ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಬಹಳ ಪ್ರಕಾಶಮಾನವಾದ ಪಟ್ಟಣ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 24. ಜೀವಜಲದ ನದಿಯ ಎರಡೂ ಪಾರ್ಶ್ವಗಳಲ್ಲಿ ಯೋಹಾನನು ಏನನ್ನು ಕಾಣುತ್ತಾನೆ, ಮತ್ತು ಅವು ಏನನ್ನು ಚಿತ್ರಿಸುತ್ತವೆ?

      24 ಯೆಹೆಜ್ಕೇಲನ ದರ್ಶನದಲ್ಲಿ ನದಿಯು ಒಂದು ಪ್ರವಾಹವಾಯಿತು, ಮತ್ತು ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುದನ್ನು ಪ್ರವಾದಿಯು ಕಂಡನು. (ಯೆಹೆಜ್ಕೇಲ 47:12) ಆದರೆ ಯೋಹಾನನು ಏನನ್ನು ಕಾಣುತ್ತಾನೆ? ಇದನ್ನು: “ಮತ್ತು ಆ ನದಿಯ ಉಭಯ ಪಾರ್ಶ್ವಗಳಲ್ಲಿ ಪ್ರತಿ ತಿಂಗಳು ತಮ್ಮ ಫಲಗಳನ್ನು ಬಿಟ್ಟು ಫಲದ ಹನ್ನೆರಡು ಬೆಳೆಗಳನ್ನು ಉತ್ಪಾದಿಸುವ ಜೀವವೃಕ್ಷಗಳಿದ್ದವು. ಮತ್ತು ಆ ಮರಗಳ ಎಲೆಗಳು ಜನಾಂಗಗಳನ್ನು ವಾಸಿಮಾಡುವುದಕ್ಕಾಗಿದ್ದವು.” (ಪ್ರಕಟನೆ 22:2ಬಿ, NW) ಈ “ಜೀವವೃಕ್ಷಗಳು” ವಿಧೇಯ ಮಾನವ ಕುಲಕ್ಕೆ ನಿತ್ಯ ಜೀವವನ್ನು ಕೊಡುವುದಕ್ಕಾಗಿರುವ ಯೆಹೋವನ ಒದಗಿಸುವಿಕೆಯ ಭಾಗವನ್ನು ಸಹ ಚಿತ್ರಿಸತಕ್ಕದ್ದು.

      25. ಭೌಗೋಳಿಕ ಪ್ರಮೋದವನದಲ್ಲಿ ಪ್ರತಿವರ್ತಿಸುವ ಮಾನವರಿಗೆ ಯೆಹೋವನು ಯಾವ ಸಮೃದ್ಧ ಒದಗಿಸುವಿಕೆಯನ್ನು ಮಾಡುತ್ತಾನೆ?

      25 ಪ್ರತಿವರ್ತಿಸುವ ಮಾನವರಿಗೆ ಯೆಹೋವನು ಎಷ್ಟು ಸಮೃದ್ಧದ ಒದಗಿಸುವಿಕೆಯನ್ನು ಮಾಡುತ್ತಾನೆ! ಆ ಚೇತೋಹಾರಿ ನೀರುಗಳಲ್ಲಿ ಅವರು ಪಾಲಿಗರಾಗಬಹುದು ಮಾತ್ರವಲ್ಲದೆ, ಆ ಮರಗಳಿಂದ ಸತತ ವಿವಿಧತೆಯ ಜೀವಪೋಷಕ ಫಲಗಳನ್ನು ಅವರು ಕೀಳಬಹುದು. ಓ, ನಮ್ಮ ಮೂಲ ಹೆತ್ತವರು ಏದೆನಿನ ಪ್ರಮೋದವನದಲ್ಲಿ ತದ್ರೀತಿಯ “ರಮ್ಯ” ವಾಗಿದ್ದ ಒದಗಿಸುವಿಕೆಯಲ್ಲಿ ತೃಪ್ತಿಗೊಂಡಿರುತ್ತಿದ್ದರೆ! (ಆದಿಕಾಂಡ 2:9) ಆದರೆ ಈಗ ಇಲ್ಲಿ ಭೌಗೋಳಿಕ ಪ್ರಮೋದವನವೊಂದಿದೆ, ಮತ್ತು “ಜನಾಂಗಗಳನ್ನು ವಾಸಿಮಾಡುವುದಕ್ಕಾಗಿ” ಆ ಸಾಂಕೇತಿಕ ಮರಗಳ ಎಲೆಗಳ ಮೂಲಕ ಕೂಡ ಒದಗಿಸುವಿಕೆಯನ್ನು ಯೆಹೋವನು ಮಾಡುತ್ತಾನೆ.c ಇಂದು ನೀಡಲ್ಪಡುತ್ತಿರುವ ಬೇರೆ ಯಾವುದೇ ಗಿಡಮೂಲಿಕೆಗಳ ಯಾ ಇತರ ಔಷಧಕ್ಕಿಂತಲೂ ಎಷ್ಟೋ ಉತ್ಕೃಷ್ಟವಾಗಿದ್ದು, ಈ ಸಾಂಕೇತಿಕ ಎಲೆಗಳ ಉಪಶಮನಗೊಳಿಸುವ ಅನ್ವಯವು ನಂಬುವ ಮಾನವಕುಲವನ್ನು ಆತ್ಮಿಕ ಮತ್ತು ಶಾರೀರಿಕ ಪರಿಪೂರ್ಣತೆಗೆ ಮೇಲಕ್ಕೆತ್ತುವುದು.

      26. ಜೀವವೃಕ್ಷಗಳು ಏನನ್ನು ಕೂಡ ಚಿತ್ರಿಸಬಹುದು, ಮತ್ತು ಯಾಕೆ?

