ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 34. ಏಳನೆಯ ದೇವದೂತನು ಯಾವುದರ ಮೇಲೆ ತನ್ನ ಪಾತ್ರೆಯನ್ನು ಹೊಯ್ಯುತ್ತಾನೆ, ಮತ್ತು “ಪವಿತ್ರಸ್ಥಾನದಿಂದ ಸಿಂಹಾಸನದ” ಕಡೆಯಿಂದ ಯಾವ ಘೋಷಣೆಯು ಉಂಟಾಗುತ್ತದೆ?

      34 “ಮತ್ತು ಏಳನೆಯವನು ತನ್ನ ಪಾತ್ರೆಯನ್ನು ವಾಯುವಿನ ಮೇಲೆ ಹೊಯಿದನು. ಆಗ ಪವಿತ್ರಸ್ಥಾನದಿಂದ ಸಿಂಹಾಸನದ ಕಡೆಯಿಂದ ಮಹಾ ಶಬ್ದವು ಹೊರಟು, ಹೀಗಂದಿತು: ‘ಅದು ಸಂಭವಿಸಿದೆ!’”—ಪ್ರಕಟನೆ 16:17, NW.

      35. (ಎ) ಪ್ರಕಟನೆ 16:17ರ “ವಾಯುವು” ಏನಾಗಿದೆ? (ಬಿ) ವಾಯುವಿನ ಮೇಲೆ ಆತನ ಪಾತ್ರೆಯನ್ನು ಹೊಯ್ಯುವುದರಲ್ಲಿ ಏಳನೆಯ ದೇವದೂತನು ಏನನ್ನು ತಿಳಿಯಪಡಿಸುತ್ತಾನೆ?

      35 “ವಾಯು”ವು ಬಾಧಿಸಲ್ಪಡಲಿರುವ ಕಟ್ಟಕಡೆಯ ಜೀವ-ಸಂರಕ್ಷಕ ಮಾಧ್ಯಮವಾಗಿದೆ. ಆದರೆ ಇದು ಅಕ್ಷರಾರ್ಥಕ ವಾಯುವಲ್ಲ. ಅಕ್ಷರಾರ್ಥಕ ಭೂಮಿ, ಸಮುದ್ರ, ಸಿಹಿನೀರಿನ ಮೂಲಗಳು ಯಾ ಸೂರ್ಯನು ಯೆಹೋವನ ಕೈಯಲ್ಲಿ ನ್ಯಾಯತೀರ್ಪುಗಳನ್ನು ಹೊಂದಲು ಹೇಗೆ ಅರ್ಹರಾಗಿಲ್ಲವೊ, ಅಂತೆಯೇ ಯೆಹೋವನ ಪ್ರತಿಕೂಲ ನ್ಯಾಯತೀರ್ಪುಗಳಿಗೆ ಅರ್ಹವನ್ನಾಗಿ ಮಾಡುವ ಯಾವುದೂ ಅಕ್ಷರಾರ್ಥಕ ವಾಯುವಿನಲ್ಲಿ ಇಲ್ಲ. ಅದರ ಬದಲು, ಸೈತಾನನನ್ನು “ವಾಯುಮಂಡಲದ ಅಧಿಕಾರ ನಡಿಸುವ ಅಧಿಪತಿಯಾಗಿ” ಪೌಲನು ಕರೆದಾಗ, ಇದೇ “ವಾಯು” ವಿನ ಕುರಿತು ಚರ್ಚಿಸುತ್ತಿದ್ದನು. (ಎಫೆಸ 2:2) ಅದು ಇಂದು ಲೋಕದಿಂದ ಉಸಿರಾಡಲ್ಪಡುತ್ತಿರುವ ಸೈತಾನ ಸಂಬಂಧಿತ “ವಾಯು”, ಯಾ ಆತ್ಮ ಅಥವಾ ಅವನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯ ಗುಣಲಕ್ಷಣಗಳನ್ನು ವಿವರಿಸುವ ಸಾಮಾನ್ಯ ಮಾನಸಿಕ ಪ್ರವೃತ್ತಿಯಾಗಿದ್ದು, ಯೆಹೋವನ ಸಂಸ್ಥೆಯ ಹೊರಗಿರುವ ಜೀವಿತದ ಪ್ರತಿಯೊಂದು ವಿಭಾಗದಲ್ಲಿ ವ್ಯಾಪಿಸಿರುವ ಸೈತಾನ ಸಂಬಂಧಿತ ಆಲೋಚನೆ ಆಗಿದೆ. ಆದುದರಿಂದ ವಾಯುವಿನ ಮೇಲೆ ಆತನ ಪಾತ್ರೆಯ ಹೊಯ್ಯುವಿಕೆಯು, ಏಳನೆಯ ದೇವದೂತನು ಸೈತಾನನ, ಅವನ ಸಂಸ್ಥೆಯ, ಮತ್ತು ಯೆಹೋವನ ಸಾರ್ವಭೌಮತೆಯ ಉಲ್ಲಂಘನೆಯಲ್ಲಿ ಸೈತಾನನನ್ನು ಬೆಂಬಲಿಸುವುದಕ್ಕೆ ಮಾನವ ಕುಲವನ್ನು ಪ್ರೇರಿಸುವ ಎಲ್ಲವುಗಳ ವಿರುದ್ಧ ಯೆಹೋವನ ಸಿಟ್ಟನ್ನು ವ್ಯಕ್ತಪಡಿಸುತ್ತದೆ.

