ಬೈಬಲಿನಲ್ಲಿರುವ ರತ್ನಗಳು | ಯೋಬ 1-5
ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು
ಇಸ್ರಾಯೇಲ್ಯರು ಐಗುಪ್ತದಲ್ಲಿ ಬಂಧಿವಾಸಿಗಳಾಗಿದ್ದಾಗ ಯೋಬ ಊಚ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದನು. ಯೋಬ ಇಸ್ರಾಯೇಲ್ಯನಲ್ಲದಿದ್ದರೂ ಯೆಹೋವ ದೇವರನ್ನು ನಿಷ್ಠೆಯಿಂದ ಆರಾಧಿಸುತ್ತಿದ್ದನು. ಅವನಿಗೆ ದೊಡ್ಡ ಕುಟುಂಬ, ಆಸ್ತಿ-ಪಾಸ್ತಿ ಮತ್ತು ಘನತೆ-ಗೌರವವಿತ್ತು. ಅವನು ಜನರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳುತ್ತಾ ಭೇದಭಾವ ಮಾಡದೆ ನ್ಯಾಯತೀರಿಸುತ್ತಿದ್ದನು. ಕಷ್ಟದಲ್ಲಿರುವವರಿಗೆ ಮತ್ತು ಬಡವರಿಗೆ ಉದಾರವಾಗಿ ದಾನ ಮಾಡುತ್ತಿದ್ದನು. ಯೋಬನು ಸಮಗ್ರತೆ ಕಾಪಾಡಿಕೊಂಡನು.
ತನ್ನ ಜೀವನದಲ್ಲಿ ಯೆಹೋವನೇ ತುಂಬಾ ಮುಖ್ಯ ಎಂದು ಯೋಬನು ಸ್ಪಷ್ಟವಾಗಿ ತೋರಿಸಿದನು
ಯೋಬನ ಸಮಗ್ರತೆಯನ್ನು ಸೈತಾನನು ಗಮನಿಸಿದನು. ಯೋಬನು ದೇವರಿಗೆ ವಿಧೇಯನಾಗಿದ್ದಾನೆಂಬ ವಿಷಯವನ್ನು ಸೈತಾನನು ಅಲ್ಲಗಳೆಯಲಿಲ್ಲ. ಬದಲಾಗಿ ಅವನ ಉದ್ದೇಶವನ್ನು ಪ್ರಶ್ನಿಸಿದನು
ಯೋಬನು ಸ್ವಾರ್ಥಕ್ಕಾಗಿ ಯೆಹೋವನನ್ನು ಆರಾಧಿಸುತ್ತಿದ್ದಾನೆಂದು ಸೈತಾನನು ಆರೋಪಿಸಿದನು
ಈ ಆರೋಪ ಸುಳ್ಳೆಂದು ರುಜುಪಡಿಸಲು ನಂಬಿಗಸ್ತ ಯೋಬನನ್ನು ಪರೀಕ್ಷಿಸುವಂತೆ ಯೆಹೋವನು ಅನುಮತಿಸಿದನು. ಸೈತಾನನು ಯೋಬನಿಗೆ ಕಷ್ಟಗಳ ಸುರಿಮಳೆ ಸುರಿಸಿದನು
ಯೋಬ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡಾಗ ಸೈತಾನನು ಎಲ್ಲಾ ಮಾನವರ ಸಮಗ್ರತೆಯ ಬಗ್ಗೆ ಪ್ರಶ್ನಿಸಿದನು
ಯೋಬನು ಪಾಪಮಾಡಲೂ ಇಲ್ಲ, ದೇವರ ಮೇಲೆ ತಪ್ಪು ಹೊರಿಸಲೂ ಇಲ್ಲ