ಯೆಹೋವನಿಂದ ಬೋಧಿಸಲ್ಪಟ್ಟ ಪ್ರಕಾರ ನಡೆಯಿರಿ
“ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಾನು ನಿನ್ನ ಸತ್ಯತೆಯಲ್ಲಿ ನಡೆಯುವೆನು. ನಿನ್ನ ನಾಮದಲ್ಲಿಭಯಭಕ್ತಿಯಿಂದಿರುವಂತೆ ಏಕಹೃದಯವನ್ನು ಅನುಗ್ರಹಿಸು.”—ಕೀರ್ತನೆ 86:11.
1, 2. ರಕ್ತ ಪೂರಣಗಳನ್ನು ಸ್ವೀಕರಿಸಲು ನಿರಾಕರಿಸುವುದಕ್ಕೆ ಯೆಹೋವನ ಸಾಕ್ಷಿಗಳನ್ನು ಪ್ರೇರಿಸುವಂಥಾದ್ದು ಯಾವುದು?
“ರಕ್ತದ ಉತ್ಪಾದನೆಗಳನ್ನು ಉಪಯೋಗಿಸುವುದರಲ್ಲಿ ಪ್ರಾಯಶಃ ಯೆಹೋವನ ಸಾಕ್ಷಿಗಳು ಸರಿ ಯಾಕಂದರೆ ರೊಗೋತ್ಪತ್ತಿ ಮಾಡುವ ಕಾರ್ಯಸ್ಥಗಳು ಮಹತ್ವದ ಸಂಖ್ಯೆಯಲ್ಲಿ ಪೂರಣವಾದ ರಕ್ತದಿಂದ ರವಾನಿಸಲ್ಪಡಬಹುದು.”—ಫ್ರೆಂಚ್ ವೈದ್ಯಕೀಯ ದಿನಪತ್ರಿಕೆ ಲಾ ಕೊಟಿಡಿಯನ್ ಡ್ಯೂ ಮೆಡಿಸಿನ್, ದಶಂಬರ 15, 1987.
2 ಈ ಹೇಳಿಕೆಯನ್ನು ಓದುವ ಕೆಲವರು ನೆನಸಬಹುದೇನಂದರೆ ರಕ್ತಪೂರಣಗಳು ಅಷ್ಟು ಅಪಾಯಕಾರಿ, ಮಾರಕವೂ ಆಗಿರಬಲ್ಲದೆಂದು ಸಾಮಾನ್ಯವಾಗಿ ತಿಳಿದು ಬರುವ ಬಹಳ ಮುಂಚೆಯೆ ಯೆಹೋವನ ಸಾಕ್ಷಿಗಳು ರಕ್ತವನ್ನು ನಿರಾಕರಿಸಿದ್ದು ಕೇವಲ ಆಕಸ್ಮಿಕ ಎಂಬದಾಗಿ. ಆದರೆ ಯೆಹೋವನ ಸಾಕ್ಷಿಗಳು ರಕ್ತದ ಬಗ್ಗೆ ತಕ್ಕೊಂಡ ಸ್ಥಾನವು ಆಕಸ್ಮಿಕವಲ್ಲ, ಅಥವಾ ರಕ್ತವು ಸುರಕ್ಷಿತವಲ್ಲ ಎಂಬ ಭಯದಿಂದ ಒಂದು ವಿಚಿತ್ರ ಪಂಧವು ಸಂಶೋಧಿಸಿರುವ ಸ್ಥಾನವೂ ಅದಲ್ಲ. ಬದಲಿಗೆ ಸಾಕ್ಷಿಗಳು ರಕ್ತವನ್ನು ನಿರಾಕರಿಸುವುದು ಅವರ ಮಹಾ ಬೋಧಕನಾದ ದೇವರ ಮುಂದೆ ವಿಧೇಯತೆಯಿಂದ ನಡೆಯುವ ಅವರ ನಿರ್ಧಾರದಿಂದಲೆ.
3. (ಎ) ಯೆಹೋವನಲ್ಲಿ ಆತುಕೊಂಡಿರುವ ಕುರಿತು ದಾವೀದನ ಅನಿಸಿಕೆಯೇನು? (ಬಿ) ದೇವರಲ್ಲಿ ಭರವಸೆಯಿಟ್ಟ ಕಾರಣ ಯಾವ ಫಲಿತಾಂಶಕ್ಕಾಗಿ ದಾವೀದನು ಮುನ್ನೋಡಿದ್ದನು?
3 ದೇವರ ಮೇಲೆ ತನ್ನ ಆತುಕೊಳ್ಳುವಿಕೆಯನ್ನು ಮನಗಂಡ ರಾಜ ದಾವೀದನು ಆತನಿಂದ ಬೋಧಿಸಲ್ಪಡಲು ಮತ್ತು ‘ಆತನ ಸತ್ಯತೆಯಲ್ಲಿ ನಡೆಯಲು’ ನಿರ್ಧಾರವನ್ನು ಮಾಡಿದ್ದನು. (ಕೀರ್ತನೆ 86:11) ದೇವರ ದೃಷ್ಟಿಯಲ್ಲಿ ರಕ್ತದೋಷಿಯಾಗಿರುವುದನ್ನು ಅವನು ವರ್ಜಿಸಿದ್ದಾದರೆ, ‘ಅವನ ಜೀವವು ಅವನ ದೇವರಾದ ಯೆಹೋವನ ರಕ್ಷಣೆಯಲ್ಲಿರುವ ಜೀವನಿಕ್ಷೇಪದಲ್ಲಿ (ಸುತ್ತಿದ್ದು, NW) ಭದ್ರವಾಗಿರುವದು’ ಎಂಬ ಸಲಹೆಯು ಒಮ್ಮೆ ಅವನಿಗೆ ಕೊಡಲ್ಪಟ್ಟಿತ್ತು. (1 ಸಮುವೇಲ 25:21, 22, 25, 29) ಬೆಲೆಯುಳ್ಳ ವಸ್ತುಗಳನ್ನು ಭದ್ರಪಡಿಸಲು ಮತ್ತು ಅವನ್ನು ಕಾಪಾಡಲು ಜನರು ಅವನ್ನು ಸುತ್ತಿಡುವಂತೆ, ದಾವೀದನ ಜೀವವು ದೇವರಿಂದ ಭದ್ರಪಡಿಸಲ್ಪಟ್ಟು ಕಾಪಾಡಲ್ಪಡ ಸಾಧ್ಯವಿತ್ತು. ಈ ವಿವೇಕಯುಕ್ತ ಸಲಹೆಯನ್ನು ಸ್ವೀಕರಿಸಿ, ವೈಯಕ್ತಿಕ ಪ್ರಯತ್ನಗಳಿಂದ ತನ್ನನ್ನು ಸಂರಕ್ಷಿಸಿಕೊಳ್ಳಲು ದಾವೀದನು ಪ್ರಯತ್ನಿಸಲಿಲ್ಲ, ಬದಲು ತನ್ನ ಜೀವವು ಯಾರಿಗೆ ಸೇರಿದೆಯೋ, ಆತನಲ್ಲಿ ಭರವಸವಿಟ್ಟನು: “ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ.”—ಕೀರ್ತನೆ 16:11.
4. ಯೆಹೋವನಿಂದ ಬೋಧಿಸಲ್ಪಡಲು ದಾವೀದನು ಬಯಸಿದ್ದೇಕೆ?
4 ಆ ಮನೋಭಾವದಿಂದ ಕೂಡಿದವನಾಗಿ, ದಾವೀದನು ದೇವರ ಯಾವ ನಿಯಮವು ಸರಿಯಾದದ್ದು ಮತ್ತು ಪಾಲಿಸುವ ಅಗತ್ಯವಿದೆ ಎಂಬದನ್ನು ವೈಯಕ್ತಿಕವಾಗಿ ಆರಿಸಿಕೊಳ್ಳ ಶಕ್ತನೆಂಬ ಭಾವನೆಯನ್ನು ಪಡೆಯಲಿಲ್ಲ. ಅವನ ಮನೋಭಾವವು ಹೀಗಿತ್ತು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು, ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.” “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು. ನಾನು ನಿನ್ನ ಸತ್ಯತೆಯಲ್ಲಿ ನಡೆಯುವೆನು. ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಹೃದಯವನ್ನು ಅನುಗ್ರಹಿಸು. ನನ್ನ ದೇವರೇ, ಯೆಹೋವನೇ, ಹೃದಯಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು.” (ಕೀರ್ತನೆ 27:11; 86:11, 12) ದೇವರ ಮುಂದೆ ಸತ್ಯತೆಯಲ್ಲಿ ನಡೆಯುವುದು ಕೆಲವೊಮ್ಮೆ ಅನಾನುಕೂಲವಾಗಿ ಕಾಣಬಹುದು ಮತ್ತು ಮಹಾ ತ್ಯಾಗದ ಅರ್ಥದಲ್ಲಿರಲೂ ಬಹುದು. ಆದರೆ ದಾವೀದನು ಸರಿಯಾದ ಮಾರ್ಗವನ್ನು ಬೋಧಿಸಲ್ಪಡಲು ಮತ್ತು ಆ ಮಾರ್ಗದಲ್ಲಿ ನಡೆಯಲು ಬಯಸಿದನು.
