ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನ ದಿವ್ಯ ಸಿಂಹಾಸನದ ಶೋಭೆ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 23. ನಾಲ್ಕು ಜೀವಿಗಳು “ಕಣ್ಣುಗಳಿಂದ ತುಂಬಿವೆ” ಎಂಬ ವಾಸ್ತವಾಂಶದಿಂದ ಏನು ಸಾಂಕೇತಿಸಲ್ಪಡುತ್ತದೆ, ಮತ್ತು ಅವುಗಳಿಗೆ ಮೂರು ಜೋಡಿ ರೆಕ್ಕೆಗಳು ಇದ್ದವು ಎನ್ನುವುದರಿಂದ ಯಾವುದಕ್ಕೆ ಒತ್ತು ಹಾಕಲಾಗುತ್ತದೆ?

      23 ಯೋಹಾನನು ತನ್ನ ವರ್ಣನೆಯನ್ನು ಮುಂದರಿಸುತ್ತಾನೆ: “ಮತ್ತು ಆ ನಾಲ್ಕು ಜೀವಿಗಳ ಕುರಿತು, ಅವುಗಳಲ್ಲಿ ಪ್ರತಿಯೊಂದಕ್ಕೆ ಆರಾರು ರೆಕ್ಕೆಗಳಿವೆ; ಸುತ್ತ ಮತ್ತು ಕೆಳಗಡೆ ಅವುಗಳು ಕಣ್ಣುಗಳಿಂದ ತುಂಬಿವೆ. ಮತ್ತು ಅವುಗಳು ‘ಇದ್ದಾತನೂ ಇರುವಾತನೂ ಬರುವಾತನೂ ಸರ್ವಶಕ್ತನೂ ಆದ ಯೆಹೋವ ದೇವರು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು’ ಎಂದು ಹೇಳುವಾಗ ಅವುಗಳಿಗೆ ಹಗಲಿರುಳು ವಿಶ್ರಾಂತಿಯೇ ಇಲ್ಲ.” (ಪ್ರಕಟನೆ 4:8, NW) ಈ ಕಣ್ಣುಗಳ ತುಂಬಿರುವಿಕೆಯು ಸಂಪೂರ್ಣವಾದ ಮತ್ತು ದೂರ ದೃಷ್ಟಿಯ ದೃಷ್ಟಿವ್ಯಾಪ್ತಿಯನ್ನು ಸೂಚಿಸುತ್ತದೆ. ಅವುಗಳಿಗೆ ನಿದ್ರೆಯ ಆವಶ್ಯಕತೆ ಇಲ್ಲದಿರುವುದರಿಂದ, ನಾಲ್ಕು ಜೀವಿಗಳು ಇದನ್ನು ಎಡೆಬಿಡದೆ ಬಳಸುತ್ತವೆ. ಯಾರ ಕುರಿತು ಇದನ್ನು ಬರೆಯಲಾಗಿದೆಯೋ, ಅವನನ್ನು ಅವರು ಅನುಕರಿಸುತ್ತಾರೆ: “ಯೆಹೋವನ ಕುರಿತಾಗಿಯಾದರೋ, ತನ್ನ ಕಡೆಗೆ ಸಂಪೂರ್ಣ ಹೃದಯ ಉಳ್ಳವರ ಪರವಾಗಿ ತನ್ನ ಶಕ್ತಿಯನ್ನು ತೋರ್ಪಡಿಸಲು, ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ತನ್ನ ದೃಷ್ಟಿಯನ್ನು ಪ್ರಸರಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9, NW) ಅಷ್ಟೊಂದು ಸಂಖ್ಯೆಯಲ್ಲಿ ಕಣ್ಣುಗಳು ಇರುವ ಕಾರಣ, ಕೆರೂಬಿಯರು ಎಲ್ಲಾ ಕಡೆಗಳಲ್ಲಿಯೂ ನೋಡಶಕ್ತರಾಗಿದ್ದಾರೆ. ಅವರ ಗಮನದಿಂದ ಯಾವುದೂ ತಪ್ಪಿಹೋಗುವುದಿಲ್ಲ. ಈ ರೀತಿಯಲ್ಲಿ ನ್ಯಾಯತೀರ್ಪಿನ ಕೆಲಸದಲ್ಲಿ ದೇವರನ್ನು ಸೇವಿಸಲು ಅವರು ಉತ್ತಮವಾಗಿ ಸನ್ನದ್ಧರಾಗಿರುತ್ತಾರೆ. ಅವನ ಕುರಿತಾಗಿ ಹೇಳಿರುವುದು: “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.” (ಜ್ಞಾನೋಕ್ತಿ 15:3) ಮತ್ತು ಮೂರು ಜೋಡಿ ರೆಕ್ಕೆಗಳಿಂದ—ಬೈಬಲಿನಲ್ಲಿ ಅಂಕೆ ಮೂರನ್ನು ಒತ್ತು ಹಾಕಲಿಕ್ಕಾಗಿ ಉಪಯೋಗಿಸಲಾಗಿದೆ—ಯೆಹೋವನ ನ್ಯಾಯತೀರ್ಪುಗಳನ್ನು ಮಿಂಚಿನೋಪಾದಿ ತೀವ್ರವಾಗಿ ಘೋಷಿಸುವಂತೆ ಮತ್ತು ಅವುಗಳನ್ನು ಜಾರಿಗೊಳಿಸುವಂತೆ ಕೆರೂಬಿಯರು ಚಲಿಸಶಕ್ತರು.

      24. ಯೆಹೋವನನ್ನು ಕೆರೂಬಿಯರು ಹೇಗೆ ಸ್ತುತಿಸುತ್ತಾರೆ, ಮತ್ತು ಯಾವ ಮಹತ್ವಾರ್ಥದೊಂದಿಗೆ?

