ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ”
    ಕಾವಲಿನಬುರುಜು—2003 | ಅಕ್ಟೋಬರ್‌ 15
    • “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ”

      ಇಲ್ಲಿರುವ ಚಿತ್ರದಲ್ಲಿ ನೀವು ನೋಡಸಾಧ್ಯವಿರುವಂತೆ, ಒಟ್ಟಿಗೆ ಉಳುತ್ತಿರುವಂಥ ಈ ಒಂಟೆ ಹಾಗೂ ಎತ್ತಿಗೆ ತುಂಬ ಕಷ್ಟವಾಗುತ್ತಿರುವಂತೆ ತೋರುತ್ತದೆ. ಒಂದು ನೊಗವು, ಒಂದೇ ಆಕಾರದ ಹಾಗೂ ಸಮಾನ ಬಲವುಳ್ಳ ಎರಡು ಪ್ರಾಣಿಗಳಿಗೋಸ್ಕರ ಸಿದ್ಧಗೊಳಿಸಲ್ಪಟ್ಟಿರುತ್ತದೆ. ಆದರೆ ಈ ಎರಡು ಪ್ರಾಣಿಗಳನ್ನು ಜೊತೆಯಾಗಿ ಒಟ್ಟುಗೂಡಿಸಿರುವ ನೊಗವು, ಇವೆರಡೂ ಕಷ್ಟಪಡುವಂತೆ ಮಾಡುತ್ತದೆ. ಇಂಥ ಭಾರವನ್ನೆಳೆಯುವ ಪಶುಗಳ ಹಿತಕ್ಷೇಮದ ಕುರಿತು ಚಿಂತಿಸುವಾತನಾಗಿದ್ದ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು.” (ಧರ್ಮೋಪದೇಶಕಾಂಡ 22:10) ಒಂದು ಎತ್ತು ಹಾಗೂ ಒಂದು ಒಂಟೆಯ ವಿಷಯದಲ್ಲೂ ಇದೇ ತತ್ತ್ವವು ಅನ್ವಯವಾಗುತ್ತಿತ್ತು.

      ಸಾಮಾನ್ಯವಾಗಿ ಒಬ್ಬ ರೈತನು ತನ್ನ ಪ್ರಾಣಿಗಳ ಮೇಲೆ ಈ ರೀತಿಯ ತೊಂದರೆಯನ್ನು ಬರಗೊಡಿಸುತ್ತಿರಲಿಲ್ಲ. ಆದರೆ ಅವನ ಬಳಿ ಎರಡು ಎತ್ತುಗಳು ಇಲ್ಲದಿರುವಲ್ಲಿ, ತನ್ನ ಬಳಿ ಲಭ್ಯವಿರುವ ಎರಡು ಪ್ರಾಣಿಗಳನ್ನೇ ಅವನು ನೊಗಕ್ಕೆ ಕಟ್ಟುವ ಸಾಧ್ಯತೆಯಿತ್ತು. ಈ ಚಿತ್ರದಲ್ಲಿರುವ 19ನೆಯ ಶತಮಾನದ ರೈತನು ಇದನ್ನೇ ಮಾಡಲು ನಿರ್ಧರಿಸಿದನು ಎಂಬುದು ಸುಸ್ಪಷ್ಟ. ಅವುಗಳ ಆಕಾರ ಹಾಗೂ ತೂಕಗಳಲ್ಲಿ ಭಿನ್ನತೆಯಿರುವುದರಿಂದ, ಬಲಹೀನವಾಗಿರುವ ಪ್ರಾಣಿಯು ಇನ್ನೊಂದು ಪ್ರಾಣಿಯೊಂದಿಗೆ ಹೆಜ್ಜೆಹಾಕುತ್ತಾ ಮುಂದುವರಿಯಲು ಬಹಳ ಶ್ರಮಿಸಬೇಕಾಗುತ್ತದೆ ಮತ್ತು ಬಲಿಷ್ಠ ಪ್ರಾಣಿಯು ಅತ್ಯಧಿಕ ಹೊರೆಯನ್ನು ಹೊರಬೇಕಾಗುತ್ತದೆ.

      ನಮಗೆ ಪ್ರಾಮುಖ್ಯವಾದ ಒಂದು ಪಾಠವನ್ನು ಕಲಿಸಲಿಕ್ಕಾಗಿ ಅಪೊಸ್ತಲ ಪೌಲನು ಅಸಮಾನ ರೀತಿಯ ನೊಗಕ್ಕೆ ಸಿಕ್ಕಿಸಿಕೊಳ್ಳುವುದರ ಕುರಿತಾದ ದೃಷ್ಟಾಂತವನ್ನು ಉಪಯೋಗಿಸಿದನು. ಅವನು ಬರೆದುದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?” (2 ಕೊರಿಂಥ 6:​14, 15) ಹಾಗಾದರೆ ಒಬ್ಬ ಕ್ರೈಸ್ತನು ಅಸಮಾನ ರೀತಿಯ ನೊಗಕ್ಕೆ ತನ್ನನ್ನು ಹೇಗೆ ಸಿಕ್ಕಿಸಿಕೊಳ್ಳುವ ಸಾಧ್ಯತೆಯಿದೆ?