ರಕ್ತದ ಕುರಿತು ಬೋಧಿಸಲ್ಪಟ್ಟದ್ದು
5. ರಕ್ತದ ಕುರಿತು ದೇವರ ನಿಲುವಿನ ವಿಷಯವಾಗಿ ದಾವೀದನಿಗೆ ಏನು ತಿಳಿದಿದ್ದಿರಬೇಕು?
5 ಹುಡುಗನಾಗಿದ್ದ ಸಮಯದಿಂದ ಹಿಡಿದು ದಾವೀದನಿಗೆ ರಕ್ತದ ಕುರಿತಾದ ದೇವರ ನೋಟವು ಕಲಿಸಲ್ಪಟ್ಟಿತ್ತೆಂಬದು, ಮತ್ತು ಆ ನೋಟವು ಧಾರ್ಮಿಕ ಮರ್ಮವಲ್ಲವೆಂಬದು ಗಮನಕ್ಕೆ ಅರ್ಹವಾಗಿದೆ. ಜನರಿಗೆ ಧರ್ಮಶಾಸ್ತ್ರವು ಓದಲ್ಪಟ್ಟಾಗ, ದಾವೀದನು ಇದನ್ನು ಕೇಳಿದಿರ್ದಬಹುದು: “ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ರಕ್ತವೇದಿಗೆ ಎರಚಿ ನಿಮಗಾಗಿ ದೋಷ ಪರಿಹಾರವನ್ನು ಮಾಡಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷ ಪರಿಹಾರವಾಗುತ್ತದಷ್ಟೆ. ಆದದರಿಂದ—ನಿಮ್ಮಲ್ಲಿಯಾಗಲಿ ನಿಮ್ಮ ನಡುವೆ ಇಳುಕೊಂಡಿರುವ ಅನ್ಯದೇಶದವರಲಿಯ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದೇನೆ.”—ಯಾಜಕಕಾಂಡ 17:11, 12; ಧರ್ಮೋಪದೇಶಕಾಂಡ 4:10; 31:11.
6. ದೇವರ ಸೇವಕರಿಗೆ ರಕ್ತದ ಕುರಿತು ಬೋಧಿಸಲ್ಪಡುವ ಸದಾ ಅಗತ್ಯತೆಯು ಅಲ್ಲಿತ್ತು ಹೇಗೆ?
6 ದೇವರು ಇಸ್ರಾಯೇಲ್ಯರನ್ನು ತನ್ನ ಒಕ್ಕೂಟದ ಜನರಾಗಿ ಉಪಯೋಗಿಸಿದ್ದ ತನಕ, ಯಾರು ಆತನನ್ನು ಮೆಚ್ಚಿಸ ಬಯಸಿದ್ದರೊ ಅವರು ರಕ್ತದ ಕುರಿತು ಕಲಿಯುವ ಅಗತ್ಯವಿತ್ತು. ವಂಶಪಾರಂಪರ್ಯವಾಗಿ ಇಸ್ರಾಯೇಲ್ಯ ಹುಡುಗರು ಮತ್ತು ಹುಡುಗಿಯರು ಆ ರೀತಿಯಲ್ಲಿ ಬೋಧಿಸಲ್ಪಟ್ಟಿದ್ದರು. ಆದರೆ ದೇವರು ಕ್ರೈಸ್ತ ಸಭೆಯನ್ನು ಸ್ವೀಕರಿಸಿ ಅದನ್ನು “ದೇವರ ಇಸ್ರಾಯೇಲ್” ಆಗಿ ಸಂಘಟಿಸಿದ ನಂತರ ಅಂಥ ಒಂದು ಬೋಧನೆಯು ಮುಂದುವರಿಯಲಿಕ್ಕಿತ್ತೊ? (ಗಲಾತ್ಯ 6:16) ಹೌದು, ನಿಶ್ಚಯವಾಗಿಯೂ. ರಕ್ತದ ಕುರಿತಾದ ದೇವರ ನೋಟವು ಬದಲಾಗಲಿಲ್ಲ. (ಮಲಾಕಿಯ 3:6) ರಕ್ತದ ದುರುಪಯೋಗ ಮಾಡದಂತೆ ಆತನು ಕೊಟ್ಟ ನಿಯಮವು ನಿಯಮದೊಡಂಬಡಿಕೆಯು ಜಾರಿಗೆ ಬರುವುದಕ್ಕೆ ಮುಂಚೆ ಅಸ್ತಿತ್ವದಲ್ಲಿತ್ತು ಮತ್ತು ನಿಯಮವು ರದ್ದು ಮಾಡಲ್ಪಟ್ಟ ನಂತರವೂ ಅದು ಮುಂದುವರಿಯಿತು.—ಆದಿಕಾಂಡ 9:3, 4; ಅಪೊಸ್ತಲರ ಕೃತ್ಯಗಳು 15:28, 29.
7. ರಕ್ತದ ಕುರಿತು ದೇವರಿಂದ ಬೋಧಿಸಲ್ಪಡುವದು ನಮಗೆ ಏಕೆ ಮಹತ್ವವುಳ್ಳದ್ದು?
7 ರಕ್ತಕ್ಕೆ ಗೌರವವು ಕ್ರೈಸ್ತತ್ವದ ಕೇಂದ್ರಬಿಂದು. ‘ಅದು ಅತಿಶಯೋಕ್ತಿಯಲವ್ಲೆ?’ ಎಂದು ಕೆಲವರು ಕೇಳಾರು. ಆದರೂ, ಕ್ರಿಸ್ತನ ಯಜ್ಞವಲ್ಲದೆ ಕ್ರೈಸ್ತತ್ವಕ್ಕೆ ಪ್ರಧಾನವಾಗಿರುವುದು ಬೇರೇನು? ಮತ್ತು ಅಪೊಸ್ತಲ ಪೌಲನು ಬರೆದದ್ದು: “ಈತನು [ಯೇಸು] ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೆ.” (ಎಫೆಸ 1:7) ಫ್ರಾಂಕ್ ಸಿ. ಲುಬಕ್ರಿಂದ ಭಾಷಾಂತರವಾದ ದ ಇನ್ಸ್ಪೈಅರ್ಡ್ ಲೆಟರ್ ಈ ವಚನಗಳನ್ನು ತರ್ಜುಮೆ ಮಾಡಿದ್ದು: “ಕ್ರಿಸ್ತನ ರಕ್ತವು ನಮಗಾಗಿ ಬೆಲೆತೆತಿತ್ತು ಮತ್ತು ನಾವೀಗ ಅವನಿಗೆ ಸೇರಿದವರು.”
8. “ಮಹಾ ಸಮೂಹ”ದವರು ಜೀವಕ್ಕಾಗಿ ರಕ್ತದ ಮೇಲೆ ಆತುಕೊಂಡಿರುವುದು ಹೇಗೆ?
8 ಬರಲಿರುವ “ಮಹಾ ಸಂಕಟವನ್ನು” ಪಾರಾಗಲು ಮತ್ತು ಪರದೈಸ ಭೂಮಿಯಲ್ಲಿ ದೇವರ ಆಶೀರ್ವಾದವನ್ನು ಆನಂದಿಸಲು ನಿರೀಕ್ಷಿಸುವವರೆಲ್ಲರೂ ಯೇಸುವಿನ ರಕ್ತದ ಮೇಲೆ ಆತುಕೊಂಡಿದ್ದಾರೆ. ಪ್ರಕಟನೆ 7:9-14 ಅವರನ್ನು ವರ್ಣಿಸುತ್ತದೆ ಮತ್ತು ಪೂರ್ವಾನ್ವಯವಾಗಿ ಹೇಳುವುದು: “ಇವರು ಆ ಮಹಾ ಹಿಂಸೆಯನ್ನು ಅನುಭವಿಸಿ ಬಂದವರು. ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ಇಲ್ಲಿನ ಭಾಷಾರೂಪವನ್ನು ತುಸು ಗಮನಿಸಿರಿ. ಮಹಾ ಹಿಂಸೆಯನ್ನು ಪಾರಾದವರಾದ ಇವರು ‘ಯೇಸುವನ್ನು ಸ್ವೀಕರಿಸಿದ್ದವ’ ರೆಂದಾಗಲಿ ‘ಅವನಲ್ಲಿ ನಂಬಿಕೆ ಇಟ್ಟವ’ ರೆಂದಾಗಲಿ ಅದು ಹೇಳುವುದಿಲ್ಲ, ಅದರೂ, ಅವು ಖಂಡಿತವಾಗಿಯೂ ಪ್ರಾಮುಖ್ಯ ಭಾಗಗಳು. ಅದು ಒಂದು ಹೆಜ್ಜೆ ಮುಂದಿಟ್ಟು, “[ಯೇಸುವಿನ] ರಕ್ತದಿಂದ ಅವರು ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ” ಎಂದು ಹೇಳುತ್ತದೆ. ಅದು ಆತನ ರಕ್ತಕ್ಕೆ ವಿಮೋಚನಾ ಬೆಲೆಯಿರುವ ಕಾರಣದಿಂದಲೆ.
