ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸುಗ್ಗಿಕಾಲಕ್ಕೆ ಮುಂಚೆ ‘ಹೊಲದಲ್ಲಿ’ ಕೆಲಸಮಾಡುವುದು
    ಕಾವಲಿನಬುರುಜು—2000 | ಅಕ್ಟೋಬರ್‌ 15
    • ಕಲಿಸುತ್ತಿದ್ದರೊ ಅದಕ್ಕೆ ಸ್ಟೊರ್ಸ್‌ ತೀರ ವಿಪರೀತವಾಗಿ ಪ್ರತಿಕ್ರಿಯಿಸಿದನು. ಅಂದರೆ, ಪಿಶಾಚನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಂಬುದನ್ನೇ ಅವನು ನಿರಾಕರಿಸಿದನು. ಅವನು ತ್ರಯೈಕ್ಯವನ್ನು ಸಹ ತಿರಸ್ಕರಿಸಿದ್ದನು. ಆದರೆ ತನ್ನ ಮರಣಕ್ಕೆ ಸ್ವಲ್ಪ ಸಮಯದ ಮುಂಚಿನ ವರೆಗೂ, ಪವಿತ್ರಾತ್ಮವು ಒಂದು ವ್ಯಕ್ತಿಯಾಗಿದೆಯೊ ಇಲ್ಲವೊ ಎಂಬುದರ ಬಗ್ಗೆ ಅವನು ಅನಿಶ್ಚಿತನಾಗಿದ್ದನು. ಆರಂಭದಲ್ಲಿ ಕ್ರಿಸ್ತನ ಪುನರಾಗಮನವು ಅದೃಶ್ಯವಾಗಿರುವುದೆಂದು ಜಾರ್ಜ್‌ ಸ್ಟೊರ್ಸ್‌ ನಿರೀಕ್ಷಿಸಿದನು. ಆದರೆ ಅದೇ ಸಮಯದಲ್ಲಿ, ಕಟ್ಟಕಡೆಗೆ ಯೇಸು ದೃಶ್ಯರೂಪದಲ್ಲಿ ತೋರಿಬರುವನೆಂದು ಅವನು ನೆನಸಿದನು. ಏನಿದ್ದರೂ, ಈ ಇಬ್ಬರೂ ವ್ಯಕ್ತಿಗಳು ಪ್ರಾಮಾಣಿಕಹೃದಯದವರು ಮತ್ತು ಯಥಾರ್ಥವಂತರಾಗಿದ್ದರೆಂದು ತೋರುತ್ತದೆ. ಮತ್ತು ಇವರು ಬೇರೆ ಹೆಚ್ಚಿನವರಿಗಿಂತಲೂ ಸತ್ಯಕ್ಕೆ ತುಂಬ ಹತ್ತಿರ ಬಂದು ತಲಪಿದ್ದರು.

      ಗೋದಿ ಮತ್ತು ಹಣಜಿಯ ಕುರಿತಾದ ಸಾಮ್ಯದಲ್ಲಿ ಯೇಸು ವರ್ಣಿಸಿದ್ದಂತಹ “ಹೊಲವು” ಇನ್ನೂ ಕೊಯ್ಲಿಗೆ ಸಿದ್ಧವಾಗಿರಲಿಲ್ಲ. (ಮತ್ತಾಯ 13:38) ಗ್ರೂ, ಸ್ಟೊರ್ಸ್‌ ಮತ್ತು ಇನ್ನಿತರರು ಆ ಸುಗ್ಗಿಕಾಲಕ್ಕಾಗಿ ತಯಾರಿ ನಡೆಸುತ್ತಾ ‘ಹೊಲದಲ್ಲಿ’ ಕೆಲಸಮಾಡುತ್ತಿದ್ದರು.