      36. (ಎ) ಏಳು ಬಾಧೆಗಳು ಏನನ್ನು ಸಂಯೋಜಿಸುತ್ತವೆ? (ಬಿ) “ಅದು ಸಂಭವಿಸಿದೆ!” ಎಂಬ ಯೆಹೋವನ ಘೋಷಣೆಯಿಂದ ಏನು ಸೂಚಿಸಲ್ಪಡುತ್ತದೆ?

      36 ಇದು ಮತ್ತು ಹಿಂದಿನ ಆರು ಬಾಧೆಗಳು ಸೈತಾನನ ಮತ್ತು ಅವನ ವ್ಯವಸ್ಥೆಯ ವಿರುದ್ಧ ಯೆಹೋವನ ನ್ಯಾಯತೀರ್ಪುಗಳ ಒಟ್ಟು ಮೊತ್ತವನ್ನು ಕೊಡುತ್ತವೆ. ಇದು ಸೈತಾನ ಮತ್ತು ಅವನ ಸಂತಾನದವರಿಗೆ ದಂಡನೆಯ ಘೋಷಣೆಯಾಗಿದೆ. ಈ ಕೊನೆಯ ಪಾತ್ರೆಯು ಹೊಯ್ಯಲ್ಪಟ್ಟಾಗ ಯೆಹೋವನು ತಾನೇ ಘೋಷಿಸುವುದು: “ಅದು ಸಂಭವಿಸಿದೆ!” ಹೇಳಲು ಇನ್ನೇನೂ ಉಳಿದಿಲ್ಲ. ದೇವರ ಕೋಪದ ಪಾತ್ರೆಗಳಲ್ಲಿರುವುದು ಯೆಹೋವನಿಗೆ ತೃಪ್ತಿಯಾಗುವಂತೆ ಪ್ರಚುರಿಸಲ್ಪಟ್ಟಾಗ ಈ ಸಂದೇಶಗಳಿಂದ ಘೋಷಿಸಲ್ಪಡುವ ನ್ಯಾಯತೀರ್ಪುಗಳನ್ನು ಆತನು ಜಾರಿಗೊಳಿಸುವುದರಲ್ಲಿ ತಾಮಸವಾಗದು.

      37. ದೇವರ ಕೋಪದ ಏಳನೆಯ ಪಾತ್ರೆಯ ಹೊಯ್ಯುವಿಕೆಯ ಅನಂತರ ಆಗುವ ವಿಷಯವನ್ನು ಯೋಹಾನನು ಹೇಗೆ ವಿವರಿಸುತ್ತಾನೆ?

      37 ಯೋಹಾನನು ಮುಂದುವರಿಸುವುದು: “ಮತ್ತು ಮಿಂಚುಗಳು ಮತ್ತು ವಾಣಿಗಳು ಮತ್ತು ಗುಡುಗುಗಳು ಉಂಟಾದವು, ಮತ್ತು ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಸಂಭವಿಸಿದಿರ್ದದಂತಹ ಒಂದು ಮಹಾ ಭೂಕಂಪ, ಎಷ್ಟೋ ವ್ಯಾಪಕವಾದ, ಎಷ್ಟೋ ದೊಡ್ಡದಾದ ಒಂದು ಭೂಕಂಪವಾಯಿತು. ಮಹಾ ನಗರವು ಮೂರು ಭಾಗಗಳಾಗಿ ಸೀಳಲ್ಪಟ್ಟಿತು, ಮತ್ತು ಜನಾಂಗಗಳ ನಗರಗಳು ಬಿದ್ದವು; ಮತ್ತು ತನ್ನ ಕೋಪದ ದ್ರಾಕ್ಷಾಮದ್ಯದ ಪಾತ್ರೆಯನ್ನು ಅವಳಿಗೆ ಕುಡಿಯುವಂತೆ ಕೊಡಲು ದೇವರ ದೃಷ್ಟಿಯಲ್ಲಿ ಮಹಾ ಬಾಬೆಲ್‌ ಜ್ಞಾಪಿಸಲ್ಪಟ್ಟಳು. ಅಲ್ಲದೆ, ಪ್ರತಿಯೊಂದು ದ್ವೀಪವೂ ಓಡಿಹೋಯಿತು, ಮತ್ತು ಬೆಟ್ಟಗಳು ಕಾಣದೆ ಹೋದವು. ಮತ್ತು ಪ್ರತಿಯೊಂದು ಕಲ್ಲು ಸುಮಾರು ಒಂದು ಟ್ಯಾಲೆಂಟು ತೂಕವಿರುವ ಮಹಾ ಆನೇಕಲ್ಲಿನ ಮಳೆ ಆಕಾಶದಿಂದ ಮನುಷ್ಯರ ಮೇಲೆ ಇಳಿದುಬಂತು, ಆನೇಕಲ್ಲಿನ ಮಳೆಯ ಬಾಧೆಯ ಕಾರಣ ಮನುಷ್ಯರು ದೇವರನ್ನು ದೂಷಿಸಿದರು ಯಾಕಂದರೆ ಅದರ ಬಾಧೆಯು ಅಸಾಮಾನ್ಯವಾಗಿ ಮಹತ್ತಾಗಿತ್ತು.”—ಪ್ರಕಟನೆ 16:18-21, NW.

