ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನಗಳನ್ನು ಆರಂಭಿಸುವ ವಿಧ
    2006 ರಾಜ್ಯ ಸೇವೆ | ಜನವರಿ
    • ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನಗಳನ್ನು ಆರಂಭಿಸುವ ವಿಧ

      ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲು ಸಾಧ್ಯವಾಗುವಲ್ಲಿ ನಮ್ಮಲ್ಲಿ ಹೆಚ್ಚಿನವರು ಆ ಅಧ್ಯಯನವನ್ನು ನಡೆಸಲು ಆನಂದಿಸುತ್ತೇವೆ. ಅದನ್ನು ಮಾಡಲು, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವು ನಮಗೆ ಸಹಾಯಮಾಡಸಾಧ್ಯವಿದೆ. ಪುಟ 3-7ರಲ್ಲಿರುವ ಮುನ್ನುಡಿಯು, ಈ ಪ್ರಕಾಶನವನ್ನು ಉಪಯೋಗಿಸಿ ಮನೆಯವರನ್ನು ಬೈಬಲ್‌ ಚರ್ಚೆಯಲ್ಲಿ ಒಳಗೂಡಿಸುವಂತೆ ವಿನ್ಯಾಸಿಸಲ್ಪಟ್ಟಿದೆ. ಶುಶ್ರೂಷೆಯಲ್ಲಿ ಕಡಿಮೆ ಅನುಭವವಿರುವವರು ಸಹ, ಈ ಪುಸ್ತಕವನ್ನು ಉಪಯೋಗಿಸಿ ಸುಲಭವಾಗಿಯೇ ಅಧ್ಯಯನಗಳನ್ನು ಆರಂಭಿಸಸಾಧ್ಯವಿದೆ.

      ◼ ಪುಟ 3ನ್ನು ಉಪಯೋಗಿಸುತ್ತಾ ನೀವು ಈ ವಿಧಾನವನ್ನು ಪ್ರಯತ್ನಿಸಬಹುದು:

      ನಿಮ್ಮ ಟೆರಿಟೊರಿಯಲ್ಲಿರುವವರಿಗೆ ತಿಳಿದಿರುವಂಥ ಒಂದು ಪ್ರಚಲಿತ ವಾರ್ತಾ ವಿಚಾರದ ಅಥವಾ ಒಂದು ಸಮಸ್ಯೆಯ ಕುರಿತು ತಿಳಿಸಿದ ಅನಂತರ, ಮನೆಯವರ ಗಮನವನ್ನು 3ನೇ ಪುಟದಲ್ಲಿ ದಪ್ಪಕ್ಷರಗಳಲ್ಲಿ ಮುದ್ರಿಸಲ್ಪಟ್ಟಿರುವ ಪ್ರಶ್ನೆಗಳ ಕಡೆಗೆ ನಿರ್ದೇಶಿಸಿರಿ ಮತ್ತು ಅದರ ಕುರಿತು ತಮ್ಮ ಹೇಳಿಕೆಗಳನ್ನು ನೀಡುವಂತೆ ಆಮಂತ್ರಿಸಿರಿ. ಅನಂತರ ಪುಟ 4-5ನ್ನು ತೆರೆಯಿರಿ.

      ◼ ಅಥವಾ ನೀವು ಪುಟ 4-5ನ್ನು ತೋರಿಸುವ ಮೂಲಕ ಆರಂಭಿಸಲು ಬಯಸಬಹುದು:

      ನೀವು ಹೀಗೆ ಹೇಳಬಹುದು, “ಈ ಚಿತ್ರಗಳಲ್ಲಿರುವಂಥ ಬದಲಾವಣೆಗಳು ನಿಜವಾಗಿಯೂ ಸಂಭವಿಸುವಲ್ಲಿ ಅದು ಉತ್ತಮವಾಗಿರುವುದಲ್ಲವೇ?” ಅಥವಾ ನೀವು ಹೀಗೆ ಕೇಳಬಹುದು, “ಈ ವಾಗ್ದಾನಗಳಲ್ಲಿ ಯಾವುದು ನೆರವೇರಿಸಲ್ಪಡುವುದನ್ನು ನೋಡಲು ನೀವು ಇಷ್ಟಪಡುತ್ತೀರಿ?” ಅವರ ಪ್ರತಿಕ್ರಿಯೆಯನ್ನು ಗಮನಕೊಟ್ಟು ಆಲಿಸಿರಿ.

      ಈ ವಚನಗಳಲ್ಲಿ ಒಂದರ ಕಡೆಗೆ ಮನೆಯವರು ವಿಶೇಷ ಆಸಕ್ತಿಯನ್ನು ತೋರಿಸುವಲ್ಲಿ, ಆ ವಚನದ ಕುರಿತು ಚರ್ಚಿಸುವ ಪ್ಯಾರಗ್ರಾಫನ್ನು ಪುಸ್ತಕದಿಂದ ಪರಿಗಣಿಸುವ ಮೂಲಕ ಆ ವಿಷಯದಲ್ಲಿ ಬೈಬಲ್‌ ಏನನ್ನು ಬೋಧಿಸುತ್ತದೆ ಎಂಬುದನ್ನು ತೋರಿಸಿ. (ಪುರವಣಿಯ ಈ ಪುಟದಲ್ಲಿರುವ ಚೌಕವನ್ನು ನೋಡಿರಿ.) ನೀವು ಈ ವಿಷಯವನ್ನು ಬೈಬಲ್‌ ಅಧ್ಯಯನದಲ್ಲಿ ಪರಿಗಣಿಸುವಂತೆಯೇ ಇಲ್ಲಿಯೂ ಪರಿಗಣಿಸಿರಿ. ಇದನ್ನು ಮೊದಲ ಭೇಟಿಯಲ್ಲಿ ಬಾಗಿಲ ಬಳಿಯಲ್ಲೇ ಐದರಿಂದ ಹತ್ತು ನಿಮಿಷಗಳಲ್ಲಿ ಮಾಡಸಾಧ್ಯವಿದೆ.

