-
“ಸೈತಾನನ ಅಗಾಧ ವಿಷಯಗಳನ್ನು” ಕಡುವಾಗಿ ಹೇಸುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
15. (ಎ) ಇಸೆಬೆಲಳಿಂದ ಭ್ರಷ್ಟರಾಗದಂತಹವರಿಗೆ ಹೇಳಲು ಯೇಸುವಿನೊಡನೆ ಏನಿತ್ತು? (ಬಿ) ಧರ್ಮಭ್ರಷ್ಟ ಕ್ರೈಸ್ತಪ್ರಪಂಚದಿಂದ ಹಿಂದೆ 1918 ರಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಭ್ರಷ್ಟರಾಗಿರಲಿಲ್ಲ ಎಂದು ಯಾವುದು ತೋರಿಸುತ್ತದೆ?
15 ಯೇಸುವಿನ ಮುಂದಿನ ಮಾತುಗಳು ಸಾಂತ್ವನವನ್ನು ತರುತ್ತವೆ: “ಆದರೂ, ಥುವತೈರದಲ್ಲಿರುವ ಉಳಿದಿರುವವರಾದ ನಿಮಗೆ, ಈ ಬೋಧನೆಯು ಇಲ್ಲದಿರುವ ಎಲ್ಲರಿಗೆ, ‘ಸೈತಾನನ ಅಗಾಧ ವಿಷಯಗಳು,’ ಎಂದು ಅವರು ಹೇಳುವುದನ್ನು ತಿಳಿಯದವರಿಗೂ ನಾನು ಹೇಳುವುದು: ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನೂ ಹಾಕುವುದಿಲ್ಲ. ಹಾಗಿದ್ದರೂ ನಾನು ಬರುವ ತನಕ ನಿಮಗಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.” (ಪ್ರಕಟನೆ 2:24, 25, NW) ಇಸೆಬೆಲಳಿಂದ ಪ್ರಭಾವಿತರಾಗದ ನಂಬಿಗಸ್ತರು ಥುವತೈರದಲ್ಲಿ ಇದ್ದಾರೆ. ತದ್ರೀತಿಯಲ್ಲಿ, 1918 ಕ್ಕಿಂತ ಸುಮಾರು 40 ವರ್ಷಗಳ ಮೊದಲು ಮತ್ತು ಅಂದಿನಿಂದ, ಕ್ರೈಸ್ತಪ್ರಪಂಚದಲ್ಲಿ ವ್ಯಾಪಕವಾಗಿ ಹಬ್ಬಿರುವ ಅನೈತಿಕ, ಭ್ರಷ್ಟ ಮಾರ್ಗಗಳನ್ನು ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಸಹಿಸಿಕೊಂಡಿರುವುದಿಲ್ಲ. ಕ್ರೈಸ್ತಪ್ರಪಂಚದ ಬೋಧನೆಗಳ ಅನೇಕ ಕ್ರೈಸ್ತೇತರ ಮೂಲವನ್ನು ಚರ್ಚ್ ಸದಸ್ಯರು ನೋಡುವಂತೆ ಸಹಾಯ ಮಾಡಿದ, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಬೈಬಲ್ ವಿದ್ಯಾರ್ಥಿಗಳ ಚಿಕ್ಕ ಗುಂಪು, ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೂಲಕ ಪಡೆದಿರುವ ಬ್ಯಾಬಿಲನಿನ ಸಕಲ ನಂಬಿಕೆ ಮತ್ತು ಆಚಾರಗಳನ್ನು ತನ್ನಿಂದ ತೊಲಗಿಸಿ ಬಿಡಲು ಕಾರ್ಯ ನಡೆಸಿದೆ. ಇದರಲ್ಲಿ “ಆ ಸ್ತ್ರೀ ಇಸೆಬೆಲಳ” ಸ್ವೇಚ್ಛಾಚಾರದ ಬೋಧನೆಯು ಸೇರಿದೆ.
16. ಯೇಸು ಮತ್ತು ಮೊದಲನೆಯ ಶತಕದ ಆಡಳಿತ ಮಂಡಲಿಯು ಇನ್ನು ಹೆಚ್ಚಿನ ಭಾರವನ್ನು ಹೊರಿಸಲಿಲ್ಲವಾದರೂ, ಯಾವ ಸಂಗತಿಗಳನ್ನು ಹೋಗಲಾಡಿಸಬೇಕು?