      38. ಇದರಿಂದ ಯಾವುದು ಸೂಚಿತವಾಗಿದೆ—(ಎ) “ಮಹಾ ಭೂಕಂಪ?” (ಬಿ) “ಮಹಾ ನಗರ,” ಮಹಾ ಬಾಬೆಲು “ಮೂರು ಭಾಗಗಳಾಗಿ” ಸೀಳಲ್ಪಡುವ ನಿಜತ್ವ? (ಸಿ) “ಪ್ರತಿಯೊಂದು ದ್ವೀಪ ಓಡಿಹೋಯಿತು, ಬೆಟ್ಟಗಳು ಕಾಣದೆ ಹೋದವು” ಎನ್ನುವ ನಿಜತ್ವ? (ಡಿ) “ಆನೇಕಲ್ಲಿನ ಮಳೆಯ ಬಾಧೆ?”

      38 ಪುನಃ ಒಮ್ಮೆ, ಯೆಹೋವನು ಮಾನವ ಕುಲದ ಕಡೆಗೆ ಸುಸ್ಪಷ್ಟವಾಗಿ ಕ್ರಿಯೆಗೈಯುತ್ತಾನೆ, ಇದು ‘ಮಿಂಚುಗಳಿಂದ, ವಾಣಿಗಳಿಂದ, ಗುಡುಗುಗಳಿಂದ’ ಸಂಕೇತಿಸಲ್ಪಡುತ್ತಿದೆ. (ಹೋಲಿಸಿರಿ ಪ್ರಕಟನೆ 4:5; 8:5.) ಹಿಂದೆಂದೂ ಸಂಭವಿಸದಿರುವ ರೀತಿಯಲ್ಲಿ ಮಾನವ ಕುಲವು, ಧ್ವಂಸಕಾರಕ ಭೂಕಂಪದಿಂದಲೋ ಎಂಬಂತೆ ನಡುಗಿಸಲ್ಪಡುವುದು. (ಹೋಲಿಸಿರಿ ಯೆಶಾಯ 13:13; ಯೋವೇಲ 3:16.) ಈ ಭಾರಿ ಧ್ವಂಸಕ ಅಲುಗಾಡುವಿಕೆಯು “ಮಹಾ ನಗರ”, ಮಹಾ ಬಾಬೆಲನ್ನು ಧ್ವಂಸಮಾಡುವುದು, ಹೀಗೆ ಅದು “ಮೂರು ಭಾಗಗಳಾಗಿ”—ಸರಿಪಡಿಸಲಾಗದ ವಿನಾಶದ ಕುಸಿದು ಬೀಳುವಿಕೆಯ ಸಂಕೇತವಾಗಿ—ಒಡೆಯಿತು. “ಜನಾಂಗಗಳ ನಗರಗಳು” ಕೂಡ ಬೀಳುವವು. “ಪ್ರತಿಯೊಂದು ದ್ವೀಪ”ವು ಮತ್ತು “ಬೆಟ್ಟಗಳು”—ಶಾಶ್ವತವೆಂದು ತೋರುವ ಈ ವ್ಯವಸ್ಥೆಯ ಸಂಘಟನೆಗಳು ಮತ್ತು ಸಂಸ್ಥೆಗಳು—ಹೋಗುವವು. ಏಳನೆಯ ವಿಪತ್ತಿನ ವೇಳೆಯಲ್ಲಿ ಐಗುಪ್ತವನ್ನು ಬಾಧಿಸಿದಕ್ಕಿಂತಲೂ ಹೆಚ್ಚು ಮಹತ್ತರವಾದ ಒಂದೊಂದು ಕಲ್ಲು ಸುಮಾರು ಒಂದು ಟ್ಯಾಲೆಂಟು ತೂಕವಾಗಿರುವ “ಮಹಾ ಆನೇಕಲ್ಲಿನ” ಮಳೆಯು, ಮಾನವ ಕುಲವನ್ನು ವೇದನಾಭರಿತವಾಗಿ ಹೊಡೆಯುವುದು.d (ವಿಮೋಚನಕಾಂಡ 9:22-26) ಹೆಪ್ಪುಗಟ್ಟಿದ ನೀರುಗಳ ಈ ಶಿಕ್ಷಿಸುವ ಧಾರೆಯು, ಸಂಭವನೀಯವಾಗಿ ಯೆಹೋವನ ನ್ಯಾಯತೀರ್ಪುಗಳ ಅಸಾಧಾರಣವಾದ ಭಾರೀ ಕಂಠೋಕ್ತಿ ಅಭಿವ್ಯಕ್ತಿಗಳನ್ನು ಚಿತ್ರಿಸುತ್ತದೆ, ಇದು ಕೊನೆಗೂ ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಬಂದು ಮುಟ್ಟಿದೆ ಎನ್ನುವುದನ್ನು ಸಂಕೇತಿಸುತ್ತದೆ! ಯೆಹೋವನು ತನ್ನ ನಾಶನದ ಕಾರ್ಯದಲ್ಲಿ ಅಕ್ಷರಾರ್ಥಕ ಆನೇಕಲ್ಲಿನ ಮಳೆಯನ್ನೂ ಉಪಯೋಗಿಸುವ ಸಾಧ್ಯತೆಯಿದೆ.—ಯೋಬ 38:22, 23.