      ನೀವು ಓದುತ್ತಿರುವ ಈ ಪತ್ರಿಕೆಯ ಪ್ರಕಾಶನವನ್ನು 1879ರಲ್ಲಿ ಆರಂಭಿಸಿದ ಚಾರ್ಲ್ಸ್‌ ಟೇಸ್‌ ರಸಲ್‌ರವರು ತಮ್ಮ ಆರಂಭದ ವರ್ಷಗಳ ಕುರಿತಾಗಿ ಬರೆದುದು: “ತನ್ನ ವಾಕ್ಯವನ್ನು ಅಭ್ಯಾಸಮಾಡುವುದರಲ್ಲಿ ಕರ್ತನು ನಮಗೆ ಅನೇಕ ಸಹಾಯಕರನ್ನು ಕೊಟ್ಟನು. ಅವರಲ್ಲಿ ನಮ್ಮ ಅತಿ ಪ್ರಿಯ, ವಯಸ್ಸಾದ ಸಹೋದರ ಜಾರ್ಜ್‌ ಸ್ಟೊರ್ಸ್‌ ಪ್ರಮುಖರಾಗಿದ್ದರು. ಅವರು ತಮ್ಮ ಮಾತು ಮತ್ತು ಬರಹಗಳ ಮೂಲಕ ತುಂಬ ನೆರವನ್ನು ಕೊಟ್ಟರು; ಆದರೆ ಮನುಷ್ಯರು ಎಷ್ಟೇ ಒಳ್ಳೆಯವರಾಗಿರಲಿ ಅಥವಾ ಬುದ್ಧಿವಂತರಾಗಿರಲಿ ನಾವು ಅವರನ್ನು ಹಿಂಬಾಲಿಸಲು ಪ್ರಯತ್ನಿಸಬಾರದು. ಬದಲಾಗಿ ‘ಪ್ರಿಯ ಮಕ್ಕಳೋಪಾದಿ ದೇವರ ಹಿಂಬಾಲಕರಾಗಿರಬೇಕು.’” ಹೌದು, ನಿಜವಾದ ಬೈಬಲ್‌ ವಿದ್ಯಾರ್ಥಿಗಳು, ಗ್ರೂ ಮತ್ತು ಸ್ಟೊರ್ಸ್‌ನಂತಹ ವ್ಯಕ್ತಿಗಳ ಪ್ರಯತ್ನಗಳಿಂದ ಪ್ರಯೋಜನಪಡೆದರು. ಆದರೆ, ಸತ್ಯದ ನಿಜ ಮೂಲದೋಪಾದಿ ದೇವರ ವಾಕ್ಯವಾದ ಬೈಬಲನ್ನು ಇನ್ನೂ ಮುಂದಕ್ಕೆ ಪರಿಶೀಲಿಸುವುದು ಅತ್ಯಾವಶ್ಯಕವಾಗಿತ್ತು.​—⁠ಯೋಹಾನ 17:⁠17.

  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—2000 | ಅಕ್ಟೋಬರ್‌ 15
    • ವಾಚಕರಿಂದ ಪ್ರಶ್ನೆಗಳು

      ರಕ್ತವನ್ನು ಹೇಗೆ ಉಪಯೋಗಿಸಬೇಕೆಂಬ ಬೈಬಲಿನ ಆಜ್ಞೆಗಳ ಕುರಿತಾದ ತಮ್ಮ ತಿಳುವಳಿಕೆಗನುಸಾರ, ವೈದ್ಯಕೀಯ ಕಾರ್ಯವಿಧಾನಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ರಕ್ತವನ್ನು ಉಪಯೋಗಿಸುವುದರ ಕುರಿತಾಗಿ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?

      ಪ್ರತಿಯೊಬ್ಬ ಕ್ರೈಸ್ತನು ಈ ವಿಷಯವನ್ನು ತನ್ನ ವೈಯಕ್ತಿಕ ಇಷ್ಟ ಅಥವಾ ಯಾವುದೋ ವೈದ್ಯಕೀಯ ಕಾರಣದ ಆಧಾರದ ಮೇಲೆ ನಿರ್ಧರಿಸಬಾರದು. ಅದರ ಬದಲಿಗೆ, ಬೈಬಲ್‌ ಏನು ಹೇಳುತ್ತದೆಂಬುದನ್ನು ಅವನು ಪರಿಗಣಿಸಬೇಕು. ಯಾಕೆಂದರೆ ಇದು, ಆ ವ್ಯಕ್ತಿ ಮತ್ತು ಯೆಹೋವನ ನಡುವಿನ ವಿಷಯವಾಗಿದೆ.

      ನಮ್ಮ ಜೀವಕ್ಕಾಗಿ ನಾವು ಯೆಹೋವನಿಗೆ ಋಣಿಗಳಾಗಿದ್ದೇವೆ. ಮತ್ತು ನಾವು ರಕ್ತವನ್ನು ಸೇವಿಸಬಾರದೆಂದು ಆತನು ಅಪ್ಪಣೆಯನ್ನು ಕೊಟ್ಟಿದ್ದಾನೆ. (ಆದಿಕಾಂಡ 9:​3, 4) ರಕ್ತವು ಜೀವವನ್ನು ಪ್ರತಿನಿಧಿಸುತ್ತದಾದ್ದರಿಂದ, ಪುರಾತನ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ, ರಕ್ತದ ಉಪಯೋಗದ ಕುರಿತಾಗಿ ದೇವರು ಮಿತಿಗಳನ್ನಿಟ್ಟನು. ಆತನು ಆಜ್ಞಾಪಿಸಿದ್ದು: “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ.” ಒಬ್ಬ ವ್ಯಕ್ತಿಯು ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಕೊಲ್ಲುವಲ್ಲಿ ಆಗೇನು? ದೇವರಂದದ್ದು: “ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು.”a (ಯಾಜಕಕಾಂಡ 17:11, 13) ಈ ನಿಯಮವನ್ನು ಯೆಹೋವನು ಪುನಃ ಪುನಃ ತಿಳಿಸಿದನು. (ಧರ್ಮೋಪದೇಶಕಾಂಡ 12:​16, 24; 15:23) ಯೆಹೂದಿ ಸನ್‌ಸಿನೋ ಖುಮಾಷ್‌ ಹೇಳುವುದು: “ರಕ್ತವು ಶೇಖರಿಸಿಡಲ್ಪಡಬಾರದು. ಅದು ಸೇವಿಸಲ್ಪಡದಂತೆ ಅದನ್ನು ನೆಲದ ಮೇಲೆ ಸುರಿಸಬೇಕು.” ಯಾವ ಇಸ್ರಾಯೇಲ್ಯನೂ ಇನ್ನೊಂದು ಜೀವಿಯ ರಕ್ತವನ್ನು ತೆಗೆದು, ಶೇಖರಿಸಿ, ಉಪಯೋಗಿಸಬಾರದಿತ್ತು. ಏಕೆಂದರೆ ಆ ಪ್ರಾಣಿಯ ಜೀವವು ದೇವರಿಗೆ ಸೇರಿದ್ದಾಗಿತ್ತು.