      ಒಂದು ವಿಧವು ಯಾವುದೆಂದರೆ, ಕ್ರೈಸ್ತನೊಬ್ಬನು ತನ್ನ ನಂಬಿಕೆಗಳನ್ನು ಅನುಮೋದಿಸದಿರುವಂಥ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದೇ. ಅಂಥ ದಂಪತಿಯು ಮೂಲಭೂತ ವಾದಾಂಶಗಳ ವಿಷಯದಲ್ಲೇ ಪರಸ್ಪರ ಸಮ್ಮತಿಸುವುದಿಲ್ಲವಾದ್ದರಿಂದ, ಅಂಥ ಒಂದು ಬಂಧನವು ಎರಡೂ ಪಕ್ಷಗಳವರಿಗೆ ಕಷ್ಟಕರವಾದದ್ದಾಗಿ ಪರಿಣಮಿಸಸಾಧ್ಯವಿದೆ.

      ಯೆಹೋವನು ವಿವಾಹವನ್ನು ಆರಂಭಿಸಿದಾಗ, ಅವನು ಪತ್ನಿಗೆ “ಸಹಕಾರಿ”ಯ ಪಾತ್ರವನ್ನು ಕೊಟ್ಟನು. (ಆದಿಕಾಂಡ 2:18) ತದ್ರೀತಿಯಲ್ಲಿ, ಪ್ರವಾದಿ ಮಲಾಕಿಯನ ಮೂಲಕ ದೇವರು ಒಬ್ಬ ಪತ್ನಿಯನ್ನು “ಸಹಚಾರಿಣಿ”ಯೆಂದು ಸಂಬೋಧಿಸಿದನು. (ಮಲಾಕಿಯ 2:14) ಹೊರೆಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾ, ಪ್ರಯೋಜನಗಳನ್ನು ಸಮವಾಗಿ ಕೊಯ್ಯುತ್ತಾ, ವಿವಾಹಿತ ದಂಪತಿಗಳು ಒಂದೇ ರೀತಿಯ ಆತ್ಮಿಕ ದಿಕ್ಕಿನಲ್ಲಿ ಒಟ್ಟಿಗೆ ನೊಗವನ್ನು ಎಳೆಯುವಂತೆ ನಮ್ಮ ಸೃಷ್ಟಿಕರ್ತನು ಬಯಸುತ್ತಾನೆ.

      “ಕರ್ತನಲ್ಲಿ ಮಾತ್ರ” ವಿವಾಹವಾಗುವ ಮೂಲಕ ಒಬ್ಬ ಕ್ರೈಸ್ತನು ನಮ್ಮ ಸ್ವರ್ಗೀಯ ತಂದೆಯ ಸಲಹೆಗೆ ಗೌರವವನ್ನು ತೋರಿಸುತ್ತಾನೆ. (1 ಕೊರಿಂಥ 7:​39, NW) ಇದು ಒಂದು ಐಕ್ಯ ವಿವಾಹಕ್ಕೆ ಭದ್ರವಾದ ತಳಪಾಯವನ್ನು ಹಾಕುತ್ತದೆ. ವಿಶೇಷ ಅರ್ಥದಲ್ಲಿ ಪತಿಪತ್ನಿಯರು ‘ನಿಜವಾದ ಜೊತೆಕೆಲಸದವರಾಗಿ’ ದೇವರ ಸೇವೆಮಾಡುವಾಗ, ಅದು ಆತನಿಗೆ ಸ್ತುತಿ ಹಾಗೂ ಮಹಿಮೆಯನ್ನು ತರಸಾಧ್ಯವಿದೆ.​—ಫಿಲಿ 4:3.

  • ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೊ?
    ಕಾವಲಿನಬುರುಜು—2003 | ಅಕ್ಟೋಬರ್‌ 15
    • ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೊ?

      ಈ ತೊಂದರೆಯುಕ್ತ ಲೋಕದಲ್ಲೂ ದೇವರ, ಆತನ ರಾಜ್ಯದ ಮತ್ತು ಮಾನವಕುಲಕ್ಕಾಗಿ ಆತನ ಆಶ್ಚರ್ಯಕರ ಉದ್ದೇಶದ ನಿಷ್ಕೃಷ್ಟ ಜ್ಞಾನದಿಂದ ನೀವು ಸಂತೋಷವನ್ನು ಗಳಿಸಸಾಧ್ಯವಿದೆ. ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಬೈಬಲಿನ ಕುರಿತಾಗಿ ಉಚಿತವಾಗಿ ಅಧ್ಯಯನ ಮಾಡಲು ಯಾರಾದರೂ ನಿಮ್ಮ ಮನೆಯನ್ನು ಸಂದರ್ಶಿಸುವಂತೆ ನೀವು ಬಯಸುವುದಾದರೆ, ದಯವಿಟ್ಟು 2ನೆಯ ಪುಟದಲ್ಲಿ ಕೊಡಲ್ಪಟ್ಟಿರುವ ತಕ್ಕದಾದ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳಿಗೆ ಬರೆಯಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