲಲ್ಲಿ ಚುಕ್ಕೆಗಳಂತೆ ಹರಡಿರುತ್ತವೆ. ಮೀನನ್ನು ಅನೇಕ ಪೋರ್ಚುಗಲ್ಲಿನವರಿಗೆ ಪ್ರಧಾನ ಆಹಾರ ಸರಬರಾಯಿಯನ್ನಾಗಿ ಮಾಡುತ್ತಾ, ಬೆಸ್ತರು ಶತಮಾನಗಳ ಉದ್ದಕ್ಕೂ ‘ಹಡಗುಹತ್ತಿ ಸಮುದ್ರಪ್ರಯಾಣ ಮಾಡಿದ್ದಾರೆ.’—ಕೀರ್ತನೆ 107:23.
ಕಳೆದ 70 ವರ್ಷಗಳಿಂದ, ಇನ್ನೊಂದು ಬಗೆಯ ಮೀನು ಹಿಡಿಯುವಿಕೆ ಪೋರ್ಚುಗಲ್ನಲ್ಲಿ ನಡೆಯುತ್ತಿದೆ. ಯೆಹೋವನ ಸಾಕ್ಷಿಗಳು ಹತ್ತಾರು ಸಾವಿರ ಸಾಂಕೇತಿಕ ಮೀನುಗಳಿಗೆ ಸುವಾರ್ತೆಯನ್ನು ತರುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. (ಮತ್ತಾಯ 4:19) ಮೇ 1995ರಲ್ಲಿ, 44,650 ರಾಜ್ಯ ಪ್ರಚಾರಕರ ಉಚ್ಚಾಂಕವಿತ್ತು—ಸುಮಾರು 210 ನಿವಾಸಿಗಳಿಗೆ ಒಬ್ಬ ಸಾಕ್ಷಿಯ ಪ್ರಮಾಣ. ಕೆಲವು ಪಟ್ಟಣಗಳಲ್ಲಿ ಪ್ರಮಾಣವು ಇದರ ಅರ್ಧದಷ್ಟಿದೆ.
ಇಷ್ಟೊಂದು ಕೆಲಸಗಾರರೊಂದಿಗೆ, ಅನೇಕ ಕ್ಷೇತ್ರಗಳಲ್ಲಿ ಸಾಕ್ಷಿನೀಡುವ ಟೆರಿಟೊರಿಗಳು ಪ್ರತಿ ವಾರ ಆವರಿಸಲ್ಪಡುತ್ತವೆ. ಹೀಗೆ ಪೋರ್ಚುಗಲ್ಲಿನ ಸಾಕ್ಷಿಗಳು ತಮ್ಮ ಬೈಬಲ್ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಸಲುವಾಗಿ, ವಿಭಿನ್ನ ಪ್ರಸ್ತಾವಗಳನ್ನು ಉಪಯೋಗಿಸಲು ಬಹಳ ಉತ್ಸುಕರಾಗಿದ್ದಾರೆ. ಹೌದು, ಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ ಬೈಬಲ್ ಸತ್ಯವನ್ನು ತಿಳಿಯಪಡಿಸುವುದರ ಪ್ರಮುಖತೆಯನ್ನು ಅವರು ಗಣ್ಯಮಾಡುತ್ತಾರೆ.—1 ಕೊರಿಂಥ 9:20-23.
ಧಾರ್ಮಿಕ ಒಲವುಳ್ಳವರಿಗೆ ಸಹಾಯ ಮಾಡುವುದು
1991ರ ಒಂದು ಜನಗಣತಿಗನುಸಾರ, ಪೋರ್ಚುಗಲ್ನಲ್ಲಿರುವ ಪ್ರೌಢರಲ್ಲಿ 70 ಪ್ರತಿಶತ ಜನರು, ತಾವು ರೋಮನ್ ಕ್ಯಾತೊಲಿಕರೆಂದು ಹೇಳಿಕೊಳ್ಳುತ್ತಾರೆ. ಇದರ ಹೊರತೂ, ಜನರ ಮಧ್ಯದಲ್ಲಿ ಬೈಬಲಿನ ಜ್ಞಾನವು ಅತಿ ಕ್ಷೀಣ ಸ್ಥಿತಿಯಲ್ಲಿದೆ. ಜಾರ್ನಾಲ್ ಡ ನೊಟಿಸ್ಯಾಸ್ ಎಂಬ ವಾರ್ತಾಪತ್ರಿಕೆಯು ಗಮನಿಸಿದ್ದು: “ಇದು ಕ್ಯಾತೊಲಿಕ್ ಜಗತ್ತಿನ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದೆ: ಬೈಬಲಿನ ಅಜ್ಞಾನ!” ವಿಷಯವು ಹೀಗಿರುವುದು ಏಕೆ? ಎಸ್ಪ್ರೆಸೊ ಎಂಬ ಪೋರ್ಚುಗಲ್ನ ವಾರ್ತಾಪತ್ರಿಕೆಯು ಉತ್ತರವನ್ನು ಸೂಚಿಸುತ್ತದೆ. ಫಾಟಿಮದಲ್ಲಿ ನಡೆದ 500 ಪಾದ್ರಿಗಳ ಒಂದು ಕೂಟದ ಬಗ್ಗೆ ವರದಿಸುತ್ತಾ, ಪತ್ರಿಕೆಯು ಹೇಳುವುದು: “ಧರ್ಮಾಧ್ಯಕ್ಷನಿಗನುಸಾರ, ಪಾದ್ರಿಯು ತನ್ನನ್ನು ಅಂತ್ಯರಹಿತ ಚಟುವಟಿಕೆಗಳಿಂದ ವಿಮುಕ್ತಪಡಿಸಿಕೊಳ್ಳುವುದು ಆವಶ್ಯಕ, ಇದರಿಂದ ‘ಘೋಷಕ’ನೋಪಾದಿ ತನ್ನ ಸ್ಥಾನವನ್ನು ಅವನು ವ್ಯಾವರ್ತವಾಗಿ ಪುನಸ್ಸ್ಥಾಪಿಸಬಲ್ಲನು. . . . ಸುವಾರ್ತೆಯನ್ನು ಸಾರುವುದರಲ್ಲಿ ಪಾದ್ರಿಯು ಹೃತ್ಪೂರ್ವಕನಾಗಿದ್ದರೆ, ಬೇರೆ ಯಾವುದೇ ಚಟುವಟಿಕೆಗಳಿಗಾಗಿ ಅವನಿಗೆ ಸಮಯವಿರದು.”
