ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು ‘ಯೋಗ್ಯ ಮನೋಭಾವ’ ಇರುವವರಿಗೆ ಶಿಷ್ಯರಾಗಲು ಸಹಾಯ ಮಾಡಿ
ಯಾಕೆ ಪ್ರಾಮುಖ್ಯ: ‘ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವ’ ಇರುವವರ ಹೃದಯದಲ್ಲಿ ಸತ್ಯದ ಬೀಜವನ್ನು ಯೆಹೋವನು ಬೆಳೆಸುತ್ತಾನೆ. (ಅಕಾ 13:48; 1ಕೊರಿಂ 3:7) ಇಂಥ ಜನರಿಗೆ ಗಮನ ಕೊಡುವ ಮೂಲಕ ನಾವು ಆತನೊಂದಿಗೆ ಕೆಲಸಮಾಡುತ್ತೇವೆ. (1ಕೊರಿಂ 9:26) ರಕ್ಷಣೆ ಬೇಕಾದರೆ ದೀಕ್ಷಾಸ್ನಾನ ಪಡೆಯಬೇಕು ಎಂದು ಬೈಬಲ್ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. (1ಪೇತ್ರ 3:21) ಅವರು ಬದಲಾವಣೆ ಮಾಡಿಕೊಳ್ಳಲು, ಸಾರಲು ಮತ್ತು ಕಲಿಸಲು, ಯೆಹೋವನಿಗೆ ಸಮರ್ಪಿಸಿಕೊಂಡು ಶಿಷ್ಯರಾಗಲು ನಾವು ಸಹಾಯ ಮಾಡಬೇಕು.—ಮತ್ತಾ 28:19, 20.
ಹೇಗೆ ಮಾಡಬೇಕು:
ವಿದ್ಯಾರ್ಥಿಗಳು ಯೆಹೋವನ ಬಗ್ಗೆ ತಿಳುಕೊಂಡು ಆತನು ಮೆಚ್ಚುವ ರೀತಿ ನಡೆಯಲು ಸಹಾಯ ಮಾಡುವುದೇ ಅಧ್ಯಯನದ ಉದ್ದೇಶ ಎಂದು ತಿಳಿಸಿ.—ಯೋಹಾ 17:3
ದುಶ್ಚಟಗಳು ಮತ್ತು ಕೆಟ್ಟವರ ಸಹವಾಸದಂಥ ಅಡ್ಡಿತಡೆಗಳನ್ನು ಜಯಿಸಿ ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ಅವರಿಗೆ ಸಹಾಯ ಮಾಡಿ
ಅವರ ದೀಕ್ಷಾಸ್ನಾನದ ಮುಂಚೆ ಮತ್ತು ನಂತರ ಅವರನ್ನು ಬಲಪಡಿಸುತ್ತಾ ಪ್ರೋತ್ಸಾಹಿಸುತ್ತಾ ಇರಿ.—ಅಕಾ 14:22
ಯೆಹೋವನು ಯಾವತ್ತೂ ನಿನ್ನ ಕೈಬಿಡಲ್ಲ ಎಂಬ ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆಯಲು ಯಾಕೆ ಕೆಲವರು ಹಿಂಜರಿಯುತ್ತಾರೆ?
ಬೈಬಲ್ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಪ್ರಗತಿ ಮಾಡಲು ಹಿರಿಯರು ಹೇಗೆ ಸಹಾಯ ಮಾಡಬಹುದು?
ಯೆಶಾಯ 41:10 ಯೆಹೋವನ ಬಗ್ಗೆ ಏನು ತಿಳಿಸುತ್ತದೆ?
ನಾವು ಅಪರಿಪೂರ್ಣರಾದರೂ ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಸೇವೆ ಮಾಡಲು ಯಾವ ಗುಣಗಳು ಸಹಾಯ ಮಾಡುತ್ತವೆ?
ಶಿಷ್ಯರನ್ನಾಗಿ ಮಾಡುವುದರಲ್ಲಿ ನಾವು ಯೆಹೋವನೊಟ್ಟಿಗೆ ಹೇಗೆ ಕೆಲಸ ಮಾಡಬಹುದು?