      39. ಏಳು ಬಾಧೆಗಳ ಹೊಯ್ಯುವಿಕೆಯಾದರೂ, ಮಾನವ ಕುಲದಲ್ಲಿ ಅನೇಕರು ಯಾವ ಮಾರ್ಗಕ್ರಮವನ್ನು ತೆಗೆದುಕೊಳ್ಳಲಿರುವರು?

      39 ಹೀಗೆ, ಸೈತಾನನ ಲೋಕವು ಯೆಹೋವನ ನೀತಿಯುಳ್ಳ ನ್ಯಾಯತೀರ್ಪನ್ನು ಎದುರಿಸುವುದು. ಕೊನೆಗೆ, ಮನುಷ್ಯರಲ್ಲಿ ಅನೇಕರು ದೇವರನ್ನು ಪ್ರತಿಭಟಿಸುವುದನ್ನು ಹಾಗೂ ದೂಷಿಸುವುದನ್ನು ಮುಂದುವರಿಸುವರು. ಪುರಾತನ ಫರೋಹನೊಂದಿಗೆ ಇದ್ದ ಹಾಗೆಯೇ, ಅವರ ಹೃದಯಗಳು ಪುನರಾವರ್ತಿಸಲ್ಪಟ್ಟ ಬಾಧೆಗಳಿಂದ ಯಾ ಆ ಬಾಧೆಗಳ ಕೊನೆಯ ಮರಣಕ್ಕೆ ನಡಿಸುವ ತುತ್ತ ತುದಿಗೇರುವಿಕೆಯಿಂದ ಮೃದುಗೊಳಿಸಲ್ಪಡಲಾರವು. (ವಿಮೋಚನಕಾಂಡ 11:9, 10) ಯಾವುದೇ ಕೊನೇ ಕ್ಷಣದ, ದೊಡ್ಡ ಪ್ರಮಾಣದ ಹೃದಯದ ಪರಿವರ್ತನೆಯು ಅಲ್ಲಿರದು. ಅವರ ಕೊನೆಯುಸಿರಿನಲ್ಲಿಯೂ, “ನಾನೇ ಯೆಹೋವನೆಂದು ಅವರಿಗೆ ಗೊತ್ತಾಗುವುದು” ಎಂದು ಪ್ರಕಟಿಸುವ ದೇವರ ವಿರುದ್ಧ ಅವರು ದೂಷಣೆ ಮಾಡುವರು. (ಯೆಹೆಜ್ಕೇಲ 38:23) ಆದಾಗ್ಯೂ, ಸರ್ವಶಕ್ತ ಯೆಹೋವ ದೇವರ ಸಾರ್ವಭೌಮತೆಯು ನಿರ್ದೋಷೀಕರಿಸಲ್ಪಟ್ಟಿರುವುದು.

  • ಕುಖ್ಯಾತ ಜಾರಸ್ತ್ರೀಗೆ ತೀರ್ಪುಮಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 1. ಏಳು ದೇವದೂತರಲ್ಲಿ ಒಬ್ಬನು ಯೋಹಾನನಿಗೆ ಏನನ್ನು ಪ್ರಕಟಿಸುತ್ತಾನೆ?