ವ್ಯತಿರಿಕ್ತವಾಗಿ, ಪೋರ್ಚುಗಲ್ನಲ್ಲಿರುವ ಯೆಹೋವನ ಸಾಕ್ಷಿಗಳು ಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ ಬೈಬಲ್ ಸತ್ಯವನ್ನು ತಿಳಿಯಪಡಿಸುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಫಲಸ್ವರೂಪವಾಗಿ, ಅನೇಕ ಯಥಾರ್ಥ ಕ್ಯಾತೊಲಿಕರು ಬೈಬಲಿನ ಜ್ಞಾನವನ್ನು ಪಡೆಯುತ್ತಿದ್ದಾರೆ.
ಕಾರ್ಲೊಟ, ಒಬ್ಬ ಧರ್ಮನಿಷ್ಠ ಕ್ಯಾತೊಲಿಕಳೂ, ಒಂದು ಧಾರ್ಮಿಕ ವರ್ಗದಲ್ಲಿ ಯುವ ಜನರ ಗುಂಪಿನ ಸದಸ್ಯೆಯೂ ಆಗಿದ್ದಳು. ಆಂಟಾನ್ಯೂ ಎಂಬ ಒಬ್ಬ ಸಾಕ್ಷಿಯು ಕೆಲಸಮಾಡುತ್ತಿದ್ದ ಶಿಶುವಿಹಾರದಲ್ಲಿ ಆಕೆ ಒಬ್ಬ ಶಿಕ್ಷಕಿಯೂ ಆಗಿದ್ದಳು. ಒಬ್ಬ ಕ್ರಮದ ಪಯನೀಯರ್, ಅಥವಾ ಪೂರ್ಣ ಸಮಯದ ಶುಶ್ರೂಷಕನೋಪಾದಿ ಆಂಟಾನ್ಯೂ, ಮಧ್ಯಾಹ್ನದ ಊಟದ ಸಮಯದಲ್ಲಿ ತನ್ನ ಜೊತೆ ಕೆಲಸಗಾರರೊಂದಿಗೆ ಬೈಬಲಿನ ಕುರಿತು ಮಾತಾಡಲು ಯಾವಾಗಲೂ ಪ್ರಯತ್ನಿಸಿದನು. ಒಂದು ದಿನ ಕಾರ್ಲೊಟ, ನರಕಾಗ್ನಿಯಲ್ಲಿ ನಂಬಿಕೆ ಮತ್ತು ಮರಿಯಳ ಪಂಥದ ಕುರಿತು ಅವನನ್ನು ಕೇಳಿದಳು. ಈ ವಿಷಯಗಳ ಕುರಿತು ಬೈಬಲ್ ಕಲಿಸುವ ಸಂಗತಿಗಳನ್ನು ಆಂಟಾನ್ಯೂ ಆಕೆಗೆ ತೋರಿಸಿದನು ಮತ್ತು ಅದು ಅನೇಕ ಬೈಬಲ್ ಚರ್ಚೆಗಳ ಆರಂಭವಾಗಿತ್ತು. ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ತನ್ನ ಪ್ರಥಮ ಕೂಟವನ್ನು ಕಾರ್ಲೊಟ ಹಾಜರಾದಾಗ, ಆಕೆ ಬಹಳವಾಗಿ ಪ್ರಭಾವಿತಳಾದಳು. ಹಾಗಿದ್ದರೂ, ಆಕೆ ಯಾವ ಧಾರ್ಮಿಕ ವರ್ಗಕ್ಕೆ ಸೇರಿದ್ದಳೊ ಅದರ ಕೂಟಗಳೊಂದಿಗೆ ಈ ಕೂಟದ ಸಮಯಗಳು ಘರ್ಷಿಸಿದವು. ತಾನೊಂದು ನಿರ್ಧಾರವನ್ನು ಮಾಡಬೇಕಿತ್ತೆಂದು ಆಕೆ ಗ್ರಹಿಸಿದಳು. ಆಕೆ ಏನು ಮಾಡುವಳು?