      26 ನದಿಯಿಂದ ಉತ್ತಮವಾಗಿ ನೀರುಣಿಸಲ್ಪಟ್ಟ ಈ ವೃಕ್ಷಗಳು ಕುರಿಮರಿಯ ಪತ್ನಿಯ 1,44,000 ಮಂದಿ ಸದಸ್ಯರನ್ನು ಕೂಡ ಚಿತ್ರಿಸಬಲ್ಲವು. ಭೂಮಿಯಲ್ಲಿರುವಾಗ ಇವರು ಕೂಡ ಯೇಸುವಿನ ಮೂಲಕ ಜೀವಕ್ಕಾಗಿರುವ ದೇವರ ಒದಗಿಸುವಿಕೆಯಿಂದ ಕುಡಿದರು ಮತ್ತು “ನೀತಿವೃಕ್ಷಗಳು” ಎಂದು ಕರೆಯಲ್ಪಡುತ್ತಾರೆ. (ಯೆಶಾಯ 61:1-3; ಪ್ರಕಟನೆ 21:6) ಯೆಹೋವನ ಸ್ತುತಿಗಾಗಿ ಅವರು ಈಗಾಗಲೇ ಬಹಳಷ್ಟು ಆತ್ಮಿಕ ಫಲಗಳನ್ನು ಉತ್ಪಾದಿಸಿದ್ದಾರೆ. (ಮತ್ತಾಯ 21:43) ಮತ್ತು ಸಾವಿರ ವರ್ಷದ ಆಳಿಕೆಯಲ್ಲಿ, ಪಾಪ ಮತ್ತು ಮರಣದಿಂದ “ಜನಾಂಗಗಳನ್ನು ವಾಸಿಮಾಡುವುದಕ್ಕಾಗಿ” ಇರುವ ಪ್ರಾಯಶ್ಚಿತ್ತದ ಒದಗಿಸುವಿಕೆಗಳನ್ನು ನೀಡುವುದರಲ್ಲಿ ಅವರಿಗೆ ಪಾಲು ಇರುವುದು.—ಹೋಲಿಸಿ 1 ಯೋಹಾನ 1:7.

      ಇನ್ನು ರಾತ್ರಿಯಿಲ್ಲ

      27. ಹೊಸ ಯೆರೂಸಲೇಮಿನೊಳಗೆ ಪ್ರವೇಶಿಸಲು ಸುಯೋಗ ಪಡೆದವರಿಗೆ ಇರುವ ಹೆಚ್ಚಿನ ಯಾವ ಆಶೀರ್ವಾದಗಳನ್ನು ಯೋಹಾನನು ತಿಳಿಸುತ್ತಾನೆ, ಮತ್ತು “ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ” ಎಂದು ಯಾಕೆ ಹೇಳಲ್ಪಟ್ಟಿದೆ?

      27 ಹೊಸ ಯೆರೂಸಲೇಮಿನೊಳಗೆ ಪ್ರವೇಶ—ನಿಶ್ಚಯವಾಗಿಯೂ, ಅಂತಹ ಆಶ್ಚರ್ಯಕರ ಸುಯೋಗ ಬೇರೊಂದಿರಸಾಧ್ಯವಿಲ್ಲ! ತುಸು ಯೋಚಿಸಿರಿ—ಒಮ್ಮೆ ಕನಿಷ್ಠರೂ, ಅಪರಿಪೂರ್ಣರೂ ಆದ ಆ ಮಾನವರು ಅಂತಹ ಮಹಿಮಾಭರಿತ ಏರ್ಪಾಡಿನಲ್ಲಿ ಭಾಗವಾಗಲು ಪರಲೋಕದೊಳಗೆ ಯೇಸುವನ್ನು ಹಿಂಬಾಲಿಸುವರು! (ಯೋಹಾನ 14:2) ಇವರಿಂದ ಅನುಭವಿಸಲ್ಪಡುವ ಆಶೀರ್ವಾದಗಳ ಕೊಂಚ ಕಲ್ಪನೆಯನ್ನು ಯೋಹಾನನು ನಮಗೆ ಹೀಗನ್ನುತ್ತಾ, ಕೊಡುತ್ತಾನೆ: “ಮತ್ತು ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ. ಆದರೆ ಆ ನಗರದಲ್ಲಿ ದೇವರ ಮತ್ತು ಕುರಿಮರಿಯ ಸಿಂಹಾಸನವಿರುವುದು, ಮತ್ತು ಆತನ ದಾಸರು ಆತನಿಗೆ ಪವಿತ್ರ ಸೇವೆ ಸಲ್ಲಿಸುವರು; ಮತ್ತು ಅವರು ಆತನ ಮುಖವನ್ನು ನೋಡುವರು; ಮತ್ತು ಆವರ ಹಣೆಗಳ ಮೇಲೆ ಆತನ ಹೆಸರು ಇರುವುದು.” (ಪ್ರಕಟನೆ 22:3, 4, NW) ಇಸ್ರಾಯೇಲ್ಯ ಯಾಜಕತ್ವವು ಭ್ರಷ್ಟಗೊಂಡಾಗ, ಯೆಹೋವನ ಶಾಪದಿಂದ ಅದು ಬಾಧಿಸಲ್ಪಟ್ಟಿತು. (ಮಲಾಕಿಯ 2:2) ಯೆರೂಸಲೇಮಿನ ಅಪನಂಬಿಕೆಯ “ಆಲಯ”ವು ತ್ಯಜಿಸಲ್ಪಟ್ಟಿದೆಯೆಂದು ಯೇಸುವು ಹೇಳಿದನು. (ಮತ್ತಾಯ 23:37-39) ಆದರೆ ಹೊಸ ಯೆರೂಸಲೇಮಿನಲ್ಲಿ, “ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ.” (ಹೋಲಿಸಿ ಜೆಕರ್ಯ 14:11.) ಅದರ ಎಲ್ಲಾ ನಿವಾಸಿಗಳು ಭೂಮಿಯಲ್ಲಿರುವಾಗ ಶೋಧನೆಯ ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿರುತ್ತಾರೆ, ಮತ್ತು ಜಯವನ್ನು ಗಳಿಸಿದ್ದರಿಂದ ಅವರು ‘ನಿರ್ಲಯತ್ವವನ್ನೂ ಅಮರತ್ವವನ್ನೂ’ ಧರಿಸಿರುವರು. ಅವರ ವಿಷಯದಲ್ಲಿ, ಯೇಸುವಿನ ಕುರಿತು ಯೆಹೋವನಿಗೆ ಗೊತ್ತಿದ್ದಂತೆಯೇ, ಅವರು ಎಂದಿಗೂ ಬಿದ್ದುಹೋಗುವುದಿಲ್ಲವೆಂದು ಅವನಿಗೆ ತಿಳಿದದೆ. (1 ಕೊರಿಂಥ 15:53, 57) ಇನ್ನೂ ಹೆಚ್ಚಾಗಿ, “ದೇವರ ಮತ್ತು ಕುರಿಮರಿಯ ಸಿಂಹಾಸನ” ಅಲ್ಲಿದ್ದು, ಎಲ್ಲಾ ನಿತ್ಯತೆಗೂ ನಗರದ ಸ್ಥಾನವನ್ನು ಭದ್ರಗೊಳಿಸುತ್ತದೆ.