9. ರಕ್ತದ ವಿಷಯದಲ್ಲಿ ಯೆಹೋವನಿಗೆ ವಿಧೇಯರಾಗುವದು ಅಷ್ಟು ಗಂಭೀರವೇಕೆ?
9 ಈ ಬೆಲೆಯನ್ನು ಗಣ್ಯಮಾಡುವಿಕೆಯು, ರಕ್ತಪೂರಣ ಅತ್ಯಾವಶ್ಯಕ ಎಂಬದಾಗಿ ವೈದ್ಯನು ಪ್ರಾಮಾಣಿಕತೆಯಿಂದ ಹೇಳುವಾಗಲೂ, ರಕ್ತವನ್ನು ದುರುಪಯೋಗ ಮಾಡದಿರುವ ನಿರ್ಧಾರವನ್ನು ಮಾಡಲು ಯೆಹೋವನ ಸಾಕ್ಷಿಗಳಿಗೆ ಸಹಾಯ ಮಾಡುತ್ತದೆ. ಪೂರಣದ ಸಂಭಾವ್ಯ ಪ್ರಯೋಜನಗಳು, ರಕ್ತದಿಂದ ತಾನೇ ಉದ್ಭವಿಸುವ ಆರೋಗ್ಯ ಅಪಾಯಗಳನ್ನು ತೂಕದಲ್ಲಿ ಮಿಗಿಸುವದೆಂದು ಅವನು ನಂಬಬಹುದು. ಆದರೆ ಇದಕ್ಕಿಂತಲೂ ಹೆಚ್ಚು ಘನವಾದ ಅಪಾಯವನ್ನು, ರಕ್ತದ ದುರುಪಯೋಗ ಮಾಡಲು ಒಪ್ಪುವ ಮೂಲಕ ದೇವರ ಅನುಗ್ರಹವನ್ನು ಕಳಕೊಳ್ಳುವ ಅಪಾಯವನ್ನು ಕ್ರೈಸ್ತನು ದುರ್ಲಕ್ಷಿಸ ಸಾಧ್ಯವಿಲ್ಲ. ಪೌಲನು ಒಮ್ಮೆ, “ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪ ಮಾಡಿದ್ದ” ಜನರ ಕುರಿತು ಮಾತಾಡಿದ್ದನು. ಆ ರೀತಿಯ ಪಾಪವು ಅಷ್ಟು ಘೋರವೇಕೆ? ಯಾಕಂದರೆ ಅಂಥ ಮನುಷ್ಯನು “ದೇವಕುಮಾರನನ್ನು ತುಳಿದು ಒಡಂಬಡಿಕೆಯನ್ನು ಸ್ಥಿರಪಡಿಸಿ ತನ್ನನ್ನು ಪವಿತ್ರ ಮಾಡಿದಂಥ ರಕ್ತವನ್ನು ಸಾಮಾನ್ಯ ಬೆಲೆಯದ್ದಾಗಿ ಪರಿಗಣಿಸಿ”ದವನಾಗುತ್ತಾನೆ.—ಇಬ್ರಿಯ 9:16-24; 10:26-29, NW.
ಇತರರು ಬೋಧಿಸಲ್ಪಡುವಂತೆ ನೆರವಾಗಿರಿ
10. ರಕ್ತದಿಂದ ದೂರವಿರಲು ನಮ್ಮ ನಿರ್ಧಾರದ ಹಿಂದಿರುವ ವಿಷಯವೇನು?
10 ಯೇಸುವಿನ ವಿಮೋಚನಾ ಯಜ್ಞವನ್ನು ಗಣ್ಯಮಾಡುವವರಾದ ನಾವು ರಕ್ತದ ಜೀವರಕ್ಷಕ ಬೆಲೆಯನ್ನು ತಿರಸ್ಕರಿಸಿ ಪಾಪವನ್ನು ನಡಿಸದಂತೆ ಎಚ್ಚರದಿಂದಿರುವೆವು. ವಿಷಯವನ್ನು ಚೆನ್ನಾಗಿ ಆಲೋಚಿಸಿಯಾದ ಮೇಲೆ, ಜೀವಕ್ಕಾಗಿ ದೇವರಿಗೆ ಕೇವಲ ಕೃತಜ್ಞತೆಯೆ, ಆತನ ನೀತಿಯುಳ್ಳ ನಿಯಮದ ಬಗ್ಗೆ ಯಾವುದೆ ರಾಜಿ ಮಾಡಿಕೊಳ್ಳುವುದನ್ನು ತಿರಸ್ಕರಿಸಲು ನಮ್ಮನ್ನು ಪ್ರೇರಿಸಬೇಕು ಎಂಬ ಮನವರಿಕೆ ನಮಗಾಗುವುದು. ಆ ನಿಯಮಗಳು ನಮ್ಮ ಒಳ್ಳೇದನ್ನು ಮನಸ್ಸಿನಲ್ಲಿಟ್ಟೇ—ನಮ್ಮ ದೀರ್ಘಕಾಲದ ಹಿತಾಸಕ್ತಿಗಳಿಗಾಗಿಯೆ ನಮಗೆ ಕೊಡಲ್ಪಟ್ಟಿವೆ ಎಂಬ ಭರವಸವು ನಮಗಿದೆ. (ಧರ್ಮೋಪದೇಶಕಾಂಡ 6:24: ಜ್ಞಾನೋಕ್ತಿ 14:27; ಪ್ರಸಂಗಿ 8:12) ಆದರೂ, ನಮ್ಮ ಮಕ್ಕಳ ಕುರಿತಾಗಿ ಏನು?
11-13. ತಮ್ಮ ಮಕ್ಕಳ ಮತ್ತು ರಕ್ತದ ಕುರಿತು ಕೆಲವು ಕ್ರೈಸ್ತ ಹೆತ್ತವರಿಗೆ ಯಾವ ತಪ್ಪಾದ ನೋಟವಿದೆ, ಮತ್ತು ಏಕೆ?
11 ನಮ್ಮ ಮಕ್ಕಳು ಕೂಸುಗಳಾಗಿರುವಾಗ ಅಥವಾ ತಿಳುವಳಿಕೆಗೆ ತೀರಾ ಚಿಕ್ಕವರಾಗಿರುವಾಗ, ಯೆಹೋವ ದೇವರು ಅವರನ್ನು ನಮ್ಮ ಭಕ್ತಿಯ ಆಧಾರದ ಮೇಲೆ ಶುದ್ಧವೂ ಸ್ವೀಕರಣೀಯವಾಗಿಯೂ ನೋಡಬಲ್ಲನು. (1 ಕೊರಿಂಥ 7:14) ಆದದರಿಂದ ಒಂದು ಕ್ರೈಸ್ತ ಮನೆವಾರ್ತೆಯಲ್ಲಿರುವ ಕೂಸುಗಳು ರಕ್ತದ ಕುರಿತಾದ ದೇವರ ನಿಯಮಕ್ಕೆ ವಿಧೇಯರಾಗುವುದನ್ನು ಇನ್ನೂ ತಿಳಿಯದಿರಬಹುದು ಅಥವಾ ಆರಿಸಿ ಕೊಳ್ಳದೆ ಇರಬಹುದು. ಆದರೂ ಈ ಪ್ರಾಮುಖ್ಯ ವಿಷಯದ ಕುರಿತು ಅವರಿಗೆ ಬೋಧಿಸಲು ನಮ್ಮಿಂದಾದ ಎಲ್ಲವನ್ನು ನಾವು ಮಾಡುತ್ತಿದ್ದೇವೊ? ಕ್ರೈಸ್ತ ಹೆತ್ತವರು ಅದನ್ನು ಗಂಭೀರವಾಗಿ ಗಮನಕ್ಕೆ ತರಬೇಕು, ಯಾಕಂದರೆ ಕೆಲವು ಹೆತ್ತವರಿಗೆ ತಮ್ಮ ಮಕ್ಕಳು ಮತ್ತು ರಕ್ತದ ವಿಷಯದಲ್ಲಿ ತಪ್ಪು ಮನೋಭಾವನೆ ಇರುತ್ತದೆ. ತಮ್ಮ ಅಪ್ರಾಯಸ್ಥ ಮಕ್ಕಳಿಗೆ ರಕ್ತಪೂರಣ ಕೊಡಬೇಕೊ ಬಾರದೊ ಎಂಬ ವಿಷಯದಲ್ಲಿ ತಮಗೆ ನಿಜವಾಗಿ ಹೆಚ್ಚು ಹತೋಟಿ ಇಲ್ಲವೆಂಬ ಅನಿಸಿಕೆ ಕೆಲವರಿಗಿದೆ. ಈ ತಪ್ಪಾದ ನೋಟವೇತಕ್ಕೆ?
