-
ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸು!ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
8. ಎಫೆಸದವರು ಹೇಗೆ ವರ್ತಿಸತಕ್ಕದ್ದು ಎಂದು ಯೇಸುವು ಹೇಳಿದನು?
8 ಆ ಎಫೆಸದವರು ನಷ್ಟಹೊಂದಲು ಬಯಸದಿದ್ದರೆ ಅವರಲ್ಲಿದ್ದ ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸಬೇಕಿತ್ತು. “ಆದಕಾರಣ,” ಯೇಸುವು ಅವರಿಗೆ ಹೇಳುವುದು, “ನೀನು ಯಾವುದರಿಂದ ಬಿದ್ದಿದ್ದೀಯೋ ಅದನ್ನು ನೆನಪಿಸಿಕೊ, ಮತ್ತು ಪಶ್ಚಾತ್ತಾಪ ಪಡು ಮತ್ತು ಮೊದಲಿನ ಕೃತ್ಯಗಳನ್ನು ಮಾಡು. ನೀನು ಮಾಡದಿದ್ದರೆ, ನಾನು ನಿನ್ನಲಿಗ್ಲೆ ಬರುವೆನು, ಮತ್ತು ನೀನು ಪಶ್ಚಾತ್ತಾಪ ಪಡದೆ ಇರುವುದಾದರೆ, ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ನಾನು ತೆಗೆದುಹಾಕುವೆನು.” (ಪ್ರಕಟನೆ 2:5, NW) ಈ ಮಾತುಗಳನ್ನು ಎಫೆಸ ಸಭೆಯಲ್ಲಿದ್ದ ಕ್ರೈಸ್ತರು ಹೇಗೆ ಸ್ವೀಕರಿಸಿದರು? ನಾವು ಅದನ್ನು ಅರಿಯೆವು. ಅವರು ಪಶ್ಚಾತ್ತಾಪ ಪಟ್ಟರು ಮತ್ತು ಯೆಹೋವನ ಕಡೆಗಿನ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸುವುದರಲ್ಲಿ ಯಶಸ್ವಿಯಾದರು ಎಂದು ನಾವು ನಿರೀಕ್ಷಿಸುತ್ತೇವೆ. ಅವರು ಹಾಗೆ ಮಾಡಿರದಿದ್ದರೆ, ಅವರ ದೀಪವು ನಂದಿಸಲ್ಪಡಲಿಕ್ಕಿತ್ತು ಮತ್ತು ಅವರ ದೀಪಸ್ತಂಭವು ತೆಗೆದು ಹಾಕಲ್ಪಡಲಿಕ್ಕಿತ್ತು. ಸತ್ಯವನ್ನು ಪ್ರಕಾಶಿಸುವ ಅವರ ಸುಯೋಗವನ್ನು ಅವರು ಕಳೆದುಕೊಳ್ಳಲಿಕ್ಕಿದ್ದರು.
9. (ಎ) ಎಫೆಸದವರಿಗಾಗಿ ಯೇಸುವಿನ ಹತ್ತಿರ ಯಾವ ಪ್ರೋತ್ಸಾಹದಾಯಕ ಮಾತು ಇತ್ತು? (ಬಿ) ಎಫೆಸದವರಿಗೆ ಕೊಟ್ಟ ಯೇಸುವಿನ ಬುದ್ಧಿವಾದವನ್ನು ಆಲಿಸಲು ಯೋಹಾನನ ದಿನಗಳ ನಂತರದ ಸಭೆಗಳು ಹೇಗೆ ತಪ್ಪಿಹೋದವು?
9 ಆದಾಗ್ಯೂ, ಎಫೆಸದವರಿಗೆ ಈ ಪ್ರೋತ್ಸಾಹದಾಯಕವಾದ ಮಾತುಗಳು ಯೇಸುವಿನ ಹತ್ತಿರವಿದ್ದವು: “ಆದರೂ, ನಿನ್ನಲ್ಲಿ ಇದು ಉಂಟು, ಏನೆಂದರೆ ನಾನು ಸಹ ದ್ವೇಷಿಸುತ್ತಿರುವ ನಿಕೊಲೇಅಸನ ಪಂಥದ ಕೃತ್ಯಗಳನ್ನು ನೀನು ದ್ವೇಷಿಸುತ್ತೀ.” (ಪ್ರಕಟನೆ 2:6, NW) ಕಡಿಮೆಪಕ್ಷ ಅವರು, ಕರ್ತನಾದ ಯೇಸು ಕ್ರಿಸ್ತನು ಅದನ್ನು ದ್ವೇಷಿಸಿದಂತೆ, ಮತಪಂಥೀಯ ವಿಭಾಗವನ್ನು ದ್ವೇಷಿಸಿದರು. ಆದಾಗ್ಯೂ, ವರ್ಷಗಳು ಸಂದಂತೆ, ಅನೇಕ ಸಭೆಗಳು ಯೇಸುವಿನ ಈ ಮಾತುಗಳನ್ನು ಆಲಿಸಲು ತಪ್ಪಿಹೋದರು. ಯೆಹೋವನ ಕಡೆಗೆ, ಸತ್ಯದ ಕಡೆಗೆ ಮತ್ತು ಒಬ್ಬರಿಗೆ ಇನ್ನೊಬ್ಬರೆಡೆಗೆ ಇರುವ ಪ್ರೀತಿಯ ಕೊರತೆಯು ಅವರು ಆತ್ಮಿಕ ಅಂಧಕಾರದೊಳಗೆ ತೇಲಿಕೊಂಡು ಹೋಗುವುದರಲ್ಲಿ ಕೊನೆಗೊಂಡಿತು. ಜಗಳಾಡುವ ಅನೇಕ ಮತಪಂಥಗಳಾಗಿ ಅವರು ಒಡೆದುಹೋದರು. ಯೆಹೋವನ ಕಡೆಗೆ ಪ್ರೀತಿಯಿಲ್ಲದ “ಕ್ರೈಸ್ತ” ನಕಲುಗಾರರು ಬೈಬಲಿನ ಗ್ರೀಕ್ ಹಸ್ತಪ್ರತಿಗಳಿಂದ ದೇವರ ಹೆಸರನ್ನೇ ತೆಗೆದು ಹಾಕಿದರು. ಪ್ರೀತಿಯ ಕೊರತೆಯು ನರಕಾಗ್ನಿ, ಪರ್ಗೆಟರಿ, ಮತ್ತು ತ್ರಯೈಕ್ಯದಂತಹ ಬ್ಯಾಬಿಲನರ ಮತ್ತು ಗ್ರೀಕರ ಬೋಧನೆಗಳಿಗೆ ಕ್ರೈಸ್ತತ್ವದ ಹೆಸರಿನಲ್ಲಿ ಎಡೆಮಾಡಿಕೊಟ್ಟಿತು. ದೇವರ ಕಡೆಗೆ ಮತ್ತು ಸತ್ಯದ ಕಡೆಗೆ ಯಾವುದೇ ಪ್ರೀತಿಯಿಲ್ಲದಿರುವ ಕಾರಣ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿರುವ ಅನೇಕರು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ನಿಲ್ಲಿಸಿದರು. ಭೂಮಿಯ ಮೇಲೆ ತನ್ನ ಸ್ವಂತ ರಾಜ್ಯವನ್ನು ಮಾಡಿಕೊಂಡ ಒಂದು ಸ್ವಾರ್ಥ ವೈದಿಕ ವರ್ಗವು ಅವರ ಮೇಲೆ ಪ್ರಭುತ್ವ ನಡಿಸುವಂತೆ ಆಯಿತು.—ಹೋಲಿಸಿರಿ 1 ಕೊರಿಂಥ 4:8.
