ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 17. (ಎ) ಗೋದಿ ಮತ್ತು ಹಣಜಿಯ ಯೇಸುವಿನ ಸಾಮ್ಯವು ಏನನ್ನು ಮುಂತಿಳಿಸಿತು? (ಬಿ) 1918 ರಲ್ಲಿ ಏನು ಸಂಭವಿಸಿತು, ಇದರಿಂದ ಯಾವ ತ್ಯಜಿಸುವಿಕೆ ಮತ್ತು ಯಾವ ನೇಮಕವು ಫಲಿತಾಂಶವಾಗಿ ಉಂಟಾಯಿತು?

      17 ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ, ಯೇಸುವು ಕ್ರೈಸ್ತಪ್ರಪಂಚವು ಪರಮಾಧಿಕಾರದಿಂದ ಆಳುವಾಗ ಇರುವ ಒಂದು ಅಂಧಕಾರದ ಸಮಯದ ಕುರಿತು ಮುಂತಿಳಿಸಿದನು. ಆದಾಗ್ಯೂ, ಧರ್ಮಭ್ರಷ್ಟತೆಯ ಶತಮಾನಗಳಲ್ಲಿಲ್ಲಾ, ಗೋದಿಯಂತಹ ಒಬ್ಬೊಬ್ಬ ಕ್ರೈಸ್ತರು, ಅಪ್ಪಟ ಅಭಿಷಿಕ್ತರು ಅಸ್ತಿತ್ವದಲ್ಲಿರುವರು. (ಮತ್ತಾಯ 13:24-29, 36-43) ಈ ರೀತಿಯಲ್ಲಿ, ಅಕ್ಟೋಬರ 1914 ರಲ್ಲಿ ಕರ್ತನ ದಿನವು ಉದಯಿಸಿದಾಗ, ಸತ್ಯ ಕ್ರೈಸ್ತರು ಭೂಮಿಯ ಮೇಲೆ ಇನ್ನೂ ಇದ್ದರು. (ಪ್ರಕಟನೆ 1:10) ಮೂರುವರೆ ವರ್ಷಗಳ ನಂತರ, 1918 ರಲ್ಲಿ, ಯೆಹೋವನು ತನ್ನ “ಒಡಂಬಡಿಕೆಯ ದೂತನಾದ” ಯೇಸುವಿನೊಂದಿಗೆ ತನ್ನ ಆತ್ಮಿಕ ದೇವಾಲಯಕ್ಕೆ, ನ್ಯಾಯತೀರ್ಪು ಮಾಡಲು ಆಗಮಿಸಿದನು ಎಂದು ತೋರುತ್ತದೆ. (ಮಲಾಕಿಯ 3:1; ಮತ್ತಾಯ 13:47-50) ಯಜಮಾನನು ಸುಳ್ಳು ಕ್ರೈಸ್ತರನ್ನು ಕಟ್ಟಕಡೆಗೆ ತ್ಯಜಿಸುವ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ಅವನ ಎಲ್ಲಾ ಆಸ್ತಿಯ ಮೇಲೆ’ ನೇಮಕ ಮಾಡುವ ಸಮಯವು ಅದಾಗಿತ್ತು.—ಮತ್ತಾಯ 7:22, 23; 24:45-47.

      18. ಯಾವ “ತಾಸು” 1914 ರಲ್ಲಿ ಬಂತು, ಮತ್ತು ಆಳು ಯಾವದನ್ನು ಮಾಡಲು ಅದು ಸಮಯವಾಗಿತ್ತು?