16 ಯೋಹಾನ ವರ್ಗದವರು ಇಂದು ಅವರ ಸಂಗಾತಿಗಳಾದ ಮಹಾ ಸಮೂಹದವರನ್ನು ಸಹ, ಅಧೋಗತಿಗಿಳಿದ ಮನೋರಂಜನೆಯ ಲೋಕದಲ್ಲಿರುವವರ ಅನೈತಿಕ ಪ್ರಭಾವಗಳ ವಿರುದ್ಧ ಜಾಗ್ರತೆಯಿಂದಿರುವಂತೆ ಪ್ರೋತ್ಸಾಹಿಸಿದ್ದಾರೆ. ಕುತೂಹಲದ ಕಾರಣದಿಂದಾಗಲಿ ಯಾ ಯಾವುದನ್ನು ಹೋಗಲಾಡಿಸಬೇಕು ಎಂದು ಕಲಿಯಲಿಕ್ಕಾಗಲಿ, ಭ್ರಷ್ಟತೆಯನ್ನು ವೀಕ್ಷಿಸುವ ಯಾ ಅನುಭವಿಸುವ ಜರೂರಿಯೇನೂ ಇಲ್ಲ. “ಸೈತಾನನ ಅಗಾಧ ವಿಷಯ” ಗಳಿಂದ ಅತಿ ದೂರದಲ್ಲಿ ಇರುವುದು ವಿವೇಕದ ಮಾರ್ಗವಾಗಿರುತ್ತದೆ. ಯೇಸು ಅನ್ನುವಂತೆ: “ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನು ಹಾಕುವುದಿಲ್ಲ.” ಇದು ನಮಗೆ ಮೊದಲನೆಯ ಶತಕದ ಕ್ರೈಸ್ತ ಆಡಳಿತ ಮಂಡಲಿಯ ಅಧಿಕೃತ ಶಾಸನದ ನೆನಪನ್ನು ತರುತ್ತದೆ: “ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ಮತ್ತು ರಕ್ತವನ್ನು ಮತ್ತು ಕುತ್ತಿಗೆ ಹಿಸುಕಿ ಕೊಂದದ್ದನ್ನು ಮತ್ತು ಹಾದರವನ್ನು ವಿಸರ್ಜಿಸುವುದು ಆವಶ್ಯಕವಾಗಿದೆಯೇ ಹೊರತಾಗಿ ನಿಮ್ಮ ಮೇಲೆ ಹೆಚ್ಚಿನ ಭಾರವನ್ನು ಹಾಕಬಾರದೆಂದು ಪವಿತ್ರಾತ್ಮಕ್ಕೂ ಮತ್ತು ಸ್ವತಃ ನಮಗೂ ವಿಹಿತವೆಂದು ತೋರಿತು. ಈ ವಿಷಯಗಳಿಂದ ಜಾಗ್ರತೆಯಿಂದ ನಿಮ್ಮನ್ನು ದೂರವಿರಿಸಿಕೊಂಡರೆ, ನೀವು ಏಳಿಗೆ ಹೊಂದುವಿರಿ.” (ಅ. ಕೃತ್ಯಗಳು 15:28, 29, NW) ಆತ್ಮಿಕ ಏಳಿಗೆಗಾಗಿ, ಸುಳ್ಳು ಧರ್ಮವನ್ನು, ರಕ್ತದ (ರಕ್ತ ಪೂರಣಗಳಲ್ಲಿ) ದುರುಪಯೋಗ, ಮತ್ತು ಅನೈತಿಕತೆಯನ್ನು ಹೋಗಲಾಡಿಸಿರಿ! ಮತ್ತು ನಿಮ್ಮ ಶಾರೀರಿಕ ಆರೋಗ್ಯವು ಕೂಡ ಪ್ರಾಯಶಃ ಸುರಕ್ಷಿತವಾಗಿರುವುದು.
17. (ಎ) ‘ಅಗಾಧ ವಿಷಯಗಳಿಂದ’ ಇಂದು ಜನರನ್ನು ಸೈತಾನನು ಹೇಗೆ ಶೋಧನೆಗೆ ಒಳಪಡಿಸಿದ್ದಾನೆ? (ಬಿ) ಸೈತಾನನ ಭ್ರಾಂತಿಕಾರಕ ಲೋಕದ “ಅಗಾಧ ವಿಷಯಗಳ” ಕಡೆಗೆ ನಮ್ಮ ಮನೋಭಾವ ಏನಾಗಿರತಕ್ಕದ್ದು?
17 ಬುದ್ಧಿಶಕ್ತಿಯನ್ನು ಹೊಗಳುವ ಸಂಕ್ಲಿಷ್ಟಕರವಾದ ಊಹಾಪೋಹಗಳು ಮತ್ತು ತತ್ವಜ್ಞಾನಗಳಂಥಹ ಇತರ “ಅಗಾಧ ವಿಷಯಗಳು” ಇಂದು ಸೈತಾನನ ಹತ್ತಿರ ಇವೆ. ಸ್ವೇಚ್ಛಾಚಾರದ, ಅನೈತಿಕ ತರ್ಕಸರಣಿಗಳ ಜತೆಯಲ್ಲಿ, ಪ್ರೇತವ್ಯವಹಾರವಾದ ಮತ್ತು ವಿಕಾಸವಾದದ ಕಲ್ಪನೆಗಳು ಸೇರಿರುತ್ತವೆ. ಇವೆಲ್ಲಾ “ಅಗಾಧ ವಿಷಯಗಳನ್ನು” ಸರ್ವ-ವಿವೇಕಿ ನಿರ್ಮಾಣಿಕನು ಹೇಗೆ ಲಕ್ಷಿಸುತ್ತಾನೆ? ಅವನು ಹೇಳುವುದನ್ನು ಅಪೊಸ್ತಲ ಪೌಲನು ಉಲ್ಲೇಖಿಸುತ್ತಾನೆ: “ನಾನು ವಿವೇಕಿಗಳ ವಿವೇಕವನ್ನು ನಾಶಮಾಡುವೆನು.” ಇದಕ್ಕೆ ವ್ಯತಿರಿಕ್ತವಾಗಿ, “ದೇವರ ಅಗಾಧ ವಿಷಯಗಳು” ಸರಳವೂ, ಸುಲಭವಾಗಿ ಅರ್ಥೈಸಿಕೊಳ್ಳುವಂತಹವುಗಳೂ ಮತ್ತು ಹೃದಯವನ್ನು ಹುರಿದುಂಬಿಸುವವುಗಳೂ ಆಗಿವೆ. ವಿವೇಕಿಯಾದ ಕ್ರೈಸ್ತರು ಸೈತಾನನ ಭ್ರಾಂತಿಗೊಳಿಸುವ ಲೋಕದ “ಅಗಾಧ ವಿಷಯಗಳನ್ನು” ತ್ಯಜಿಸುತ್ತಾರೆ. ನೆನಪಿನಲ್ಲಿಡಿರಿ, “ಲೋಕವೂ ಮತ್ತು ಅದರೊಂದಿಗೆ ಅದರ ಆಶೆಯೂ ಗತಿಸಿಹೋಗುವುದು, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.”—1 ಕೊರಿಂಥ 1:19, ಕಿಂಗಡಮ್ ಇಂಟರ್‌ಲಿನಿಯರ್; 2:10; 1 ಯೋಹಾನ 2:17, NW.
18. ಕಡೇ ವರೆಗೂ ನಂಬಿಗಸ್ತರಾಗಿ ಉಳಿಯುವ ಅಭಿಷಿಕ್ತ ಕ್ರೈಸ್ತರಿಗೆ ಯೇಸುವು ಯಾವ ಆಶೀರ್ವಾದಗಳನ್ನು ವಾಗ್ದಾನಿಸಿದ್ದಾನೆ, ಮತ್ತು ಅರ್ಮಗೆದೋನಿನಲ್ಲಿ ಪುನರುತ್ಥಾನಗೊಂಡ ಇವರಿಗೆ ಯಾವ ಸುಯೋಗವು ಇರುವುದು?