ಯುವ ಜನರ ಇಡೀ ಗುಂಪನ್ನು ಕಾರ್ಲೊಟ ಒಟ್ಟುಗೂಡಿಸಿದಳು ಮತ್ತು ಆಕೆ ರಾಜೀನಾಮೆ ಕೊಡುತ್ತಿರುವುದರ ಕಾರಣವನ್ನು ಬೈಬಲಿನಿಂದ ವಿವರಿಸಿದಳು. ಬಹಳ ಲಕ್ಷ್ಯವಿಟ್ಟು ಆಲಿಸಿದ ಸ್ಟೆಲ ಎಂಬ ಒಬ್ಬ ಯುವತಿಯ ಹೊರತು, ಎಲ್ಲರು ಆಕೆಯ ನಿರ್ಧಾರವನ್ನು ಟೀಕಿಸಿದರು. ಕಾರ್ಲೊಟ ಆಕೆಯೊಂದಿಗೆ ತದನಂತರ ಮಾತಾಡಿದಾಗ, ಜೀವದ ಆರಂಭ ಮತ್ತು ಉದ್ದೇಶದ ಕುರಿತು ಅನೇಕ ಪ್ರಶ್ನೆಗಳನ್ನು ಸ್ಟೆಲ ಕೇಳಿದಳು. ಕಾರ್ಲೊಟ ಆಕೆಗೆ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ?a (ಇಂಗ್ಲಿಷ್) ಎಂಬ ಪುಸ್ತಕವನ್ನು ಕೊಟ್ಟು, ಆಕೆಯೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದಳು.
ಈ ಮಧ್ಯೆ ಕಾರ್ಲೊಟ ಉತ್ತಮ ಆತ್ಮಿಕ ಪ್ರಗತಿಯನ್ನು ಮಾಡಿದಳು, ಜೂನ್ 1991ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು ಮತ್ತು ಆರು ತಿಂಗಳುಗಳ ತರುವಾಯ ಒಬ್ಬ ಕ್ರಮದ ಪಯನೀಯರಳೋಪಾದಿ ಸೇವೆ ಸಲ್ಲಿಸತೊಡಗಿದಳು. ಅಗತ್ಯವು ಹೆಚ್ಚಾಗಿರುವ ಹತ್ತಿರದ ಒಂದು ಸಭೆಯಲ್ಲಿ ಒಟ್ಟಿಗೆ ಪಯನೀಯರ್ ಸೇವೆಯಲ್ಲಿ ಮುಂದುವರಿಯುತ್ತಾ, ಮೇ 1992ರಲ್ಲಿ, ಆಕೆ ಮತ್ತು ಆಂಟಾನ್ಯೂ ವಿವಾಹವಾದರು. ಮತ್ತು ಸ್ಟೆಲ? ಆಕೆ ಮೇ 1993ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು ಮತ್ತು ಈಗ ಒಬ್ಬ ಕ್ರಮದ ಪಯನೀಯರಳೋಪಾದಿ ಸೇವೆ ಸಲ್ಲಿಸುತ್ತಾಳೆ.
ಯುವ ಫ್ರ್ಯಾಂಸಿಷ್ಕೂ ಬಹಳ ಧರ್ಮನಿಷ್ಠನಾಗಿದ್ದನು. ಪ್ರತಿ ಆದಿತ್ಯವಾರ ಬೆಳಗ್ಗೆ ಅವನು ವ್ರತಾಚರಣೆಗೆ ಮತ್ತು ಮಧ್ಯಾಹ್ನದಲ್ಲಿ ಜಪಮಾಲೆಯ ಪಠನಕ್ಕೆ ಹಾಜರಾದನು. ವ್ರತಾಚರಣೆಯ ಸಮಯದಲ್ಲಿ ಪಾದ್ರಿಗೆ ಸಹಾಯ ಮಾಡುತ್ತಾ, ಅವನು ಪಾರುಪತ್ಯಗಾರನಾಗಿ ಸೇವೆ ಸಲ್ಲಿಸಿದನು. ಯಾವುದಾದರೊಂದು ದಿನ ಅವನೊಬ್ಬ “ಸಂತ”ನಾಗಿ ಮಾಡಲ್ಪಡುವಂತೆ ಸಹ ಅವನು ದೇವರಿಗೆ ಪ್ರಾರ್ಥಿಸಿದನು!
ಫ್ರ್ಯಾಂಸಿಷ್ಕೂ ನಿಜವಾಗಿಯೂ ಒಂದು ಬೈಬಲನ್ನು ಪಡೆಯಲು ಬಯಸಿದನು ಮತ್ತು ಒಂದು ದಿನ ಒಬ್ಬ ಮಿತ್ರನು ಅವನಿಗೊಂದು ಬೈಬಲನ್ನು ಕೊಟ್ಟನು. ದೇವರಿಗೆ ಯೆಹೋವ ಎಂಬ ಹೆಸರೊಂದಿದೆ ಎಂಬುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. (ವಿಮೋಚನಕಾಂಡ 6:3; ಕೀರ್ತನೆ 83:18) ಆರಾಧನೆಯಲ್ಲಿ ವಿಗ್ರಹಗಳ ಉಪಯೋಗವನ್ನು ದೇವರು ನಿಷೇಧಿಸುತ್ತಾನೆಂಬುದನ್ನು ಅವನು ವಿಮೋಚನಕಾಂಡ 20:4, 5ರಲ್ಲಿ ಓದಿದಾಗ, ಅವನಿನ್ನೂ ಅಧಿಕ ಆಶ್ಚರ್ಯಗೊಂಡನು! ಚರ್ಚು ವಿಗ್ರಹಗಳಿಂದ ತುಂಬಿರುವುದನ್ನು ನೋಡುತ್ತಾ, ಈ ಎಲ್ಲ ಗಲಿಬಿಲಿಯನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯ ಮಾಡುವಂತೆ ಅವನು ತೀವ್ರವಾಗಿ ದೇವರಿಗೆ ಪ್ರಾರ್ಥಿಸಿದನು. ಹಲವಾರು ದಿನಗಳ ನಂತರ, ಹಿಂದಿನ ಒಬ್ಬ ಶಾಲಾಸಂಗಾತಿಯನ್ನು ಅವನು ಭೇಟಿಯಾದನು ಮತ್ತು ಅವನು ರಾತ್ರಿ ಶಾಲೆಯನ್ನು ಏಕೆ ಬಿಟ್ಟಿದ್ದನೆಂದು ಕೇಳಿದನು.
