ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೊನೆಯ ಪಸ್ಕ ಹಬ್ಬದಲ್ಲಿ ನಮ್ರತೆ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 113

      ಕೊನೆಯ ಪಸ್ಕ ಹಬ್ಬದಲ್ಲಿ ನಮ್ರತೆ

      ಪೇತ್ರ ಮತ್ತು ಯೋಹಾನರು, ಯೇಸುವಿನ ಅಪ್ಪಣೆಯ ಪ್ರಕಾರ ಪಸ್ಕ ಹಬ್ಬದ ಸಿದ್ಧತೆಗಾಗಿ ಯೆರೂಸಲೇಮಿಗೆ ಈಗಾಗಲೇ ಬಂದಿರುತ್ತಾರೆ. ಯೇಸುವು ಪ್ರಾಯಶಃ ಅವನ ಉಳಿದ ಹತ್ತು ಮಂದಿ ಅಪೊಸ್ತಲರೊಂದಿಗೆ ಅಪರಾಹ್ನದ ಇಳೀಹೊತ್ತಿನಲ್ಲಿ ಆಗಮಿಸಿರಬಹುದು. ಯೇಸುವು ಮತ್ತು ಅವನ ಪಂಗಡವು ಎಣ್ಣೇಮರಗಳ ಗುಡ್ಡದಿಂದ ಇಳಿಯುತ್ತಿರುವಾಗ ಸೂರ್ಯನು ದಿಗಂತದಲ್ಲಿ ಅಸ್ತಮಿಸುತ್ತಿದ್ದನು. ಅವನ ಪುನರುತ್ಥಾನವಾದ ನಂತರದ ತನಕ ಯೇಸುವು ಹಗಲುಹೊತ್ತಿನಲ್ಲಿ ಈ ಗುಡ್ಡದಿಂದ ಪಟ್ಟಣವನ್ನು ವೀಕ್ಷಿಸುವದು ಇದು ಕೊನೆಯ ಬಾರಿಯದ್ದಾಗಿತ್ತು.

      ಬಲುಬೇಗನೆ ಯೇಸು ಮತ್ತು ಅವನ ತಂಡದವರು ನಗರದೊಳಗೆ ಬರುತ್ತಾರೆ ಮತ್ತು ಪಸ್ಕಹಬ್ಬವನ್ನು ಅವರು ಆಚರಿಸುವಂಥ ಮನೆಗೆ ತಲುಪುತ್ತಾರೆ. ಅವರು ಮೇಲಂತಸ್ತಿನ ದೊಡ್ಡ ಕೋಣೆಗೆ ಹೋಗಲು ಮೆಟ್ಟಲುಗಳನ್ನು ಹತ್ತುತ್ತಾರೆ, ಪಸ್ಕ ಹಬ್ಬದ ಅವರ ವೈಯಕ್ತಿಕ ಆಚರಣೆಗೆ ಅಲ್ಲಿ ಎಲ್ಲಾ ಸಿದ್ಧಮಾಡಿಟ್ಟಿರುವದನ್ನು ಕಾಣುತ್ತಾರೆ. ಯೇಸುವು ಅಂಥ ಒಂದು ಸಂದರ್ಭಕ್ಕಾಗಿ ಮುನ್ನೋಡುತ್ತಿದ್ದನು, ಅವನು ಹೇಳುವದು: “ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸುತ್ತೇನೆ.”

      ಸಂಪ್ರದಾಯಕ್ಕನುಸಾರ ಪಸ್ಕ ಹಬ್ಬದ ಪಾಲಿಗರು ದ್ರಾಕ್ಷಾರಸದ ನಾಲ್ಕು ಪಾತ್ರೆಗಳಿಂದ ಕುಡಿಯುತ್ತಿದ್ದರು. ಸ್ಫುಟವಾಗಿ ಮೂರನೆಯ ಪಾತ್ರೆಯನ್ನು ಸ್ವೀಕರಿಸಿಯಾದ ನಂತರ, ಯೇಸುವು ದೇವರ ಸ್ತೋತ್ರ ಮಾಡಿ ಅಂದದ್ದು: “ಇದನ್ನು ತಕ್ಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ. ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ.”

      ಊಟವನ್ನು ಮಾಡುತ್ತಾ ಇರುವಾಗ, ಯೇಸುವು ಎದ್ದು ಹೊದ್ದಿದ್ದ ಮೇಲ್ಹೇದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು, ಬೋಗುಣಿಯೊಂದರಲ್ಲಿ ನೀರು ತುಂಬಿಸಿದನು. ಸಾಮಾನ್ಯವಾಗಿ, ಅತಿಥಿಯ ಕಾಲುಗಳು ತೊಳೆಯಲ್ಪಡುವದನ್ನು ಆತಿಥೇಯನು ನೋಡಿಕೊಳ್ಳುತ್ತಾನೆ. ಆದರೆ ಈ ಸಂದರ್ಭದಲ್ಲಿ ಯಾರೂ ಆತಿಥೇಯನು ಹಾಜರಿಲ್ಲದರ್ದಿಂದ, ಯೇಸುವು ಈ ವೈಯಕ್ತಿಕ ಸೇವೆಯ ಜಾಗ್ರತೆಯನ್ನು ವಹಿಸಿಕೊಳ್ಳುತ್ತಾನೆ. ಅಪೊಸ್ತಲರಲ್ಲಿ ಯಾರಾದರೊಬ್ಬರು ಈ ಆವಕಾಶವನ್ನು ತಮ್ಮದಾಗಿ ಮಾಡಿಕೊಳ್ಳಬಹುದಿತ್ತು; ಆದರೂ, ಅವರಲ್ಲಿ ಸ್ವಲ್ಪ ಪ್ರತಿಸ್ಪರ್ಧೆಯು ಇನ್ನೂ ಇದ್ದುದರಿಂದ, ಯಾರೊಬ್ಬನೂ ಇದನ್ನು ಮಾಡುವದಿಲ್ಲ. ಯೇಸುವು ಅವರ ಕಾಲುಗಳನ್ನು ತೊಳೆಯಲು ಆರಂಭಿಸಿದಾಗ ಅವರು ಪೇಚಾಟಕ್ಕೊಳಗಾಗುತ್ತಾರೆ.

      ಯೇಸುವು ಅವನ ಬಳಿಗೆ ಬಂದಾಗ, ಪೇತ್ರನು ಅಡ್ಡಿಮಾಡುತ್ತಾನೆ: “ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು.”

      “ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ,” ಹೇಳುತ್ತಾನೆ ಯೇಸು.

      “ಸ್ವಾಮೀ,” ಪೇತ್ರನು ಪ್ರತಿವರ್ತಿಸುವದು, “ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು.”

      “ಸ್ನಾನಮಾಡಿಕೊಂಡವನು,” ಯೇಸುವು ಉತ್ತರಿಸುವದು, “ಕಾಲುಗಳನ್ನು ತೊಳೆಯವದಲ್ಲದೆ ಬೇರೇನೂ ತೊಳೆಯಬೇಕಾಗಿರುವದಿಲ್ಲ, ಅವನ ಮೈಯೆಲ್ಲಾ ಶುದ್ಧವಾಗಿದೆ. ನೀವೂ ಶುದ್ಧರಾಗಿದ್ದೀರಿ; ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ.” ಇದನ್ನು ಹೇಳಲು ಕಾರಣವೇನಂದರೆ ತನ್ನನ್ನು ಹಿಡುಕೊಡಲು ಇಸ್ಕರಿಯೋತ ಯೂದನು ಯೋಜನೆಗಳನ್ನು ಮಾಡಿದ್ದಾನೆಂದು ಅವನಿಗೆ ಗೊತ್ತಿತ್ತು.

      ಹಿಡುಕೊಡುವವನಾದ ಯೂದನ ಕಾಲುಗಳನ್ನು ಸಹಿತ, ಎಲ್ಲಾ 12 ಮಂದಿಯ, ತೊಳೆದಾದ ನಂತರ, ಅವನು ತನ್ನ ಮೇಲ್ಹೇದಿಕೆಯನ್ನು ಹಾಕಿಕೊಳ್ಳುತ್ತಾನೆ ಮತ್ತು ತಿರಿಗಿ ಮೇಜಿನ ಬಳಿ ಕೂತುಕೊಳ್ಳುತ್ತಾನೆ. ಅನಂತರ ಅವನು ಪ್ರಶ್ನಿಸುವದು: “ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ? ನೀವು ನನ್ನನ್ನು ಗುರುವೆಂದೂ ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವದು ಸರಿ; ನಾನು ಅಂಥವನೇ ಹೌದು. ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ದಣಿಗಿಂತ ಆಳು ದೊಡ್ಡವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.”

      ನಮ್ರ ಸೇವೆಯ ಎಂಥ ಒಂದು ಸುಂದರವಾದ ಪಾಠ! ತಾವು ಅಷ್ಟೊಂದು ಪ್ರಮುಖರೆಂದೆಣಿಸುತ್ತಾ ಇತರರು ಯಾವಾಗಲೂ ತಮ್ಮ ಸೇವೆ ಮಾಡತಕ್ಕದ್ದು ಎಂಬಂಥ ರೀತಿಯಲ್ಲಿ ಅಪೊಸ್ತಲರು ಪ್ರಥಮ ಸ್ಥಾನಗಳನ್ನು ಹುಡುಕಬಾರದಿತ್ತು. ಯೇಸುವಿನಿಂದ ಇಡಲ್ಪಟ್ಟ ನಮೂನೆಯನ್ನು ಹಿಂಬಾಲಿಸುವ ಆವಶ್ಯಕತೆ ಅವರಿಗಿತ್ತು. ಇದೊಂದು ಬಾಹ್ಯಾಚಾರದ ಕಾಲು ತೊಳೆಯುವಿಕೆಯಲ್ಲ. ಅಲ್ಲ, ಬದಲು ಕೆಲಸವು ಎಷ್ಟೇ ಕೀಳು ಯಾ ಆಹ್ಲಾದಕರವಲ್ಲದ್ದಾಗಿರಲಿ, ಯಾವುದೇ ಪಕ್ಷಪಾತವಿಲ್ಲದೆ ಸೇವೆ ಸಲ್ಲಿಸಲು ಇಚ್ಛೆಯುಳ್ಳವನಾಗಿರುವದಾಗಿದೆ. ಮತ್ತಾಯ 26:20, 21; ಮಾರ್ಕ 14:17, 18; ಲೂಕ 22:14-18; 7:44; ಯೋಹಾನ 13:1-17.

      ▪ ಪಸ್ಕ ಹಬ್ಬವನ್ನು ಆಚರಿಸಲು ಪಟ್ಟಣವನ್ನು ಪ್ರವೇಶಿಸುವಾಗ ಯೇಸುವಿನ ಯೆರೂಸಲೇಮಿನ ಕಡೆಗಿನ ನೋಟವು ಯಾವ ರೀತಿಯಲ್ಲಿ ಅಸದೃಶವಾಗಿತ್ತು?

      ▪ ಪಸ್ಕ ಹಬ್ಬದ ಸಮಯದಲ್ಲಿ ದೇವರ ಸ್ತೋತ್ರವನ್ನು ಮಾಡಿದ ನಂತರ ಯಾವ ಪಾತ್ರೆಯನ್ನು ಯೇಸುವು ತನ್ನ ಹನ್ನೆರಡು ಮಂದಿ ಅಪೊಸ್ತಲರಿಗೆ ದಾಟಿಸುತ್ತಾನೆ?

      ▪ ಯೇಸುವು ಭೂಮಿಯ ಮೇಲಿರುವಾಗ ಯಾವ ವೈಯಕ್ತಿಕ ಸೇವೆಯು ಪದ್ಧತಿಗನುಸಾರ ಅತಿಥಿಗಳಿಗೆ ಒದಗಿಸಲ್ಪಡುತ್ತಿತ್ತು, ಮತ್ತು ಯೇಸುವು ಮತ್ತು ಅವನ ಅಪೊಸ್ತಲರಿಂದ ಪಸ್ಕ ಹಬ್ಬವು ಆಚರಿಸಲ್ಪಡುತ್ತಿರುವ ಸಮಯದಲ್ಲಿ ಅದು ಯಾಕೆ ಒದಗಿಸಲ್ಪಡಲಿಲ್ಲ?

      ▪ ತನ್ನ ಅಪೊಸ್ತಲರ ಪಾದಗಳನ್ನು ತೊಳೆದ ಕೀಳ್ಮಟ್ಟದ ಸೇವೆಯನ್ನು ನಡಿಸಿದ್ದರಲ್ಲಿ ಯೇಸುವಿನ ಉದ್ದೇಶವೇನಾಗಿತ್ತು?

  • ಜಾಪಕಾರ್ಥದ ರಾತ್ರಿಯೂಟ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 114

      ಜಾಪಕಾರ್ಥದ ರಾತ್ರಿಯೂಟ

      ಯೇಸುವು ಅವನ ಅಪೊಸ್ತಲರ ಕಾಲುಗಳನ್ನು ತೊಳೆದಾದ ನಂತರ, ಅವನು ಶಾಸ್ತ್ರ ಗ್ರಂಥದಿಂದ ಕೀರ್ತನೆ 41:9 ಉಲ್ಲೇಖಿಸುತ್ತಾನೆ: “ನನ್ನ ಕೂಡ ಊಟ ಮಾಡುವವನೇ ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.” ಅನಂತರ ಆತ್ಮದಲ್ಲಿ ತತ್ತರಗೊಂಡು ಅವನು ವಿವರಿಸಿದ್ದು: “ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು.”

      ಅಪೊಸ್ತಲರು ಇದರಿಂದ ದುಃಖಪಟ್ಟು, ಯೇಸುವಿಗೆ ಒಬ್ಬರೊಬ್ಬರಾಗಿ ಹೇಳಿದರು: “ನಾನಲ್ಲವಲ್ಲಾ, ನಾನಲ್ಲವಲ್ಲಾ?” ಇಸ್ಕರಿಯೋತ ಯೂದನು ಕೂಡ ಹೀಗೆ ಕೇಳುವದರಲ್ಲಿ ಜತೆಗೂಡುತ್ತಾನೆ. ಮೇಜಿನಲ್ಲಿ ಯೇಸುವಿನ ಪಕ್ಕದಲ್ಲಿದ್ದ ಯೋಹಾನನು ಅವನ ಎದೆಯ ಕಡೆಗೆ ಬಾಗಿ, ಕೇಳುವದು: “ಸ್ವಾಮೀ, ಅವನು ಯಾರು?”

      “ಅವನು ನನ್ನ ಹನ್ನೆರಡು ಮಂದಿಯಲ್ಲಿ ಒಬ್ಬನು, ನನ್ನ ಸಂಗಡ ಬಟ್ಟಲ್ಲಲಿ ಕೈ ಅದ್ದುವವನೇ,” ಯೇಸು ಉತ್ತರಿಸುತ್ತಾನೆ. “ಮನುಷ್ಯ ಕುಮಾರನು ಹೊರಟು ಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯ ಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು.” ಅನಂತರ, ಸೈತಾನನು ಯೂದನ ಕೆಟ್ಟದ್ದಾಗಿ ಪರಿಣಮಿಸಿರುವ ಹೃದಯವು ತೆರೆದಿರುವದನ್ನು ಕಂಡು, ಸ್ವ-ಪ್ರಯೋಜನಕ್ಕಾಗಿ ಬಳಸಿ, ಪುನಃ ಅವನೊಳಗೆ ಹೊಕ್ಕನು. ಸ್ವಲ್ಪ ನಂತರ ಆ ರಾತ್ರಿ ಯೇಸುವು ತಕ್ಕದ್ದಾಗಿಯೇ ಯೂದನನ್ನು “ನಾಶಕ್ಕೆ ಗುರಿಯಾದ ಆ ಮನುಷ್ಯನು” ಎಂದು ಕರೆಯುತ್ತಾನೆ.

      ಯೇಸು ಈ ಯೂದನಿಗೆ ಹೇಳುವದು: “ನೀನು ಮಾಡುವದನ್ನು ಬೇಗನೆ ಮಾಡಿಬಿಡು.” ಯೇಸುವು ಹೀಗೆ ಹೇಳಿದ್ದರ ಅರ್ಥವು ಇತರ ಯಾವ ಅಪೊಸ್ತಲರಿಗೂ ಆಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, “ಹಬ್ಬಕ್ಕಾಗಿ ನಮಗೆ ಏನು ಬೇಕೋ ಅದನ್ನು ಕೊಂಡುಕೋ” ಅಥವಾ ಅವನು ಹೋಗಿ ಬಡವರಿಗೆ ಏನಾದರೂ ಕೊಡಬೇಕು ಎಂದು ಯೇಸುವು ಅವನಿಗೆ ಹೇಳುತ್ತಾನೆಂದು ಅವರು ಎಣಿಸಿದರು.

      ಯೂದನು ಹೊರಗೆ ಹೋದ ನಂತರ, ಯೇಸುವು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಪೂರ್ಣವಾಗಿ ಹೊಸದಾಗಿರುವ ಒಂದು ಆಚರಣೆಯನ್ನು ಇಲ್ಲವೆ ಜ್ಞಾಪಕಾರ್ಥವನ್ನು ಪ್ರಸ್ತಾಪಿಸುತ್ತಾನೆ. ಅವನು ರೊಟ್ಟಿಯನ್ನು ತೆಗೆದು ಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಅದನ್ನು ಅವರಿಗೆ ಕೊಟ್ಟು ಹೀಗನ್ನುತ್ತಾನೆ: “ತಕ್ಕೊಳ್ಳಿರಿ, ತಿನ್ನಿರಿ.” ಅವನು ವಿವರಿಸುವದು: “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”

      ಪ್ರತಿಯೊಬ್ಬನು ರೊಟ್ಟಿಯನ್ನು ತಿಂದ ಮೇಲೆ, ಯೇಸುವು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಳ್ಳುತ್ತಾನೆ, ಇದು ಪಸ್ಕ ಹಬ್ಬದ ಆಚರಣೆಯಲ್ಲಿ ಬಳಸಿದ ನಾಲ್ಕನೆಯ ಪಾತ್ರೆಯಾಗಿರಬಹುದು. ಅದರ ಮೇಲೆ ದೇವರ ಸ್ತೋತ್ರವನ್ನು ಅವನು ಪುನಃ ಮಾಡಿ, ಅದನ್ನು ಅವರಿಗೆ ದಾಟಿಸುತ್ತಾನೆ, ಅದರಿಂದ ಕುಡಿಯುವಂತೆ ಅವರಿಗೆ ಹೇಳುತ್ತಾ ಅಂದದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.”