      24 ಆಲಿಸಿರಿ! ಕೆರೂಬಿಯರು ಯೆಹೋವನಿಗೆ ಸಲ್ಲಿಸುವ ಸ್ತುತಿಯ ಸಂಗೀತವು ಮಧುರವೂ, ಆತ್ಮ-ಕಲುಕುವಂತಹದ್ದೂ ಆಗಿರುತ್ತದೆ: “ಇದ್ದಾತನೂ ಇರುವಾತನೂ ಬರುವಾತನೂ ಸರ್ವಶಕ್ತನೂ ಆದ ಯೆಹೋವ ದೇವರು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” ಪುನಃ, ಮೂರುತನವು ಗಾಢತೆಯನ್ನು ಸೂಚಿಸುತ್ತದೆ. ಯೆಹೋವ ದೇವರ ಪರಿಶುದ್ಧತೆಯನ್ನು ಕೆರೂಬಿಯರು ಬಲವಾಗಿ ದೃಢೀಕರಿಸುತ್ತಾರೆ. ಅವನು ಪರಿಶುದ್ಧತೆಯ ಬುಗ್ಗೆಯೂ, ಅಂತಿಮ ಮಟ್ಟವೂ ಆಗಿರುತ್ತಾನೆ. ಅವನು “ಸರ್ವಯುಗಗಳ ರಾಜನೂ” ಕೂಡ ಆಗಿರುತ್ತಾನೆ, ಯಾವಾಗಲೂ “ಆದಿಯೂ, ಅಂತ್ಯವೂ (ಆ್ಯಲ್ಫ ಮತ್ತು ಓಮೆಗ, NW) ಮತ್ತು ಮೊದಲನೆಯವನೂ, ಕಡೆಯವನೂ, ಪ್ರಾರಂಭವೂ, ಸಮಾಪ್ತಿಯೂ” ಆಗಿರುತ್ತಾನೆ. (1 ತಿಮೊಥೆಯ 1:17; ಪ್ರಕಟನೆ 22:13) ಎಲ್ಲಾ ಸೃಷ್ಟಿಯ ಮುಂದೆ ಯೆಹೋವನ ಎಣೆಯಿಲ್ಲದ ಗುಣಗಳನ್ನು ಘೋಷಿಸುವಾಗ, ಕೆರೂಬಿಯರು ಬಿಡುವಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ.

      25. ಯೆಹೋವನ ಗುಣಗಾನ ಮಾಡುವುದರಲ್ಲಿ ಜೀವಿಗಳು ಮತ್ತು 24 ಹಿರಿಯರು ಹೇಗೆ ಐಕ್ಯರಾಗುತ್ತಾರೆ?

      25 ಸ್ವರ್ಗಗಳ ಸ್ವರ್ಗವು ಯೆಹೋವನ ಸ್ತುತಿಗಳಿಂದ ಪ್ರತಿಧ್ವನಿಸುತ್ತದೆ! ಯೋಹಾನನ ವಿವರಣೆಯು ಮುಂದರಿಯುವುದು: “ಮತ್ತು ಆ ಜೀವಿಗಳು ಸಿಂಹಾಸನಾಸೀನನಿಗೆ, ಸದಾ ಸರ್ವದಾ ಜೀವಿಸುವಾತನಿಗೆ, ಮಹಿಮೆ, ಗೌರವ ಮತ್ತು ವಂದನಾರ್ಪಣೆಯನ್ನು ಸಲ್ಲಿಸುವಾಗೆಲ್ಲ, ಇಪ್ಪತ್ತನಾಲ್ಕು ಹಿರಿಯರು ಆ ಸಿಂಹಾಸನಾಸೀನನ ಮುಂದೆ ಅಡಬ್ಡಿದ್ದು, ಆ ಸದಾ ಸರ್ವದಾ ಜೀವಿಸುವಾತನನ್ನು ಆರಾಧಿಸುತ್ತಾರೆ, ಮತ್ತು ಅವರು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಹೇಳುವುದು: ‘ಯೆಹೋವನೇ, ನಮ್ಮ ದೇವರು ಕೂಡ, ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ನೀನು ಅರ್ಹನು, ಏಕೆಂದರೆ ಸಕಲ ಸಂಗತಿಗಳನ್ನು ನೀನು ಸೃಷ್ಟಿಸಿದ್ದೀ, ಮತ್ತು ನಿನ್ನ ಚಿತ್ತದ ಕಾರಣ ಅವು ಅಸ್ತಿತ್ವಕ್ಕೆ ಬಂದವು ಮತ್ತು ಸೃಷ್ಟಿಸಲ್ಪಟ್ಟವು.’” (ಪ್ರಕಟನೆ 4:9-11, NW) ಎಲ್ಲಾ ಶಾಸ್ತ್ರಗ್ರಂಥದಲ್ಲಿ, ನಮ್ಮ ದೇವರು ಮತ್ತು ಸಾರ್ವಭೌಮ ಪ್ರಭುವಾದ ಯೆಹೋವನಿಗೆ ಸಲ್ಲಿಸಿದ ಅತ್ಯುತ್ತಮ ಗೌರವಾರ್ಪಣಾ ಘೋಷಣೆಗಳಲ್ಲಿ ಇದೊಂದಾಗಿರುತ್ತದೆ!

      26. ಯೆಹೋವನ ಮುಂದೆ 24 ಹಿರಿಯರು ತಮ್ಮ ಕಿರೀಟವನ್ನು ಹಾಕುವುದು ಯಾಕೆ?