10. 1918 ರಲ್ಲಿ ಕ್ರೈಸ್ತಪ್ರಪಂಚದಲ್ಲಿ ಧಾರ್ಮಿಕ ಸನ್ನಿವೇಶವು ಏನಾಗಿತ್ತು?
10 ದೇವರ ಮನೆಯಲ್ಲಿ ನ್ಯಾಯವಿಚಾರಣೆ 1918 ರಲ್ಲಿ ಆರಂಭಗೊಂಡಾಗ, ಕ್ರೈಸ್ತಪ್ರಪಂಚದ ಮತಪಂಥೀಯ ವೈದಿಕರು ಮೊದಲನೆಯ ಲೋಕಯುದ್ಧಕ್ಕೆ ಬಹಿರಂಗವಾಗಿ ಬೆಂಬಲಕೊಡುತ್ತಾ, ಒಬ್ಬರು ಇನ್ನೊಬ್ಬರನ್ನು ಹತಿಸುವಂತೆ, ಎರಡೂ ಪಕ್ಷದ ಕ್ಯಾತೊಲಿಕರನ್ನು ಮತ್ತು ಪ್ರಾಟೆಸ್ಟಂಟರನ್ನು ಹುರಿದುಂಬಿಸಿದರು. (1 ಪೇತ್ರ 4:17) ನಿಕೊಲೇಅಸನ ಪಂಥದವರು ಮಾಡುತ್ತಿರುವುದನ್ನು ದ್ವೇಷಿಸುತ್ತಿದ್ದ ಎಫೆಸದವರಿಗೆ ವ್ಯತಿರಿಕ್ತವಾಗಿ, ಕ್ರೈಸ್ತಪ್ರಪಂಚದ ಧರ್ಮಗಳು, ದೀರ್ಘಕಾಲದಿಂದ ಪರಸ್ಪರ ವಿರೋಧದ, ದೇವ-ವಿರೋಧಿ ಬೋಧನೆಗಳಿಂದ ರಂಧ್ರಮಯವಾಗಿದ್ದವು ಮತ್ತು ಅವರ ವೈದಿಕರು, ಯಾವುದರ ಭಾಗವಾಗಿ ತನ್ನ ಶಿಷ್ಯರು ಇರಬಾರದೆಂದು ಯೇಸುವು ಹೇಳಿದ್ದನೋ, ಆ ಲೋಕದ ಭಾಗವಾಗಿ, ತಮ್ಮನ್ನು ಅದರೊಂದಿಗೆ ಸೇರಿಸಿಕೊಂಡಿದ್ದರು. (ಯೋಹಾನ 15:17-19) ಬೈಬಲಿನ ಮುಖ್ಯ ವಿಷಯವಾದ ದೇವರ ರಾಜ್ಯದ ಕುರಿತು ಅವುಗಳ ಸಭೆಗಳು ತಿಳಿಯದೆ ಇದ್ದಕಾರಣ, ಅವುಗಳು ಶಾಸ್ತ್ರೀಯ ಸತ್ಯವನ್ನು ಪ್ರಕಾಶಿಸುವ ದೀಪಸ್ತಂಭಗಳಾಗಿಯಾಗಲಿ, ಅವುಗಳ ಸದಸ್ಯರುಗಳು ಯೆಹೋವನ ಆತ್ಮಿಕ ದೇವಾಲಯದ ಭಾಗವಾಗಿಯಾಗಲಿ ಇರಲಿಲ್ಲ. ಅವುಗಳ ಮುಂದಾಳುಗಳಾಗಿದ್ದ ಪುರುಷರು (ಮತ್ತು ಸ್ತ್ರೀಯರು) ನಕ್ಷತ್ರಗಳಾಗಿ ಇರದೆ “ನಿಯಮರಹಿತನಾದ ಪುರುಷನ” ಸದಸ್ಯರುಗಳಾಗಿ ಪ್ರಕಟಗೊಂಡರು.—2 ಥೆಸಲೊನೀಕ 2:3, NW; ಮಲಾಕಿಯ 3:1-3.
11. (ಎ) ಲೋಕ ದೃಶ್ಯದಲ್ಲಿದ್ದ ಯಾವ ಕ್ರೈಸ್ತ ಗುಂಪು 1918 ರಲ್ಲಿ ಎಫೆಸದವರಿಗೆ ಕೊಟ್ಟ ಯೇಸುವಿನ ನುಡಿಗಳನ್ನು ಕಾರ್ಯರೂಪಕ್ಕೆ ಹಾಕಿತು? (ಬಿ) ಯೋಹಾನ ವರ್ಗವು 1919 ರಿಂದ ಏನನ್ನು ಮಾಡಿತು?