      ವಾಸ್ತವದಲ್ಲಿ ಇದು ಯೇಸುವಿನ ಮರಣದ ಜ್ಞಾಪಕಾಚರಣೆಯಾಗಿರುತ್ತದೆ. ಪ್ರತಿ ವರುಷ ನೈಸಾನ್‌ 14 ರಲ್ಲಿ, ಯೇಸುವು ಹೇಳಿದಂತೆ, ಅವನ ನೆನಪಿಕ್ಕೋಸ್ಕರ ಇದನ್ನು ಪುನರಾವರ್ತಿಸಲಾಗುತ್ತದೆ. ಮರಣದ ಶಾಪದಿಂದ ಮಾನವ ಕುಲವನ್ನು ಪಾರುಗೊಳಿಸಲು ಯೇಸುವು ಮತ್ತು ಅವನ ಸ್ವರ್ಗೀಯ ತಂದೆಯು ಯಾವ ಒದಗಿಸುವಿಕೆಗಳನ್ನು ಮಾಡಿರುತ್ತಾರೆಂದು ಆಚರಿಸುವವರ ಜ್ಞಾಪಕಕ್ಕೆ ಇದು ತರುತ್ತದೆ. ಕ್ರಿಸ್ತನ ಹಿಂಬಾಲಕರಾದ ಯೆಹೂದ್ಯರಿಗೆ ಇದು ಪಸ್ಕ ಹಬ್ಬದ ಬದಲಿಯಾಗಿ ಇರುತ್ತದೆ.

      ಯೇಸುವಿನ ಸುರಿದ ರಕ್ತದ ಮೂಲಕ ಕಾರ್ಯರೂಪಕ್ಕೆ ತರಲ್ಪಟ್ಟ ಹೊಸ ಒಡಂಬಡಿಕೆಯು ಹಳೆಯ ನಿಯಮದೊಡಂಬಡಿಕೆಯನ್ನು ಸ್ಥಾನಪಲ್ಲಟಮಾಡುತ್ತದೆ. ಎರಡು ಪಕ್ಷಗಳ ನಡುವೆ—ಒಂದು ಪಕ್ಕದಲ್ಲಿ ಯೆಹೋವ ದೇವರು ಮತ್ತು ಇನ್ನೊಂದು ಪಕ್ಕದಲ್ಲಿ 1,44,000 ಆತ್ಮ-ಜನಿತ ಕ್ರೈಸ್ತರು—ಯೇಸು ಕ್ರಿಸ್ತನ ಮಧ್ಯಸಿಕ್ಥೆಯಲ್ಲಿ ಇದು ಬಂದಿದೆ. ಪಾಪಗಳ ಕ್ಷಮಾಪಣೆಗೆ ಒದಗಿಸುವಿಕೆಯನ್ನು ಮಾಡುವದರ ಹೊರತಾಗಿ, ರಾಜ-ಯಾಜಕರ ಒಂದು ಸ್ವರ್ಗೀಯ ಜನಾಂಗದ ರೂಪಿಸುವಿಕೆಗೆ ಈ ಒಡಂಬಡಿಕೆಯು ಅನುಮತಿಸುತ್ತದೆ. ಮತ್ತಾಯ 26:21-29; ಮಾರ್ಕ 14:18-25; ಲೂಕ 22:19-23; ಯೋಹಾನ 13:18-30; 17:12; 1 ಕೊರಿಂಥ 5:7.

      ▪ ಒಬ್ಬ ಸಂಗಾತಿಯ ಕುರಿತಾಗಿ ಯೇಸುವು ಯಾವ ಬೈಬಲ್‌ ಪ್ರವಾದನೆಯನ್ನು ಉಲ್ಲೇಖಿಸುತ್ತಾನೆ, ಮತ್ತು ಅವನು ಅದರ ಯಾವ ಅನ್ವಯವನ್ನು ಮಾಡುತ್ತಾನೆ?

      ▪ ಅಪೊಸ್ತಲರು ಯಾಕೆ ಬಹಳಷ್ಟು ದುಃಖಿತರಾಗುತ್ತಾರೆ, ಮತ್ತು ಪ್ರತಿಯೊಬ್ಬನು ಏನನ್ನು ಕೇಳುತ್ತಾನೆ?

      ▪ ಯೂದನಿಗೆ ಯೇಸುವು ಏನನ್ನು ಹೇಳುತ್ತಾನೆ, ಆದರೆ ಇತರ ಅಪೊಸ್ತಲರು ಈ ಅಪ್ಪಣೆಯನ್ನು ಹೇಗೆ ಅರ್ಥೈಸುತ್ತಾರೆ?

      ▪ ಯೂದನು ಹೊರಟು ಹೋದ ನಂತರ, ಯೇಸುವು ಯಾವ ಆಚರಣೆಯನ್ನು ಪ್ರಸ್ತಾಪಿಸುತ್ತಾನೆ, ಮತ್ತು ಅದು ಯಾವ ಉದ್ದೇಶವನ್ನು ಪೂರೈಸುತ್ತದೆ?

      ▪ ಹೊಸ ಒಡಂಬಡಿಕೆಯ ಎರಡು ಪಕ್ಷಗಳು ಯಾವವು, ಮತ್ತು ಈ ಒಡಂಬಡಿಕೆಯು ಏನನ್ನು ಪೂರೈಸುತ್ತದೆ?

  • ವಾಗಾದವೊಂದು ಸ್ಫೋಟಿಸುತ್ತದೆ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 115

      ವಾಗಾದವೊಂದು ಸ್ಫೋಟಿಸುತ್ತದೆ

      ಸಾಯಂಕಾಲದ ಆರಂಭದಲ್ಲಿ, ಅವನ ಅಪೊಸ್ತಲರ ಕಾಲುಗಳನ್ನು ತೊಳೆಯುವದರ ಮೂಲಕ ನಮ್ರತೆಯ ಸೇವೆಯ ಕುರಿತು ಒಂದು ಸುಂದರವಾದ ಪಾಠವನ್ನು ಯೇಸುವು ಕಲಿಸಿದ್ದನು. ಅನಂತರ, ಸಮೀಪಿಸುತ್ತಿರುವ ಅವನ ಮರಣದ ಜ್ಞಾಪಕಾಚರಣೆಯನ್ನು ಅವನು ಪ್ರಸ್ತಾಪಿಸಿದ್ದನು. ಈಗಾಗಲೇ ನಡೆದ ಸಂಗತಿಗಳ ನೋಟದಲ್ಲಿ ಒಂದು ಆಶ್ಚರ್ಯವನ್ನುಂಟುಮಾಡುವ ಘಟನೆಯು ಸಂಭವಿಸುತ್ತದೆ. ತಮ್ಮಲ್ಲಿ ಹೆಚ್ಚಿನವನೆನಿಸಿಕೊಳ್ಳುವವನು ಯಾರು ಎಂಬ ವಿಷಯದಲ್ಲಿ ಒಂದು ಬಿಸಿ ವಾಗ್ವಾದದಲ್ಲಿ ಅಪೊಸ್ತಲರು ಒಳಗೂಡಿದ್ದರು! ಪ್ರಾಯಶಃ ಇದೊಂದು ಮುಂದುವರಿಯುತ್ತಾ ಇದ್ದ ವಿವಾದದ ಭಾಗವಾಗಿರಬೇಕು.

      ಯೇಸುವು ಪರ್ವತದ ಮೇಲೆ ಪ್ರಕಾಶರೂಪವನ್ನು ಹೊಂದಿಯಾದ ನಂತರ, ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅಪೊಸ್ತಲರು ವಿವಾದಿಸುತ್ತಿದ್ದರು ಎಂಬುದನ್ನು ನೆನಪಿಗೆ ತನ್ನಿರಿ. ಅಷ್ಟಲ್ಲದೆ, ಯಾಕೋಬ ಮತ್ತು ಯೋಹಾನರು ರಾಜ್ಯದಲ್ಲಿ ಪ್ರತಿಷ್ಠೆಯ ಸ್ಥಾನವನ್ನು ಕೋರಿದರ್ದಿಂದ, ಅದು ಅಪೊಸ್ತಲರಲ್ಲಿ ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಈಗ ಅವರೊಂದಿಗಿನ ಕೊನೆಯ ರಾತ್ರಿಯ ಸಂದರ್ಭದಲ್ಲಿ, ಅವರು ತಮ್ಮೊಳಗೆ ಈ ರೀತಿಯಲ್ಲಿ ಜಗಳವಾಡುವದನ್ನು ನೋಡಿ ಯೇಸುವು ಎಷ್ಟೊಂದು ದುಃಖಿತನಾಗಿರಬೇಕು! ಅವನೇನು ಮಾಡುತ್ತಾನೆ?

      ಅವರ ವರ್ತನೆಗಾಗಿ ಅಪೊಸ್ತಲರನ್ನು ಗದರಿಸುವ ಬದಲಾಗಿ, ಪುನೊಮ್ಮೆ ಯೇಸುವು ಅವರೊಂದಿಗೆ ತಾಳ್ಮೆಯಿಂದ ತರ್ಕಿಸುತ್ತಾನೆ: “ಅನ್ಯ ದೇಶದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರ ನಡಿಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ನೀವು ಹಾಗಿರಬಾರದು. . . . ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆ ಮಾಡುವವನೋ?” ಅನಂತರ, ಅವನು ತನ್ನ ಉದಾಹರಣೆಯನ್ನು ಅವರಿಗೆ ನೆನಪಿಸುತ್ತಾನೆ: “ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.”

      ಅವರ ಅಪರಿಪೂರ್ಣತೆಗಳ ಹೊರತಾಗಿಯೂ, ಅವನ ಕಷ್ಟಗಳಲ್ಲಿ ಅಪೊಸ್ತಲರು ಅವನ ಸಂಗಡ ಎಡೆಬಿಡದೆ ಇದ್ದವರಾಗಿದ್ದರು. ಆದುದರಿಂದ ಅವನು ಹೇಳುವದು: “ಒಂದು ರಾಜ್ಯಕ್ಕಾಗಿ ನನ್ನ ತಂದೆಯು ನನ್ನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡಂತೆ, ನಾನೂ ನಿಮ್ಮ ಸಂಗಡ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ.” (NW) ಯೇಸುವಿನ ಮತ್ತು ಅವನ ನಿಷ್ಠೆಯ ಹಿಂಬಾಲಕರ ನಡುವಿನ ಈ ವೈಯಕ್ತಿಕ ಒಡಂಬಡಿಕೆಯು ಅವನ ರಾಜ್ಯಾಧಿಕಾರದ ಪ್ರಭುತ್ವದಲ್ಲಿ ಅವರು ಅವನೊಂದಿಗೆ ಪಾಲಿಗರಾಗಲು ಸಾಧ್ಯ ಮಾಡುತ್ತದೆ. ರಾಜ್ಯಕ್ಕೋಸ್ಕರ ಈ ಒಡಂಬಡಿಕೆಯಲ್ಲಿ ಕೊನೆಯಲ್ಲಿ ಒಂದು ಸೀಮಿತ ಸಂಖ್ಯೆಯಾದ 1,44,000 ಮಂದಿಯನ್ನು ಮಾತ್ರ ತೆಗೆದು ಕೊಳ್ಳಲಾಗುತ್ತದೆ.

      ಕ್ರಿಸ್ತನೊಂದಿಗೆ ರಾಜ್ಯಾಡಳಿತೆಯಲ್ಲಿ ಪಾಲಿಗರಾಗುವ ಈ ಅದ್ಭುತಕರ ಪ್ರತೀಕ್ಷೆಯು ಅಪೊಸ್ತಲರ ಮುಂದೆ ಸಾದರಪಡಿಸಲ್ಪಟ್ಟರೂ ಕೂಡ, ಅವರು ಈಗ ಆತ್ಮಿಕವಾಗಿ ಬಹಳ ನಿರ್ಬಲರಾಗಿದ್ದರು. “ನೀವೆಲ್ಲರೂ ಈ ರಾತ್ರಿ ದಿಗಿಲುಪಟ್ಟು ಹಿಂಜರಿಯುವಿರಿ,” ಅನ್ನುತ್ತಾನೆ ಯೇಸು. ಆದಾಗ್ಯೂ, ಪೇತ್ರನ ಪರವಾಗಿ ತಾನು ಪ್ರಾರ್ಥಿಸಿದ್ದೇನೆಂದು ಅವನಿಗೆ ಹೇಳಿದ ಮೇಲೆ, ಯೇಸುವು ಪ್ರಚೋದಿಸುವದು: “ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು.”

      “ಪ್ರಿಯ ಮಕ್ಕಳೇ,” ಯೇಸುವು ವಿವರಿಸುವದು, “ಇನ್ನು ಸ್ವಲ್ಪ ಕಾಲವೇ ನಿಮ್ಮ ಸಂಗಡ ಇರುತ್ತೇನೆ. ನನ್ನನ್ನು ಹುಡುಕುವಿರಿ, ಆದರೆ ನಾನು ಹೋಗುವಲಿಗ್ಲೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆ ಈಗ ನಿಮಗೂ ಹೇಳುತ್ತೇನೆ. ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ. ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”

      “ಸ್ವಾಮೀ, ಎಲ್ಲಿಗೆ ಹೋಗುತ್ತೀ?” ಪೇತ್ರನು ವಿಚಾರಿಸುತ್ತಾನೆ.

      “ನಾನು ಹೋಗುವಲಿಗ್ಲೆ ನೀನು ಈಗ ನನ್ನ ಹಿಂದೆ ಬರಲಾರಿ,” ಯೇಸುವು ಪ್ರತ್ಯುತ್ತರ ಕೊಡುತ್ತಾನೆ, “ತರುವಾಯ ನನ್ನ ಹಿಂದೆ ಬರುವಿ.”

      “ಸ್ವಾಮೀ, ನಾನು ಯಾಕೆ ಈಗ ನಿನ್ನ ಹಿಂದೆ ಬರಲಾರೆನು?” ಪೇತ್ರನು ತಿಳಿಯಲು ಬಯಸಿದನು. “ನಿನಗಾಗಿ ನನ್ನ ಪ್ರಾಣವನ್ನಾದರೂ ಕೊಟ್ಟೇನು.”

      “ನನಗಾಗಿ ಪ್ರಾಣ ಕೊಟ್ಟೀಯಾ?” ಯೇಸುವು ಕೇಳುತ್ತಾನೆ. “ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನ ವಿಷಯದಲ್ಲಿ ಅವನನ್ನು ಅರಿಯೆನೆಂದು ಮೂರು ಸಾರಿ ಹೇಳುವ ತನಕ ಕೋಳಿ ಕೂಗುವದೇ ಇಲ್ಲ.”

      “ನಾನು ನಿನ್ನ ಸಂಗಡ ಸಾಯಬೇಕಾದರೂ,” ಪೇತ್ರನು ಪ್ರತಿಭಟಿಸುವದು, “ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ.” ಅದನ್ನೇ ಇತರ ಅಪೊಸ್ತಲರು ಹೇಳಿದರೂ, ಪೇತ್ರನು ಕೊಚ್ಚಿಕೊಳ್ಳುವದು: “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ!”

      ಹಮ್ಮೀಣಿ ಹಸಿಬೆ ಜೋಡುಗಳಿಲದ್ಲೆ ಗಲಿಲಾಯದ ಸಾರುವ ಸಂಚಾರಕ್ಕೆ ಅವನು ಅಪೊಸ್ತಲರನ್ನು ಕಳುಹಿಸಿದ ಸಮಯಕ್ಕೆ ಸೂಚಿಸುತ್ತಾ, ಯೇಸುವು ಕೇಳುವದು: “ನಿಮಗೆ ಏನಾದರೂ ಕೊರತೆಯಾಯಿತೋ?”

      “ಏನೂ ಇಲ್ಲ!” ಎಂದವರು ಉತ್ತರಿಸಿದರು.

      “ಈಗಲಾದರೋ ಹಮ್ಮೀಣಿಯಿದ್ದವರು ಅದನ್ನು ತಕ್ಕೊಳ್ಳಲಿ, ಹಸಿಬೆಯಿದ್ದವನು ಅದನ್ನು ತಕ್ಕೊಳ್ಳಲಿ,” ಅವನು ಹೇಳುತ್ತಾನೆ, “ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. ಯಾಕಂದರೆ—ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ; ನನ್ನ ವಿಷಯವಾದದ್ದು ಕೊನೆಗಾಣಬೇಕು.”

      ದುಷ್ಟರ ಇಲ್ಲವೆ ದುಷ್ಕರ್ಮಿಗಳ ಸಂಗಡ ಅವನನ್ನು ವಧಾಸ್ತಂಭಕ್ಕೆ ಏರಿಸಲಾಗುವ ಸಮಯದ ಕುರಿತು ಯೇಸುವು ನಿರ್ದೇಶಿಸುತ್ತಿದ್ದನು. ಅದರ ನಂತರ ಅವನ ಹಿಂಬಾಲಕರು ತೀವ್ರ ಹಿಂಸೆಯನ್ನು ಎದುರಿಸಲಿರುವರು ಎಂಬುದನ್ನು ಕೂಡ ಅವನು ಸೂಚಿಸುತ್ತಿದ್ದನು. “ಸ್ವಾಮೀ, ಇಗೋ ಇಲ್ಲಿ ಎರಡು ಕತ್ತಿಗಳಿವೆ,” ಎಂದವರು ಹೇಳುತ್ತಾರೆ.