      26 ಯೇಸುವು ಪ್ರದರ್ಶಿಸುವ ಅದೇ ಮನೋಭಾವವು 24 ಹಿರಿಯರಲ್ಲಿದೆ. ಅವರು ತಮ್ಮ ಕಿರೀಟಗಳನ್ನು ಯೆಹೋವನ ಮುಂದೆ ಹಾಕುತ್ತಾರೆ. ದೇವರ ಸಾನ್ನಿಧ್ಯದಲ್ಲಿ ತಮ್ಮನ್ನು ಸ್ವತಃ ಹೆಚ್ಚಿಸಿಕೊಳ್ಳುವುದು ಅವರ ಮನಸ್ಸುಗಳಿಂದ ಅತ್ಯಂತ ದೂರದಲ್ಲಿದೆ. ಯೇಸುವು ಯಾವಾಗಲೂ ಮಾಡುವಂತೆಯೇ, ದೇವರಿಗೆ ಮಾನ ಮತ್ತು ಪ್ರಭಾವವನ್ನು ತರುವ ಏಕಮಾತ್ರ ಉದ್ದೇಶದಿಂದ ತಮ್ಮ ಅರಸುತನವು ಇರುತ್ತದೆ ಎಂದವರು ದೀನತೆಯಿಂದ ಅಂಗೀಕರಿಸುತ್ತಾರೆ. (ಫಿಲಿಪ್ಪಿ 2:5, 6, 9-11) ಅಧೀನತೆಯಿಂದ ತಮ್ಮ ಸ್ವಂತ ನಿಕೃಷ್ಟತೆಯನ್ನು ಅವರು ಮಾನ್ಯಮಾಡುತ್ತಾರೆ ಮತ್ತು ಯೆಹೋವನ ಸಾರ್ವಭೌಮತೆಯ ಮೇಲೆ ತಮ್ಮ ಅಧಿಕಾರವು ಆತುಕೊಂಡಿದೆ ಎಂದವರು ಒಪ್ಪುತ್ತಾರೆ. ಈ ರೀತಿಯಲ್ಲಿ, ಸಮಸ್ತವನ್ನು ಸೃಷ್ಟಿಸಿದ ದೇವರಿಗೆ ಸ್ತುತಿ ಮತ್ತು ಮಹಿಮೆಯನ್ನು ಕೊಡುವುದರಲ್ಲಿ, ಕೆರೂಬಿಯರೊಂದಿಗೆ ಮತ್ತು ನಂಬಿಗಸ್ತ ಸೃಷ್ಟಿಯ ಇತರರೊಂದಿಗೆ ಅವರು ಹೃದಯಪೂರ್ವಕವಾಗಿ ಸಹಮತದಲ್ಲಿದ್ದಾರೆ.—ಕೀರ್ತನೆ 150:1-6.

      27, 28. (ಎ) ಈ ದರ್ಶನದ ಯೋಹಾನನ ವಿವರಣೆಯು ನಮ್ಮನ್ನು ಹೇಗೆ ಪ್ರಭಾವಿಸತಕ್ಕದ್ದು? (ಬಿ) ಯೋಹಾನನು ತದನಂತರ ನೋಡುವ ಮತ್ತು ಕೇಳುವ ವಿಷಯದ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?

      27 ಈ ದರ್ಶನದ ಯೋಹಾನನ ದಾಖಲೆಯ ಓದುವಿಕೆಯಿಂದ ಪ್ರೇರಿಸಲ್ಪಡದೇ ಇರಲು ಯಾರಿಗೆ ಸಾಧ್ಯ? ಅದು ಉಜ್ವಲತೆಯದ್ದು, ವೈಭವದ್ದು! ಆದರೆ ಇದರ ವಾಸ್ತವ್ಯವು ಏನಾಗಿರಲೇಬೇಕು? ಯೆಹೋವನ ಘನಗಾಂಭೀರ್ಯವೇ ಗಣ್ಯತೆಯ ಹೃದಯದ ಯಾವನನ್ನಾದರೂ, ಅವನು ನಾಲ್ಕು ಜೀವಿಗಳನ್ನು ಮತ್ತು 24 ಮಂದಿ ಹಿರಿಯರನ್ನು ಪ್ರಾರ್ಥನೆ ಹಾಗೂ ಬಹಿರಂಗವಾಗಿ ಆತನ ನಾಮವನ್ನು ಘೋಷಿಸುವುದರಲ್ಲಿ ಸೇರಿಕೊಳ್ಳುವಂತೆ ಕಳೆಯಿಂದ ತುಂಬಿಸಬೇಕು. ಈ ದೇವರಿಗೆ ಸಾಕ್ಷಿಗಳಾಗಿರಲು ಇಂದು ಕ್ರೈಸ್ತರು ಸುಯೋಗ ಹೊಂದಿರುತ್ತಾರೆ. (ಯೆಶಾಯ 43:10) ನಾವು ಇಂದು ಇರುವಂತಹ ಕರ್ತನ ದಿನಕ್ಕೆ ಯೋಹಾನನ ದರ್ಶನವು ಅನ್ವಯಿಸುತ್ತದೆ ಎಂದು ನೆನಪಿನಲ್ಲಿಡಿರಿ. “ಏಳು ಆತ್ಮಗಳು” ನಮ್ಮನ್ನು ಮಾರ್ಗದರ್ಶಿಸಲು ಮತ್ತು ಬಲಗೊಳಿಸಲು ಯಾವಾಗಲೂ ಹತ್ತಿರದಲ್ಲಿಯೇ ಇರುತ್ತವೆ. (ಗಲಾತ್ಯ 5:16-18) ಪರಿಶುದ್ಧ ದೇವರನ್ನು ಸೇವಿಸುವುದರಲ್ಲಿ ನಾವು ಪರಿಶುದ್ಧರಾಗಿರುವಂತೆ ಸಹಾಯಮಾಡಲು ಇಂದು ನಮಗೆ ದೇವರ ವಾಕ್ಯವು ಲಭ್ಯವಾಗುತ್ತದೆ. (1 ಪೇತ್ರ 1:14-16) ಈ ಪ್ರವಾದನೆಯ ಮಾತುಗಳನ್ನು ಗಟ್ಟಿಯಾಗಿ ಓದುವುದರಲ್ಲಿ ನಾವು ಖಂಡಿತವಾಗಿಯೂ ಸಂತೋಷ ಪಡುತ್ತೇವೆ. (ಪ್ರಕಟನೆ 1:3) ಯೆಹೋವನಿಗೆ ನಂಬಿಗಸ್ತರಾಗಿರಲು ಮತ್ತು ಅವನ ಸ್ತುತಿಗಳನ್ನು ಸಕ್ರಿಯವಾಗಿ ಹಾಡುವುದರಲ್ಲಿ ಲೋಕವು ನಮ್ಮನ್ನು ಎಂದೂ ಅಪಕರ್ಷಿಸುವಂತೆ ಬಿಡದಿರಲು ಅವು ನಮಗೆ ಎಂತಹ ಪ್ರೇರಣೆಯಾಗಿರುತ್ತವೆ!—1 ಯೋಹಾನ 2:15-17.