      ಯೆಹೋವನ ನೀತಿಯ ಕೋಪವು, ಅದರ ಏಳು ಪಾತ್ರೆಗಳಿಂದಲೂ ಸಮಗ್ರವಾಗಿ ಹೊಯ್ಯಲ್ಪಡಬೇಕು! ತನ್ನ ಪಾತ್ರೆಯನ್ನು ಆರನೆಯ ದೇವದೂತನು ಪ್ರಾಚೀನ ಬಾಬೆಲಿನ ನೆಲೆಯಲ್ಲಿ ಖಾಲಿ ಮಾಡಿದಾಗ ಅರ್ಮಗೆದೋನಿನ ಕೊನೆಯ ಯುದ್ಧದೆಡೆಗೆ ಘಟನೆಗಳು ಶೀಘ್ರವಾಗಿ ಚಲಿಸುತ್ತಿದ್ದಂತೆ, ಅದು ಮಹಾ ಬಾಬೆಲಿನ ಬಾಧಿಸುವಿಕೆಯನ್ನು ತಕ್ಕದಾಗಿಯೇ ಸೂಚಿಸಿತು. (ಪ್ರಕಟನೆ 16:1, 12, 16) ಯೆಹೋವನು ಯಾಕೆ ಮತ್ತು ಹೇಗೆ ತನ್ನ ನೀತಿಯ ನ್ಯಾಯತೀರ್ಪುಗಳನ್ನು ಜಾರಿಗೊಳಿಸುತ್ತಾನೆಂಬುದನ್ನು ಪ್ರಾಯಶಃ ಈಗ ಅದೇ ದೇವದೂತನು ಪ್ರಕಟಿಸುತ್ತಾನೆ. ಯೋಹಾನನು ತಾನೇನನ್ನು ಮುಂದೆ ಕೇಳುತ್ತಾನೋ ಮತ್ತು ನೋಡುತ್ತಾನೋ ಅದರಿಂದ ಆಶ್ಚರ್ಯಚಕಿತನಾಗುತ್ತಾನೆ. “ಮತ್ತು ಏಳು ಪಾತ್ರೆಗಳು ಇದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡಿ, ಅಂದದ್ದು: ‘ಬಾ, ಬಹಳ ನೀರುಗಳ ಮೇಲೆ ಕುಳಿತುಕೊಳ್ಳುವ ಮತ್ತು ಯಾರೊಂದಿಗೆ ಭೂರಾಜರು ಜಾರತ್ವ ಮಾಡಿದರೋ, ಆದರೆ ಭೂಮಿಯಲ್ಲಿ ವಾಸಿಸುವವರು ಆಕೆಯ ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗುವಂತೆ ಮಾಡಲ್ಪಟ್ಟರೋ ಆ ಮಹಾ ಜಾರಸ್ತ್ರೀಗೆ ಬರುವ ತೀರ್ಪನ್ನು ನಾನು ನಿನಗೆ ತೋರಿಸುತ್ತೇನೆ.”—ಪ್ರಕಟನೆ 17:1, 2, NW.

      2. “ಮಹಾ ಜಾರ ಸ್ತ್ರೀಯು” (ಎ) ಪ್ರಾಚೀನ ರೋಮ್‌ ಅಲ್ಲ? (ಬಿ) ದೊಡ್ಡ ವ್ಯಾಪಾರ ಅಲ್ಲ? (ಸಿ) ಒಂದು ಧಾರ್ಮಿಕ ಅಸ್ತಿತ್ವವಾಗಿದೆ ಎಂಬುದಕ್ಕೆ ಯಾವ ಪುರಾವೆ ಇದೆ?