12 ಅನೇಕ ದೇಶಗಳಲ್ಲಿ ದುರ್ಲಕ್ಷಿಸಲ್ಪಟ್ಟ ಮತ್ತು ದುರುಪಯೋಗಿಸಿದ ಮಕ್ಕಳನ್ನು ಕಾಪಾಡಲು ನಿಯಮಗಳು ಅಥವಾ ಸರಕಾರಿ ಕಾರ್ಯಭಾರಗಳು ಇರುತ್ತವೆ. ಯೆಹೋವನ ಸಾಕ್ಷಿಗಳು ತಮ್ಮ ಪ್ರೀತಿಯ ಮಗನಿಗೆ ಅಥವಾ ಮಗಳಿಗೆ ರಕ್ತ ಕೊಡುವ ವಿರುದ್ಧವಾಗಿ ನಿರ್ಣಯಿಸುವಾಗ, ಅವರ ಮಕ್ಕಳು ದುರ್ಲಕ್ಷಿಸಲ್ಪಡುವುದಿಲ್ಲ ಅಥವಾ ದುರುಪಯೋಗವಾಗುವುದಿಲ್ಲ, ಯಾಕಂದರೆ ಅದೇ ಸಮಯದಲ್ಲಿ ಅವರು ಆಧುನಿಕ ಔಷಧೋಪಚಾರವು ಒದಗಿಸಬಲ್ಲ ರಕ್ತಕ್ಕೆ ಬದಲಿಯಾದ ಅನ್ಯ ಮಾರ್ಗಗಳ ಉಪಯೋಗವನ್ನು ವಿನಂತಿಸುತ್ತಾರೆ. ಪೂರಣ ಚಿಕಿತ್ಸೆಯಲ್ಲಿರುವ ಅಂಗೀಕೃತ ಅಪಾಯಗಳನ್ನು ಗಮನಿಸುವಲ್ಲಿ, ವೈದ್ಯಕೀಯ ದೃಷ್ಟಿಕೋನದಿಂದಲೂ, ಇದು ಒಂದು ದುರ್ಲಕ್ಷ್ಯ ಅಥವಾ ದುರುಪಯೋಗವಲ್ಲ. ಒಳಗೂಡಿರುವ ಅಪಾಯಗಳನ್ನು ತೂಗಿನೋಡಿ, ಆ ಔಷಧೋಪಚಾರವನ್ನು ಆರಿಸಿಕೊಳ್ಳುವ ಹಕ್ಕಿನ ನಿರ್ವಹಣೆಯಾಗಿದೆ.a ಆದರೂ ಕೆಲವು ವೈದ್ಯಕೀಯ ಉದ್ಯೋಗಿಗಳು ಬೇಡವಾದ ಪೂರಣಗಳನ್ನು ಬಲವಂತವಾಗಿ ಕೊಡುವ ಅಧಿಕಾರವನ್ನು ಪಡೆಯಲು ನ್ಯಾಯಾಂಗ ಒದಗಿಸುವಿಕೆಗಳ ಮರೆಹೊಕ್ಕಿರುತ್ತಾರೆ.
13 ಅಪ್ರಾಯಸ್ಥ ಮಗುವಿಗೆ ಪೂರಣವನ್ನು ಕೊಡಲಿಕ್ಕೆ ಕೋರ್ಟ್ ಬೆಂಬಲವನ್ನು ಪಡೆಯುವುದು ವೈದ್ಯಕೀಯ ಸಿಬ್ಬಂದಿಗಳಿಗೆ ಸುಲಭವಾಗಿರಬಹುದೆಂದು ತಿಳಿದಿರುವ ಕೆಲವು ಹೆತ್ತವರು, ವಿಷಯವು ತಮ್ಮ ಕೈಮೀರಿದ್ದು ಆದ್ದರಿಂದ ಹೆತ್ತವರಾದ ತಮಗೆ ಏನೂ ಮಾಡಲಿಕ್ಕಿಲ್ಲ ಯಾ ಮಾಡಲಾರೆವು ಎಂದು ಭಾವಿಸಬಹುದು. ಈ ದೃಷ್ಟಿಕೋನವು ಅದೆಷ್ಟು ತಪ್ಪಾದದ್ದು!—ಜ್ಞಾನೋಕ್ತಿ 22:3.
14. ದಾವೀದ ಮತ್ತು ತಿಮೊಥಿಯರು ತಮ್ಮ ಯೌವನದಿಂದ ಬೋಧಿಸಲ್ಪಟ್ಟದ್ದು ಹೇಗೆ?
14 ದಾವೀದನು ತನ್ನ ಎಳೆತನದಿಂದಲೆ ದೇವರ ಮಾರ್ಗದ ವಿಷಯವಾಗಿ ಬೋಧಿಸಲ್ಪಟ್ಟನೆಂದು ನಾವು ಗಮನಿಸಿದೆವು. ಜೀವವನ್ನು ದೇವರಿಂದ ಬಂದ ಒಂದು ದಾನವಾಗಿ ಪರಿಗಣಿಸುವಂತೆ ಮತ್ತು ರಕ್ತವು ಜೀವವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಯುವಂತೆ ಅದು ಅವನನ್ನು ಸನ್ನದ್ಧಗೊಳಿಸಿತು. (2 ಸಮುವೇಲ 23:14-17ಕ್ಕೆ ಹೋಲಿಸಿರಿ.) ತಿಮೊಥಿಯು “ಚಿಕ್ಕಂದಿನಿಂದಲೂ” ದೇವರ ಆಲೋಚನೆಯಲ್ಲಿ ಬೋಧಿಸಲ್ಪಟ್ಟನು. (2 ತಿಮೊಥಿ 3:14, 15) ದಾವೀದ ಮತ್ತು ತಿಮೊಥಿಯು ಇಂದು ಪ್ರೌಢ ವಯಸ್ಸೆಂದು ಎಣಿಸಲಾಗುವ ಶಾಸನಸಮ್ಮತ ವಯಸ್ಸಿಗಿಂತ ಕಿರಿಯರಾಗಿರುವಾಗಲೂ, ದೇವರ ಚಿತ್ತವು ಒಳಗೂಡಿರುವ ಪ್ರಶ್ನೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಚೆನ್ನಾಗಿ ವ್ಯಕ್ತಪಡಿಸ ಶಕ್ತರಿದ್ದರೆಂದು ನೀವು ಒಪ್ಪುವದಿಲವ್ಲೆ? ತದ್ರೀತಿ, ಪ್ರಾಪ್ತ ವಯಸ್ಕರಾಗುವ ಬಹು ಮುಂಚೆಯೆ, ಯುವ ಕ್ರೈಸ್ತರು ಇಂದು ದೇವರ ಮಾರ್ಗದಲ್ಲಿ ಬೋಧಿಸಲ್ಪಡಬೇಕು.
15, 16. (ಎ) ಎಳೆಯರ ಹಕ್ಕುಗಳ ವಿಷಯದಲ್ಲಿ ಕೆಲವು ಸ್ಥಳಗಳಲ್ಲಿ ಯಾವ ನೋಟವು ವಿಕಾಸಗೊಂಡಿದೆ? (ಬಿ) ಒಬ್ಬ ಅಪ್ರಾಪ್ತ ವಯಸ್ಕನಿಗೆ ರಕ್ತಕೊಡಲ್ಪಡುವಂಥಾದದ್ದು ಹೇಗೆ?