“ಹೆಚ್ಚು ಉತ್ತಮವಾದ ರಾತ್ರಿ ಶಾಲೆಯನ್ನು ನಾನು ಈಗ ಹಾಜರಾಗುತ್ತಿದ್ದೇನೆ,” ಎಂದು ಅವನ ಮಿತ್ರನು ಉತ್ತರಿಸಿದನು.
“ಅದು ಯಾವ ಶಾಲೆ ಮತ್ತು ನೀನು ಏನ್ನನ್ನು ಅಭ್ಯಸಿಸುತ್ತಿರುವೆ?” ಎಂದು ಫ್ರ್ಯಾಂಸಿಷ್ಕೂ ಕೇಳಿದನು. ಮಿತ್ರನ ಉತ್ತರದಿಂದ ಅವನು ಸಂಪೂರ್ಣವಾಗಿ ಆಶ್ಚರ್ಯಚಕಿತನಾದನು.
“ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಾನು ಬೈಬಲನ್ನು ಅಭ್ಯಸಿಸುತ್ತಿರುವೆ,” ಎಂದು ಆ ಮಿತ್ರನು ಅವನಿಗೆ ಹೇಳಿದನು. “ನೀನು ಜೊತೆ ಬರಲು ಇಷ್ಟಪಡುವೆಯೊ?”
ಫ್ರ್ಯಾಂಸಿಷ್ಕೂ ತನ್ನ ಪ್ರಥಮ ಕೂಟದಲ್ಲಿ ಕಂಡದ್ದನ್ನು—ಆನಂದಿತ, ಮುಗುಳುನಗೆಯ ಮುಖಗಳು; ಆದರಣೀಯ, ಸ್ನೇಹಪರ ವಿಧದಲ್ಲಿ ಒಬ್ಬರೊಂದಿಗೊಬ್ಬರು ಮಾತಾಡುತ್ತಿರುವ ಜನರು; ತಮ್ಮ ಹೆತ್ತವರೊಂದಿಗೆ ಕುಳಿತುಕೊಂಡು, ಹೇಳಲಾಗುತ್ತಿರುವ ವಿಷಯಗಳಿಗೆ ಗಮನ ಕೊಡುತ್ತಿರುವ ಮಕ್ಕಳು—ಅವನಿಗೆ ನಂಬಲಾಗಲಿಲ್ಲ.
“ಇಲ್ಲಿ, ನಾನು ಒಬ್ಬ ಪೂರ್ಣ ಅಪರಿಚಿತನಾಗಿದ್ದರೂ, ನಾನು ಆ ಕುಟುಂಬದ ಭಾಗವೆಂದು ನನಗನಿಸಿತು!” ಎಂದು ಫ್ರ್ಯಾಂಸಿಷ್ಕೂ ಉದ್ಗರಿಸಿದನು. ಅಂದಿನಿಂದ ಅವನು ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಿದ್ದಾನೆ. ಈಗ ಫ್ರ್ಯಾಂಸಿಷ್ಕೂ ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆ ಸಲ್ಲಿಸುತ್ತಾನೆ ಮತ್ತು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ, ದೇವರ ವಾಕ್ಯದಲ್ಲಿರುವ ಮಹತ್ತರವಾದ ರಾಜ್ಯ ವಾಗ್ದಾನಗಳಲ್ಲಿ ಅವನು ಹರ್ಷಿಸುತ್ತಾನೆ.
ಸಂಬಂಧಿಕರೊಂದಿಗೆ ಸತ್ಯವನ್ನು ಹಂಚಿಕೊಳ್ಳುವುದು
ಲಿಸ್ಬನ್ ಕ್ಷೇತ್ರದಲ್ಲಿ ಒಬ್ಬ ಕ್ರಮದ ಪಯನೀಯರಳಾಗಿರುವ ಮನ್ವೆಲ, ಎಲ್ಲರಿಗೆ—ಸಂಬಂಧಿಕರನ್ನೂ ಸೇರಿಸಿ—ದಯಾಪರವಾಗಿ ಸಾಕ್ಷಿನೀಡುವುದರಲ್ಲಿನ ಆಕೆಯ ಪಟ್ಟುಹಿಡಿಯುವಿಕೆಯ ಕಾರಣ, ಆತ್ಮಿಕ ಮೀನಿನ ಒಂದು ಸಮೃದ್ಧವಾದ ಹಿಡಿತ ಆಕೆಗೆ ಸಿಕ್ಕಿದೆ. ಅವರಲ್ಲಿ, ಯುದ್ಧೋಚಿತ ಕಲೆಗಳಲ್ಲಿ ಮತ್ತು ಆಯುಧಗಳ ಬಳಕೆಯಲ್ಲಿ ತರಬೇತನ್ನು ಪಡೆದಿದ್ದ ಆಕೆಯ ಮಾಂಸಿಕ ಸಹೋದರ, ಸೂಸೆ ಈತ್ವಾರ್ಡೂ ಸೇರಿದ್ದನು. ಅವನು ಕಾನೂನನ್ನು ಎಷ್ಟೊಂದು ಬಾರಿ ಉಲ್ಲಂಘಿಸಿದ್ದನೆಂದರೆ, 22 ಆರೋಪಣೆಗಳ ಮೇಲೆ ಅವನು ಅಂತಿಮವಾಗಿ ವಿಚಾರಣೆಗೆ ತರಲ್ಪಟ್ಟನು ಮತ್ತು ಸೆರೆಮನೆಯಲ್ಲಿ 20 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಅವನು ಎಷ್ಟೊಂದು ಹಿಂಸಾತ್ಮಕನಾಗಿದ್ದನೆಂದರೆ, ಸೆರೆಮನೆಯ ಜೊತೆವಾಸಿಗಳೂ ಅವನಿಗೆ ಭಯಪಟ್ಟರು ಮತ್ತು ಅವನನ್ನು ಏಕಾಂತ ಬಂಧನದಲ್ಲಿಡಲಾಯಿತು.