11 ಆದಾಗ್ಯೂ, ಯೋಹಾನ ವರ್ಗದವರು, ಮೊದಲನೆಯ ಲೋಕಯುದ್ಧದ ಗೊಂದಲಮಯ ದಿನಗಳಿಂದ, ಯೆಹೋವನಿಗೆ ಉರಿಯುವ ಹುರುಪಿನಿಂದ ಸೇವೆಮಾಡುವಂತೆ ಅವರನ್ನು ಪ್ರಚೋದಿಸಿದ ಆತನಿಗಾಗಿ ಮತ್ತು ಸತ್ಯಕ್ಕಾಗಿ ಪ್ರೀತಿಯುಳ್ಳವರಾಗಿ ಹೊರಬಂದರು. ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸೆಲ್ 1916 ರಲ್ಲಿ ಮೃತರಾದಾಗ, ಅವರನ್ನು ಕಾರ್ಯತಃ ಪೂಜಿಸುವ ಮೂಲಕ ಮತಪಂಥವನ್ನು ಒಳತರಲು ಪ್ರಯತ್ನಿಸಿದವರನ್ನು ಅವರು ಪ್ರತಿರೋಧಿಸಿದರು. ಹಿಂಸೆ ಮತ್ತು ವಿಪತ್ತುಗಳಿಂದ ಶಿಸ್ತಿಗೊಳಪಟ್ಟು, ಈ ಕ್ರೈಸ್ತ ಗುಂಪು ಯಜಮಾನನಿಂದ “ಭಲಾ,” ಎಂಬ ನ್ಯಾಯತೀರ್ಪೊಂದನ್ನು ಮತ್ತು ಅವನ ಸಂತೋಷದಲ್ಲಿ ಸೇರಲು ಒಂದು ಆಮಂತ್ರಣವನ್ನು ಸ್ಪಷ್ಟವಾಗಿ ಪಡೆಯಿತು. (ಮತ್ತಾಯ 25:21, 23) ಲೋಕ ಘಟನೆಗಳ ಪಥಕ್ರಮದಲ್ಲಿ, ಮತ್ತು ತಮ್ಮ ಸ್ವಂತ ಅನುಭವಗಳಲ್ಲಿ, ರಾಜ್ಯಬಲದೊಂದಿಗೆ ತನ್ನ ಅದೃಶ್ಯ ಸಾನ್ನಿಧ್ಯವನ್ನು ಗುರುತಿಸಲು ಯೇಸುವು ಕೊಟ್ಟ ಸೂಚನೆಯ ನೆರವೇರಿಕೆಯನ್ನು ಅವರು ಅರಿತರು. ಯೇಸುವಿನ ಈ ಮಹಾ ಪ್ರವಾದನೆಯ ಇನ್ನೂ ಹೆಚ್ಚಿನ ನೆರವೇರಿಕೆಯಲ್ಲಿ ಭಾಗಿಗಳಾಗಲು ಅವರು 1919 ರಿಂದ ಮುಂದಕ್ಕೆ ಚಲಿಸಿದರು: “ಮತ್ತು ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಮತ್ತು ನಂತರ ಅಂತ್ಯವು ಬರುವುದು.” (ಮತ್ತಾಯ 6:9, 10; 24:3-14) ಯೆಹೋವನ ಕಡೆಗಿನ ಅವರ ಪ್ರೀತಿಯು ಯಾವುದೇ ರೀತಿಯಲ್ಲಿ ಕೊರತೆಯದ್ದಾಗಿದ್ದರೆ, ಆ ಸಮಯದಿಂದ ಮುಂದಕ್ಕೆ ಒಂದು ಜ್ವಾಲೆಯಾಗುವಂತೆ ಅದಕ್ಕೆ ಗಾಳಿ ಹಾಕಲಾಯಿತು.
12. (ಎ) 1922ರ ಒಂದು ಐತಿಹಾಸಿಕ ಅಧಿವೇಶನದಲ್ಲಿ, ಯಾವ ಕರೆಯು ಹೊರಟಿತು? (ಬಿ) ಯಾವ ಹೆಸರನ್ನು ಸತ್ಯ ಕ್ರೈಸ್ತರು 1931 ರಲ್ಲಿ ಆದರದಿಂದ ಸ್ವೀಕರಿಸಿದರು, ಮತ್ತು ಯಾವುದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟರು?