15 ಕೆಲವು ಸ್ಥಳಗಳಲ್ಲಿ ಬಲಿತವರೆಂದನ್ನುವ ಅಪ್ರಾಪ್ತ ವಯಸ್ಕರಿಗೆ ಪ್ರಾಪ್ತವಯಸ್ಕರಂಥ ಹಕ್ಕುಗಳು ಕೊಡಲ್ಪಡುತ್ತವೆ. ಅವನ ವಯಸ್ಸಿನ ಮೇಲೆ ಯಾ ಬಲಿತ ಆಲೋಚನೆಯ ಮೇಲೆ, ಅಥವಾ ಎರಡರ ಮೇಲೂ ಆಧರಿಸಿ, ಯುವಕನೊಬ್ಬನು ಔಷಧೋಪಚಾರದ ಮೇಲೆ ತನ್ನ ಸ್ವಂತ ನಿರ್ಣಯವನ್ನು ಮಾಡಲು ಸಾಕಷ್ಟು ದೊಡ್ಡವನೆಂದು ವೀಕ್ಷಿಸಲ್ಪಡಬಹುದು. ಎಲ್ಲಿ ಈ ಕಾನೂನು ಇಲ್ಲವೊ ಅಲ್ಲಿ ಕೂಡಾ, ರಕ್ತದ ಕುರಿತು ತನ್ನ ದೃಢ ನಿರ್ಧಾರವನ್ನು ಸ್ಪಷ್ಟವಾಗಿಗಿ ವ್ಯಕ್ತಪಡಿಸ ಶಕ್ತನಾದ ಯುವಕನ ಇಷ್ಟಗಳನ್ನು ನ್ಯಾಯಾಧಿಪತಿಗಳು ಮತ್ತು ಅಧಿಕಾರಿಗಳು ಮಾನ್ಯಮಾಡಬಹುದು. ವಿಪರ್ಯಸ್ತವಾಗಿ, ಯುವಕನೊಬ್ಬನು ತನ್ನ ನಂಬಿಕೆಗಳನ್ನು ಸ್ಪಷ್ಟವಾಗಿಗಿ ಮತ್ತು ಪಕ್ವವಾಗಿ ವಿವರಿಸಶಕ್ತನಾಗದಾಗ, ಒಂದು ಕೂಸಿನ ವಿಷಯವಾಗಿ ಹೇಗೊ ಹಾಗೆಯೆ, ಕೋರ್ಟು ಯಾವುದು ಒಳ್ಳೆಯದೆಂದು ತೋರುತ್ತದೊ ಅದನ್ನು ತಾನೇ ನಿರ್ಣಯಿಸುವುದು ಯುಕ್ತವೆಂದು ಭಾವಿಸಬಹುದು.
16 ಒಬ್ಬ ಯುವಕನು ಬೈಬಲನ್ನು ಆಗಿಂದಾಗ್ಯೆ ವರ್ಷಗಳ ತನಕ ಅಧ್ಯಯನ ಮಾಡಿದ್ದನು ಆದರೆ ದೀಕ್ಷಾಸ್ನಾನ ತಕ್ಕೊಳ್ಳಲಿಲ್ಲ. “ತನಗಾಗಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕನ್ನು” ಪಡೆಯುವ ವಯಸ್ಸಿನವನಾಗಲು ಕೇವಲ ಏಳುವಾರಗಳು ಇದ್ದಾಗ್ಯೂ, ಅವನ ಕ್ಯಾನ್ಸರ್ ರೋಗಕ್ಕೆ ಔಷಧೋಪಚಾರ ಮಾಡುತ್ತಿದ್ದ ಒಂದು ಆಸ್ಪತ್ರೆಯು ಅವನ ಮತ್ತು ಅವನ ಹೆತ್ತವರ ಇಷ್ಟಗಳಿಗೆ ವಿರುದ್ಧವಾಗಿ ಅವನಿಗೆ ರಕ್ತ ಪೂರಣ ಮಾಡಲು ಕೋರ್ಟಿನ ಬೆಂಬಲವನ್ನು ಕೇಳಿತು. ಅಂತಃಸಾಕ್ಷಿಯುಕ್ತ ನ್ಯಾಯಾಧಿಪತಿ ರಕ್ತದ ಕುರಿತಾದ ಅವನ ನಂಬಿಕೆಗಳ ಕುರಿತು ಪ್ರಶ್ನಿಸಿದನು ಮತ್ತು ಬೈಬಲಿನ ಮೊದಲ ಐದು ಪುಸ್ತಕಗಳ ಹೆಸರುಗಳೇ ಮುಂತಾದ ಮೂಲಾಧಾರ ಪ್ರಶ್ನೆಗಳನ್ನು ಕೇಳಿದನು. ಆ ಯುವಕನು ಅವುಗಳ ಹೆಸರು ಹೇಳಶಕ್ತನಾಗಲಿಲ್ಲ ಮತ್ತು ತಾನು ರಕ್ತವನ್ನು ನಿರಾಕರಿಸುವದೇಕೆ ಎಂಬ ತಿಳುವಳಿಕೆಗೆ ಖಾತ್ರಿದಾಯಕ ಸಾಕ್ಷಿಯನ್ನೂ ನೀಡಲಾರದೆ ಹೋದನು. ವಿಷಾಧಕರವಾಗಿ, ಪೂರಣಗಳನ್ನು ಕೊಡುವಂತೆ ನ್ಯಾಯಾಧೀಶನು ಆಜ್ಞಾಪಿಸಿದನು, ಅವನು ಹೇಳಿದ್ದು: “ರಕ್ತ ಪೂರಣಗಳಿಗೆ ಒಪ್ಪಲು ಅವನು ನಿರಾಕರಿಸಿದ್ದು ಅವನ ಸ್ವಂತ ಧಾರ್ಮಿಕ ನಂಬಿಕೆಗಳ ಬಲಿತ ತಿಳುವಳಿಕೆಯ ಮೇಲೆ ಆಧಾರಿತವಾಗಿಲ್ಲ.”
17. ಒಬ್ಬ 14 ವರ್ಷ ವಯಸ್ಸಿನ ಹುಡುಗಿಯು ರಕ್ತ ತಕ್ಕೊಳ್ಳುವ ವಿಷಯವಾಗಿ ಯಾವ ಸ್ಥಾನವನ್ನು ತಕ್ಕೊಂಡಳು, ಯಾವ ಫಲಿತಾಂಶದೊಂದಿಗೆ?
17 ದೇವರ ವಾಕ್ಯದಲ್ಲಿ ಚೆನ್ನಾಗಿ ಬೋಧಿಸಲ್ಪಟ್ಟಿರುವ ಮತ್ತು ಸತ್ಯದಲ್ಲಿ ಕ್ರಿಯಾಶೀಲನಾಗಿ ನಡೆಯುತ್ತಿರುವ ಅಪ್ರಾಪ್ತ ವಯಸ್ಕರಿಗೆ ವಿಷಯಗಳು ಬೇರೆ ರೀತಿಯಾಗಿಯೂ ಪರಿಣಮಿಸಬಹುದು. ಒಬ್ಬಾಕೆ ಅಲ್ಪ ವಯಸ್ಸಿನ ಕ್ರೈಸ್ತಳಿಗೆ ಅದೇ ರೀತಿ ಒಂದು ಅಪೂರ್ವತರದ ಕ್ಯಾನ್ಸರ್ ಇತ್ತು. ಆ ಹುಡುಗಿ ಮತ್ತು ಅವಳ ಹೆತ್ತವರು ಒಂದು ಪ್ರಸಿದ್ಧ ಆಸ್ಪತ್ರೆಯ ತಜ್ಞ (ಸ್ಪೆಷಲಿಸ್ಟ್) ನಿಂದ ರೂಪಾಂತರಿಸಿದ ಕೆಮೊಥೆರಪಿ (ರಾಸಾಯನಿಕ) ಚಿಕಿತ್ಸೆಯನ್ನು ತಿಳಿದಿದ್ದರು ಮತ್ತು ಸ್ವೀಕರಿಸಿದ್ದರು. ಆದರೂ ಕೇಸನ್ನು ಕೋರ್ಟಿಗೆ ಎಳೆಯಲಾಯಿತು. ನ್ಯಾಯಾಧೀಶನು ಬರೆದದ್ದು: “ಡಿ.ಪಿ. ರಕ್ತ ಪೂರಣವನ್ನು ಯಾವ ರೀತಿಯಲ್ಲಾದರೂ ತಕ್ಕೊಳ್ಳುವುದನ್ನು ತಾನು ನಿರಾಕರಿಸುವಳೆಂದು ಸಾಕ್ಷಿಕೊಟ್ಟಳು. ಪೂರಣವನ್ನು ಶರೀರದ ಮೇಲೆ ಒಂದು ಆಕ್ರಮಣವಾಗಿ ತಾನು ಪರಿಗಣಿಸುವೆನೆಂದು ಅಕೆ ಹೇಳಿದಳು ಮತ್ತು ಅದನ್ನು ಬಲಾತ್ಕಾರ ಸಂಭೋಗಕ್ಕೆ ಹೋಲಿಸಿದಳು. ತನ್ನ ಆಯ್ಕೆಯನ್ನು ಗೌರವಿಸುವಂತೆ ಆಕೆ ಕೋರ್ಟಿಗೆ ವಿನಂತಿಸಿದಳು ಮತ್ತು ಕೋರ್ಟ್ ಆಜ್ಞಾಪಿತ ರಕ್ತ ಪೂರಣಗಳ ಹೊರತು [ಆಸ್ಪತ್ರೆಯ] ಚಿಕಿತ್ಸೆ ಮುಂದುವರಿಸುವಂತೆ ಅನುಮತಿ ಕೇಳಿದಳು.” ಅವಳು ಪಡೆದಿದ್ದ ಕ್ರೈಸ್ತ ಬೋಧೆಯು ಆ ಕಷ್ಟದ ಸಮಯದಲ್ಲಿ ಅವಳ ಸಹಾಯಕ್ಕೆ ಬಂತು.—ಚೌಕಟ್ಟು ನೋಡಿ.