      ◼ ಇನ್ನೊಂದು ವಿಧಾನವು, ಪುಟ 6ನ್ನು ಉಪಯೋಗಿಸಿ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಮಾಡುವುದು:

      ಪುಟದ ಕೊನೆಯಲ್ಲಿರುವ ಪ್ರಶ್ನೆಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ, ಮತ್ತು ಹೀಗೆ ಕೇಳಿ, “ಈ ಪ್ರಶ್ನೆಗಳಲ್ಲಿ ಯಾವುದಾದರೊಂದರ ಕುರಿತು ಎಂದಾದರೂ ನೀವು ಆಲೋಚಿಸಿದ್ದುಂಟೊ?” ಈ ಪ್ರಶ್ನೆಗಳಲ್ಲಿ ಒಂದರ ಕುರಿತು ಅವನು ಆಸಕ್ತಿಯನ್ನು ವ್ಯಕ್ತಪಡಿಸುವಲ್ಲಿ, ಪ್ರಶ್ನೆಗೆ ಉತ್ತರವನ್ನು ಕೊಡುವಂಥ ಪ್ಯಾರಗ್ರಾಫ್‌ಗಳ ಕಡೆಗೆ ಪುಸ್ತಕವನ್ನು ತಿರುಗಿಸಿರಿ. (ಪುರವಣಿಯ ಈ ಪುಟದಲ್ಲಿರುವ ಚೌಕವನ್ನು ನೋಡಿರಿ.) ನೀವು ಒಟ್ಟಾಗಿ ಮಾಹಿತಿಯನ್ನು ಪರಿಗಣಿಸುವಾಗ ವಾಸ್ತವದಲ್ಲಿ ಒಂದು ಬೈಬಲ್‌ ಅಧ್ಯಯವನ್ನು ಮಾಡುತ್ತಿದ್ದೀರಿ.

      ◼ ಪುಟ 7ರಲ್ಲಿರುವ ವಿಷಯವನ್ನು ಬೈಬಲ್‌ ಅಧ್ಯಯನದ ಪ್ರತ್ಯಕ್ಷಾಭಿನಯವನ್ನು ನಡೆಸಲಿಕ್ಕಾಗಿ ಉಪಯೋಗಿಸಬಹುದು:

      ಈ ಪುಟದಲ್ಲಿರುವ ಮೊದಲ ಮೂರು ವಾಕ್ಯಗಳನ್ನು ಓದಿರಿ, ಅನಂತರ ಅಧ್ಯಾಯ 3ನ್ನು ತೆರೆದು ಪ್ಯಾರಗ್ರಾಫ್‌ 1-3ನ್ನು ಉಪಯೋಗಿಸುತ್ತಾ ಒಂದು ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಪ್ಯಾರಗ್ರಾಫ್‌ 3ರಲ್ಲಿರುವ ಪ್ರಶ್ನೆಗಳಿಗಾಗಿರುವ ಉತ್ತರಗಳನ್ನು ಚರ್ಚಿಸಲಿಕ್ಕಾಗಿ ಹಿಂದಿರುಗಿ ಹೋಗುವ ಏರ್ಪಾಡನ್ನು ಮಾಡಿರಿ.

      ◼ ಹಿಂದಿರುಗಿ ಹೋಗಲು ಏರ್ಪಾಡನ್ನು ಮಾಡುವ ವಿಧ:

      ಮೊದಲ ಅಧ್ಯಯನವನ್ನು ಮುಕ್ತಾಯಗೊಳಿಸುವಾಗ, ಚರ್ಚೆಯನ್ನು ಮುಂದುವರಿಸಲು ಏರ್ಪಾಡನ್ನು ಮಾಡಿರಿ. ನೀವು ಕೇವಲ ಹೀಗೆ ಹೇಳಬಹುದು: “ಕೆಲವೇ ನಿಮಿಷಗಳಲ್ಲಿ, ಒಂದು ಪ್ರಮುಖ ವಿಷಯದ ಕುರಿತು ಬೈಬಲ್‌ ಏನನ್ನು ಬೋಧಿಸುತ್ತದೆ ಎಂಬುದನ್ನು ನಾವು ಕಲಿತುಕೊಂಡೆವು. ಮುಂದಿನ ಬಾರಿ, ನಾವು [ಪರಿಗಣಿಸಲ್ಪಡುವ ಪ್ರಶ್ನೆಯನ್ನು ಕೇಳಿರಿ] ಚರ್ಚಿಸೋಣ. ಮುಂದಿನ ವಾರ ನಾನು ಇದೇ ಸಮಯಕ್ಕೆ ಬರಬಹುದೇ?”

      ನಾವು ಯೆಹೋವನ ನೇಮಿತ ಸಮಯಕ್ಕೆ ಹೆಚ್ಚು ಸಮೀಪವಾಗುತ್ತಿರುವಾಗ, ಮಾಡಬೇಕಾಗಿರುವ ಕೆಲಸವನ್ನು ಮಾಡಲು ಆತನು ನಮ್ಮನ್ನು ಸಿದ್ಧಪಡಿಸುವನು. (ಮತ್ತಾ. 28:​19, 20; 2 ತಿಮೊ. 3:17) ಆದುದರಿಂದ, ಬೈಬಲ್‌ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿರುವ ಈ ಅದ್ಭುತಕರವಾದ ಹೊಸ ಸಹಾಯಕವನ್ನು ನಾವು ಸದುಪಯೋಗಿಸೋಣ.

