ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀವು ವಿವೇಕಿಗಳೋ?
    ಕಾವಲಿನಬುರುಜು—2000 | ಅಕ್ಟೋಬರ್‌ 1
    • ನೀವು ವಿವೇಕಿಗಳೋ?

      ಮೋಶೆಯು ಇಸ್ರಾಯೇಲಿನಲ್ಲಿ ಅಧಿಪತಿಗಳನ್ನು ನೇಮಿಸುವಾಗ, “ಬುದ್ಧಿವಿವೇಕವುಳ್ಳವರೂ ಅನುಭವಸ್ಥರೂ ಆಗಿದ್ದ ಪುರುಷರನ್ನು” ಹುಡುಕಲು ತುಂಬ ಶ್ರಮಿಸಿದನು. (ಧರ್ಮೋಪದೇಶಕಾಂಡ 1:​13, NW) ಒಬ್ಬ ವ್ಯಕ್ತಿಗೆ ವಯಸ್ಸಾದಂತೆ ಅವನು ಪಡೆದುಕೊಳ್ಳುವ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಅವನನ್ನು ಅಧಿಪತಿಯನ್ನಾಗಿ ನೇಮಿಸುತ್ತಿರಲಿಲ್ಲ. ಬದಲಾಗಿ, ಅಂಥವನಲ್ಲಿ ಬುದ್ಧಿವಿವೇಕಗಳಿರುವುದು ಸಹ ಪ್ರಾಮುಖ್ಯವಾಗಿತ್ತು.

      ವಿವೇಕಿಯಾದ ಒಬ್ಬ ವ್ಯಕ್ತಿಯು, ತನ್ನ ನಡೆನುಡಿಯು ಹೇಗಿರಬೇಕೆಂಬುದನ್ನು ಸರಿಯಾಗಿ ತಿಳಿದುಕೊಂಡಿರುತ್ತಾನೆ. ವೆಬ್‌ಸ್ಟರ್ಸ್‌ ನೈನ್ತ್‌ ನ್ಯೂ ಕಾಲಿಜಿಯೇಟ್‌ ಡಿಕ್ಷನೆರಿಗನುಸಾರ, ವಿವೇಕಿಯಾದ ವ್ಯಕ್ತಿಯು “ದೂರದೃಷ್ಟಿಯುಳ್ಳವನಾಗಿ ಮೌನವನ್ನು ಕಾಪಾಡಿಕೊಳ್ಳುವುದರಲ್ಲಿ ಸಮರ್ಥನೂ” ಆಗಿರುತ್ತಾನೆ. ಹೌದು, “ಮಾತಾಡುವ ಸಮಯ” ಮತ್ತು “ಸುಮ್ಮನಿರುವ ಸಮಯ,” ಹೀಗೆ ಎರಡಕ್ಕೂ ಒಂದೊಂದು ಸಮಯವಿದೆ. ಮತ್ತು ಇವುಗಳ ನಡುವಿನ ವ್ಯತ್ಯಾಸವನ್ನು ವಿವೇಕಿಯಾದ ವ್ಯಕ್ತಿಯು ಅರ್ಥಮಾಡಿಕೊಳ್ಳುತ್ತಾನೆ. (ಪ್ರಸಂಗಿ 3:7) ಅನೇಕ ಸಂದರ್ಭಗಳಲ್ಲಿ ಮೌನವಾಗಿರುವುದು ಒಳ್ಳೆಯದಾಗಿರುತ್ತದೆ. ಏಕೆಂದರೆ, ಬೈಬಲು ಹೇಳುವುದು: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.”​—⁠ಜ್ಞಾನೋಕ್ತಿ 10:⁠19.

      ಕ್ರೈಸ್ತರು ತಮ್ಮ ಜೊತೆಕ್ರೈಸ್ತರೊಂದಿಗೆ ವಿವೇಕಿಗಳಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಯಾರು ಅತಿಯಾಗಿ ಮಾತಾಡುತ್ತಾರೋ ಅಥವಾ ಪ್ರಭಾವಯುಕ್ತವಾಗಿ ಮಾತಾಡುತ್ತಾರೋ ಅಂಥವರ ಎಲ್ಲಾ ಮಾತುಗಳು ಯಾವಾಗಲೂ ಮಹತ್ವವುಳ್ಳವುಗಳಾಗಿರುವುದಿಲ್ಲ, ಇಲ್ಲವೆ ಅತಿ ಪ್ರಾಮುಖ್ಯವಾದವುಗಳೂ ಆಗಿರುವುದಿಲ್ಲ. ಮೋಶೆಯು ಸಹ “ತನ್ನ ಮಾತುಗಳಲ್ಲಿ ಪ್ರಭಾವಶಾಲಿ”ಯಾಗಿದ್ದನು (NW) ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದರೆ ಅವನು ತಾಳ್ಮೆ, ನಮ್ರತೆ ಮತ್ತು ಆತ್ಮನಿಯಂತ್ರಣವನ್ನು ತನ್ನಲ್ಲಿ ಬೆಳೆಸಿಕೊಳ್ಳುವ ವರೆಗೂ, ಇಸ್ರಾಯೇಲ್‌ ಜನಾಂಗವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಮುನ್ನಡೆಸಲು ಅವನಿಗೆ ಸಾಧ್ಯವಾಗಿರಲಿಲ್ಲ. (ಅ. ಕೃತ್ಯಗಳು 7:22) ಆದುದರಿಂದ, ವಿಶೇಷವಾಗಿ ಯಾರಿಗೆ ಇತರರ ಮೇಲೆ ಅಧಿಕಾರವನ್ನು ವಹಿಸಿಕೊಡಲಾಗಿದೆಯೋ ಅವರು, ವಿನಯಶೀಲರಾಗಿರಲು ಮತ್ತು ದೀನಭಾವವನ್ನು ತೋರಿಸಲು ಕಷ್ಟಪಟ್ಟು ಪ್ರಯತ್ನಿಸಬೇಕು.​—⁠ಜ್ಞಾನೋಕ್ತಿ 11:⁠2.