      18 ಅಲ್ಲಿ ತಿಳಿಸಿರುವ ಸಂಗತಿಗಳಿಂದ ನಾವು ನೋಡುವಂತೆ, ಏಳು ಸಭೆಗಳಿಗೆ ಯೇಸುವಿನ ಸಂದೇಶಗಳಲ್ಲಿ ಬರೆದಿರುವ ಸಂಗತಿಗಳಿಗೆ ಈ ಆಳು ವಿಶೇಷ ಗಮನ ಕೊಡುವ ಸಮಯವು ಕೂಡ ಅದಾಗಿತ್ತು. ಉದಾಹರಣೆಗೆ, ಯಾವ ನ್ಯಾಯತೀರ್ಪು 1918 ರಲ್ಲಿ ಆರಂಭಗೊಂಡಿತೋ ಆ ಸಭೆಗಳ ನ್ಯಾಯತೀರ್ಪು ಮಾಡಲು ತಾನು ಬರುವುದರ ಕುರಿತಾಗಿ ಯೇಸುವು ಸೂಚಿಸುತ್ತಾನೆ. (ಪ್ರಕಟನೆ 2:5, 16, 22, 23; 3:3) “ಲೋಕದ ಮೇಲ್ಲೆಲಾ ಬರುವದಕ್ಕಿರುವ ಶೋಧನೆಯ ತಾಸಿನಲ್ಲಿ” ಫಿಲದೆಲ್ಫಿಯ ಸಭೆಯನ್ನು ಸುರಕ್ಷಿತವಾಗಿಡುವದರ ಕುರಿತು ಅವನು ಮಾತಾಡುತ್ತಾನೆ. (ಪ್ರಕಟನೆ 3:10, 11, NW) ಈ “ಶೋಧನೆಯ ತಾಸು” 1914 ರಲ್ಲಿ ಕರ್ತನ ದಿನವು ಉದಯಿಸುವುದರೊಂದಿಗೆ ಮಾತ್ರ ಆಗಮಿಸುತ್ತದೆ, ತದನಂತರ ದೇವರ ಸ್ಥಾಪಿತ ರಾಜ್ಯದ ಕಡೆಗಿನ ಅವರ ನಿಷ್ಠೆಯ ಕುರಿತಾಗಿ ಕ್ರೈಸ್ತರು ಪರೀಕ್ಷಿಸಲ್ಪಟ್ಟರು.—ಹೋಲಿಸಿರಿ ಮತ್ತಾಯ 24:3, 9-13.

      19. (ಎ) ಇಂದು ಏಳು ಸಭೆಗಳು ಏನನ್ನು ಚಿತ್ರಿಸುತ್ತವೆ? (ಬಿ) ಅಭಿಷಿಕ್ತ ಕ್ರೈಸ್ತರೊಂದಿಗೆ ಬಹುಸಂಖ್ಯೆಯಲ್ಲಿ ಯಾರು ಜತೆಗೂಡಿದ್ದಾರೆ, ಮತ್ತು ಯೇಸುವಿನ ಬುದ್ಧಿವಾದ ಮತ್ತು ಅವನು ವರ್ಣಿಸಿದ ಪರಿಸ್ಥಿತಿಗಳು ಅವರಿಗೂ ಅನ್ವಯಿಸುತ್ತದೆ ಏಕೆ? (ಸಿ) ಮೊದಲನೆಯ ಶತಕದ ಏಳು ಸಭೆಗಳಿಗಾಗಿರುವ ಯೇಸುವಿನ ಸಂದೇಶಗಳನ್ನು ನಾವು ಹೇಗೆ ವೀಕ್ಷಿಸತಕ್ಕದ್ದು?