ಏಳು ವರ್ಷಗಳ ವರೆಗೆ ಮನ್ವೆಲ ತಾಳ್ಮೆಯಿಂದ ಸೂಸೆ ಈತ್ವಾರ್ಡೂವನ್ನು ಸಂದರ್ಶಿಸಿದಳು, ಆದರೆ ಅವನು ಯಾವಾಗಲೂ ಆಕೆಯ ಬೈಬಲ್ ಸಂದೇಶವನ್ನು ತಿರಸ್ಕರಿಸಿದನು. ಅಂತಿಮವಾಗಿ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ? ಎಂಬ ಪುಸ್ತಕವು ಪ್ರಕಾಶಗೊಂಡಾಗ, ಅದನ್ನು ಅವನು ಸ್ವೀಕರಿಸಿದನು ಮತ್ತು ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು. ಕೂಡಲೇ ಅವನು ತನ್ನ ನಡತೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿದನು. ಒಂದು ವಾರದ ತರುವಾಯ ಅವನು 200 ಸೆರೆಯಾಳುಗಳಿಗೆ ಒಂದು ವೈಯಕ್ತಿಕ ಸಾಕ್ಷಿಯನ್ನು ನೀಡಿದನು, ಮತ್ತು ಮುಂದಿನ ವಾರ ಇನ್ನು 600 ಮಂದಿಗೆ. ಸೆರೆಮನೆಯ ಇತರ ಕಟ್ಟಡಗಳಲ್ಲಿದ್ದ ಸೆರೆಯಾಳುಗಳನ್ನು ಸಂದರ್ಶಿಸುವ ಅನುಮತಿಯನ್ನೂ ಅವನು ಪಡೆದನು. ತನ್ನ ವರ್ತನೆಯಲ್ಲಿ ಗಮನಾರ್ಹವಾದ ಬದಲಾವಣೆಯ ಕಾರಣ, ಶಿಕ್ಷೆಯು 15 ವರ್ಷಗಳಿಗೆ ಕಡಿಮೆಮಾಡಲ್ಪಟ್ಟಿತು. 10 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ, ಅವನನ್ನು ಪರೀಕ್ಷಾರ್ಥ ಬಂಧವಿಮೋಚನೆ ಮಾಡಲಾಯಿತು. ಅಂದಿನಿಂದ ಐದು ವರ್ಷಗಳು ಗತಿಸಿಹೋಗಿವೆ, ಮತ್ತು ಈಗ ಸೂಸೆ ಈತ್ವಾರ್ಡೂ ಸ್ಥಳಿಕ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆ ಮಾಡುತ್ತಾ, ಯೆಹೋವನ ದೀಕ್ಷಾಸ್ನಾನ ಪಡೆದ ಸಾಕ್ಷಿಯಾಗಿದ್ದಾನೆ. ನಿಜವಾಗಿಯೂ “ತೋಳವು ಕುರಿಯ ಸಂಗಡ ವಾಸಿಸುವ” ಒಂದು ಸಂಗತಿ!—ಯೆಶಾಯ 11:6.
ತನ್ನ ಕುಟುಂಬಕ್ಕೆ ಸಾಕ್ಷಿನೀಡುವುದರಲ್ಲಿನ ಆಕೆಯ ನಿರಂತರವಾದ ಪ್ರಯತ್ನದ ಕಾರಣ, ಯೆಹೋವನ ಸೇವೆಯಲ್ಲಿ ಸಕ್ರಿಯರಾಗಲು ಮನ್ವೆಲಳಿಗೆ ತನ್ನ ಗಂಡ ಹಾಗೂ ತನ್ನ ಕುಟುಂಬದ ಇತರ ನಾಲ್ಕು ಸದಸ್ಯರಿಗೆ ಸಹಾಯ ಮಾಡಿದ ಹರ್ಷವು ಸಿಕ್ಕಿಯದೆ. ಆಕೆಯ ಗಂಡ ಈಗ ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ.
