ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • th ಅಧ್ಯಯನ 15 ಪು. 18
  • ನಿಶ್ಚಿತಾಭಿಪ್ರಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಶ್ಚಿತಾಭಿಪ್ರಾಯ
  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಅನುರೂಪ ಮಾಹಿತಿ
  • ನಿಶ್ಚಿತಾಭಿಪ್ರಾಯದಿಂದ ಮಾತಾಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉತ್ಸಾಹ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸ್ವಾಭಾವಿಕ ಸಂಭಾಷಣೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಪ್ರಯೋಜನ ತರುವ ಮಾಹಿತಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
th ಅಧ್ಯಯನ 15 ಪು. 18

ಪಾಠ 15

ನಿಶ್ಚಿತಾಭಿಪ್ರಾಯ

ಸಂಬಂಧಪಟ್ಟ ವಚನ

1 ಥೆಸಲೊನೀಕ 1:5

ಏನು ಮಾಡಬೇಕು: ನೀವು ಹೇಳುತ್ತಾ ಇರುವುದು ಸತ್ಯ ಮತ್ತು ಮುಖ್ಯ ಅನ್ನುವ ರೀತಿ ಮಾತಾಡಿ.

ಹೇಗೆ ಮಾಡಬೇಕು:

  • ಚೆನ್ನಾಗಿ ತಯಾರಿ ಮಾಡಿ. ಮುಖ್ಯಾಂಶಗಳನ್ನು ಮತ್ತು ಅವುಗಳಿಗೆ ಬೈಬಲ್‌ ಕೊಡುವ ಆಧಾರಗಳನ್ನು ನೀವು ಅರ್ಥಮಾಡಿಕೊಳ್ಳುವ ವರೆಗೆ ಕೊಡಲಾಗಿರುವ ಮಾಹಿತಿಯನ್ನು ಅಧ್ಯಯನ ಮಾಡಿ. ಮುಖ್ಯಾಂಶಗಳನ್ನು ಕೆಲವು ಸರಳ ಪದಗಳಲ್ಲಿ ಹೇಳಲು ಪ್ರಯತ್ನಿಸಿ. ಆ ಅಂಶಗಳಿಂದ ಕೇಳುಗರಿಗೆ ಏನು ಪ್ರಯೋಜನ ಸಿಗುತ್ತದೆ ಎಂದು ನೋಡಿ. ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ.

    ಸಹಾಯಕರ ಸಲಹೆ

    ಮಾಹಿತಿಯನ್ನು ನಿಮ್ಮ ಮನಸ್ಸಿಗೆ ಪೂರ್ತಿಯಾಗಿ ಇಳಿಸಲು ಮತ್ತು ನಿಮ್ಮ ಭಾಷಣವನ್ನು ಚೆನ್ನಾಗಿ ನೀಡಲು ಗಟ್ಟಿ ಧ್ವನಿಯಲ್ಲಿ ಅಭ್ಯಾಸ ಮಾಡಿ.

  • ನಿಶ್ಚಿತಾಭಿಪ್ರಾಯವನ್ನು ತೋರಿಸುವ ಪದಗಳನ್ನು ಆರಿಸಿಕೊಳ್ಳಿ. ಮುದ್ರಿಸಿ ಕೊಡಲಾಗಿರುವ ಮಾಹಿತಿಯನ್ನು ಹಾಗೆಯೇ ಹೇಳುವ ಬದಲು ಸ್ವಂತ ಮಾತಿನಲ್ಲಿ ಹೇಳಿ. ನೀವು ಉಪಯೋಗಿಸುವ ಪದಗಳಲ್ಲಿ ನಿಮ್ಮಲ್ಲಿರುವ ನಿಶ್ಚಿತಾಭಿಪ್ರಾಯ ಗೊತ್ತಾಗಬೇಕು.

  • ಪ್ರಾಮಾಣಿಕವಾಗಿ ಉತ್ಸಾಹದಿಂದ ಮಾತಾಡಿ. ಸಾಕಷ್ಟು ಧ್ವನಿಯಿಂದ ಮಾತಾಡಿ. ಸೂಕ್ತವಾಗಿದ್ದರೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ.

    ಸಹಾಯಕರ ಸಲಹೆ

    ನಿಶ್ಚಿತಾಭಿಪ್ರಾಯ ಅನ್ನುವುದು ವಿವೇಚನೆ ಇಲ್ಲದೆ ಮಾತಾಡುವುದಲ್ಲ, ‘ನಾನು ಹೇಳಿದ್ದೇ ಸರಿ’ ಅನ್ನುವ ರೀತಿ ಮಾತಾಡುವುದೂ ಅಲ್ಲ, ಒತ್ತಾಯ ಮಾಡುವುದೂ ಅಲ್ಲ. ನೀವು ಗಂಭೀರವಾಗಿ ಮಾತಾಡುವಾಗಲೂ ಪ್ರೀತಿಯಿಂದ ಮನವೊಲಿಸುವ ರೀತಿಯಲ್ಲಿ ಮಾತಾಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