18 ಥುವತೈರದಲ್ಲಿರುವ ಆ ಕ್ರೈಸ್ತರಿಗೆ, ಈಗ ಯೇಸುವು ಹೃದಯವನ್ನು ಹುರಿದುಂಬಿಸುವ ಮಾತುಗಳನ್ನು ಆಡುತ್ತಾನೆ. ಅವುಗಳು ಇಂದು ಅಭಿಷಿಕ್ತ ಕ್ರೈಸ್ತರನ್ನು ಕೂಡ ಪ್ರೋತ್ಸಾಹಿಸುತ್ತವೆ: “ಮತ್ತು ಜಯಶಾಲಿಯಾಗುವವನಿಗೆ ಮತ್ತು ಕಡೇ ವರೆಗೂ ನನ್ನ ಕೃತ್ಯಗಳನ್ನು ಪಾಲಿಸುವವನಿಗೆ, ನನ್ನ ತಂದೆಯಿಂದ ನಾನು ಪಡೆದಿರುವಂತೆಯೇ, ಜನಾಂಗಗಳ ಮೇಲೆ ನಾನು ಅಧಿಕಾರವನ್ನು ಕೊಡುವೆನು ಮತ್ತು ಅವರು ಮಣ್ಣಿನ ಮಡಿಕೆಗಳೋಪಾದಿ ಚೂರುಚೂರಾಗಿ ಒಡೆಯಲ್ಪಡುವಂತೆ ಅವನು ಕಬ್ಬಿಣದ ಕೋಲಿನಿಂದ ಅವರನ್ನು ಪಾಲಿಸುವನು.” (ಪ್ರಕಟನೆ 2:26, 27, NW) ಖಂಡಿತವಾಗಿಯೂ ಒಂದು ಅದ್ಭುತಕರವಾದ ಸುಯೋಗ! ತಮ್ಮ ಪುನರುತ್ಥಾನದಲ್ಲಿ ಅಭಿಷಿಕ್ತ ಜಯಶಾಲಿಗಳು ಪಡೆಯುವ ಈ ಅಧಿಕಾರವು, ದಂಗೆಕೋರ ಜನಾಂಗಗಳನ್ನು ಅರ್ಮಗೆದೋನ್‌ನಲ್ಲಿ ನಾಶನದ “ಕಬ್ಬಿಣದ ಕೋಲನ್ನು” ಪ್ರಯೋಗಿಸುವುದರಲ್ಲಿ ಯೇಸುವಿನೊಂದಿಗೆ ಅವರು ಪಾಲಿಗರಾಗುವದೇ ಆಗಿರುತ್ತದೆ. ಮಣ್ಣಿನ ಮಡಿಕೆಗಳಂತೆ, ಕ್ರಿಸ್ತನು ಅವನ ಶತ್ರುಗಳನ್ನು ಅರ್ಮಗೆದೋನಿನಲ್ಲಿ ಚೂರುಚೂರು ಮಾಡುವಾಗ, ಆ ಜನಾಂಗಗಳ ಅಣ್ವಸ್ತ್ರಗಳ ಸಿಡಿಮದ್ದುಗಳ ಶಕ್ತಿಯು ಅತಿ ಹೆಚ್ಚೆಂದರೆ, ಒಂದು ಒದ್ದೆಯಾದ ಅಗ್ನಿಯ ಪಟಾಕಿಯಂತೆ ಸಿಡಿಯುವುದು.—ಕೀರ್ತನೆ 2:8, 9; ಪ್ರಕಟನೆ 16:14, 16; 19:11-13, 15, NW.
19. (ಎ) “ಉದಯಸೂಚಕ ನಕ್ಷತ್ರ” ಯಾರು, ಮತ್ತು ಜಯಶಾಲಿಯಾಗುವವರಿಗೆ ಅವನು ಹೇಗೆ ಕೊಡಲ್ಪಡುವನು? (ಬಿ) ಮಹಾ ಸಮೂಹಕ್ಕೆ ಯಾವ ಪ್ರೋತ್ಸಾಹನೆಯು ಕೊಡಲ್ಪಡುತ್ತದೆ?
