ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜಯಶಾಲಿಗಳಾಗಲು ಹೆಣಗಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 7, 8. ಸ್ಮುರ್ನದ ಸಭೆಯಂತೆ, 1918 ರಲ್ಲಿ ಕ್ರೈಸ್ತ ಸಭೆಯು ‘ಪೂರ್ಣವಾಗಿ ಪರಿಶೋಧನೆಗೆ’ ಒಳಪಟ್ಟದ್ದು ಹೇಗೆ?

      7 ಬಹುಮಟ್ಟಿಗೆ ಸ್ಮುರ್ನದ ಕ್ರೈಸ್ತರಂತೆಯೇ, ಯೋಹಾನ ವರ್ಗವು ಮತ್ತು ಅವರ ಸಂಗಾತಿಗಳು ಇಂದು “ಪೂರ್ಣವಾಗಿ ಪರಿಶೋಧಿಸಲ್ಪಡುತ್ತಾ” ಇದ್ದಾರೆ ಮತ್ತು ಪರಿಶೋಧಿಸಲ್ಪಡುತ್ತಾ ಇರುವರು. ಶೋಧನೆಯ ಕೆಳಗೆ ಅವರ ನಂಬಿಗಸ್ತಿಕೆಯು ಅವರನ್ನು ದೇವರ ಸ್ವಕೀಯ ಜನರೆಂದು ಗುರುತಿಸುತ್ತದೆ. (ಮಾರ್ಕ 13:9, 10) ಕರ್ತನ ದಿನವು ಆರಂಭಗೊಂಡ ಸ್ವಲ್ಪ ಸಮಯದ ನಂತರ, ಯೆಹೋವನ ಜನರ ಒಂದು ಚಿಕ್ಕ ಅಂತಾರಾಷ್ಟ್ರೀಯ ಗುಂಪಿಗೆ, ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಕೊಟ್ಟ ಯೇಸುವಿನ ಮಾತುಗಳು ನಿಜ ಸಂತೈಸುವಿಕೆಯನ್ನು ತಂದವು. (ಪ್ರಕಟನೆ 1:10) ಇವರು 1879 ರಿಂದ ಆತ್ಮಿಕ ಐಶ್ವರ್ಯವನ್ನು ದೇವರ ವಾಕ್ಯದಿಂದ ಅಗೆಯುತ್ತಾ ಇದ್ದರು, ಅದನ್ನು ಅವರು ಇತರರೊಂದಿಗೆ ಉದಾರವಾಗಿ ಹಂಚಿದರು. ಆದರೆ ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ, ಅವರು ತೀವ್ರವಾದ ದ್ವೇಷ ಮತ್ತು ವಿರೋಧವನ್ನು ಎದುರಿಸಬೇಕಾಯಿತು, ಆಂಶಿಕವಾಗಿ ಅವರು ಯುದ್ಧದ ತಾಪದಲ್ಲಿ ತಮ್ಮನ್ನು ಒಳಗೂಡಿಸಿಕೊಳ್ಳದಿದ್ದರೂ ಆಂಶಿಕವಾಗಿ ಅವರು ನಿರ್ಭೀತಿಯಿಂದ ಕ್ರೈಸ್ತಪ್ರಪಂಚದ ದೋಷಗಳನ್ನು ಬಹಿರಂಗಗೊಳಿಸುತ್ತಿದ್ದದ್ದೂ ಇದಕ್ಕೆ ಕಾರಣ. ಕ್ರೈಸ್ತಧರ್ಮದ ಮುಂದಾಳುಗಳಲ್ಲಿ ಕೆಲವರಿಂದ ಕೆರಳಿಸಲ್ಪಟ್ಟ ಹಿಂಸೆಯು 1918 ರಲ್ಲಿ ಮೇಲಕ್ಕೆ ಬಂತು ಮತ್ತು ಅದು ಯೆಹೂದ್ಯರ ಸಮಾಜದಿಂದ ಸ್ಮುರ್ನದ ಕ್ರೈಸ್ತರು ಏನನ್ನು ಹೊಂದಿದರೋ ಅದಕ್ಕೆ ತುಲನಾತ್ಮಕವಾಗಿತ್ತು.

      8 ಅಮೆರಿಕದಲ್ಲಿ ಹಿಂಸೆಯ ಒಂದು ಅಲೆಯು, ವಾಚ್‌ ಟವರ್‌ ಸೊಸೈಟಿಯ ಹೊಸ ಅಧ್ಯಕ್ಷರಾದ ಜೋಸೆಫ್‌ ಎಫ್‌. ರಥರ್‌ಫರ್ಡ್‌ ಮತ್ತು ಏಳು ಜನ ಸಂಗಾತಿಗಳು ಜೂನ್‌ 22, 1918 ರಲ್ಲಿ ಸೆರೆಮನೆಗೆ, ಅವರಲ್ಲಿ ಹೆಚ್ಚಿನವರನ್ನು 20-ವರ್ಷಗಳಷ್ಟು ಶಿಕ್ಷೆಗೆ ಹಾಕಲ್ಪಟ್ಟಾಗ ಪರಮಾವಧಿಗೇರಿತು. ಒಂಬತ್ತು ತಿಂಗಳುಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಮೇ 14, 1919 ರಂದು, ಅಪ್ಪೀಲ್‌ ಕೋರ್ಟು ಅವರಿಗೆ ತಪ್ಪಾಗಿ ವಿಧಿಸಲ್ಪಟ್ಟ ದಂಡನೆಗಳನ್ನು ವಿಪರ್ಯಸ್ತಗೊಳಿಸಿತು; ವಿಚಾರಣೆಯಲ್ಲಿ 125 ತಪ್ಪುಗಳಿದ್ದವು ಎಂದು ತೋರಿಸಲಾಯಿತು. ಯಾರು 1918 ರಲ್ಲಿ ಈ ಕ್ರೈಸ್ತರನ್ನು ಜಾಮೀನಿನ ಮೇಲೆ ಬಿಡಲು ನಿರಾಕರಿಸಿದನೋ ಆ ಮಹಾ ಸಂತ ಗ್ರೆಗರಿಯ ವೀರಪದಕದ ಬಿರುದು ಕೊಡಲ್ಪಟ್ಟಿದ್ದ ರೋಮನ್‌ ಕ್ಯಾತೊಲಿಕ್‌ ನ್ಯಾಯಾಧೀಶ ಮೆಂಟನ್‌ನನ್ನು 1939 ರಲ್ಲಿ ಲಂಚ ಕೋರಿ ಸ್ವೀಕರಿಸಿದ ಆರು ಮೊಕದ್ದಮೆಗಳಿಗಾಗಿ, ಎರಡು ವರ್ಷದ ಸೆರೆವಾಸ ಮತ್ತು 10,000 ಡಾಲರುಗಳ ಶಿಕ್ಷೆಯನ್ನು ವಿಧಿಸಲಾಯಿತು.