      [ಪುಟ 3ರಲ್ಲಿರುವಚೌಕ]

      ಪುಟ 4-5ರಲ್ಲಿರುವ ಶಾಸ್ತ್ರವಚನಗಳ ಚರ್ಚೆ

      ◻ ಪ್ರಕಟನೆ 21:4 (ಪು. 27-8, ಪ್ಯಾರ. 1-3)

      ◻ ಯೆಶಾಯ 33:24; 35:​5, 6 (ಪು. 36, ಪ್ಯಾರ. 22)

      ◻ ಯೋಹಾನ 5:​28, 29 (ಪು. 72-3, ಪ್ಯಾರ. 17-19)

      ◻ ಕೀರ್ತನೆ 72:16 (ಪು. 34, ಪ್ಯಾರ. 19)

      ಪುಟ 6ರಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳು

      ◻ ನಾವೇಕೆ ಕಷ್ಟಸಂಕಟವನ್ನು ಅನುಭವಿಸುತ್ತೇವೆ? (ಪು. 108-9, ಪ್ಯಾರ. 6-8)

      ◻ ಜೀವನದ ಚಿಂತೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು? (ಪು. 184-5, ಪ್ಯಾರ. 1-3)

      ◻ ನಾವು ನಮ್ಮ ಕುಟುಂಬ ಜೀವನವನ್ನು ಹೇಗೆ ಹೆಚ್ಚು ಸಂತೋಷಕರವನ್ನಾಗಿ ಮಾಡಬಲ್ಲೆವು? (ಪು. 143, ಪ್ಯಾರ. 20)

      ◻ ನಾವು ಸತ್ತಾಗ ನಮಗೇನಾಗುತ್ತದೆ? (ಪು. 58-9, ಪ್ಯಾರ. 5-6)

      ◻ ಮೃತಪಟ್ಟ ನಮ್ಮ ಪ್ರಿಯರನ್ನು ನಾವೆಂದಾದರೂ ನೋಡುವೆವೊ? (ಪು. 72-3, ಪ್ಯಾರ. 17-19)

      ◻ ಭವಿಷ್ಯತ್ತಿಗಾಗಿ ದೇವರು ಮಾಡಿರುವ ವಾಗ್ದಾನಗಳನ್ನು ಆತನು ನೆರವೇರಿಸುವನೆಂದು ನಮಗೆ ಹೇಗೆ ಖಾತ್ರಿಯಿರಬಲ್ಲದು? (ಪು. 25, ಪ್ಯಾರ. 17)

  • ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀಡುವ ವಿಧ
    2006 ರಾಜ್ಯ ಸೇವೆ | ಜನವರಿ
    • ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀಡುವ ವಿಧ

      ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀಡಲಿಕ್ಕಾಗಿರುವ ಅನೇಕ ಸಲಹೆಗಳು ಈ ಪುರವಣಿಯಲ್ಲಿ ಕೊಡಲ್ಪಟ್ಟಿವೆ. ಹೆಚ್ಚು ಪರಿಣಾಮಕಾರಿಯಾಗಿರಲಿಕ್ಕಾಗಿ, ಇವುಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸಿರಿ, ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ತಕ್ಕ ಹಾಗೆ ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಿರಿ ಮತ್ತು ಬೈಬಲಾಧಾರಿತ ಚರ್ಚೆಗಾಗಿ ನೀವು ಪುಸ್ತಕದಲ್ಲಿರುವ ಯಾವ ನಿರ್ದಿಷ್ಟ ವಿಷಯಗಳನ್ನು ಉಪಯೋಗಿಸಲಿದ್ದೀರೊ ಅವನ್ನು ಚೆನ್ನಾಗಿ ಪರಿಚಯಿಸಿಕೊಳ್ಳಿರಿ. ನಿಮ್ಮ ಟೆರಿಟೊರಿಗೆ ಅನ್ವಯವಾಗುವ ಇತರ ಪ್ರಾಯೋಗಿಕ ನಿರೂಪಣೆಗಳನ್ನೂ ಉಪಯೋಗಿಸಬಹುದು.​—⁠2005, ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ನ್ನು ನೋಡಿ.

      ಬೈಬಲ್‌

      ◼ “ಜನರು ಬೈಬಲನ್ನು ಅನೇಕವೇಳೆ ದೇವರ ವಾಕ್ಯ ಎಂಬುದಾಗಿ ಸಂಬೋಧಿಸಿ ಮಾತಾಡುತ್ತಾರೆ. ಆದರೆ, ಮನುಷ್ಯರಿಂದ ಬರೆಯಲ್ಪಟ್ಟಿರುವ ಒಂದು ಪುಸ್ತಕವು, ದೇವರ ವಾಕ್ಯವೆಂದು ಕರೆಯಲ್ಪಡಲು ಹೇಗೆ ತಕ್ಕದ್ದಾಗಿದೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 2 ಪೇತ್ರ 1:21ನ್ನು ಮತ್ತು ಪುಟ 19-20ರಲ್ಲಿರುವ ಪ್ಯಾರಗ್ರಾಫ್‌ 5ನ್ನು ಓದಿರಿ.] ಈ ಪ್ರಕಾಶನವು ಈ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರಗಳನ್ನು ಕೊಡುತ್ತದೆ.” ಪುಟ 6ರಲ್ಲಿರುವ ಪ್ರಶ್ನೆಗಳನ್ನು ತೋರಿಸಿರಿ.