19 ಯೇಸುವು ಕೂಡಿಸುವುದು: “ಮತ್ತು ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ಕೊಡುವೆನು.” (ಪ್ರಕಟನೆ 2:28, NW) ಈ ನಕ್ಷತ್ರ ಏನೆಂದು ಯೇಸುವು ಆ ಬಳಿಕ ತಾನಾಗಿಯೇ, ಹೀಗನ್ನುತ್ತಾ ವಿವರಿಸುತ್ತಾನೆ: “ನಾನು ದಾವೀದನ ಬುಡವೂ ಮತ್ತು ವಂಶವೂ ಮತ್ತು ಪ್ರಕಾಶವುಳ್ಳ ಉದಯಸೂಚಕ ನಕ್ಷತ್ರವೂ ಆಗಿದ್ದೇನೆ.” (ಪ್ರಕಟನೆ 22:16) ಹೌದು, ಬಿಳಾಮನ ಇಚ್ಛೆಯಿಲ್ಲದ ತುಟಿಗಳಿಂದ ಯೆಹೋವನು ಬಲಾತ್ಕರಿಸಿ ನುಡಿಸಿದ ಪ್ರವಾದನೆಯ ನೆರವೇರಿಕೆಯನ್ನು ಯೇಸುವು ತಾನೇ ಮಾಡುತ್ತಾನೆ: “ಯಾಕೋಬ ವಂಶದವರಲ್ಲಿ ನಕ್ಷತ್ರ ಪ್ರಾಯನೊಬ್ಬನು ಉದಯಿಸಿದ್ದಾನೆ; ಇಸ್ರಾಯೇಲ್ಯರಲ್ಲಿ ರಾಜದಂಡ ಹಿಡಿದವನು ಕಂಡುಬಂದಿದ್ದಾನೆ.” (ಅರಣ್ಯಕಾಂಡ 24:17) ಜಯಶಾಲಿಗಳಾಗುವವರಿಗೆ ಯೇಸುವು “ಉದಯಸೂಚಕ ನಕ್ಷತ್ರವನ್ನು” ಹೇಗೆ ಕೊಡುವನು? ಅವರಿಗಾಗಿ ತನ್ನನ್ನು ನೀಡಿಕೊಳ್ಳುವುದರ ಮೂಲಕ, ಅವರನ್ನು ಆತನ ಅತಿ ನಿಕಟದ, ಅತಿ ಆಪ್ತ ಸಂಬಂಧದೊಳಗೆ ತೆಗೆದುಕೊಳ್ಳುವುದರ ಮೂಲಕವೇ ಎಂದು ಸಾಬೀತಾಗುತ್ತದೆ. (ಯೋಹಾನ 14:2, 3) ಖಂಡಿತವಾಗಿಯೂ ತಾಳಿಕೊಳ್ಳಲು ಒಂದು ಬಲಾಢ್ಯ ಉತ್ತೇಜಕ! ಇಲ್ಲಿ ಭೂಮಿಯ ಮೇಲೆ ಪ್ರಮೋದವನವನ್ನು ಸ್ಥಾಪಿಸುವುದರಲ್ಲಿ “ಪ್ರಕಾಶವುಳ್ಳ ಉದಯಸೂಚಕ ನಕ್ಷತ್ರ” ಬಲುಬೇಗನೇ ತನ್ನ ರಾಜ್ಯ ಅಧಿಕಾರವನ್ನು ಚಲಾಯಿಸಲಿದ್ದಾನೆ ಎಂಬುದನ್ನು ತಿಳಿಯುವುದು ಮಹಾ ಸಮೂಹದವರಿಗೂ ಕೂಡ ಒಂದು ಪ್ರೇರಕವಾಗಿರುತ್ತದೆ!
ಸಮಗ್ರತೆಯನ್ನು ಕಾಪಾಡಿರಿ
20. ಕ್ರೈಸ್ತಪ್ರಪಂಚದಲ್ಲಿನ ಯಾವ ಬೆಳವಣಿಗೆಗಳು ಥುವತೈರದ ಸಭೆಯಲ್ಲಿರುವ ಕೆಲವು ನಿರ್ಬಲತೆಗಳನ್ನು ನಮ್ಮ ನೆನಪಿಗೆ ತರುತ್ತವೆ?
20 ಈ ಸಂದೇಶವು ಥುವತೈರದಲ್ಲಿರುವ ಕ್ರೈಸ್ತರನ್ನು ಬಹಳವಾಗಿ ಪ್ರೋತ್ಸಾಹಿಸಿರಬೇಕು. ಕೇವಲ ಭಾವಿಸಿಕೊಳ್ಳಿರಿ—ಪರಲೋಕದಲ್ಲಿರುವ ಮಹಿಮಾಭರಿತ ದೇವರ ಕುಮಾರನು ಅವರ ಕೆಲವು ಸಮಸ್ಯೆಗಳ ಕುರಿತಾಗಿ ಥುವತೈರದಲ್ಲಿರುವ ಕ್ರೈಸ್ತರಿಗೆ ವೈಯಕ್ತಿಕವಾಗಿ ಮಾತಾಡಿದನು! ಖಂಡಿತವಾಗಿಯೂ, ಸಭೆಯಲ್ಲಿರುವ ಕೆಲವರಾದರೂ ಅಂತಹ ಪ್ರೀತಿಯ ಕುರಿಪಾಲನೆಗೆ ಪ್ರತಿವರ್ತನೆ ತೋರಿಸಿದ್ದಿರಬೇಕು. ಏಳು ಸಂದೇಶಗಳಲ್ಲಿ ಅತಿ ಉದ್ದವಾದ ಇದು ಇಂದು ನಿಜ ಕ್ರೈಸ್ತ ಸಭೆಯನ್ನು ಗುರುತಿಸಲು ಕೂಡ ನಮಗೆ ಸಹಾಯ ನೀಡುತ್ತದೆ. ನ್ಯಾಯತೀರ್ಪಿಗಾಗಿ ಯೆಹೋವನ ದೇವಾಲಯಕ್ಕೆ ಯೇಸುವು 1918 ರಲ್ಲಿ ಬಂದಾಗ, ಕ್ರೈಸ್ತರೆಂದು ಹೇಳಿಕೊಳ್ಳುವ ಅಧಿಕ ಸಂಖ್ಯಾತ ಸಂಸ್ಥೆಗಳು ವಿಗ್ರಹಾರಾಧನೆಯಿಂದ ಮತ್ತು ಆತ್ಮಿಕ ಅನೈತಿಕತೆಯಿಂದ ಮಲಿನಗೊಂಡಿದ್ದವು. (ಯಾಕೋಬ 4:4) ಕೆಲವರು ಸೆವೆಂತ್ ಡೇ ಆ್ಯಡ್ವೆಂಟಿಸ್ಚ್‌ರ ಎಲನ್ ವೈಟ್ ಮತ್ತು ಕ್ರಿಶ್ಚಿಯನ್ ಸಯಂಟಿಸ್ಟರ ಮೇರಿ ಬೇಕರ್ ಎಡಿಯವರಂತಹ 19 ನೆಯ ಶತಕದ ಗಡಸುಮನಸ್ಸಿನ ಸ್ತ್ರೀಯರ ಬೋಧನೆಗಳ ಮೇಲೆ ತಮ್ಮ ನಂಬಿಕೆಯನ್ನು ಆಧರಿಸಿದರು ಮತ್ತು ಇತ್ತೇಚೆಗೆ ಉಪದೇಶ ವೇದಿಕೆಯಿಂದ ಅನೇಕ ಸ್ತ್ರೀಯರು ಸಾರುತ್ತಾ ಇದ್ದಾರೆ. (1 ತಿಮೊಥೆಯ 2:11, 12ರ ವ್ಯತ್ಯಾಸವನ್ನು ನೋಡಿರಿ.) ಕ್ಯಾತೊಲಿಕ್ ಧರ್ಮದ ಭಿನ್ನ ರೂಪಗಳಲ್ಲಿ, ದೇವರನ್ನು ಮತ್ತು ಕ್ರಿಸ್ತನನ್ನು ಮೀರಿ ಆಗಾಗ್ಗೆ ಮರಿಯಳನ್ನು ಗೌರವಿಸಲಾಗುತ್ತದೆ. ಯೇಸುವು ಅವಳನ್ನು ಆ ರೀತಿಯಲ್ಲಿ ಗೌರವಿಸಲಿಲ್ಲ. (ಯೋಹಾನ 2:4; 19:26) ಅಂತಹ ಕಾನೂನುವಿಹಿತವಲ್ಲದ ಸ್ತ್ರೀ ಪ್ರಭಾವವನ್ನು ಒಪ್ಪುವಂತಹ ಸಂಸ್ಥೆಗಳು ನಿಜವಾಗಿಯೂ ಕ್ರಿಸ್ತೀಯವೆಂದು ಸ್ವೀಕರಿಸಲ್ಪಡಸಾಧ್ಯವೂ?
