ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lffi ಪಾಠ 1
  • ದೇವರಿಂದ ಯಾಕೆ ಕಲಿಯಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರಿಂದ ಯಾಕೆ ಕಲಿಯಬೇಕು?
  • ಎಂದೆಂದೂ ಖುಷಿಯಾಗಿ ಬಾಳೋಣ!​—ದೇವರಿಂದ ಕಲಿಯಲು ಶುರುಮಾಡೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ದೇವರಿಂದ ಯಾಕೆ ಕಲಿಯಬೇಕು?
    ಎಂದೆಂದೂ ಖುಷಿಯಾಗಿ ಬಾಳೋಣ!​—ದೇವರಿಂದ ಕಲಿಯಲು ಶುರುಮಾಡೋಣ
  • ಬೈಬಲನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋದು ಹೇಗೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಬೈಬಲ್‌ ಕಲಿಯೋದನ್ನ ಮುಂದುವರಿಸಿ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!​—ದೇವರಿಂದ ಕಲಿಯಲು ಶುರುಮಾಡೋಣ
lffi ಪಾಠ 1
ಪಾಠ 01. ತೆರೆದಿರುವ ಬೈಬಲ್‌.

ಪಾಠ 01

ದೇವರಿಂದ ಯಾಕೆ ಕಲಿಯಬೇಕು?

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಜೀವನದಲ್ಲಿ ಕಷ್ಟ ಬಂದಾಗ ಅಥವಾ ನಮ್ಮ ಆಪ್ತರನ್ನ ಮರಣದಲ್ಲಿ ಕಳೆದುಕೊಂಡಾಗ ತುಂಬ ಬೇಜಾರಾಗುತ್ತೆ. ಅಂಥ ನೋವಲ್ಲಿರುವಾಗ ನಮಗೆ ಕೆಲವು ಪ್ರಶ್ನೆಗಳೂ ಬರುತ್ತೆ. ತುಂಬ ಜನರಿಗೆ ಪವಿತ್ರ ಗ್ರಂಥದಿಂದ ಅಂದರೆ ಬೈಬಲಿನಿಂದ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಪವಿತ್ರ ಗ್ರಂಥ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕೊಡುತ್ತೆ. ಅಷ್ಟೇ ಅಲ್ಲ ಜೀವನದಲ್ಲಿ ನಾವು ಹೇಗೆ ಖುಷಿ ಖುಷಿಯಾಗಿ ಇರಬಹುದು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿನೂ ಕೊಡುತ್ತೆ. ಇದರ ಬಗ್ಗೆ ಹೆಚ್ಚನ್ನ ಕಲಿಯೋಕೆ ನಿಮಗೆ ಇಷ್ಟ ಇದೆಯಾ?

1. ಯಾವೆಲ್ಲಾ ಪ್ರಶ್ನೆಗಳಿಗೆ ಪವಿತ್ರ ಗ್ರಂಥದಲ್ಲಿ ಉತ್ತರ ಇದೆ?

ನಮಗೆ ಯಾಕಿಷ್ಟು ಕಷ್ಟ ಇದೆ? ನಮ್ಮ ಜೀವನದ ಉದ್ದೇಶ ಏನು? ಈ ಭೂಮಿಯನ್ನ ಯಾರಾದ್ರೂ ಸೃಷ್ಟಿ ಮಾಡಿದ್ರಾ ಅಥವಾ ತನ್ನಿಂದ ತಾನೇ ಬಂತಾ? ಭೂಮಿ ನಾಶ ಆಗುತ್ತಾ? ಇಲ್ವಾ? ಎಲ್ಲರೂ ಶಾಂತಿಯಿಂದ ಇರಬೇಕು ಅಂತ ಬಯಸ್ತಾರೆ ಮತ್ತೆ ಯಾಕೆ ಜಗಳ, ಯುದ್ಧ ಮಾಡ್ತಾರೆ? ಒಬ್ಬ ವ್ಯಕ್ತಿ ಸತ್ತ ಮೇಲೆ ಏನಾಗುತ್ತೆ? ಇವೆಲ್ಲಾ ತುಂಬ ಪ್ರಾಮುಖ್ಯ ಪ್ರಶ್ನೆಗಳು. ಲಕ್ಷಾಂತರ ಜನರು ಪವಿತ್ರ ಗ್ರಂಥದಿಂದ ಈಗಾಗಲೇ ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದಿದ್ದಾರೆ. ನೀವು ಕೂಡ ಕಂಡುಹಿಡಿಯಬೇಕು ಅಂತ ದೇವರ ಇಷ್ಟ.