      9. ಹಿಟ್ಲರ್‌ನಿಂದ ನಾಜಿ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಉಪಚರಿಸಲ್ಪಟ್ಟರು, ಮತ್ತು ವೈದಿಕರಿಂದ ಯಾವ ಪ್ರತಿಕ್ರಿಯೆಯೊಂದಿಗೆ?

      9 ಜರ್ಮನಿಯ ನಾಜಿ ಆಳಿಕ್ವೆಯ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವನ್ನು ಹಿಟ್ಲರನು ಸಂಪೂರ್ಣವಾಗಿ ನಿಷೇಧಿಸಿದನು. ಕೆಲವು ವರ್ಷಗಳ ತನಕ ಸಾವಿರಾರು ಸಾಕ್ಷಿಗಳು ಕ್ರೂರವಾಗಿ ಶಿಬಿರಕೂಟಗಳಲ್ಲಿ ನಿರ್ಬಂಧಿಸಲ್ಪಟ್ಟರು, ಅಲ್ಲಿ ಅನೇಕರು ಸತ್ತರು, ಇತರ ನೂರಾರು ಯುವಕರು, ಹಿಟ್ಲರನ ಸೇನೆಯಲ್ಲಿ ಯುದ್ಧಮಾಡಲು ನಿರಾಕರಿಸಿದ್ದರಿಂದ ಹತಿಸಲ್ಪಟ್ಟರು. ಇವೆಲ್ಲವುಗಳಿಗೆ ವೈದಿಕರ ಬೆಂಬಲವಿತ್ತು ಎನ್ನುವುದಕ್ಕೆ ಮೇ 29, 1938 ರಲ್ಲಿ ದ ಜರ್ಮನ್‌ ವೇ ಎಂಬ ವಾರ್ತಾಪತ್ರಿಕೆಯಲ್ಲಿ ಕ್ಯಾತೊಲಿಕ್‌ ಪಾದ್ರಿಯೊಬ್ಬನ ಮಾತುಗಳಿಂದ ರುಜುಮಾಡಲ್ಪಟ್ಟಿದೆ: ಭಾಗಶಃ, ಅವನಂದದ್ದು: “ಭೂಮಿಯ ಮೇಲೆ ಈಗ . . . ಬೈಬಲ್‌ ವಿದ್ಯಾರ್ಥಿಗಳು [ಯೆಹೋವನ ಸಾಕ್ಷಿಗಳು] ಎಂದು ಕರೆಯಲ್ಪಡುವವರನ್ನು ನಿಷೇಧಿಸಿದ ದೇಶ ಒಂದು ಇದೆ. ಅದು ಜರ್ಮನಿ ಆಗಿರುತ್ತದೆ! . . . ಆಡಾಲ್ಫ್‌ ಹಿಟ್ಲರನು ಅಧಿಕಾರಕ್ಕೆ ಬಂದಾಗ, ಮತ್ತು ಜರ್ಮನ್‌ ಕ್ಯಾತೊಲಿಕ್‌ ಮತಪ್ರಾಂತಾಧಿಕಾರವು ಅವರ ವಿನಂತಿಯನ್ನು ಪುನಃ ಮಾಡಿದಾಗ, ಹಿಟ್ಲರನು ಅಂದದ್ದು: ‘ಅರ್ನೆಸ್ಟ್‌ ಬೈಬಲ್‌ ಸ್ಟೂಡೆಂಟ್ಸ್‌ ಎಂದು [ಯೆಹೋವನ ಸಾಕ್ಷಿಗಳು] ಕರೆಯಲ್ಪಡುವ ಇವರು ಉಪದ್ರವಕೊಡುವವರು; . . . ನಾನು ಅವರನ್ನು ಡೋಂಗಿಗಳು ಎಂದು ಎಣಿಸುತ್ತೇನೆ; ಈ ಅಮೆರಿಕನ್‌ ಜಡ್ಜ್‌ ರಥರ್‌ಫರ್ಡ್‌ರಿಂದ ಇಂತಹ ರೀತಿಯಲ್ಲಿ ಜರ್ಮನಿಯ ಕ್ಯಾತೊಲಿಕರು ಕೆಡಿಸಲ್ಪಡುವುದನ್ನು ನಾನು ಸಹಿಸಲಾರೆನು; ನಾನು ಜರ್ಮನಿಯಲ್ಲಿ [ಯೆಹೋವನ ಸಾಕ್ಷಿಗಳನ್ನು] ರದ್ದು ಮಾಡುತ್ತೇನೆ.’” ಇದಕ್ಕೆ ಪಾದ್ರಿಯು ಕೂಡಿಸಿದ್ದು: “ಶಹಭಾಸ್‌!”

      10. (ಎ) ಕರ್ತನ ದಿನವು ಮುಂದರಿದಂತೆ, ಯೆಹೋವನ ಸಾಕ್ಷಿಗಳು ಯಾವ ಹಿಂಸೆಯನ್ನು ಎದುರಿಸಿದ್ದರು? (ಬಿ) ನ್ಯಾಯಾಲಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಕ್ರೈಸ್ತರು ಹೋರಾಡಿದಾಗ ಅನೇಕ ವೇಳೆ ಯಾವ ಫಲಿತಾಂಶವುಂಟಾಯಿತು?