18. (ಎ) ಬಾಧಿತಳಾದ ಒಬ್ಬ ಹುಡುಗಿಯು ರಕ್ತ ತಕ್ಕೊಳ್ಳುವ ವಿಷಯವಾಗಿ ಯಾವ ದೃಢ ನಿಲುವನ್ನು ತಕ್ಕೊಂಡಳು? (ಬಿ) ಅವಳ ಚಿಕಿತ್ಸೆಯ ಕುರಿತು ನ್ಯಾಯಾಧೀಶನು ಏನನ್ನು ನಿರ್ಣಯಿಸಿದನು?
18 ಒಬ್ಬ 12 ವರ್ಷ-ವಯಸ್ಸಿನ ಹುಡುಗಿಗೆ ಲ್ಯುಕೇಮಿಯಕ್ಕಾಗಿ ಚಿಕಿತ್ಸೆ ನಡಿಯುತ್ತಿತ್ತು. ಒಂದು ಶಿಶು-ಯೋಗಕ್ಷೇಮ ಸಂಸ್ಥೆಯು ರಕ್ತವನ್ನು ಒತ್ತಾಯದಿಂದ ಕೊಡುವಂತೆ ವಿಷಯವನ್ನು ಕೋರ್ಟಿಗೆಳೆಯಿತು. ನ್ಯಾಯಾಧೀಶನು ತೀರ್ಮಾನಿಸಿದ್ದು: “ಎಲ್. ಸ್ಪಷ್ಟವಾಗಿಗಿ ಮತ್ತು ಸರಾಗವಾಗಿ ಈ ಕೋರ್ಟಿಗೆ ಹೇಳಿದ್ದೇನಂದರೆ ಒಂದುವೇಳೆ ರಕ್ತಪೂರಣವನ್ನು ಕೊಡುವ ಪ್ರಯತ್ನವು ಮಾಡಲ್ಪಟ್ಟಲ್ಲಿ ತನಗಿರುವ ಎಲ್ಲಾ ಶಕಿಯ್ತಿಂದ ತಾನು ಆ ಪೂರಣದ ವಿರುದ್ಧ ಹೋರಾಡುವೆನೆಂಬದಾಗಿ. ತಾನು ಚೀರಾಡುವೆನು, ಒದ್ದಾಡುವೆನು, ತನ್ನ ಕಂಕುಳಡಿಯಲ್ಲಿರುವ ಚುಚ್ಚುಸೂಜಿ ಸಲಕರಣೆಯನ್ನು ಸೆಳೆದು ತೆಗೆದು, ತಲೆಯ ಮೇಲ್ಗಡೆ ಬ್ಯಾಗಿನಲ್ಲಿರುವ ರಕ್ತವನ್ನು ನಷ್ಟಗೊಳಿಸುವೆನೆಂದು ಆಕೆ ನುಡಿದಳು ಮತ್ತು ನಾನದನ್ನು ನಂಬುತ್ತೇನೆ. ಈ ಪುಟ್ಟ ಹುಡುಗಿಯನ್ನು ಆ ಕಠಿಣ ಪರೀಕೆಗ್ಷೆ ಹಾಕುವ ಯಾವುದೆ ಅಪ್ಪಣೆಯನ್ನು ಕೊಡಲು ನಾನು ನಿರಾಕರಿಸುತ್ತೇನೆ. . . . ಈ ರೋಗಿಗೆ ಆಸ್ಪತ್ರೆಯಿಂದ ಉದ್ದೇಶಿಸಲ್ಪಟ್ಟ ಚಿಕಿತ್ಸೆಯು ಕೇವಲ ದೈಹಿಕ ಅರ್ಥದಲ್ಲಿದೆ. ಅದು ಅವಳ ಮಾನಸಿಕ ಅಗತ್ಯತೆಗಳ ಮತ್ತು ಧಾರ್ಮಿಕ ನಂಬಿಕೆಗಳಿಗೆ ನಿವೇದಿಸುವುದಕ್ಕೆ ತಪ್ಪಿರುತ್ತದೆ.”
ಹೆತ್ತವರೇ—ಚೆನ್ನಾಗಿ ಬೋಧಿಸಿರಿ
19. ತಮ್ಮ ಮಕ್ಕಳ ಕಡೆಗೆ ಯಾವ ವಿಶೇಷ ಹಂಗನ್ನು ಹೆತ್ತವರು ನಿರ್ವಹಿಸಬೇಕು?
19 ಇಂಥ ಅನುಭವಗಳು ಹೆತ್ತವರಿಗೆ ತಮ್ಮ ಕುಟುಂಬದ ಎಲ್ಲರೂ ರಕ್ತದ ಕುರಿತಾದ ದೇವರ ನಿಯಮಕ್ಕೆ ಹೊಂದಿಕೆಯಲ್ಲಿ ಜೀವಿಸುವಂತೆ ಒಂದು ಬಲವತ್ತಾದ ಸಂದೇಶವನ್ನು ಕೊಡುತ್ತವೆ. ಅಬ್ರಹಾಮನು ದೇವರ ಸ್ನೇಹಿತನಾಗಿದ್ದ ಒಂದು ಕಾರಣವು, ಆ ಪೂರ್ವಜನು “ತನ್ನ ಪುತ್ರಪೌತ್ರರಿಗೆ—ನೀವು ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವ”ನೆಂದು ಆತನಿಗೆ ಗೊತ್ತಿದ್ದ ಕಾರಣದಿಂದಲೆ. (ಆದಿಕಾಂಡ 18:19) ಇಂದಿನ ಕ್ರೈಸ್ತ ಹೆತ್ತವರ ವಿಷಯದಲ್ಲೂ ಇದು ಸತ್ಯವಾಗಿರಬೇಡವೆ? ಹೆತ್ತವರು ನೀವಾಗಿದ್ದರೆ, ನಿಮ್ಮ ಮಕ್ಕಳು “[ಅವರ] ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧರಾಗಿರುವಂತೆ, . . . ಆದರೆ ಅದನ್ನು ಸೌಮ್ಯ ಭಾವದಿಂದ ಮತ್ತು ಆಳವಾದ ಗೌರವದಿಂದ” ಮಾಡಲಾಗುವಂತೆ ನಿಮ್ಮ ಪ್ರಿಯ ಮಕ್ಕಳನ್ನು ಯೆಹೋವನ ಮಾರ್ಗದಲ್ಲಿ ನಡಿಸಲು ನೀವು ಕಲಿಸುತ್ತೀರೋ?—1 ಪೇತ್ರ 3:15.