      28. ಹೊಸ ಯೆರೂಸಲೇಮಿನ ಸದಸ್ಯರುಗಳಿಗೆ ಅವರ ಹಣೆಗಳ ಮೇಲೆ ದೇವರ ಹೆಸರು ಯಾಕೆ ಬರೆಯಲ್ಪಡುತ್ತದೆ, ಮತ್ತು ಅವರ ಮುಂದೆ ಯಾವ ರೋಮಾಂಚಗೊಳಿಸುವ ಪ್ರತೀಕ್ಷೆಯು ಇದೆ?

      28 ಸ್ವತಃ ಯೋಹಾನನಂತೆ, ಆ ಪರಲೋಕ ನಗರದ ಎಲ್ಲಾ ಭಾವಿ ಸದಸ್ಯರು ದೇವರ “ದಾಸರು” ಆಗಿದ್ದಾರೆ. ಹಾಗಿರುವುದರಿಂದ, ಅವರಿಗೆ ದೇವರ ಹೆಸರು ಎದ್ದುಕಾಣುವ ರೀತಿಯಲ್ಲಿ ಅವರ ಹಣೆಗಳ ಮೇಲೆ ಬರೆಯಲ್ಪಟ್ಟಿದ್ದು, ಅವನು ಅವರ ಧಣಿಯೆಂದು ಗುರುತಿಸುತ್ತದೆ. (ಪ್ರಕಟನೆ 1:1; 3:12) ಹೊಸ ಯೆರೂಸಲೇಮಿನ ಭಾಗವಾಗಿ ಅವನಿಗೆ ಪವಿತ್ರ ಸೇವೆ ಸಲ್ಲವುದು ಒಂದು ಅಪಾರ ಸುಯೋಗವೆಂದು ಅವರು ಪರಿಗಣಿಸುವರು. ಯೇಸುವು ಭೂಮಿಯ ಮೇಲೆ ಇರುವಾಗ, ಅಂತಹ ಭಾವೀ ಅಧಿಪತಿಗಳಿಗೆ ಒಂದು ರೋಮಾಂಚಕಾರಿ ವಾಗ್ದಾನವನ್ನು ಮಾಡುತ್ತಾ, ಹೀಗಂದನು: “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” (ಮತ್ತಾಯ 5:8) ಯೆಹೋವನನ್ನು ಸಾಕ್ಷಾತ್‌ ಸಮ್ಮುಖದಲ್ಲಿ ನೋಡಲು ಮತ್ತು ಆರಾಧಿಸಲು ಈ ದಾಸರು ಎಷ್ಟೊಂದು ಆನಂದಿತರು!

      29. “ಇನ್ನು ಮುಂದೆ ರಾತ್ರಿ ಇಲ್ಲ” ಎಂದು ಸ್ವರ್ಗೀಯ ಹೊಸ ಯೆರೂಸಲೇಮಿನ ಕುರಿತು ಯೋಹಾನನು ಹೇಳಿದ್ದು ಯಾಕೆ?

      29 ಯೋಹಾನನು ಮುಂದರಿಸುವುದು: “ಅಲ್ಲದೆ ಇನ್ನು ಮುಂದೆ ರಾತ್ರಿ ಇಲ್ಲ, ಮತ್ತು ಅವರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಅವಶ್ಯವಿಲ್ಲ; ಏಕೆಂದರೆ ಯೆಹೋವ ದೇವರು, ಅವರ ಮೇಲೆ ಪ್ರಕಾಶಿಸುವನು.” (ಪ್ರಕಟನೆ 22:5ಎ, NW) ಭೂಮಿಯ ಇತರ ಯಾವುದೇ ನಗರದಂತೆ, ಪುರಾತನ ಯೆರೂಸಲೇಮ್‌ ಹಗಲಿನಲ್ಲಿ ಬೆಳಕಿಗಾಗಿ ಸೂರ್ಯನ ಮೇಲೆ ಮತ್ತು ರಾತ್ರಿಯಲ್ಲಿ ಚಂದ್ರಪ್ರಕಾಶ ಮತ್ತು ಕೃತಕ ಬೆಳಕಿನ ಮೇಲೆ ಆಧಾರಿಸಿತ್ತು. ಆದರೆ ಸ್ವರ್ಗೀಯ ಹೊಸ ಯೆರೂಸಲೇಮ್‌ನಲ್ಲಿ ಅಂತಹ ಬೆಳಕುಕ್ರಮ ಅನಾವಶ್ಯಕವಾಗಿರುವುದು. ಸ್ವತಃ ಯೆಹೋವನಿಂದ ನಗರವು ಬೆಳಗಿಸಲ್ಪಡುವುದು. ಮತ್ತು “ರಾತ್ರಿ” ಲಾಕ್ಷಣಿಕ ಅರ್ಥವೊಂದರಲ್ಲಿ, ಕೇಡು ಯಾ ಯೆಹೋವನಿಂದ ಪ್ರತ್ಯೇಕತೆಯನ್ನು ಸೂಚಿಸಲು ಕೂಡ ಬಳಸಲ್ಪಡಬಹುದು. (ಮೀಕ 3:6; ಯೋಹಾನ 9:4; ರೋಮಾಪುರ 13:11, 12) ಪರಾತ್ಪರ ದೇವರ ಮಹಿಮಾಭರಿತ, ದೇದೀಪ್ಯಮಾನದ ಸಾನ್ನಿಧ್ಯದಲ್ಲಿ ಅಂತಹ ರಾತ್ರಿ ಎಂದಿಗೂ ಇರಸಾಧ್ಯವಿಲ್ಲ.