      10 ಕರ್ತನ ದಿನವು ಮುಂದರಿದಂತೆ, ಅಭಿಷಿಕ್ತ ಕ್ರೈಸ್ತರ ಮತ್ತು ಅವರ ಸಂಗಾತಿಗಳ ವಿರುದ್ಧವಾಗಿ ಹೋರಾಡುವುದನ್ನು ಸರ್ಪನು ಮತ್ತು ಅವನ ಸಂತಾನವು ಎಂದಿಗೂ ನಿಲ್ಲಿಸಲಿಲ್ಲ. ಇವರಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲಾಯಿತು ಮತ್ತು ಕ್ರೂರವಾಗಿ ಹಿಂಸಿಸಲಾಯಿತು. (ಪ್ರಕಟನೆ 12:17) ಈ ಶತ್ರುಗಳು ‘ನಿಯಮದ ಮೂಲಕ ಕೇಡನ್ನು ಕಲ್ಪಿಸುವುದನ್ನು’ ಮುಂದರಿಸಿದ್ದಾರೆ, ಆದರೆ ಯೆಹೋವನ ಜನರು ಸ್ಥಿರತೆಯಿಂದ, “ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ನಾವು ವಿಧೇಯರಾಗಬೇಕು” ಎಂದು ಪಟ್ಟುಹಿಡಿಯುತ್ತಾರೆ. (ಕೀರ್ತನೆ 94:20; ಕಿಂಗ್‌ ಜೇಮ್ಸ್‌ ವರ್ಷನ್‌; ಅ. ಕೃತ್ಯಗಳು 5:29) 1954 ರಲ್ಲಿ ವಾಚ್‌ಟವರ್‌ ಪತ್ರಿಕೆಯು ವರದಿಸಿದ್ದು: “ಗತಿಸಿದ 40 ವರ್ಷಗಳಲ್ಲಿ ಒಂದಲ್ಲದಿದ್ದರೆ ಇನ್ನೊಂದು ಸಮಯದಲ್ಲಿ 70 ಕ್ಕಿಂತಲೂ ಹೆಚ್ಚು ದೇಶಗಳು ನಿಷೇಧಿತ ಕಾನೂನು ಕ್ರಮಗಳನ್ನು ಕೈಗೊಂಡಿರುತ್ತವೆ ಮತ್ತು ಯೆಹೋವನ ಸಾಕ್ಷಿಗಳನ್ನು ಹಿಂಸಿಸಿವೆ.” ಎಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯಗಳಲ್ಲಿ ಹೋರಾಡಲು ಸಾಧ್ಯವೂ, ಅಲ್ಲಿಲ್ಲಾ ಈ ಕ್ರೈಸ್ತರು ಅದನ್ನು ಮಾಡಿರುತ್ತಾರೆ ಮತ್ತು ಅನೇಕ ದೇಶಗಳಲ್ಲಿ ಅವರು ಜನಜನಿತವಾಗಿರುವ ವಿಜಯಗಳನ್ನು ಪಡೆದಿದ್ದಾರೆ. ಅಮೆರಿಕದ ಸುಪ್ರೀಮ್‌ ಕೋರ್ಟ್‌ ಒಂದರಲ್ಲಿಯೇ ಯೆಹೋವನ ಸಾಕ್ಷಿಗಳು 23 ಅನುಕೂಲ ತೀರ್ಮಾನಗಳನ್ನು ಗೆದ್ದಿದ್ದಾರೆ.

      11. ಕರ್ತನ ದಿನದಲ್ಲಿ ಅವನ ಸಾನ್ನಿಧ್ಯದ ಸೂಚನೆಯ ಯೇಸುವಿನ ಯಾವ ಪ್ರವಾದನೆಯು ಯೆಹೋವನ ಸಾಕ್ಷಿಗಳ ಮೇಲೆ ನೆರವೇರಿದೆ?

      11 ಕೈಸರನ ವಿಷಯಗಳನ್ನು ಕೈಸರನಿಗೆ ಕೊಡುವ ಯೇಸುವಿನ ಆಜ್ಞೆಗೆ ವಿಧೇಯರಾಗುವುದರಲ್ಲಿ ಬೇರೆ ಯಾವ ಗುಂಪೂ ಅಷ್ಟೊಂದು ಶುದ್ಧಾಂತಃಕರಣದಿಂದ ಇದ್ದದ್ದಿಲ್ಲ. (ಲೂಕ 20:25; ರೋಮಾಪುರ 13:1, 7) ಆದರೂ, ಬೇರೆ ಬೇರೆ ವಿಧದ ಸರಕಾರಗಳ ಕೆಳಗೆ ಅಷ್ಟೊಂದು ದೇಶಗಳಲ್ಲಿ ಬೇರೆ ಯಾವ ಗುಂಪಿನ ಸದಸ್ಯರುಗಳೂ ಹೀಗೆ ಸೆರೆಮನೆಗೆ ಹಾಕಲ್ಪಟ್ಟದ್ದಿಲ್ಲ, ಮತ್ತು ಇದು ಪ್ರಚಲಿತ ಸಮಯಗಳಲ್ಲಿ ಪಶ್ಚಿಮ ಗೋಳಾರ್ಧ ದೇಶಗಳಲ್ಲಿ, ಯೂರೋಪಿನಲ್ಲಿ, ಆಫ್ರಿಕದಲ್ಲಿ, ಮತ್ತು ಏಷಿಯದಲ್ಲಿ ಮುಂದರಿಯುತ್ತಾ ಇದೆ. ಅವನ ಸಾನ್ನಿಧ್ಯದ ಸೂಚನೆಯ ಕುರಿತಾದ ಯೇಸುವಿನ ಮಹಾ ಪ್ರವಾದನೆಯಲ್ಲಿ ಈ ಮಾತುಗಳು ಕೂಡಿರುತ್ತವೆ: “ಆಗ ಜನರು ನಿಮ್ಮನ್ನು ಸಂಕಟಗಳಿಗೆ ಒಪ್ಪಿಸುವರು ಮತ್ತು ನಿಮ್ಮನ್ನು ಕೊಲ್ಲುವರು, ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲಾ ಜನಾಂಗಗಳ ದ್ವೇಷದ ಗುರಿಯಾಗುವಿರಿ.” (ಮತ್ತಾಯ 24:3, 9, NW) ಇದು ಕರ್ತನ ದಿನದಲ್ಲಿ ಯೆಹೋವನ ಕ್ರೈಸ್ತ ಸಾಕ್ಷಿಗಳಲ್ಲಿ ಖಂಡಿತವಾಗಿಯೂ ನೆರವೇರಿದೆ.

      12. ಯೋಹಾನ ವರ್ಗವು ಹಿಂಸೆಯ ವಿರುದ್ಧ ದೇವಜನರನ್ನು ಬಲಗೊಳಿಸಿದ್ದು ಹೇಗೆ?

      12 ಸಂಕಟದ ವಿರುದ್ಧವಾಗಿ ದೇವಜನರನ್ನು ಬಲಗೊಳಿಸಲು, ಯೋಹಾನ ವರ್ಗವು ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಕೊಟ್ಟ ಯೇಸುವಿನ ಮಾತುಗಳ ಸಾರಾಂಶವನ್ನು ಸತತ ನೆನಪಿಸಿದೆ. ಉದಾಹರಣೆಗಾಗಿ, ನಾಜಿ ಹಿಂಸೆಯು ಆರಂಭಿಸಿದಂತೆ, ಮತ್ತಾಯ 10:26-33ನ್ನು ಚರ್ಚಿಸಿರುವ “ಅವರಿಗೆ ಹೆದರಬೇಡಿರಿ”; ದಾನಿಯೇಲ 3:17, 18 ಮೇಲೆ ಆಧಾರಿತವಾದ “ಅಗ್ನಿ ಪರೀಕ್ಷೆ” ಮತ್ತು ದಾನಿಯೇಲ 6:22 ಮುಖ್ಯ ಆಧಾರವಚನವಾಗಿರುವ “ಸಿಂಹಗಳ ಬಾಯಿಗಳು” ಎಂಬ ಲೇಖನಗಳು 1933 ಮತ್ತು 1934ರ ದ ವಾಚ್‌ಟವರ್‌ (ಕಾವಲಿನಬುರುಜು) ನಲ್ಲಿ ಬಂದವು. 1980ರ ದಶಕದಲ್ಲಿ, 40 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕ್ರೂರವಾದ ಹಿಂಸೆಯಿಂದ ಯೆಹೋವನ ಸಾಕ್ಷಿಗಳು ಬಾಧೆಗೊಳಗಾದಾಗ, “ಹಿಂಸಿಸಲ್ಪಟ್ಟರೂ ಸಂತೋಷಿಗಳು!” ಮತ್ತು “ತಾಳ್ಮೆಯಿಂದ ಕ್ರೈಸ್ತರು ಹಿಂಸೆಯನ್ನು ಎದುರಿಸುತ್ತಾರೆ” ಎಂಬ ದ ವಾಚ್‌ಟವರ್‌ನ ಲೇಖನಗಳು ದೇವಜನರನ್ನು ಬಲಗೊಳಿಸಿದವು.b