      28 ಇಷ್ಟರ ತನಕ, ಪರಲೋಕದಲ್ಲಿ ಆ ತೆರೆದಿಟ್ಟ ಬಾಗಿಲಿನ ಮೂಲಕ ಒಳಗೆ ಬರಲು ಆಮಂತ್ರಿಸಲ್ಪಟ್ಟಾಗ ಅವನೇನು ಕಂಡನೋ, ಅದನ್ನು ಯೋಹಾನನು ವರ್ಣಿಸಿದ್ದಾನೆ. ಯೆಹೋವನ ದಿವ್ಯ ಸಿಂಹಾಸನದ ಮೇಲೆ, ಅವನ ಘನಗಾಂಭೀರ್ಯದ ಮತ್ತು ಪ್ರತಿಷ್ಠೆಯ ಎಲ್ಲಾ ವೈಭವದೊಂದಿಗೆ ಅವನು ಕೂತಿರುವುದನ್ನು ಯೋಹಾನನು ವರದಿ ಮಾಡುವುದು ಅತಿ ಎದ್ದುತೋರುವಂತಹದ್ದಾಗಿದೆ. ಸಂಸ್ಥೆಗಳೆಲ್ಲದರಲ್ಲಿ ಅತಿ ಬಲಾಢ್ಯವಾದದರ್ದಿಂದ—ಉಜ್ವಲತೆ ಮತ್ತು ನಿಷ್ಠೆಯಿಂದ ಹೊಳೆಯುವಂತಹದರಿಂದ—ಅವನು ಆವರಿಸಲ್ಪಟ್ಟಿರುತ್ತಾನೆ. ದೈವಿಕ ನ್ಯಾಯಸ್ಥಾನದ ಸಭೆಯು ನಡೆಯುತ್ತಾ ಇದೆ. (ದಾನಿಯೇಲ 7:9, 10, 18) ಏನೋ ಒಂದು ವಿಶೇಷ ಘಟನೆಯು ಸಂಭವಿಸಲು ವೇದಿಕೆಯು ಅಣಿಗೊಳಿಸಲ್ಪಡುತ್ತದೆ. ಅದೇನು, ಮತ್ತು ಅದು ನಮ್ಮನ್ನು ಇಂದು ಹೇಗೆ ಬಾಧಿಸುತ್ತದೆ? ದೃಶ್ಯವು ತೆರೆಯಲ್ಪಡುತ್ತಿರುವಂತೆಯೇ ನಾವು ಅದನ್ನು ನೋಡೋಣ!

  • “ಸುರುಳಿಯನ್ನು ಬಿಚ್ಚುವುದಕ್ಕೆ ಯಾವನು ಯೋಗ್ಯನು?”
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 1. ಯೋಹಾನನ ದರ್ಶನದಲ್ಲಿ ಈಗ ಏನು ಸಂಭವಿಸುತ್ತದೆ?

      ಭವ್ಯ! ಭಯಭಕ್ತಿ ಹುಟ್ಟಿಸುವಂಥದ್ದು! ಬೆಂಕಿಯ ದೀಪಸ್ತಂಭಗಳ, ಕೆರೂಬಿಯರ, 24 ಹಿರಿಯರುಗಳ ಮತ್ತು ಗಾಜಿನಂಥ ಸಮುದ್ರದ ಮಧ್ಯೆ ಇರುವ ಯೆಹೋವನ ಸಿಂಹಾಸನದ ಕಲುಕುವ ದರ್ಶನವು ಇಂಥದ್ದೇ ಆಗಿದೆ. ಆದರೆ ಯೋಹಾನನೇ, ನೀನು ಮುಂದೇನು ನೋಡುತ್ತೀ? ಯೋಹಾನನು ಈ ಸ್ವರ್ಗೀಯ ದೃಶ್ಯದ ಕೇಂದ್ರಕ್ಕೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತಾ, ನಮಗೆ ಹೀಗೆ ಹೇಳುತ್ತಾನೆ: “ಮತ್ತು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆದಿದ್ದ, ಏಳು ಮುದ್ರೆಗಳಿಂದ ಬಿಗಿಯಾಗಿ ಮುದ್ರೆಯೊತ್ತಿದ್ದ ಒಂದು ಸುರುಳಿಯನ್ನು ಕಂಡೆನು. ಮತ್ತು ಬಲಿಷ್ಠನಾದ ಒಬ್ಬ ದೇವದೂತನು ಹೀಗೆ ಮಹಾ ಶಬ್ದದಿಂದ ಘೋಷಿಸುವುದನ್ನು ಕಂಡೆನು: ‘ಈ ಸುರುಳಿಯನ್ನು ಬಿಚ್ಚುವುದಕ್ಕೆ ಮತ್ತು ಅದರ ಮುದ್ರೆಗಳನ್ನು ಸಡಿಲಿಸಲಿಕ್ಕೆ ಯಾವನು ಯೋಗ್ಯನು?’ ಆದರೆ ಆ ಸುರುಳಿಯನ್ನು ಬಿಚ್ಚುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಒಬ್ಬನೂ ಶಕ್ತನಾಗಲಿಲ್ಲ. ಮತ್ತು ಸುರುಳಿಯನ್ನು ಬಿಚ್ಚುವುದಕ್ಕಾಗಲಿ, ಅದರಲ್ಲಿ ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಕಣ್ಣೀರು ಕರೆದೆನು.”—ಪ್ರಕಟನೆ 5:1-4, NW.

