ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • th ಅಧ್ಯಯನ 8 ಪು. 11
  • ಸೂಕ್ತವಾದ ಉದಾಹರಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೂಕ್ತವಾದ ಉದಾಹರಣೆ
  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಅನುರೂಪ ಮಾಹಿತಿ
  • “ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”
    “ನನ್ನನ್ನು ಹಿಂಬಾಲಿಸಿರಿ”
  • “ಒಂದು ದೃಷ್ಟಾಂತವಿಲ್ಲದೆ ಅವನು ಅವರೊಂದಿಗೆ ಮಾತಾಡುತ್ತಿರಲಿಲ್ಲ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಒಳನೋಟ ಮತ್ತು ಮನವೊಪ್ಪಿಸುವ ಕೌಶಲದೊಂದಿಗೆ ಕಲಿಸಿರಿ
    ಕಾವಲಿನಬುರುಜು—1999
  • ಮಹಾ ಬೋಧಕನನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
th ಅಧ್ಯಯನ 8 ಪು. 11

ಪಾಠ 8

ಸೂಕ್ತವಾದ ಉದಾಹರಣೆ

ಸಂಬಂಧಪಟ್ಟ ವಚನ

ಮತ್ತಾಯ 13:34, 35

ಏನು ಮಾಡಬೇಕು: ಸರಳವಾದ ಉದಾಹರಣೆಗಳನ್ನು ಕೊಟ್ಟು ನಿಮ್ಮ ಬೋಧನೆಯನ್ನು ಉತ್ತಮಗೊಳಿಸಿ. ಈ ಉದಾಹರಣೆಗಳು ನಿಮ್ಮ ಕೇಳುಗರಿಗೆ ಇಷ್ಟ ಆಗಬೇಕು ಮತ್ತು ಮುಖ್ಯಾಂಶಗಳನ್ನು ಕಲಿಸಲು ಸಹಾಯ ಮಾಡಬೇಕು.

ಹೇಗೆ ಮಾಡಬೇಕು:

  • ಸರಳವಾದ ಉದಾಹರಣೆಗಳನ್ನು ಉಪಯೋಗಿಸಿ. ಯೇಸುವಿನಂತೆ ಕಷ್ಟವಾದ ವಿಷಯಗಳನ್ನು ಕಲಿಸಲು ಸುಲಭವಾದ ವಿಷಯಗಳನ್ನು ಉಪಯೋಗಿಸಿ. ಅನಾವಶ್ಯಕ ವಿವರಗಳನ್ನು ಸೇರಿಸಬೇಡಿ. ಉದಾಹರಣೆಯಲ್ಲಿರುವ ಅಂಶಗಳು ನೀವು ಕಲಿಸುತ್ತಿರುವ ವಿಷಯಕ್ಕೆ ನೇರವಾಗಿ ಅನ್ವಯಿಸಲು ಸಾಧ್ಯವಾಗುವಂತೆ ಇರಬೇಕು. ಇಲ್ಲವಾದರೆ ಕೇಳುಗರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.

    ಸಹಾಯಕರ ಸಲಹೆ

    ಸೂಕ್ತವಾದ ಉದಾಹರಣೆ ಬೇಕಾದರೆ ನಿಮ್ಮ ಸುತ್ತಮುತ್ತ ಏನಿದೆ, ಏನು ನಡೆಯುತ್ತದೆ ಅನ್ನುವುದನ್ನು ಗಮನಿಸಿ. ನಮ್ಮ ಪ್ರಕಾಶನಗಳನ್ನು ಅಧ್ಯಯನ ಮಾಡಿ. ಚೆನ್ನಾಗಿ ಬೋಧಿಸುವವರ ಭಾಷಣಗಳಿಗೆ ಕಿವಿಗೊಡಿ. ಆಗ ನೀವು ನಿಮ್ಮ ಬೋಧನೆಯಲ್ಲಿ ಉಪಯೋಗಿಸಲು ಎಷ್ಟೋ ದೃಷ್ಟಾಂತಗಳು ಸಿಗುತ್ತವೆ. ಈ ದೃಷ್ಟಾಂತಗಳನ್ನು ಒಂದು ಫೈಲ್‌ನಲ್ಲಿ ಹಾಕಿಡಿ.

  • ಪ್ರಯೋಜನವಾಗುವ ಉದಾಹರಣೆಗಳನ್ನು ಉಪಯೋಗಿಸಿ. ನಿಮ್ಮ ಕೇಳುಗರ ಚಟುವಟಿಕೆ, ಆಸಕ್ತಿಯನ್ನು ಗಮನಿಸಿ. ಅದಕ್ಕೆ ಸಂಬಂಧಿಸಿದ ಉದಾಹರಣೆಗಳನ್ನು ಬಳಸಿ. ನೀವು ಕೊಡುವ ಉದಾಹರಣೆಗಳಿಂದ ನಿಮ್ಮ ಕೇಳುಗರಿಗೆ ಮುಜುಗರ ಆಗಬಾರದು, ನೋವಾಗಬಾರದು.

  • ಮುಖ್ಯಾಂಶಗಳಿಗೆ ಗಮನ ಕೊಡಿ. ಮುಖ್ಯಾಂಶಗಳನ್ನು ವಿವರಿಸಲು ಉದಾಹರಣೆಗಳನ್ನು ಕೊಡಿ. ಆದರೆ ಸಣ್ಣಪುಟ್ಟ ಅಂಶಗಳಿಗೆ ಉದಾಹರಣೆ ಕೊಡುವ ಆವಶ್ಯಕತೆ ಇಲ್ಲ. ನಿಮಗೆ ಕಿವಿಗೊಡುವ ವ್ಯಕ್ತಿಗೆ ಉದಾಹರಣೆ ಮಾತ್ರ ನೆನಪಲ್ಲಿದ್ದರೆ ಸಾಲದು, ಅದರ ಮೂಲಕ ನೀವು ಕಲಿಸಿದ ಪಾಠನೂ ನೆನಪಲ್ಲಿರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