      13. ಸ್ಮುರ್ನದ ಕ್ರೈಸ್ತರಂತೆ, ಹಿಂಸೆಯ ಕುರಿತಾಗಿ ಯೆಹೋವನ ಕ್ರೈಸ್ತ ಸಾಕ್ಷಿಗಳು ಯಾಕೆ ಹೆದರಿರುವುದಿಲ್ಲ?

      13 ನಿಜವಾಗಿಯೂ, ಸಾಂಕೇತಿಕ ಹತ್ತು ದಿವಸಗಳಿಗೋಸ್ಕರ ಯೆಹೋವನ ಕ್ರೈಸ್ತ ಸಾಕ್ಷಿಗಳು ದೈಹಿಕ ಹಿಂಸೆಯಿಂದ ಮತ್ತು ಇನ್ನಿತರ ಶೋಧನೆಗಳಿಂದ ಬಾಧಿತರಾಗುತ್ತಾರೆ. ಸ್ಮುರ್ನದಲ್ಲಿದ್ದಂತಹ ಕ್ರೈಸ್ತರಂತೆಯೇ, ಅವರೇನೂ ಹೆದರಿರುವುದಿಲ್ಲ; ಇಲ್ಲವೆ ಭೂಮಿಯ ಮೇಲೆ ಸಂಕಷ್ಟಗಳು ಏರಿದಂತೆ ನಮ್ಮಲ್ಲಿ ಯಾರೂ ಹೆದರುವ ಆವಶ್ಯಕತೆಯೂ ಇಲ್ಲ. ನಾವು ಬಾಧೆಗಳ ಕೆಳಗೆ ಸಹಿಸಿಕೊಳ್ಳಲು ಸಿದ್ಧರಾಗಿದ್ದೇವೆ ಮತ್ತು ‘ಸೊತ್ತುಗಳನ್ನು ಸುಲುಕೊಳ್ಳುವಾಗಲೂ ಕೂಡ’ ಸಂತೋಷವಾಗಿರುತ್ತೇವೆ. (ಇಬ್ರಿಯ 10:32-34) ನಾವು ದೇವರ ವಾಕ್ಯವನ್ನು ಅಭ್ಯಾಸಿಸುವ ಮೂಲಕ ಮತ್ತು ಅದನ್ನು ನಮ್ಮ ಸ್ವಂತದ್ದಾಗಿ ಮಾಡಿಕೊಳ್ಳುವುದರ ಮೂಲಕ, ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ನಮ್ಮನ್ನು ಸನ್ನದ್ಧರನ್ನಾಗಿ ಮಾಡಿಕೊಳ್ಳುತ್ತೇವೆ. ನಿಮ್ಮ ಸಮಗ್ರತೆಯನ್ನು ಯೆಹೋವನು ಕಾಪಾಡಲು ಶಕ್ತನು ಮತ್ತು ಕಾಪಾಡುವನು ಎಂಬ ವಿಷಯದಲ್ಲಿ ಭರವಸೆಯಿಂದಿರ್ರಿ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6-11.

  • ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 1. ಯೇಸುವಿನ ಮುಂದಿನ ಸಂದೇಶವನ್ನು ಯಾವ ಸಭೆಯು ಪಡೆಯಿತು, ಮತ್ತು ಆ ಕ್ರೈಸ್ತರು ಯಾವ ರೀತಿಯ ನಗರದಲ್ಲಿ ಜೀವಿಸುತ್ತಿದ್ದರು?

      ಸ್ಮುರ್ನದ ಕರಾವಳಿ ಮಾರ್ಗದಿಂದ 50 ಮೈಲು ಉತ್ತರಕ್ಕೆ ಮತ್ತು ಅನಂತರ ಕೇಕಸ್‌ ನದಿಯ ಕಣಿವೆಯ ಮೂಲಕ 15 ಮೈಲು ಒಳನಾಡಿಗೆ ಪ್ರಯಾಣಿಸಿದರೆ, ಈಗ ಬೆರ್ಗಾಮವೆಂದು ಕರೆಯಲ್ಪಡುವ ಪೆರ್ಗಮಮ್‌ಗೆ ನಾವು ಬರುತ್ತೇವೆ. ಈ ನಗರವು ಅದರ ಸೂಸ್‌ ಯಾ ಜೂಪಿಟರ್‌ನ ದೇವಸ್ಥಾನಕ್ಕಾಗಿ ಪ್ರಖ್ಯಾತವಾಗಿತ್ತು. 1800 ರುಗಳಲ್ಲಿ ಪುರಾತನ ವಸ್ತುಶಾಸ್ತ್ರಜ್ಞರು ಆ ದೇವಸ್ಥಾನದ ಬಲಿಪೀಠವನ್ನು ಜರ್ಮನಿಗೆ ಸ್ಥಳಾಂತರಿಸಿದರು, ಬರ್ಲಿನ್‌ನ ಪೆರ್ಗಮೊನ್‌ ವಸ್ತುಸಂಗ್ರಹಾಲಯದಲ್ಲಿ ವಿಧರ್ಮಿ ದೇವರುಗಳ ಪ್ರತಿಮೆಗಳ ಮತ್ತು ಉಬ್ಬುಚಿತ್ರಗಳ ಒಟ್ಟಿಗೆ ಅದನ್ನು ಈಗ ಕೂಡ ವೀಕ್ಷಿಸಬಹುದು. ಈ ಎಲ್ಲಾ ವಿಗ್ರಹಾರಾಧನೆಯ ಮಧ್ಯೆ ಇದ್ದ ಸಭೆಗೆ ಕರ್ತನಾದ ಯೇಸುವು ಯಾವ ಸಂದೇಶವನ್ನು ಕಳುಹಿಸುವನು?

      2. ಯೇಸುವು ತನ್ನ ಪರಿಚಯವನ್ನು ಹೇಗೆ ಸ್ಥಾಪಿಸುತ್ತಾನೆ, ಮತ್ತು ಅವನಲ್ಲಿ ‘ಇಬ್ಬಾಯಿ ಕತ್ತಿ’ ಇರುವ ವೈಶಿಷ್ಟ್ಯವೇನು?