      ಯೇಸು ಕ್ರಿಸ್ತನು ಯಾರಿಗೆ “ತನ್ನ ಎಲ್ಲಾ ಆಸ್ತಿಯ ಮೇಲೆ” ಅಧಿಕಾರವನ್ನು ವಹಿಸಿಕೊಟ್ಟಿದ್ದಾನೋ ಅವರನ್ನು, ದೇವರ ವಾಕ್ಯದಲ್ಲಿ “ನಂಬಿಗಸ್ತನೂ ವಿವೇಕಿಯೂ” ಆದ ಆಳಾಗಿ ವರ್ಣಿಸಲಾಗಿದೆ. (ಮತ್ತಾಯ 24:45-47) ಅವರು ವಿನಯಶೀಲರಾಗಿರದೆ ತಮ್ಮ ಇಚ್ಛಾಸ್ವಾತಂತ್ರ್ಯದಿಂದ, ತೀರ ಆವೇಗವುಳ್ಳವರಾಗಿ ಯೆಹೋವನಿಗಿಂತಲೂ ಮುಂದೆ ಹೆಜ್ಜೆ ಇಡುವುದಿಲ್ಲ; ಇಲ್ಲವೇ ಒಂದು ವಿಷಯದ ಮೇಲಿನ ದೇವರ ಮಾರ್ಗದರ್ಶನವು ಸ್ಪಷ್ಟವಾಗಿರುವಾಗ, ಆ ವಿಷಯದ ಬಗ್ಗೆ ಅವರು ಏನೂ ತಿಳಿಯದವರಾಗಿಯೂ ಇರುವುದಿಲ್ಲ. ಮಾತಾಡುವ ಸಮಯ ಯಾವುದೆಂದೂ ಮತ್ತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಕಾಯುತ್ತಾ ಸುಮ್ಮನಿರುವ ಸಮಯ ಯಾವುದೆಂದೂ ಅವರಿಗೆ ಗೊತ್ತಿದೆ. ಎಲ್ಲಾ ಕ್ರೈಸ್ತರು ಅವರ ನಂಬಿಕೆಯನ್ನು ಅನುಸರಿಸಲು ಮತ್ತು ಆಳು ವರ್ಗದಂತೆ ತಾವು ವಿವೇಕಿಗಳು ಎಂಬುದನ್ನು ರುಜುಪಡಿಸಿಕೊಳ್ಳಲು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ.​—⁠ಇಬ್ರಿಯ 13:⁠7.

  • ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೊ?
    ಕಾವಲಿನಬುರುಜು—2000 | ಅಕ್ಟೋಬರ್‌ 1
    • ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೊ?

      ಈ ತೊಂದರೆಯುಕ್ತ ಲೋಕದಲ್ಲೂ ದೇವರ, ಆತನ ರಾಜ್ಯದ ಮತ್ತು ಮಾನವಕುಲಕ್ಕಾಗಿ ಆತನ ಆಶ್ಚರ್ಯಕರ ಉದ್ದೇಶದ ನಿಷ್ಕೃಷ್ಟ ಜ್ಞಾನದಿಂದ ನೀವು ಸಂತೋಷವನ್ನು ಗಳಿಸಸಾಧ್ಯವಿದೆ. ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲಧ್ಯಯನವನ್ನು ನಡಿಸಲು ಯಾರಾದರೂ ನಿಮ್ಮ ಮನೆಯನ್ನು ಸಂದರ್ಶಿಸುವಂತೆ ನೀವು ಬಯಸುವುದಾದರೆ ದಯವಿಟ್ಟು, Watch Tower, H-58 Old Khandala Road, Lonavla 410401, Mah., India ಇವರಿಗೆ, ಅಥವಾ 2ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