20. ನಮ್ಮ ಮಕ್ಕಳು ರಕ್ತದ ಕುರಿತು ಏನನ್ನು ತಿಳಿಯುವಂತೆ ಮತ್ತು ನಂಬುವಂತೆ ನಾವು ಮುಖ್ಯವಾಗಿ ಬಯಸುತ್ತೇವೆ? (ದಾನಿಯೇಲ 1:3-14)
20 ರಕ್ತ ಪೂರಣದ ರೋಗ ಅಪಾಯಗಳ ಮತ್ತು ಇತರ ಕೇಡುಗಳ ಕುರಿತು ಮಕ್ಕಳು ತಿಳಿದಿರುವುದು ಒಳ್ಳೆಯದಾದರೂ, ನಮ್ಮ ಮಕ್ಕಳಿಗೆ ರಕ್ತದ ಕುರಿತಾದ ದೇವರ ಪರಿಪೂರ್ಣ ನಿಯಮವನ್ನು ಬೋಧಿಸುವುದರ ಅರ್ಥವು ರಕ್ತದ ವಿಷಯವಾದ ಭಯವನ್ನು ಬೇರೂರಿಸ ಪ್ರಯತ್ನಿಸುವುದಲ್ಲ. ಉದಾಹರಣೆಗೆ, ಒಂದುವೇಳೆ ನ್ಯಾಯಾಧೀಶನು ಹುಡುಗಿಯೊಬ್ಬಳನ್ನು ಅವಳು ರಕ್ತವನ್ನೇಕೆ ತಕ್ಕೊಳ್ಳುವುದಿಲ್ಲವೆಂದು ಕೇಳಿದಲ್ಲಿ, ಮತ್ತು ಅವಳ ಉತ್ತರದ ಸಾರಾಂಶವು—ರಕ್ತವು ತೀರಾ ಅಪಾಯಕರ ಮತ್ತು ಭೀತಿದಾಯಕವೆಂದು ತಾನು ನೆನಸುವದರಿಂದಲೆ ಎಂದಾದರೆ, ಪರಿಣಾಮವೇನಾಗ ಸಾಧ್ಯವಿದೆ? ಆಗ ನ್ಯಾಯಾಧೀಶನು ಅವಳು ಕೇವಲ ಅಪಕಳ್ವೂ ಮತ್ತು ಅತಿರೇಕ ಹೆದರಿದವಳೂ ಆಗಿದ್ದಾಳೆಂದು ತೀರ್ಮಾನಿಸಬಹುದು. ಅವಳೆಷ್ಟು ಹೆದರಿದ್ದಿರಬಹುದೆಂದರೆ ಅಂತ್ರಪುಚ್ಛರೋಗದ (ಆಪೆಂಡಕಮ್ಟಿ) ಶಸ್ತ್ರಕ್ರಿಯೆಯು ಅವಳಿಗೆ ಒಳ್ಳೆಯದೆಂದು ಅವಳ ಹೆತ್ತವರು ಭಾವಿಸಿದ್ದಾಗ್ಯೂ ಅವಳು ಅತ್ತು ಅತ್ತು ಅದನ್ನು ಎದುರಿಸ್ಯಾಳು. ಅದಲ್ಲದೆ, ಕ್ರೈಸ್ತರು ಪೂರಣಗಳನ್ನು ಆಕ್ಷೇಪಿಸುವ ಪ್ರಾಮುಖ್ಯ ಕಾರಣ ರಕ್ತದ ಮಲಿನತೆಯಲ್ಲ, ನಮ್ಮ ದೇವರಿಗೆ ಮತ್ತು ಜೀವದಾತನಿಗೆ ಅದು ಅಮೂಲ್ಯವಾಗಿರುವುದರಿಂದಲೆ ಎಂದು ನಾವು ಈ ಮೊದಲೆ ನೋಡಿದೆವು. ನಮ್ಮ ಮಕ್ಕಳಿಗೆ ಅದು ತಿಳಿದಿರಬೇಕು, ಹಾಗೂ ರಕ್ತದ ಸಂಭಾವ್ಯ ವೈದ್ಯಕೀಯ ಅಪಾಯಗಳು ನಮ್ಮ ಧಾರ್ಮಿಕ ನಿಲುವಿಗೆ ಹೆಚ್ಚಿನ ಬಲವನ್ನು ಕೊಡುತ್ತದೆ ಎಂಬದು ತಿಳಿದಿರಬೇಕು.
21. (ಎ) ತಮ್ಮ ಮಕ್ಕಳ ಕುರಿತು ಮತ್ತು ರಕ್ತದ ಕುರಿತಾದ ಬೈಬಲಿನ ನೋಟದ ಕುರಿತು ಹೆತ್ತವರು ಏನನ್ನು ಕಲಿಯಬೇಕು? (ಬಿ) ರಕ್ತದ ಸಂಬಂಧದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲರು?
21 ಮಕ್ಕಳು ನಿಮಗಿರುವುದಾದರೆ, ಪೂರಣಗಳ ಕುರಿತಾದ ಬೈಬಲಾಧರಿತ ನಿಲುವನ್ನು ಅವರು ಒಪ್ಪುತ್ತಾರೆ ಮತ್ತು ಅದನ್ನು ವಿವರಿಸಬಲ್ಲರೆಂಬ ಖಾತ್ರಿ ನಿಮಗಿದೆಯೆ? ಈ ನಿಲುವು ದೇವರ ಚಿತ್ತವಾಗಿದೆಯೆಂದು ಅವರು ನಿಜವಾಗಿ ನಂಬುತ್ತಾರೊ? ದೇವರ ನಿಯಮವನ್ನು ಉಲ್ಲಂಘಿಸುವುದು ಎಷ್ಟು ಗಂಭೀರವೆಂದರೆ ಅದು ಒಬ್ಬ ಕ್ರೈಸ್ತನ ನಿತ್ಯಜೀವದ ಪ್ರತೀಕ್ಷೆಯನ್ನು ಅಪಾಯಕ್ಕೆ ಹಾಕ ಸಾಧ್ಯವಿದೆಂದು ಅವರಿಗೆ ಮಂದಟ್ಟಾಗಿದೆಯೆ? ವಿವೇಕವುಳ್ಳ ಹೆತ್ತವರು ತಮ್ಮ ಮಕ್ಕಳೊಂದಿಗೆ, ಅವರು ಅತಿ ಚಿಕ್ಕವರಾಗಿರಲಿ ಅಥವಾ ಪ್ರಾಪ್ತ ವಯಸ್ಕರೆ ಆಗಿರಲಿ, ಈ ವಿಷಯಗಳನ್ನು ಪುನರಾವರ್ತಿಸುತ್ತಾರೆ. ನ್ಯಾಯಾಧೀಶನು ಅಥವಾ ಆಸ್ಪತ್ರೆಯ ಅಧಿಕಾರಿಯು ಹಾಕಬಹುದಾದ ಪ್ರಶ್ನೆಗಳನ್ನು ಪ್ರತಿಯೊಬ್ಬ ಯುವಕನು ಎದುರಿಸುವಂಥ ಪೂರ್ವಾಭಿನಯ (ಪ್ರ್ಯಾಕ್ಟಿಸ್ ಸೆಷನ್ಸ್) ಗಳನ್ನು ಹೆತ್ತವರು ನಡಿಸಬಹುದು. ಆಯ್ದ ನಿಜತ್ವಗಳನ್ನು ಯಾ ಉತ್ತರಗಳನ್ನು ಒಬ್ಬ ಯುವಕನು ಕಂಠಪಾಠ ಮಾಡಿ ಪುನರುಚ್ಚರಿಸುವದು ಇದರ ಗುರಿಯಲ್ಲ. ಅವರು ಏನನ್ನು ನಂಬುತ್ತಾರೊ ಅದನ್ನು ಅವರು ತಿಳಿದಿರುವುದು ಮತ್ತು ಏಕೆ ಎಂದು ತಿಳಿದಿರುವುದು ಹೆಚ್ಚು ಮಹತ್ವದ್ದು. ಒಂದು ಕೋರ್ಟ್ ವಿಚಾರಣೆಯಲ್ಲಿ, ಹೆತ್ತವರು ಅಥವಾ ಇತರರು ರಕ್ತದ ಕುರಿತಾದ ಅಪಾಯಗಳನ್ನು ಮತ್ತು ದೊರೆಯುವ ಅನ್ಯಮಾರ್ಗಗಳ ಔಷಧೋಪಚಾರದ ಮಾಹಿತಿಯನ್ನು ನೀಡಬಹುದಾಗಿದೆ. ಆದರೆ ಒಬ್ಬ ನ್ಯಾಯಾಧೀಶ ಅಥವಾ ಅಧಿಕಾರಿಯು ಮಕ್ಕಳೊಂದಿಗೆ ಮಾತಾಡುವುದರಿಂದ ತಿಳಿಯಲಪೇಕ್ಷಿಸುವ ಸಂಗತಿಯು, ಅವರು ತಮ್ಮ ಪರಿಸ್ಥಿತಿಯನ್ನು ಮತ್ತು ಆಯ್ಕೆಗಳನ್ನು ಪಕ್ವತೆಯಿಂದ ತಿಳಿದಿದ್ದಾರೊ ಇಲ್ಲವೊ ಹಾಗೂ ಅವರಿಗೆ ತಮ್ಮ ಸ್ವಂತ ಮೌಲ್ಯಗಳು ಮತ್ತು ನಿಶಿತ್ಚಾಭಿಪ್ರಾಯಗಳು ಇವೆಯೊ ಇಲ್ಲವೊ ಎಂಬದನ್ನೆ.—2 ಅರಸುಗಳು 5:1-4 ಹೋಲಿಸಿರಿ.