      2 ಮೊದಲಾಗಿ, ಯೇಸುವು ತನ್ನ ಪರಿಚಯವನ್ನು ಹೀಗೆ ಹೇಳುತ್ತಾ ಸ್ಥಾಪಿಸುತ್ತಾನೆ: “ಮತ್ತು ಪೆರ್ಗಮಮ್‌ನಲ್ಲಿರುವ ಸಭೆಯ ದೂತನಿಗೆ ಬರೆ: ಹದವಾದ, ಉದ್ದ ಇಬ್ಬಾಯಿ ಕತ್ತಿ ಇರುವಾತನು ಈ ಸಂಗತಿಗಳನ್ನು ತಿಳಿಸುತ್ತಾನೆ.” (ಪ್ರಕಟನೆ 2:12, NW) ಪ್ರಕಟನೆ 1:16 ರಲ್ಲಿ ತನ್ನ ಕುರಿತಾಗಿ ಕೊಟ್ಟಿರುವ ವಿವರವನ್ನು ಯೇಸುವು ಇಲ್ಲಿ ಪುನರುಚ್ಚರಿಸುತ್ತಾನೆ. ನ್ಯಾಯಾಧಿಪತಿ ಮತ್ತು ದಂಡನೆಯ ಕಾರ್ಯನಿರ್ವಾಹಕನೋಪಾದಿ ತನ್ನ ಶಿಷ್ಯರನ್ನು ಹಿಂಸಿಸುವ ಎಲ್ಲರನ್ನೂ ಅವನು ಹತಿಸಲಿದ್ದಾನೆ. ಎಂತಹ ಒಂದು ಸಂತೈಸುವ ಆಶ್ವಾಸನೆ! ಆದಾಗ್ಯೂ, ನ್ಯಾಯತೀರ್ಪಿನ ವಿಷಯವಾಗಿ ಸಭೆಯ ಒಳಗೆ ಇರುವವರು ಸಹಿತ ಎಚ್ಚರಿಸಲ್ಪಡಲಿದ್ದಾರೆ ಏನೆಂದರೆ ಯೆಹೋವನು, “ಒಡಂಬಡಿಕೆಯ ದೂತನಾದ” ಯೇಸು ಕ್ರಿಸ್ತನ ಮೂಲಕ ಕ್ರಿಯೆಗೈಯುತ್ತಾ, ಕ್ರೈಸ್ತರೆಂದು ಹೇಳಿಕೊಳ್ಳುತ್ತಾ ವಿಗ್ರಹಾರಾಧನೆ, ಅನೈತಿಕತೆ, ಸುಳ್ಳು ಹೇಳುವಿಕೆ, ಮತ್ತು ಅಪ್ರಾಮಾಣಿಕತೆಯನ್ನು ನಡಿಸುವವರು ಹಾಗೂ ನಿರ್ಗತಿಕರಿಗೆ ಸಹಾಯ ನೀಡಲು ತಪ್ಪುವ ಎಲ್ಲರ ವಿರುದ್ಧವಾಗಿ “ಶೀಘ್ರ ಸಾಕ್ಷಿಯಾಗಲಿರುವನು.” (ಮಲಾಕಿಯ 3:1, 5; ಇಬ್ರಿಯ 13:1-3) ಯೇಸುವು ನೀಡುವಂತೆ ದೇವರು ಕಾರಣನಾಗುವ ಸಲಹೆ ಮತ್ತು ಗದರಿಕೆ ಆಲಿಸಲ್ಪಡತಕ್ಕದ್ದು!

      3. ಪೆರ್ಗಮಮ್‌ನಲ್ಲಿ ಯಾವ ಸುಳ್ಳು ಆರಾಧನೆಯು ನಡೆಯಿತು, ಮತ್ತು ಅಲ್ಲಿ “ಸೈತಾನನ ಸಿಂಹಾಸನವು” ಇತ್ತು ಎಂದು ಹೇಗೆ ಹೇಳಸಾಧ್ಯವಿದೆ?

      3 ಯೇಸುವು ಈಗ ಸಭೆಗೆ ಹೇಳುವುದು: “ನೀನು ವಾಸಿಸುವುದೆಲ್ಲಿ ಎಂದು ಅಂದರೆ, ಸೈತಾನನ ಸಿಂಹಾಸನವಿರುವಲ್ಲಿ ಎಂದು ನಾನು ಬಲ್ಲೆನು.” (ಪ್ರಕಟನೆ 2:13ಎ, NW) ನಿಜವಾಗಿಯೂ, ಆ ಕ್ರೈಸ್ತರು ಸೈತಾನ ಸಂಬಂಧಿತ ಆರಾಧನೆಯಿಂದ ಸುತ್ತುವರಿಯಲ್ಪಟ್ಟಿದ್ದರು. ಸೂಸ್‌ ದೇವಸ್ಥಾನವಲ್ಲದೆ, ಈಸ್ಕ್ಯುಲೇಪಿಯಸ್‌ ಎಂಬ ವೈದ್ಯಾಧಿದೇವತೆಯ ಒಂದು ಗುಡಿಯೂ ಅಲ್ಲಿತ್ತು. ಸಮ್ರಾಟನ ಆರಾಧನ ಪದ್ಧತಿಯ ಒಂದು ಕೇಂದ್ರವಾಗಿಯೂ ಪೆರ್ಗಮಮ್‌ ಪ್ರಖ್ಯಾತವಾಗಿತ್ತು. “ಸೈತಾನ” ಎಂದು ತರ್ಜುಮೆ ಮಾಡಿರುವ ಇಬ್ರಿಯ ಶಬ್ದದ ಅರ್ಥವು “ಪ್ರತಿಭಟಕನು” ಎಂದಾಗಿದೆ, ಮತ್ತು ಅವನ “ಸಿಂಹಾಸನವು” ಒಂದು ನಿಯತಕಾಲದ ತನಕ ದೈವಿಕವಾಗಿ ಅನುಮತಿಸಲ್ಪಟ್ಟ ಲೋಕದ ಅವನ ಪ್ರಭುತ್ವವನ್ನು ಪ್ರತಿನಿಧಿಸುತ್ತದೆ. (ಯೋಬ 1:6, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ) ಪೆರ್ಗಮಮ್‌ನಲ್ಲಿ ವಿಗ್ರಹಾರಾಧನೆಯ ವಿಪುಲತೆಯು, ಸೈತಾನನ “ಸಿಂಹಾಸನವು” ಆ ನಗರದಲ್ಲಿ ಸ್ಥಿರವಾಗಿ ತಳವೂರಿರುವುದನ್ನು ತೋರಿಸಿತು. ರಾಷ್ಟ್ರೀಯತೆಯ ಆರಾಧನೆಯಲ್ಲಿ ತನಗೆ ಕ್ರೈಸ್ತರು ಅಡ್ಡಬೀಳದೆ ಇರುವುದರಿಂದ ಸೈತಾನನು ಎಷ್ಟೊಂದು ಕ್ರೋಧತಪ್ತನಾಗಿದ್ದಿರಬಹುದು!