12 ಸಪ್ಟಂಬರ 5-13, 1922 ರಲ್ಲಿ ಅಮೆರಿಕದ ಒಹೈಯೋವಿನ ಸೀಡರ್ ಪಾಯಿಂಟ್‌ನಲ್ಲಿ ಈ ಕ್ರೈಸ್ತರ 18,000 ಮಂದಿ ಹಾಜರಾದ, ಒಂದು ಐತಿಹಾಸಿಕ ಅಧಿವೇಶನದಲ್ಲಿ, ಒಂದು ಕರೆಯು ನೀಡಲ್ಪಟ್ಟಿತು: “ಮಹೋನ್ನತ ಪರಾತ್ಪರ ದೇವರ ಪುತ್ರರುಗಳಾದ ನೀವು, ಹಿಂದೆರಳಿರಿ ಕ್ಷೇತ್ರಕ್ಕೆ! . . . ಯೆಹೋವನು ದೇವರು ಮತ್ತು ಯೇಸು ಕ್ರಿಸ್ತನು ರಾಜಾಧಿರಾಜನೂ, ಕರ್ತರ ಕರ್ತನೂ ಎಂದು ಲೋಕವು ತಿಳಿಯ ತಕ್ಕದ್ದು. . . . ಆದುದರಿಂದ ರಾಜನನ್ನೂ, ಮತ್ತು ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ.” ಯೆಹೋವನ ಅತ್ಯಮೂಲ್ಯ ನಾಮವು ಅಧಿಕ ಪ್ರಾಮುಖ್ಯಕ್ಕೆ ಏರಿಸಲ್ಪಟ್ಟಿತು. ಅಮೆರಿಕದ ಒಹೈಯೋವಿನ ಕೊಲಂಬಸ್‌ನ ಅಧಿವೇಶನವೊಂದರಲ್ಲಿ 1931 ರಲ್ಲಿ ನೆರೆದಿದ್ದ ಈ ಕ್ರೈಸ್ತರು ಯೆಶಾಯನ ಪ್ರವಾದನೆಯಲ್ಲಿ ದೇವರಿಂದ ಸೂಚಿಸಲ್ಪಟ್ಟ—ಯೆಹೋವನ ಸಾಕ್ಷಿಗಳು—ಹೆಸರನ್ನು ಆದರದಿಂದ ಸ್ವೀಕರಿಸಲು ಮತ್ತು ಅದನ್ನು ತೆಗೆದುಕೊಳ್ಳಲು ಸಂತೋಷಿಸಿದರು. (ಯೆಶಾಯ 43:10, 12) ಮಾರ್ಚ್ 1, 1939ರ ಸಂಚಿಕೆಯಿಂದ, ಸಂಸ್ಥೆಯ ಪ್ರಮುಖ ಪತ್ರಿಕೆಯ ಹೆಸರನ್ನು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ದ ವಾಚ್‌ಟವರ್ ಎನೌನ್ಸಿಂಗ್ ಜೆಹೋವಾಸ್ ಕಿಂಗ್‌ಡಮ್) ಎಂದು ಬದಲಾಯಿಸಲಾಯಿತು, ಆ ಮೂಲಕ ನಮ್ಮ ನಿರ್ಮಾಣಿಕನಿಗೆ ಮತ್ತು ಅವನ ರಾಜವೈಭವದ ಸರಕಾರಕ್ಕೆ ಪ್ರಧಾನ ಗೌರವ ಕೊಡಲಾಯಿತು. ಯೆಹೋವನ ಕಡೆಗಿನ ಪುನಃ ಚೇತರಿಸಲ್ಪಟ್ಟ ಪ್ರೀತಿಯೊಂದಿಗೆ ಯೆಹೋವನ ಸಾಕ್ಷಿಗಳು, ಅವನ ಆದರ್ಶಪ್ರಾಯ ನಾಮವನ್ನು ಮತ್ತು ರಾಜ್ಯವನ್ನು ಗೌರವಿಸಲು ಮತ್ತು ಮಹಿಮೆಗೇರಿಸಲು ಯಾವುದೇ ರೀತಿಯಲ್ಲಿ ಈ ಹಿಂದೆ ತಪ್ಪಿಹೋಗಿರುವುದಕ್ಕಾಗಿ ಪಶ್ಚಾತ್ತಾಪ ಪಟ್ಟರು.—ಕೀರ್ತನೆ 106:6, 47, 48.
“ಜಯಹೊಂದುವವನಿಗೆ”
13. (ಎ) ಅವರು ‘ಜಯಹೊಂದುವುದಾದರೆ’ ಎಫೆಸದವರಿಗೆ ಯಾವ ಆಶೀರ್ವಾದ ಕಾದಿತ್ತು? (ಬಿ) ಎಫೆಸದ ಕ್ರೈಸ್ತರು ಹೇಗೆ ‘ಜಯಹೊಂದ’ ಬಹುದಿತ್ತು?
13 ಬೇರೆ ಸಂದೇಶಗಳಲ್ಲಿ ಯೇಸು ಮಾಡಿರುವಂತೆಯೇ, ನಂಬಿಗಸ್ತಿಕೆಗಾಗಿ ಬಹುಮಾನಗಳನ್ನು ದೇವರಾತ್ಮವು ತನ್ನ ಮೂಲಕ ತಿಳಿಯ ಪಡಿಸುತ್ತಿರುವಂತೆ ಯೇಸುವು ಕೊನೆಯಲ್ಲಿ ಗಮನವನ್ನು ಸೆಳೆಯುತ್ತಾನೆ. ಎಫೆಸದವರಿಗೆ ಅವನು ಹೇಳುವುದು: “ಆತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಹೊಂದುವವನಿಗೆ ನಾನು ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ ತಿನ್ನುವುದಕ್ಕೆ ಕೊಡುವೆನು.” (ಪ್ರಕಟನೆ 2:7, NW) ಆಲಿಸುವ ಕಿವಿಯುಳ್ಳವರು, ಇದು ಯೇಸುವಿನಿಂದ ಆರಂಭಗೊಂಡಿಲ್ಲ, ಸಾರ್ವಭೌಮ ಕರ್ತನಾದ ಯೆಹೋವನಿಂದಲೇ, ಆತನ ಪವಿತ್ರಾತ್ಮ ಇಲ್ಲವೆ ಕ್ರಿಯಾಶೀಲ ಶಕ್ತಿಯಿಂದ ಹರಿದು ಬಂತೆಂದು ತಿಳಿದು ಆ ಜೀವಾವಶ್ಯಕ ಸಂದೇಶಕ್ಕೆ ಕಿವಿಗೊಡಲು ಉತ್ಸುಕರಾಗುವರು. ಅವರು ‘ಜಯಹೊಂದುವುದು’ ಹೇಗೆ? ಯಾರು ಮರಣದ ತನಕ ಸಮಗ್ರತೆಯನ್ನು ಕಾಪಾಡಿಕೊಂಡ ಕಾರಣ, “ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಶಕ್ತನಾಗಿದ್ದನೋ ಆ ಯೇಸುವಿನ ಹೆಜ್ಜೇಜಾಡನ್ನು ಒತ್ತಾಗಿ ಅನುಸರಿಸುವ ಮೂಲಕವೇ.—ಯೋಹಾನ 8:28; 16:33; ಇದನ್ನೂ ನೋಡಿರಿ 1 ಯೋಹಾನ 5:4.
14. ಯೇಸುವಿನಿಂದ ಹೇಳಲ್ಪಟ್ಟ “ದೇವರ ಪರದೈಸ” ಯಾವುದನ್ನು ಸೂಚಿಸಬೇಕು?
