ಎಚ್ಚರಿಕೆಯಿಂದಿರಿ! ಬ್ರೋಷರನ್ನು ಅಧ್ಯಯನಮಾಡುವುದು
ಲೋಕವ್ಯಾಪಕವಾಗಿರುವ ಸಭೆಗಳು, 2005ರ ಮೇ 23ರಿಂದ ಜೂನ್ 20ರ ವರೆಗಿನ ವಾರಗಳಲ್ಲಿ ತಮ್ಮ ಸಭಾ ಪುಸ್ತಕ ಅಧ್ಯಯನದಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಅಧ್ಯಯನಮಾಡಲಿವೆ. ಈ ಅಧ್ಯಯನಕ್ಕಾಗಿ ತಯಾರಿಸುವಾಗ ಮತ್ತು ಈ ಕೂಟವನ್ನು ನಡೆಸುವಾಗ ಈ ಕೆಳಗೆ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಅಧ್ಯಯನದ ಸಮಯದಲ್ಲಿ, ಮುದ್ರಿತ ವಿಷಯಭಾಗವನ್ನು ಓದಿರಿ ಮತ್ತು ಸಮಯವು ಅನುಮತಿಸುವುದಾದರೆ ಸೂಚಿಸಲ್ಪಟ್ಟಿರುವ ವಚನಗಳನ್ನೂ ಓದಿರಿ.
ಮೇ 23ರಂದು ಆರಂಭವಾಗುವ ವಾರ
◼ ಪುಟ 3-4: ಇಲ್ಲಿ ತಿಳಿಸಲ್ಪಟ್ಟಿರುವ ಯಾವ ಪರಿಸ್ಥಿತಿಗಳು ಮುಖ್ಯವಾಗಿ ನಿಮ್ಮ ಜೀವನವನ್ನು ಬಾಧಿಸಿವೆ? ಇವು ಅಪರೂಪದ ಘಟನೆಗಳಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?
◼ ಪುಟ 5: ದೇವರು ನಿಜವಾಗಿಯೂ ನಮ್ಮ ಕುರಿತು ಕಾಳಜಿ ವಹಿಸುತ್ತಾನೆ ಎಂಬುದನ್ನು ಯಾವ ವಿಷಯವು ನಿಮಗೆ ಖಚಿತಪಡಿಸುತ್ತದೆ? ದೇವರ ಬಗ್ಗೆ ಮತ್ತು ಆತನು ಏನು ಮಾಡುತ್ತಾನೊ ಅದರ ಬಗ್ಗೆ ನಾವೆಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತೇವೆ ಎಂಬುದನ್ನು ಯಾವುದು ತೋರಿಸಿಕೊಡುತ್ತದೆ?
◼ ಪುಟ 6-8: ಸದ್ಯದ ಲೋಕ ಪರಿಸ್ಥಿತಿಗಳ ಅರ್ಥದ ಕುರಿತು ಮತ್ತಾಯ 24:1-8, 14 ಏನನ್ನು ತಿಳಿಸುತ್ತದೆ? 2 ತಿಮೊಥೆಯ 3:1-5ರಲ್ಲಿ ತಿಳಿಸಲ್ಪಟ್ಟಿರುವಂತೆ ನಾವೀಗ ಯಾವ ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆ? ಯಾವುದಕ್ಕೆ ಇವು ಕಡೇ ದಿವಸಗಳಾಗಿವೆ? ಬೈಬಲು ನಿಜವಾಗಿಯೂ ದೇವರ ವಾಕ್ಯವಾಗಿದೆ ಎಂಬುದನ್ನು ನಿಮಗೆ ಯಾವುದು ಖಾತ್ರಿಪಡಿಸುತ್ತದೆ? ನಾವು ಸಾರುತ್ತಿರುವ ದೇವರ ರಾಜ್ಯವು ಏನಾಗಿದೆ?
◼ ಪುಟ 9-10: ನಮ್ಮ ದೈನಂದಿನ ನಿರ್ಣಯಗಳನ್ನು ಮತ್ತು ಜೀವಿತದಲ್ಲಿನ ನಮ್ಮ ಆದ್ಯತೆಗಳನ್ನು ನಾವು ಏಕೆ ಜಾಗರೂಕತೆಯಿಂದ ಪರಿಗಣಿಸಬೇಕು? (ರೋಮಾ. 2:6; ಗಲಾ. 6:7) ಪುಟ 10ರಲ್ಲಿರುವ ಪ್ರಶ್ನೆಗಳನ್ನು ಪರಿಗಣಿಸುವಾಗ, ನೀವು ಮಾಡುವ ಕೆಲಸಗಳನ್ನು ಪ್ರಭಾವಿಸಬೇಕಾದ ಯಾವ ಶಾಸ್ತ್ರವಚನಗಳು ನಿಮ್ಮ ಮನಸ್ಸಿಗೆ ಬರುತ್ತವೆ?