      4. (ಎ) ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಯೇಸುವು ಯಾವ ಪ್ರಶಂಸೆಯನ್ನು ಮಾಡುತ್ತಾನೆ? (ಬಿ) ರೋಮನ್‌ ರಾಯಭಾರಿ ಪ್ಲಿನೀಯು ಕ್ರೈಸ್ತರ ಉಪಚರಿಸುವಿಕೆಯ ಕುರಿತು ಸಮ್ರಾಟ ಟ್ರೇಜನ್‌ನಿಗೆ ಏನು ಬರೆದನು? (ಸಿ) ಅಪಾಯವಿದ್ದಾಗ್ಯೂ, ಪೆರ್ಗಮಮ್‌ನಲ್ಲಿರುವ ಕ್ರೈಸ್ತರು ಯಾವ ಮಾರ್ಗವನ್ನು ಅನುಸರಿಸಿದರು?

      4 ಹೌದು, “ಸೈತಾನನ ಸಿಂಹಾಸನವು” ಅಲ್ಲಿ ಪೆರ್ಗಮಮ್‌ನಲ್ಲಿಯೇ ಇದೆ. “ಮತ್ತು ಹೀಗಾದರೂ,” ಯೇಸುವು ಮುಂದರಿಸುವುದು, “ನೀನು ನನ್ನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಇದ್ದೀ, ಮತ್ತು ಎಲ್ಲಿ ಸೈತಾನನು ವಾಸಿಸುತ್ತಿದ್ದಾನೋ ಆ ನಿನ್ನ ಪಕ್ಕದಲ್ಲಿ ಕೊಲ್ಲಲ್ಪಟ್ಟ ನನ್ನ ಸಾಕ್ಷಿಯೂ ನಂಬಿಗಸ್ತನೂ ಆದ ಅಂತಿಪನ ದಿನಗಳಲ್ಲಿಯೂ ನೀನು ನಿನ್ನ ನಂಬಿಕೆಯನ್ನು ಅಲ್ಲಗಳೆಯಲಿಲ್ಲ.” (ಪ್ರಕಟನೆ 2:13ಬಿ, NW) ಎಂತಹ ಒಂದು ಆತ್ಮ-ಕಲುಕುವ ಪ್ರಶಂಸೆ! ನಿಸ್ಸಂದೇಹವಾಗಿ, ಪೈಶಾಚಿಕ ಆಚರಣೆಗಳೊಂದಿಗೆ ಮತ್ತು ರೋಮನ್‌ ಸಮ್ರಾಟನ ಆರಾಧನೆಯೊಂದಿಗೆ ಹೋಗಲು ನಿರಾಕರಿಸಿದ್ದರಿಂದ ಅಂತಿಪನ ಧರ್ಮಬಲಿಯಾಯಿತು. ಈ ಪ್ರವಾದನೆಯನ್ನು ಯೋಹಾನನು ಪಡೆದ ಸ್ವಲ್ಪವೇ ಸಮಯದ ನಂತರ, ರೋಮನ್‌ ಚಕ್ರವರ್ತಿ ಟ್ರೇಜನ್‌ನ ಆಪ್ತ ಪ್ರತಿನಿಧಿಯಾದ ಪ್ಲಿನೀ ದ ಯಂಗರ್‌, ಕ್ರೈಸ್ತರಾಗಿ ಆಪಾದಿತರಾದ ವ್ಯಕ್ತಿಗಳೊಂದಿಗೆ ವ್ಯವಹರಿಸುವ ತನ್ನ ಕಾರ್ಯವಿಧಾನವನ್ನು ವಿವರಿಸುತ್ತಾ, ಟ್ರೇಜನ್‌ನಿಗೆ ಬರೆದನು—ಈ ಕಾರ್ಯವಿಧಾನಕ್ಕೆ ಚಕ್ರವರ್ತಿಯು ಒಪ್ಪಿಗೆಯನ್ನಿತ್ತನು. ತಾವು ಕ್ರೈಸ್ತರಾಗಿಲ್ಲವೆಂದು ನಿರಾಕರಿಸಿದವರು, ಮತ್ತು ಪ್ಲಿನೀ ಹೇಳಿದಂತೆ, “ದೇವರುಗಳಿಗೆ ಪ್ರಾರ್ಥನೆಗಳನ್ನು ನನ್ನ ನಂತರ ಅವರು ಪುನರುಚ್ಚರಿಸಿದರು, ನಿನ್ನ [ಟ್ರೇಜನ್‌ನ] ಪ್ರತಿಮೆಗೆ ಧೂಪ ಮತ್ತು ದ್ರಾಕ್ಷಾರಸವನ್ನು ಅರ್ಪಿಸಿದರು . . . ಮತ್ತು, ಇದರೊಟ್ಟಿಗೆ, ಕ್ರಿಸ್ತನನ್ನು ಶಪಿಸಿದ” ವರನ್ನು ಬಿಡುಗಡೆಗೊಳಿಸಲಾಯಿತು, ಕ್ರೈಸ್ತರೆಂದು ಕಂಡುಹಿಡಿಯಲ್ಪಟ್ಟ ಪ್ರತಿಯೊಬ್ಬರು ಹತಿಸಲ್ಪಟ್ಟರು. ಅಂತಹ ಅಪಾಯವನ್ನು ಎದುರಿಸುತ್ತಿದ್ದರೂ ಕೂಡ, ಪೆರ್ಗಮಮ್‌ನಲ್ಲಿದ್ದ ಕ್ರೈಸ್ತರು ತಮ್ಮ ನಂಬಿಕೆಯನ್ನು ನಿರಾಕರಿಸಲಿಲ್ಲ. ಅವರು ‘ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಂಡರು’, ಅಂದರೆ ಯೆಹೋವನ ನಾಮ ಸಮರ್ಥಕನು ಮತ್ತು ನೇಮಿತ ನ್ಯಾಯಾಧಿಪತಿಯೋಪಾದಿ ಅವನ ಉನ್ನತ ಪದವಿಗೆ ಗೌರವ ಕೊಡುವುದನ್ನು ಅವರು ಮುಂದುವರಿಸಿದರು. ರಾಜ್ಯದ ಸಾಕ್ಷಿಗಳೋಪಾದಿ ಅವರು ನಿಷ್ಠರಾಗಿ ಯೇಸುವಿನ ಹೆಜ್ಜೇಜಾಡಿನಲ್ಲಿ ಹಿಂಬಾಲಿಸಿದರು.

      5. (ಎ) ಸಮ್ರಾಟನ ಆರಾಧನೆಯ ಯಾವ ಆಧುನಿಕ-ದಿನದ ಪಡಿರೂಪವು ಈ 20-ನೆಯ ಶತಮಾನದಲ್ಲಿ ಕ್ರೈಸ್ತರಿಗೆ ತೀವ್ರತಮ ಪರೀಕ್ಷೆಗಳಿಗೆ ಕಾರಣವಾಗಿದೆ? (ಬಿ) ದ ವಾಚ್‌ಟವರ್‌ ಕ್ರೈಸ್ತರಿಗೆ ಯಾವ ಸಹಾಯವನ್ನು ನೀಡಿದೆ?