      19 ಈ ಕಾರಣಕ್ಕಾಗಿ, ಸಭೆಗಳಿಗಾಗಿರುವ ಯೇಸುವಿನ ಮಾತುಗಳ ಪ್ರಧಾನ ಅನ್ವಯಿಸುವಿಕೆಯು 1914 ರಿಂದ ನಡೆಯಿತು. ಈ ಸನ್ನಿವೇಶದಲ್ಲಿ, ಏಳು ಸಭೆಗಳು ಕರ್ತನ ದಿನದಲ್ಲಿರುವ ಅಭಿಷಿಕ್ತ ಕ್ರೈಸ್ತರ ಎಲ್ಲಾ ಸಭೆಗಳನ್ನು ಚಿತ್ರಿಸುತ್ತವೆ. ಮೇಲಾಗಿ, ಕಳೆದ 50 ಮತ್ತು ಅದಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ, ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಕಾಲ ಜೀವಿಸುವ ನಿರೀಕ್ಷೆಯೊಂದಿಗೆ ಬಹುಸಂಖ್ಯಾತ ನಂಬಿಗಸ್ತರು, ಯೋಹಾನನಿಂದ ಚಿತ್ರಿತವಾದ ಅಭಿಷಿಕ್ತ ಕ್ರೈಸ್ತರೊಂದಿಗೆ ಜತೆಗೂಡಿರುತ್ತಾರೆ. ಮಹಿಮಾಭರಿತ ಯೇಸು ಕ್ರಿಸ್ತನ ಬುದ್ಧಿವಾದ ಮತ್ತು ಅವನ ಪರೀಕ್ಷಣೆಯ ಫಲಿತಾಂಶವಾಗಿ ಏಳು ಸಭೆಗಳಲ್ಲಿ ತೋರಿಬಂದ ಪರಿಸ್ಥಿತಿಗಳು, ಅದೇ ಸಮಬಲದಿಂದ ಅನ್ವಯಿಸುತ್ತವೆ, ಯಾಕಂದರೆ ಯೆಹೋವನ ಎಲ್ಲಾ ಸೇವಕರಿಗೆ ನೀತಿ ಮತ್ತು ನಂಬಿಗಸ್ತಿಕೆಯ ಕೇವಲ ಒಂದೇ ಒಂದು ಮಟ್ಟವಿದೆ. (ವಿಮೋಚನಕಾಂಡ 12:49; ಕೊಲೊಸ್ಸೆ 3:11) ಈ ರೀತಿಯಲ್ಲಿ, ಏಷಿಯ ಮೈನರಿನ ಮೊದಲನೆಯ ಶತಕದ ಏಳು ಸಭೆಗಳಿಗಾಗಿರುವ ಯೇಸುವಿನ ಸಂದೇಶಗಳು ಕೇವಲ ಐತಿಹಾಸಿಕ ಕುತೂಹಲತೆಯದ್ದಾಗಿರುವದಿಲ್ಲ. ನಮ್ಮಲ್ಲಿ ಪ್ರತಿಯೊಬ್ಬನಿಗೂ ಅವುಗಳು ಜೀವ ಇಲ್ಲವೆ ಮರಣ ಎಂಬರ್ಥದಲ್ಲಿ ಇವೆ. ಆದುದರಿಂದ, ಯೇಸುವಿನ ಮಾತುಗಳನ್ನು ನಾವು ಜಾಗ್ರತೆಯಿಂದ ಆಲಿಸೋಣ.

  • ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸು!
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 1. ಯೇಸುವಿನ ಮೊದಲ ಸಂದೇಶವು ಯಾವ ಸಭೆಗೆ ನಿರ್ದೇಶಿಸಲ್ಪಟ್ಟಿದೆ, ಮತ್ತು ಮೇಲ್ವಿಚಾರಕರಿಗೆ ಅವನು ಏನನ್ನು ನೆನಪಿಸುತ್ತಾನೆ?

      ಯೇಸುವಿನ ಮೊದಲ ಸಂದೇಶವು ಆ ಸಮಯದಲ್ಲಿ ಪ್ಯಾಟ್ಮಸ್‌ ದ್ವೀಪಕ್ಕೆ ಸಮೀಪದ ಏಷಿಯ ಮೈನರಿನ ಏಳಿಗೆ ಹೊಂದುತ್ತಿದ್ದ ಒಂದು ಕರಾವಳೀ ನಗರವಾಗಿದ್ದ ಎಫೆಸದಲ್ಲಿರುವ ಸಭೆಗಾಗಿ ಇತ್ತು. ಅವನು ಯೋಹಾನನಿಗೆ ಆಜ್ಞಾಪಿಸುವುದು: “ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುವ ಸಂಗತಿಗಳು ಇವುಗಳಾಗಿವೆ.” (ಪ್ರಕಟನೆ 2:1, NW) ಇತರ ಆರು ಸಂದೇಶಗಳಲ್ಲಿರುವಂತೆ, ಅವನ ಅಧಿಕಾರಯುಕ್ತ ಸ್ಥಾನವನ್ನು ಸೂಚಿಸುವ ಒಂದು ವೈಶಿಷ್ಟ್ಯಕ್ಕೆ ಯೇಸುವು ಇಲ್ಲಿ ಗಮನ ಸೆಳೆಯುತ್ತಾನೆ. ಎಲ್ಲಾ ಹಿರಿಯರು ಅವನ ಸ್ವಂತ ರಕ್ಷಣೆಯ ಮೇಲ್ವಿಚಾರಣೆಯ ಕೆಳಗೆ ಇರುತ್ತಾರೆ ಮತ್ತು ಅವನು ಎಲ್ಲಾ ಸಭೆಗಳನ್ನು ಪರೀಕ್ಷಿಸುತ್ತಿದ್ದಾನೆ ಎಂದು ಎಫೆಸದ ಮೇಲ್ವಿಚಾರಕರಿಗೆ ಅವನು ಜ್ಞಾಪಕ ಕೊಡುತ್ತಾನೆ. ನಮ್ಮ ಈ 20 ನೆಯ ಶತಮಾನದಲ್ಲಿಯೂ, ಅವನು ಈ ಪ್ರೀತಿಯ ಶಿರಸ್ಸುತನವನ್ನು ಚಲಾಯಿಸುವುದನ್ನು, ಹಿರಿಯರ ಮೇಲೆ ನಿಗಾ ಇಡುವುದನ್ನು ಮತ್ತು ಸಭೆಯೊಂದಿಗೆ ಸಹವಾಸ ಮಾಡುವವರೆಲ್ಲರನ್ನು ದಯೆಯಿಂದ ಕುರಿಪಾಲನೆ ಮಾಡುವುದನ್ನು ಮುಂದರಿಸಿದ್ದಾನೆ. ಆಗಿಂದಾಗ್ಗೆ, ಬೆಳಕು ಹೆಚ್ಚು ಪ್ರಕಾಶಮಯವಾಗಿ ಬೆಳಗುವಂತೆ ಸಭಾ ಏರ್ಪಾಡುಗಳಲ್ಲಿ ಅವನು ಹೊಂದಾಣಿಕೆ ಮಾಡುತ್ತಾನೆ. ಹೌದು, ದೇವರ ಮಂದೆಯ ಮೇಲೆ ಯೇಸು ಮುಖ್ಯ ಕುರುಬನಾಗಿರುತ್ತಾನೆ.—ಮತ್ತಾಯ 11:28-30; 1 ಪೇತ್ರ 5:2-4.