      2, 3. (ಎ) ಸುರುಳಿಯನ್ನು ಬಿಚ್ಚಲು ಯೋಗ್ಯನಾದವನೊಬ್ಬನು ಸಿಗುವುದರ ಕುರಿತು ಯೋಹಾನನು ಆತುರತೆಯುಳ್ಳವನಾಗಿದ್ದುದೇಕೆ, ಆದರೆ ಅದಕ್ಕೋಸ್ಕರ ಯಾವ ಪ್ರತೀಕ್ಷೆ ಇರುವಂತೆ ತೋರುತ್ತದೆ? (ಬಿ) ದೇವರ ಅಭಿಷಿಕ್ತ ಜನರು ನಮ್ಮ ಸಮಯಗಳಲ್ಲಿ ಯಾವುದಕ್ಕೆ ಆತುರತೆಯಿಂದ ಕಾದಿದ್ದಾರೆ?

      2 ಸಮಸ್ತ ಸೃಷ್ಟಿಯ ಸಾರ್ವಭೌಮ ಕರ್ತನಾದ ಯೆಹೋವನು ತಾನೇ ಆ ಸುರುಳಿಯನ್ನು ಹಿಡಿದುಕೊಂಡಿರುತ್ತಾನೆ. ಮುಂದುಗಡೆ ಮತ್ತು ಹಿಂದುಗಡೆ ಬರವಣಿಗೆ ಇದ್ದುದರಿಂದ, ಅದು ಪ್ರಾಮುಖ್ಯ ಸಮಾಚಾರದಿಂದ ತುಂಬಿರಲೇ ಬೇಕು. ನಮ್ಮ ಕುತೂಹಲವು ಕೆರಳಿಸಲ್ಪಡುತ್ತದೆ. ಸುರುಳಿಯಲ್ಲಿ ಏನು ಅಡಕವಾಗಿದೆ? ಯೋಹಾನನಿಗೆ ಯೆಹೋವನು ನೀಡಿದ ಆಮಂತ್ರಣವನ್ನು ನಾವು ನೆನಪಿಸುತ್ತೇವೆ: “ಇಲ್ಲಿ ಮೇಲಕ್ಕೆ ಬಾ, ಮತ್ತು ಮುಂದಕ್ಕೆ ಆಗಬೇಕಾದ ಸಂಗತಿಗಳನ್ನು ನಾನು ನಿನಗೆ ತೋರಿಸುವೆನು.’” (ಪ್ರಕಟನೆ 4:1, NW) ಮೈಜುಮ್ಮೆನ್ನಿಸುವ ನಿರೀಕ್ಷಣೆಯೊಂದಿಗೆ, ಆ ವಿಷಯಗಳ ಕುರಿತು ಕಲಿಯಲು ನಾವು ಮುನ್ನೋಡುತ್ತೇವೆ. ಆದರೆ ಅಯ್ಯೋ, ಒತ್ತಾಗಿ ಮುಚ್ಚಲ್ಪಟ್ಟು, ಏಳು ಮುದ್ರೆಗಳಿಂದ ಮುದ್ರೆಯೊತ್ತಿ ಅಂಟಿಸಲ್ಪಟ್ಟಿದೆ!

      3 ಸುರುಳಿಯನ್ನು ಬಿಚ್ಚುವುದಕ್ಕೆ ಯೋಗ್ಯನಾಗಿರುವ ಯಾವನನ್ನಾದರೂ ಈ ಬಲಿಷ್ಠ ದೇವದೂತನು ಕಂಡುಕೊಳ್ಳುವನೋ? ಕಿಂಗ್‌ಡಮ್‌ ಇಂಟರ್‌ಲಿನೀಯರ್‌ ಪ್ರಕಾರ, ಸುರುಳಿಯು ಯೆಹೋವನ “ಬಲಗೈಯ ಮೇಲೆ” ಇದೆ. ಆತನ ತೆರೆದ ಅಂಗೈಯಲ್ಲಿ ಅದನ್ನು ಹಿಡಿದಿದ್ದಾನೆ ಎಂದು ಅದು ಸೂಚಿಸುತ್ತದೆ. ಆದರೆ ಪರಲೋಕದಲ್ಲಿಯಾಗಲಿ ಭೂಮಿಯ ಮೇಲಾಗಲಿ ಆ ಸುರುಳಿಯನ್ನು ಸ್ವೀಕರಿಸಲು ಮತ್ತು ಬಿಚ್ಚಲು ಯೋಗ್ಯನಾಗಿರುವ ಒಬ್ಬನೂ ಇಲ್ಲವೆಂದು ಕಾಣುತ್ತದೆ. ಭೂಮಿಯ ಕೆಳಗಣ ಭಾಗದಲ್ಲಿ ಮೃತಪಟ್ಟ ದೇವರ ನಂಬಿಗಸ್ತ ಸೇವಕರಲ್ಲಿಯೂ ಕೂಡ ಈ ಉಚ್ಚ ಗೌರವಕ್ಕೆ ಯೋಗ್ಯತೆ ಪಡೆದ ಯಾವನೇ ಒಬ್ಬನೂ ಇಲ್ಲ. ಯೋಹಾನನು ಪ್ರತ್ಯಕ್ಷವಾಗಿ ಕ್ಷೋಭೆಗೊಳಗಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಕಟ್ಟಕಡೆಗೂ, “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಅವನು ಪ್ರಾಯಶಃ ಕಲಿಯಲಿಕ್ಕಿಲ್ಲ. ನಮ್ಮ ದಿನಗಳಲ್ಲಿಯೂ ಕೂಡ, ದೇವರ ಅಭಿಷಿಕ್ತ ಜನರು ಯೆಹೋವನು ಪ್ರಕಟನೆಯ ಮೇಲೆ ತನ್ನ ಬೆಳಕು ಮತ್ತು ಸತ್ಯವನ್ನು ಕಳುಹಿಸುವಂತೆ ಉತ್ಸುಕತೆಯಿಂದ ಕಾದಿದ್ದಾರೆ. ಇದನ್ನು ಆತನು ಒಂದು “ಮಹಾ ರಕ್ಷಣೆಯ” ದಾರಿಯಲ್ಲಿ ತನ್ನ ಜನರನ್ನು ನಡಿಸಲು ಪ್ರಗತಿಪರವಾಗಿ ನೇಮಿತ ಸಮಯದಲ್ಲಿ ಪ್ರವಾದನೆಯ ನೆರವೇರಿಕೆಗಾಗಿ ಮಾಡುವನು.—ಕೀರ್ತನೆ 43:3, 5.