      ◼ “ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಜನರಿಗೆ ಹೆಚ್ಚಿನ ಮಾಹಿತಿಯನ್ನು ಸುಲಭವಾಗಿಯೇ ಪಡೆದುಕೊಳ್ಳುವ ಸೌಕರ್ಯವಿದೆ. ಆದರೆ, ಸಂತೋಷ ಹಾಗೂ ಯಶಸ್ವಿಕರವಾದ ಜೀವನವನ್ನು ನಡೆಸಲು ವಿಶ್ವಸನೀಯ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 2 ತಿಮೊಥೆಯ 3:​16, 17 ಮತ್ತು ಪುಟ 23ರಲ್ಲಿರುವ ಪ್ಯಾರಗ್ರಾಫ್‌ 12ನ್ನು ಓದಿರಿ.] ಈ ಪ್ರಕಾಶನವು, ದೇವರನ್ನು ಮೆಚ್ಚಿಸುವಂಥ ಮತ್ತು ನಮಗೆ ಪ್ರಯೋಜನ ತರುವಂಥ ರೀತಿಯಲ್ಲಿ ನಾವು ಹೇಗೆ ಜೀವಿಸಬಹುದು ಎಂಬುದನ್ನು ವಿವರಿಸುತ್ತದೆ.” ಪುಟ 122-3ರಲ್ಲಿರುವ ಚಾರ್ಟ್‌ ಮತ್ತು ಚಿತ್ರವನ್ನು ತೋರಿಸಿರಿ.

      ಮರಣ/ಪುನರುತ್ಥಾನ

      ◼ “ಮೃತಪಟ್ಟಾಗ ನಿಜವಾಗಿಯೂ ಏನು ಸಂಭವಿಸುತ್ತದೆ ಎಂದು ಅನೇಕರು ಸೋಜಿಗಪಡುತ್ತಾರೆ. ನಾವಿದನ್ನು ತಿಳಿಯಸಾಧ್ಯವಿದೆ ಎಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಸಂಗಿ 9:5 ಮತ್ತು ಪುಟ 58-9ರಲ್ಲಿರುವ ಪ್ಯಾರಗ್ರಾಫ್‌ 5-6ನ್ನು ಓದಿರಿ.] ಪುನರುತ್ಥಾನದ ಕುರಿತಾದ ಬೈಬಲಿನ ವಾಗ್ದಾನವು ಸತ್ತವರಿಗೆ ಯಾವ ಅರ್ಥದಲ್ಲಿದೆ ಎಂಬುದನ್ನೂ ಈ ಪುಸ್ತಕವು ವಿವರಿಸುತ್ತದೆ.” ಪುಟ 75ರಲ್ಲಿರುವ ಚಿತ್ರವನ್ನು ತೋರಿಸಿರಿ.

      ◼ “ನಾವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಆ ವ್ಯಕ್ತಿಯನ್ನು ಪುನಃ ನೋಡಬೇಕೆಂದೆನಿಸುವುದು ಸಹಜ. ಇದನ್ನು ನೀವು ಒಪ್ಪುವುದಿಲ್ಲವೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಪುನರುತ್ಥಾನದ ವಾಗ್ದಾನದಿಂದ ಅನೇಕರು ಸಾಂತ್ವನವನ್ನು ಕಂಡುಕೊಂಡಿದ್ದಾರೆ. [ಯೋಹಾನ 5:​28, 29 ಮತ್ತು ಪುಟ 72ರಲ್ಲಿರುವ ಪ್ಯಾರಾಗ್ರಾಫ್‌ 16-17ನ್ನು ಓದಿರಿ.] ಈ ಅಧ್ಯಾಯವು ಈ ಪ್ರಶ್ನೆಗಳಿಗೆ ಸಹ ಉತ್ತರವನ್ನು ಕೊಡುತ್ತದೆ.” ಪುಟ 66ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.

      ನಿತ್ಯಜೀವ

      ◼ “ಹೆಚ್ಚಿನ ಜನರು ಒಳ್ಳೆಯ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತಾರೆ. ಆದರೆ, ಸದಾಕಾಲ ಜೀವಿಸಲು ಸಾಧ್ಯವಿರುತ್ತಿದ್ದಲ್ಲಿ, ನೀವು ಹಾಗೆ ಜೀವಿಸಲು ಇಷ್ಟಪಡುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಕಟನೆ 21:​3, 4 ಮತ್ತು ಪುಟ 54ರಲ್ಲಿರುವ ಪ್ಯಾರಗ್ರಾಫ್‌ 17ನ್ನು ಓದಿರಿ.] ನಾವು ಹೇಗೆ ನಿತ್ಯಜೀವವನ್ನು ಪಡೆಯಬಲ್ಲೆವು ಮತ್ತು ಆ ವಾಗ್ದಾನವು ನಿಜವಾಗುವಾಗ ಜೀವನ ಹೇಗಿರುವುದು ಎಂಬುದನ್ನು ಈ ಪುಸ್ತಕವು ಚರ್ಚಿಸುತ್ತದೆ.”