21. ಥುವತೈರಕ್ಕೆ ಯೇಸುವಿನ ಸಂದೇಶದಲ್ಲಿ ಪ್ರತಿಯೊಬ್ಬನಿಗೆ ಯಾವ ಪಾಠಗಳು ಇವೆ?
21 ಯೋಹಾನ ವರ್ಗದವರಾಗಿರಲಿ ಬೇರೆ ಕುರಿಗಳವರಾಗಿರಲಿ, ಕ್ರೈಸ್ತರು ಪ್ರತಿಯೊಬ್ಬರಾಗಿ ಈ ಸಂದೇಶವನ್ನು ಗಮನಿಸುವುದರಿಂದ ಒಳ್ಳೆಯದನ್ನು ಮಾಡುವರು. (ಯೋಹಾನ 10:16) ಥುವತೈರದ ಇಸೆಬೆಲಳ ಶಿಷ್ಯರು ಮಾಡಿದಂತೆಯೇ, ಕೆಲವರು ಸುಲಭವಾದ ಮಾರ್ಗಕ್ರಮವನ್ನು ಹಿಂಬಾಲಿಸುವುದು ಒಳ್ಳೆಯದು ಎಂಬ ಶೋಧನೆಗೆ ಬೀಳಬಹುದು. ಒಪ್ಪಂದ ಮಾಡಿಕೊಳ್ಳುವ ಶೋಧನೆಯೂ ಕೂಡ ಇದೆ. ಇಂದು ರಕ್ತದ ಉತ್ಪಾದನೆಗಳನ್ನು ತಿನ್ನುವ ಯಾ ರಕ್ತ ಪೂರಣಗಳನ್ನು ಸ್ವೀಕರಿಸುವ ವಿವಾದಾಂಶಗಳನ್ನು ಎದುರಿಸಲೇಬೇಕು. ಕ್ಷೇತ್ರ ಸೇವೆಯಲ್ಲಿ ಹುರುಪುಳ್ಳವರಾಗುವುದು ಯಾ ಭಾಷಣಗಳನ್ನು ನೀಡುವುದು, ಹಿಂಸಾತ್ಮಕ ಮತ್ತು ಅನೈತಿಕ ಚಲನ ಚಿತ್ರಗಳನ್ನು ಮತ್ತು ವಿಡಿಯೋ ಟೇಪ್‌ಗಳನ್ನು ನೋಡುವಂತಹ ಮತ್ತು ಮದ್ಯಪಾನ ಮಾಡುವುದರಲ್ಲಿ ಸ್ವೇಚ್ಛಾಚಾರಿಗಳಾಗಿರುವಂತಹ ಇತರ ಕ್ಷೇತ್ರಗಳಲ್ಲಿ ಸ್ವಲ್ಪ ಕಡಿಮೆ ಕಟ್ಟುನಿಟ್ಟಾಗಿರಲು ಹಕ್ಕನ್ನು ಕೊಡುತ್ತದೆಂದು ಕೆಲವರು ಭಾವಿಸಬಹುದು. ಅಂತಹ ವಿಷಯಗಳಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸಕೂಡದು ಎಂದು ಥುವತೈರದಲ್ಲಿರುವ ಕ್ರೈಸ್ತರಿಗೆ ಕೊಡಲ್ಪಟ್ಟ ಯೇಸುವಿನ ಎಚ್ಚರಿಕೆಯು ನಮಗೆ ಹೇಳುತ್ತದೆ. ನಾವು ಶುದ್ಧರಾಗಿಯೂ, ಥುವತೈರದಲ್ಲಿ ಹೆಚ್ಚಿನ ಕ್ರೈಸ್ತರು ಇದ್ದಂತೆ ವಿಭಾಗಿತರಾಗಿರದೆ ಪೂರ್ಣಾತ್ಮದವರಾಗಿಯೂ ಇರುವಂತೆ ಯೆಹೋವನು ಬಯಸುತ್ತಾನೆ.
22. ಆಲಿಸುವ ಕಿವಿಯಿರುವ ಪ್ರಾಮುಖ್ಯಯನ್ನು ಯೇಸು ಹೇಗೆ ಒತ್ತಿ ಹೇಳುತ್ತಾನೆ?
22 ಕೊನೆಗೆ, ಯೇಸುವು ಘೋಷಿಸುವುದು: “ಆತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.” (ಪ್ರಕಟನೆ 2:29, NW) ನಾಲ್ಕನೆಯ ಬಾರಿಗೆ ಈ ಹುರಿದುಂಬಿಸುವ ಕೊನೆಯ ಪಲ್ಲವಿಯನ್ನು ಯೇಸುವು ಪುನರಾವರ್ತಿಸುತ್ತಾನೆ, ಮತ್ತು ಇದು ಬರಲಿರುವ ಉಳಿದ ಮೂರು ಸಂದೇಶಗಳನ್ನು ಮುಕ್ತಾಯಗೊಳಿಸುವುದು. ನಿಮ್ಮ ಹತ್ತಿರ ಆ ಪ್ರತಿವರ್ತನೆ ತೋರಿಸುವ ಕಿವಿ ಇದೆಯೋ? ಹಾಗಿದ್ದರೆ, ದೇವರು ತನ್ನಾತ್ಮದಿಂದ ತನ್ನ ಮಾಧ್ಯಮದ ಮೂಲಕ ಬುದ್ಧಿವಾದವನ್ನು ಒದಗಿಸುತ್ತಿರುವಾಗ ಶೃದ್ಧಾಪೂರ್ವಕವಾಗಿ ಕೇಳುತ್ತಾ ಇರ್ರಿ.