      ಯೋಗ್ಯನಾದವನು

      4. (ಎ) ಸುರುಳಿಯನ್ನು ಮತ್ತು ಅದರ ಮುದ್ರೆಗಳನ್ನು ಬಿಚ್ಚಲು ಯೋಗ್ಯನಾದವನು ಯಾರೆಂದು ಕಂಡುಹಿಡಿಯಲ್ಪಟ್ಟಿತು? (ಬಿ) ಯೋಹಾನ ವರ್ಗ ಮತ್ತು ಅವರ ಸಂಗಾತಿಗಳು ಈಗ ಯಾವ ಪ್ರತಿಫಲ ಮತ್ತು ಸುಯೋಗದಲ್ಲಿ ಪಾಲಿಗರಾಗುತ್ತಿದ್ದಾರೆ?

      4 ಹೌದು, ಸುರುಳಿಯನ್ನು ಬಿಚ್ಚಲು ಯೋಗ್ಯನಾದ ಒಬ್ಬನು ಇದ್ದಾನೆ! ಯೋಹಾನನು ವರದಿ ಮಾಡುವುದು: “ಆದರೆ ಹಿರಿಯರಲ್ಲಿ ಒಬ್ಬನು ನನಗೆ ಹೇಳುವುದು: ‘ಅಳುವುದನ್ನು ನಿಲ್ಲಿಸು. ಇಗೋ! ಯೆಹೂದ ಕುಲದ ಸಿಂಹ, ದಾವೀದನ ಬುಡವಾಗಿರುವವನು ಆ ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೋಸ್ಕರ ಜಯಹೊಂದಿದ್ದಾನೆ.’” (ಪ್ರಕಟನೆ 5:5, NW) ಹಾಗಾದರೆ, ಯೋಹಾನನೇ, ಆ ಕಣ್ಣೀರನ್ನು ಒರಸಿಬಿಡು! ಜ್ಞಾನೋದಯಕ್ಕಾಗಿ ತಾಳ್ಮೆಯಿಂದ ಕಾದಿರುವಾಗ, ಯೋಹಾನ ವರ್ಗ ಮತ್ತು ಅವರ ನಿಷ್ಠೆಯ ಸಂಗಾತಿಗಳು ಕೂಡ ಶತಕಗಳ ಕಠಿನತಮ ಪರೀಕ್ಷೆಗಳನ್ನು ಸಹಿಸಿರುತ್ತಾರೆ. ದರ್ಶನವನ್ನು ತಿಳಿದುಕೊಳ್ಳುವುದರಲ್ಲಿ ನಮಗೆ ಎಂಥ ಒಂದು ಸಾಂತ್ವನದಾಯಕ ಬಹುಮಾನ ಈಗ ಇರುತ್ತದೆ ಮತ್ತು ಅದರ ಸಂದೇಶವನ್ನು ಇತರರಿಗೆ ಸಾರುತ್ತಾ ಅದರ ನೆರವೇರಿಕೆಯಲ್ಲಿ ಪಾಲುತೆಗೆದುಕೊಳ್ಳುವುದೂ ಎಂಥ ಒಂದು ಸುಯೋಗವು!

      5. (ಎ) ಯೆಹೂದನ ಕುರಿತಾಗಿ ಯಾವ ಪ್ರವಾದನೆಯು ನುಡಿಯಲ್ಪಟ್ಟಿತ್ತು, ಮತ್ತು ಯೆಹೂದನ ವಂಶಜರು ಎಲ್ಲಿ ರಾಜ್ಯಭಾರ ನಡಿಸಿದರು? (ಬಿ) ಶಿಲೋ ಯಾರು?