      ಕುಟುಂಬ

      ◼ “ಸಂತೋಷಕರ ಕುಟುಂಬ ಜೀವನವನ್ನು ಹೊಂದಿರುವುದು ನಮಗೆಲ್ಲರಿಗೂ ಆಸಕ್ತಿಕರವಾದ ವಿಷಯವಾಗಿದೆ. ನೀವು ಇದನ್ನು ಒಪ್ಪುವುದಿಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬದ ಸಂತೋಷಕ್ಕೆ ನೆರವಾಗಲು ಅದರ ಪ್ರತಿಯೊಬ್ಬ ಸದಸ್ಯನು ಮಾಡಸಾಧ್ಯವಿರುವ ವಿಷಯದ ಕುರಿತು ಬೈಬಲ್‌ ಮಾತಾಡುತ್ತದೆ​—⁠ಅದು ಪ್ರೀತಿಯನ್ನು ತೋರಿಸುವುದರಲ್ಲಿ ದೇವರನ್ನು ಅನುಕರಿಸುವುದೇ ಆಗಿದೆ.” ಎಫೆಸ 5:​1, 2 ಮತ್ತು ಪುಟ 135ರಲ್ಲಿರುವ ಪ್ಯಾರಗ್ರಾಫ್‌ 4ನ್ನು ಓದಿರಿ.

      ವಸತಿ

      ◼ “ಹೆಚ್ಚಿನ ಸ್ಥಳಗಳಲ್ಲಿ, ಜೀವಿಸಲು ಸೂಕ್ತವಾದ ಮನೆಯೊಂದನ್ನು ಹೊಂದಿರುವುದು ತುಂಬ ಕಷ್ಟದ ಸಂಗತಿಯಾಗಿದೆ. ಒಂದು ದಿನ ಎಲ್ಲರಿಗೂ ಒಳ್ಳೇ ಮನೆಗಳಿರುವವು ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯೆಶಾಯ 65:​21, 22 ಮತ್ತು ಪುಟ 34ರಲ್ಲಿರುವ ಪ್ಯಾರಗ್ರಾಫ್‌ 20ನ್ನು ಓದಿರಿ.] ದೇವರಿಂದ ಕೊಡಲ್ಪಟ್ಟ ಈ ವಾಗ್ದಾನವು ಹೇಗೆ ನೆರವೇರಿಸಲ್ಪಡುವುದು ಎಂಬುದನ್ನು ಈ ಪ್ರಕಾಶನವು ವಿವರಿಸುತ್ತದೆ.”

      ಯೆಹೋವ ದೇವರು

      ◼ “ದೇವರಲ್ಲಿ ನಂಬಿಕೆಯಿಡುವ ಹೆಚ್ಚಿನ ಜನರು ಆತನಿಗೆ ಸಮೀಪವಾಗಿರಲು ಬಯಸುತ್ತಾರೆ. ಆತನಿಗೆ ಸಮೀಪವಾಗುವಂತೆ ಬೈಬಲ್‌ ನಮಗೆ ಕರೆಕೊಡುತ್ತದೆ ಎಂಬುದು ನಿಮಗೆ ತಿಳಿದಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯಾಕೋಬ 4:8ಎ ಮತ್ತು ಪುಟ 16ರಲ್ಲಿರುವ ಪ್ಯಾರಗ್ರಾಫ್‌ 20ನ್ನು ಓದಿರಿ.] ತಮ್ಮ ಸ್ವಂತ ಬೈಬಲ್‌ ಪ್ರತಿಯನ್ನು ಉಪಯೋಗಿಸಿ ದೇವರ ಕುರಿತು ಹೆಚ್ಚನ್ನು ತಿಳಿಯಲು ಜನರಿಗೆ ಸಹಾಯಮಾಡುವ ಉದ್ದೇಶದಿಂದ ಈ ಪ್ರಕಾಶನವು ತಯಾರಿಸಲ್ಪಟ್ಟಿದೆ.” ಪುಟ 8ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.

      ◼ “ದೇವರ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ ಅಥವಾ ಗೌರವಿಸಲ್ಪಡಲಿ ಎಂದು ಅನೇಕರು ಪ್ರಾರ್ಥಿಸುತ್ತಾರೆ. ಆ ಹೆಸರು ಏನಾಗಿದೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 83:18 ಮತ್ತು ಪುಟ 195ರಲ್ಲಿರುವ ಪ್ಯಾರಗ್ರಾಫ್‌ 2-3ನ್ನು ಓದಿರಿ.] ಬೈಬಲ್‌ ಯೆಹೋವ ದೇವರ ಕುರಿತು ಮತ್ತು ಮಾನವಕುಲಕ್ಕಾಗಿರುವ ಆತನ ಉದ್ದೇಶದ ಕುರಿತು ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ.”

      ಯೇಸು ಕ್ರಿಸ್ತನು

      ◼ “ಭೂಮಿಯಾದ್ಯಂತ ಇರುವ ಜನರು ಯೇಸು ಕ್ರಿಸ್ತನ ಬಗ್ಗೆ ಕೇಳಿಸಿಕೊಂಡಿದ್ದಾರೆ. ಕೆಲವರ ದೃಷ್ಟಿಯಲ್ಲಿ, ಅವನು ಕೇವಲ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದಾನಷ್ಟೆ. ಇನ್ನು ಕೆಲವರು ಅವನನ್ನು ಸರ್ವಶಕ್ತ ದೇವರೆಂದು ಪೂಜಿಸುತ್ತಾರೆ. ಯೇಸು ಕ್ರಿಸ್ತನ ಕುರಿತು ನಾವು ಏನನ್ನು ನಂಬುತ್ತೇವೊ ಅದು ಪ್ರಾಮುಖ್ಯವೆಂದು ನಿಮಗನಿಸುತ್ತದೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯೋಹಾನ 17:3 ಮತ್ತು ಪುಟ 37-8ರಲ್ಲಿರುವ ಪ್ಯಾರಗ್ರಾಫ್‌ 3ನ್ನು ಓದಿರಿ. ಅಧ್ಯಾಯದ ಶೀರ್ಷಿಕೆಯ ಕೆಳಗಿರುವ ಪೀಠಿಕಾರೂಪದ ಪ್ರಶ್ನೆಗಳ ಕಡೆಗೆ ಗಮನವನ್ನು ನಿರ್ದೇಶಿಸಿರಿ.