2. ಜೀವನದಲ್ಲಿ ಖುಷಿಯಾಗಿರೋಕೆ ಪವಿತ್ರ ಗ್ರಂಥ ಹೇಗೆ ಸಹಾಯ ಮಾಡುತ್ತೆ?

ಪವಿತ್ರ ಗ್ರಂಥದಲ್ಲಿ ಒಳ್ಳೊಳ್ಳೇ ಬುದ್ಧಿ ಮಾತುಗಳಿವೆ. ಕುಟುಂಬದಲ್ಲಿ ಸಂತೋಷವಾಗಿರೋದು ಹೇಗೆ? ಒತ್ತಡ, ಚಿಂತೆಯಂಥ ಪರಿಸ್ಥಿತಿಯಿಂದ ಹೊರ ಬರೋದು ಹೇಗೆ? ಮತ್ತು ನಾವು ಜೀವನದಲ್ಲಿ ತೃಪ್ತಿ ಕಂಡುಕೊಳ್ಳೋದು ಹೇಗೆ? ಅಂತ ಪವಿತ್ರ ಗ್ರಂಥ ಹೇಳುತ್ತೆ. ಅಷ್ಟೇ ಅಲ್ಲ, ಪವಿತ್ರ ಗ್ರಂಥದಲ್ಲಿ ಇನ್ನೂ ತುಂಬ ಬುದ್ಧಿ ಮಾತುಗಳಿವೆ. ಅದರ ಬಗ್ಗೆ ಈ ಪುಸ್ತಕದಿಂದ ಕಲಿಯೋಣ. ಈ ಪುಸ್ತಕವನ್ನ ಓದಿ ಮುಗಿಸೋಷ್ಟರಲ್ಲಿ ‘ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳು ನಮಗೆ ಸಹಾಯ ಮಾಡುತ್ತೆ’ ಅನ್ನೋ ಮಾತನ್ನ ನೀವು ಖಂಡಿತ ಒಪ್ಪಿಕೊಳ್ತೀರ.—2 ತಿಮೊತಿ 3:16.

ಪವಿತ್ರ ಗ್ರಂಥವನ್ನ ಓದಿ ಅರ್ಥಮಾಡಿಕೊಳ್ಳೋಕೆ ಈ ಪುಸ್ತಕ ನಿಮಗೆ ಸಹಾಯ ಮಾಡುತ್ತೆ. ಈ ಪುಸ್ತಕದಲ್ಲಿರುವ ವಚನಗಳನ್ನ ತೆರೆದು ಕಲಿತ ವಿಷಯಕ್ಕೆ ಹೋಲಿಸಿ ನೋಡಿ. ಆಗ ಪವಿತ್ರ ಗ್ರಂಥದಲ್ಲಿರೋ ವಿಷಯಗಳನ್ನೇ ಈ ಪುಸ್ತಕದಿಂದ ಕಲಿಯುತ್ತಿದ್ದೀರ ಅಂತ ಗೊತ್ತಾಗುತ್ತೆ.

ಹೆಚ್ಚನ್ನ ತಿಳಿಯೋಣ

ಜನರಿಗೆ ಪವಿತ್ರ ಗ್ರಂಥದಿಂದ ಯಾವ ಪ್ರಯೋಜನ ಆಗಿದೆ, ಅದನ್ನ ಓದೋದ್ರಿಂದ ಹೇಗೆ ಖುಷಿ ಕಂಡುಕೊಳ್ಳಬಹುದು ಮತ್ತು ಅದನ್ನ ಅರ್ಥಮಾಡಿಕೊಳ್ಳೋಕೆ ಯಾಕೆ ಬೇರೆಯವ್ರ ಸಹಾಯ ಪಡೆದುಕೊಳ್ಳಬೇಕು ಅಂತ ತಿಳಿದುಕೊಳ್ಳಿ.