      2. (ಎ) ಎಫೆಸದ ಸಭೆಯನ್ನು ಯಾವ ಉತ್ತಮ ಸಂಗತಿಗಳಿಗಾಗಿ ಯೇಸು ಶ್ಲಾಘಿಸಿದನು? (ಬಿ) ಎಫೆಸದ ಹಿರಿಯರುಗಳು ಅಪೊಸ್ತಲ ಪೌಲನ ಯಾವ ಬುದ್ಧಿವಾದಕ್ಕೆ ವಿಧೇಯರಾಗಿದ್ದರೆಂದು ರುಜುವಾಗುತ್ತದೆ?

      2 ಅನಂತರ ಯೇಸುವು ಅವನ ಏಳು ಸಂದೇಶಗಳಲ್ಲಿ ಎರಡರ ಹೊರತಾಗಿ, ಬೇರೆಲ್ಲವುಗಳಿಗೆ ಶ್ಲಾಘನೆಯ ಉತ್ಸಾಹದ ಮಾತುಗಳಿಂದ ಆರಂಭಿಸುವುದರೊಂದಿಗೆ ಒಂದು ಮಾದರಿಯನ್ನು ಇಡುತ್ತಾನೆ. ಎಫೆಸದವರಿಗೆ, ಅವನ ಸಂದೇಶ ಹೀಗಿತ್ತು: “ನಿನ್ನ ಕೃತ್ಯಗಳನ್ನೂ, ಮತ್ತು ನಿನ್ನ ಪ್ರಯಾಸವನ್ನೂ, ಮತ್ತು ತಾಳ್ಮೆಯನ್ನೂ ನಾನು ಬಲ್ಲೆನು, ಮತ್ತು ನೀನು ದುಷ್ಟ ಜನರನ್ನು ಸಹಿಸಲಾರಿ, ಮತ್ತು ಅವರು ಅಂತಹವರಲ್ಲದಿದ್ದರೂ, ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕೆಗ್ಷೊಳಪಡಿಸುತ್ತೀ, ಮತ್ತು ಅವರು ಸುಳ್ಳುಗಾರರೆಂದು ಕಂಡುಕೊಂಡಿ. ನೀನು ತಾಳ್ಮೆಯನ್ನು ಕೂಡ ತೋರಿಸುತ್ತೀ, ಮತ್ತು ನನ್ನ ಹೆಸರಿನ ನಿಮಿತ್ತ ಸೈರಣೆಯನ್ನು ತೋರಿಸುತ್ತೀ, ಮತ್ತು ಬೇಸರಗೊಂಡಿಲ್ಲ.” (ಪ್ರಕಟನೆ 2:2, 3, NW) ವರ್ಷಗಳ ಮೊದಲೇ ಅಪೊಸ್ತಲ ಪೌಲನು ಎಫೆಸದ ಹಿರಿಯರಿಗೆ “ಕ್ರೂರವಾದ ತೋಳಗಳ,” ಮಂದೆಯನ್ನು ಧರ್ಮಭ್ರಷ್ಟ ದಾಂಧಲೆಗೊಳಿಸುವವರ ಕುರಿತು ಎಚ್ಚರಿಸಿದ್ದನು, ಮತ್ತು ತನ್ನ ಸ್ವಂತ ಅವಿರತ ಮಾದರಿಯನ್ನು ಅನುಸರಿಸುತ್ತಾ, “ಎಚ್ಚರವಾಗಿರುವಂತೆ” ಹೇಳಿದ್ದನು. (ಅ. ಕೃತ್ಯಗಳು 20:29, 31) ಅವರ ಪ್ರಯಾಸ ಮತ್ತು ತಾಳ್ಮೆಗಾಗಿ ಮತ್ತು ಅವರು ಸುಸ್ತಾಗದೇ ಇರುವುದಕ್ಕಾಗಿ ಯೇಸುವು ಈಗ ಶ್ಲಾಘಿಸುತ್ತಿರುವುದರಿಂದ, ಅವರು ಆ ಬುದ್ಧಿವಾದವನ್ನು ಅನ್ವಯಿಸಿದ್ದಿರಬೇಕು.