      ಕಡೇ ದಿವಸಗಳು

      ◼ ನಾವು ಲೋಕದ ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೆಂದು ಅನೇಕರು ನಂಬುತ್ತಾರೆ. ಭವಿಷ್ಯತ್ತಿನಲ್ಲಿ ಪರಿಸ್ಥಿತಿಗಳು ಉತ್ತಮಗೊಳ್ಳುವವು ಎಂದು ನಿರೀಕ್ಷಿಸಲು ಸಕಾರಣವಿದೆಯೇ?” [ಪ್ರತಿಕ್ರಿಯೆಗಾಗಿ ಅನುಮತಿಸಿರಿ. 2 ಪೇತ್ರ 3:13ನ್ನು ಓದಿರಿ.] ಕಡೇ ದಿವಸಗಳ ಅನಂತರ ಜೀವನ ಹೇಗಿರುವುದು ಎಂದು ತಿಳಿಸುವ ಈ ಹೇಳಿಕೆಯನ್ನು ಗಮನಿಸಿರಿ.” ಪುಟ 94ರಲ್ಲಿರುವ ಪ್ಯಾರಗ್ರಾಫ್‌ 15ನ್ನು ಓದಿರಿ.

      ಪ್ರಾರ್ಥನೆ

      ◼ “ದೇವರು ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆಂದು ನೀವು ಎಂದಾದರೂ ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 1 ಯೋಹಾನ 5:​14, 15 ಮತ್ತು ಪುಟ 170-2ರಲ್ಲಿರುವ ಪ್ಯಾರಗ್ರಾಫ್‌ 16-18ನ್ನು ಓದಿರಿ.] ಈ ಅಧ್ಯಾಯವು, ನಾವು ಏಕೆ ದೇವರಿಗೆ ಪ್ರಾರ್ಥಿಸಬೇಕು ಮತ್ತು ಆತನಿಂದ ನಮ್ಮ ಪ್ರಾರ್ಥನೆಗಳು ಆಲಿಸಲ್ಪಡಬೇಕಾದರೆ ನಾವು ಏನು ಮಾಡಬೇಕೆಂಬುದನ್ನು ಸಹ ವಿವರಿಸುತ್ತದೆ.”

      ಧರ್ಮ

      ◼ ಅನೇಕ ಜನರು, ಲೋಕದಲ್ಲಿರುವ ಧರ್ಮಗಳನ್ನು ಮಾನವಕುಲದ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಗಣಿಸುವ ಬದಲು ಅವುಗಳಿಗೆ ಕಾರಣವಾಗಿ ಪರಿಗಣಿಸಲು ಆರಂಭಿಸುತ್ತಿದ್ದಾರೆ. ಧರ್ಮವು ಜನರನ್ನು ಸರಿಯಾದ ಮಾರ್ಗದಲ್ಲಿ ನಡಿಸುತ್ತಿದೆ ಎಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಮತ್ತಾಯ 7:​13, 14 ಮತ್ತು ಪುಟ 146ರಲ್ಲಿರುವ ಪ್ಯಾರಗ್ರಾಫ್‌ 5ನ್ನು ಓದಿರಿ.] ಈ ಅಧ್ಯಾಯವು, ದೇವರು ಒಪ್ಪುವಂಥ ಆರಾಧನೆಯನ್ನು ಗುರುತಿಸುವ ಆರು ವಿಶಿಷ್ಟಾಂಶಗಳನ್ನು ಪರಿಶೀಲಿಸುತ್ತದೆ.” ಪುಟ 147ರಲ್ಲಿರುವ ಪಟ್ಟಿಯನ್ನು ತೋರಿಸಿರಿ.

      ದುರಂತ/ಕಷ್ಟಸಂಕಟ

      ◼ “ಯಾವುದಾದರೊಂದು ದುರಂತ ಸಂಭವಿಸುವಾಗ, ದೇವರು ನಿಜವಾಗಿಯೂ ಜನರ ಕುರಿತು ಚಿಂತಿಸುತ್ತಾನೊ ಮತ್ತು ಅವರ ಕಷ್ಟಸಂಕಟಗಳನ್ನು ಗಮನಿಸುತ್ತಾನೊ ಎಂದು ಅನೇಕರು ಕೇಳುತ್ತಾರೆ. ಇದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 1 ಪೇತ್ರ 5:7 ಮತ್ತು ಪುಟ 11ರಲ್ಲಿರುವ ಪ್ಯಾರಗ್ರಾಫ್‌ 11ನ್ನು ಓದಿರಿ.] ಈ ಅಧ್ಯಾಯವು, ದೇವರು ಸಂಪೂರ್ಣವಾಗಿ ಮಾನವಕುಲದ ಕಷ್ಟಸಂಕಟಗಳನ್ನು ಹೇಗೆ ತೆಗೆದುಹಾಕಲಿದ್ದಾನೆ ಎಂಬುದನ್ನು ವಿವರಿಸುತ್ತದೆ.” ಪುಟ 106ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.

