ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಫೆಬ್ರವರಿ 11-17
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w14 6/1 ಪುಟ 11 ಪ್ಯಾರ 1
ನನ್ನ ಪೂರ್ವಜರ ಬಗ್ಗೆ ನಾನು ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು?
ಅನೀತಿವಂತರಿಗೆ ಪುನರುತ್ಥಾನವಾದಾಗ ಅವರು ಹಿಂದೆ ಮಾಡಿದ ಕ್ರಿಯೆಗಳ ಆಧಾರದಲ್ಲಿ ಅವರಿಗೆ ತೀರ್ಪಾಗಲಿದೆಯಾ? ಇಲ್ಲ. ರೋಮನ್ನರಿಗೆ 6:7 ಹೇಳುವುದು: “ಸತ್ತಿರುವವನು ತನ್ನ ಪಾಪದಿಂದ ಮುಕ್ತನಾಗಿದ್ದಾನೆ.” ಇಲ್ಲಿ ತಿಳಿಸುವ ಪ್ರಕಾರ ಅನೀತಿವಂತರು ಸಾಯುವ ಮೂಲಕ ತಮ್ಮ ಪಾಪಗಳಿಗಾಗಿ ತಕ್ಕ ಶಿಕ್ಷೆಯನ್ನು ಅನುಭವಿಸಿರುತ್ತಾರೆ. ಹಾಗಾಗಿ ಅವರು ಪುನರುತ್ಥಾನವಾದ ನಂತರ ಏನು ಮಾಡುತ್ತಾರೋ ಅದರ ಆಧಾರದ ಮೇಲೆ ಅವರಿಗೆ ತೀರ್ಪಾಗುತ್ತದೆ. ಸಾಯುವ ಮುಂಚೆ ಗೊತ್ತಿಲ್ಲದೆ ಏನು ಮಾಡಿದರೋ ಅದರ ಆಧಾರದ ಮೇಲಲ್ಲ. ಇದರಿಂದ ಅವರಿಗೆ ಹೇಗೆ ಪ್ರಯೋಜನ ಸಿಗುತ್ತದೆ?
ಫೆಬ್ರವರಿ 25—ಮಾರ್ಚ್ 3
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 ಪುಟ 1260 ಪ್ಯಾರ 2
ಹೊಟ್ಟೆಕಿಚ್ಚು
ಅಂದರೆ ತಪ್ಪಾದ ಹುರುಪು. ಒಬ್ಬ ವ್ಯಕ್ತಿ ಹುರುಪು ತೋರಿಸಲು ಅಥವಾ ಹೊಟ್ಟೆಕಿಚ್ಚುಪಡಲು ಒಂದು ಬಲವಾದ ಕಾರಣ ಇರಬಹುದು. ಆದರೂ ಅದು ತಪ್ಪಾದ ಹುರುಪು ಆಗಿದೆ ಮತ್ತು ದೇವರು ಅದನ್ನು ಮೆಚ್ಚುವುದಿಲ್ಲ. ಒಂದನೇ ಶತಮಾನದ ಅನೇಕ ಯೆಹೂದ್ಯರಲ್ಲಿ ತಪ್ಪಾದ ಹುರುಪಿತ್ತು. ಮೋಶೆಯ ಧರ್ಮಶಾಸ್ತ್ರದ ನಿಯಮಗಳನ್ನು ಪಾಲಿಸಿ ನೀತಿವಂತರಾಗಲು ಬಯಸಿದರು. ಆದರೆ ಅವರ ಆ ಹುರುಪು ತಪ್ಪಾಗಿತ್ತೆಂದು ಪೌಲನು ತೋರಿಸಿದನು. ಯಾಕೆಂದರೆ ನಿಷ್ಕೃಷ್ಟ ಜ್ಞಾನದ ಕೊರತೆ ಅವರಲ್ಲಿತ್ತು. ಹಾಗಾಗಿ ದೇವರಿಂದ ದೊರಕುವ ನಿಜ ನೀತಿಯನ್ನು ಅವರು ಪಡೆಯಲಿಲ್ಲ. ಆ ನೀತಿಯನ್ನು ಪಡೆದುಕೊಳ್ಳಲು ಮತ್ತು ಧರ್ಮಶಾಸ್ತ್ರದ ಶಾಪದಿಂದ ಮುಕ್ತರಾಗಲು ಅವರು ತಮ್ಮ ತಪ್ಪನ್ನು ಅರಿತುಕೊಂಡು ಕ್ರಿಸ್ತನ ಮೂಲಕ ದೇವರ ಕಡೆಗೆ ತಿರುಗಿಕೊಳ್ಳಬೇಕಿತ್ತು. (ರೋಮ 10:1-10) ತಾರ್ಸದ ಸೌಲನು ಅಂಥವರಲ್ಲಿ ಒಬ್ಬನು. ಯೆಹೂದಿ ಮತದಲ್ಲಿ ಅವನಿಗೆ ಅತಿಯಾದ ಹುರುಪಿತ್ತು. ಅದೆಷ್ಟು ಮಿತಿಮೀರಿತ್ತೆಂದರೆ ಅವನು “ದೇವರ ಸಭೆಯನ್ನು ಹಿಂಸಿಸುತ್ತಾ ಅದನ್ನು ಧ್ವಂಸಗೊಳಿಸುತ್ತಾ” ಇದ್ದನು. ಅವನು ಧರ್ಮಶಾಸ್ತ್ರದ ನಿಯಮಗಳನ್ನು ಬಹಳ ಕಟ್ಟುನಿಟ್ಟಿನಿಂದ ಪಾಲಿಸುತ್ತಿದ್ದನು. ಆ ವಿಷಯದಲ್ಲಿ ತಾನು “ನಿರ್ದೋಷಿ ಎಂದು ತೋರಿಸಿಕೊಟ್ಟವನು” ಅವನು. (ಗಲಾ 1:13, 14; ಫಿಲಿ 3:6) ಆದರೂ ಯೆಹೂದಿ ಮತದ ಬಗ್ಗೆ ಅವನಿಗಿದ್ದ ಹುರುಪು ತಪ್ಪಾಗಿತ್ತು. ಆದರೆ ಪ್ರಾಮಾಣಿಕ ಮನಸ್ಸಿನಿಂದ ಅದನ್ನು ಮಾಡಿದ್ದನು. ಆ ಕಾರಣಕ್ಕಾಗಿ ಯೆಹೋವನು ಅವನಿಗೆ ಕ್ರಿಸ್ತನ ಮೂಲಕ ಅಪಾತ್ರ ದಯೆಯನ್ನು ತೋರಿಸಿ ಸತ್ಯಾರಾಧನೆಯ ಮಾರ್ಗದಲ್ಲಿ ನಡೆಸಿದನು.—1ತಿಮೊ 1:12, 13.