3. ಸರಿಯಾದ ದಾರಿಯಲ್ಲಿ ನಡೆಯಲು ಪವಿತ್ರ ಗ್ರಂಥ ಸಹಾಯ ಮಾಡುತ್ತೆ

ಪವಿತ್ರ ಗ್ರಂಥ ಒಂದು ಟಾರ್ಚ್‌ ತರ. ಜೀವನದ ದಾರಿಯಲ್ಲಿ ಮುಂದೆ ಏನಾಗುತ್ತೆ ಅಂತ ಅದು ನಮಗೆ ತೋರಿಸಿಕೊಡುತ್ತೆ. ಅಷ್ಟೇ ಅಲ್ಲ, ಒಳ್ಳೇ ನಿರ್ಣಯಗಳನ್ನ ಮಾಡಕ್ಕೂ ಸಹಾಯ ಮಾಡುತ್ತೆ.

ಕೀರ್ತನೆ 119:105 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಪವಿತ್ರ ಗ್ರಂಥವನ್ನ ಯಾವುದಕ್ಕೆ ಹೋಲಿಸಲಾಗಿದೆ?

  • ಪವಿತ್ರ ಗ್ರಂಥದ ಬಗ್ಗೆ ನಿಮಗೇನು ಅನಿಸುತ್ತೆ?

ರಾತ್ರಿಯಲ್ಲಿ ಕಲ್ಲು ಬಂಡೆಗಳಿರೋ ನದಿ ತೀರದಲ್ಲಿ ನಡ್ಕೊಂಡು ಹೋಗುತ್ತಿರುವ ವ್ಯಕ್ತಿಗೆ ಮುಂದೆ ಸಾಗೋಕೆ ಟಾರ್ಚ್‌ ಲೈಟ್‌ ಸಹಾಯ ಮಾಡ್ತಿದೆ.

4. ನಮಗಿರೋ ಪ್ರಶ್ನೆಗಳಿಗೆ ಪವಿತ್ರ ಗ್ರಂಥ ಉತ್ತರ ಕೊಡುತ್ತೆ

ಒಬ್ಬ ಸ್ತ್ರೀಗೆ ತುಂಬ ವರ್ಷಗಳಿಂದ ಕೆಲವು ಪ್ರಶ್ನೆಗಳು ಇದ್ದವು. ಆ ಪ್ರಶ್ನೆಗಳು ಅವಳನ್ನ ಯಾವಾಗಲೂ ಕಾಡುತ್ತಿದ್ದವು. ಆದ್ರೆ ಆ ಪ್ರಶ್ನೆಗಳಿಗೆ ಉತ್ತರ ಪವಿತ್ರ ಗ್ರಂಥದಿಂದ ಸಿಕ್ತು. ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ಎಂದಿಗೂ ನಿರೀಕ್ಷೆ ಕಳೆದುಕೊಳ್ಳಬೇಡಿ! (1:48)

  • ವಿಡಿಯೋದಲ್ಲಿದ್ದ ಸ್ತ್ರೀಗೆ ಯಾವೆಲ್ಲಾ ಪ್ರಶ್ನೆಗಳಿತ್ತು?

  • ಆ ಪ್ರಶ್ನೆಗಳಿಗೆಲ್ಲ ಹೇಗೆ ಉತ್ತರ ಸಿಕ್ತು?

ಪ್ರಶ್ನೆಗಳನ್ನ ಕೇಳೋದು ಒಳ್ಳೇದು ಅಂತ ಪವಿತ್ರ ಗ್ರಂಥ ಹೇಳುತ್ತೆ. ಮತ್ತಾಯ 7:7 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ನಿಮಗೆ ಯಾವುದಾದ್ರೂ ಪ್ರಶ್ನೆಗಳು ಇದೆಯಾ? ಆ ಪ್ರಶ್ನೆಗಳಿಗೆ ಬೈಬಲ್‌ನಿಂದ ಉತ್ತರ ತಿಳಿಯೋಕೆ ಬಯಸ್ತೀರಾ?