      3. (ಎ) ನಮ್ಮ ದಿನಗಳಲ್ಲಿ “ಸುಳ್ಳು ಅಪೊಸ್ತಲರು” ನಂಬಿಗಸ್ತರನ್ನು ಹೇಗೆ ಮೋಸಪಡಿಸಲು ನೋಡಿದ್ದಾರೆ? (ಬಿ) ಧರ್ಮಭ್ರಷ್ಟರ ಕುರಿತಾಗಿ ಯಾವ ಎಚ್ಚರಿಕೆಯನ್ನು ಪೇತ್ರನು ಕೊಟ್ಟನು?

      3 ಕರ್ತನ ದಿನದಲ್ಲಿ ಕೂಡ, “ತಮ್ಮ ಹಿಂದೆ ಶಿಷ್ಯರನ್ನು ಎಳೆದುಕೊಳ್ಳಲು ತಿರುಚಲ್ಪಟ್ಟ ಸಂಗತಿಗಳನ್ನು ಮಾತಾಡುತ್ತಿದ್ದ” “ಸುಳ್ಳು ಅಪೊಸ್ತಲರು” ಕಾಣಿಸಿಕೊಂಡಿದ್ದಾರೆ. (2 ಕೊರಿಂಥ 11:13; ಅ. ಕೃತ್ಯಗಳು 20:30, NW; ಪ್ರಕಟನೆ 1:10) ಪರಸ್ಪರ ವಿರೋಧದ ಮತಪಂಥೀಯ ಧರ್ಮಗಳಲ್ಲಿಲ್ಲಾ ಅವರು ಒಳ್ಳೆಯದನ್ನು ಕಾಣುತ್ತಾರೆ, ದೇವರಿಗೆ ಒಂದು ಸಂಸ್ಥೆಯಿರುವುದಿಲ್ಲ ಎಂದು ವಾದಿಸುತ್ತಾರೆ ಮತ್ತು 1914 ರಲ್ಲಿ ಯೇಸುವು ರಾಜ್ಯಾಧಿಕಾರವನ್ನು ಪಡೆದಿದ್ದಾನೆ ಎಂಬುದನ್ನು ನಿರಾಕರಿಸುತ್ತಾರೆ. ಅವರು 2 ಪೇತ್ರ 3:3, 4ರ (NW) ಪ್ರವಾದನೆಯನ್ನು ನೆರವೇರಿಸುತ್ತಾರೆ: “ಕೊನೆಯ ದಿನಗಳಲ್ಲಿ ಕುಚೋದ್ಯಗಾರರು ತಮ್ಮ ಕುಚೋದ್ಯದೊಡನೆ ಬರುವರು. ಅವರು ತಮ್ಮ ಸ್ವಂತ ಆಶೆಗಳಿಗನುಸಾರ ನಡೆಯುತ್ತ ಹೇಳುವುದು: ‘ಅವನ ವಾಗ್ದಾನಿತ ಸಾನಿಧ್ಯವೆಲ್ಲಿ? ಅಷ್ಟೇಕೆ, ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದಂದಿನಿಂದ ಸಕಲ ಸಂಗತಿಗಳು ಸೃಷ್ಟಿಯ ಮೊದಲಿನಿಂದ ಹಿಡಿದು ಹಾಗೆಯೇ ಮುಂದುವರಿಯುತ್ತಿದೆಯಲ್ಲ’ ಎಂದು ಹೇಳುವರು.”