      30. ಭವ್ಯವಾದ ದರ್ಶನವನ್ನು ಯೋಹಾನನು ಹೇಗೆ ಮುಕ್ತಾಯಗೊಳಿಸುತ್ತಾನೆ, ಮತ್ತು ಪ್ರಕಟನೆಯು ನಮಗೆ ಯಾವ ಆಶ್ವಾಸನೆಯನ್ನೀಯುತ್ತದೆ?

      30 ಈ ಭವ್ಯವಾದ ದರ್ಶನವನ್ನು ದೇವರ ಈ ದಾಸರ ಕುರಿತು ಹೀಗನ್ನುವುದರ ಮೂಲಕ ಯೋಹಾನನು ಮುಕ್ತಾಯಗೊಳಿಸುತ್ತಾನೆ: “ಮತ್ತು ಅವರು ಸದಾ ಸರ್ವದಾ ರಾಜರಾಗಿ ಆಳುವರು.” (ಪ್ರಕಟನೆ 22:5ಬಿ, NW) ನಿಜ, ಸಾವಿರ ವರುಷಗಳ ಅಂತ್ಯದಲ್ಲಿ ಪ್ರಾಯಶ್ಚಿತ್ತದ ಪ್ರಯೋಜನಗಳು ಸಮಗ್ರವಾಗಿ ಅನ್ವಯಿಸಲ್ಪಟ್ಟಿರುವುದು, ಮತ್ತು ಯೇಸುವು ತನ್ನ ತಂದೆಗೆ ಪರಿಪೂರ್ಣಗೊಂಡ ಮಾನವ ಕುಲವನ್ನು ನೀಡುವನು. (1 ಕೊರಿಂಥ 15:25-28) ಅನಂತರ ಯೇಸು ಮತ್ತು 1,44,000 ಮಂದಿಗಾಗಿ ಯೆಹೋವನ ಮನಸ್ಸಿನಲ್ಲಿ ಏನಿದೆ ಎಂದು ನಾವು ಅರಿತಿಲ್ಲ. ಆದರೆ ಎಲ್ಲಾ ನಿತ್ಯತೆಗೂ ಯೆಹೋವನಿಗೆ ಅವರ ಸುಯೋಗದ ಪವಿತ್ರ ಸೇವೆಯು ಮುಂದರಿಯುವುದು ಎಂದು ನಮಗೆ ಪ್ರಕಟನೆಯು ಆಶ್ವಾಸನೆಯನ್ನೀಯುತ್ತದೆ.

      ಪ್ರಕಟನೆಯ ಸಂತುಷ್ಟ ಪರಾಕಾಷ್ಠೆ

      31. (ಎ) ಹೊಸ ಯೆರೂಸಲೇಮಿನ ದರ್ಶನವನ್ನು ಯಾವ ತುತ್ತತುದಿಗೇರುವಿಕೆಯೊಂದಿಗೆ ಗುರುತಿಸಲಾಗಿದೆ? (ಬಿ) ಮಾನವ ಕುಲದ ಇತರ ನಂಬಿಗಸ್ತರಿಗಾಗಿ ಹೊಸ ಯೆರೂಸಲೇಮ್‌ ಏನನ್ನು ಪೂರೈಸುತ್ತದೆ?