14 ಐಹಿಕ ಪರದೈಸಿನಲ್ಲಿ ಜೀವಿಸುವ ಪ್ರತೀಕ್ಷೆಯು ಅವರಿಗೆ ಇಲ್ಲದಿರುವುದರಿಂದ, ಎಫೆಸದವರಂತಹ ಅಭಿಷಿಕ್ತ ಕ್ರೈಸ್ತರು, “ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ” ತಿನ್ನುವ ಬಹುಮಾನ ಪಡೆಯುವುದು ಹೇಗೆ? ಇದು ಭೂಮಿಯ ಮೇಲೆ ಪುನಃ ಸ್ಥಾಪಿತವಾದ ಪ್ರಮೋದವನವಾಗಿರಲು ಸಾಧ್ಯವಿಲ್ಲ, ಯಾಕಂದರೆ ಎಫೆಸ ಸಭೆಯಲ್ಲಿರುವವರ ಸಹಿತ 1,44,000 ಮಂದಿ ಅಭಿಷಿಕ್ತ ಕ್ರೈಸ್ತರು ಕುರಿಮರಿಯಾದ ಕ್ರಿಸ್ತ ಯೇಸುವಿನೊಂದಿಗೆ ಸ್ವರ್ಗೀಯ ಚೀಯೋನಿನ ಮೇಲೆ ಆತ್ಮ ಪುತ್ರರುಗಳಾಗಿ ಆಳಲು ಮಾನವ ಕುಲದಿಂದ ಖರೀದಿಸಲ್ಪಟ್ಟಿರುತ್ತಾರೆ. (ಎಫೆಸ 1:5-12; ಪ್ರಕಟನೆ 14:1, 4) ಆದಕಾರಣ, ಈ ಜಯಹೊಂದುವವರಿಂದ ಬಾಧ್ಯತೆಯಾಗಿ ಪಡೆಯಲಾದ ಉದ್ಯಾನದಂತಹ ಸ್ವರ್ಗೀಯ ಕ್ಷೇತ್ರವನ್ನು ಇಲ್ಲಿ ಸೂಚಿಸಿರಬೇಕು. ಅಲ್ಲಿ, “ದೇವರ ಪರದೈಸಿನ”, ಹೌದು, ಸ್ವತಃ ಯೆಹೋವನ ಸಮ್ಮುಖದಲ್ಲಿಯೇ, ಇಲ್ಲಿ ಜೀವವೃಕ್ಷದಿಂದ ಅವರ ತಿನ್ನುವಿಕೆಯಿಂದ ಸಾಂಕೇತಿಸಲ್ಪಟ್ಟಂತೆ, ಸದಾಕಾಲ ಜೀವಿಸುವುದನ್ನು ಮುಂದುವರಿಸಲು ಅಮರತ್ವವನ್ನು ಈ ಜಯಶಾಲಿಗಳಿಗೆ ಕೊಡಲಾಗುವುದು.
15. ಜಯಗಳಿಸಲು ಯೇಸುವು ಕೊಟ್ಟ ಪ್ರೋತ್ಸಾಹವು ಇಂದು ಮಹಾ ಸಮೂಹದವರಿಗೆ ಏಕೆ ಮಹತ್ವದ ಆಸಕ್ತಿಯದ್ದಾಗಿದೆ?
15 ಹಾಗಿರುವುದಾದರೆ, 1,44,000 ಅಭಿಷಿಕ್ತರ ನಿಷ್ಠ ಐಹಿಕ ಬೆಂಬಲಿಗರ ಕುರಿತಾಗಿ ಏನು? ಈ ಸಂಗಾತಿ ಸಾಕ್ಷಿಗಳ ಒಂದು ಮಹಾ ಸಮೂಹವು ಕೂಡ ಜಯಶಾಲಿಯಾಗುತ್ತದೆ. ಆದರೆ ಅವರ ನಿರೀಕ್ಷೆಯು ಒಂದು ಐಹಿಕ ಪ್ರಮೋದವನದಲ್ಲಿ ಪ್ರವೇಶಿಸುವುದರ ಮೇಲೆ ಆತುಕೊಂಡಿದೆ, ಅಲ್ಲಿ ಅವರು “ಜೀವಜಲದ ನದಿ”ಯಿಂದ ಕುಡಿಯುವರು ಮತ್ತು ಆ ನದಿಯ ಪಕ್ಕಗಳಲ್ಲಿ ನೆಡಲ್ಪಟ್ಟ “ಮರಗಳ ಎಲೆಗಳಿಂದ” ರೋಗವಾಸಿಯನ್ನು ಪಡೆಯುವರು. (ಪ್ರಕಟನೆ 7:4, 9, 17; 22:1, 2) ಈ ಗುಂಪಿನಲ್ಲಿ ನೀವೊಬ್ಬರಾಗಿರುವುದಾದರೆ, ಯೆಹೋವನಿಗಾಗಿ ನಿಮ್ಮ ಉತ್ಸಾಹದ ಪ್ರೀತಿಯನ್ನು ನೀವು ಕೂಡ ವ್ಯಕ್ತಪಡಿಸಬಹುದು ಮತ್ತು ನಂಬಿಕೆಯ ಈ ವಿಜಯದಲ್ಲಿ ನೀವು ಜಯಗಳಿಸಬಹುದು. ಈ ರೀತಿಯಲ್ಲಿ ಪ್ರಮೋದವನವಾದ ಭೂಮಿಯಲ್ಲಿ ನಿತ್ಯ ಜೀವದ ಆನಂದವು ನಿಮಗೆ ಲಭ್ಯವಾಗಬಹುದು.—ಹೋಲಿಸಿರಿ 1 ಯೋಹಾನ 2:13, 14.
-
-
ಜಯಶಾಲಿಗಳಾಗಲು ಹೆಣಗಾಡುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
1. (ಎ) ಮಹಿಮೆಗೇರಿಸಲ್ಪಟ್ಟ ಯೇಸುವಿನಿಂದ ನಂತರ ಯಾವ ಸಭೆಯು ಸಂದೇಶವೊಂದನ್ನು ಪಡೆಯುತ್ತದೆ? (ಬಿ) “ಮೊದಲನೆಯವನೂ ಕಡೆಯವನೂ” ಎಂದು ತನ್ನನ್ನು ಕರೆಯಿಸಿಕೊಳ್ಳುವುದರಿಂದ, ಆ ಸಭೆಯ ಕ್ರೈಸ್ತರಿಗೆ ಯಾವುದನ್ನು ಯೇಸುವು ನೆನಪಿಸುತ್ತಾನೆ?