-
-
ನಿಮ್ಮ ಹೆಸರು ಜೀವದ ಪುಸ್ತಕದಲ್ಲಿ ಇದೆಯೋ?ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
1. ಸಾರ್ದಿಸಿನಲ್ಲಿರುವ ಸಭೆಯ ಆತ್ಮಿಕ ಸ್ಥಿತಿಯು ಏನಾಗಿದೆ, ಮತ್ತು ಯೇಸುವು ತನ್ನ ಸಂದೇಶವನ್ನು ಹೇಗೆ ಆರಂಭಿಸುತ್ತಾನೆ?
ಆಧುನಿಕ ಆಕಿಸಾರದಿಂದ (ಥುವತೈರ) ಸುಮಾರು 30 ಮೈಲು ದಕ್ಷಿಣಕ್ಕೆ ಮಹಿಮಾಭರಿತ ಯೇಸುವಿನಿಂದ ಸಂದೇಶವೊಂದನ್ನು ಪಡೆಯುವ ಮುಂದಿನ ಸಭೆಯ ನಿವೇಶನವು ಇದೆ: ಸಾರ್ದಿಸ್. ನಮ್ಮ ಸಾಮಾನ್ಯ ಶಕದ ಆರನೆಯ ಶತಮಾನದ ಮೊದಲು ಈ ನಗರವು ಲಿಡಿಯ ಎಂಬ ಪ್ರಾಚೀನ ರಾಜ್ಯದ ಪ್ರತಿಷ್ಠೆಯ ರಾಜಧಾನಿಯಾಗಿತ್ತು ಮತ್ತು ಅಪರಿಮಿತ ಐಶ್ವರ್ಯವಂತ ಅರಸ ಕ್ರೀಸಸನ ಪೀಠವಾಗಿತ್ತು. ಯೋಹಾನನ ದಿನಗಳೊಳಗೆ, ಅದು ಕಷ್ಟದ ಸಮಯಗಳಿಗೆ ತುತ್ತಾಗಿತ್ತು, ಮತ್ತು ಕ್ರೀಸಸನ ಕೆಳಗಿದ್ದ ಅದರ ಗತಕಾಲದ ವೈಭವವು ಕೇವಲ ಇತಿಹಾಸವಾಯಿತು. ತದ್ರೀತಿಯಲ್ಲಿ, ಅಲ್ಲಿದ್ದ ಕ್ರೈಸ್ತ ಸಭೆಯು ಆತ್ಮಿಕವಾಗಿ ಶಕ್ತಿಹೀನವಾಗಿತ್ತು. ಮೊತ್ತಮೊದಲ ಬಾರಿಗೆ, ಯೇಸುವು ತನ್ನ ಸಂದೇಶವನ್ನು ಶ್ಲಾಘನೆಯ ಮಾತಿನೊಂದಿಗೆ ಆರಂಭಿಸುವುದಿಲ್ಲ. ಅದಕ್ಕೆ ಬದಲಾಗಿ, ಅವನನ್ನುವುದು: “ಮತ್ತು ಸಾರ್ದಿಸಿನ ಸಭೆಯ ದೂತನಿಗೆ ಬರೆ: ದೇವರ ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳು ಉಳ್ಳಾತನು ಈ ವಿಷಯಗಳನ್ನು ಹೇಳುತ್ತಾನೆ, ‘ನಿನ್ನ ಕೃತ್ಯಗಳನ್ನು ನಾನು ಬಲ್ಲೆನು, ಜೀವಂತನಾಗಿದ್ದೀ ಎಂದು ಹೆಸರು ನಿನಗೆ ಇದೆ, ಆದರೆ ನೀನು ಸತ್ತವನಾಗಿದ್ದೀ.’”—ಪ್ರಕಟನೆ 3:1, NW.
2. (ಎ) ಯೇಸುವಿಗೆ “ಏಳು ಆತ್ಮಗಳು” ಇರುವುದು ಸಾರ್ದಿಸಿನಲ್ಲಿರುವ ಕ್ರೈಸ್ತರಿಗೆ ಯಾವ ಸೂಚಿತಾರ್ಥದಲ್ಲಿತ್ತು? (ಬಿ) ಸಾರ್ದಿಸ್ ಸಭೆಗೆ ಯಾವ ಖ್ಯಾತಿ ಇತ್ತು, ಆದರೆ ವಾಸ್ತವಾಂಶಗಳೇನಾಗಿದ್ದವು?