      ಯುದ್ಧ/ಶಾಂತಿ

      ◼ “ಎಲ್ಲ ಕಡೆಗಳಲ್ಲಿರುವ ಜನರು ಶಾಂತಿಗಾಗಿ ಹಂಬಲಿಸುತ್ತಾರೆ. ಭೂಮಿಯ ಮೇಲೆ ಶಾಂತಿಯ ನಿರೀಕ್ಷೆಯು ಕೇವಲ ಕನಸಾಗಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 46:​8, 9ನ್ನು ಓದಿರಿ.] ಈ ಪ್ರಕಾಶನವು, ದೇವರು ಹೇಗೆ ತನ್ನ ಉದ್ದೇಶವನ್ನು ನೆರವೇರಿಸುವನು ಮತ್ತು ಭೌಗೋಳಿಕ ಶಾಂತಿಯನ್ನು ಹೇಗೆ ತರುವನು ಎಂಬುದನ್ನು ಚರ್ಚಿಸುತ್ತದೆ.” ಪುಟ 35ರಲ್ಲಿರುವ ಚಿತ್ರವನ್ನು ತೋರಿಸಿರಿ, ಮತ್ತು ಪುಟ 34ರಲ್ಲಿರುವ ಪ್ಯಾರಗ್ರಾಫ್‌ 17-21ನ್ನು ಪರಿಗಣಿಸಿರಿ.

      [ಪುಟ 5ರಲ್ಲಿರುವಚೌಕ]

      ದಾನದ ಏರ್ಪಾಡಿನ ಕುರಿತು ತಿಳಿಸುವ ವಿಧಗಳು

      “ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ನೀವು ಇಂದು ಚಿಕ್ಕ ಕಾಣಿಕೆಯನ್ನು ಕೊಡಲು ಬಯಸುವುದಾದರೆ ನಾನದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.”

      “ನಮ್ಮ ಸಾಹಿತ್ಯಗಳನ್ನು ಕ್ರಯವಿಲ್ಲದೆ ನೀಡುತ್ತೇವಾದರೂ, ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ಕೊಡಲ್ಪಡುವ ಉದಾರ ಕಾಣಿಕೆಗಳನ್ನು ನಾವು ಸ್ವೀಕರಿಸುತ್ತೇವೆ.”

      “ನಮ್ಮ ಈ ಕೆಲಸವು ಹೇಗೆ ನಡೆಸಲ್ಪಡುತ್ತದೆ ಎಂದು ನೀವು ಆಲೋಚಿಸುತ್ತಿರಬಹುದು. ನಮ್ಮ ಈ ಲೋಕವ್ಯಾಪಕ ಕೆಲಸವು ಸ್ವಯಂಪ್ರೇರಿತ ಕಾಣಿಕೆಗಳಿಂದ ಬೆಂಬಲಿಸಲ್ಪಡುತ್ತದೆ. ಇಂದು ನೀವು ಚಿಕ್ಕ ಕಾಣಿಕೆಯನ್ನು ಕೊಡಲು ಬಯಸುವುದಾದರೆ ಅದನ್ನು ಸ್ವೀಕರಿಸಲು ನಾನು ಸಂತೋಷಿಸುತ್ತೇನೆ.”

  • (1) ಪ್ರಶ್ನೆ, (2) ಶಾಸ್ತ್ರವಚನ, ಮತ್ತು (3) ಅಧ್ಯಾಯ
    2006 ರಾಜ್ಯ ಸೇವೆ | ಜನವರಿ
    • (1) ಪ್ರಶ್ನೆ, (2) ಶಾಸ್ತ್ರವಚನ, ಮತ್ತು (3) ಅಧ್ಯಾಯ

      ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡುವ ಒಂದು ಸುಲಭ ವಿಧಾನವು ಯಾವುದೆಂದರೆ, (1) ದೃಷ್ಟಿಕೋನ ಪ್ರಶ್ನೆಯೊಂದನ್ನು ಕೇಳಿ, (2) ಸೂಕ್ತವಾದ ವಚನವೊಂದನ್ನು ಓದಿ ಮತ್ತು (3) ಆ ವಿಷಯವನ್ನು ಚರ್ಚಿಸುವ ಅಧ್ಯಾಯವನ್ನು ಪುಸ್ತಕದಿಂದ ತೋರಿಸಿ, ಅಧ್ಯಾಯದ ಶೀರ್ಷಿಕೆಯ ಕೆಳಗಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ಓದುವುದೇ ಆಗಿದೆ. ಮನೆಯವರು ಆಸಕ್ತಿಯನ್ನು ತೋರಿಸುವಲ್ಲಿ, ನೀವು ಆ ಅಧ್ಯಾಯದ ಮೊದಲ ಕೆಲವು ಪ್ಯಾರಗ್ರಾಫ್‌ಗಳನ್ನು ಉಪಯೋಗಿಸಿ ಒಂದು ಬೈಬಲ್‌ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಲು ಸಾಧ್ಯವಾಗಬಹುದು. ಈ ವಿಧಾನವನ್ನು, ಮೊದಲ ಭೇಟಿಯನ್ನು ಅಥವಾ ಪುನರ್ಭೇಟಿಯನ್ನು ಮಾಡುವಾಗ ಒಂದು ಅಧ್ಯಯನವನ್ನು ಆರಂಭಿಸಲು ಉಪಯೋಗಿಸಬಹುದು.