“ಒಂದು ಒದೆ ಹಾಗೂ ಒಂದು ಹೊಡೆತದಿಂದ ನಾನು ಅವರನ್ನು ಹೊರದೂಡುವೆನು”
ಸಾಕ್ಷಿಗಳು ಆಕೆಯನ್ನು ಭೇಟಿಯಾದಾಗ, ಮಾರಿಯ ಡೂ ಕಾರ್ಮೊ ಒಂದು ಲಿಸ್ಬನ್ ಉಪನಗರದಲ್ಲಿ ಜೀವಿಸಿದಳು. ಕೇಳಿದ ವಿಷಯವನ್ನು ಆಕೆ ಇಷ್ಟಪಟ್ಟಳು ಮತ್ತು ಮನೆಯಲ್ಲಿ ಆಕೆ ಒಂದು ಬೈಬಲ್ ಅಧ್ಯಯನವನ್ನು ಹೊಂದಿರಸಾಧ್ಯವೊ ಎಂದು ಆಕೆಯ ಗಂಡ, ಆಂಟಾನ್ಯೂನನ್ನು ಕೇಳಿದಳು. “ಅದರ ಕುರಿತು ನೆನಸಲೂ ಬೇಡ!” ಎಂದು ಅವನು ಉತ್ತರಿಸಿದನು. “ಯೆಹೋವನ ಸಾಕ್ಷಿಗಳನ್ನು ನಾನು ಎಂದಾದರೂ ನಮ್ಮ ಮನೆಯಲ್ಲಿ ಕಂಡರೆ, ಒಂದು ಒದೆ ಹಾಗೂ ಒಂದು ಹೊಡೆತದಿಂದ ನಾನು ಅವರನ್ನು ಹೊರದೂಡುವೆನು.” ಪ್ರಾಸಂಗಿಕವಾಗಿ ಆಂಟಾನ್ಯೂ ಕರಾಟೆ ಶಿಕ್ಷಕನಾಗಿದ್ದನು ಮತ್ತು ಮೂರನೆಯ ದರ್ಜೆಯ ಕರಾಟೆ ನಿಪುಣನಾಗಿದ್ದನು. ಆದುದರಿಂದ ಮಾರಿಯ ಡೂ ಕಾರ್ಮೊ ತನ್ನ ಬೈಬಲ್ ಅಧ್ಯಯನವನ್ನು ಬೇರೆ ಕಡೆಯಲ್ಲಿ ಮುಂದುವರಿಸಲು ನಿರ್ಧರಿಸಿದಳು.
ತದನಂತರ, ಕರಾಟೆಯಲ್ಲಿ ಎಂಟು ದಿನದ ಕೋರ್ಸ್ಗಾಗಿ ಆಂಟಾನ್ಯೂ ಇಂಗ್ಲೆಂಡ್ಗೆ ಹೋಗಬೇಕಿತ್ತು ಮತ್ತು ಮಾರಿಯ ಡೂ ಕಾರ್ಮೊ ಅವನ ಕೈಪೆಟ್ಟಿಗೆಯಲ್ಲಿ ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್) ಎಂಬ ಪ್ರಕಾಶನವನ್ನು ಜಾಗರೂಕವಾಗಿ ಸೇರಿಸಿದಳು.b ತನ್ನ ಸಂಚಾರದಲ್ಲಿ ಆಂಟಾನ್ಯೂಗೆ ಬಹಳ ಸಮಯವಿದ್ದ ಕಾರಣ, ಅವನು ಪುಸ್ತಕವನ್ನು ಓದಿದನು. ಮನೆಗೆ ಹಿಂದಿರುಗುವ ವಿಮಾನಯಾನದಲ್ಲಿ, ಬಿರುಗಾಳಿಯು ವಿಮಾನವನ್ನು ಜೋರಾಗಿ ಅಲುಗಾಡಿಸಿತು ಮತ್ತು ನೆಲ ಮುಟ್ಟುವುದು ಅದಕ್ಕೆ ಕಷ್ಟಕರವಾಗಿತ್ತು. ತನ್ನ ಜೀವಿತದಲ್ಲಿ ಮೊದಲ ಬಾರಿ, ಆಂಟಾನ್ಯೂ ಯೆಹೋವನಿಗೆ ಪ್ರಾರ್ಥಿಸಿದನು.
ಆಂಟಾನ್ಯೂ ಮನೆಗೆ ಹಿಂದಿರುಗಿದಾಗ, ತನ್ನ ಹೆಂಡತಿಯೊಂದಿಗೆ ಅಧ್ಯಯನವನ್ನು ನಡೆಸಿದ ಸಾಕ್ಷಿಯು ಅವನನ್ನು ಕೂಟಕ್ಕೆ ಆಮಂತ್ರಿಸಿದಳು. ಅವನು ಸ್ವೀಕರಿಸಿದನು ಮತ್ತು ಎಲ್ಲರು ಬಹಳ ಸ್ನೇಹಪರರಾಗಿರುವುದನ್ನು ಕಂಡುಕೊಂಡನು. ಒಂದು ಬೈಬಲ್ ಅಧ್ಯಯನಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು ಮತ್ತು ಸ್ವಲ್ಪ ಸಮಯದಲ್ಲೇ, ತಾನು ಕೆಲವು ನಿರ್ಧಾರಗಳನ್ನು ಮಾಡಬೇಕಿತ್ತೆಂದು ಆಂಟಾನ್ಯೂಗೆ ಗೊತ್ತಿತ್ತು. ಪರಿಣಾಮವು ಏನಾಗಿತ್ತೆಂದರೆ, ಅವನು ಕರಾಟೆ ಕಲಿಸುವುದನ್ನು ನಿಲ್ಲಿಸಿದನು ಮತ್ತು ಈಗ ಹಾಗೂ ಎಂದೆಂದಿಗೂ ಶಾಂತಿಭರಿತ ಜೀವಿತಗಳನ್ನು ಹೇಗೆ ಜೀವಿಸುವುದೆಂದು ತನ್ನ ವಿದ್ಯಾರ್ಥಿಗಳಿಗೆ ಕಲಿಸಲಾರಂಭಿಸಿದನು. ಅವರಲ್ಲಿ ಒಬ್ಬನು—ಕರಾಟೆ ನಿಪುಣನೂ ಹೌದು—ಈಗ ದೀಕ್ಷಾಸ್ನಾನ ಪಡೆದ ಕ್ರೈಸ್ತನು.