      5 ಆಹಾ, “ಯೆಹೂದ ಕುಲದ ಸಿಂಹ”! ಯೆಹೂದಿ ಜನಾಂಗದ ಪೂರ್ವಜನಾದ ಯಾಕೋಬನು ತನ್ನ ನಾಲ್ಕನೆಯ ಮಗನಾದ ಯೆಹೂದನಿಗೆ ಉಚ್ಚರಿಸಿರುವ ಪ್ರವಾದನೆಯ ಪರಿಚಯವು ಯೋಹಾನನಿಗೆ ಇದೆ: “ಯೆಹೂದನು ಸಿಂಹದ ಮರಿ. ನನ್ನ ಮಗನೇ, ಕೊಳ್ಳೆಯಿಂದ ನೀನು ನಿಶ್ಚಯವಾಗಿಯೂ ಮೇಲೆ ಹೋಗುವಿ. ಅವನು ಬಗ್ಗಿದನು, ಅವನು ಸಿಂಹದಂತೆ ತನ್ನನ್ನು ಚಾಚಿಕೊಂಡನು, ಮತ್ತು ಸಿಂಹದಂತೆ, ಅವನನ್ನು ರೇಗಿಸಲು ಯಾರು ಧೈರ್ಯ ಪಡುವರು? ಶಿಲೋ ಬರುವ ತನಕ ರಾಜದಂಡವು ಯೆಹೂದದಿಂದ ಪಕ್ಕಕ್ಕೆ ತಿರುಗದು, ಆತನ ಪಾದಗಳ ಮಧ್ಯದಿಂದ ಅಧಿಕಾರಿಯ ದಂಡವು ಕೂಡ. ಮತ್ತು ಅವನಿಗೆ ಜನರ ವಿಧೇಯತೆಯು ಸಲ್ಲುವುದು.” (ಆದಿಕಾಂಡ 49:9, 10, NW) ದೇವಜನರ ರಾಜಮನೆತನದ ಸಾಲು ಯೆಹೂದನಿಂದ ಬಂದಿತ್ತು. ದಾವೀದನೊಂದಿಗೆ ಪ್ರಾರಂಭಗೊಳ್ಳುತ್ತಾ, ಬಾಬೆಲಿನವರು ಯೆರೂಸಲೇಮನ್ನು ನಾಶಗೊಳಿಸುವ ವರೆಗೆ ಆ ನಗರದಲ್ಲಿ ಆಳಿದ ಎಲ್ಲಾ ರಾಜರು ಯೆಹೂದನ ವಂಶಜರಾಗಿದ್ದರು. ಆದರೆ ಯಾಕೋಬನಿಂದ ಪ್ರವಾದಿಸಲ್ಪಟ್ಟಂತೆ, ಅವರಲ್ಲಿ ಯಾರೊಬ್ಬನೂ ಶಿಲೋ ಆಗಿರಲಿಲ್ಲ. ಶಿಲೋ ಅಂದರೆ “ಯಾರ [ಹಕ್ಕು] ಅದಾಗಿದೆಯೋ ಅವನು.” ಈ ಹೆಸರು ಪ್ರವಾದನಾರೂಪವಾಗಿ ದಾವೀದನ ರಾಜ್ಯವು ಈಗ ಯಾರಿಗೆ ಶಾಶ್ವತವಾಗಿ ಸೇರಿದೆಯೋ ಆ ಯೇಸುವನ್ನು ತೋರಿಸಿತು.—ಯೆಹೆಜ್ಕೇಲ 21:25-27; ಲೂಕ 1:32, 33; ಪ್ರಕಟನೆ 19:16.

      6. ಯೇಸುವು “ಇಷಯನ ಚಿಗುರು” ಮತ್ತು “ದಾವೀದನ ಬುಡ” ಕೂಡ ಆಗಿದ್ದದ್ದು ಯಾವ ವಿಧದಲ್ಲಿ?

      6 “ದಾವೀದನ ಬುಡ” ವೆಂಬ ಉಲ್ಲೇಖವನ್ನು ಯೋಹಾನನು ಕೂಡಲೇ ತಿಳಿದುಕೊಳ್ಳುತ್ತಾನೆ. ಪ್ರವಾದನಾರೂಪವಾಗಿ ವಾಗ್ದಾತ್ತ ಮೆಸ್ಸೀಯನನ್ನು “ಇಷಯನ [ರಾಜ ದಾವೀದನ ತಂದೆ] ಬುಡದಿಂದ ಒಂದು ಚಿಗುರು . . . ಒಂದು ತಳಿರು,” ಮತ್ತು “ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರ [ಬುಡ, NW] ದವನನ್ನು ಆಶ್ರಯಿಸುವರು” ಎಂದು ಇಬ್ಬಗೆಯಲ್ಲಿ ಕರೆಯಲ್ಪಟ್ಟಿದ್ದಾನೆ. (ಯೆಶಾಯ 11:1, 10) ಇಷಯನ ಮಗನಾದ ದಾವೀದನ ರಾಜಮನೆತನದ ಸಾಲಿನಲ್ಲಿ ಹುಟ್ಟಿದವನಾಗಿದದ್ದರಿಂದ ಯೇಸುವು ಇಷಯನ ಚಿಗುರಾಗಿದ್ದನು. ಇನ್ನೂ ಹೆಚ್ಚಾಗಿ, ಇಷಯನ ಬುಡದೋಪಾದಿ, ಅದಕ್ಕೆ ಸದಾಕಾಲ ಜೀವ ಮತ್ತು ಪೋಷಣೆಯನ್ನು ಕೊಟ್ಟು, ಇವನು ದಾವೀದನ ರಾಜಮನೆತನವು ಪುನಃ ತಳಿರು ಫಲಿಸುವಂತೆ ಕಾರಣನಾದನು.—2 ಸಮುವೇಲ 7:16.

      7. ಸಿಂಹಾಸನದ ಮೇಲೆ ಕೂತಿದ್ದವನ ಕೈಯಿಂದ ಸುರುಳಿಯನ್ನು ತೆಗೆದುಕೊಳ್ಳಲು ಯೇಸುವನ್ನು ಯಾವುದು ಯೋಗ್ಯವನ್ನಾಗಿ ಮಾಡುತ್ತದೆ?