      31 ಕುರಿಮರಿಯ ವಧುವಾದ ಹೊಸ ಯೆರೂಸಲೇಮಿನ ಈ ದರ್ಶನದ ಕೈಗೂಡುವಿಕೆಯು, ಪ್ರಕಟನೆಯು ನಿರ್ದೇಶಿಸುವ ಸಂತುಷ್ಟಿಯ ಪರಮಾವಧಿಯಾಗಿದೆ, ಮತ್ತು ತಕ್ಕದಾಗಿಯೆ ಅದು ಹಾಗಿರುತ್ತದೆ. ಆರಂಭದಲ್ಲಿ ಈ ಪುಸ್ತಕವನ್ನು ಯಾರಿಗೆ ಸಂಬೋಧಿಸಲಾಗಿತ್ತೋ ಆ ಮೊದಲನೆಯ ಶತಕದ ಯೋಹಾನನ ಆ ಎಲ್ಲಾ ಜತೆ ಕ್ರೈಸ್ತರು, ಯೇಸು ಕ್ರಿಸ್ತನೊಂದಿಗೆ ಅಮರ ಆತ್ಮ ಸಹರಾಜರಾಗಿ ಆ ನಗರದೊಳಗೆ ಪ್ರವೇಶಿಸುವುದನ್ನು ಮುನ್ನೋಡಿದರು. ಇಂದು ಭೂಮಿಯ ಮೇಲೆ ಇನ್ನೂ ಜೀವಿಸಿರುವ ಅಭಿಷಿಕ್ತ ಕ್ರೈಸ್ತರ ಉಳಿಕೆಯವರಿಗೂ ಅದೇ ನಿರೀಕ್ಷೆಯು ಇದೆ. ಹೀಗೆ ಪೂರ್ಣಗೊಂಡ ವಧುವು ಕುರಿಮರಿಯೊಂದಿಗೆ ಐಕ್ಯಗೊಳ್ಳುವಾಗ, ಪ್ರಕಟನೆಯು ಅದರ ಮಹಾ ಪರಮಾವಧಿಗೆ ಮುಂದುವರಿಯುತ್ತದೆ. ಅನಂತರ, ಹೊಸ ಯೆರೂಸಲೇಮಿನ ಮೂಲಕ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಮಾನವ ಕುಲಕ್ಕೆ ಅನ್ವಯಿಸಲ್ಪಡುತ್ತವೆ, ಆದುದರಿಂದ ಕ್ರಮೇಣ ಎಲ್ಲಾ ನಂಬಿಗಸ್ತರು ನಿತ್ಯ ಜೀವದೊಳಗೆ ಪ್ರವೇಶಿಸುತ್ತಾರೆ. ಈ ರೀತಿಯಲ್ಲಿ ವಧುವಾದ ಹೊಸ ಯೆರೂಸಲೇಮ್‌, ಅವಳ ವರನಾದ ಅರಸನ ನಿಷ್ಠೆಯ ಸಹಕಾರಿಣಿಯೋಪಾದಿ, ನಿತ್ಯತೆಗೋಸ್ಕರ ಒಂದು ನೀತಿಯ ನೂತನ ಭೂಮಿಯನ್ನು—ಎಲ್ಲವೂ ನಮ್ಮ ಸಾರ್ವಭೌಮ ಕರ್ತನಾದ ಯೆಹೋವನ ಮಹಿಮೆಗೋಸ್ಕರ—ನಿರ್ಮಿಸುವುದರಲ್ಲಿ ಸಹಭಾಗಿಯಾಗುವಳು.—ಮತ್ತಾಯ 20:28; ಯೋಹಾನ 10:10, 16; ರೋಮಾಪುರ 16:27.

      32, 33. ಪ್ರಕಟನೆ ಪುಸ್ತಕದಿಂದ ನಾವೇನನ್ನು ಕಲಿತೆವು, ಮತ್ತು ನಮ್ಮ ಹೃತ್ಪೂರ್ವಕ ಪ್ರತಿವರ್ತನೆ ಏನಾಗಿರತಕ್ಕದ್ದು?

      32 ಹಾಗಾದರೆ, ಪ್ರಕಟನೆ ಪುಸ್ತಕದ ನಮ್ಮ ಪರಿಗಣನೆಯ ಅಂತ್ಯಕ್ಕೆ ನಾವು ಸಮೀಪಿಸುತ್ತಿರುವಂತೆಯೇ, ನಾವು ಎಂಥ ಆನಂದವನ್ನು ಅನುಭವಿಸುತ್ತೇವೆ! ಸೈತಾನನ ಮತ್ತು ಅವನ ಸಂತಾನದ ಕೊನೆಯ ಪ್ರಯತ್ನಗಳ ಸಂಪೂರ್ಣ ಭಗ್ನತೆಯನ್ನೂ, ಯೆಹೋವನ ನೀತಿಯ ತೀರ್ಪುಗಳ ಪೂರ್ಣವಾದ ಸಾಧಿಸುವಿಕೆಯನ್ನೂ ನಾವು ನೋಡಿದ್ದೇವೆ. ಮಹಾ ಬಾಬೆಲ್‌, ಅದನ್ನು ಹಿಂಬಾಲಿಸಿ ಸೈತಾನನ ಲೋಕದ ನಿರೀಕ್ಷಾಹೀನ ಭ್ರಷ್ಟತೆಯ ಇತರ ಎಲ್ಲಾ ಘಟಕಾಂಶಗಳು ಅಸ್ತಿತ್ವದಿಂದ ಸದಾಕಾಲಕ್ಕೂ ಅಳಿಸಿಹೋಗಲೇ ಬೇಕು. ಸ್ವತಃ ಸೈತಾನನು ಮತ್ತು ಅವನ ದೆವ್ವಗಳು ಅಧೋಲೋಕಕ್ಕೆ ದೊಬ್ಬಲ್ಪಡುತ್ತವೆ ಮತ್ತು ತದನಂತರ ನಾಶಗೊಳಿಸಲ್ಪಡುತ್ತವೆ. ಪುನರುತ್ಥಾನ ಮತ್ತು ತೀರ್ಪು ಮುಂದರಿಯುತ್ತಿರುವಷ್ಟಕ್ಕೆ, ಕ್ರಿಸ್ತನೊಂದಿಗೆ ಹೊಸ ಯೆರೂಸಲೇಮ್‌ ಪರಲೋಕದಿಂದ ಆಳುವುದು, ಮತ್ತು ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಲವು ಕೊನೆಗೂ ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವವನ್ನು ಅನುಭವಿಸುವುದು. ಇವೆಲ್ಲಾ ಸಂಗತಿಗಳನ್ನು ಪ್ರಕಟನೆಯು ಎಷ್ಟೊಂದು ವಿಶದವಾಗಿ ಚಿತ್ರಿಸುತ್ತದೆ! ಇಂದು ಭೂಮಿಯಲ್ಲಿ ‘ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಈ ನಿತ್ಯವಾದ ಶುಭವರ್ತಮಾನವನ್ನು’ ಸಾರಿಹೇಳಲು ಅದು ನಮ್ಮ ದೃಢಸಂಕಲ್ಪವನ್ನು ಎಷ್ಟು ಬಲಗೊಳಿಸುತ್ತದೆ! (ಪ್ರಕಟನೆ 14:6, 7) ಈ ಮಹಾ ಕಾರ್ಯದಲ್ಲಿ ನೀವು ನಿಮ್ಮನ್ನೇ ಪೂರ್ಣವಾಗಿ ವ್ಯಯಿಸಿಕೊಳ್ಳುತ್ತಾ ಇದ್ದೀರೋ?