      2 “ಮಹಾ ಜಾರಸ್ತ್ರೀ”! ಇಷ್ಟೊಂದು ತಲ್ಲಣಗೊಳಿಸುವ ಹೆಸರು ಏಕೆ? ಅವಳು ಯಾರು? ಕೆಲವರು ಈ ಸಾಂಕೇತಿಕ ಜಾರಸ್ತ್ರೀಯನ್ನು ಪ್ರಾಚೀನ ರೋಮಿನೊಂದಿಗೆ ಗುರುತಿಸುತ್ತಾರೆ. ಆದರೆ ರೋಮ್‌ ಒಂದು ರಾಜಕೀಯ ಶಕ್ತಿಯಾಗಿತ್ತು. ಈ ಜಾರ ಸ್ತ್ರೀಯು ಭೂಮಿಯ ರಾಜರೊಂದಿಗೆ ಜಾರತ್ವವನ್ನು ಮಾಡುತ್ತಾಳೆ. ಮತ್ತು ಇದು ಸುವ್ಯಕ್ತವಾಗಿ ರೋಮಿನ ರಾಜರನ್ನು ಒಳಗೂಡುತ್ತದೆ. ಅಲ್ಲದೆ, ಅವಳ ನಾಶನದ ಅನಂತರ “ಭೂರಾಜರು” ಅವಳ ನಿಧನಕ್ಕಾಗಿ ಗೋಳಾಡುವರೆಂದು ಹೇಳಲಾಗಿದೆ. ಆದುದರಿಂದ, ಅವಳು ಒಂದು ರಾಜಕೀಯ ಶಕ್ತಿಯಾಗಿರಸಾಧ್ಯವಿಲ್ಲ. (ಪ್ರಕಟನೆ 18:9, 10) ಹೆಚ್ಚಿನದ್ದಾಗಿ, ಲೋಕದ ವರ್ತಕರು ಕೂಡ ಅವಳಿಗಾಗಿ ಗೋಳಾಡುವುದರಿಂದ ಅವಳು ಮಹಾ ವ್ಯಾಪಾರವನ್ನು ಚಿತ್ರಿಸಸಾಧ್ಯವಿಲ್ಲ. (ಪ್ರಕಟನೆ 18:15, 16) ಆದಾಗ್ಯೂ, ‘ಅವಳ ಮಾಟದಿಂದ ಎಲ್ಲಾ ಜನಾಂಗಗಳು ತಪ್ಪುದಾರಿಗೆ ನಡಿಸಲ್ಪಟ್ಟರು’ ಎಂದು ನಾವು ಓದುತ್ತೇವೆ. (ಪ್ರಕಟನೆ 18:23) ಮಹಾ ಜಾರ ಸ್ತ್ರೀಯು ಒಂದು ಭೂವ್ಯಾಪಕ ಧಾರ್ಮಿಕ ಅಸ್ತಿತ್ವವಾಗಿರಬೇಕೆಂದು ಇದು ಸ್ಪಷ್ಟಮಾಡುತ್ತದೆ.

      3. (ಎ) ಮಹಾ ಜಾರ ಸ್ತ್ರೀಯು ರೋಮನ್‌ ಕ್ಯಾತೊಲಿಕ್‌ ಚರ್ಚು ಯಾ ಕ್ರೈಸ್ತಪ್ರಪಂಚವೆಲ್ಲವನ್ನು ಸೂಚಿಸುವುದಕ್ಕಿಂತಲೂ ಹೆಚ್ಚಿನದ್ದು ಆಗಿದೆ ಯಾಕೆ? (ಬಿ) ಹೆಚ್ಚಿನ ಪ್ರಾಚ್ಯ ಧರ್ಮಗಳಲ್ಲಿ ಹಾಗೂ ಕ್ರೈಸ್ತಪ್ರಪಂಚದ ಪಂಗಡಗಳಲ್ಲಿ ಯಾವ ಬಾಬೆಲಿನ ಬೋಧನೆಗಳು ಕಾಣಸಿಗುತ್ತವೆ? (ಸಿ) ಕ್ರೈಸ್ತಪ್ರಪಂಚದ ಬೋಧನೆಗಳು, ಸಂಸ್ಕಾರಗಳು, ಮತ್ತು ಆಚಾರಗಳಲ್ಲಿ ಅನೇಕವುಗಳ ಉಗಮದ ಕುರಿತು ರೋಮನ್‌ ಕ್ಯಾತೊಲಿಕ್‌ ಕಾರ್ಡಿನಲ್‌ ಜಾನ್‌ ಹೆನ್ರಿ ನ್ಯೂ ಮ್ಯನ್‌ ಏನನ್ನು ಒಪ್ಪುತ್ತಾರೆ? (ಪಾದಟಿಪ್ಪಣಿಯನ್ನು ನೋಡಿರಿ.)