      ಮೆಸ್ಸೀಯನು ಸತ್ತಾಗ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗು ಕೊನೆಗೊಂಡಿತು. ಆದರೆ ರಕ್ತವು ಈಗಲೂ ದೇವರ ದೃಷ್ಟಿಯಲ್ಲಿ ಪವಿತ್ರವಾಗಿದೆ. ಆದುದರಿಂದ ದೇವರ ಪವಿತ್ರಾತ್ಮದಿಂದ ಪ್ರಚೋದಿಸಲ್ಪಟ್ಟು, ಕ್ರೈಸ್ತರು ‘ರಕ್ತವನ್ನು ವಿಸರ್ಜಿಸಬೇಕೆಂದು’ ನಿರ್ದೇಶಿಸಲ್ಪಟ್ಟರು. ಆ ಆಜ್ಞೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದಿತ್ತು. ಅದು ನೈತಿಕ ರೀತಿಯಲ್ಲಿ, ಲೈಂಗಿಕ ಅನೈತಿಕತೆ ಅಥವಾ ಮೂರ್ತಿಪೂಜೆಯಿಂದ ದೂರವಿರುವಷ್ಟೇ ಪ್ರಾಮುಖ್ಯವಾಗಿತ್ತು. (ಅ. ಕೃತ್ಯಗಳು 15:​28, 29; 21:25) 20ನೆಯ ಶತಮಾನದಲ್ಲಿ ರಕ್ತದಾನ ಮತ್ತು ರಕ್ತಪೂರಣಗಳು ಸರ್ವಸಾಮಾನ್ಯವಾಗತೊಡಗಿದವು. ಆದರೆ ಇವು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿಲ್ಲವೆಂದು ಆಗ ಯೆಹೋವನ ಸಾಕ್ಷಿಗಳು ಗ್ರಹಿಸಿದರು.b

      ಕೆಲವೊಮ್ಮೆ, ಶಸ್ತ್ರಚಿಕಿತ್ಸೆಯ ಕೆಲವು ವಾರಗಳ ಮುಂಚೆಯೇ ಒಬ್ಬ ರೋಗಿಯು ತನ್ನ ಸ್ವಂತ ರಕ್ತವನ್ನು ಶೇಖರಿಸಿಡುವಂತೆ (ಪ್ರಿಆಪರೇಟಿವ್‌ ಆಟೊಲೊಗಸ್‌ ಬ್ಲಡ್‌ ಡೊನೇಷನ್‌ ಅಥವಾ ಪಿ.ಎ.ಡಿ.) ವೈದ್ಯನು ಹೇಳಬಹುದು. ಏಕೆಂದರೆ, ಅಗತ್ಯಬೀಳುವಲ್ಲಿ ಅವನು ಆ ರೋಗಿಗೆ, ಶೇಖರಿಸಿಡಲ್ಪಟ್ಟಿರುವ ಅವನ ಸ್ವಂತ ರಕ್ತವನ್ನು ಕೊಡಲು ಶಕ್ತನಾಗಿರುವನು. ಆದರೆ, ರಕ್ತವನ್ನು ಹಾಗೆ ಸಂಗ್ರಹಿಸುವುದು, ಶೇಖರಿಸಿಡುವುದು ಮತ್ತು ಪುನಃ ದೇಹದೊಳಗೆ ಸೇರಿಸುವುದು, ಯಾಜಕಕಾಂಡ ಮತ್ತು ಧರ್ಮೋಪದೇಶಕಾಂಡದಲ್ಲಿ ಕೊಡಲ್ಪಟ್ಟಿರುವ ಆಜ್ಞೆಗಳಿಗೆ ನೇರವಾಗಿ ವಿರುದ್ಧವಾಗಿದೆ. ರಕ್ತವು ಶೇಖರಿಸಲ್ಪಡಬಾರದಿತ್ತು; ಅದನ್ನು ದೇವರಿಗೆ ಹಿಂದಿರುಗಿಸುತ್ತೇವೊ ಎಂಬಂತೆ ನೆಲಕ್ಕೆ ಸುರಿಸಬೇಕಾಗಿತ್ತು. ಮೋಶೆಯ ಧರ್ಮಶಾಸ್ತ್ರವು ಇಂದು ಜಾರಿಯಲ್ಲಿಲ್ಲ ನಿಜ. ಹಾಗಿದ್ದರೂ, ದೇವರು

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