ಗೀತೆ 126
ನಮ್ಮ ಪ್ರೀತಿಯ ಶ್ರಮ
1. ಯೆಹೋವಾ, ಬಂದಿದ್ದೇವೆ
ಹೃತ್ಪೂರ್ವಕ ಪ್ರಾರ್ಥನೆಗೆ.
ವರ್ಣಿಸಲಾಗದು ನಮಗೆ
ನಿನ್ನ ಪಾಲನೆ!
ಪ್ರೀತಿಯ ಶ್ರಮವನು
ಆಶೀರ್ವದಿಸಿದಿ ನೀನು.
ನಮ್ಮ ಶ್ರಮದ ಪುರಾವೆಯು
ಈ ಕಟ್ಟಡವು.
(ಪಲ್ಲವಿ)
ಯೆಹೋವನೇ, ನಮ್ಮ ಸುಯೋಗ
ಈ ಗೃಹ ನಿರ್ಮಾಣ ಕಾರ್ಯ.
ಸೇವಿಸುವೆವು ನಮ್ಮ ಜೀವಮಾನ ನಿನ್ನ,
ನಿಂಗಾಗಲಿ ಸ್ತುತಿ ಸದಾ.
2. ಎಷ್ಟೊಂದು ಹರ್ಷಿತರು,
ಆಪ್ತ ಸ್ನೇಹಿತರು ನಾವು!
ಇದನ್ನೆಷ್ಟೋ ಮಾನ್ಯ ಮಾಡ್ವೆವು
ನಾವು ನಿತ್ಯಕ್ಕೂ!
ನಮ್ಮ ಒಗ್ಗಟ್ಟಿನಲಿ
ವ್ಯಕ್ತ ನಿನ್ನಾತ್ಮವು ಇಲ್ಲಿ.
ನಾಮವ ಸ್ತುತಿಸಿ ಪಡೆದ
ಫಲವು ಭಾರಿ!
(ಪಲ್ಲವಿ)
ಯೆಹೋವನೇ, ನಮ್ಮ ಸುಯೋಗ
ಈ ಗೃಹ ನಿರ್ಮಾಣ ಕಾರ್ಯ.
ಸೇವಿಸುವೆವು ನಮ್ಮ ಜೀವಮಾನ ನಿನ್ನ,
ನಿಂಗಾಗಲಿ ಸ್ತುತಿ ಸದಾ.
(ಕೀರ್ತ. 116:1; 147:1; ರೋಮ. 15:6 ಸಹ ನೋಡಿ.)