ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ
    ಕಾವಲಿನಬುರುಜು—2010 | ಆಗಸ್ಟ್‌ 15
    • 18, 19. ನಮ್ಮ ಜೊತೆ ಆರಾಧಕರೊಂದಿಗೆ ವ್ಯವಹರಿಸುವಾಗ ಪ್ರೀತಿಪೂರ್ವಕ ದಯೆಯು ನಮ್ಮ ನಾಲಿಗೆಯನ್ನು ಬಿಟ್ಟುಹೋಗಬಾರದು ಏಕೆ?

      18 ಯೆಹೋವನನ್ನು ಆರಾಧಿಸುತ್ತಿರುವ ಇತರರೊಂದಿಗೆ ನಾವು ಮಾಡುವ ಎಲ್ಲ ವ್ಯವಹಾರಗಳಲ್ಲಿ ನಿಷ್ಠೆಯುಳ್ಳ ಪ್ರೀತಿ ತೋರಿಬರಬೇಕು. ಕಷ್ಟಕರ ಸನ್ನಿವೇಶಗಳಲ್ಲೂ ಪ್ರೀತಿಪೂರ್ವಕ ದಯೆಯು ನಮ್ಮ ನಾಲಿಗೆಯನ್ನು ಬಿಟ್ಟುಹೋಗಬಾರದು. ಇಸ್ರಾಯೇಲ್ಯರ ಪ್ರೀತಿಪೂರ್ವಕ ದಯೆಯು ‘ಇಬ್ಬನಿಗೆ ಸಮಾನವಾಗಿ ಬೇಗನೆ ಮಾಯವಾಗಿ ಹೋದಾಗ’ ಯೆಹೋವನು ಅಸಂತೋಷಗೊಂಡನು. (ಹೋಶೇ. 6:4, 6) ಅದಕ್ಕೆ ಬದಲಾಗಿ ನಾವು ಪ್ರೀತಿಪೂರ್ವಕ ದಯೆಯನ್ನು ಕ್ರಮವಾಗಿ ತೋರಿಸುವಾಗ ಯೆಹೋವನು ಸಂತೋಷಗೊಳ್ಳುತ್ತಾನೆ. ಈ ಗುಣವನ್ನು ಅನುಸರಿಸುವವರನ್ನು ಆತನು ಹೇಗೆ ಆಶೀರ್ವದಿಸುತ್ತಾನೆ ಎಂಬುದನ್ನು ಪರಿಗಣಿಸಿರಿ.

  • ಸಮಯನಿಷ್ಠೆ ಏಕೆ ಬೇಕು?
    ಕಾವಲಿನಬುರುಜು—2010 | ಆಗಸ್ಟ್‌ 15
    • ಸಮಯನಿಷ್ಠೆ ಏಕೆ ಬೇಕು?