      “ಅಷ್ಟು ಸಾಕು,” ಎಂದವನು ಉತ್ತರಿಸುತ್ತಾನೆ. ಯೇಸುವು ಅವರಿಗೆ ಇನ್ನೊಂದು ಅತ್ಯಾವಶ್ಯಕ ಪಾಠವನ್ನು ಕಲಿಸಲು ಇರುವ ಆ ಕತ್ತಿಗಳು ಶೀಘ್ರದಲ್ಲಿಯೇ ಬಳಸಲ್ಪಡುವದನ್ನು ನಾವು ನೋಡಲಿದ್ದೇವೆ. ಮತ್ತಾಯ 26:31-35; ಮಾರ್ಕ 14:27-31; ಲೂಕ 22:24-38; ಯೋಹಾನ 13:31-38; ಪ್ರಕಟನೆ 14:1-3.

      ▪ ಅಪೊಸ್ತಲರ ವಾಗ್ವಾದವು ಅಷ್ಟೊಂದು ಆಶ್ವರ್ಯವನ್ನುಂಟುಮಾಡುವದು ಯಾಕೆ?

      ▪ ಯೇಸುವು ಆ ಚರ್ಚೆಯನ್ನು ಹೇಗೆ ನಿಭಾಯಿಸುತ್ತಾನೆ?

      ▪ ಅವನ ಶಿಷ್ಯರೊಂದಿಗೆ ಯೇಸುವು ಮಾಡುವ ಒಡಂಬಡಿಕೆಯಿಂದ ಏನು ಪೂರೈಸಲ್ಪಡುತ್ತದೆ?

      ▪ ಯೇಸುವು ಯಾವ ಹೊಸ ಆಜ್ಞೆಯನ್ನು ಕೊಡುತ್ತಾನೆ, ಮತ್ತು ಅದು ಎಷ್ಟು ಪ್ರಾಮುಖ್ಯವಾಗಿರುತ್ತದೆ?

      ▪ ಪೇತ್ರನು ಯಾವ ಮಿತಿಮೀರಿದ ಆತ್ಮ-ವಿಶ್ವಾಸವನ್ನು ಪ್ರದರ್ಶಿಸುತ್ತಾನೆ, ಮತ್ತು ಯೇಸುವು ಏನು ಹೇಳುತ್ತಾನೆ?

      ▪ ಹಮ್ಮೀಣಿ ಮತ್ತು ಹಸಿಬೆಗಳನ್ನು ಕೊಂಡೊಯ್ಯುವದರ ಕುರಿತು ಯೇಸುವು ಕೊಟ್ಟ ಆಜ್ಞೆಗಳು ಮೊದಲಿನವುಗಳಿಗಿಂತ ಭಿನ್ನವಾಗಿದ್ದದ್ದು ಯಾಕೆ?

  • ಅವನ ಅಗಲುವಿಕೆಗೆ ಅಪೊಸ್ತಲರನ್ನು ಸನ್ನದ್ಧಗೊಸುವದು
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 116

      ಅವನ ಅಗಲುವಿಕೆಗೆ ಅಪೊಸ್ತಲರನ್ನು ಸನ್ನದ್ಧಗೊಸುವದು

      ಜ್ಞಾಪಕದ ಊಟವು ಮುಗಿದದೆ, ಆದರೆ ಯೇಸುವೂ, ಅವನ ಅಪೊಸ್ತಲರೂ ಇನ್ನೂ ಮೇಲಂತಸ್ತಿನ ಕೋಣೆಯಲ್ಲಿ ಇದ್ದಾರೆ. ಬೇಗನೇ ಯೇಸುವು ಬಿಟ್ಟು ಹೋಗಲಿರುವದಾದರೂ, ಅವನಿಗೆ ಇನ್ನೂ ಅನೇಕ ಸಂಗತಿಗಳನ್ನು ಹೇಳಲಿಕ್ಕಿತ್ತು. “ನಿಮ್ಮ ಹೃದಯಗಳು ಕಳವಳಗೊಳ್ಳದೆ ಇರಲಿ,“ ಅವನು ಅವರನ್ನು ಸಂತೈಸುತ್ತಾನೆ. “ದೇವರನ್ನು ನಂಬಿರಿ.” ಆದರೆ ಅವನು ಕೂಡಿಸುವದು: “ನನ್ನನ್ನೂ ನಂಬಿರಿ.”

      “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳಿವೆ,” ಯೇಸುವು ಮುಂದುವರಿಸುವದು. “ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. . . . ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು. ಮತ್ತು ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದದೆ.” ಪರಲೋಕಕ್ಕೆ ಯೇಸುವು ಹೋಗಲಿದ್ದಾನೆಂಬುದನ್ನು ಅಪೊಸ್ತಲರು ಗ್ರಹಿಸಲು ಶಕ್ತರಾಗಿರಲಿಲ್ಲ, ಆದುದರಿಂದ ತೋಮನು ಕೇಳುವದು: “ಸ್ವಾಮೀ, ನೀನು ಎಲ್ಲಿಗೆ ಹೋಗುತ್ತೀಯೋ ನಮಗೆ ತಿಳಿಯದು; ಮಾರ್ಗವು ಹೇಗೆ ತಿಳಿದೀತು?”

      “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ,” ಯೇಸುವು ಉತ್ತರಿಸುತ್ತಾನೆ. ಹೌದು, ಅವನ ತಂದೆಯ ಪರಲೋಕದ ಮನೆಗೆ ಯಾರಾದರೂ ಪ್ರವೇಶಿಸಬೇಕಾದರೆ, ಅವನನ್ನು ಸ್ವೀಕರಿಸಿ, ಅವನ ಜೀವಿತದ ನಮೂನೆಯನ್ನು ಅನುಕರಿಸುವದರ ಮೂಲಕ ಮಾತ್ರವೇ ಇದು ಸಾಧ್ಯ, ಯಾಕಂದರೆ ಯೇಸುವು ಹೇಳುವದು: “ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”

      “ಸ್ವಾಮೀ, ನಮಗೆ ತಂದೆಯನ್ನು ತೋರಿಸು,” ಫಿಲಿಪ್ಪನು ವಿನಂತಿಸುತ್ತಾನೆ, “ನಮಗೆ ಅಷ್ಟೇ ಸಾಕು.” ಪುರಾತನ ಕಾಲಗಳಲ್ಲಿ ಮೋಶೆ, ಎಲೀಯ ಮತ್ತು ಯೆಶಾಯರಿಗೆ ದರ್ಶನಗಳಲ್ಲಿ ತೋರಿಸಿಕೊಂಡಂತೆ ದೇವರ ದೃಶ್ಯ ಕಾಣಿಸಿಕೊಳ್ಳುವಿಕೆಯೊಂದನ್ನು ಯೇಸುವು ಒದಗಿಸುವಂತೆ, ಪ್ರಾಯಶಃ ಫಿಲಿಪ್ಪನು ಬಯಸಿರಬೇಕು. ಆದರೆ ಅಂಥ ದರ್ಶನಗಳಿಗಿಂತಲೂ ಎಷ್ಟೋ ಉತ್ತಮವಾಗಿರುವಂಥಾದ್ದು, ನಿಜವಾಗಿ ಅಪೊಸ್ತಲರಿಗೆ ಇತ್ತು, ಯೇಸುವು ಅವಲೋಕಿಸುವದು: “ಫಿಲಿಪ್ಪನೇ, ನಾನು ಇಷ್ಟು ದಿವಸ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ಅರಿತುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.”

      ಯೇಸುವು ಅವನ ತಂದೆಯ ವ್ಯಕ್ತಿತ್ವವನ್ನು ಎಷ್ಟೊಂದು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ದನೆಂದರೆ, ತತ್ಪರಿಣಾಮವಾಗಿ ನೈಜತೆಯಲ್ಲಿ ತಂದೆಯನ್ನು ನೋಡುವದಕ್ಕೆ ಸಮಾನವಾಗಿತ್ತು. ಆದರೂ, ತಂದೆಯು ಮಗನಿಗಿಂತಲೂ ಶ್ರೇಷ್ಠನು, ಇದನ್ನು ಯೇಸುವು ಅಂಗೀಕರಿಸಿದ್ದಾನೆ: “ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ.” ತನ್ನ ಕಲಿಸುವಿಕೆಗಳಿಗೆ ಎಲ್ಲಾ ಗೌರವವನ್ನು ಯೇಸು ಯೋಗ್ಯವಾಗಿಯೇ ಅವನ ಪರಲೋಕದ ತಂದೆಗೆ ಕೊಡುತ್ತಾನೆ.

      ಈಗ ಯೇಸುವು ಇದನ್ನು ಹೇಳುವದನ್ನು ಕೇಳಲು ಅಪೊಸ್ತಲರಿಗೆ ಎಷ್ಟೊಂದು ಉತ್ತೇಜಕವಾಗಿರಬೇಕು: “ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು”! ಅವನು ಮಾಡಿದ್ದಕ್ಕಿಂತಲೂ ಹೆಚ್ಚಿನ ಅದ್ಭುತಕರ ಶಕ್ತಿಯು ಅವನ ಹಿಂಬಾಲಕರಲ್ಲಿ ಇರುವದು ಎಂಬರ್ಥದಲ್ಲಿ ಯೇಸುವು ಇದನ್ನು ಹೇಳಿರಲಿಲ್ಲ. ಇಲ್ಲ, ಆದರೆ ಅವರು ಶುಶ್ರೂಷೆಯ ಕೆಲಸವನ್ನು ಹೆಚ್ಚು ದೀರ್ಘ ಸಮಯದ ತನಕ, ಹೆಚ್ಚು ವಿಸ್ತಾರವಾದ ಕ್ಷೇತ್ರಕ್ಕೆ ಮತ್ತು ಬಹಳ ಅಧಿಕ ಜನರಿಗೆ ಮಾಡುವರು ಎಂಬದು ಅವನ ಅರ್ಥವಾಗಿತ್ತು.

      ತನ್ನ ಅಗಲುವಿಕೆಯ ನಂತರ, ಯೇಸುವು ತನ್ನ ಶಿಷ್ಯರನ್ನು ತೊರೆಯುವುದಿಲ್ಲ. “ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ,” ಅವನು ಆಶ್ವಾಸನೆಯನ್ನೀಯುವದು, “ಅದನ್ನು ನೆರವೇರಿಸುವೆನು.” ಅವನು ಮತ್ತೂ ಹೇಳುವದು: “ನಾನು ನನ್ನ ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ.” ಅವನು ಪರಲೋಕಕ್ಕೆ ಏರಿಹೋದ ನಂತರ ಆ ಬೇರೊಬ್ಬ ಸಹಾಯಕನಾದ ಪವಿತ್ರಾತ್ಮವನ್ನು ಅವನ ಶಿಷ್ಯರ ಮೇಲೆ ಯೇಸುವು ಸುರಿಸುತ್ತಾನೆ.

      ಯೇಸುವಿನ ಅಗಲಿಹೋಗುವಿಕೆಯು ಹತ್ತರಿಸಿತ್ತು, ಅವನು ಹೇಳುವದು: “ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ.” ಯೇಸುವು ಯಾವನೇ ಮಾನವನು ನೋಡಲು ಅಸಾಧ್ಯವಾಗಿರುವ ಒಬ್ಬ ಆತ್ಮಿಕ ಜೀವಿಯಾಗಲಿರುವನು. ಆದರೆ ತನ್ನ ನಂಬಿಗಸ್ತ ಅಪೊಸ್ತಲರಿಗೆ ಯೇಸುವು ಪುನಃ ವಾಗ್ದಾನಿಸುವದು: “ಆದರೆ ನೀವು ನನ್ನನ್ನು ನೋಡುವಿರಿ; ನಾನು ಬದುಕುವದರಿಂದ ನೀವೂ ಬದುಕುವಿರಿ.” ಹೌದು, ಅವನ ಪುನರುತ್ಥಾನದ ನಂತರ ಮಾನವ ರೂಪದಲ್ಲಿ ಅವರಿಗೆ ಯೇಸುವು ಕಾಣಿಸಿಕೊಳ್ಳುವದು ಮಾತ್ರವಲ್ಲ, ತಕ್ಕ ಸಮಯದಲ್ಲಿ ಅವನು ಅವರನ್ನು ಆತ್ಮ ಜೀವಿಗಳನ್ನಾಗಿ ಸ್ವರ್ಗದಲ್ಲಿ ತನ್ನೊಂದಿಗಿನ ಜೀವಿತಕ್ಕೆ ಪುನರುತ್ಥಾನಗೊಳಿಸಲಿರುವನು.

      ಈಗ ಯೇಸುವು ಒಂದು ಸರಳ ಸೂತ್ರವನ್ನು ಹೇಳುತ್ತಾನೆ: “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸಿ ಅವನಿಗೆ ಕಾಣಿಸಿಕೊಳ್ಳುವೆನು.”

      ಈ ಸಂದರ್ಭದಲ್ಲಿ ತದ್ದಾಯನೆಂದೂ ಕರೆಯಲ್ಪಡುತ್ತಿದ್ದ ಅಪೊಸ್ತಲ ಯೂದನು ಮಧ್ಯದಲ್ಲಿ ಕೇಳುತ್ತಾನೆ: “ಸ್ವಾಮೀ ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವದಕ್ಕೆ ಏನು ಸಂಭವಿಸಿತು?”

      “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ,” ಯೇಸುವು ಉತ್ತರಿಸುವದು, “ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು. . . . ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವದಿಲ್ಲ.” ಅವನ ವಿಧೇಯ ಹಿಂಬಾಲಕರಿಗೆ ತದ್ವಿರುದ್ಧವಾಗಿ ಲೋಕವು ಕ್ರಿಸ್ತನ ಬೋಧನೆಗಳನ್ನು ಅಲಕ್ಷ್ಯಿಸುವದು. ಆದುದರಿಂದ ಅವನು ಅವರಿಗೆ ತನ್ನನ್ನು ಪ್ರಕಟಿಸಿಕೊಳ್ಳುವದಿಲ್ಲ.

      ಅವನ ಐಹಿಕ ಶುಶ್ರೂಷೆಯ ಸಮಯದಲ್ಲಿ, ಯೇಸುವು ಅವನ ಅಪೊಸ್ತಲರಿಗೆ ಅನೇಕ ಸಂಗತಿಗಳನ್ನು ಕಲಿಸಿದ್ದನು. ಅವೆಲ್ಲವುಗಳನ್ನು, ವಿಶೇಷವಾಗಿ ಈ ಗಳಿಗೆಯ ತನಕ, ಅವರು ಗ್ರಹಿಸಿ ಕೊಳ್ಳಲು ಅಷ್ಟೊಂದು ತಪ್ಪಿಹೋಗಿರುವಾಗ, ಅವನ್ನೆಲ್ಲಾ ಅವರು ಹೇಗೆ ನೆನಪಿನಲ್ಲಿಡಶಕ್ತರು? ಸಂತಸಕರವಾಗಿಯೇ, ಯೇಸುವು ಆಶ್ವಾಸನೆಯನ್ನೀಯುವದು: “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿ ಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.”

      ಇನ್ನೊಮ್ಮೆ ಅವರನ್ನು ಸಂತೈಸುತ್ತಾ, ಯೇಸುವಂದದ್ದು: “ಶಾಂತಿಯನ್ನು ನಾನು ಬಿಟ್ಟು ಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ. . . . ನಿಮ್ಮ ಹೃದಯವು ಕಳವಳಗೊಳ್ಳದಿರಲಿ.” ಯೇಸುವು ಅಗಲಿಹೋಗುವದು ಸತ್ಯ, ಆದರೆ ಅವನು ವಿವರಿಸುವದು: “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುವ ವಿಷಯದಲ್ಲಿ ಸಂತೋಷಪಡುತ್ತಿದ್ದಿರಿ; ಯಾಕಂದರೆ ತಂದೆಯು ನನಗಿಂತ ದೊಡ್ಡವನು.”

      ಅವರೊಂದಿಗೆ ಇನ್ನು ಯೇಸುವು ಇರುವ ಸಮಯವು ಕೊಂಚ. “ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳನ್ನಾಡುವದಿಲ್ಲ,” ಅವನು ಹೇಳುವದು, “ಯಾಕಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವದೊಂದು ನನ್ನಲ್ಲಿಲ್ಲ.” ಯೂದನೊಳಗೆ ಪ್ರವೇಶಿಸಿ, ಅವನ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ಪಿಶಾಚನಾದ ಸೈತಾನನು ಇಹಲೋಕದ ಅಧಿಪತಿಯಾಗಿರುತ್ತಾನೆ. ಆದರೆ ದೇವರನ್ನು ಸೇವಿಸುವದರಿಂದ ಯೇಸುವನ್ನು ದೂರಕ್ಕೆ ತಿರುಗಿಸಲು ಸೈತಾನನು ಹೂಡಬಹುದಾಗಿದ್ದ ಯಾವುದೇ ಪಾಪಪೂರಿತ ನಿರ್ಬಲತೆ ಯೇಸುವಿನಲ್ಲಿರಲಿಲ್ಲ.

      ಆಪತ್ತೆಯ ಒಂದು ಸಂಬಂಧದಲ್ಲಿ ಆನಂದಿಸುವದು

      ಜ್ಞಾಪಕಾರ್ಥದ ಊಟದ ನಂತರ, ಅವಿಧಿಯಾಗಿ ಹೃದಯ ಬಿಚ್ಚಿ ಮಾತಾಡುವಾಗ ಯೇಸುವು ತನ್ನ ಅಪೊಸ್ತಲರನ್ನು ಉತ್ತೇಜಿಸುತ್ತಾನೆ. ಈಗ ಮಧ್ಯ ರಾತ್ರಿ ಕಳೆದಿರಬಹುದು. ಆದುದರಿಂದ ಯೇಸುವು ಒತ್ತಾಯಿಸುವದು: “ಏಳಿರಿ, ಇಲ್ಲಿಂದ ಹೋಗೋಣ.” ಆದಾಗ್ಯೂ, ಅವರು ಬಿಟ್ಟು ಹೋಗುವ ಮೊದಲು, ಅವರಿಗಾಗಿ ಅವನಿಗಿರುವ ಪ್ರೀತಿಯಿಂದ ಪ್ರಚೋದಿತನಾಗಿ, ಯೇಸುವು ಮಾತಾಡುತ್ತಾ, ಅವರಿಗೆ ಒಂದು ಪ್ರೇರಕವಾದ ದೃಷ್ಟಾಂತವನ್ನು ಒದಗಿಸುತ್ತಾನೆ.