      3 ಯಾವ ಧಾರ್ಮಿಕ ಅಸ್ತಿತ್ವ? ಕೆಲವರು ಅದನ್ನು ಸಮರ್ಥಿಸುವಂತೆ, ಅವಳು ರೋಮನ್‌ ಕ್ಯಾತೊಲಿಕ್‌ ಚರ್ಚ್‌ ಆಗಿದ್ದಾಳೋ? ಅಥವಾ, ಅವಳು ಸಮಸ್ತ ಕ್ರೈಸ್ತಪ್ರಪಂಚವೂ? ಇಲ್ಲ, ಎಲ್ಲಾ ಜನಾಂಗಗಳನ್ನು ಅವಳು ತಪ್ಪುದಾರಿಗೆ ನಡಿಸಿರಬೇಕಾದರೆ, ಇವುಗಳಿಗಿಂತ ಅವಳು ಬಹು ದೊಡ್ಡವಳಾಗಿರಬೇಕು. ನಿಜವಾಗಿಯೂ, ಅವಳು ಸುಳ್ಳು ಧರ್ಮದ ಇಡೀ ಲೋಕ ಸಾಮ್ರಾಜ್ಯವಾಗಿರಬೇಕು. ಬಾಬೆಲಿನ ರಹಸ್ಯಗಳಲ್ಲಿನ ಅವಳ ಆರಂಭ, ಭೂಮಿಯ ಎಲ್ಲಾ ಕಡೆಯ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಅನೇಕ ಬಾಬೆಲಿನ ಬೋಧನೆಗಳು ಮತ್ತು ಆಚಾರಗಳಲ್ಲಿ ತೋರಿಬರುತ್ತದೆ. ಉದಾಹರಣೆಗೆ, ಮಾನವ ಆತ್ಮದ ಅಂತರ್ಜಾತ ಅಮರತ್ವದಲ್ಲಿ ನಂಬಿಕೆ, ಯಾತನೆಯ ನರಕದಲ್ಲಿ ಮತ್ತು ದೇವರುಗಳ ತ್ರಯೈಕ್ಯದಲ್ಲಿ ನಂಬಿಕೆಯು ಅನೇಕ ಪೌರಸ್ತ್ಯ ಧರ್ಮಗಳಲ್ಲಿ ಮಾತ್ರವಲ್ಲ, ಕ್ರೈಸ್ತಪ್ರಪಂಚದ ಒಳಪಂಗಡಗಳಲ್ಲೂ ಕಾಣಸಿಗುತ್ತದೆ. ಬಾಬೆಲಿನ ಪ್ರಾಚೀನ ನಗರದಲ್ಲಿ 4,000 ವರ್ಷಗಳಿಗಿಂತಲೂ ಹೆಚ್ಚು ಹಿಂದೆ ಚಿಗುರಿದ ಸುಳ್ಳು ಧರ್ಮವು, ಈಗ ಯುಕ್ತವಾಗಿಯೇ ಮಹಾ ಬಾಬೆಲ್‌ ಎಂದು ಕರೆಯಲ್ಪಡುವ ಆಧುನಿಕ ವಿಕಾರತೆಯೊಳಗೆ ಪೂರ್ಣವಾಗಿ ವಿಕಸಿಸಿದೆ.* ಆದರೂ ಅವಳು “ಮಹಾ ಜಾರಸ್ತ್ರೀ” ಎಂಬ ಅಸಹ್ಯ ಪದದಿಂದ ಯಾಕೆ ವರ್ಣಿಸಲ್ಪಟ್ಟಿದ್ದಾಳೆ?

      4. (ಎ) ಪುರಾತನ ಇಸ್ರಾಯೇಲ್‌ ಯಾವ ರೀತಿಗಳಲ್ಲಿ ಜಾರತ್ವವನ್ನು ನಡಿಸಿದಳು? (ಬಿ) ಮಹಾ ಬಾಬೆಲ್‌ ಯಾವ ಪ್ರಧಾನ ರೀತಿಯಲ್ಲಿ ಜಾರತ್ವವನ್ನು ನಡಿಸಿದ್ದಾಳೆ?

      4 ಬ್ಯಾಬಿಲನ್‌ (ಅಥವಾ ಬಾಬೆಲ್‌ ಅರ್ಥ “ಗಲಿಬಿಲಿ”) ನೆಬೂಕದ್ನೆಚ್ಚರನ ಸಮಯದಲ್ಲಿ ಮಹೋನ್ನತಿಯ ಶಿಖರಕ್ಕೆ ಏರಿತು. ಇದ್ದ ಒಂದು ಸಾವಿರಕ್ಕಿಂತಲೂ ಹೆಚ್ಚು ದೇವಾಲಯಗಳು ಮತ್ತು ಮಂದಿರಗಳಿಂದ ಅದು ಒಂದು ಧಾರ್ಮಿಕ-ರಾಜಕೀಯ ರಾಜ್ಯವಾಗಿತ್ತು. ಅದರ ಪೌರೋಹಿತ್ಯ ಮಹಾ ಅಧಿಕಾರವನ್ನು ಚಲಾಯಿಸಿತು. ಬಾಬೆಲು ಲೋಕ ಶಕ್ತಿಯಾಗಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿಲ್ಲದಿರುವುದಾದರೂ ಕೂಡ, ಧಾರ್ಮಿಕ ಮಹಾ ಬಾಬೆಲ್‌ ಇನ್ನೂ ಜೀವಿಸುತ್ತಾ ಇದೆ, ಮತ್ತು ಪ್ರಾಚೀನ ನಮೂನೆಯಂತೆಯೇ ಇನ್ನೂ ರಾಜಕೀಯ ಕಾರ್ಯಾದಿಗಳನ್ನು ಪ್ರಭಾವಿಸಲು ಮತ್ತು ಪರಿವರ್ತಿಸಲು ಆಕೆ ಅನ್ವೇಷಿಸುತ್ತಿದ್ದಾಳೆ. ಆದರೆ ರಾಜಕೀಯದಲ್ಲಿ ಧರ್ಮವನ್ನು ದೇವರು ಮೆಚ್ಚುತ್ತಾನೋ? ಹೀಬ್ರು ಶಾಸ್ತ್ರವಚನಗಳಲ್ಲಿ, ಇಸ್ರಾಯೇಲ್‌ ತನ್ನನ್ನು ಸುಳ್ಳು ಧರ್ಮದೊಂದಿಗೆ ಒಳಗೂಡಿಸಿಗೊಂಡಾಗ, ಮತ್ತು ಯೆಹೋವನಲ್ಲಿ ಭರವಸೆ ಇಡುವುದರ ಬದಲು, ಅವಳು ಜನಾಂಗಗಳೊಂದಿಗೆ ಮೈತ್ರಿಯನ್ನು ಮಾಡಿದಾಗ, ಅವಳು ಸೂಳೆತನವನ್ನು ನಡಿಸಿದಳೆಂದು ಹೇಳಲಾಗಿದೆ. (ಯೆರೆಮೀಯ 3:6, 8, 9; ಯೆಹೆಜ್ಕೇಲ 16:28-30) ಮಹಾ ಬಾಬೆಲ್‌ ಕೂಡ ಜಾರತ್ವವನ್ನು ನಡಿಸಿದ್ದಾಳೆ. ವಿಶೇಷವಾಗಿ, ಭೂಮಿಯನ್ನು ಆಳುವ ರಾಜರ ಮೇಲೆ ಪ್ರಭಾವ ಮತ್ತು ಶಕ್ತಿಯನ್ನು ಪಡೆಯಲು ಏನು ಉಚಿತವಾಗಿದೆಯೆಂದು ಅವಳು ಎಣಿಸುತ್ತಾಳೋ ಅದನ್ನೆಲ್ಲಾ ಮಾಡಿದ್ದಾಳೆ.—1 ತಿಮೊಥೆಯ 4:1.