      ◼ “ಈ ಬೈಬಲ್‌ ವಚನದಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ, ಮಾನವರಾದ ನಾವು ನಮ್ಮ ಸೃಷ್ಟಿಕರ್ತನ ಕುರಿತು ತಿಳಿಯಸಾಧ್ಯವಿದೆ ಎಂದು ನೀವು ನೆನಸುತ್ತೀರೊ?” ಅಪೊಸ್ತಲರ ಕೃತ್ಯಗಳು 17:​26, 27ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 1ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಇಂದು ನಾವು ಎದುರಿಸುತ್ತಿರುವಂಥ ಸಮಸ್ಯೆಗಳನ್ನು ನೋಡುವಾಗ, ಇಲ್ಲಿ ತಿಳಿಸಲ್ಪಟ್ಟಿರುವಂತೆ ನಾವು ಸಾಂತ್ವನ ಮತ್ತು ನಿರೀಕ್ಷೆಯನ್ನು ಕಂಡುಕೊಳ್ಳಸಾಧ್ಯವಿದೆ ಎಂದು ನಿಮಗನಿಸುತ್ತದೊ?” ರೋಮಾಪುರ 15:4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 2ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಈ ಬದಲಾವಣೆಗಳನ್ನು ಮಾಡುವ ಅಧಿಕಾರ ನಿಮಗಿರುತ್ತಿದ್ದಲ್ಲಿ, ನೀವು ಹೀಗೆ ಮಾಡುತ್ತಿದ್ದಿರೊ?” ಪ್ರಕಟನೆ 21:​4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಈ ಹಳೆಯ ಗೀತೆಯೊಂದರಲ್ಲಿ ವರ್ಣಿಸಲ್ಪಟ್ಟಿರುವ ಪರಿಸ್ಥಿತಿಗಳನ್ನು ನಮ್ಮ ಮಕ್ಕಳು ಎಂದಾದರೂ ಅನುಭವಿಸುವರು ಎಂದು ನಿಮಗನಿಸುತ್ತದೊ?” ಕೀರ್ತನೆ 37:​10, 11ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಈ ಮಾತುಗಳು ಎಂದಾದರೊಂದು ದಿನ ನೆರವೇರುವವು ಎಂದು ನೀವು ನೆನಸುತ್ತೀರೊ?” ಯೆಶಾಯ 33:24ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಜೀವಿತರು ಏನು ಮಾಡುತ್ತಿದ್ದಾರೆಂದು ಮೃತರಿಗೆ ತಿಳಿದಿದೆಯೊ ಎಂಬುದರ ಕುರಿತು ಎಂದಾದರೂ ನೀವು ಆಲೋಚಿಸಿದ್ದೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಸಂಗಿ 9:5ನ್ನು ಓದಿರಿ ಮತ್ತು ಅಧ್ಯಾಯ 6ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಯೇಸು ಈ ವಚನಗಳಲ್ಲಿ ತಿಳಿಸಿರುವ ಹಾಗೆ, ಮೃತರಾದ ನಮ್ಮ ಪ್ರಿಯ ವ್ಯಕ್ತಿಗಳನ್ನು ನಾವು ಒಂದು ದಿನ ಪುನಃ ನೋಡಸಾಧ್ಯವಿದೆ ಎಂದು ನೀವು ನೆನಸುತ್ತೀರೊ?” ಯೋಹಾನ 5:​28, 29ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 7ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಈ ಪ್ರಸಿದ್ಧ ಪ್ರಾರ್ಥನೆಯಲ್ಲಿ ತಿಳಿಸಿರುವಂತೆ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲು ಹೇಗೆ ಸಾಧ್ಯವೆಂದು ನಿಮಗನಿಸುತ್ತದೆ?” ಮತ್ತಾಯ 6:9, 10ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 8ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಈ ಪ್ರವಾದನೆಯಲ್ಲಿ ವರ್ಣಿಸಲ್ಪಟ್ಟಿರುವ ಕಾಲಾವಧಿಯಲ್ಲಿ ನಾವು ಜೀವಿಸುತ್ತಿದ್ದೇವೆಂದು ನಿಮಗನಿಸುತ್ತದೊ?” 2 ತಿಮೊಥೆಯ 3:​1-4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 9ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಮಾನವಕುಲದ ಸಮಸ್ಯೆಗಳು ಏಕೆ ಹೆಚ್ಚಾಗುತ್ತಾ ಹೋಗುತ್ತಿವೆ ಎಂದು ಅನೇಕರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೇನು ಎಂಬುದು ಈ ವಚನದಲ್ಲಿ ತಿಳಿಸಲ್ಪಟ್ಟಿದೆ. ಈ ವಿಚಾರವನ್ನು ನೀವೆಂದಾದರೂ ಪರಿಗಣಿಸಿದ್ದೀರೊ?” ಪ್ರಕಟನೆ 12:9ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 10ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ನೀವು ಎಂದಾದರೂ ಇಂತಹ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಬಯಸಿದ್ದೀರೊ?” ಯೋಬ 21:7ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 11ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      ◼ “ಬೈಬಲಿನ ಈ ಬುದ್ಧಿವಾದವನ್ನು ಅನ್ವಯಿಸುವುದು, ಸಂತೋಷಭರಿತ ಕುಟುಂಬ ಜೀವನವನ್ನು ಆನಂದಿಸುವಂತೆ ಜನರಿಗೆ ಸಹಾಯಮಾಡುವುದು ಎಂದು ನೀವು ನೆನಸುತ್ತೀರೊ?” ಎಫೆಸ 5:33ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 14ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.

      [ಪುಟ 6ರಲ್ಲಿರುವಚೌಕ]

      ಬೈಬಲ್‌ ಅಧ್ಯಯನದ ಏರ್ಪಾಡನ್ನು ಪ್ರತ್ಯಕ್ಷಾಭಿನಯಿಸಿದ ಬಳಿಕ, ಅಧ್ಯಯನವು ಇನ್ನೂ ಎರಡು ಸಲ ನಡೆಸಲ್ಪಟ್ಟಿರುವಲ್ಲಿ ಮತ್ತು ಅದು ಮುಂದುವರಿಯುವುದು ಎಂಬಂತೆ ತೋರುವಲ್ಲಿ, ಅದನ್ನು ಒಂದು ಅಧ್ಯಯನವಾಗಿ ವರದಿಸಬಹುದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