ಇಂದು, ಪುರಾತನ ಎಫೆಸವು ಹಾಳುಗೆಡವಲ್ಪಟ್ಟಿರುತ್ತದೆ. ಆದರೆ ಯೇಸುವಿನ ಎರಡನೆಯ ಸಂದೇಶದ ಗಮ್ಯಸ್ಥಾನವು ಈಗಲೂ ಸಡಗರದ ನಗರವೊಂದರ ನಿವೇಶನವಾಗಿದೆ. ಎಫೆಸದ ಭಗ್ನಾವಶೇಷಗಳ ಸುಮಾರು 35 ಮೈಲು ಉತ್ತರಕ್ಕೆ ಟರ್ಕಿಶ್ ನಗರವಾದ ಇಸ್ಮೀರ್ ಇದೆ, ಇಲ್ಲಿ ಇಂದು ಕೂಡ ಯೆಹೋವನ ಸಾಕ್ಷಿಗಳ ಒಂದು ಹುರುಪುಳ್ಳ ಸಭೆಯು ಕಾಣಸಿಗುತ್ತದೆ. ಇಲ್ಲಿ, ಮೊದಲನೆಯ ಶತಕದಲ್ಲಿ ಸ್ಮುರ್ನವು ಇತ್ತು. ಈಗ, ಯೇಸುವಿನ ಮುಂದಿನ ಮಾತುಗಳನ್ನು ಗಮನಿಸಿರಿ: “ಮತ್ತು ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ: ‘ಮೊದಲನೆಯವನೂ ಕಡೆಯವನೂ,’ ಸತ್ತವನಾಗಿದ್ದು ಪುನಃ ಜೀವಿತನಾಗಿರುವವನು ಹೇಳುವ ಸಂಗತಿಗಳಿವು.” (ಪ್ರಕಟನೆ 2:8, NW) ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಇದನ್ನು ಹೇಳುವುದರ ಮೂಲಕ, ಯೆಹೋವನಿಂದ ನೇರವಾಗಿ ಅಮರ ಆತ್ಮ ಜೀವಕ್ಕೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ತಾನು ಮೊದಲನೆಯ ಸಮಗ್ರತೆ ಪಾಲಕನು ಮತ್ತು ಹಾಗೆ ಎಬ್ಬಿಸಲ್ಪಡುವವರಲ್ಲಿ ತಾನು ಕಡೆಯವನು ಎಂಬುದನ್ನು ಯೇಸುವು ನೆನಪಿಸುತ್ತಾನೆ. ಇನ್ನಿತರ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಯೇಸುವು ತಾನೇ ಪುನರುತ್ಥಾನಗೊಳಿಸಲಿಕ್ಕಿರುವನು. ಈ ರೀತಿಯಲ್ಲಿ, ಅವನೊಂದಿಗೆ ಸ್ವರ್ಗೀಯ ಅಮರ ಜೀವಿತದಲ್ಲಿ ಭಾಗಿಗಳಾಗುವ ನಿರೀಕ್ಷೆಯಿರುವ ಅವನ ಸಹೋದರರಿಗೆ ಬುದ್ಧಿವಾದವನ್ನು ಕೊಡಲು ಅವನು ಚೆನ್ನಾಗಿ ಅರ್ಹತೆಯುಳ್ಳವನಾಗಿದ್ದಾನೆ.
2. “ಸತ್ತವನಾದನು ಮತ್ತು ಪುನಃ ಜೀವಿತನಾದನು” ಎಂಬವನ ಮಾತುಗಳಿಂದ ಎಲ್ಲಾ ಕ್ರೈಸ್ತರು ಏಕೆ ಸಂತೈಸಲ್ಪಡುತ್ತಾರೆ?
2 ನೀತಿಗೋಸ್ಕರವಾಗಿ ಹಿಂಸೆಯನ್ನು ತಾಳಿಕೊಳ್ಳುವುದರಲ್ಲಿ ಯೇಸುವು ಮುಂದಾಳಾದನು, ಮತ್ತು ಅವನು ತಕ್ಕ ಬಹುಮಾನವನ್ನು ಪಡೆದನು. ಮರಣದ ತನಕದ ಅವನ ನಂಬಿಗಸ್ತಿಕೆ ಮತ್ತು ತದನಂತರದ ಅವನ ಪುನರುತ್ಥಾನ ಎಲ್ಲಾ ಕ್ರೈಸ್ತರ ನಿರೀಕ್ಷೆಗೆ ಆಧಾರವಾಗಿರುತ್ತದೆ. (ಅ. ಕೃತ್ಯಗಳು 17:31) ಯೇಸುವು “ಸತ್ತವನಾದನು ಮತ್ತು ಪುನಃ ಜೀವಿತನಾದನು” ಎಂಬ ವಾಸ್ತವತೆಯು ರುಜುಪಡಿಸುವದೇನಂದರೆ ಸತ್ಯಕ್ಕೋಸ್ಕರವಾಗಿ ಏನು ತಾಳಿಕೊಂಡರೂ, ಅದು ವ್ಯರ್ಥವಲ್ಲ. ಯೇಸುವಿನ ಪುನರುತ್ಥಾನವು ಎಲ್ಲಾ ಕ್ರೈಸ್ತರಿಗೆ ಅಗಾಧ ಪ್ರೋತ್ಸಾಹದ ಮೂಲವಾಗಿರುತ್ತದೆ, ವಿಶೇಷವಾಗಿ ನಂಬಿಕೆಗೋಸ್ಕರ ಬಾಧೆ ಪಡುವಂತೆ ಅವರು ಕರೆಯಲ್ಪಡುವಾಗ. ಇದು ನಿಮ್ಮ ಪರಿಸ್ಥಿತಿಯಾಗಿದೆಯೇ? ಹಾಗಿರುವುದಾದರೆ, ಸ್ಮುರ್ನ ಸಭೆಗೆ ಕೊಟ್ಟ ಯೇಸುವಿನ ಮುಂದಿನ ಮಾತುಗಳಲ್ಲಿ ನೀವು ಧೈರ್ಯವನ್ನು ಪಡೆಯಸಾಧ್ಯವಿದೆ:
3. (ಎ) ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಯೇಸುವು ಯಾವ ಪ್ರೋತ್ಸಾಹವನ್ನು ಕೊಟ್ಟನು? (ಬಿ) ಸ್ಮುರ್ನದಲ್ಲಿರುವ ಕ್ರೈಸ್ತರು ಬಡವರಾದರೂ, ಅವರು “ಐಶ್ವರ್ಯವಂತರು” ಎಂದು ಯೇಸು ಹೇಳಿದ್ದು ಯಾಕೆ?