      5 ಸೈತಾನನು ಈ ಸದ್ಯದ ದುಷ್ಟ ಲೋಕವನ್ನು ಆಳುತ್ತಾನೆ ಎಂದು ವಿವಿಧ ಸಂದರ್ಭಗಳಲ್ಲಿ ಯೇಸುವು ತಿಳಿಯಪಡಿಸಿದ್ದನು, ಆದರೆ ಯೇಸುವಿನ ಸಮಗ್ರತೆಯ ಕಾರಣ, ಸೈತಾನನಿಗೆ ಅವನ ಮೇಲೆ ಯಾವುದೇ ಹಿಡಿತವಿರಲಿಲ್ಲ. (ಮತ್ತಾಯ 4:8-11; ಯೋಹಾನ 14:30) ಈ ಇಪ್ಪತ್ತನೆಯ ಶತಮಾನದಲ್ಲಿ, ಬಲಾಢ್ಯ ರಾಷ್ಟ್ರಗಳು, ಗಮನಾರ್ಹವಾಗಿ “ಉತ್ತರದ ರಾಜನು” ಮತ್ತು “ದಕ್ಷಿಣದ ರಾಜನು” ಲೋಕ ಪ್ರಭುತ್ವಕ್ಕೋಸ್ಕರ ಹೋರಾಡಿದ್ದಾರೆ. (ದಾನಿಯೇಲ 11:40) ದೇಶಭಕ್ತಿಯ ಆವೇಶವನ್ನು ಉದ್ರೇಕಿಸಲಾಗಿದೆ, ಮತ್ತು ಸಮ್ರಾಟನ ಆರಾಧನೆಯ ಪದ್ಧತಿಗೆ ಆಧುನಿಕ ಪಡಿರೂಪವು ಭೂಮಿಯನ್ನೆಲ್ಲಾ ವ್ಯಾಪಿಸಿದ್ದ ರಾಷ್ಟ್ರೀಯತೆಯ ಅಲೆಯಲ್ಲಿರುತ್ತದೆ. ಯೇಸುವು ಧೈರ್ಯದಿಂದ ಮಾಡಿದಂತೆ, ಯೆಹೋವನ ನಾಮದಲ್ಲಿ ನಡೆಯಲು ಮತ್ತು ಲೋಕವನ್ನು ಜಯಿಸಲು ಬಯಸುವ ಕ್ರೈಸ್ತರೆಲ್ಲರಿಗೆ ಮಾರ್ಗದರ್ಶಕಗಳನ್ನು ಒದಗಿಸುತ್ತಾ, ದ ವಾಚ್‌ಟವರ್‌ನ ನವಂಬರ 1, 1939, ಮತ್ತು ಪುನಃ ನವಂಬರ 1, 1979 ಮತ್ತು ಸಪ್ಟಂಬರ 1, 1986ರ ಸಂಚಿಕೆಗಳಲ್ಲಿ ತಾಟಸ್ಥ್ಯದ ಮೇಲಿನ ಲೇಖನಗಳು ಈ ವಿವಾದದ ಮೇಲೆ ಬೈಬಲಿನ ಬೋಧನೆಯನ್ನು ಸ್ಪಷ್ಟವಾಗಿ ತಿಳಿಸಿದವು.—ಮೀಕ 4:1, 3, 5; ಯೋಹಾನ 16:33; 17:4, 6, 26; 18:36, 37; ಅ. ಕೃತ್ಯಗಳು 5:29.

      6. ಅಂತಿಪನಂತೆ, ಆಧುನಿಕ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ?

      6 ಅಂತಹ ಬುದ್ಧಿವಾದವು ತುರ್ತಾಗಿ ಬೇಕಾಗಿತ್ತು. ವಿವೇಚನೆಯಿಲ್ಲದ ದೇಶಭಕ್ತಿಯ ಆವೇಶದ ಎದುರಿನಲ್ಲಿ, ಅಭಿಷಿಕ್ತರೂ ಮತ್ತು ಅವರ ಸಂಗಾತಿಗಳೂ ಆಗಿರುವ ಯೆಹೋವನ ಸಾಕ್ಷಿಗಳು ನಂಬಿಕೆಯಲ್ಲಿ ದೃಢವಾಗಿ ನಿಲ್ಲಬೇಕಿತ್ತು. ಅಮೆರಿಕದಲ್ಲಿ ನೂರಾರು ಮಕ್ಕಳು ಮತ್ತು ಶಿಕ್ಷಕರು ಶಾಲೆಗಳಿಂದ ವಜಾಗೊಳಿಸಲ್ಪಟ್ಟರು, ಯಾಕಂದರೆ ಅವರು ರಾಷ್ಟ್ರ ಧ್ವಜವನ್ನು ವಂದಿಸಲಿಲ್ಲ, ಜರ್ಮನಿಯಲ್ಲಿ ಸ್ವಸ್ತಿಕವನ್ನು ವಂದಿಸಲು ನಿರಾಕರಿಸಿದ್ದರಿಂದ ಸಾಕ್ಷಿಗಳು ಕ್ರೂರ ರೀತಿಯಲ್ಲಿ ಹಿಂಸಿಸಲ್ಪಟ್ಟರು. ಈಗಾಗಲೇ ಗಮನಿಸಿರುವಂತೆ, ಹಿಟ್ಲರನ ನಾಜಿಗಳು ಯೆಹೋವನ ಸಾವಿರಾರು ನಿಷ್ಠಾವಂತ ಸೇವಕರುಗಳನ್ನು ಕೊಂದಿದ್ದರು, ಯಾಕಂದರೆ ಅಂತಹ ರಾಷ್ಟ್ರೀಯತೆಯ ವಿಗ್ರಹಾರಾಧನೆಯಲ್ಲಿ ಪಾಲಿಗರಾಗಲು ಅವರು ನಿರಾಕರಿಸಿದರು. 1930ರ ದಶಕದಲ್ಲಿ, ಶಿಂಟೋ ಸಮ್ರಾಟನ ಆರಾಧನೆಯು ಜಪಾನಿನಲ್ಲಿ ಉತ್ಕರ್ಷದಲ್ಲಿದ್ದಾಗ, ಜಪಾನೀಯರ ವಶದಲ್ಲಿದ್ದ ಟೈವಾನಿನಲ್ಲಿ ಇಬ್ಬರು ಪಯನೀಯರ್‌ ಶುಶ್ರೂಷಕರು ಬಹಳಷ್ಟು ರಾಜ್ಯದ ಬೀಜಗಳನ್ನು ಬಿತ್ತಿದರು. ಮಿಲಿಟರಿ ಅಧಿಕಾರಿಗಳು ಅವರನ್ನು ಸೆರೆಮನೆಗೆ ದಬ್ಬಿದರು, ಅವರಲ್ಲೋಬ್ಬನು ಕ್ರೂರ ಉಪಚಾರದಿಂದ ಸತ್ತನು. ಇನ್ನೊಬ್ಬನನ್ನು ಅನಂತರ, ಬೆನ್ನ ಹಿಂದಿನಿಂದ ಅವನಿಗೆ ಗುಂಡಿಡಲಿಕ್ಕೋಸ್ಕರವೇ ಬಿಡುಗಡೆಗೊಳಿಸಲಾಯಿತು—ಆಧುನಿಕ ದಿನಗಳ ಒಬ್ಬ ಅಂತಿಪನು. ಈ ದಿನದ ತನಕವೂ, ರಾಷ್ಟ್ರೀಯ ಚಿಹ್ನೆಗಳ ಆರಾಧನೆಯನ್ನು ಮತ್ತು ರಾಷ್ಟ್ರಕ್ಕೆ ಸಂಪೂರ್ಣ ಭಕ್ತಿಯನ್ನು ಕೇಳುವ ದೇಶಗಳು ಇವೆ. ಕ್ರೈಸ್ತ ತಟಸ್ಥರೋಪಾದಿ ಅವರ ಧೈರ್ಯದ ಸ್ಥಾನದ ಕಾರಣದಿಂದ ಅನೇಕ ಯುವ ಸಾಕ್ಷಿಗಳು ಸೆರೆಮನೆಗೆ ಹಾಕಲ್ಪಟ್ಟಿರುತ್ತಾರೆ, ಮತ್ತು ಹತಿಸಲ್ಪಟ್ಟವರೇನೂ ಕೊಂಚ ಮಂದಿಯಲ್ಲ. ಅಂಥ ವಿವಾದಾಂಶಗಳನ್ನು ಎದುರಿಸುವ ಯುವಕರೊಬ್ಬರು ನೀವಾಗಿರುವುದಾದರೆ, ನಿತ್ಯಜೀವದ ಗುರಿಯಿಂದ, “ನಂಬುವವರಾಗಿ ಪ್ರಾಣರಕ್ಷಣೆ” ಹೊಂದಲು ದೇವರ ವಾಕ್ಯವನ್ನು ಪ್ರತಿ ದಿನ ಅಭ್ಯಾಸಿಸಿರಿ.—ಇಬ್ರಿಯ 10:39–11:1; ಮತ್ತಾಯ 10:28-31.

