ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”
    ಕಾವಲಿನಬುರುಜು—2009 | ಜುಲೈ 1
    • ಪರಿಶುದ್ಧ ದೇವರಿಗೆ ಮೋಶೆಯೊಂದಿಗೆ ಮಾತಾಡಲು ಸಕಾರಣವಿತ್ತು. ದೇವರು ಹೇಳಿದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಚನ 7) ದೇವರು ತನ್ನ ಜನರ ದುರವಸ್ಥೆಯ ಬಗ್ಗೆ ಚಿಂತಿಸದೆ ಇರಲಿಲ್ಲ, ಅಥವಾ ಜನರ ದುಃಖದ ಮೊರೆಗಳಿಗೆ ಕಿವಿಗೊಡದೆ ಇರಲಿಲ್ಲ. ಬದಲಾಗಿ ಅವರು ನೋವನ್ನು ಅನುಭವಿಸಿದಾಗ ಆತನಿಗೂ ನೋವಾಯಿತು. ದೇವರು ಏನಂದನೆಂದು ಗಮನಿಸಿ: “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” “ನಾನು ಬಲ್ಲೆನು” ಎಂಬ ಮಾತುಗಳ ಕುರಿತು ಒಂದು ರೆಫರೆನ್ಸ್‌ ಕೃತಿ ಹೇಳುವುದು: “ಈ ಅಭಿವ್ಯಕ್ತಿಯಲ್ಲಿ ವೈಯಕ್ತಿಕ ಅನಿಸಿಕೆ, ಕೋಮಲಭಾವ, ಕನಿಕರವು ಕೂಡಿರುತ್ತದೆ.” ಮೋಶೆಗೆ ಯೆಹೋವನು ನುಡಿದ ಮಾತುಗಳು ಆತನಲ್ಲಿರುವ ಆಳವಾದ ವ್ಯಾಕುಲತೆ ಮತ್ತು ಚಿಂತೆಯನ್ನು ಸೂಚಿಸುತ್ತವೆ.

      ದೇವರು ಏನು ಮಾಡಲಿದ್ದನು? ಬರೇ ಮರುಕಪಡಲಿಲ್ಲ ಅಥವಾ ಕನಿಕರದಿಂದ ಬರೇ ಕಿವಿಗೊಡಲಿಲ್ಲ. ಕ್ರಿಯೆಗೈಯಲು ಪ್ರಚೋದಿಸಲ್ಪಟ್ಟನು. ತನ್ನ ಜನರನ್ನು ಈಜಿಪ್ಟಿನಿಂದ ಬಿಡಿಸಿ “ಹಾಲೂ ಜೇನೂ ಹರಿಯುವ ದೇಶಕ್ಕೆ” ಕರೆತರಲು ಉದ್ದೇಶಿಸಿದನು. (ವಚನ 8) ಅದನ್ನು ಮಾಡಲಿಕ್ಕಾಗಿ ಯೆಹೋವನು ಮೋಶೆಗೆ ಈ ಅಪ್ಪಣೆಯನ್ನು ಕೊಟ್ಟನು: ‘ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡು.’ (ವಚನ 10) ಆ ಆಜ್ಞೆಗೆ ವಿಧೇಯನಾಗಿ ಮೋಶೆಯು ಇಸ್ರಾಯೇಲ್ಯರನ್ನು ಕ್ರಿ.ಪೂ. 1513ರಲ್ಲಿ ಈಜಿಪ್ಟಿನಿಂದ ಹೊರತಂದನು.

      ಯೆಹೋವನು ಬದಲಾಗಿಲ್ಲ. ತಮ್ಮ ದುರವಸ್ಥೆ ಕಷ್ಟಗಳನ್ನು ಆತನು ನೋಡುತ್ತಾನೆ ಮತ್ತು ಸಹಾಯಕ್ಕಾಗಿ ಅವರ ಕೂಗನ್ನು ಕೇಳುತ್ತಾನೆ ಎಂಬ ವಿಷಯದಲ್ಲಿ ಆತನ ಸೇವಕರು ಭರವಸೆಯಿಂದ ಇರಬಹುದು. ಅವರು ಅನುಭವಿಸುವ ನೋವು ನಷ್ಟಗಳನ್ನು ಆತನು ಚೆನ್ನಾಗಿ ಬಲ್ಲನು. ಆದರೆ ತನ್ನ ಭಕ್ತರಾದ ಸೇವಕರ ಬಗ್ಗೆ ಬರೇ ಕನಿಕರದ ಭಾವನೆಯಷ್ಟೇ ಅಲ್ಲ, ಅವರ ಪರವಾಗಿ ಕ್ರಿಯೆಗೈಯಲು ಕೋಮಲಭಾವದ ದೇವರು ಪ್ರಚೋದಿಸಲ್ಪಡುತ್ತಾನೆ ಏಕೆಂದರೆ “ಆತನು [ಅವರಿಗೋಸ್ಕರ] ಚಿಂತಿಸುತ್ತಾನೆ.”—1 ಪೇತ್ರ 5:7.