      ಸಮಯನಿಷ್ಠೆ ತೋರಿಸುವುದು ಅಥವಾ ಸಮಯಕ್ಕೆ ಸರಿಯಾಗಿ ಕ್ರಿಯೆಗೈಯುವುದು ಅಷ್ಟೇನೂ ಸುಲಭವಲ್ಲ. ಏಕೆಂದರೆ ಬಹಳ ದೂರದ ಪ್ರಯಾಣ, ವಾಹನ ದಟ್ಟಣೆ ಮತ್ತು ಕಾರ್ಯನಿರತ ದಿನಚರಿಗಳಂಥ ಅನೇಕ ಸವಾಲುಗಳು ನಮ್ಮ ಮುಂದಿರಬಹುದು. ಆದರೂ ಸಮಯಕ್ಕೆ ಸರಿಯಾಗಿ ಕಾರ್ಯನಡಿಸುವುದು ಪ್ರಾಮುಖ್ಯ. ಉದಾಹರಣೆಗೆ, ಕೆಲಸದ ಸ್ಥಳದಲ್ಲಿ ಸಮಯನಿಷ್ಠೆಯುಳ್ಳವನನ್ನು ಸಾಮಾನ್ಯವಾಗಿ ಭರವಸಾರ್ಹನೂ ಶ್ರದ್ಧೆಯುಳ್ಳವನೂ ಎಂದು ಪರಿಗಣಿಸಲಾಗುತ್ತದೆ. ಆದರೆ ಸಮಯ ಮೀರಿ ಬರುವವನು ಬೇರೆಯವರ ಕೆಲಸವನ್ನು ಹಾಗೂ ಉತ್ಪಾದನೆ ಅಥವಾ ಸೇವೆಗಳ ಗುಣಮಟ್ಟವನ್ನೂ ಬಾಧಿಸುತ್ತಾನೆ. ವಿದ್ಯಾರ್ಥಿಯು ತಡವಾಗಿ ಬರುವುದಾದರೆ ಕೆಲವೊಂದು ತರಗತಿಗಳು ತಪ್ಪಿಹೋಗುತ್ತವೆ. ಹೀಗೆ ಅವನ ಶೈಕ್ಷಣಿಕ ಪ್ರಗತಿಯು ಕುಂಠಿತಗೊಳ್ಳಬಹುದು. ದಂತವೈದ್ಯ ಅಥವಾ ಇತರ ವೈದ್ಯರ ಭೇಟಿಗೆ ಗೊತ್ತುಪಡಿಸಿದ ಸಮಯದಲ್ಲಿ ಹೋಗದಿದ್ದರೆ ಅದು ನಮ್ಮ ಔಷಧೋಪಚಾರ ಅಥವಾ ಚಿಕಿತ್ಸೆಯನ್ನು ಬಾಧಿಸಬಹುದು.

      ಆದರೆ ಕೆಲವೊಂದು ಸ್ಥಳಗಳಲ್ಲಿ ಸಮಯನಿಷ್ಠೆಗೆ ಅಷ್ಟೊಂದು ಮಹತ್ವವನ್ನು ಕೊಡಲಾಗುವುದಿಲ್ಲ. ಅಂಥ ಪರಿಸರದಲ್ಲಿ ಬೆಳೆದವರಿಗೆ ತಡವಾಗಿ ಬರುವುದು ವಾಡಿಕೆಯಾಗಿ ಹೋಗಬಹುದು. ನಮ್ಮ ಕುರಿತು ಇದು ನಿಜವಾಗಿರುವಲ್ಲಿ ಸಮಯಕ್ಕೆ ಸರಿಯಾಗಿ ಬರುವ ಅಪೇಕ್ಷೆಯನ್ನು ಬೆಳೆಸಿಕೊಳ್ಳುವುದು ಪ್ರಾಮುಖ್ಯ. ಸಮಯನಿಷ್ಠೆಯ ಮಹತ್ವವನ್ನು ಗಣ್ಯಮಾಡುವುದು ನಾವು ಸಮಯನಿಷ್ಠರಾಗಿರುವಂತೆ ಖಂಡಿತ ಸಹಾಯಮಾಡುತ್ತದೆ. ನಾವೇಕೆ ಸಮಯನಿಷ್ಠರಾಗಿರಬೇಕು? ಸಮಯನಿಷ್ಠೆ ತೋರಿಸುವುದನ್ನು ಕಷ್ಟಕರವನ್ನಾಗಿ ಮಾಡುವ ಸವಾಲುಗಳನ್ನು ಹೇಗೆ ಎದುರಿಸಬಲ್ಲೆವು? ಸಮಯನಿಷ್ಠರಾಗಿರುವುದರಿಂದ ಯಾವ ಪ್ರಯೋಜನಗಳು ಸಿಗಬಲ್ಲವು?

      ಯೆಹೋವನು ಸಮಯನಿಷ್ಠೆಯುಳ್ಳ ದೇವರು

      ನಾವು ಆರಾಧಿಸುವ ದೇವರನ್ನು ಅನುಕರಿಸಲು ಬಯಸುವುದೇ ನಾವು ಸಮಯನಿಷ್ಠರಾಗಿರಲು ಪ್ರಮುಖ ಕಾರಣ. (ಎಫೆ. 5:1) ಸಮಯನಿಷ್ಠೆಯಲ್ಲಿ ಯೆಹೋವನು ಅತ್ಯುತ್ತಮ

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