5. ನೀವು ಪವಿತ್ರ ಗ್ರಂಥ ಓದುವುದನ್ನ ಆನಂದಿಸಬಹುದು

ತುಂಬ ಜನರು ಪವಿತ್ರ ಗ್ರಂಥವನ್ನ ಓದಿ ಆನಂದಿಸುತ್ತಿದ್ದಾರೆ ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

ವಿಡಿಯೋ: ಬೈಬಲ್‌ ಓದುವಿಕೆ (2:05)

  • ವಿಡಿಯೋದಲ್ಲಿ ನೋಡಿದಂತೆ, ಓದುವುದರ ಬಗ್ಗೆ ಯುವಜನರಿಗೆ ಹೇಗನಿಸುತ್ತಿತ್ತು?

  • ಈಗ ಅವರಿಗೆ ಪವಿತ್ರ ಗ್ರಂಥ ಓದೋಕೆ ಯಾಕೆ ಇಷ್ಟ ಆಗುತ್ತೆ?

ಪವಿತ್ರ ಗ್ರಂಥ ನಮಗೆ ಸಾಂತ್ವನ ಮತ್ತು ಮುಂದೆ ಒಳ್ಳೇದಾಗುತ್ತೆ ಅನ್ನೋ ನಿರೀಕ್ಷೆ ಕೊಡುತ್ತೆ. ರೋಮನ್ನರಿಗೆ 15:4 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಪವಿತ್ರ ಗ್ರಂಥ ಕೊಡುವ ನಿರೀಕ್ಷೆ ನಿಮಗೆ ಹೇಗೆ ಸಹಾಯ ಮಾಡುತ್ತೆ?

6. ಬೇರೆಯವರ ಸಹಾಯದಿಂದ ಪವಿತ್ರ ಗ್ರಂಥವನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು

ಪವಿತ್ರ ಗ್ರಂಥವನ್ನ ನಾವಾಗಿಯೇ ಓದುವುದಕ್ಕಿಂತ ಇನ್ನೊಬ್ಬರ ಜೊತೆ ಚರ್ಚೆ ಮಾಡಿದ್ರಿಂದ ತುಂಬ ಪ್ರಯೋಜನವಾಗಿದೆ ಅಂತ ಅನೇಕರು ಹೇಳಿದ್ದಾರೆ. ಅಪೊಸ್ತಲರ ಕಾರ್ಯ 8:26-31 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಪವಿತ್ರ ಗ್ರಂಥವನ್ನ ಹೇಗೆ ಅರ್ಥಮಾಡಿಕೊಳ್ಳಬಹುದು?—ವಚನ 30, 31 ನೋಡಿ.

ಕೊಲಾಜ್‌: 1. ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪ ಇಥಿಯೋಪ್ಯದ ವ್ಯಕ್ತಿಗೆ ದೇವರ ವಾಕ್ಯದ ಅರ್ಥವನ್ನ ವಿವರಿಸ್ತಿದ್ದಾನೆ. 2. ಒಬ್ಬ ಯೆಹೋವನ ಸಾಕ್ಷಿ ಇಬ್ಬರು ಮಕ್ಕಳಿರೋ ತಾಯಿಗೆ ಬೈಬಲನ್ನ ಕಲಿಸುತ್ತಿದ್ದಾಳೆ.

ದೇವರ ಮಾತುಗಳನ್ನ ಅರ್ಥಮಾಡಿಕೊಳ್ಳೋಕೆ ಇಥಿಯೋಪ್ಯದ ವ್ಯಕ್ತಿಗೆ ಇನ್ನೊಬ್ಬರ ಸಹಾಯ ಬೇಕಾಯ್ತು. ಇವತ್ತು ಕೂಡ ತುಂಬ ಜನ ಬೇರೆಯವರ ಸಹಾಯದಿಂದ ಪವಿತ್ರ ಗ್ರಂಥವನ್ನ ಅರ್ಥಮಾಡಿಕೊಳ್ತಿದ್ದಾರೆ

ಕೆಲವರು ಹೀಗಂತಾರೆ: “ಬೈಬಲ್‌ ಹಳೇ ಪುಸ್ತಕ ಅದನ್ನ ಕಲಿಯೋದ್ರಿಂದ ಏನೂ ಪ್ರಯೋಜನ ಇಲ್ಲ.”