      33 ಕೃತಜ್ಞತೆಯಿಂದ ತುಂಬಿರುವ ನಮ್ಮ ಹೃದಯಗಳೊಂದಿಗೆ, ಪ್ರಕಟನೆಯ ಮುಕ್ತಾಯದ ಮಾತುಗಳಿಗೆ ನಾವೀಗ ಗಮನಕೊಡೋಣ.

  • ಪ್ರಕಟನೆ ಮತ್ತು ನೀವು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 1. (ಎ) ಪ್ರಕಟನೆಯಲ್ಲಿನ ಎಲ್ಲಾ ಆಶ್ಚರ್ಯಕರ ವಾಗ್ದಾನಗಳ ಸಂಬಂಧದಲ್ಲಿ ದೇವದೂತನು ಯೋಹಾನನಿಗೆ ಯಾವ ಮರುಆಶ್ವಾಸನೆಯನ್ನು ನೀಡುತ್ತಾನೆ? (ಬಿ) “ನಾನು ಬೇಗನೇ ಬರುತ್ತೇನೆ” ಎಂದು ಹೇಳುವವನು ಯಾರು, ಮತ್ತು ಈ ‘ಬರೋಣ’ವು ಯಾವಾಗ?

      ಹೊಸ ಯೆರೂಸಲೇಮಿನ ಆಹ್ಲಾದಕರ ವರ್ಣನೆಯನ್ನು ಓದಿದ ಮೇಲೆ, ನೀವು ಹೀಗೆ ಕೇಳಲು ಪ್ರೇರಿಸಲ್ಪಡಬಹುದು: ‘ಅಷ್ಟೊಂದು ಆಶ್ಚರ್ಯಕರವಾದದ್ದು ಎಂದಾದರೂ ನಿಜವಾಗಿಯೂ ಸಂಭವಿಸಬಹುದೇ?’ ದೇವದೂತನ ಅನಂತರದ ಮಾತುಗಳನ್ನು ವರದಿಸುವುದರೊಂದಿಗೆ ಯೋಹಾನನು ಆ ಪ್ರಶ್ನೆಯನ್ನತ್ತರಿಸುತ್ತಾನೆ: “ಮತ್ತು ಅವನು ನನಗೆ ಹೇಳಿದ್ದು: ‘ಈ ಮಾತುಗಳು ನಂಬಿಕೆಗರ್ಹವೂ ಸತ್ಯವೂ ಆಗಿವೆ; ಹೌದು, ಪ್ರವಾದಿಗಳ ಪ್ರೇರಿತ ಅಭಿವ್ಯಕ್ತಿಗಳ ದೇವರಾದ ಯೆಹೋವನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲು ತನ್ನ ದೂತನನ್ನು ಕಳುಹಿಸಿಕೊಟ್ಟನು. ಮತ್ತು ಇಗೋ! ನಾನು ಬೇಗನೆ ಬರುತ್ತೇನೆ. ಈ ಸುರುಳಿಯಲ್ಲಿ ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವ ಯಾವನೂ ಸಂತೋಷಿಯು.’” (ಪ್ರಕಟನೆ 22:6, 7, NW) ಪ್ರಕಟನೆಯ ಎಲ್ಲಾ ಆಶ್ಚರ್ಯಕರ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು! ಯೇಸುವಿನ ಹೆಸರಿನಲ್ಲಿ ಮಾತಾಡುತ್ತಾ, ಯೇಸುವು ಶೀಘ್ರವೇ, “ಬೇಗನೆ” ಬರುತ್ತಾನೆಂದು ದೇವದೂತನು ಘೋಷಿಸುತ್ತಾನೆ. ಇದು “ಕಳ್ಳನೋಪಾದಿ” ಯೆಹೋವನ ಶತ್ರುಗಳನ್ನು ನಾಶಮಾಡಲು ಮತ್ತು ಪ್ರಕಟನೆಯ ಭವ್ಯ ಮತ್ತು ಆನಂದದ ಪರಮಾವಧಿಯನ್ನು ಒಳತರುವ ಯೇಸುವಿನ ಬರೋಣವೇ ಆಗಿರಬೇಕು. (ಪ್ರಕಟನೆ 16:15, 16) ಆದಕಾರಣ ಆ ಸಮಯದಲ್ಲಿ ಧನ್ಯರೆಂದು ಘೋಷಿಸಲ್ಪಡಲು, ನಾವು “ಈ ಸುರುಳಿಯ”—ಪ್ರಕಟನೆಯ—ಮಾತುಗಳಿಗನುಸಾರ ನಮ್ಮ ಜೀವಿತಗಳನ್ನು ಹೊಂದಿಸತಕ್ಕದ್ದು.

      2. (ಎ) ಪ್ರಕಟನೆಯ ಸ್ವಾರಸ್ಯಕ್ಕೆ ಯೋಹಾನನು ಹೇಗೆ ಪ್ರತಿವರ್ತಿಸುತ್ತಾನೆ, ಮತ್ತು ದೇವದೂತನು ಅವನಿಗೆ ಏನು ಹೇಳುತ್ತಾನೆ? (ಬಿ) “ಜಾಗ್ರತೆ!” ಮತ್ತು “ದೇವರನ್ನು ಆರಾಧಿಸು” ಎಂಬ ದೇವದೂತನ ಮಾತುಗಳಿಂದ ನಾವೇನು ಕಲಿಯುತ್ತೇವೆ?

