ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 7
  • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • “ಇಡೀ ಭೂಮಿಯಲ್ಲಿ” ಮಿಷನರಿಗಳು
    ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು
  • ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 7
ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗುತ್ತಿರುವ ಅನೇಕ ಸಹೋದರ ಸಹೋದರಿಯರು.

ನಮ್ಮ ಕ್ರೈಸ್ತ ಜೀವನ

ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?

ನಿಮ್ಮ ವಯಸ್ಸು 23-65 ವರ್ಷದೊಳಗೆ ಇದ್ಯಾ? ಪೂರ್ಣ ಸಮಯದ ಸೇವೆ ಮಾಡ್ತಾ ಇದ್ದೀರಾ? ಒಳ್ಳೇ ಆರೋಗ್ಯ ಇದ್ಯಾ? ಅಗತ್ಯ ಇದ್ದ ಕಡೆ ಹೋಗಿ ಸೇವೆ ಮಾಡಲು ಆಗುತ್ತಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ರ ಹೌದು ಆಗಿದ್ರೆ ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕೋದ್ರ ಬಗ್ಗೆ ಯೋಚಿಸಿದ್ದೀರಾ? ಈ ಶಾಲೆಯ ಆರಂಭದಿಂದ ಇಂದಿನವರೆಗೆ ಸಾವಿರಾರು ದಂಪತಿಗಳು, ಅವಿವಾಹಿತ ಸಹೋದರ ಸಹೋದರಿಯರು ಹಾಜರಾಗಿ ತುಂಬ ಪ್ರಯೋಜನ ಪಡೆದಿದ್ದಾರೆ. ಆದ್ರೆ ಈ ಶಾಲೆಗೆ ಹಾಜರಾಗಲು ಇನ್ನೂ ಹೆಚ್ಚು ಅವಿವಾಹಿತ ಸಹೋದರರ ಅಗತ್ಯವಿದೆ. ಹಾಗಾಗಿ ಯೆಹೋವನನ್ನ ಮೆಚ್ಚಿಸೋಕೆ, ಆತನ ಮಗನನ್ನ ಅನುಕರಿಸೋಕೆ ನಿಮಗಿರೋ ಬಯಕೆಯನ್ನ ಹೆಚ್ಚಿಸಲು ಪ್ರಾರ್ಥಿಸಿ. (ಕೀರ್ತ 40:8; ಮತ್ತಾ 20:28; ಇಬ್ರಿ 10:7) ನಂತ್ರ ಈ ಶಾಲೆಗೆ ಅರ್ಹರಾಗಲು ಕೆಲಸ ಅಥವಾ ವೈಯಕ್ತಿಕ ವಿಷಯದಲ್ಲಿ ಬದಲಾವಣೆ ಮಾಡೋ ಅವಶ್ಯಕತೆ ಇದ್ಯಾ ಅಂತ ಯೋಚಿಸಿ ಅದನ್ನ ಮಾಡಲು ಪ್ರಯತ್ನಿಸಿ.

ಈ ಶಾಲೆಗೆ ಹಾಜರಾದವರಿಗೆ ಯೆಹೋವನ ಸೇವೇಲಿ ಯಾವೆಲ್ಲಾ ಅವಕಾಶಗಳು ಸಿಕ್ಕಿವೆ? ಕೆಲವರಿಗೆ ಬೇರೆ ಭಾಷೆ ಮಾತಾಡೋ ಸ್ಥಳಗಳಿಗೆ ಹೋಗಿ ಸೇವೆ ಮಾಡೋ ಅಥವಾ ಕೆಲವು ದೇಶದ ಮಹಾನಗರಗಳಲ್ಲಿ ವಿಶೇಷ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸೋ ನೇಮಕ ಸಿಕ್ಕಿದೆ. ಇನ್ನೂ ಕೆಲವರು ಬದಲಿ ಸಂಚರಣ ಮೇಲ್ವಿಚಾರಕರಾಗಿ, ಸಂಚರಣ ಮೇಲ್ವಿಚಾರಕರಾಗಿ ಅಥವಾ ಮಿಷನರಿಗಳಾಗಿ ಸೇವೆಮಾಡ್ತಿದ್ದಾರೆ. ಹೀಗೆ ಯೆಹೋವನ ಸೇವೇಲಿ ಮಾಡಲು ತುಂಬಾ ಕೆಲಸ ಇದೆ. ಹಾಗಾಗಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಅಂತ ಹೇಳುತ್ತಾ ಯೆಶಾಯ ತೋರಿಸಿದ ಮನೋಭಾವನ ನೀವೂ ತೋರಿಸಿ.—ಯೆಶಾ 6:8.