      7 ಪರಿಪೂರ್ಣ ಮನುಷ್ಯನೋಪಾದಿ ಯೇಸು ಯೆಹೋವನನ್ನು ಯಥಾರ್ಥತೆಯಿಂದ ಮತ್ತು ಯಾತನಾಮಯ ಪರೀಕ್ಷೆಗಳ ಕೆಳಗೆ ಸೇವಿಸುವುದರ ಮೂಲಕ ಸರ್ವೂತ್ಕೃಷ್ಟನಾಗಿದ್ದಾನೆ. ಆತನು ಸೈತಾನನ ಪಂಥಾಹ್ವಾನಕ್ಕೆ ಸಂಪೂರ್ಣ ಉತ್ತರವನ್ನು ಒದಗಿಸಿದನು. (ಜ್ಞಾನೋಕ್ತಿ 27:11) ಆದುದರಿಂದ, ಆತನು ತನ್ನ ಯಜ್ಞಾರ್ಪಿತ ಮರಣದ ಮುಂಚಿನ ರಾತ್ರಿಯಲ್ಲಿ ಮಾಡಿದಂತೆ, ಹೀಗೆ ಹೇಳಶಕ್ತನಾದನು: “ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಈ ಕಾರಣಕ್ಕಾಗಿ, ಯೆಹೋವನು ಪುನರುತಿತ್ಥ ಯೇಸುವಿಗೆ “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ . . . ಎಲ್ಲಾ ಅಧಿಕಾರವನ್ನು” ವಹಿಸಿಕೊಟ್ಟನು. ಅದರ ಬಹುಮುಖ್ಯವಾದ ಸಂದೇಶವನ್ನು ತಿಳಿಯಪಡಿಸುವ ನೋಟದಿಂದ, ದೇವರ ಎಲ್ಲಾ ಸೇವಕರುಗಳಲ್ಲಿ ಆತನೊಬ್ಬನೇ ಸುರುಳಿಯನ್ನು ಸ್ವೀಕರಿಸಲು ಯೋಗ್ಯನಾಗಿರುತ್ತಾನೆ.—ಮತ್ತಾಯ 28:18.

      8. (ಎ) ರಾಜ್ಯದ ಸಂಬಂಧದಲ್ಲಿ ಯೇಸುವಿನ ಯೋಗ್ಯತೆಯನ್ನು ಯಾವುದು ತೋರಿಸುತ್ತದೆ? (ಬಿ) ಸುರುಳಿಯನ್ನು ಬಿಚ್ಚಲು ಯೋಗ್ಯನಾದ ವ್ಯಕ್ತಿ ಯಾರೆಂದು ಯೋಹಾನನಿಗೆ 24 ಹಿರಿಯರಲ್ಲೋಬ್ಬನು ತಿಳಿಸುವುದು ತಕ್ಕದ್ದಾಗಿದೆ ಯಾಕೆ?

      8 ಸುರುಳಿಯನ್ನು ಬಿಚ್ಚಲು ಯೇಸು ನಿಜವಾಗಿಯೂ ಯೋಗ್ಯನಾಗಿರುವುದು ಸಮಂಜಸವಾಗಿದೆ. 1914 ರಿಂದ ಆತನು ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ರಾಜನಾಗಿ ಸಿಂಹಾಸನಕ್ಕೇರಿಸಲ್ಪಟ್ಟಿದ್ದಾನೆ, ಮತ್ತು ಆ ಸುರುಳಿಯು ರಾಜ್ಯದ ಕುರಿತು ಮತ್ತು ಅದು ಏನೆಲ್ಲಾ ಪೂರೈಸಲಿದೆಯೋ ಅದೆಲ್ಲದರ ಕುರಿತು ಬಹಳಷ್ಟನ್ನು ಪ್ರಕಟಿಸುತ್ತದೆ. ಇಲ್ಲಿ ಭೂಮಿಯ ಮೇಲೆ ಇದ್ದಾಗ, ಯೇಸುವು ರಾಜ್ಯ ಸತ್ಯತೆಗೆ ನಂಬಿಗಸ್ತಿಕೆಯಿಂದ ಸಾಕ್ಷಿಯನ್ನು ಕೊಟ್ಟನು. (ಯೋಹಾನ 18:36, 37) ಆ ರಾಜ್ಯದ ಬರೋಣಕ್ಕಾಗಿ ಪ್ರಾರ್ಥಿಸಲು ಅವನು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಆತನು ರಾಜ್ಯದ ಸುವಾರ್ತೆಯನ್ನು ನಮ್ಮ ಕ್ರೈಸ್ತ ಶಕದ ಆರಂಭದಲ್ಲಿ ಮೊದಲಾಗಿ ಪ್ರಾರಂಭಿಸಿದನು ಮತ್ತು ಅಂತ್ಯದ ಸಮಯದಲ್ಲಿ ಆ ಸಾರುವ ಕೆಲಸವು ಉಚ್ಛಾಯ್ರ ಸ್ಥಿತಿಗೆ ಏರಲಿದೆಯೆಂದು ಪ್ರವಾದಿಸಿದನು. (ಮತ್ತಾಯ 4:23; ಮಾರ್ಕ 13:10) ಯೇಸುವು ಮುದ್ರೆಯನ್ನು ತೆರೆಯಲು ಯೋಗ್ಯನಾದವನೆಂದು 24 ಹಿರಿಯರುಗಳಲ್ಲಿ ಒಬ್ಬನು ಯೋಹಾನನಿಗೆ ತಿಳಿಯಪಡಿಸುವುದು ಕೂಡ ತದ್ರೀತಿಯಲ್ಲಿ ಯೋಗ್ಯವಾಗಿರುತ್ತದೆ. ಯಾಕೆ? ಯಾಕಂದರೆ ಆ ಹಿರಿಯರು ಕ್ರಿಸ್ತನ ರಾಜ್ಯದಲ್ಲಿ ಅವನೊಂದಿಗೆ ಜತೆಬಾಧ್ಯಸ್ಥರಾಗಿರುವುದರಿಂದ, ಸಿಂಹಾಸನಗಳಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕಿರೀಟಗಳನ್ನು ಧರಿಸುತ್ತಾರೆ.—ರೋಮಾಪುರ 8:17; ಪ್ರಕಟನೆ 4:4.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