ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪ್ರಗತಿ ಮಾಡದಿದ್ದಾಗ ಬೈಬಲ್ ಅಧ್ಯಯನವನ್ನು ನಿಲ್ಲಿಸಿಬಿಡಿ
ಯಾಕೆ ಪ್ರಾಮುಖ್ಯ: ರಕ್ಷಣೆ ಬೇಕೆಂದರೆ ಯೆಹೋವನ ಹೆಸರಲ್ಲಿ ನಂಬಿಕೆ ಇಡಬೇಕು. (ರೋಮ 10:13, 14) ಆದರೆ ಎಲ್ಲಾ ಬೈಬಲ್ ವಿದ್ಯಾರ್ಥಿಗಳು ಯೆಹೋವನ ಮಟ್ಟಗಳಿಗೆ ತಕ್ಕಂತೆ ಜೀವಿಸಲು ಬಯಸಲ್ಲ. ಅಂಥವರ ಜೊತೆ ಸುಮಾರು ಸಮಯದಿಂದ ಬೈಬಲ್ ಅಧ್ಯಯನ ನಡೆಯುತ್ತಿದ್ದರೂ ಅವರು ಪ್ರಗತಿನೇ ಮಾಡುತ್ತಿಲ್ಲ ಅಂತ ಗೊತ್ತಾದರೆ ಅಧ್ಯಯನವನ್ನು ನಿಲ್ಲಿಸುವುದು ಒಳ್ಳೇದು. ಆ ಸಮಯವನ್ನು ಯೆಹೋವನು ಯಾರನ್ನು ತನ್ನ ಮತ್ತು ತನ್ನ ಸಂಘಟನೆ ಕಡೆಗೆ ಸೆಳೆಯಲು ಬಯಸುತ್ತಾನೋ ಅಂಥವರಿಗೆ ಕೊಡಬೇಕು. (ಯೋಹಾ 6:44) ಅಧ್ಯಯನ ನಿಲ್ಲಿಸಿದ ಮೇಲೆ ಆ ವ್ಯಕ್ತಿ ಮುಂದೆ ಯಾವತ್ತಾದರೂ “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ತನ್ನಲ್ಲಿ ಬಂದಿದೆ ಎಂದು ತೋರಿಸಿಕೊಡುವುದಾದರೆ ಅಧ್ಯಯನವನ್ನು ಖಂಡಿತ ಮುಂದುವರಿಸಬಹುದು.—ಅಕಾ 13:48.
ಹೇಗೆ ಮಾಡಬೇಕು:
ನಿಷ್ಕೃಷ್ಟ ಜ್ಞಾನ ಪಡೆಯಬೇಕೆಂಬ ಆಸೆ ವಿದ್ಯಾರ್ಥಿಗೆ ಇರುವುದರಿಂದ ಅವರನ್ನು ಶ್ಲಾಘಿಸಿ.—1ತಿಮೊ 2:4
ಬೈಬಲಿಂದ ಅವರು ಕಲಿತ ವಿಷಯಗಳನ್ನು ಅನ್ವಯಿಸಿಕೊಳ್ಳುವುದು ಮುಖ್ಯ ಎಂದು ಹೇಳಿ.—ಲೂಕ 6:46-49
ಬಿತ್ತುವವನ ಬಗ್ಗೆ ಯೇಸು ಹೇಳಿದ ಕಥೆಯನ್ನು ಚರ್ಚಿಸಿ, ಪ್ರಗತಿ ಮಾಡಲು ಯಾವುದು ತಡೆಯುತ್ತಿದೆ ಎಂದು ಕೇಳಿ.—ಮತ್ತಾ 13:18-23
ಯಾಕೆ ಬೈಬಲ್ ಅಧ್ಯಯನವನ್ನು ನಿಲ್ಲಿಸುತ್ತಿದ್ದೀರಿ ಎಂದು ಜಾಣ್ಮೆಯಿಂದ ವಿವರಿಸಿ
ಆಗಾಗ ಫೋನ್ ಮಾಡುತ್ತೇನೆ ಎಂದು ಹೇಳಿ; ಅವರು ಮುಂದೆ ಬದಲಾವಣೆ ಮಾಡಿಕೊಂಡರೆ ಅಧ್ಯಯನ ಮುಂದುವರಿಸೋಣ ಎಂದು ಹೇಳಿ
ವಿಡಿಯೋ ನೋಡಿದ ಮೇಲೆ ಈ ಪ್ರಶ್ನೆಗಳಿಗೆ ಉತ್ತರ ಹೇಳಿ:
ವಿದ್ಯಾರ್ಥಿ ಪ್ರಗತಿ ಮಾಡುತ್ತಿಲ್ಲ ಅಂತ ವಿಡಿಯೋದಲ್ಲಿ ನೋಡಿದ ಸಂಭಾಷಣೆಯಿಂದ ಹೇಗೆ ಗೊತ್ತಾಗುತ್ತದೆ?
ವಿದ್ಯಾರ್ಥಿ ಪ್ರಗತಿ ಮಾಡಬೇಕಾಗಿದೆ ಎಂದು ಪ್ರಚಾರಕ ಹೇಗೆ ತಿಳಿಸುತ್ತಾರೆ?
ಮುಂದೆ ಅಧ್ಯಯನ ಮುಂದುವರಿಸುವುದರ ಬಗ್ಗೆ ಪ್ರಚಾರಕ ಏನು ಹೇಳುತ್ತಾರೆ?