ಮಿಷನರಿಗಳು—ಕೊಯ್ಲಿನ ಕೆಲಸಗಾರರು ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಮಿಷನರಿಗಳು—ಕೊಯ್ಲಿನ ಕೆಲಸಗಾರರು’ ಅನ್ನೋ ವಿಡಿಯೋನಲ್ಲಿರೋ ಒಂದು ಸೀನ್‌. ಒಂದು ಮಿಷನರಿ ದಂಪತಿ ಸಾರಲು ಹೋಗುತ್ತಿದ್ದಾರೆ.

    ಮಿಷನರಿಗಳನ್ನ ಹೇಗೆ ಆರಿಸಲಾಗುತ್ತೆ?

  • ‘ಮಿಷನರಿಗಳು—ಕೊಯ್ಲಿನ ಕೆಲಸಗಾರರು’ ಅನ್ನೋ ವಿಡಿಯೋನಲ್ಲಿರೋ ಒಂದು ಸೀನ್‌. ಒಬ್ಬ ಮಿಷನರಿ ಮತ್ತು ಇನ್ನೊಬ್ಬ ಸಹೋದರಿ ಸೇರಿ ಒಬ್ಬ ಸ್ತ್ರೀಯ ಜೊತೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದಾರೆ.

    ಮಿಷನರಿಗಳು ಯಾವ ಒಳ್ಳೇ ಕೆಲಸ ಮಾಡುತ್ತಿದ್ದಾರೆ?

  • ‘ಮಿಷನರಿಗಳು—ಕೊಯ್ಲಿನ ಕೆಲಸಗಾರರು’ ಅನ್ನೋ ವಿಡಿಯೋನಲ್ಲಿರೋ ಒಂದು ಸೀನ್‌. ಸನ್ನೆ ಭಾಷೆ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರೋ ಒಬ್ಬ ಸಹೋದರ ಇನ್ನೊಬ್ಬ ಸಹೋದರನ ಜೊತೆ ವಿಶೇಷ ಸೇವಾ ಸುಯೋಗಕ್ಕಾಗಿ ಅರ್ಜಿ ಹಾಕೋದ್ರ ಬಗ್ಗೆ ಚರ್ಚಿಸುತ್ತಿದ್ದಾನೆ.

    ಮಿಷನರಿ ಸೇವೆ ಮಾಡೋದ್ರಿಂದ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

ರಾಜ್ಯ ಪ್ರಚಾರಕರ ಶಾಲೆ ಬಗ್ಗೆ ಇನ್ನು ಹೆಚ್ಚು ತಿಳಿಯಲು ಬಯಸ್ತೀರಾ? jw.org ವೆಬ್‌ಸೈಟಲ್ಲಿ ಲೈಬ್ರರಿ > ವಿಡಿಯೋಗಳು > ನಮ್ಮ ಚಟುವಟಿಕೆಗಳು > ದೇವಪ್ರಭುತ್ವಾತ್ಮಕ ಶಾಲೆಗಳು ಮತ್ತು ತರಬೇತಿ ಅನ್ನೋ ವಿಭಾಗ ಓಪನ್‌ ಮಾಡಿ. ಯೆಹೋವನ ಬೋಧನೆಗಳಿಂದ ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾದರು ಅನ್ನೋ ವಿಡಿಯೋ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