ಆಂಟಾನ್ಯೂವಿನ ವಿಷಯದಲ್ಲಾದರೊ ಅವನು ಎಪ್ರಿಲ್ 1991ರಲ್ಲಿ ದೀಕ್ಷಾಸ್ನಾನ ಪಡೆದನು. ತನ್ನ ದೀಕ್ಷಾಸ್ನಾನದ ಮರುದಿನ, ಅವನೊಬ್ಬ ಆಕ್ಸಿಲಿಯರಿ ಪಯನೀಯರನೋಪಾದಿ ಸೇವೆ ಸಲ್ಲಿಸಲಾರಂಭಿಸಿದನು. ಆರು ತಿಂಗಳುಗಳ ತರುವಾಯ ಅವನೊಬ್ಬ ಕ್ರಮದ ಪಯನೀಯರನಾಗಿ ಸೇವೆಸಲ್ಲಿಸಲಾರಂಭಿಸಿದನು ಮತ್ತು ಬೇಗನೆ ಅವನು 12 ಮನೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದನು. ಜುಲೈ 1993ರಲ್ಲಿ ಅವನು ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ನೇಮಿಸಲ್ಪಟ್ಟನು.
ಪದೇ ಪದೇ ಕೆಲಸಮಾಡಲ್ಪಟ್ಟ ಟೆರಿಟೊರಿಯಲ್ಲಿ
ದೇಶದ ಅನೇಕ ಕ್ಷೇತ್ರಗಳಲ್ಲಿ, ಟೆರಿಟೊರಿಯು ಪ್ರತಿವಾರ ಕೆಲಸಮಾಡಲ್ಪಡುತ್ತದೆ. ತಮ್ಮ “ಮೀನು ಹಿಡಿಯುವ” ಚಟುವಟಿಕೆಗಳನ್ನು ಸಾಕ್ಷಿಗಳು ಉತ್ಪನ್ನಕಾರಕವಾಗಿ ಹೇಗೆ ನಡೆಸುತ್ತಾರೆ?
ಸ್ವಾವು ಪ್ರತಿಯೊಂದು ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಒಬ್ಬಾಕೆ ಸ್ತ್ರೀಯನ್ನು ಸಂದರ್ಶಿಸುವಾಗ, ಮನೆಯಲ್ಲಿ ಇತರರು ಜೀವಿಸುತ್ತಿದ್ದರೊ ಎಂದು ಅವನು ಕೇಳಿದನು. ತನ್ನ ಗಂಡ ಮತ್ತು ಇಬ್ಬರು ಗಂಡುಮಕ್ಕಳು ಅಲ್ಲಿ ಜೀವಿಸಿದರೆಂದೂ, ಆದರೆ ಅವರು ಕೆಲಸಮಾಡುತ್ತಿದ್ದ ಕಾರಣ, ಸಂಜೆ ಮಾತ್ರ ಮನೆಗೆ ಹಿಂದಿರುಗುವುದರಿಂದ ಅವರನ್ನು ಸಂಪರ್ಕಿಸುವುದು ಸುಲಭವಾಗಿರದೆಂದೂ ಆ ಸ್ತ್ರೀ ಉತ್ತರಿಸಿದಳು. ಆದುದರಿಂದ ಸ್ವಾವು ಸಾಕ್ಷಿಕಾರ್ಯವನ್ನು ಮುಂದುವರಿಸಿ, ಆ ಕ್ಷೇತ್ರದಲ್ಲಿದ್ದ ಇತರರನ್ನು ಸಂದರ್ಶಿಸಿದನು. ಸುಮಾರು ಒಂದುವರೆ ತಾಸಿನ ತರುವಾಯ, ಒಬ್ಬ ಮನುಷ್ಯನು ಅವನನ್ನು ಸಮೀಪಿಸಿದನು.
“ನನ್ನೊಂದಿಗೆ ನೀವು ಮಾತಾಡಬಯಸಿದಿರೆಂದು ನೀವು ಹೇಳಿದಿರಿ,” ಎಂಬುದಾಗಿ ಆ ಮನುಷ್ಯನು ಸ್ವಾವುಗೆ ಹೇಳಿದನು. “ನಿಮಗೆ ಏನು ಬೇಕೆಂದು ದಯಮಾಡಿ ನನಗೆ ಹೇಳಿರಿ.”
“ಆದರೆ, ನನ್ನನ್ನು ಕ್ಷಮಿಸಿರಿ, ನಿಮ್ಮ ಪರಿಚಯ ನನಗಿಲ್ಲ,” ಎಂದು ಸ್ವಾವು ಆಶ್ಚರ್ಯಚಕಿತನಾಗಿ ಉತ್ತರಿಸಿದನು. “ನೀವು ಯಾರು?”