22. ನಾವು ರಕ್ತದ ಕುರಿತು ಬೋಧಿಸಲ್ಪಡುವುದರಿಂದ ಯಾವ ಖಾಯಂ ಫಲಿತಾಂಶಗಳು ಬರಬಲ್ಲವು?
22 ರಕ್ತದ ಕುರಿತಾದ ದೇವರ ನೋಟವನ್ನು ನಾವೆಲ್ಲರೂ ಗಣ್ಯಮಾಡುವ ಮತ್ತು ದೃಢತೆಯಿಂದ ಅಂಟಿಕೊಳ್ಳುವ ಅಗತ್ಯವಿದೆ. ಯೇಸು ಕ್ರಿಸ್ತನು ‘ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ’ ಎಂಬದಾಗಿ ಪ್ರಕಟನೆ 1:5 ವರ್ಣಿಸುತ್ತದೆ. ಯೇಸುವಿನ ರಕ್ತದ ಬೆಲೆಯನ್ನು ಸ್ವೀಕರಿಸುವ ಮೂಲಕ ಮಾತ್ರ ನಮ್ಮ ಪಾಪಗಳಿಗಾಗಿ ಪೂರ್ಣವಾದ ಮತ್ತು ಬಾಳುವ ಕ್ಷಮೆಯನ್ನು ನಾವು ಪಡೆಯಬಲ್ಲೆವು. ರೋಮಾಪುರ 5:9 ಸ್ಪಷ್ಟವಾಗಿಗಿ ಹೇಳುವುದು: “ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವುದು ಮತ್ತೂ ನಿಶ್ಚಯವಲ್ಲವೇ.” ಆದುದರಿಂದ ಈ ವಿಷಯದಲ್ಲಿ ಯೆಹೋವನಿಂದ ಬೋಧಿಸಲ್ಪಡುವುದು ಮತ್ತು ಆತನ ಮಾರ್ಗದಲ್ಲಿ ಸದಾ ನಡೆಯಲು ನಿರ್ಧಾರವನ್ನು ಮಾಡುವುದು ನಮಗೂ ನಮ್ಮ ಮಕ್ಕಳಿಗೂ ಅದೆಷ್ಟು ವಿವೇಕಪ್ರದವು! (w91 6/1)
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಇವರಿಂದ ಪ್ರಕಾಶಿಸಲ್ಪಟ್ಟ, ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೊಷರಿನ ಪುಟ 21-2, 28-31 ನೋಡಿರಿ.
ಬೋಧೆಯ ಮುಖ್ಯ ವಿಷಯಗಳು
▫ ಯೆಹೋವನಿಂದ ಬೋಧಿಸಲ್ಪಡುವ ಕುರಿತು ಯಾವ ನೋಟವು ನಮಗಿರಬೇಕು?
▫ ರಕ್ತದ ಕುರಿತಾದ ದೇವರ ನಿಯಮಕ್ಕೆ ವಿಧೇಯರಾಗುವುದು ಅಷೇಕ್ಟೆ ಮಹತ್ವವು?
▫ ರಕ್ತದ ಕುರಿತಾದ ತಮ್ಮ ನಿಶಿತ್ಚಾಭಿಪ್ರಾಯಗಳನ್ನು ಸ್ಪಷ್ಟವಾಗಿಗಿ ಮತ್ತು ದೃಢವಾಗಿ ವಿವರಿಸಲು ಯುವಕರು ಶಕ್ತರಾಗಬೇಕು ಯಾಕೆ?
▫ ರಕ್ತದ ಕುರಿತಾದ ಯೆಹೋವನ ನಿಯಮದಲ್ಲಿ ಚೆನ್ನಾಗಿ ಬೋಧಿಸಲ್ಪಡಲು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಸಹಾಯ ಮಾಡುವುದು ಹೇಗೆ?
[ಪುಟ 25 ರಲ್ಲಿರುವ ಚೌಕ]
ಕೋರ್ಟು ಪ್ರಭಾವಿತವಾಯಿತು
17ನೆಯ ಪ್ಯಾರಗ್ರಾಫಿನಲ್ಲಿ ತಿಳಿಸಲ್ಪಟ್ಟ ಡಿ.ಪಿ.ಯ ಕುರಿತು ಕೋರ್ಟ್ ನಿರ್ಣಯವು ಏನನ್ನು ತಿಳಿಸಿತು?
“ಈ 14-1⁄2 ವರ್ಷ-ವಯಸ್ಸಿನ ಯುವತಿಯ ಬುದ್ಧಿ, ಸಮಚಿತ್ತ, ಗಾಂಭೀರ್ಯ, ಮತ್ತು ಆವೇಶಪೂರ್ಣತೆಯು ಕೋರ್ಟಿನ ಮೇಲೆ ತುಂಬಾ ಪ್ರಭಾವವನ್ನು ಬೀರಿತ್ತು. ಒಂದು ಮಾರಕವಾದ ಕ್ಯಾನ್ಸರ್ ರೋಗವು ತನಗೆ ತಗಲಿದೆ ಎಂಬ ತಿಳುವಳಿಕೆಯಿಂದ ಆಕೆ ಭಾವಪರವಶಗೊಂಡಿರಬಹುದು. . . . ಆದರೂ, ಕೋರ್ಟಿಗೆ ಸಾಕ್ಷ್ಯ ನೀಡಲು ಬಂದ ಆಕೆಯು ಒಬ್ಬ ಪಕ್ವತೆ ಪಡೆದಿದ್ದ ತರುಣಿಯು. ತನಗೆ ಎದುರಾಗಿರುವ ಕಷ್ಟದ ಕೆಲಸದ ಮೇಲೆ ಆಕೆ ಸ್ಪಷ್ಟವಾಗಿಗಿ ಕೇಂದ್ರೀಕರಿಸಿದ್ದಂತೆ ಕಂಡಳು. ಆಕೆ ಎಲ್ಲಾ ಸಲಹೆ ನೀಡುವ ಸೆಷನ್ಗಳನ್ನು ಹಾಜರಾಗಿದ್ದಳು, ಚಿಕಿತ್ಸೆಯ ಒಂದು ಯೋಜನೆಗೆ ಒಪ್ಪಿದ್ದಳು, ಮನುಷ್ಯ ಜೀವಿಯೋಪಾದಿ ಈ ವೈದ್ಯಕೀಯ ಪಂಥಾಹ್ವಾನವನ್ನು ಎದುರಿಸುವ ವಿಧಾನದ ಸಮನಿತ್ವ ತತ್ವಜ್ಞಾನವನ್ನು ವಿಕಸಿಸಿದ್ದಳು, ಮತ್ತು ಆಕೆ ಒಂದು ಮರ್ಮಭೇದಕ ವಿನಂತಿಯೊಂದಿಗೆ ಕೋರ್ಟಿಗೆ ಬಂದಳು: ನನ್ನ ನಿರ್ಣಯವನ್ನು ಗೌರವಿಸಿರಿ . . .
“ಅವಳ ಪಕ್ವತೆಗೆ ಕೂಡಿಕೆಯಲ್ಲಿ, ಕೋರ್ಟು ಅವಳ ನಿರ್ಣಯವನ್ನು ಗೌರವಿಸಲು ಸಾಕಷ್ಟು ಆಧಾರವನ್ನು ಡಿ.ಪಿ. ವ್ಯಕ್ತಪಡಿಸಿದ್ದಾಳೆ. ರಕ್ತಪೂರಣಗಳು ಕೂಡಿರುವ ಒಂದು ಚಿಕಿತ್ಸಾ ಯೋಜನೆಯಿಂದ ಆಕೆ ಆತ್ಮಿಕವಾಗಿ, ಭಾವನಾತ್ಮಕವಾಗಿ, ನೈತಿಕವಾಗಿ, ಮಾನಸಿಕವಾಗಿ ಅಪಾಯಕ್ಕೊಳಗಾಗುವಳು. ಅವಳ ಚಿಕಿತ್ಸಾ ಯೋಜನೆಯ ಆಯ್ಕೆಯನ್ನು ಕೋರ್ಟು ಗೌರವಿಸುವುದು.”
[ಪುಟ 24 ರಲ್ಲಿರುವ ಚಿತ್ರ]
ಒಬ್ಬ ಕ್ರೈಸ್ತ ಯುವಕನು ನಿಜವಾಗಿ ಏನನ್ನು ನಂಬುತ್ತಾನೆ ಮತ್ತು ಏಕೆ ಎಂಬದನ್ನು ಒಬ್ಬ ನ್ಯಾಯಾಧೀಶನು ಅಥವಾ ಆಸ್ಪತ್ರೆಯ ಮೇಲ್ವಿಚಾರಕನೊಬ್ಬನು ತಿಳಿಯ ಬಯಸಬಹುದು