      5. (ಎ) ಧಾರ್ಮಿಕ ವೈದಿಕರು ಯಾವ ರಂಗಸ್ಥಳದ ಬೆಳಕಿನಲ್ಲಿ ಆನಂದಿಸುತ್ತಾರೆ? (ಬಿ) ಲೌಕಿಕ ಪ್ರಮುಖತೆಯ ಆಕಾಂಕ್ಷೆಯು ಯೇಸು ಕ್ರಿಸ್ತನ ಮಾತುಗಳ ನೇರ ವಿರೋಧೋಕ್ತಿಯಾಗಿದೆ ಯಾಕೆ?

      5 ಇಂದು ಧಾರ್ಮಿಕ ಮುಖಂಡರು ಉಚ್ಚ ಸರಕಾರೀ ಹುದ್ದೆಗಾಗಿ ಪದೇ ಪದೇ ಚಳವಳಿ ನಡಿಸುತ್ತಾರೆ, ಮತ್ತು ಕೆಲವು ದೇಶಗಳಲ್ಲಿ ಅವರು ಮಂತ್ರಿಮಂಡಲದಲ್ಲಿ ಸೇರುವುದರ ಮೂಲಕ ಕೂಡ, ಸರಕಾರದಲ್ಲಿ ಭಾಗವಹಿಸುತ್ತಾರೆ. ಎರಡು ಖ್ಯಾತ ಪ್ರಾಟೆಸ್ಟಂಟ್‌ ವೈದಿಕರು 1988 ರಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆಗಾಗಿ ಪ್ರಯತ್ನಿಸಿದರು. ಮಹಾ ಬಾಬೆಲಿನಲ್ಲಿ ಮುಖಂಡರು ರಂಗಸ್ಥಳದ ಬೆಳಕನ್ನು ಪ್ರೀತಿಸುತ್ತಾರೆ; ಪ್ರಮುಖ ರಾಜನೀತಿಜ್ಞರೊಂದಿಗೆ ಅವರು ಜೊತೆ ಸೇರುತ್ತಿರುವಾಗ, ಸಾರ್ವಜನಿಕ ಮಾಧ್ಯಮಗಳಲ್ಲಿ ಅವರ ಭಾವಚಿತ್ರಗಳು ಯಾವಾಗಲೂ ಕಾಣಬರುತ್ತವೆ. ಪ್ರತಿಹೋಲಿಕೆಯಲ್ಲಿ, ಯೇಸುವು ರಾಜಕೀಯ ಒಳಗೂಡುವಿಕೆಯನ್ನು ವರ್ಜಿಸಿದನು ಮತ್ತು ತನ್ನ ಶಿಷ್ಯರ ಕುರಿತು ಹೀಗಂದನು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.”—ಯೋಹಾನ 6:15; 17:16; ಮತ್ತಾಯ 4:8-10; ಯಾಕೋಬ 4:4 ಸಹ ನೋಡಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