3 “ನಾನು ನಿನ್ನ ಸಂಕಟವನ್ನು ಮತ್ತು ಬಡತನವನ್ನು—ಆದರೆ ನೀನು ಐಶ್ವರ್ಯವಂತನು—ಮತ್ತು ಯೆಹೂದ್ಯರು ತಾವೇ ಎಂದು ಹೇಳಿಕೊಳ್ಳುವವರ ದೇವದೂಷಣೆಯನ್ನು ಬಲ್ಲೆನು, ಆದರೂ ಅವರು ಹಾಗಲ್ಲ, ಅವರು ಸೈತಾನನ ಸಭಾಮಂದಿರವಾಗಿದ್ದಾರೆ.” (ಪ್ರಕಟನೆ 2:9, NW) ಸ್ಮುರ್ನದಲ್ಲಿರುವ ತನ್ನ ಸಹೋದರರಿಗಾಗಿ ಯೇಸುವಿನಲ್ಲಿ ಕೇವಲ ಉತ್ಸಾಹದ ಶ್ಲಾಘನೆಯಿತ್ತೇ ಹೊರತು ಟೀಕೆ ಇರಲಿಲ್ಲ. ಅವರ ನಂಬಿಕೆಯ ಕಾರಣ ಅವರು ಅಧಿಕವಾದ ಸಂಕಟದ ಬಾಧೆಗೊಳಗಾಗಿದ್ದರು. ಪ್ರಾಪಂಚಿಕವಾಗಿ ಅವರು ಬಡವರಾಗಿದ್ದಾರೆ, ಪ್ರಾಯಶಃ ಅವರ ನಂಬಿಗಸ್ತಿಕೆಯ ಕಾರಣದಿಂದ. (ಇಬ್ರಿಯ 10:34) ಆದಾಗ್ಯೂ, ಅವರ ಮುಖ್ಯ ಆಸಕ್ತಿಯು ಆತ್ಮಿಕ ಸಂಗತಿಗಳಾಗಿದ್ದವು, ಮತ್ತು ಯೇಸುವು ಸಲಹೆಯನ್ನಿತ್ತಂತೆ, ಅವರು ಪರಲೋಕದಲ್ಲಿ ತಮ್ಮ ಐಶ್ವರ್ಯವನ್ನು ಶೇಖರಿಸಿದ್ದರು. (ಮತ್ತಾಯ 6:19, 20) ಆದಕಾರಣ, ಮುಖ್ಯ ಕುರುಬನು ಅವರನ್ನು “ಐಶ್ವರ್ಯವಂತ” ರಾಗಿ ವೀಕ್ಷಿಸುತ್ತಾನೆ.—ಹೋಲಿಸಿರಿ ಯಾಕೋಬ 2:5.
4. ಸ್ಮುರ್ನದ ಕ್ರೈಸ್ತರು ಯಾರಿಂದ ಹೆಚ್ಚಾಗಿ ವಿರೋಧವನ್ನು ಪಡೆದರು, ಮತ್ತು ಆ ವಿರೋಧಕರನ್ನು ಯೇಸುವು ಹೇಗೆ ವೀಕ್ಷಿಸಿದನು?
4 ಮಾಂಸಿಕ ಯೆಹೂದ್ಯರ ಹಸ್ತಗಳಿಂದ ಸ್ಮುರ್ನದಲ್ಲಿರುವ ಕ್ರೈಸ್ತರು ಬಹಳಷ್ಟು ವಿರೋಧವನ್ನು ಸಹಿಸಿಕೊಳ್ಳಬೇಕಾಯಿತು ಎಂಬುದನ್ನು ಯೇಸುವು ವಿಶೇಷವಾಗಿ ಗಮನಿಸುತ್ತಾನೆ. ಮುಂಚಿನ ದಿನಗಳಲ್ಲಿ ಕ್ರೈಸ್ತತ್ವದ ಹಬ್ಬುವಿಕೆಯನ್ನು ಈ ಧರ್ಮದ ಅನೇಕರು ದೃಢತೆಯಿಂದ ವಿರೋಧಿಸಿದರು. (ಅ. ಕೃತ್ಯಗಳು 13:44, 45; 14:19) ಈಗ, ಯೆರೂಸಲೇಮಿನ ಪತನದ ಕೆಲವೇ ದಶಕಗಳಾನಂತರ, ಸ್ಮುರ್ನದಲ್ಲಿನ ಈ ಯೆಹೂದ್ಯರು ಅದೇ ರೀತಿಯ ಸೈತಾನನ ಆತ್ಮವನ್ನು ತೋರಿಸುತ್ತಿದ್ದಾರೆ. ಅವರನ್ನು “ಸೈತಾನನ ಸಭಾಮಂದಿರ” ಎಂದು ಯೇಸುವು ವೀಕ್ಷಿಸುವುದರಲ್ಲಿ ಅಚ್ಚರಿಯೇನೂ ಇಲ್ಲ!a
5. ಸ್ಮುರ್ನದ ಕ್ರೈಸ್ತರಿಗೆ ಮುಂದಕ್ಕೆ ಯಾವ ಪರೀಕ್ಷೆಗಳಿವೆ?