ಮೇ 30ರಂದು ಆರಂಭವಾಗುವ ವಾರ
◼ ಪುಟ 11: ಈ ಪುಟದಲ್ಲಿ ಕೇಳಲ್ಪಟ್ಟಿರುವ ಪ್ರಶ್ನೆಗಳನ್ನು ನಾವು ವೈಯಕ್ತಿಕವಾಗಿ ಏಕೆ ಪರಿಗಣಿಸಬೇಕು? (1 ಕೊರಿಂ. 10:12; ಎಫೆ. 6:10-18) ಮತ್ತಾಯ 24:44ರಲ್ಲಿರುವ ಯೇಸುವಿನ ಸಲಹೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೊ ಇಲ್ಲವೊ ಎಂಬುದರ ಕುರಿತು ಈ ಪ್ರಶ್ನೆಗಳಿಗಾಗಿನ ನಮ್ಮ ಉತ್ತರವು ಏನನ್ನು ಪ್ರಕಟಪಡಿಸುತ್ತದೆ?
◼ ಪುಟ 12-14: ಪ್ರಕಟನೆ 14:6, 7ರಲ್ಲಿ ಸೂಚಿಸಲ್ಪಟ್ಟಿರುವ ‘ನ್ಯಾಯತೀರ್ಪಿನ ಗಳಿಗೆಯು’ ಏನಾಗಿದೆ? ‘ದೇವರಿಗೆ ಭಯಪಟ್ಟು ಆತನನ್ನು ಘನಪಡಿಸುವುದರ’ ಅರ್ಥವೇನು? ಮಹಾ ಬಾಬೆಲ್ ಏನಾಗಿದೆ, ಮತ್ತು ಅದಕ್ಕೇನು ಸಂಭವಿಸಲಿದೆ? ಮಹಾ ಬಾಬೆಲಿನ ವಿಷಯದಲ್ಲಿ ನಾವು ಈಗ ಯಾವ ಕ್ರಿಯೆಯನ್ನು ಕೈಗೊಳ್ಳುವ ಅಗತ್ಯವಿದೆ? ಮುಂತಿಳಿಸಲ್ಪಟ್ಟಿರುವ ನ್ಯಾಯತೀರ್ಪಿನ ಗಳಿಗೆಯಲ್ಲಿ ಬೇರೆ ಏನು ಒಳಗೂಡಿದೆ? ದೇವರು ಮುಂತಿಳಿಸಿರುವ ನ್ಯಾಯತೀರ್ಪಿನ “ದಿನವಾದರೂ ಗಳಿಗೆಯಾದರೂ” ನಮಗೆ ಗೊತ್ತಿಲ್ಲದಿರುವುದು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ? (ಮತ್ತಾ. 25:13)
◼ ಪುಟ 15: ಪರಮಾಧಿಕಾರದ ವಿವಾದಾಂಶ ಏನಾಗಿದೆ, ಮತ್ತು ಇದು ವೈಯಕ್ತಿಕವಾಗಿ ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?
◼ ಪುಟ 16-19: “ನೂತನಾಕಾಶಮಂಡಲ” ಮತ್ತು “ನೂತನಭೂಮಂಡಲ” ಏನಾಗಿದೆ? (2 ಪೇತ್ರ 3:13) ಈ ವಿಷಯಗಳನ್ನು ಯಾರು ವಾಗ್ದಾನಿಸಿರುವುದು? ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು ಯಾವ ಬದಲಾವಣೆಯನ್ನು ತರಲಿದೆ? ಇದರಿಂದಾಗಿ ನಾವು ವೈಯಕ್ತಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳುವೆವೊ?