      “ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆಯು ತೋಟಗಾರನು,” ಅವನು ಆರಂಭಿಸುತ್ತಾನೆ. ಮಹಾ ತೋಟಗಾರನಾದ ಯೆಹೋವ ದೇವರು ಈ ಸಾಂಕೇತಿಕ ದ್ರಾಕ್ಷೇಬಳ್ಳಿಯನ್ನು, ಸಾ.ಶ. 29ರ ಮಾಗಿಕಾಲದಲ್ಲಿ ಅವನ ದೀಕ್ಷಾಸ್ನಾನವಾಗುವ ವೇಳೆ ಯೇಸುವನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದಾಗ ನೆಟ್ಟನು. ಆದರೆ ದ್ರಾಕ್ಷೇಬಳ್ಳಿಯು ತನ್ನೊಬ್ಬನನ್ನು ಮಾತ್ರವಲ್ಲದೆ ಹೆಚ್ಚಿನದ್ದನ್ನು ಸೂಚಿಸುತ್ತದೆ ಎಂದು ತೋರಿಸುತ್ತಾ, ಯೇಸುವು ಅವಲೋಕಿಸಿದ್ದು: “ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದು ಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. . . . ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು.”

      51 ದಿವಸಗಳ ನಂತರ, ಪಂಚಾಶತ್ತಮದಲ್ಲಿ, ಪವಿತ್ರಾತ್ಮವು ಅವರ ಮೇಲೆ ಸುರಿಸಲ್ಪಟ್ಟಾಗ, ಅಪೊಸ್ತಲರೂ, ಇತರರೂ ದ್ರಾಕ್ಷೇಬಳ್ಳಿಯ ಕೊಂಬೆಗಳಾದರು. ಕ್ರಮೇಣ, 1,44,000 ಮಂದಿಗಳು ಸಾಂಕೇತಿಕ ದ್ರಾಕ್ಷೇಬಳ್ಳಿಯ ಕೊಂಬೆಗಳಾದರು. ದೇವರ ರಾಜ್ಯದ ಫಲಗಳನ್ನು ಉತ್ಪಾದಿಸುವ ಸಾಂಕೇತಿಕ ದ್ರಾಕ್ಷೇಬಳ್ಳಿಯಲ್ಲಿ, ಕಾಂಡವಾದ ಯೇಸು ಕ್ರಿಸ್ತನೊಂದಿಗೆ ಇವರೆಲ್ಲರೂ ಸೇರಿರುತ್ತಾರೆ.

      ಫಲಗಳನ್ನು ಕೊಡುವ ಕೀಲಿಕೈಯನ್ನು ಯೇಸುವು ವಿವರಿಸುತ್ತಾನೆ: “ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.” ಆದರೂ, ಒಂದು ವೇಳೆ, ಒಬ್ಬ ವ್ಯಕ್ತಿಯು ಫಲವನ್ನು ಕೊಡಲು ತಪ್ಪುವುದಾದರೆ, ಯೇಸುವು ಹೇಳುವದು: “ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟು ಹೋಗುತ್ತವೆ.” ಇನ್ನೊಂದು ಪಕ್ಕದಲ್ಲಿ ಯೇಸುವು ವಾಗ್ದಾನಿಸುವದು: “ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು.”

      ಇನ್ನೂ ತನ್ನ ಅಪೊಸ್ತಲರಿಗೆ ಯೇಸುವು ಹೇಳುವದು: “ನೀವು ಬಹಳ ಫಲ ಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.” ಕೊಂಬೆಗಳಿಂದ ದೇವರು ಬಯಸುವ ಫಲವು ಕ್ರಿಸ್ತನಂಥ ಗುಣಗಳ, ವಿಶೇಷವಾಗಿ ಪ್ರೀತಿಯ ವ್ಯಕ್ತಪಡಿಸುವಿಕೆಯೇ ಆಗಿರುತ್ತದೆ. ಇನ್ನೂ ಹೆಚ್ಚಾಗಿ, ಕ್ರಿಸ್ತನು ದೇವರ ರಾಜ್ಯದ ಘೋಷಕನಾಗಿದ್ದಂತೆಯೇ, ಅಪೇಕ್ಷಿತ ಫಲಗಳಲ್ಲಿ, ಅವನು ಮಾಡಿದಂತೆ, ಶಿಷ್ಯರನ್ನಾಗಿ ಮಾಡುವ ಅವರ ಚಟುವಟಿಕೆಯೂ ಒಳಗೂಡಿರುತ್ತದೆ.

      “ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ,” ಎಂದು ಯೇಸುವು ಈಗ ಒತ್ತಾಯಿಸುತ್ತಾನೆ. ಆದರೂ, ಅಪೊಸ್ತಲರು ಇದನ್ನು ಹೇಗೆ ಮಾಡಸಾಧ್ಯವಿದೆ? “ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ,” ಅವನು ಹೇಳುವದು, “ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” ಮುಂದುವರಿಸುತ್ತಾ ಯೇಸುವು ವಿವರಿಸುವದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.”

      ಇನ್ನು ಕೆಲವೇ ತಾಸುಗಳಲ್ಲಿ, ಅವನ ಅಪೊಸ್ತಲರ ಮತ್ತು ಯಾರು ಅವನಲ್ಲಿ ನಂಬಿಕೆಯನ್ನಿಡುತ್ತಾರೋ ಅವರೆಲ್ಲರ ಪರವಾಗಿ ತನ್ನ ಜೀವವನ್ನು ಕೊಡುವದರ ಮೂಲಕ ಯೇಸುವು ಈ ಅತಿ ಶ್ರೇಷ್ಠವಾದ ಪ್ರೀತಿಯನ್ನು ಪ್ರದರ್ಶಿಸಲಿಕ್ಕಿದ್ದನು. ಒಬ್ಬರನ್ನೊಬ್ಬರ ಕಡೆಗೆ ತದ್ರೀತಿಯ ಸ್ವ-ತ್ಯಾಗದ ಪ್ರೀತಿಯು ಇರುವಂತೆ ಅವನ ಮಾದರಿಯು ಅವನ ಹಿಂಬಾಲಕರನ್ನು ಪ್ರೇರಿಸತಕ್ಕದ್ದು. ಈ ಪ್ರೀತಿಯು, ಯೇಸುವು ಇದರ ಮುಂಚೆ ತಿಳಿಸಿದಂತೆ, ಅವರನ್ನು ಗುರುತಿಸುತ್ತದೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”

      ಅವನ ಸ್ನೇಹಿತರನ್ನು ಗುರುತಿಸುತ್ತಾ, ಯೇಸುವು ಹೇಳುವದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನಡೆದರೆ ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.”

      ಎಂಥಾ ಬಹುಮೂಲ್ಯ ಸಂಬಂಧವಿದು—ಯೇಸುವಿನ ಆಪ್ತ ಸ್ನೇಹಿತರಾಗಿರುವದು! ಆದರೆ ಈ ಸಂಬಂಧದಲ್ಲಿ ಆನಂದಿಸುವದನ್ನು ಮುಂದುವರಿಸಬೇಕಾದರೆ, ಅವನ ಹಿಂಬಾಲಕರು “ಫಲಕೊಡುತ್ತಾ” ಇರತಕ್ಕದ್ದು. ಹಾಗೆ ಮಾಡುವದಾದರೆ, ಯೇಸುವು ಹೇಳುವದು, “ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.” ಅದು ಖಂಡಿತವಾಗಿಯೂ ರಾಜ್ಯದ ಫಲಗಳನ್ನು ಕೊಡುವದಕ್ಕಾಗಿ ಸಿಗುವ ಮಹತ್ತಾದ ಬಹುಮಾನವಾಗಿದೆ! “ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕೆಂದು” ಅಪೊಸ್ತಲರಿಗೆ ಪುನೊಮ್ಮೆ ಪ್ರೇರಿಸಿದ ನಂತರ, ಲೋಕವು ಅವರನ್ನು ದ್ವೇಷಿಸಲಿರುವದು ಎಂದು ಯೇಸುವು ವಿವರಿಸಿದನು. ಆದರೂ, ಅವನು ಅವರನ್ನು ಸಂತೈಸುವದು: “ಲೋಕವು ನಿಮ್ಮನ್ನು ದ್ವೇಷ ಮಾಡುವದಾದರೆ, ಅದು ಮೊದಲು ನನ್ನ ಮೇಲೆ ದ್ವೇಷ ಮಾಡಿತೆಂದು ತಿಳುಕೊಳ್ಳಿರಿ.” ಯೇಸುವು ಅನಂತರ ಲೋಕವು ಅವನ ಹಿಂಬಾಲಕರನ್ನು ಯಾಕೆ ದ್ವೇಷಿಸುತ್ತದೆ ಎಂದು ಪ್ರಕಟಿಸುತ್ತಾನೆ. “ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದಿಂದ ಆರಿಸಿ ತೆಗೆದು ಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷ ಮಾಡುತ್ತದೆ.”

      ಲೋಕದ ದ್ವೇಷಕ್ಕೆ ಇನ್ನೂ ಹೆಚ್ಚಿನ ಕಾರಣವನ್ನು ವಿವರಿಸುತ್ತಾ, ಯೇಸುವು ಮುಂದುವರಿಸುವದು: “ಆದರೆ ಅವರು ನನ್ನನ್ನು ಕಳುಹಿಸಿ ಕೊಟ್ಟಾತನನ್ನು [ಯೆಹೋವ ದೇವರು] ತಿಳಿಯದವರಾದದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ಮಾಡುವರು.” ಯೇಸುವಿನ ಅದ್ಭುತಕರವಾದ ಕಾರ್ಯಗಳು, ತತ್ಪರಿಣಾಮವಾಗಿ, ಅವನನ್ನು ದ್ವೇಷಿಸುವವರನ್ನು ಅಪರಾಧಿಗಳೆಂದು ತೀರ್ಪುಮಾಡುತ್ತವೆ, ಅವನು ಗಮನಿಸಿದ್ದು: “ಮತ್ತಾರೂ ನಡಿಸದ ಕ್ರಿಯೆಗಳನ್ನು ನಾನು ಅವರಲ್ಲಿ ನಡಿಸದೆ ಇದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರು ನೋಡಿದ್ದಾರೆ, ಆದರೂ ನನ್ನ ಮೇಲೆಯೂ ನನ್ನ ತಂದೆಯ ಮೇಲೆಯೂ ದ್ವೇಷ ಮಾಡಿದ್ದಾರೆ.” ಆದಕಾರಣ, ಯೇಸುವು ಹೇಳುವದು, “ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು.

      ಈ ಹಿಂದೆ ಅವನು ಮಾಡಿದಂತೆ, ಸಹಾಯಕನನ್ನು ಅಂದರೆ ದೇವರ ಬಲವಾದ ಕಾರ್ಯಕಾರಿ ಶಕ್ತಿಯನ್ನು ಅಂದರೆ ಪವಿತ್ರಾತ್ಮವನ್ನು ಕಳುಹಿಸುತ್ತೇನೆಂದು ವಚನಿಸುವದರ ಮೂಲಕ, ಯೇಸುವು ಪುನಃ ಅವರನ್ನು ಸಂತೈಸುತ್ತಾನೆ. “ಆತನು ನನ್ನನ್ನು ಕುರಿತು ಸಾಕ್ಷಿ ಹೇಳುವನು. ನೀವೂ ಸಾಕ್ಷಿಗಳಾಗಿದ್ದೀರಿ.”

      ಅಗಲುವಿಕೆಯ ಇನ್ನು ಹೆಚ್ಚಿನ ಎಚ್ಚರಿಕೆ

      ಮೇಲಂತಸ್ತಿನ ಕೋಣೆಯಿಂದ ಯೇಸು ಮತ್ತು ಅವನ ಅಪೊಸ್ತಲರು ಹೊರಟು ನಿಂತಿದ್ದಾರೆ. “ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ,” ಅವನು ಮುಂದರಿಸುವದು. ತದನಂತರ, ಅವನು ಒಂದು ಗಂಭೀರವಾದ ಎಚ್ಚರಿಕೆಯನ್ನು ಕೊಡುತ್ತಾನೆ: “ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ.”

      ಈ ಎಚ್ಚರಿಕೆಯಿಂದ ಅಪೊಸ್ತಲರು ಬಹಳಷ್ಟು ಕ್ಷೋಭೆಗೊಳಗಾದರೆಂದು ತಿಳಿಯುತ್ತದೆ. ಲೋಕವು ಅವರನ್ನು ದ್ವೇಷಿಸುತ್ತದೆಂದು ಯೇಸುವು ಈ ಮೊದಲು ಹೇಳಿದ್ದರೂ, ಅವರು ಕೊಲ್ಲಲ್ಪಡುವರು ಎಂದು ಅವನು ಇಷ್ಟು ನೇರವಾಗಿ ಹೇಳಿರಲಿಲ್ಲ. “ನಾನು ನಿಮ್ಮ ಸಂಗಡ ಇದ್ದದರಿಂದ,” ಯೇಸುವು ವಿವರಿಸುವದು, “ಮೊದಲು ಇವುಗಳನ್ನು ಹೇಳಲಿಲ್ಲ.” ಆದರೂ, ಅವನು ಅವರನ್ನು ಅಗಲಿಹೋಗುವ ಮೊದಲು ಈ ವಿವರಗಳನ್ನು ಕೊಡುವದರಿಂದ ಅವರನ್ನು ಮೊದಲೇ ಸನ್ನದ್ಧರನ್ನಾಗಿ ಮಾಡುವದು ಎಷ್ಟೊಂದು ಉತ್ತಮ!

      “ಆದರೆ ಈಗ,” ಯೇಸುವು ಮುಂದುವರಿಸುವದು, “ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ನೀನು ಎಲ್ಲಿಗೆ ಹೋಗುತ್ತೀ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವದಿಲ್ಲ.” ಸಾಯಂಕಾಲದ ಮೊದಲಲ್ಲಿ ಅವನು ಎಲ್ಲಿಗೆ ಹೋಗುತ್ತಾನೆ ಎಂದು ಅವರು ವಿಚಾರಿಸಿದ್ದರು, ಆದರೆ ಈಗ ಅವನು ಅವರಿಗೆ ಏನನ್ನು ಹೇಳಿದನೋ ಅದರಿಂದ ಅವರು ಎಷ್ಟು ತತ್ತರಗೊಂಡರೆಂದರೆ, ಇದರ ಕುರಿತು ಹೆಚ್ಚನ್ನು ಕೇಳಲಾರದೆ ಹೋದರು. ಯೇಸುವು ಹೇಳುವದು: “ಆದರೆ ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖದಿಂದ ತುಂಬಿಯದೆ.” ಅವರು ಭಯಂಕರವಾದ ಹಿಂಸೆಯಿಂದ ಬಾಧಿಸಲ್ಪಡುವರು ಮತ್ತು ಕೊಲ್ಲಲ್ಪಡುವರು ಎಂಬ ಕಾರಣದಿಂದ ಮಾತ್ರವಲ್ಲ, ಬದಲು ಅವರ ಧಣಿಯು ಅವರನ್ನು ಬಿಟ್ಟು ಹೋಗಲಿರುವನು ಎಂಬದರಿಂದಲೂ ಅಪೊಸ್ತಲರು ಬಹಳಷ್ಟು ದುಃಖಿತರಾಗಿದ್ದರು.

      ಆದುದರಿಂದ ಯೇಸುವು ವಿವರಿಸುವದು: “ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿ ಕೊಡುತ್ತೇನೆ.” ಮಾನವನೋಪಾದಿ ಯೇಸು ಒಂದು ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರಸಾಧ್ಯವಿತ್ತು, ಆದರೆ ಅವನು ಪರಲೋಕದಲ್ಲಿರುವಾಗ, ಭೂಮಿಯ ಯಾವುದೇ ಕಡೆಯಲ್ಲಿ ಅವರಿದ್ದರೂ, ಸಹಾಯಕನನ್ನು, ದೇವರ ಪವಿತ್ರಾತ್ಮವನ್ನು, ಅವನ ಹಿಂಬಾಲಕರಿಗೆ ಕಳುಹಿಸಶಕ್ತನಾಗಿದ್ದಾನೆ. ಆದುದರಿಂದ ಯೇಸುವು ಹೋಗುವದು ಹಿತಕರವಾಗಲಿಕ್ಕಿತ್ತು.

      ಪವಿತ್ರಾತ್ಮವು, ಯೇಸುವು ಹೇಳುವದು, “ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು.” ಲೋಕದ ಪಾಪ, ದೇವರ ಮಗನ ಮೇಲೆ ನಂಬಿಕೆಯನ್ನು ಪ್ರದರ್ಶಿಸಲು ಅದರ ತಪ್ಪುವಿಕೆಯು ಬಯಲುಗೊಳಿಸಲ್ಪಡುವದು. ಇದಕ್ಕೆ ಕೂಡಿಸಿ, ಯೇಸುವಿನ ನೀತಿಯ ಖಾತರಿದಾಯಕ ರುಜುವಾತು ತಂದೆಯ ಬಳಿಗೆ ಏರಿಹೋಗುವದರಿಂದ ಪ್ರದರ್ಶಿಸಲ್ಪಡುವದು. ಮತ್ತು ಯೇಸುವಿನ ಯಥಾರ್ಥತೆಯನ್ನು ಮುರಿಯಲು ಸೈತಾನನ ಮತ್ತು ಅವನ ದುಷ್ಟ ಲೋಕದ ಸೋಲು, ಇಹಲೋಕಾಧಿಪತಿಯು ಪ್ರತಿಕೂಲ ರೀತಿಯಲ್ಲಿ ತೀರ್ಪು ಹೊಂದಿರುತ್ತಾನೆ ಎಂಬುದರ ಖಾತರಿದಾಯಕ ಸಾಕ್ಷ್ಯವನ್ನು ನೀಡುವದು.