2 ಯೇಸುವು ತನ್ನನ್ನು “ಏಳು ಆತ್ಮಗಳು ಉಳ್ಳಾತನು” ಎಂದು ಯಾಕೆ ಗುರುತಿಸಿಕೊಳ್ಳುತ್ತಾನೆ? ಯಾಕಂದರೆ ಈ ಆತ್ಮಗಳು ಪೂರ್ಣತೆಯೊಂದಿಗೆ ಹರಿಯುವ ಯೆಹೋವನ ಆತ್ಮವನ್ನು ಪ್ರತಿನಿಧಿಸುತ್ತವೆ. ಅನಂತರ, ಯೋಹಾನನು ಅವುಗಳನ್ನು “ಏಳು ಕಣ್ಣುಗಳು” ಎಂದು ಕೂಡ ವರ್ಣಿಸುತ್ತಾನೆ, ದೇವರ ಪವಿತ್ರಾತ್ಮವು ಯೇಸುವಿಗೆ ಕೊಡುವ ಭೇದಿಸುವ ದೃಷ್ಟಿಯನ್ನು ಇದು ಸೂಚಿಸುತ್ತದೆ. (ಪ್ರಕಟನೆ 5:6) ಈ ರೀತಿಯಲ್ಲಿ, ಅವನು ಅಸ್ತಿತ್ವದಲ್ಲಿರುವ ಯಾವುದೇ ಸನ್ನಿವೇಶವನ್ನು ಹೊರಗೆಡಹಲು ಮತ್ತು ನಿರ್ವಹಿಸಲು ಶಕ್ತನಾಗಿರುತ್ತಾನೆ. (ಮತ್ತಾಯ 10:26; 1 ಕೊರಿಂಥ 4:5) ಸಾರ್ದಿಸಿನಲ್ಲಿರುವ ಸಭೆಯು ಜೀವಂತವಾಗಿದೆ, ಸಕ್ರಿಯವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆದರೆ ಅದು ಆತ್ಮಿಕವಾಗಿ ಸತ್ತಿರುವುದನ್ನು ಯೇಸುವು ಕಾಣಶಕ್ತನಾಗುತ್ತಾನೆ. ಕ್ರೈಸ್ತರಾಗುವ ಮುಂಚೆ, ಅವರ ಸ್ಥಿತಿಯು ಹೇಗಿತ್ತೋ, ತದ್ರೀತಿಯ ಜಡತೆಯ ಭಾವಕ್ಕೆ ಅದರ ಹೆಚ್ಚಿನ ಸದಸ್ಯರು ಹಿಂದೆರಳಿದ್ದರೆಂದು ಸಾಬೀತಾಗುತ್ತದೆ.—ಹೋಲಿಸಿರಿ ಎಫೆಸ 2:1-3; ಇಬ್ರಿಯ 5:11-14.
3. (ಎ) “ಸಾರ್ದಿಸಿನ ಸಭೆಯ ದೂತನು” ಯೇಸುವಿಗೆ “ಏಳು ನಕ್ಷತ್ರಗಳು” ಇರುವುದರ ಕಡೆಗೆ ವಿಶೇಷ ಗಮನವನ್ನು ಯಾಕೆ ಕೊಡತಕ್ಕದ್ದು? (ಬಿ) ಸಾರ್ದಿಸಿನಲ್ಲಿರುವ ಸಭೆಗೆ ಯೇಸುವು ಯಾವ ಬಲವಾದ ಬುದ್ಧಿವಾದವನ್ನು ಕೊಟ್ಟನು?
3 ಯೇಸುವು “ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ” ಇದನ್ನೂ ನೆನಪಿಸುತ್ತಾನೆ, ಏನಂದರೆ ಅವನು “ಏಳು ನಕ್ಷತ್ರಗಳು” ಉಳ್ಳಾತನು ಆಗಿದ್ದಾನೆ. ಅವನು ತನ್ನ ಬಲಗೈಯಲ್ಲಿ ಸಭೆಯ ಹಿರಿಯರುಗಳನ್ನು ಎತ್ತಿ ಹಿಡಿದಿರುತ್ತಾನೆ, ಹೀಗೆ ಅವರ ಕುರಿಪಾಲನಾ ಕೆಲಸದಲ್ಲಿ ಅವರನ್ನು ಮಾರ್ಗದರ್ಶಿಸಲು ಅವನಿಗೆ ಅಧಿಕಾರವಿರುವುದು. ಅವರು ತಮ್ಮ ಹೃದಯಗಳನ್ನು ‘ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಳ್ಳುವುದರ’ ಮೇಲೆ ಇಡತಕ್ಕದ್ದು. (ಜ್ಞಾನೋಕ್ತಿ 27:23) ಆದಕಾರಣ, ಯೇಸುವಿನ ಮುಂದಿನ ಮಾತುಗಳನ್ನು ಅವರು ಜಾಗ್ರತೆಯಿಂದ ಕೇಳುವುದು ಉತ್ತಮ: “ಎಚ್ಚರವಾಗು, ಮತ್ತು ಸಾಯಲು ಸಿದ್ಧವಾಗಿದ್ದ ಉಳಿದಿರುವ ಸಂಗತಿಗಳನ್ನು ಬಲಪಡಿಸು, ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ಸಂಪೂರ್ಣವಾಗಿ ಮಾಡಲ್ಪಟ್ಟದ್ದನ್ನು ನಾನು ನೋಡಿಲ್ಲ. ಆದಕಾರಣ, ನೀನು ಹೇಗೆ ಪಡೆದಿದ್ದಿಯೋ ಮತ್ತು ಹೇಗೆ ನೀನು ಕೇಳಿದಿಯೋ ಎಂಬುದರ ವಿಷಯದಲ್ಲಿ ಲಕ್ಷ್ಯವಿಡುತ್ತಾ ಮುಂದುವರಿ, ಮತ್ತು ಅನುಸರಿಸುತ್ತಾ ಹೋಗು, ಮತ್ತು ಪಶ್ಚಾತ್ತಾಪ ಪಡು. ನಿಶ್ಚಯವಾಗಿಯೂ ನೀನು ಎಚ್ಚರಗೊಳ್ಳದ್ದಿದರೆ ನಾನು ಒಬ್ಬ ಕಳ್ಳನೋಪಾದಿ ಬರುವೆನು, ಮತ್ತು ನಾನು ನಿನ್ನ ಮೇಲೆ ಯಾವ ತಾಸಿನಲ್ಲಿ ಬರುವೆನೆಂದು ನಿನಗೆ ತಿಳಿಯುವದೇ ಇಲ್ಲ.”—ಪ್ರಕಟನೆ 3:2, 3, NW.
4. ಪೇತ್ರನ ಮಾತುಗಳು ಸಾರ್ದಿಸಿನಲ್ಲಿರುವ ಸಭೆಗೆ “ಉಳಿದಿರುವ ವಿಷಯಗಳನ್ನು ದೃಢಪಡಿಸಲು” ಹೇಗೆ ಸಹಾಯ ನೀಡಬಲ್ಲವು?