      7. ರಾಷ್ಟ್ರೀಯ ಆರಾಧನೆಯ ವಿವಾದವಾಂಶವನ್ನು ಭಾರತದ ಎಳೆಯರು ಹೇಗೆ ಎದುರಿಸಿದ್ದಾರೆ ಮತ್ತು ಯಾವ ಫಲಿತಾಂಶದೊಂದಿಗೆ?

      7 ಶಾಲೆಗಳಲ್ಲಿರುವ ಎಳೆಯರು ಅಂತಹ ವಿವಾದಾಂಶಗಳನ್ನು ಎದುರಿಸಿರುತ್ತಾರೆ. 1985 ರಲ್ಲಿ, ಭಾರತದ ಕೇರಳ ರಾಜ್ಯದಲ್ಲಿ ಯೆಹೋವನ ಸಾಕ್ಷಿಗಳ ಮೂವರು ಮಕ್ಕಳು ಅವರ ಬೈಬಲಾಧರಿತ ನಂಬಿಕೆಯಲ್ಲಿ ಒಪ್ಪಂದ ಮಾಡಲು ನಿರಾಕರಿಸುತ್ತಾ, ರಾಷ್ಟ್ರ ಗೀತೆಯನ್ನು ಹಾಡಲು ನಿರಾಕರಿಸಿದರು. ಇತರರು ಹಾಡುವಾಗ ಅವರು ಗೌರವಪೂರ್ವಕವಾಗಿ ನಿಂತರು, ಆದರೂ ಕೂಡ ಅವರನ್ನು ಶಾಲೆಯಿಂದ ಹೊರಗೆ ದಬ್ಬಲಾಯಿತು. ಈ ವಿಷಯದಲ್ಲಿ ಅವರ ತಂದೆಯು ಭಾರತದ ವರಿಷ್ಠ ನ್ಯಾಯಾಲಯದ ತನಕ (ಸುಪ್ರೀಮ್‌ ಕೋರ್ಟ್‌ ಆಫ್‌ ಇಂಡಿಯಾ) ಮೇಲು-ಮನವಿ ಸಲ್ಲಿಸಿದರು, ಅಲ್ಲಿ ಇಬ್ಬರು ನ್ಯಾಯಾಧೀಶರು ಮಕ್ಕಳ ಪರವಾಗಿ ತೀರ್ಮಾನವನ್ನೀಯುತ್ತಾ, ಧೈರ್ಯದಿಂದ ಹೇಳಿದ್ದು: “ನಮ್ಮ ಸಂಪ್ರದಾಯವು ಸಹಿಷ್ಣುತೆಯನ್ನು ಕಲಿಸುತ್ತದೆ; ನಮ್ಮ ತತ್ವಶಾಸ್ತ್ರವು ಸಹಿಷ್ಣುತೆಯನ್ನು ಕಲಿಸುತ್ತದೆ; ನಮ್ಮ ಸಂವಿಧಾನವು ಸಹಿಷ್ಣುತೆಯನ್ನು ಆಚರಿಸುತ್ತದೆ; ನಾವು ಅದನ್ನು ದುರ್ಬಲಗೊಳಿಸದೆ ಇರೋಣ.” ಭೂಮಿಯ ಜನಸಂಖ್ಯೆಯ ಸುಮಾರು ಐದನೆಯ ಒಂದು ಪಾಲಷ್ಟು ಇರುವ ಈ ಇಡೀ ರಾಷ್ಟ್ರಕ್ಕೆ, ಈ ಮೊಕದ್ದಮೆಯ ಫಲಿತಾಂಶವಾಗಿ ವಾರ್ತಾಪತ್ರಗಳ ಪ್ರಚಾರ ಮತ್ತು ಶ್ಲಾಘಿಸುವ ಸಂಪಾದಕೀಯಗಳು ತಿಳಿಯಪಡಿಸಿದ್ದೇನಂದರೆ ಸತ್ಯ ದೇವರಾದ ಯೆಹೋವನನ್ನು ಆರಾಧಿಸುವ ಕ್ರೈಸ್ತರು ಆ ದೇಶದಲ್ಲೂ ಇದ್ದಾರೆ ಮತ್ತು ಬೈಬಲ್‌ ತತ್ವಗಳಿಗನುಸಾರ ಅವರು ನಿಷ್ಠರಾಗಿ ನಿಲ್ಲುತ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