      ದೇವರ ಕನಿಕರವು ನಮಗೆ ನಿರೀಕ್ಷೆಗೆ ಆಧಾರವನ್ನು ಕೊಡುತ್ತದೆ. ಅಪರಿಪೂರ್ಣ ಮಾನವರಾದ ನಾವು ಸ್ವಲ್ಪ ಮಟ್ಟಿಗಿನ ಪರಿಶುದ್ಧತೆಯನ್ನು ಆತನ ಸಹಾಯದಿಂದ ಪಡೆದುಕೊಂಡು ಆತನಿಗೆ ಸ್ವೀಕಾರಾರ್ಹರು ಆಗಿರಬಲ್ಲೆವು. (1 ಪೇತ್ರ 1:15, 16) ಖಿನ್ನತೆ ಮತ್ತು ನಿರುತ್ತೇಜನದಿಂದ ಕಷ್ಟಪಡುತ್ತಿದ್ದ ಕ್ರೈಸ್ತ ಮಹಿಳೆಯೊಬ್ಬಳು, ಉರಿಯುವ ಪೊದೆಯಲ್ಲಿ ಮೋಶೆಗಾದ ಅನುಭವ ವೃತ್ತಾಂತದಿಂದ ಆದರಣೆಯನ್ನು ಕಂಡುಕೊಂಡಳು. ಅವಳನ್ನುವುದು: “ಅಶುದ್ಧ ಸ್ಥಳವನ್ನು ಸಹ ದೇವರು ಪರಿಶುದ್ಧವಾಗಿ ಮಾಡಶಕ್ತನೆಂದ ಮೇಲೆ ನನಗೆ ಸ್ವಲ್ಪವಾದರೂ ಆಶಾಕಿರಣವಿದ್ದೀತು. ಈ ವಿಚಾರವು ನನಗೆ ಬಹಳವಾಗಿ ಸಹಾಯಮಾಡಿದೆ.”

  • ನಿಮ್ಮನ್ನು ಭೇಟಿ ಮಾಡಬಹುದೋ?
    ಕಾವಲಿನಬುರುಜು—2009 | ಜುಲೈ 1
    • ನಿಮ್ಮನ್ನು ಭೇಟಿ ಮಾಡಬಹುದೋ?

      ಈ ತೊಂದರೆಯುಕ್ತ ಲೋಕದಲ್ಲೂ ದೇವರ, ಆತನ ರಾಜ್ಯದ ಮತ್ತು ಮಾನವಕುಲಕ್ಕಾಗಿ ಆತನ ಆಶ್ಚರ್ಯಕರ ಉದ್ದೇಶದ ನಿಷ್ಕೃಷ್ಟ ಜ್ಞಾನದಿಂದ ನೀವು ಸಂತೋಷವನ್ನು ಗಳಿಸಸಾಧ್ಯವಿದೆ. ನೀವು ಹೆಚ್ಚಿನ ಮಾಹಿತಿಯನ್ನು ತಿಳಿಯಬಯಸುವುದಾದರೆ ಅಥವಾ ಬೈಬಲಿನ ಕುರಿತಾಗಿ ಉಚಿತವಾಗಿ ಅಧ್ಯಯನ ಮಾಡಲು ಯಾರಾದರೂ ನಿಮ್ಮನ್ನು ಭೇಟಿಮಾಡಲು ನೀವು ಬಯಸುವುದಾದರೆ, ದಯವಿಟ್ಟು 2ನೆಯ ಪುಟದಲ್ಲಿ ಕೊಡಲ್ಪಟ್ಟಿರುವ ತಕ್ಕದಾದ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳಿಗೆ ಬರೆಯಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