4 ಸಾರ್ದಿಸಿನಲ್ಲಿರುವ ಹಿರಿಯರು, ಸತ್ಯವನ್ನು ಕಲಿತಾಗ ಅವರಿಗೆ ಮೊದಲು ಇದ್ದ ಸಂತೋಷವನ್ನು ಮತ್ತು ಆಗ ಲಭಿಸಿದ ಆಶೀರ್ವಾದಗಳನ್ನು ನೆನಪಿಸಿಕೊಳ್ಳುವ ಅಗತ್ಯವಿತ್ತು. ಆದರೆ ಅವರ ಆತ್ಮಿಕ ಚಟುವಟಿಕೆಯ ಸಂಬಂಧದಲ್ಲಿ ಈಗ ಅವರು ಸತ್ತವರಾಗಿದ್ದಾರೆ. ನಂಬಿಕೆಯ ಕೆಲಸಗಳ ಕೊರತೆಯ ಕಾರಣ, ಅವರ ಸಭಾ ದೀಪವು ಮಿನುಗುತ್ತಾ ಇದೆ. ವರ್ಷಗಳಿಗೆ ಮೊದಲು ಅಪೊಸ್ತಲ ಪೇತ್ರನು ಕ್ರೈಸ್ತರು ಅಂಗೀಕರಿಸಿದ್ದ ಮತ್ತು “ಪರಲೋಕದಿಂದ ಪವಿತ್ರಾತ್ಮದೊಂದಿಗೆ ಕಳುಹಿಸಲ್ಪಟ್ಟು”—ಯೋಹಾನನ ದರ್ಶನದಲ್ಲಿ ಏಳು ಆತ್ಮಗಳಿಂದ ಅದು ಪ್ರತಿನಿಧಿಸಲ್ಪಟ್ಟಿದೆ—ಸಾರಲಾಗಿದ್ದ ಮಹಿಮಾಭರಿತ ಸುವಾರ್ತೆಗಾಗಿ ಗಣ್ಯತೆಯನ್ನು ಹೆಚ್ಚಿಸಲು ಏಷಿಯದ ಸಭೆಗಳಿಗೆ (ಪ್ರಾಯಶಃ ಸಾರ್ದಿಸನ್ನೂ ಸೇರಿಸಿ) ಬರೆದನು. ಏಷಿಯದಲ್ಲಿರುವ ಕ್ರೈಸ್ತರಿಗೆ, ಅವರು ‘ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಅವರನ್ನು ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಮೀಸಲಾದ ಜನವೂ, ದೇವರ ಸ್ವಕೀಯ ಪ್ರಜೆಯೂ’ ಆಗಿದ್ದಾರೆ ಎಂದು ಪೇತ್ರನು ಜ್ಞಾಪಿಸುತ್ತಾನೆ. (1 ಪೇತ್ರ 1:12, 25; 2:9) ಅಂತಹ ಆತ್ಮಿಕ ಸತ್ಯತೆಗಳ ಮೇಲೆ ಧ್ಯಾನಿಸುವುದರ ಮೂಲಕ ಸಾರ್ದಿಸಿನಲ್ಲಿರುವ ಸಭೆಗೆ ಪಶ್ಚಾತ್ತಾಪ ಪಡಲು ಮತ್ತು “ಉಳಿದಿರುವ ಸಂಗತಿಗಳನ್ನು ಬಲ” ಪಡಿಸಲು ಸಹಾಯವಾಗುತ್ತದೆ.—2 ಪೇತ್ರ 3:9 ಹೋಲಿಸಿರಿ.
5. (ಎ) ಸಾರ್ದಿಸಿನಲ್ಲಿರುವ ಕ್ರೈಸ್ತರ ಗಣ್ಯತೆಗೆ ಏನು ಸಂಭವಿಸಿತು? (ಬಿ) ಯೇಸುವಿನ ಬುದ್ಧಿವಾದಕ್ಕೆ ಸಾರ್ದಿಸಿನ ಕ್ರೈಸ್ತರು ಪ್ರತಿವರ್ತನೆ ತೋರಿಸದಿರುವಲ್ಲಿ ಏನು ಸಂಭವಿಸಲಿರುವುದು?
5 ಪ್ರಸ್ತುತದಲ್ಲಿ, ಸತ್ಯದ ಕಡೆಗಿನ ಅವರ ಗಣ್ಯತೆ ಮತ್ತು ಪ್ರೀತಿಯು ಅಧಿಕಾಂಶ ಆರಿಹೋಗಿರುವಂತಹ ಒಂದು ಬೆಂಕಿಗೆ ಸಮಾನವಾಗಿದೆ. ಕೇವಲ ಕೆಲವೇ ಸಣ್ಣ ಕೆಂಡಗಳು ಪ್ರಕಾಶ ಕೊಡುತ್ತವೆ. ಆ ಕಿಡಿಗೆ ಗಾಳಿಹಾಕಿ, ಬೆಂಕಿಯುರಿಯುವಂತೆ, ಅವರ ನಿರ್ಲಕ್ಷ್ಯವು ಅವರನ್ನು ಯಾವ ಪಾಪಗಳಿಗೆ ನಡಿಸಿತೋ ಅವುಗಳಿಗೆ ಪಶ್ಚಾತ್ತಾಪ ಪಡುವಂತೆ ಮತ್ತು ಪುನಃ ಒಮ್ಮೆ ಆತ್ಮಿಕವಾಗಿ ಜೀವಂತವಾಗಿರುವ ಒಂದು ಸಭೆಯಾಗುವಂತೆ ಯೇಸುವು ಪ್ರೋತ್ಸಾಹಿಸುತ್ತಾನೆ. (2 ತಿಮೊಥೆಯ 1:6, 7 ಹೋಲಿಸಿರಿ.) ಇಲ್ಲದ್ದಿದರೆ ಯೇಸು ಅನಿರೀಕ್ಷಿತವಾಗಿ—“ಒಬ್ಬ ಕಳ್ಳನೋಪಾದಿ”—ನ್ಯಾಯದಂಡನೆಯನ್ನು ವಿಧಿಸಲು ಬರುವಾಗ, ಸಾರ್ದಿಸಿನಲ್ಲಿರುವ ಸಭೆಯು ಅಸಜ್ಜಿತವಾಗಿರುವುದು.—ಮತ್ತಾಯ 24:43, 44.
-