      “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು,” ಯೇಸುವು ಮುಂದುವರಿಸುವದು, “ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.” ಆದಕಾರಣ, ಯೇಸುವು ವಾಗ್ದಾನಿಸಿದಂತೆ, ಪವಿತ್ರಾತ್ಮವನ್ನು, ಅಂದರೆ ದೇವರ ಕಾರ್ಯಕಾರಿ ಶಕ್ತಿಯನ್ನು ಸುರಿಸುವಾಗ, ಅವನ್ನು ಗ್ರಹಿಸಿ ಕೊಳ್ಳುವ ಅವರ ಸಾಮರ್ಥ್ಯಕ್ಕನುಸಾರ ಈ ವಿಷಯಗಳನ್ನು ತಿಳಿದುಕೊಳ್ಳುವಂತೆ, ಅದು ಅವರನ್ನು ಮಾರ್ಗದರ್ಶಿಸುವದು.

      ಯೇಸುವು ಸಾಯಲಿಕ್ಕಿದ್ದಾನೆ ಮತ್ತು ಅವನು ಪುನರುತ್ಥಾನಗೊಂಡ ನಂತರ ಅವರಿಗೆ ಗೋಚರಿಸುವನು ಎಂದು ಹೇಳಿದ್ದನ್ನು ಅರ್ಥೈಸಿಕೊಳ್ಳಲು ಅಪೊಸ್ತಲರು ವಿಶೇಷವಾಗಿ ತಪ್ಪಿಹೋಗುತ್ತಾರೆ. ಆದುದರಿಂದ ಅವರು ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುವದು: “ಇದೇನು ಈತನು ಹೇಳುವ ಮಾತು? ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ ಅನ್ನುತ್ತಾನೆ; ಮತ್ತು ನಾನು ತಂದೆಯ ಬಳಿಗೆ ಹೋಗುವದರಿಂದ ಅನ್ನುತ್ತಾನೆ.”

      ಅವರು ಅವನನ್ನು ಪ್ರಶ್ನಿಸಲು ಬಯಸುತ್ತಾರೆಂದು ಅರಿತುಕೊಂಡು, ಯೇಸುವು ವಿವರಿಸುವದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ, ಆದರೆ ಲೋಕವು ಸಂತೋಷಿಸುವದು; ನಿಮಗೆ ದುಃಖವಾಗುವದು, ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವದು.” ಆ ದಿನದಲ್ಲಿ ಅನಂತರ, ಮಧ್ಯಾಹ್ನದಲ್ಲಿ ಯೇಸುವು ಕೊಲ್ಲಲ್ಪಟ್ಟಾಗ, ಲೋಕದ ಧಾರ್ಮಿಕ ಮುಖಂಡರು ಆನಂದ ಪಟ್ಟರು, ಆದರೆ ಶಿಷ್ಯರು ದುಃಖ ಪಟ್ಟರು. ಆದಾಗ್ಯೂ, ಯೇಸುವು ಪುನರುತ್ಥಾನಗೊಂಡಾಗ ಅವರ ದುಃಖವು ಆನಂದವಾಗಿ ಪರಿವರ್ತಿತವಾಯಿತು! ಅವರ ಮೇಲೆ ದೇವರ ಪವಿತ್ರಾತ್ಮವನ್ನು ಸುರಿಸಿ, ಅವನ ಸಾಕ್ಷಿಗಳಾಗುವಂತೆ ಪಂಚಾಶತ್ತಮದಲ್ಲಿ ಅವರನ್ನು ನೇಮಕ ಮಾಡಿದ್ದರಿಂದ ಅವರ ಆನಂದವು ಮುಂದುವರಿಯಿತು!

      ಸ್ತ್ರೀಯ ಹೆರುವ ಸಮಯದ ಬೇನೆಯನ್ನು ಅಪೊಸ್ತಲರ ಸನ್ನಿವೇಶಕ್ಕೆ ಹೋಲಿಸುತ್ತಾ ಯೇಸುವು ಹೇಳುವದು: “ಒಬ್ಬ ಸ್ತ್ರೀಯು ಹೆರುವಾಗ ತನ್ನ ಬೇನೆಯ ಕಾಲ ಬಂತೆಂದು ಆಕೆಗೆ ದುಃಖವಾಗುತ್ತದೆ.” ಆದರೆ ಒಮ್ಮೆ ಕೂಸನ್ನು ಹೆತ್ತಾದ ಮೇಲೆ ಅವಳ ಸಂಕಟವನ್ನು ಅವಳು ನೆನಸುವದಿಲ್ಲ ಎಂದು ಯೇಸುವು ಅವಲೋಕಿಸುತ್ತಾನೆ, ಮತ್ತು ಹೀಗನ್ನುತ್ತಾ, ಅವನ ಅಪೊಸ್ತಲರನ್ನು ಹುರಿದುಂಬಿಸುತ್ತಾನೆ: “ಹಾಗೆಯೇ ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರಿಗಿ ನೋಡುವೆನು [ನಾನು ಪುನರುತ್ಥಾನಗೊಂಡಾಗ] ಮತ್ತು ಆಗ ನಿಮ್ಮ ಹೃದಯಕ್ಕೆ ಆನಂದವಾಗುವದು; ಮತ್ತು ನಿಮ್ಮ ಆನಂದವನ್ನು ಯಾರೂ ನಿಮ್ಮಿಂದ ತೆಗೆಯುವದಿಲ್ಲ.”

      ಈ ಸಮಯದ ತನಕ, ಅಪೊಸ್ತಲರು ಯೇಸುವಿನ ಹೆಸರಿನ ಮೇಲೆ ಯಾವುದನ್ನೂ ಬೇಡಿರಲಿಲ್ಲ. ಆದರೆ ಈಗ ಅವನು ಹೇಳುವದು: “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. . . . ನೀವು ನನ್ನ ಮೇಲೆ ಮಮತೆಯಿಟ್ಟು ನನ್ನನ್ನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ. ತಂದೆಯ ಬಳಿಯಿಂದ ಹೊರಟು ಲೋಕಕ್ಕೆ ಬಂದಿದ್ದೇನೆ; ಇನ್ನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ.”

      ಅಪೊಸ್ತಲರಿಗೆ ಯೇಸುವಿನ ಮಾತುಗಳು ಬಹಳ ಉತ್ತೇಜಕವಾಗಿದ್ದವು. “ಇದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೆಂದು ನಂಬುತ್ತೇವೆ,” ಎಂದವರು ಹೇಳುತ್ತಾರೆ. “ಈಗ ನಂಬುತ್ತೀರೋ?” ಯೇಸುವು ವಿಚಾರಿಸುತ್ತಾನೆ. “ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ.” ಅದನ್ನು ನಂಬಲು ಅಶಕ್ಯವೆಂದು ತೋರಬಹುದಾದರೂ, ಆ ರಾತ್ರಿಯು ತೀರುವದರ ಮೊದಲೇ ಅದು ಸಂಭವಿಸುತ್ತದೆ!

      “ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ,” ಯೇಸುವು ಸಮಾಪ್ತಿಗೊಳಿಸುತ್ತಾನೆ. “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರ್ರಿ, ನಾನು ಲೋಕವನ್ನು ಜಯಿಸಿದ್ದೇನೆ.” ಯೇಸುವಿನ ಯಥಾರ್ಥತೆಯನ್ನು ಮುರಿಯಲು ಸೈತಾನನು ಮತ್ತು ಅವನ ಲೋಕವು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ದೇವರ ಚಿತ್ತವನ್ನು ನಂಬಿಗಸ್ತಿಕೆಯಿಂದ ಪೂರೈಸುವದರ ಮೂಲಕ ಯೇಸುವು ಲೋಕವನ್ನು ಜಯಿಸಿದನು.

      ಮೇಲಂತಸ್ತಿನ ಕೋಣೆಯಲ್ಲಿ ಕೊನೆಯ ಪ್ರಾರ್ಥನೆ

      ಅವನ ಅಪೊಸ್ತಲರ ಕಡೆಗಿನ ಆಳವಾದ ಪ್ರೀತಿಯಿಂದ ಪ್ರಚೋದಿತನಾಗಿ, ಬರಲಿರುವ ಅವನ ಅಗಲುವಿಕೆಗಾಗಿ ಅವರನ್ನು ಯೇಸುವು ಅಣಿಗೊಳಿಸುತ್ತಿದ್ದನು. ಈಗ ವಿವರವಾದ ಎಚ್ಚರಿಕೆ ಮತ್ತು ಸಂತೈಸುವಿಕೆಯನ್ನು ಕೊಟ್ಟಾದ ಮೇಲೆ ಅವನು ಆಕಾಶದ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅವನ ತಂದೆಗೆ ವಿಜ್ಞಾಪನೆಗಳನ್ನು ಮಾಡುತ್ತಾನೆ: “ತಂದೆಯೇ, ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆ ಪಡಿಸುವದಕ್ಕಾಗುವದು. ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೆ ಅವನು ನಿತ್ಯ ಜೀವವನ್ನು ಕೊಡಬೇಕೆಂದು ಅವನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿಯಲ್ಲಾ.”

      ಎಂಥಾ ಒಂದು ಪ್ರಚೋದಕ ವಿಷಯವನ್ನು ಯೇಸುವು ಪ್ರಸ್ತಾಪಿಸುತ್ತಾನೆ—ನಿತ್ಯ ಜೀವ! “ಎಲ್ಲಾ ಮನುಷ್ಯರ ಮೇಲೆ ಅಧಿಕಾರ” ಕೊಟ್ಟಿರುವದರಿಂದ, ಸಾಯುವ ಎಲ್ಲಾ ಮಾನವ ಕುಲಕ್ಕೆ ಅವನ ವಿಮೋಚನಾ ಯಜ್ಞದ ಪ್ರಯೋಜನಗಳನ್ನು ಯೇಸುವು ನೀಡಲು ಶಕ್ತನಾಗಿದ್ದಾನೆ. ಆದರೂ, ಅವನ ತಂದೆಯ ಒಪ್ಪಿಗೆಯಿರುವವರಿಗೆ ಮಾತ್ರ ಅವನು “ನಿತ್ಯ ಜೀವವನ್ನು” ನೀಡುತ್ತಾನೆ. ನಿತ್ಯ ಜೀವದ ಈ ವಿಷಯದ ಮೇಲೆ ಆಧರಿಸುತ್ತಾ, ಯೇಸುವು ಅವನ ಪ್ರಾರ್ಥನೆಯನ್ನು ಮುಂದುವರಿಸುತ್ತಾನೆ:

      “ಒಬ್ಬನೇ ಸತ್ಯ ದೇವರಾದ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” ಹೌದು, ದೇವರ ಮತ್ತು ಅವನ ಮಗನ, ಇಬ್ಬರ ಜ್ಞಾನವನ್ನು ಪಡೆದುಕೊಳ್ಳುವದರಲ್ಲಿ ರಕ್ಷಣೆಯು ಆಧರಿತವಾಗಿದೆ. ಆದರೆ ಇದು ಕೇವಲ ತಲೇಜ್ಞಾನಕ್ಕಿಂತ ಹೆಚ್ಚಿನದ್ದಾಗಿದೆ.

      ಅವರನ್ನು ಒಬ್ಬ ವ್ಯಕ್ತಿಯು ಆಪ್ತವಾಗಿ ತಿಳಿದುಕೊಂಡು, ಅವರೊಡನೆ ಒಂದು ತಿಳುವಳಿಕೆಯ ಮಿತ್ರತ್ವವನ್ನು ಬೆಳಸತಕ್ಕದ್ದು. ವಿಷಯಗಳನ್ನು ಅವರು ಮಾಡುವಂತೆ ಮತ್ತು ಅವರ ಕಣ್ಣಿನಿಂದ ವಿಷಯಗಳನ್ನು ನೋಡುವಂತೆ, ಒಬ್ಬನ ಭಾವನೆಗಳು ಇರತಕ್ಕದ್ದು. ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ಇತರರೊಡನೆ ಒಬ್ಬನು ವ್ಯವಹರಿಸುವಾಗ, ಅವರ ಎಣೆಯಿಲ್ಲದ ಗುಣಗಳನ್ನು ಅನುಕರಿಸಲು ಒಬ್ಬ ವ್ಯಕ್ತಿಯು ಶ್ರಮಿಸತಕ್ಕದ್ದು.

      ಯೇಸುವು ನಂತರ ಪ್ರಾರ್ಥಿಸುವದು: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆ ಪಡಿಸಿದೆನು.” ಈ ಬಿಂದುವಿನ ತನಕ ತನ್ನ ನೇಮಕವನ್ನು ಪೂರೈಸಿದ್ದರಿಂದ ಮತ್ತು ತನ್ನ ಭಾವಿ ಯಶಸ್ಸಿನ ಕುರಿತು ಭರವಸ ಇದ್ದುದರಿಂದ, ಅವನು ವಿಜ್ಞಾಪಿಸುವದು: “ಈಗ ತಂದೆಯೇ, ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.” ಹೌದು, ಪುನರುತ್ಥಾನವೊಂದರ ಮೂಲಕ ಅವನ ಮುಂಚಿನ ಸ್ವರ್ಗೀಯ ಮಹಿಮೆಗೆ ಪುನಃ ಸ್ಥಾಪಿಸಲ್ಪಡುವಂತೆ ಅವನು ಈಗ ವಿನಂತಿಸುತ್ತಾನೆ.

      ಭೂಮಿಯ ಮೇಲಿನ ಅವನ ಪ್ರಧಾನ ಕೆಲಸವನ್ನು ಸಾರಾಂಶಿಸುತ್ತಾ, ಯೇಸುವು ಹೇಳುವದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯ ಪಡಿಸಿದೆನು. ಇವರು ನಿನ್ನವರಾಗಿದ್ದರು, ನೀನು ಇವರನ್ನು ನನಗೆ ಕೊಟ್ಟಿ; ಮತ್ತು ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ.” ಯೆಹೋವ ಎಂಬ ದೇವರ ಹೆಸರನ್ನು ಯೇಸುವು ತನ್ನ ಶುಶ್ರೂಷೆಯಲ್ಲಿ ಉಪಯೋಗಿಸಿದನು ಮತ್ತು ಅದರ ಸರಿಯಾದ ಉಚ್ಛಾರವನ್ನು ಅವನು ಪ್ರದರ್ಶಿಸಿದನು, ಆದರೆ ಅವನ ಅಪೊಸ್ತಲರಿಗೆ ದೇವರ ಹೆಸರನ್ನು ತಿಳಿಸುವದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದನು. ಯೆಹೋವನ, ಅವನ ವ್ಯಕ್ತಿತ್ವದ ಮತ್ತು ಅವನ ಉದ್ದೇಶಗಳ ಕುರಿತಾದ ಅವರ ಜ್ಞಾನವನ್ನು ಮತ್ತು ಗಣ್ಯತೆಯನ್ನು ಕೂಡ ಅವನು ವಿಸ್ತರಿಸಿದನು.

      ಯೆಹೋವನು ತನಗಿಂತ ಶ್ರೇಷ್ಠನು, ಅವನ ಅಧೀನದಲ್ಲಿ ತಾನು ಸೇವೆ ಸಲ್ಲಿಸುವವನು ಎಂಬ ಗೌರವವನ್ನು ಯೆಹೋವನಿಗೆ ಸಲ್ಲಿಸುತ್ತಾ, ಯೇಸುವು ದೀನತೆಯಿಂದ ಅಂಗೀಕರಿಸುವದು: “ಹೇಗಂದರೆ ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ; ಇವರು ಆ ಮಾತುಗಳನ್ನು ಕೈಕೊಂಡು ನನ್ನನ್ನು ನಿನ್ನ ಬಳಿಯಿಂದ ಹೊರಟು ಬಂದವನೆಂದು ನಿಜವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿ ಕೊಟ್ಟಿರುವದಾಗಿ ನಂಬಿದ್ದಾರೆ.”

      ಅವನ ಹಿಂಬಾಲಕರ ಮತ್ತು ಮಾನವ ಕುಲದ ಉಳಿದವರ ನಡುವೆ ಒಂದು ಭಿನ್ನತೆಯನ್ನು ಮಾಡುತ್ತಾ, ಯೇಸುವು ನಂತರ ಪ್ರಾರ್ಥಿಸುವದು: “ಲೋಕಕ್ಕೋಸ್ಕರ ಕೇಳಿಕೊಳ್ಳದೆ ನೀನು ನನಗೆ ಕೊಟ್ಟವರಿಗೋಸ್ಕರವೇ ಕೇಳಿಕೊಳ್ಳುತ್ತೇನೆ. . . . ನಾನು ಇವರ ಸಂಗಡ ಇದ್ದಾಗ . . . ಇವರನ್ನು ಕಾಯುತ್ತಾ ಬಂದೆನು, ಇವರನ್ನು ಕಾಪಾಡಿದೆನು; ಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕೆ ಗುರಿಯಾದ ಆ ಮನುಷ್ಯನೇ ಹೊರತು ಇವರಲ್ಲಿ ಮತ್ತಾರೂ ನಾಶವಾಗಲಿಲ್ಲ.” ಆ ಮನುಷ್ಯನು ಇಸ್ಕರಿಯೋತ ಯೂದನಾಗಿದ್ದನು. ಅದೇ ಕ್ಷಣದಲ್ಲಿ, ಯೂದನು ಯೇಸುವನ್ನು ಹಿಡುಕೊಡುವ ತನ್ನ ದುಷ್ಟ ನಿಯೋಗವನ್ನು ಕೈಕೊಳ್ಳಲಿದ್ದನು. ಹೀಗೆ, ತಿಳಿಯದೇ ಯೂದನು ಶಾಸ್ತ್ರವಚನಗಳನ್ನು ನೆರವೇರಿಸುತ್ತಿದ್ದನು.

      “ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ,” ಯೇಸುವು ಪ್ರಾರ್ಥಿಸುವದನ್ನು ಮುಂದುವರಿಸುತ್ತಾನೆ, “ಇವರನ್ನು ಲೋಕದೊಳಗಿಂದ ತೆಗೆದು ಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” ಯೇಸುವಿನ ಹಿಂಬಾಲಕರು ಲೋಕದಲ್ಲಿ, ಸೈತಾನನಿಂದ ಆಳಲ್ಪಡುವ ಈ ಸಂಸ್ಥಾಪಿತ ಮಾನವ ಸಮಾಜದೊಳಗೆ ಇದ್ದಾರೆ, ಆದರೆ ಅದರಿಂದ ಮತ್ತು ಅದರ ದುಷ್ಟತನದಿಂದ ಅವರು ಯಾವಾಗಲೂ ಪ್ರತ್ಯೇಕರಾಗಿದ್ದಾರೆ ಮತ್ತು ಪ್ರತ್ಯೇಕರಾಗಿ ಇರಲೇ ಬೇಕು.