      4. (ಎ) ಕುಚೋದ್ಯಗಾರರ ಅಹಂಕಾರ ಮತ್ತು ದಂಗೆಕೋರತನವು ಹೇಗೆ ತೋರಿಸಲ್ಪಡುತ್ತದೆ? (ಬಿ) ಸುಳ್ಳು ವಿರೋಧಕರ ವಿರುದ್ಧ ತೆಗೆದುಕೊಳ್ಳುವ ಯಾವ ಕಾರ್ಯದ ಮೂಲಕ, ಇಂದಿನ ಕ್ರೈಸ್ತರು ಎಫೆಸದವರಂತೆ ಇದ್ದಾರೆ ಎಂದು ತೋರಿಸುತ್ತಾರೆ?

      4 ತಮ್ಮ ನಂಬಿಕೆಯ ಬಹಿರಂಗ ಘೋಷಣೆಯನ್ನು ಮಾಡುವುದರ ವಿಚಾರದಲ್ಲಿ ಈ ಕುಚೋದ್ಯಗಾರರು ದಂಗೆಯೇಳುತ್ತಾರೆ. (ರೋಮಾಪುರ 10:10) ತಮ್ಮ ಮೊದಲಿನ ಸಂಗಾತಿಗಳ ಕುರಿತು ಸುಳ್ಳಾದ ವರದಿಗಳನ್ನು ಹಬ್ಬಿಸಲು, ಅವರು ಕ್ರೈಸ್ತಪ್ರಪಂಚದ ವೈದಿಕರ ಬೆಂಬಲವನ್ನು ಮತ್ತು ವಾರ್ತಾ ಪತ್ರಿಕೆಗಳ ಮತ್ತು ಟೀವೀ ಸ್ಟೇಶನುಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಮೋಸಗಾರರ ಮಾತುಗಳು ಮತ್ತು ನಡತೆಯು ಸತ್ಯವಲ್ಲದ್ದು ಎಂದು ನಂಬಿಗಸ್ತರಾಗಿರುವವರು ಬಲುಬೇಗನೆ ಕಂಡುಕೊಳ್ಳುತ್ತಾರೆ. ಎಫೆಸದವರಂತೆ, ಇಂದು ಕ್ರೈಸ್ತರು ‘ದುಷ್ಟ ಜನರನ್ನು ಸಹಿಸಿಕೊಳ್ಳಲಾರರು,’ ಆದುದರಿಂದ ಅವರು ತಮ್ಮ ಸಭೆಗಳಿಂದ ಅವರನ್ನು ಬಹಿಷ್ಕಾರ ಮಾಡುತ್ತಾರೆ.a

      5. (ಎ) ಎಫೆಸದವರಲ್ಲಿ ಯಾವ ಬಲಹೀನತೆ ಇದೆ ಎಂದು ಯೇಸುವು ಹೇಳಿದನು? (ಬಿ) ಯಾವ ಮಾತುಗಳನ್ನು ಎಫೆಸದವರು ನೆನಪಿನಲ್ಲಿಡಬೇಕಿತ್ತು?