      2 ಪ್ರಕಟನೆಯ ಅಂತಹ ಸ್ವಾರಸ್ಯದ ಅನಂತರ, ಯೋಹಾನನು ಭಾವ ಪರವಶನಾಗುವುದನ್ನು ಅರ್ಥೈಸಿಕೊಳ್ಳಬಹುದಾಗಿದೆ: “ಒಳ್ಳೇದು, ಈ ಸಂಗತಿಗಳನ್ನು ಕೇಳುತ್ತಿದವ್ದನು ಮತ್ತು ಕಾಣುತ್ತಿದ್ದವನು ಯೋಹಾನನೆಂಬ ನಾನೇ. ಮತ್ತು ನಾನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸುತ್ತಿದ್ದ ದೇವದೂತನ ಪಾದಗಳ ಮುಂದೆ ಆರಾಧಿಸಲಿಕ್ಕಾಗಿ ಅಡಬ್ಡಿದ್ದೆನು. ಆದರೆ ಅವನು ನನಗೆ ಹೇಳುವುದು: ‘ಜಾಗ್ರತೆ! ಅದನ್ನು ಮಾಡಬೇಡ! ನಾನು ನಿನಗೂ ಮತ್ತು ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಮತ್ತು ಈ ಸುರುಳಿಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ, ಅಷ್ಟೇ. ದೇವರನ್ನು ಆರಾಧಿಸು.’” (ಪ್ರಕಟನೆ 22:8, 9, NW; ಹೋಲಿಸಿ ಪ್ರಕಟನೆ 19:10.) ದೇವದೂತರನ್ನು ಆರಾಧಿಸಕೂಡದು ಎಂದು ಎರಡಾವರ್ತಿ ಹೇಳಲ್ಪಟ್ಟ ಈ ಎಚ್ಚರಿಕೆಯು ಯೋಹಾನನ ದಿನಗಳಲ್ಲಿ ಸಮಯೋಚಿತವಾಗಿತ್ತು, ಯಾಕಂದರೆ ಕೆಲವರು ಅಂತಹ ಆರಾಧನೆಯ ಬೆನ್ನು ಹಿಡಿದಿದ್ದರು ಯಾ ದೇವದೂತರಿಂದ ವಿಶೇಷ ಪ್ರಕಟನೆಗಳನ್ನು ಪಡೆದಿದ್ದೇವೆಂದು ವಾದಿಸುತ್ತಿದ್ದರು ಎಂದು ವ್ಯಕ್ತವಾಗುತ್ತದೆ. (1 ಕೊರಿಂಥ 13:1; ಗಲಾತ್ಯ 1:8; ಕೊಲೊಸ್ಸೆ 2:18) ಇಂದು, ದೇವರೊಬ್ಬನನ್ನೇ ನಾವು ಆರಾಧಿಸತಕ್ಕದ್ದು ಎಂಬ ನಿಜಾಂಶವನ್ನು ಅದು ಎತ್ತಿತೋರಿಸುತ್ತದೆ. (ಮತ್ತಾಯ 4:10) ಯಾವನೇ ಒಬ್ಬನ ಯಾ ಇತರ ಒಂದು ವಿಷಯದ ಆರಾಧನೆಯೊಂದಿಗೆ ಶುದ್ಧಾರಾಧನೆಯನ್ನು ನಾವು ಭ್ರಷ್ಟಗೊಳಿಸಕೂಡದು.—ಯೆಶಾಯ 42:5, 8.

      3, 4. ದೇವದೂತನು ಯೋಹಾನನಿಗೆ ಏನನ್ನು ಹೇಳುವುದನ್ನು ಮುಂದರಿಸುತ್ತಾನೆ, ಮತ್ತು ಅವನ ಮಾತುಗಳಿಗೆ ಅಭಿಷಿಕ್ತ ಉಳಿಕೆಯವರು ಹೇಗೆ ವಿಧೇಯರಾಗಿದ್ದಾರೆ?

      3 ಯೋಹಾನನು ಮುಂದರಿಸುವುದು: “ಅವನು ನನಗೆ ಇನ್ನೂ ಹೇಳುವುದು: ‘ಈ ಸುರುಳಿಯಲ್ಲಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆ ಹಾಕಬೇಡ, ಯಾಕಂದರೆ ನೇಮಿತ ಸಮಯವು ಸನ್ನಿಹಿತವಾಗಿದೆ. ಅನೀತಿಯನ್ನು ಮಾಡುತ್ತಿರುವವನು, ಅನೀತಿಯನ್ನು ಮಾಡಲಿ; ಮತ್ತು ಕೊಳಕಾಗಿರುವವನು ಇನ್ನೂ ಕೊಳಕಾಗಿಸಲ್ಪಡಲಿ; ಆದರೆ ನೀತಿವಂತನು ಇನ್ನೂ ನೀತಿಯನ್ನು ಆಚರಿಸಲಿ ಮತ್ತು ಪವಿತ್ರನು ಇನ್ನೂ ಪವಿತ್ರಮಾಡಲ್ಪಡಲಿ.”—ಪ್ರಕಟನೆ 22:10, 11, NW.