      “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು,” ಯೇಸುವು ಮುಂದುವರಿಸುವದು, “ನಿನ್ನ ವಾಕ್ಯವೇ ಸತ್ಯವು.” ಇಲ್ಲಿ ಯೇಸುವು ಪ್ರೇರಿತ ಇಬ್ರಿಯ ಶಾಸ್ತ್ರಗಳನ್ನು “ಸತ್ಯ”ವೆಂದು ಕರೆದಿರುತ್ತಾನೆ, ಅವನು ಅದರಿಂದ ಯಾವಾಗಲೂ ಉಲ್ಲೇಖಿಸುತ್ತಿದ್ದನು. ಆದರೆ, ಅವನು ತನ್ನ ಶಿಷ್ಯರಿಗೆ ಏನನ್ನು ಕಲಿಸಿದನೋ ಮತ್ತು ಅವರು ತದನಂತರ ದೇವ ಪ್ರೇರಣೆಯ ಕೆಳಗೆ ಏನನ್ನು ಬರೆದರೋ ಆ ಕ್ರೈಸ್ತ ಗ್ರೀಕ್‌ ಶಾಸ್ತ್ರವೂ, ತದ್ರೀತಿಯಲ್ಲಿ “ಸತ್ಯ”ವಾಗಿದೆ. ಈ ಸತ್ಯವು ವ್ಯಕ್ತಿಯೊಬ್ಬನನ್ನು ಪವಿತ್ರಗೊಳಿಸಬಲ್ಲದು, ಅವನ ಜೀವನವನ್ನು ಸಮಗ್ರವಾಗಿ ಪರಿವರ್ತಿಸಬಲ್ಲದು ಮತ್ತು ಲೋಕದಿಂದ ಪ್ರತ್ಯೇಕನಾದ ಒಬ್ಬ ವ್ಯಕ್ತಿಯನ್ನಾಗಿ ಮಾಡಬಹುದು.

      ಯೇಸುವು ಈಗ “ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸುತ್ತಾನೆ. ಆದುದರಿಂದ ಯೇಸುವು ಅವನ ಅಭಿಷಿಕ್ತರಾಗಲಿರುವವರ ಮೇಲೆ ಮತ್ತು “ಒಂದು ಹಿಂಡು” ಆಗುವಂತೆ ಒಟ್ಟುಗೂಡಿಸಲ್ಪಡುವ ಇತರ ಭಾವಿ ಶಿಷ್ಯರ ಮೇಲೆಯೂ ಪ್ರಾರ್ಥಿಸುತ್ತಾನೆ. ಇವರೆಲ್ಲರಿಗಾಗಿ ಅವನು ಯಾವ ವಿನಂತಿಯನ್ನು ಮಾಡುತ್ತಾನೆ?

      “ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ . . . ಅವರು ಒಂದಾಗಿರಬೇಕೆಂದು ಕೇಳಿಕೊಳ್ಳುತ್ತೇನೆ.” ಯೇಸುವು ಮತ್ತು ಅವನ ತಂದೆಯು ಅಕ್ಷರಶಃ ಒಬ್ಬ ವ್ಯಕ್ತಿಯಾಗಿರುವದಿಲ್ಲ, ಆದರೆ ಅವರು ಎಲ್ಲಾ ಸಂಗತಿಗಳಲ್ಲಿ ಐಕ್ಯತೆಯಲ್ಲಿದ್ದಾರೆ. ಅಂಥಾ ಐಕ್ಯತೆಯಲ್ಲಿ ಅವನ ಶಿಷ್ಯರು ಆನಂದಿಸುವಂತೆ ಯೇಸುವು ಪ್ರಾರ್ಥಿಸುತ್ತಾನೆ, ಆ ಮೂಲಕ “ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ ಎಂದೂ ಲೋಕಕ್ಕೆ ತಿಳಿದು ಬರುವದು.”

      ಅವನ ಅಭಿಷಿಕ್ತ ಹಿಂಬಾಲಕರಾಗುವವರ ಪರವಾಗಿ ಯೇಸುವು ತನ್ನ ಸ್ವರ್ಗೀಯ ತಂದೆಗೆ ಈ ರೀತಿಯ ವಿನಂತಿಯೊಂದನ್ನು ಮಾಡುತ್ತಾನೆ. ಯಾವುದಕ್ಕೆ? “ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ [ಅದು ಆದಾಮ ಹವ್ವರು ಸಂತಾನವನ್ನು ಪಡೆಯುವ ಮೊದಲು] ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಛೈಸುತ್ತೇನೆ.” ಅದಕ್ಕಿಂತ ಎಷ್ಟೋ ಮೊದಲೇ, ಯೇಸು ಕ್ರಿಸ್ತನಾಗಿ ಬಂದ, ತನ್ನ ಒಬ್ಬನೇ ಜನಿತ ಪುತ್ರನನ್ನು ದೇವರು ಪ್ರೀತಿಸಿದ್ದನು.

      ಅವನ ಪ್ರಾರ್ಥನೆಯನ್ನು ಕೊನೆಗೊಳಿಸುತ್ತಾ, ಯೇಸುವು ಪುನಃ ಒತ್ತರವನ್ನು ಹಾಕುತ್ತಾನೆ: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ.” ಅಪೊಸ್ತಲರಿಗೆ ದೇವರ ಹೆಸರನ್ನು ಕಲಿಯುವದು ಅಂದರೆ ದೇವರ ಪ್ರೀತಿಯನ್ನು ಅವರು ವೈಯಕ್ತಿಕವಾಗಿ ತಿಳಿಯುವಂಥದು ಒಳಗೂಡಿರುತ್ತದೆ. ಯೋಹಾನ 14:1—17:26; 13:27, 35, 36; 10:16; ಲೂಕ 22:3, 4; ವಿಮೋಚನಕಾಂಡ 24:10; 1 ಅರಸುಗಳು 19:9-13; ಯೆಶಾಯ 6:1-5; ಗಲಾತ್ಯ 6:16; ಕೀರ್ತನೆ 35:19; 69:4; ಜ್ಞಾನೋಕ್ತಿ 8:22, 30.

      ▪ ಯೇಸುವು ಎಲ್ಲಿಗೆ ಹೋಗಲಿದ್ದನು, ಮತ್ತು ಅಲ್ಲಿಗೆ ಹೋಗುವ ಮಾರ್ಗದ ಕುರಿತು ತೋಮನು ಯಾವ ಉತ್ತರವನ್ನು ಪಡೆದನು?

      ▪ ಅವನ ವಿನಂತಿಯಿಂದ, ಯೇಸುವು ಏನನ್ನು ಒದಗಿಸುವಂತೆ ಫಿಲಿಪ್ಪನು ಪ್ರಾಯಶಃ ಬಯಸಿದ್ದನು?

      ▪ ಯೇಸುವನ್ನು ನೋಡಿದವನು ತಂದೆಯನ್ನೂ ಕೂಡ ನೋಡಿದ್ದಾನೆ ಯಾಕೆ?

      ▪ ಅವನು ಮಾಡಿರುವದಕ್ಕಿಂತಲೂ ಮಹತ್ತಾದ ಕ್ರಿಯೆಗಳನ್ನು ಯೇಸುವಿನ ಶಿಷ್ಯರು ಹೇಗೆ ಮಾಡುತ್ತಾರೆ?

      ▪ ಯೇಸುವಿನ ಮೇಲೆ ಸೈತಾನನಿಗೆ ಯಾವುದೇ ಹಿಡಿತವಿಲ್ಲ ಎಂಬದು ಯಾವ ಅರ್ಥದಲ್ಲಿ?

      ▪ ಸಾಂಕೇತಿಕ ದ್ರಾಕ್ಷೇಬಳ್ಳಿಯನ್ನು ಯೆಹೋವನು ಯಾವಾಗ ನೆಟ್ಟನು, ಮತ್ತು ಆ ದ್ರಾಕ್ಷೇಬಳ್ಳಿಯ ಭಾಗವಾಗಿ ಇತರರು ಯಾವಾಗ ಮತ್ತು ಹೇಗೆ ಬಂದರು?

      ▪ ಕಟ್ಟಕಡೆಗೆ ಸಾಂಕೇತಿಕ ದ್ರಾಕ್ಷೇಬಳ್ಳಿಗೆ ಎಷ್ಟು ಕೊಂಬೆಗಳಿರುತ್ತವೆ?

      ▪ ಕೊಂಬೆಗಳಿಂದ ದೇವರು ಯಾವ ಫಲವನ್ನು ಅಪೇಕ್ಷಿಸುತ್ತಾನೆ?

      ▪ ನಾವು ಯೇಸುವಿನ ಸ್ನೇಹಿತರಾಗುವದು ಹೇಗೆ?

      ▪ ಯೇಸುವಿನ ಹಿಂಬಾಲಕರನ್ನು ಲೋಕವು ಯಾಕೆ ದ್ವೇಷಿಸುತ್ತದೆ?

      ▪ ಯೇಸುವಿನ ಯಾವ ಎಚ್ಚರಿಕೆಯು ಅವನ ಅಪೊಸ್ತಲರನ್ನು ಕ್ಷೋಭೆಗೊಳಪಡಿಸುತ್ತದೆ?

      ▪ ಅವನು ಎಲ್ಲಿಗೆ ಹೋಗುತ್ತಾನೆಂದು ಕೇಳಲು ಅಪೊಸ್ತಲರು ತಪ್ಪಿಹೋದದ್ದು ಯಾಕೆ?

      ▪ ವಿಶೇಷವಾಗಿ ಯಾವುದನ್ನು ಅರ್ಥೈಸಿಕೊಳ್ಳಲು ಅಪೊಸ್ತಲರು ತಪ್ಪುತ್ತಾರೆ?

      ▪ ದುಃಖದಿಂದ ಆನಂದಕ್ಕೆ ಅಪೊಸ್ತಲರ ಸನ್ನಿವೇಶವು ಬದಲಾಗುತ್ತದೆ ಎಂದು ಯೇಸುವು ಹೇಗೆ ದೃಷ್ಟಾಂತಿಸುತ್ತಾನೆ?

      ▪ ಬಲುಬೇಗನೆ ಅಪೊಸ್ತಲರು ಏನು ಮಾಡಲಿದ್ದರೆಂದು ಯೇಸು ಹೇಳಿದನು?

      ▪ ಯೇಸುವು ಲೋಕವನ್ನು ಜಯಿಸಿದ್ದು ಹೇಗೆ?

      ▪ “ಎಲ್ಲಾ ಮನುಷ್ಯರ ಮೇಲೆ ಅಧಿಕಾರ” ಯೇಸುವಿಗೆ ಕೊಡಲ್ಪಟ್ಟಿದೆ ಎಂಬುದು ಯಾವ ಅರ್ಥದಲ್ಲಿ?

      ▪ ದೇವರ ಮತ್ತು ಅವನ ಮಗನ ಜ್ಞಾನವನ್ನು ತೆಗೆದು ಕೊಳ್ಳುವದು ಅಂದರೆ ಯಾವ ಅರ್ಥದಲ್ಲಿರುತ್ತದೆ?

      ▪ ದೇವರ ಹೆಸರನ್ನು ಯೇಸುವು ಪ್ರಕಟಪಡಿಸಿದ್ದು ಯಾವ ರೀತಿಗಳಲ್ಲಿ?

      ▪ “ಸತ್ಯ” ಏನು, ಮತ್ತು ಕ್ರೈಸ್ತನೊಬ್ಬನನ್ನು ಅದು ಹೇಗೆ ಪವಿತ್ರಗೊಳಿಸುತ್ತದೆ?

      ▪ ದೇವರು, ಅವನ ಮಗನು ಮತ್ತು ಎಲ್ಲಾ ಸತ್ಯಾರಾಧಕರು ಒಂದಾಗಿದ್ದಾರೆ ಹೇಗೆ?

      ▪ “ಲೋಕವು ಹುಟ್ಟುವದಕ್ಕಿಂತ ಮುಂಚೆ” ಅಂದರೆ ಯಾವಾಗ?

  • ತೋಟದಲ್ಲಿ ಸಂಕಟ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 117

      ತೋಟದಲ್ಲಿ ಸಂಕಟ

      ಯೇಸುವು ಪ್ರಾರ್ಥನೆಯನ್ನು ಮುಗಿಸಿದ ನಂತರ, ಅವನೂ, ಅವನ 11 ಮಂದಿ ನಂಬಿಗಸ್ತ ಅಪೊಸ್ತಲರೂ ಯೆಹೋವನಿಗೆ ಕೀರ್ತನೆಗಳನ್ನು ಹಾಡುತ್ತಾರೆ. ಅನಂತರ ಅವರು ಮೇಲಂತಸ್ತಿನ ಕೋಣೆಯಿಂದ ಇಳಿದು, ರಾತ್ರಿಯ ತಣ್ಣಗಿನ ಕತ್ತಲಲ್ಲಿ ಸೇರುತ್ತಾರೆ ಮತ್ತು ಬೇಥಾನ್ಯಕ್ಕೆ ಹೋಗಲು ಕಿದ್ರೋನ್‌ ಹಳ್ಳದ ಆಚೆಗೆ ಹೊರಟು ಹೋಗುತ್ತಾರೆ. ಆದರೆ ದಾರಿಯಲ್ಲಿ ಅವರು ಒಂದು ಮೆಚ್ಚಿನ ಸ್ಥಳವಾದ, ಗೆತ್ಸೇಮನೆ ತೋಟದಲ್ಲಿ ತಂಗುತ್ತಾರೆ. ಇದು ಎಣ್ಣೇಮರಗಳ ಗುಡ್ಡದ ಮೇಲೆ ಯಾ ಅದರ ಪರಿಸರದಲ್ಲಿ ಇತ್ತು. ಯೇಸುವು ತನ್ನ ಅಪೊಸ್ತಲರೊಂದಿಗೆ ಆಗಾಗ್ಯೆ ಇಲ್ಲಿ ಎಣ್ಣೇಮರಗಳ ನಡುವೆ ಒಟ್ಟು ಸೇರುತ್ತಿದ್ದನು.

      ಅಪೊಸ್ತಲರಲ್ಲಿ ಎಂಟು ಮಂದಿಯನ್ನು—ಪ್ರಾಯಶಃ ತೋಟದ ಪ್ರವೇಶ ದ್ವಾರದ ಹತ್ತಿರ—ಬಿಟ್ಟು, ಅವರಿಗೆ ಹೀಗೆ ಹೇಳುತ್ತಾನೆ: “ಇಲ್ಲೇ ಕೂತುಕೊಳ್ಳಿರಿ, ನಾನು ಅತಲ್ತಾಗಿ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇನೆ.” ಅನಂತರ ಅವನು ಉಳಿದ ಮೂವರನ್ನು—ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತೆಗೆದು ಕೊಂಡು ತೋಟದಲ್ಲಿ ಇನ್ನಷ್ಟು ಒಳಗೆ ಹೋಗುತ್ತಾನೆ. ಯೇಸುವು ದುಃಖ ಪಟ್ಟು ಮನಗುಂದಿದವನಾದನು. “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ,” ಎಂದು ಅವನು ಅವರಿಗೆ ಹೇಳುತ್ತಾನೆ, “ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ.”

      ಇನ್ನು ಸ್ವಲ್ಪ ಮುಂದೆ ಹೋಗಿ, ಯೇಸುವು ನೆಲದ ಮೇಲೆ ಬೋರಲ ಬಿದ್ದು, ತೀವ್ರಾಸಕಿಯ್ತಿಂದ ಪ್ರಾರ್ಥಿಸಲು ಆರಂಭಿಸುತ್ತಾನೆ: “ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” ಅವನ ಅರ್ಥವೇನು? ಅವನ “ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾದದ್ದು” ಯಾಕೆ? ಮರಣ ಪಡುವ ಮತ್ತು ವಿಮೋಚನೆಯನ್ನು ಒದಗಿಸುವ ತನ್ನ ನಿರ್ಧಾರದಲ್ಲಿ ಅವನು ಹಿಮ್ಮೆಟ್ಟುತ್ತಾನೋ?

      ಎಂದೆಂದಿಗೂ ಇಲ್ಲ! ಮರಣದಿಂದ ತನ್ನನ್ನು ಉಳಿಸಲು ಯೇಸುವು ಇಲ್ಲಿ ಭಿನ್ನಹ ಮಾಡುವದಲ್ಲ. ಒಮ್ಮೆ ಪೇತ್ರನಿಂದ ಸೂಚಿಸಲ್ಪಟ್ಟ, ಒಂದು ಯಜ್ಞಾರ್ಪಿತ ಮರಣವನ್ನು ಹೋಗಲಾಡಿಸುವ ಯೋಚನೆಯು ಕೂಡ, ಅವನಿಗೆ ಹೇಯಕರವಾಗಿತ್ತು. ಬದಲಾಗಿ ಅವನು ಸಂಕಟದಲ್ಲಿದ್ದನು, ಯಾಕಂದರೆ ಅವನು ಬೇಗನೆ ಸಾಯಲಿರುವ ವಿಧವು—ಒಬ್ಬ ಅಧಮನಾದ ಪಾತಕಿಯಂತೆ—ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುತ್ತದೋ ಎಂದು ಅವನು ಭಯಪಟ್ಟನು. ಮನುಷ್ಯರಲ್ಲಿ ಒಬ್ಬ ಅತೀ ಕೆಡುಕನೋಪಾದಿ—ದೇವರ ವಿರುದ್ಧ ದೇವನಿಂದಕನೋಪಾದಿ ಇನ್ನು ಕೆಲವೇ ತಾಸುಗಳಲ್ಲಿ ಅವನು ವಧಾಸ್ತಂಭದ ಮೇಲೆ ತೂಗಲ್ಪಡಲಿದ್ದನು ಎಂಬುದನ್ನು ಅವನು ಈಗ ತಿಳಿಯುತ್ತಾನೆ! ಅದು ಅವನನ್ನು ಬಹಳಷ್ಟು ಕಠಿಣವಾಗಿ ದುಃಖಕ್ಕೀಡುಮಾಡುತ್ತದೆ.