      5 ಆದಾಗ್ಯೂ ಈಗ, ಏಳು ಸಭೆಗಳಲ್ಲಿ ಐದಕ್ಕೆ ತಾನು ಮಾಡುವಂತೆ, ಯೇಸುವು ಒಂದು ಗಂಭೀರ ಸಮಸ್ಯೆಯನ್ನು ಪ್ರತ್ಯೇಕಿಸಿ ತೋರಿಸುತ್ತಾನೆ. ಅವನು ಎಫೆಸದವರಿಗೆ ಹೇಳುವುದು: “ಆದಾಗ್ಯೂ, ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀ ಎಂದು ನಾನು ನಿನ್ನ ಮೇಲೆ ತಪ್ಪುಹೊರಿಸುತ್ತೇನೆ.” (ಪ್ರಕಟನೆ 2:4, NW) ಈ ವಿಷಯದಲ್ಲಿ ಅವರು ತಪ್ಪಿಬೀಳಬಾರದಿತ್ತು, ಯಾಕಂದರೆ ಪೌಲನು 35 ವರ್ಷಗಳ ಹಿಂದೆ ದೇವರು ‘ನಮ್ಮನ್ನು ಮಹಾ ಪ್ರೀತಿ’ ಯನ್ನು ಸೂಚಿಸಿ ಹೀಗೆ ಬರೆದಿದ್ದನು ಮತ್ತು ಅವರನ್ನು ಹೀಗೆ ಪ್ರೋತ್ಸಾಹಿಸಿದ್ದನು: “ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಕರಿಸಿರಿ, ಮತ್ತು ಕ್ರಿಸ್ತನು ಕೂಡ ನಿಮ್ಮನ್ನು ಪ್ರೀತಿಸಿದ ಮೇರೆಗೆ, ನೀವೂ ಪ್ರೀತಿಯಲ್ಲಿ ನಡೆಯುತ್ತಾ ಹೋಗಿರಿ.” (ಎಫೆಸ 2:4; 5:1, 2, NW) ಇನ್ನೂ ಹೆಚ್ಚಾಗಿ, ಯೇಸುವಿನ ಮಾತುಗಳು ಅಳಿಸಲಾಗದ ರೀತಿಯಲ್ಲಿ ಅವರ ಹೃದಯದ ಮೇಲೆ ಕೆತ್ತಲ್ಪಟ್ಟಿರಬೇಕಿತ್ತು: “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು, ಮತ್ತು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣ ಹೃದಯದಿಂದ ಮತ್ತು ನಿಮ್ಮ ಪೂರ್ಣ ಆತ್ಮದಿಂದ ಮತ್ತು ನಿಮ್ಮ ಪೂರ್ಣ ಮನಸ್ಸಿನಿಂದ ಮತ್ತು ನಿಮ್ಮ ಪೂರ್ಣ ಶಕ್ತಿಯಿಂದ ನೀವು ಪ್ರೀತಿಸತಕ್ಕದ್ದು.” (ಮಾರ್ಕ 12:29-31, NW) ಎಫೆಸದವರು ಆ ಮೊದಲ ಪ್ರೀತಿಯನ್ನು ಕಳೆದುಕೊಂಡಿದ್ದರು.

      6. (ಎ) ನಾವು ಸಭೆಯಲ್ಲಿ ಹಳಬರಿರಲಿ ಹೊಸ ಸಹವಾಸಿಗಳಾಗಿರಲಿ, ಯಾವ ಅಪಾಯ ಮತ್ತು ಪ್ರವೃತ್ತಿಗಳ ವಿರುದ್ಧವಾಗಿ ನಾವು ಕಾದುಕೊಳ್ಳತಕ್ಕದ್ದು? (ಬಿ) ದೇವರೆಡೆಗಿನ ನಮ್ಮ ಪ್ರೀತಿಯು ನಾವೇನು ಮಾಡುವಂತೆ ಪ್ರಚೋದಿಸತಕ್ಕದ್ದು?

      6 ನಾವು ಸಭೆಯಲ್ಲಿ ಹಳಬರಾಗಿರಲಿ ಇಲ್ಲವೇ ಹೊಸ ಸಹವಾಸಿಗಳಾಗಿರಲಿ, ಯೆಹೋವನಿಗಾಗಿರುವ ನಮ್ಮ ಪ್ರಥಮ ಪ್ರೀತಿಯನ್ನು ಕಳೆದುಕೊಳ್ಳುವುದರ ವಿರುದ್ಧ ನಾವು ಕಾಪಾಡಿಕೊಳ್ಳತಕ್ಕದ್ದು. ಈ ನಷ್ಟವು ಹೇಗೆ ಬರಸಾಧ್ಯವಿದೆ? ನಮ್ಮ ಲೌಕಿಕ ಕೆಲಸಕ್ಕೆ ಅಂಟಿಕೊಳ್ಳುವಿಕೆ, ತುಂಬಾ ಹಣವನ್ನು ಮಾಡುವ ಆಶೆ, ಇಲ್ಲವೆ ಸುಖಭೋಗಗಳ ಬೆನ್ನಟ್ಟುವಿಕೆ ನಮ್ಮ ಜೀವಿತಗಳಲ್ಲಿ ದೊಡ್ಡ ವಿಷಯಗಳಾಗುವಂತೆ ನಾವು ಬಿಡಸಾಧ್ಯವಿದೆ. ಈ ರೀತಿಯಲ್ಲಿ ನಾವು ಆತ್ಮಿಕ ಮನಸ್ಸುಳ್ಳವರಾಗುವ ಬದಲು, ಮಾಂಸಿಕ ಮನಸ್ಸುಳ್ಳವರಾಗಸಾಧ್ಯವಿದೆ. (ರೋಮಾಪುರ 8:5-8; 1 ತಿಮೊಥೆಯ 4:8; 6:9, 10) ಅಂತಹ ಯಾವುದೇ ಪ್ರವೃತ್ತಿಗಳನ್ನು ಸರಿಪಡಿಸಿಕೊಳ್ಳಲು, ಮತ್ತು ‘ದೇವರ ರಾಜ್ಯವನ್ನು ಮತ್ತು ಅವನ ನೀತಿಯನ್ನು ಮೊದಲಾಗಿ ಹುಡುಕಲು,’ ಆ ಮೂಲಕ ‘ಪರಲೋಕದಲ್ಲಿ ನಮಗೋಸ್ಕರ ಸಂಪತ್ತುಗಳನ್ನು ಶೇಖರಿಸಿಡಲು’ ಯೆಹೋವನಿಗಾಗಿರುವ ನಮ್ಮ ಪ್ರೀತಿಯು ನಮ್ಮನ್ನು ಪ್ರೇರಿಸತಕ್ಕದ್ದು.—ಮತ್ತಾಯ 6:19-21, 31-33.