“ನಾನು ಆಂಟಾನ್ಯೂ, ಮತ್ತು ಈ ರಸ್ತೆಯಲ್ಲೇ ನಾನು ಜೀವಿಸುತ್ತೇನೆ. ಕುಟುಂಬದ ಇತರ ಸದಸ್ಯರೊಂದಿಗೆ ನೀವು ಮಾತಾಡಬಯಸುತ್ತೀರೆಂದು ನನ್ನ ತಾಯಿಗೆ ನೀವು ಹೇಳಿದಿರಿ, ಆದುದರಿಂದಲೇ ನಿಮಗೇನು ಬೇಕೆಂದು ಕಂಡುಹಿಡಿಯಲು ನಾನು ಬಂದಿರುವೆ.”
ಸ್ವಾವು ಆಂಟಾನ್ಯೂಗೆ ಸಂಪೂರ್ಣವಾದ ಸಾಕ್ಷಿಯನ್ನು ನೀಡಿದನು ಮತ್ತು ಅವನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದನು. ಎರಡನೆಯ ಅಧ್ಯಯನದ ನಂತರ, ಅಧ್ಯಯನವನ್ನು ವಾರಕ್ಕೆ ಎರಡು ಬಾರಿ ನಡೆಸಲು ಸಾಧ್ಯವೊ ಎಂದು ಆಂಟಾನ್ಯೂ ಕೇಳಿದನು. ಕೇವಲ ನಾಲ್ಕು ತಿಂಗಳುಗಳಲ್ಲಿ ಅವನು ಸ್ವಾವುವನ್ನು ಸೇರಿ ತನ್ನ ಸ್ವಂತ ರಸ್ತೆಯಲ್ಲಿ ಸುವಾರ್ತೆಯನ್ನು ಸಾರತೊಡಗಿದನು. ಮೂರು ತಿಂಗಳುಗಳ ತರುವಾಯ ಅವನು ದೀಕ್ಷಾಸ್ನಾನ ಪಡೆದನು. ಇತ್ತೀಚೆಗೆ ಅವನ ತಾಯಿಯೂ ಬೈಬಲನ್ನು ಅಭ್ಯಸಿಸತೊಡಗಿದಳು. ಶುಶ್ರೂಷೆಯಲ್ಲಿ ಮನೆವಾರ್ತೆಯ ಎಲ್ಲ ಸದಸ್ಯರೊಂದಿಗೆ ಮಾತಾಡಲು ಪ್ರಯತ್ನಿಸುವುದು ಎಷ್ಟು ಪ್ರಾಮುಖ್ಯವಾದದ್ದು!
ಪೋರ್ಚುಗಲ್ನ ನೀರುಗಳಲ್ಲಿ ಬಹಳಷ್ಟು ಆತ್ಮಿಕ ಮೀನು ಹಿಡಿಯುವಿಕೆಯು ಇನ್ನೂ ಮಾಡಲಿಕ್ಕಿದೆ ಎಂಬುದನ್ನು ಇಂತಹ ಉತ್ತೇಜನಕಾರಿ ಅನುಭವಗಳು ತೋರಿಸುತ್ತವೆ. ಸಾವಿರಾರು ಪ್ರಗತಿಪರ ಬೈಬಲ್ ಅಧ್ಯಯನಗಳಿಂದ ಯೆಹೋವನು ಕಷ್ಟಪಟ್ಟು ಕೆಲಸಮಾಡುವ ಆ ಸಾಕ್ಷಿಗಳನ್ನು ಆಶೀರ್ವದಿಸಿದ್ದಾನೆ. ಬೈಬಲ್ ಸತ್ಯವನ್ನು ಎಲ್ಲರಿಗೆ ತಿಳಿಯಪಡಿಸಲು ಅವರು ಅನೇಕಾನೇಕ ಮಾರ್ಗಗಳನ್ನು ಕಂಡುಹಿಡಿಯಲು ಮುಂದುವರಿದಂತೆ, ಫಿಲಿಪ್ಪಿ ನಗರದಲ್ಲಿದ್ದ ಕ್ರೈಸ್ತರಿಗೆ ಬರೆದ ಅಪೊಸ್ತಲ ಪೌಲನ ಮಾತುಗಳು ನಿಜವಾಗಿಯೂ ಇಂದು ಪೋರ್ಚುಗಲ್ನಲ್ಲಿ ನೆರವೇರುತ್ತಿವೆ: “ಯಾವ ರೀತಿಯಿಂದಾದರೂ . . . ಕ್ರಿಸ್ತನನ್ನು ಪ್ರಸಿದ್ಧಿಪಡಿಸುವದುಂಟು.”—ಫಿಲಿಪ್ಪಿ 1:18.
[ಅಧ್ಯಯನ ಪ್ರಶ್ನೆಗಳು]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
b ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 23ರಲ್ಲಿರುವಚಿತ್ರ]
(For fully formatted text, see publication)
ಸ್ಪೆಯ್ನ್
ಪೋರ್ಚುಗಲ್
[ಪುಟ 24,25 ರಲ್ಲಿರುವಚಿತ್ರ]
ಬೈಬಲ್ ಸತ್ಯವನ್ನು ತಿಳಿಯಪಡಿಸಲು, ಪೋರ್ಚುಗಲ್ನಲ್ಲಿರುವ ಸಾಕ್ಷಿಗಳು ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸುತ್ತಾರೆ