      ದೀರ್ಘ ಸಮಯ ಪ್ರಾರ್ಥಿಸಿದ ನಂತರ, ಯೇಸುವು ಹಿಂತೆರಳಿದಾಗ ತನ್ನ ಮೂವರು ಅಪೊಸ್ತಲರು ನಿದ್ರಿಸುವುದನ್ನು ಕಾಣುತ್ತಾನೆ. ಪೇತ್ರನನ್ನು ಸಂಬೋಧಿಸುತ್ತಾ, ಅವನನ್ನುವದು: “ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ.” ಆದಾಗ್ಯೂ, ಒತ್ತಡದ ಕೆಳಗೆ ಅವರಿರುವದನ್ನು ಮತ್ತು ರಾತ್ರಿ ಬಹಳ ಕಳೆದಿರುವದನ್ನು ಅಂಗೀಕರಿಸುತ್ತಾ, ಅವನು ಹೇಳುವದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.”

      ಅನಂತರ ಯೇಸುವು ಎರಡನೆಯ ಬಾರಿ ಹೋಗುತ್ತಾನೆ ಮತ್ತು “ಈ ಪಾತ್ರೆ” ಯನ್ನು ಅಂದರೆ ಅವನಿಗಾಗಿ ಯೆಹೋವನಿಂದ ನೇಮಿತವಾದ ಪಾಲನ್ನು ಅಥವಾ ಚಿತ್ತವನ್ನು, ಅವನಿಂದ ದೇವರು ತೆಗೆಯುವಂತೆ ವಿಜ್ಞಾಪಿಸುತ್ತಾನೆ. ಅವನು ಹಿಂತೆರಳಿದಾಗ, ಈ ಮೂವರು, ತಾವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸುವ ಬದಲಿಗೆ ಪುನಃ ನಿದ್ರಿಸುವದನ್ನು ಕಾಣುತ್ತಾನೆ. ಯೇಸುವು ಅವರಿಗೆ ಮಾತಾಡಿದಾಗ, ಏನು ಉತ್ತರ ಕೊಡುವದೆಂದು ಅವರು ತಿಳಿಯದಾದರು.

      ಕಟ್ಟಕಡೆಗೆ, ಮೂರನೆಯ ಬಾರಿ, ಅವನು ಕಲ್ಲೆಸುಗೆಯಷ್ಟು ದೂರ ಹೋಗಿ, ಮೊಣಕಾಲೂರಿ, ಬಲವಾಗಿ ಕೂಗುತ್ತಾ, ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥಿಸುತ್ತಾನೆ: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಒಬ್ಬ ಪಾತಕಿಯೋಪಾದಿ ಅವನ ಮರಣವು ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುವ ಕಾರಣ ಯೇಸುವು ತೀವ್ರವಾದ ನೋವನ್ನು ಅನುಭವಿಸಿದನು. ಯಾಕೆ, ದೇವದೂಷಕನು—ದೇವರನ್ನು ಶಪಿಸುವವನು—ಎಂಬ ಆಪಾದನೆಯನ್ನು ತಾಳಿಕೊಳ್ಳಲು ಬಹಳ ಹೆಚ್ಚಾಗಿತ್ತು!

      ಆದಾಗ್ಯೂ, ಯೇಸುವು ಪ್ರಾರ್ಥಿಸುವದನ್ನು ಮುಂದರಿಸುತ್ತಾನೆ: “ಹೇಗೂ ನನ್ನ ಚಿತ್ತವಲ್ಲ. ನಿನ್ನ ಚಿತ್ತವೇ ಆಗಲಿ.” ದೇವರ ಚಿತ್ತಕ್ಕೆ ಯೇಸುವು ವಿಧೇಯತೆಯಿಂದ ಅಧೀನನಾಗುತ್ತಾನೆ. ಈ ಸಮಯದಲ್ಲಿ ಪರಲೋಕದಿಂದ ದೇವದೂತನೊಬ್ಬನು ಕಾಣಿಸಿಕೊಳ್ಳುತ್ತಾನೆ ಮತ್ತು ಕೆಲವು ಧೈರ್ಯದಾಯಕ ಮಾತುಗಳಿಂದ ಅವನನ್ನು ಬಲಪಡಿಸುತ್ತಾನೆ. ಅವನ ತಂದೆಯ ಪ್ರಸನ್ನತೆಯ ಸಮ್ಮತಿ ಇದೆ ಎಂದು ಯೇಸುವಿಗೆ ದೇವದೂತನು ಪ್ರಾಯಶಃ ಹೇಳಿರಬಹುದು.

      ಆದರೂ, ಯೇಸುವಿನ ಭುಜಗಳ ಮೇಲೆ ಎಂಥ ಭಾರವಿತ್ತು! ಅವನ ಸ್ವಂತ ನಿತ್ಯ ಜೀವ ಮತ್ತು ಇಡೀ ಮಾನವ ಕುಲದ ನಿತ್ಯ ಜೀವವು ಅನಿಶ್ಚಿತ ಸ್ಥಿತಿಯಲ್ಲಿತ್ತು. ಭಾವನಾತ್ಮಕ ಒತ್ತಡವು ಭಾರೀ ಪ್ರಮಾಣದ್ದಾಗಿತ್ತು. ಆದುದರಿಂದ ಯೇಸು ತೀವ್ರ ಆಸಕ್ತಿಯಿಂದ ಪ್ರಾರ್ಥಿಸುತ್ತಿರುವದನ್ನು ಮುಂದರಿಸುತ್ತಾನೆ ಮತ್ತು ಅವನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿ ಇತ್ತು. “ಇದು ಒಂದು ಬಹಳ ವಿರಳವಾದ ಪ್ರಕೃತಿ ಘಟನೆಯಾಗಿರುವದಾದರೂ,” ದ ಜರ್ನಲ್‌ ಆಫ್‌ ದ ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಶನ್‌ ಅವಲೋಕಿಸುವದು, “ರಕ್ತದ ಬೆವರು . . . ಉಚ್ಛಮಟ್ಟದ ಭಾವನಾವೇಶದ ಸ್ಥಿತಿಯಲ್ಲಿ ಸಂಭವಿಸಬಹುದು.”

      ಅನಂತರ ಯೇಸುವು ಮೂರನೆಯ ಸಲ ಅಪೊಸ್ತಲರ ಬಳಿಗೆ ಹಿಂತೆರಳಿದಾಗ, ಅವರು ಪುನಃ ನಿದ್ದೆ ಮಾಡುವದನ್ನು ಕಂಡನು. ಅವರು ಬಹಳ ವ್ಯಥೆಯಿಂದ ಬಳಲಿದ್ದರು. “ಇಂಥಹ ಸಮಯದಲ್ಲಿ, ನೀವು ಇನ್ನೂ ನಿದ್ದೆ ಮಾಡಿ ದಣುವಾರಿಸಿಕೊಳ್ಳುತ್ತೀರಿ!” ಎಂದು ಅವನು ಹೇಳುತ್ತಾನೆ. “ಸಾಕು! ಆ ಗಳಿಗೆ ಬಂತು! ಇಗೋ, ಮನುಷ್ಯ ಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ. ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ, ನೋಡಿರಿ.”

      ಅವನು ಇನ್ನೂ ಮಾತಾಡುತ್ತಿರುವಾಗಲೇ, ಇಸ್ಕರಿಯೋತ ಯೂದನು ಸಮೀಪಿಸುತ್ತಾನೆ, ಅವನೊಂದಿಗೆ ದೀವಿಟಿಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದಿರುವ ಒಂದು ದೊಡ್ಡ ಜನರ ಗುಂಪು ಇತ್ತು. ಮತ್ತಾಯ 26:30, 36-47; 16:21-23; ಮಾರ್ಕ 14:26, 32-43; ಲೂಕ 22:39-47; ಯೋಹಾನ 18:1-3; ಇಬ್ರಿಯ 5:7.

      ▪ ಮೇಲಂತಸ್ತಿನ ಕೋಣೆಯನ್ನು ಬಿಟ್ಟು ಹೊರಟು ಬಂದ ನಂತರ ಯೇಸುವು ಅಪೊಸ್ತಲರನ್ನು ಎಲ್ಲಿಗೆ ನಡಿಸುತ್ತಾನೆ, ಮತ್ತು ಅಲ್ಲಿ ಅವನು ಏನು ಮಾಡುತ್ತಾನೆ?

      ▪ ಯೇಸುವು ಪ್ರಾರ್ಥಿಸುತ್ತಿರುವಾಗ, ಅಪೊಸ್ತಲರು ಏನು ಮಾಡುತ್ತಾರೆ?

      ▪ ಯೇಸುವು ಸಂಕಟ ಪಡುವದು ಯಾಕೆ, ಮತ್ತು ಅವನು ದೇವರಿಗೆ ಯಾವ ಭಿನ್ನಹವನ್ನು ಮಾಡುತ್ತಾನೆ?

      ▪ ಯೇಸುವಿನ ಬೆವರು ರಕ್ತದ ಹನಿಗಳೋಪಾದಿ ಆಗುವದು ಏನನ್ನು ಸೂಚಿಸುತ್ತದೆ?

  • ಹಿಡುಕೊಡುವಿಕೆ ಮತ್ತು ಕೈದುಮಾಡುವಿಕೆ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 118

      ಹಿಡುಕೊಡುವಿಕೆ ಮತ್ತು ಕೈದುಮಾಡುವಿಕೆ

      ಯೂದನು ಸೈನಿಕರ, ಮಹಾ ಯಾಜಕರ, ಫರಿಸಾಯರ ಮತ್ತು ಇತರರ ಒಂದು ದೊಡ್ಡ ಗುಂಪನ್ನು ಗೆತ್ಸೇಮನೆ ತೋಟದೊಳಗೆ ನಡಿಸಿದಾಗ, ಮಧ್ಯ ರಾತ್ರಿ ಕಳೆದಿತ್ತು. ಯೇಸುವನ್ನು ಹಿಡುಕೊಡಲು ಯೂದನಿಗೆ 30 ಬೇಳ್ಳಿ ನಾಣ್ಯಗಳನ್ನು ಕೊಡುತ್ತೇವೆಂದು ಯಾಜಕರು ಒಪ್ಪಿದ್ದರು.

      ಈ ಮುಂಚೆ ಪಸ್ಕ ಹಬ್ಬದ ಊಟದ ನಂತರ ಯೂದನನ್ನು ಬಿಟ್ಟುಹೋಗುವಂತೆ ಹೇಳಿದ ಮೇಲೆ, ಅವನು ನೇರವಾಗಿ ಮಹಾ ಯಾಜಕರ ಬಳಿಗೆ ಹೋಗಿದ್ದನು ಎಂದು ತಿಳಿಯುತ್ತದೆ. ಇವರು ಬಲುಬೇಗನೇ ತಮ್ಮ ಸ್ವಂತ ಅಧಿಕಾರಿಗಳನ್ನು ಮತ್ತು ಸೈನಿಕರ ಒಂದು ದಳವನ್ನು ಒಟ್ಟುಗೂಡಿಸಿದರು. ಬಹುಶಃ ಯೂದನು ಮೊದಲು ಅವರನ್ನು ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸುವ ಸ್ಥಳಕ್ಕೆ ನಡಿಸಿದಿರ್ದಬಹುದು. ಅವರು ಅಲ್ಲಿಂದ ತೆರಳಿದ್ದಾರೆಂದು ಕಂಡುಕೊಂಡಾದ ನಂತರ, ಆಯುಧಗಳನ್ನು, ದೀವಟಿಗಳನ್ನು ಮತ್ತು ಪಂಜುಗಳನ್ನು ಹಿಡಿದುಕೊಂಡು ಬರುತ್ತಿದ್ದ ಈ ದೊಡ್ಡ ಗುಂಪು, ಯೂದನನ್ನು ಯೆರೂಸಲೇಮ್‌ನಿಂದ ಹೊರಗಡೆ, ಕಿದ್ರೋನ್‌ ಹಳ್ಳದ ಆಚೆಗೆ ಹಿಂಬಾಲಿಸಿತು.

      ಯೇಸುವನ್ನು ಎಲ್ಲಿ ಕಂಡುಕೊಳ್ಳಬಹುದು ಎಂಬ ನಿಶ್ಚಿತ ಭಾವದಿಂದ, ಯೂದನು ಎಣ್ಣೇಮರಗಳ ಗುಡ್ಡದ ಮೇಲೆ ತಂಡವನ್ನು ಕೊಂಡೊಯ್ಯುತ್ತಿದ್ದನು. ಕಳೆದ ವಾರದಲ್ಲಿ ಯೇಸುವು ಮತ್ತು ಅಪೊಸ್ತಲರು ಬೇಥಾನ್ಯ ಮತ್ತು ಯೆರೂಸಲೇಮಿನ ನಡುವೆ ಹಿಂದೆ ಮುಂದೆ ಸಂಚರಿಸುತ್ತಿದ್ದರಿಂದ, ಅವರು ವಿಶ್ರಾಂತಿ ಪಡೆಯಲು ಮತ್ತು ಸಂಭಾಷಣೆ ನಡಿಸಲು ಆಗಾಗ್ಯೆ ಗೆತ್ಸೇಮನೆ ತೋಟದಲ್ಲಿ ತಂಗುತ್ತಿದ್ದರು. ಆದರೆ, ಈಗ, ಎಣ್ಣೇಮರಗಳ ಕೆಳಗೆ ಕತ್ತಲೆಯಲ್ಲಿ ಯೇಸುವು ಪ್ರಾಯಶಃ ಮರೆಯಾಗಿದ್ದುದರಿಂದ, ಸೈನಿಕರು ಅವನ ಗುರುತನ್ನು ಮಾಡುವದು ಹೇಗೆ? ಅವರು ಅವನನ್ನು ಈ ಮುಂಚೆ ಎಂದೂ ನೋಡಿರಲಿಕ್ಕಿಲ್ಲ. ಆದುದರಿಂದ ಯೂದನು ಒಂದು ಸಂಕೇತವನ್ನು ಕೊಡುತ್ತಾ, ಹೇಳುವದು: “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ.”

      ಯೂದನು ದೊಡ್ಡ ಗುಂಪನ್ನು ತೋಟದೊಳಗೆ ನಡಿಸುತ್ತಾನೆ, ಅಲ್ಲಿ ಯೇಸುವನ್ನು ಅವನ ಅಪೊಸ್ತಲರೊಂದಿಗೆ ಕಂಡುಕೊಳ್ಳುತ್ತಾನೆ ಮತ್ತು ನೇರವಾಗಿ ಅವನ ಬಳಿಗೆ ಹೋಗುತ್ತಾನೆ. “ಗುರುವೇ, ನಮಸ್ಕಾರ,” ಎಂದವನು ಹೇಳುತ್ತಾನೆ ಮತ್ತು ಅವನನ್ನು ಮೃದುವಾಗಿ ಮುದ್ದಿಡುತ್ತಾನೆ.

      “ಗೆಳೆಯನೇ, ನೀನು ಬಂದ ಕೆಲಸ ಇದೇಯೋ?” ಯೇಸುವು ಎದುರುತ್ತರ ಕೊಡುತ್ತಾನೆ. ಅನಂತರ, ಅವನ ಸ್ವಂತ ಪ್ರಶ್ನೆಗೆ ಉತ್ತರವನ್ನೀಯುತ್ತಾ, ಅವನಂದದ್ದು: “ಯೂದನೇ, ಮುದ್ದಿಟ್ಟು ಮನುಷ್ಯ ಕುಮಾರನನ್ನು ಹಿಡುಕೊಡುತ್ತೀಯಾ?” ಆದರೆ ಅವನನ್ನು ಹಿಡುಕೊಟ್ಟವನ ಕುರಿತು ಅಷ್ಟೇ ಸಾಕು! ಯೇಸುವು ಈಗ ಉರಿಯುತ್ತಿರುವ ಪಂಜುಗಳ ಮತ್ತು ದೀವಟಿಗಳ ಪ್ರಕಾಶಕ್ಕೆ ಬರಲು ಮುಂದಡಿಯಿಡುತ್ತಾನೆ ಮತ್ತು ಕೇಳುತ್ತಾನೆ: “ನೀವು ಯಾರನ್ನು ಹುಡುಕುತ್ತೀರಿ?”

      “ನಜರೇತಿನ ಯೇಸುವನ್ನು ಹುಡುಕುತ್ತೇವೆ,” ಎಂದು ಉತ್ತರ ಬರುತ್ತದೆ.

      “ನಾನೇ ಅವನು,” ಯೇಸುವು ಉತ್ತರಿಸುತ್ತಾ, ಅವರೆಲ್ಲರ ಮುಂದೆ ಧೈರ್ಯದಿಂದ ನಿಲ್ಲುತ್ತಾನೆ. ಅವನ ಧೈರ್ಯದಿಂದ ಬೆರಗಾಗಿ, ಏನು ನಿರೀಕ್ಷಿಸಬಹುದು ಎಂದು ತಿಳಿಯದೆ, ಅವರು ಹಿಂದಕ್ಕೆ ಸರಿದು, ನೆಲದ ಮೇಲೆ ಬಿದ್ದರು.

      “ನಾನೇ ಅವನೆಂದು ನಿಮಗೆ ಹೇಳಿದೆನಲ್ಲಾ,” ಯೇಸುವು ಶಾಂತತೆಯಿಂದ ಮುಂದುವರಿಸುತ್ತಾನೆ. “ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ.” ಸ್ವಲ್ಪ ಸಮಯದ ಮೊದಲು, ಮೇಲಂತಸ್ತಿನ ಕೋಣೆಯಲ್ಲಿ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ, ಅವನು ತನ್ನ ನಂಬಿಗಸ್ತ ಅಪೊಸ್ತಲರನ್ನು ಕಾಪಾಡಿದ್ದಾನೆಂದೂ, “ನಾಶಕ್ಕೆ ಗುರಿಯಾದ ಮನುಷ್ಯನ ಹೊರತಾಗಿ” ಮತ್ತಾರೂ ನಾಶವಾಗಲಿಲ್ಲ ಎಂದೂ ಅವನು ಹೇಳಿದ್ದನು. ಆದುದರಿಂದ, ಅವನ ಮಾತು ನೆರವೇರುವಂತೆ, ಅವನ ಹಿಂಬಾಲಕರನ್ನು ಹೋಗಗೊಡುವಂತೆ ಅವನು ಕೇಳುತ್ತಾನೆ.