ಜೂನ್ 6ರಂದು ಆರಂಭವಾಗುವ ವಾರ
◼ ಪುಟ 20-1: ಯೇಸು ತನ್ನ ಪ್ರಥಮ ಶತಮಾನದ ಹಿಂಬಾಲಕರಿಗೆ ಪಲಾಯನಗೈಯುವುದರ ಕುರಿತಾದ ಯಾವ ಎಚ್ಚರಿಕೆಯನ್ನು ನೀಡಿದನು? (ಲೂಕ 21:20, 21) ಯಾವಾಗ ಪಲಾಯನಗೈಯಲು ಸಾಧ್ಯವಿತ್ತು? ಯಾವುದೇ ತಡಮಾಡದೆ ಪಲಾಯನಗೈಯುವುದು ಏಕೆ ತುರ್ತಿನದ್ದಾಗಿತ್ತು? (ಮತ್ತಾ. 24:16-18, 21) ಏಕೆ ಅನೇಕ ಜನರು ಎಚ್ಚರಿಕೆಯನ್ನು ಅಲಕ್ಷ್ಯಮಾಡುತ್ತಾರೆ? ಚೀನಾ ಮತ್ತು ಫಿಲಿಪ್ಪೀನ್ಸ್ನ ಸಾವಿರಾರು ಜನರು ನೀಡಲ್ಪಟ್ಟ ಭರವಸಾರ್ಹ ಎಚ್ಚರಿಕೆಗಳಿಗೆ ಗಮನ ಕೊಟ್ಟದ್ದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಂಡರು? ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಬೈಬಲ್ ನೀಡುವ ಎಚ್ಚರಿಕೆಗೆ ಗಮನ ಕೊಡುವುದು ಏಕೆ ಇನ್ನಷ್ಟು ಹೆಚ್ಚು ತುರ್ತಿನದ್ದಾಗಿದೆ? ಬಹಳಷ್ಟು ತುರ್ತಿನ ಈ ಸಂಗತಿಯನ್ನು ಗಮನದಲ್ಲಿಟ್ಟಿರುವ ನಮಗೆ ಯಾವ ಜವಾಬ್ದಾರಿಯಿದೆ? (ಜ್ಞಾನೋ. 24:11, 12)
◼ ಪುಟ 22-3: ಇಸವಿ 1974ರಲ್ಲಿ ಆಸ್ಟ್ರೇಲಿಯದಲ್ಲಿ ಮತ್ತು 1985ರಲ್ಲಿ ಕೊಲಂಬಿಯದಲ್ಲಿ, ವಿಪತ್ತಿನ ಕುರಿತಾದ ಎಚ್ಚರಿಕೆಗಳನ್ನು ಅನೇಕ ಜನರು ಏಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಮತ್ತು ಇದರ ಪರಿಣಾಮವೇನಾಯಿತು? ಈ ಎಚ್ಚರಿಕೆಗಳಿಗೆ ನೀವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೀರೆಂದು ನೀವು ಭಾವಿಸುತ್ತೀರಿ, ಮತ್ತು ಏಕೆ? ನೋಹನ ದಿನದಲ್ಲಿನ ಎಚ್ಚರಿಕೆಗೆ ನಾವು ಲಕ್ಷ್ಯಕೊಡುತ್ತಿದ್ದೆವು ಎಂಬುದನ್ನು ಯಾವುದು ಸೂಚಿಸಬಹುದು? ಪುರಾತನ ಸೊದೋಮಿನ ಸುತ್ತಮುತ್ತಲು ಜನರು ಜೀವಿಸಲು ಏಕೆ ಇಷ್ಟಪಟ್ಟರು? ಸೊದೋಮಿನಲ್ಲಿ ಏನು ಸಂಭವಿಸಿತೋ ಆ ಕುರಿತು ಗಂಭೀರವಾಗಿ ಆಲೋಚಿಸುವುದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯಬಲ್ಲೆವು?
ಜೂನ್ 13ರಂದ ಆರಂಭವಾಗುವ ವಾರ
◼ ಪುಟ 24-7: ಪುಟ 27ರಲ್ಲಿರುವ “ಅಧ್ಯಯನದ ಪ್ರಶ್ನೆಗಳು” ಎಂಬ ಚೌಕದಲ್ಲಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ.
ಜೂನ್ 20ರಂದ ಆರಂಭವಾಗುವ ವಾರ
◼ ಪುಟ 28-31: ಪುಟ 31ರಲ್ಲಿರುವ “ಅಧ್ಯಯನದ ಪ್ರಶ್ನೆಗಳು” ಎಂಬ ಚೌಕದಲ್ಲಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ.
ಈ ಬ್ರೋಷರಿನ ನಮ್ಮ ಪರಿಗಣನೆಯು, ‘ಸದಾ ಎಚ್ಚರಿಕೆಯಿಂದಿರಲು’ ಮತ್ತು ನಾವು ಸಿದ್ಧರಾಗಿದ್ದೇವೆಂದು ರುಜುಪಡಿಸಲು ನಮಗೆ ಸಹಾಯಮಾಡುತ್ತದೆ. “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ. ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ” ಎಂದು ದೇವದೂತನಿಂದ ಮಾಡಲ್ಪಡುತ್ತಿರುವ ಘೋಷಣೆಯು ತುರ್ತಿನದ್ದಾಗಿದೆ ಎಂಬುದನ್ನು ನಮ್ಮ ಸಾರ್ವಜನಿಕ ಶುಶ್ರೂಷೆಯು ಯಾವಾಗಲೂ ಪ್ರತಿಬಿಂಬಿಸಬೇಕು.—ಮತ್ತಾ. 24:42, 44, NW; ಪ್ರಕ. 14:7.