      7. (ಎ) ಯೆಹೋವನ ಕಡೆಗಿನ ನಮ್ಮ ಸೇವೆಯು ಯಾವುದರಿಂದ ಪ್ರಚೋದಿಸಲ್ಪಡಬೇಕು? (ಬಿ) ಪ್ರೀತಿಯ ವಿಷಯದಲ್ಲಿ ಯೋಹಾನನು ಏನು ಹೇಳಿದನು?

      7 ಯೆಹೋವನೆಡೆಗಿನ ನಮ್ಮ ಸೇವೆಯು ಯಾವಾಗಲೂ ಅವನ ಕಡೆಗಿರುವ ಆಳವಾದ ಪ್ರೀತಿಯಿಂದ ಪ್ರೇರಿಸಲ್ಪಡಲಿ. ನಮಗಾಗಿ ಯೆಹೋವನು ಮತ್ತು ಯೇಸು ಕ್ರಿಸ್ತನು ಮಾಡಿರುವ ಎಲ್ಲದಕ್ಕಾಗಿ ಉತ್ಸಾಹಪೂರಿತವಾದ ಗಣ್ಯತೆಯು ನಮ್ಮಲ್ಲಿ ಇರಲಿ. ತದನಂತರ ಯೋಹಾನನು ಸ್ವತಃ ಬರೆದಂತೆ ಅದಿರಬೇಕು: “ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದ್ದರಲ್ಲಿಯೇ ಪ್ರೀತಿಯ ನಿಜಗುಣವು ತೋರಿಬರುತ್ತದೆ.” ಅನಂತರ ಯೋಹಾನನು ನಮಗೆ ಹೇಳುತ್ತಾ ಮುಂದರಿಯುವುದು: “ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ಮತ್ತು ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.” ಯೆಹೋವನಿಗಾಗಿ, ಕರ್ತನಾದ ಯೇಸು ಕ್ರಿಸ್ತನಿಗಾಗಿ ಮತ್ತು ದೇವರ ಸಜೀವವಾಗಿರುವ ವಾಕ್ಯಕ್ಕಾಗಿ ಇರುವ ನಮ್ಮ ಪ್ರೀತಿಯು ಕಳೆಗುಂದಲು ನಾವೆಂದೂ ಬಿಡದಿರೋಣ! ದೇವರ ಕಡೆಗೆ ನಮ್ಮ ಹುರುಪಿನ ಸೇವೆಯಲ್ಲಿ ಮಾತ್ರ ನಾವಿದನ್ನು ವ್ಯಕ್ತ ಪಡಿಸುವುದು ಮಾತ್ರವಲ್ಲ, “ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂದು ನಾವು ಆತನಿಂದ ಹೊಂದಿರುವ ಆಜ್ಞೆಗೆ” ವಿಧೇಯರಾಗುವುದರಿಂದಲೂ ತೋರಿಸತಕ್ಕದ್ದು.—1 ಯೋಹಾನ 4:10, 16, 21; ಇಬ್ರಿಯ 4:12; ಇದನ್ನೂ ನೋಡಿರಿ 1 ಪೇತ್ರ 4:8; ಕೊಲೊಸ್ಸೆ 3:10-14; ಎಫೆಸ 4:15.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