      4 ಅಭಿಷಿಕ್ತ ಉಳಿಕೆಯವರು ಇಂದು ದೇವದೂತನ ಮಾತುಗಳಿಗೆ ವಿಧೇಯರಾಗಿದ್ದಾರೆ. ಅವರು ಪ್ರವಾದನೆಯ ಮಾತುಗಳಿಗೆ ಮುದ್ರೆ ಹಾಕಲಿಲ್ಲ. ಯಾಕೆ, ಸೈಅನ್ಸ್‌ ವಾಚ್‌ ಟವರ್‌ ಆ್ಯಂಡ್‌ ಹೆರಲ್ಡ್‌ ಆಫ್‌ ಕ್ರೈಸ್ಟ್ಸ್‌ ಪ್ರೆಸೆನ್ಸ್‌ (ಜುಲೈ 1879)ರ ಮೊತ್ತ ಮೊದಲ ಸಂಚಿಕೆಯು ಪ್ರಕಟನೆಯ ಅನೇಕ ವಚನಗಳ ಮೇಲೆ ಹೇಳಿಕೆಗಳನ್ನು ಕೊಟ್ಟಿದೆ. ನಮ್ಮ ಆರಂಭದ ಅಧ್ಯಾಯದಲ್ಲಿ ನಾವು ಗಮನಿಸಿದಂತೆ, ಕಳೆದ ವರುಷಗಳಲ್ಲಿಲ್ಲಾ ವಾಚ್‌ ಟವರ್‌ ಸೊಸೈಟಿಯು ಪ್ರಕಟನೆಯ ಮೇಲೆ ಜ್ಞಾನೋದಯವನ್ನುಂಟುಮಾಡುವ ಇತರ ಪುಸ್ತಕಗಳನ್ನು ಪ್ರಕಾಶಿಸಿದೆ. ಈಗ ಪುನಃ ನಾವು ಇಲ್ಲಿ ಪ್ರಕಟನೆಯ ಪ್ರಬಲ ಪ್ರವಾದನೆಗಳ ಮತ್ತು ಅವುಗಳ ನೆರವೇರಿಕೆಯ ಕಡೆಗೆ ಸತ್ಯ ಪ್ರಿಯರೆಲ್ಲರ ಗಮನವನ್ನು ಸೆಳೆಯುತ್ತೇವೆ.

      5. (ಎ) ಪ್ರಕಟನೆಯ ಎಚ್ಚರಿಕೆಗಳನ್ನು ಮತ್ತು ಹಿತೋಕ್ತಿಗಳನ್ನು ಜನರು ಅಲಕ್ಷಿಸಲು ಬಯಸುವಲ್ಲಿ ಆಗ ಏನು? (ಬಿ) ನಮ್ರ ಮತ್ತು ನೀತಿಯ ಜನರ ಪ್ರತಿವರ್ತನೆ ಏನಾಗಿರತಕ್ಕದ್ದು?

      5 ಪ್ರಕಟನೆಯಲ್ಲಿರುವ ಎಚ್ಚರಿಕೆಗಳನ್ನು ಮತ್ತು ಹಿತೋಕ್ತಿಗಳನ್ನು ಜನರು ಅಲಕ್ಷಿಸಲು ಬಯಸಿದರೆ, ಒಳ್ಳೇದು, ಅವರದನ್ನು ಮಾಡಲಿ! “ಅನ್ಯಾಯಮಾಡುವವನು ಇನ್ನೂ ಅನ್ಯಾಯಮಾಡಲಿ.” ಅದು ಅವರ ಆಯ್ಕೆಯಾಗಿರುವುದಾದರೆ, ಈ ವಿಷಯಲೋಲುಪತೆಯ ಯುಗದ ಮೈಲಿಗೆಯಲ್ಲಿ ಹೊರಳಾಡುವವರು ಆ ಮೈಲಿಗೆಯಲ್ಲಿಯೇ ಸಾಯಬಲ್ಲರು. ಬಲುಬೇಗನೆ, ಮಹಾ ಬಾಬೆಲಿನ ನಾಶನದೊಂದಿಗೆ ಆರಂಭಿಸಿ, ಯೆಹೋವನ ತೀರ್ಪುಗಳು ಮುಕ್ತಾಯಘಟ್ಟಕ್ಕೆ ಜಾರಿಗೊಳಿಸಲ್ಪಡುವುವು. ನಮ್ರ ಜನರು ಪ್ರವಾದಿಯ ಮಾತುಗಳನ್ನು ಆಲಿಸಲು ಶ್ರದ್ಧೆಯುಳ್ಳವರಾಗಿರಲಿ: “ಯೆಹೋವನನ್ನು ಆಶ್ರಯಿಸಿರಿ. . . . ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫೆನ್ಯ 2:3) ಯೆಹೋವನಿಗೆ ಈಗಾಗಲೇ ಸಮರ್ಪಿಸಿಕೊಂಡವರ ಕುರಿತಾದರೋ, “ನೀತಿವಂತನು ಇನ್ನೂ ನೀತಿಯನ್ನು ಆಚರಿಸಲಿ; ಪವಿತ್ರನು ಇನ್ನೂ ಪವಿತ್ರಮಾಡಲ್ಪಡಲಿ.” ನೀತಿ ಮತ್ತು ಪವಿತ್ರತೆಯನ್ನು ಬೆನ್ನಟ್ಟುವವರಿಂದ ಅನುಭವಿಸಲ್ಪಡುವ ಆಶೀರ್ವಾದಗಳೊಂದಿಗೆ ಪಾಪದಿಂದ ಬರುವ ಯಾವುದೇ ತಾತ್ಕಾಲಿಕ ಪ್ರಯೋಜನಗಳು ಸರಿಗಟ್ಟಲಾರವು ಎಂದು ವಿವೇಕಿಗಳು ತಿಳಿದಿರುತ್ತಾರೆ. ಬೈಬಲ್‌ ಹೇಳುವುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ.” (2 ಕೊರಿಂಥ 13:5) ನೀವು ಆರಿಸುವ ಮತ್ತು ನೆಲೆನಿಲ್ಲುವ ನಡೆವಳಿಯ ಮೇಲೆ ಆಧಾರಗೊಂಡು, ನಿಮ್ಮ ಬಹುಮಾನವನ್ನು ನೀವು ಪಡೆಯುವಿರಿ.—ಕೀರ್ತನೆ 19:9-11; 58:10, 11.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