  • ನಿಮಗೇನು ಅನಿಸುತ್ತೆ? ಯಾಕೆ ಹಾಗೆ ಅನಿಸುತ್ತೆ?

ನಾವೇನು ಕಲಿತ್ವಿ

ಪ್ರಾಮುಖ್ಯ ಪ್ರಶ್ನೆಗಳಿಗೆ ಬೇಕಾದ ಉತ್ತರವನ್ನ, ಪ್ರತಿದಿನದ ಜೀವನಕ್ಕೆ ಬೇಕಾದ ಸಲಹೆಗಳನ್ನ, ನಮಗೆ ಬೇಕಾದ ಸಾಂತ್ವನವನ್ನ ಮತ್ತು ಭವಿಷ್ಯದಲ್ಲಿ ಒಳ್ಳೇದಾಗುತ್ತೆ ಅನ್ನೋ ನಿರೀಕ್ಷೆಯನ್ನ ಪವಿತ್ರ ಗ್ರಂಥ ಕೊಡುತ್ತೆ.

ನೆನಪಿದೆಯಾ

  • ಪವಿತ್ರ ಗ್ರಂಥದಲ್ಲಿ ಯಾವೆಲ್ಲಾ ಸಲಹೆಗಳಿವೆ?

  • ಪವಿತ್ರ ಗ್ರಂಥದಲ್ಲಿ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರಗಳಿವೆ?

  • ಪವಿತ್ರ ಗ್ರಂಥದಿಂದ ಯಾವೆಲ್ಲಾ ವಿಷ್ಯಗಳನ್ನ ಕಲಿಯೋಕೆ ನಿಮಗಿಷ್ಟ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಪವಿತ್ರ ಗ್ರಂಥದಿಂದ ಈಗಲೂ ನಮಗೆ ಯಾವ ಪ್ರಯೋಜನವಿದೆ ಅನ್ನೋದರ ಬಗ್ಗೆ ತಿಳಿಯಿರಿ.

“ಬೈಬಲ್‌ ಬೋಧನೆಗಳು—ಎಂದೂ ಹಳೇದಾಗದ ವಿವೇಕದ ನುಡಿಗಳು” (ಕಾವಲಿನಬುರುಜು ನಂ. 1 2018)

ಒಬ್ಬ ವ್ಯಕ್ತಿಗೆ ಚಿಕ್ಕಂದಿನಿಂದ ಒಂಟಿತನ ಕಾಡುತ್ತಿತ್ತು. ಅದರಿಂದ ಹೊರ ಬರೋಕೆ ಅವನಿಗೆ ಪವಿತ್ರ ಗ್ರಂಥ ಹೇಗೆ ಸಹಾಯ ಮಾಡಿತು ಅಂತ ನೋಡಿ.

ನನ್ನ ಹೊಸ ಜೀವನದ ಆರಂಭ (2:53)

ಕುಟುಂಬಗಳು ಖುಷಿ ಖುಷಿಯಾಗಿರೋಕೆ ಪವಿತ್ರ ಗ್ರಂಥ ಯಾವೆಲ್ಲಾ ಸಲಹೆಗಳನ್ನ ಕೊಡುತ್ತೆ ಅಂತ ನೋಡಿ.

“ಯಶಸ್ವಿ ಕುಟುಂಬಗಳ 12 ಸೂತ್ರಗಳು” (ಎಚ್ಚರ! ನಂ. 2 2018)

ಈ ಭೂಮಿಯನ್ನ ನಿಜವಾಗ್ಲೂ ದೇವರೇ ಆಳ್ತಿದ್ದಾನಾ? ಅನ್ನೋ ಪ್ರಶ್ನೆಗೆ ಪವಿತ್ರ ಗ್ರಂಥದಿಂದ ಉತ್ತರ ತಿಳಿಯಿರಿ.

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?—ಪೂರ್ಣ ಭಾಗ (3:14)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