5 ಅಂತಹ ದ್ವೇಷದ ಎದುರಿನಲ್ಲಿ, ಸ್ಮುರ್ನದಲ್ಲಿರುವ ಕ್ರೈಸ್ತರು ಯೇಸುವಿನಿಂದ ಸಂತೈಸಲ್ಪಡುತ್ತಾರೆ: “ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಹೆದರಬೇಡ. ನೋಡು! ನೀವು ಪೂರ್ಣವಾಗಿ ಪರಿಶೋಧಿಸಲ್ಪಡುವಂತೆ, ಪಿಶಾಚನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ತಳ್ಳುತ್ತಾ ಹೋಗುವನು, ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರಬಹುದು. ಮರಣದ ತನಕ ನಂಬಿಗಸ್ತನೆಂದು ರುಜುಪಡಿಸಿಕೊಳ್ಳು, ಮತ್ತು ನಾನು ನಿಮಗೆ ಜೀವದ ಕಿರೀಟವನ್ನು ಕೊಡುವೆನು”. (ಪ್ರಕಟನೆ 2:10, NW) ಇಲ್ಲಿ ಯೇಸುವು “ನೀವು” (ಯು) ಎಂಬ ಗ್ರೀಕ್ ಭಾಷೆಯ ಬಹುವಚನ ರೂಪವನ್ನು ಮೂರು ಸಾರಿ ಬಳಸುತ್ತಾ, ಅವನ ಈ ಶಬ್ದವು ಇಡೀ ಸಭೆಯನ್ನು ಒಳಗೂಡಿಸುತ್ತದೆ ಎಂದು ತೋರಿಸುತ್ತಾನೆ. ಸ್ಮುರ್ನದ ಕ್ರೈಸ್ತರ ಶೋಧನೆಗಳು ಬಲುಬೇಗನೆ ಅಂತ್ಯಗೊಳ್ಳಲಿವೆ ಎಂದು ಯೇಸುವು ವಾಗ್ದಾನಿಸಲು ಸಾಧ್ಯವಿರಲಿಲ್ಲ. ಅವರಲ್ಲಿ ಕೆಲವರು ಇನ್ನೂ ಹಿಂಸಿಸಲ್ಪಡಲಿದ್ದರು ಮತ್ತು ಸೆರೆಮನೆಗೆ ದೊಬ್ಬಲ್ಪಡಲಿದ್ದರು. ಅವರಿಗೆ “ಹತ್ತು ದಿನಗಳ” ಸಂಕಟವು ಇರುವುದು. ಹತ್ತು ಸಂಖ್ಯೆಯು ಐಹಿಕ ವಿಷಯಗಳ ಪೂರ್ಣತೆಯನ್ನು ಯಾ ಸಮಗ್ರತೆಯನ್ನು ಸೂಚಿಸುತ್ತದೆ. ಆತ್ಮಿಕವಾಗಿ ಐಶ್ವರ್ಯವಂತರಾಗಿರುವ ಸಮಗ್ರತೆ ಪಾಲಕರು ಕೂಡ ದೇಹದಲ್ಲಿರುವಾಗ ಒಂದು ಅಮೂಲಾಗ್ರವಾದ ಪರಿಶೋಧನೆಯನ್ನು ಹೊಂದುವರು.
6. (ಎ) ಸ್ಮುರ್ನದ ಕ್ರೈಸ್ತರು ಯಾಕೆ ಹೆದರಬಾರದು? (ಬಿ) ಸ್ಮುರ್ನದ ಸಭೆಗೆ ತನ್ನ ಸಂದೇಶವನ್ನು ಯೇಸುವು ಹೇಗೆ ಕೊನೆಗೊಳಿಸಿದನು?
6 ಹಾಗಿದ್ದರೂ, ಸ್ಮುರ್ನದಲ್ಲಿರುವ ಕ್ರೈಸ್ತರು ಹೆದರಬಾರದು ಯಾ ಒಪ್ಪಂದಮಾಡಿಕೊಳ್ಳಬಾರದು. ಅಂತ್ಯದ ತನಕ ಅವರು ನಂಬಿಗಸ್ತರಾಗಿ ಉಳಿದರೆ, ಅವರಿಗೋಸ್ಕರ “ಜೀವದ ಕಿರೀಟ” ಬಹುಮಾನವಾಗಿ ಇಡಲ್ಪಡುತ್ತದೆ, ಅಂದರೆ ಅವರ ಸಂಬಂಧದಲ್ಲಿ ಅದು ಪರಲೋಕದಲ್ಲಿ ಅಮರ ಜೀವವಾಗಿದೆ. (1 ಕೊರಿಂಥ 9:25; 2 ತಿಮೊಥೆಯ 4:6-8) ಈ ಅಮೂಲ್ಯವಾದ ಬಹುಮಾನವು ಬೇರೆ ಎಲ್ಲಾದರ ತ್ಯಾಗಕ್ಕೆ—ತನ್ನ ಐಹಿಕ ಜೀವ ಸಹಿತ—ಅರ್ಹವಾಗಿದೆ ಎಂಬದಾಗಿ ಅಪೊಸ್ತಲ ಪೌಲನು ಪರಿಗಣಿಸಿದನು. (ಫಿಲಿಪ್ಪಿ 3:8) ಸ್ಮುರ್ನದಲ್ಲಿರುವ ನಂಬಿಗಸ್ತರು ಕೂಡ ಅದೇ ರೀತಿ ಎಣಿಸಿರಬೇಕೆಂದು ವಿದಿತವಾಗುತ್ತದೆ. ಹೀಗೆ ಹೇಳುವುದರಿಂದ ಯೇಸುವು ಅವನ ಸಂದೇಶವನ್ನು ಕೊನೆಗೊಳಿಸುತ್ತಾನೆ: “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.” (ಪ್ರಕಟನೆ 2:11, NW) ಜಯಹೊಂದುವವರಿಗೆ ಮರಣದಿಂದ ಸ್ಪರ್ಶಿಸಲ್ಪಡಲಾರದಂತಹ ಸ್ವರ್ಗೀಯ ಅಮರ ಜೀವದ ಆಶ್ವಾಸನೆಯನ್ನೀಯಲಾಗಿದೆ.—1 ಕೊರಿಂಥ 15:53, 54.
-