      ಈಗ ಸೈನಿಕರು ತಮ್ಮ ಚಿತ್ತಸ್ವ್ಯಾಸ್ಥವನ್ನು ಮರಳಿ ಪಡೆದರು, ಎದ್ದು ನಿಂತರು ಮತ್ತು ಯೇಸುವನ್ನು ಬಂಧಿಸಿದರು, ಆಗ ಅಪೊಸ್ತಲರಿಗೆ ಸಂಭವಿಸುತ್ತಿರುವದೇನು ಎಂಬ ಅರಿವಾಯಿತು. “ಸ್ವಾಮೀ, ನಾವು ಕತ್ತಿಯಿಂದ ಹೊಡೆಯೋಣೋವೂ?” ಅವರು ಕೇಳುತ್ತಾರೆ. ಯೇಸುವು ಉತ್ತರಿಸುವ ಮೊದಲೇ, ಅಪೊಸ್ತಲರು ತಂದಿದ್ದ ಎರಡು ಕತ್ತಿಗಳಲ್ಲಿ ಒಂದನ್ನು ಹಿಡಿದುಕೊಂಡಿದ್ದ ಪೇತ್ರನು, ಮಲ್ಕನೆಂಬ ಮಹಾ ಯಾಜಕನ ಆಳನ್ನು ಹೊಡೆಯುತ್ತಾನೆ. ಪೇತ್ರನ ಹೊಡೆತವು ಆಳಿನ ತಲೆಯನ್ನು ತಪ್ಪುತ್ತದಾದರೂ, ಅವನ ಬಲಗಿವಿಯನ್ನು ಕತ್ತರಿಸಿ ಹಾಕುತ್ತದೆ.

      “ಇಷ್ಟಕ್ಕೇ ಬಿಡಿರಿ,” ಎಂದು ಯೇಸುವು ಹೇಳುತ್ತಾ, ಮಧ್ಯ ಪ್ರವೇಶಿಸುತ್ತಾನೆ. ಮಲ್ಕನ ಕಿವಿಯನ್ನು ಮುಟ್ಟಿ ಅವನ ಗಾಯವನ್ನು ವಾಸಿಮಾಡುತ್ತಾನೆ. ತದನಂತರ ಒಂದು ಪ್ರಾಮುಖ್ಯ ಪಾಠವನ್ನು ಅವನು ಕಲಿಸುತ್ತಾ, ಪೇತ್ರನಿಗೆ ಅಂದದ್ದು: “ನಿನ್ನ ಕತ್ತಿಯನ್ನು ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?”

      ಯೇಸುವು ಬಂಧಿಸಲ್ಪಡಲು ಇಚ್ಛೆಯುಳ್ಳವನಾಗಿದ್ದನು, ಏಕಂದರೆ ಅವನು ವಿವರಿಸುವದು: “ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ?” ಮತ್ತು ಅವನು ಕೂಡಿಸುವದು: “ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಿಂದ ಇದ್ದನು!

      ಅನಂತರ ಯೇಸುವು ಜನರ ಗುಂಪಿಗೆ ಹೇಳುವದು: “ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ?” ಅವನು ಕೇಳುತ್ತಾನೆ. “ನಾನು ದಿನಾಲು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ; ಆದರೆ ಶಾಸ್ತ್ರವಚನಗಳು ನೆರವೇರುವಂತೆ ಇದೆಲ್ಲಾ ಆಯಿತು.”

      ಆಗ ಸೈನಿಕರ ದಳ, ಮಿಲಿಟರಿ ಅಧಿಪತಿ ಮತ್ತು ಯೆಹೂದ್ಯರ ಅಧಿಕಾರಿಗಳು ಯೇಸುವನ್ನು ಹಿಡಿದು ಕಟ್ಟುತ್ತಾರೆ. ಇದನ್ನು ನೋಡಿದ ಅಪೊಸ್ತಲರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡುತ್ತಾರೆ. ಆದಾಗ್ಯೂ, ಒಬ್ಬಾನೊಬ್ಬ ಯೌವನಸ್ಥನು—ಶಿಷ್ಯನಾಗಿದ್ದ ಮಾರ್ಕನು—ಅಲ್ಲಿಯೇ ಜನರ ಗುಂಪಿನೊಟ್ಟಿಗೆ ಉಳಿಯುತ್ತಾನೆ. ಪಸ್ಕ ಹಬ್ಬವನ್ನು ಯೇಸುವು ಆಚರಿಸಿದ ಮನೆಯಲ್ಲಿ ಅವನು ಇದ್ದಿರಬಹುದು ಮತ್ತು ಅನಂತರ ಅಲ್ಲಿಂದ ಗುಂಪನ್ನು ಹಿಂಬಾಲಿಸಿರಬಹುದು. ಆದಾಗ್ಯೂ, ಈಗ ಅವನ ಪರಿಚಯ ಹಿಡಿಯಲ್ಪಟ್ಟಿತು ಮತ್ತು ಅವನನ್ನು ಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಅವನು ತನ್ನ ನಾರುಮಡಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗುತ್ತಾನೆ. ಮತ್ತಾಯ 26:47-56; ಮಾರ್ಕ 14:43-52; ಲೂಕ 22:47-53; ಯೋಹಾನ 17:12; 18:3-12.

      ▪ ಗೆತ್ಸೇಮನೆ ತೋಟದಲ್ಲಿ ಯೇಸುವನ್ನು ತಾನು ಕಂಡುಕೊಳ್ಳುವನೆಂದು ಯೂದನು ನಿಶ್ಚಯವುಳ್ಳವನಾಗಿದ್ದದು ಯಾಕೆ?

      ▪ ಅವನ ಅಪೊಸ್ತಲರಿಗಾಗಿ ಯೇಸುವು ಚಿಂತೆಯನ್ನು ಪ್ರದರ್ಶಿಸಿದ್ದು ಹೇಗೆ?

      ▪ ಯೇಸುವಿನ ರಕ್ಷಣೆಗಾಗಿ ಪೇತ್ರನು ಯಾವ ಕ್ರಿಯೆಯನ್ನು ಕೈಗೊಂಡನು, ಆದರೆ ಅದರ ಕುರಿತು ಪೇತ್ರನಿಗೆ ಯೇಸುವು ಏನಂದನು?

      ▪ ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಲ್ಲಿದ್ದನು ಎಂದು ಯೇಸುವು ಪ್ರಕಟಿಸಿದ್ದು ಹೇಗೆ?

      ▪ ಯೇಸುವನ್ನು ಅಪೊಸ್ತಲರು ತೊರೆದು ಓಡಿದಾಗ, ಯಾರು ಉಳಿಯುತ್ತಾನೆ, ಮತ್ತು ಅವನಿಗೆ ಏನು ಸಂಭವಿಸುತ್ತದೆ?

  • ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 119

      ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ

      ಯೇಸುವನ್ನು ಒಬ್ಬ ಸಾಮಾನ್ಯ ಪಾತಕಿಯಂತೆ, ಪ್ರಭಾವಶಾಲಿಯಾಗಿದ್ದ ಮಾಜೀ ಮಹಾ ಯಾಜಕನಾಗಿದ್ದ ಅನ್ನನ ಬಳಿಗೆ ಕೊಂಡೊಯುತ್ತಾರೆ. ಯೇಸುವು 12-ವರ್ಷದ ಬಾಲಕನಾಗಿದ್ದಾಗ ದೇವಾಲಯದಲ್ಲಿದ್ದ ಬೋಧಕರನ್ನು ಬೆರಗುಗೊಳಿಸಿದ ಸಮಯದಲ್ಲಿ ಅನ್ನನು ಮಹಾ ಯಾಜಕನಾಗಿದ್ದನು. ಅನಂತರ ಅನ್ನನ ಕೆಲವಾರು ಪುತ್ರರು ಮಹಾ ಯಾಜಕರುಗಳಾಗಿ ಸೇವೆ ಸಲ್ಲಿಸಿದ್ದರು, ಮತ್ತು ಪ್ರಚಲಿತದಲ್ಲಿ ಅವನ ಅಳಿಯನಾದ ಕಾಯಫನು ಆ ಸ್ಥಾನದಲ್ಲಿದ್ದನು.

      ಯೆಹೂದ್ಯರ ಧಾರ್ಮಿಕ ಜೀವನದಲ್ಲಿ ಈ ಮಹಾ ಯಾಜಕನ ದೀರ್ಘಕಾಲದ ಪ್ರತಿಷ್ಠೆಯಿಂದಾಗಿ, ಯೇಸುವನ್ನು ಪ್ರಾಯಶಃ ಮೊದಲು ಅನ್ನನ ಮನೆಗೆ ಕೊಂಡೊಯ್ದಿರಬಹುದು, ಅನ್ನನು ನೋಡಲು ಮಾಡಿದ ಈ ನಿಲುಗಡೆಯು, ಮಹಾ ಯಾಜಕನಾದ ಕಾಯಫನಿಗೆ 71-ಸದಸ್ಯರುಗಳ ಯೆಹೂದ್ಯ ಮುಖ್ಯ ನ್ಯಾಯಾಲಯವಾದ ಸನ್ಹೇದ್ರಿನ್‌ನನ್ನೂ, ಸುಳ್ಳು ಸಾಕ್ಷಿಗಳನ್ನೂ ಒಟ್ಟುಗೂಡಿಸಲು ಸಾಕಷ್ಟು ಸಮಯವನ್ನಿತಿತ್ತು.

      ಮಹಾ ಯಾಜಕನಾದ ಅನ್ನನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಉಪದೇಶದ ವಿಷಯವಾಗಿಯೂ ಈಗ ಪ್ರಶ್ನಿಸುತ್ತಾನೆ. ಆದಾಗ್ಯೂ, ಉತ್ತರವಾಗಿ ಯೇಸುವು ಹೇಳುವದು: “ನಾನು ಧಾರಾಳವಾಗಿ ಲೋಕದ ಮುಂದೆ ಮಾತಾಡಿದ್ದೇನೆ; ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶ ಮಾಡುತ್ತಾ ಬಂದೆನು; ಮರೆಯಾಗಿ ಯಾವದನ್ನೂ ಮಾಡಲಿಲ್ಲ. ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದ್ದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದದೆಯಲ್ಲಾ.”

      ಆಗ ಹತ್ತರ ನಿಂತಿದ್ದ ಒಲೇಕಾರರಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಏಟುಹಾಕುತ್ತಾ, ಹೇಳುವದು: “ಮಹಾ ಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯಾ?”

      “ನಾನು ಮಾತಾಡಿದರ್ದಲ್ಲಿ ಏನಾದರೂ ದೋಷವಿದ್ದರೆ,” ಯೇಸುವು ಉತ್ತರಿಸುವದು, “ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ?” ಇದರ ನಂತರ, ಅನ್ನನು ಯೇಸುವನ್ನು ಕಟ್ಟಿಸಿ ಕಾಯಫನ ಬಳಿಗೆ ಕಳುಹಿಸಿದನು.

      ಇಷ್ಟರೊಳಗೆ ಎಲ್ಲಾ ಮಹಾ ಯಾಜಕರುಗಳೂ, ಹಿರೀ ಪುರುಷರೂ ಮತ್ತು ಶಾಸ್ತ್ರಿಗಳೂ, ಹೌದು ಇಡೀ ಸನ್ಹೇದ್ರಿನ್‌, ಒಟ್ಟು ಸೇರಲು ಆರಂಭಿಸಿದರು. ಅವರ ಕೂಟದ ಸ್ಥಳವು ಕಾಯಫನ ಮನೆಯಾಗಿತ್ತೆಂದು ತೋಚುತ್ತದೆ. ಪಸ್ಕ ಹಬ್ಬದ ರಾತ್ರಿಯಲ್ಲಿ ಅಂಥ ಒಂದು ವಿಚಾರಣೆಯನ್ನು ನಡಿಸುವದು ಯೆಹೂದ್ಯರ ನಿಯಮಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿತ್ತು. ಆದರೆ ಇದು ಅವರ ದುಷ್ಟ ಉದ್ದೇಶದಿಂದ ಧಾರ್ಮಿಕ ಮುಖಂಡರನ್ನು ತಡೆಯುವದಿಲ್ಲ.

      ಲಾಜರನನ್ನು ಯೇಸುವು ಪುನರುತ್ಥಾನಗೊಳಿಸಿದಾಗ, ವಾರಗಳ ಹಿಂದೆಯೇ, ಅವನನ್ನು ಕೊಲ್ಲಬೇಕೆಂದು ಆಗಲೇ ಸನ್ಹೇದ್ರಿನ್‌ ತಮ್ಮೊಳಗೆ ನಿರ್ಧರಿಸಿತ್ತು. ಮತ್ತು ಕೇವಲ ಎರಡು ದಿನಗಳ ಹಿಂದೆ, ಬುಧವಾರ ದಿನ, ಯೇಸುವನ್ನು ಕೊಲ್ಲುವದಕ್ಕಾಗಿ ಅವನನ್ನು ಕುತಂತ್ರದಿಂದ ಹಿಡಿಯುಲು ಧಾರ್ಮಿಕ ಮುಖಂಡರುಗಳು ಒಟ್ಟಿಗೆ ಸಮಾಲೋಚನೆ ನಡಿಸಿದ್ದರು. ನೆನಸಿರಿ, ಅವನ ವಿಚಾರಣೆಯ ಮೊದಲೇ ಅವನಿಗೆ ವಾಸ್ತವದಲ್ಲಿ ನ್ಯಾಯತೀರ್ಪು ಕೊಡಲ್ಪಟ್ಟಿತ್ತು!

      ಯೇಸುವಿನ ವಿರುದ್ಧ ಒಂದು ಆಪಾದನೆ ಹೊರಿಸಲ್ಪಡುವಂತೆ, ಸುಳ್ಳು ರುಜುವಾತುಗಳನ್ನು ಒದಗಿಸಲು ಸಾಕ್ಷಿಗಳಿಗಾಗಿ ಹುಡುಕಾಟದ ಪ್ರಯತ್ನಗಳು ನಡೆಯುತ್ತಿದ್ದವು. ಆದಾಗ್ಯೂ, ಬಹುಮಂದಿ ಸಾಕ್ಷಿಗಳು ಅವರ ಸಾಕ್ಷ್ಯಗಳಲ್ಲಿ ಒಂದಕ್ಕೊಂದು ಸಹಮತದಲ್ಲಿರಲಿಲ್ಲ. ಕಟ್ಟಕಡೆಗೆ, ಇಬ್ಬರು ಮುಂದೆ ಬಂದು, ಹೀಗೆಂದು ಸಮರ್ಥಿಸಿದರು: “ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಇವನು ಹೇಳಿದ್ದನ್ನು ನಾವು ಕೇಳಿದ್ದೇವೆ.”

      “ನೀನೇನೂ ಉತ್ತರ ಹೇಳುವದಿಲ್ಲವೋ?” ಕಾಯಫನು ಕೇಳುತ್ತಾನೆ. “ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಆದರೆ ಯೇಸುವು ಸುಮ್ಮನಿದ್ದು ಏನೂ ಉತ್ತರ ಹೇಳಲಿಲ್ಲ. ಇಲ್ಲಿಯೂ ಈ ಸುಳ್ಳು ಆಪಾದನೆಯಲ್ಲಿ ಸನ್ಹೇದ್ರಿನ್‌ಗೆ ನಾಚಿಕೆಯಾಗುವಂಥ ರೀತಿಯಲ್ಲಿ, ಅವರ ಕಥೆಗಳನ್ನು ಸಾಕ್ಷಿಗಳು ಒಂದಕ್ಕೊಂದು ಸರಿಬೀಳುವ ರೀತಿಯಲ್ಲಿ ಹೇಳಶಕ್ತರಾಗಿರಲಿಲ್ಲ. ಆದುದರಿಂದ ಮಹಾ ಯಾಜಕನು ಇನ್ನೊಂದು ತಂತ್ರವನ್ನು ಬಳಸಿದನು.

      ಯಾರಾದರೊಬ್ಬರು ತಾನು ದೇವರ ಮಗನು ಎಂದು ಹೇಳಿಕೊಂಡರೆ, ಯೆಹೂದ್ಯರು ಎಷ್ಟೊಂದು ಸೂಕ್ಷ್ಮವೇದಿಗಳಾಗಿದ್ದರೆಂದು ಕಾಯಫನಿಗೆ ತಿಳಿದಿತ್ತು. ಈ ಮೊದಲಿನ ಎರಡು ಸಂದರ್ಭಗಳಲ್ಲಿ, ಅವಸರದಿಂದ ಯೇಸುವು ಮರಣ ದಂಡನೆಗೆ ಯೋಗ್ಯನಾದ ದೇವದೂಷಕನು ಎಂದು ಆಪಾದಿಸಿದ್ದರು, ಒಮ್ಮೆ ತಪ್ಪಾಗಿ, ದೇವರಿಗೆ ಅವನನ್ನು ಸರಿಗಟ್ಟಿಸುವ ವಾದವನ್ನು ಮಾಡುತ್ತಾನೆಂದು ಊಹಿಸಿದ್ದರು. ಈಗ ಕಾಯಫನು ಕುತಂತ್ರದಿಂದ ಕೇಳುವದು: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು!”

      ಯೆಹೂದ್ಯರು ಏನನ್ನೇ ಚಿಂತಿಸಲಿ, ಯೇಸುವು ನಿಜವಾಗಿ ದೇವರ ಕುಮಾರನಾಗಿದ್ದನು. ಮತ್ತು ಸುಮ್ಮನೆ ಇರುವದು, ಅವನ ಕ್ರಿಸ್ತನೆಂಬುದರ ನಿರಾಕರಣೆ ಎಂದು ಪರಿಗಣಿಸಸಾಧ್ಯವಿತ್ತು. ಆದುದರಿಂದ ಯೇಸುವು ಧೈರ್ಯದಿಂದ ಉತ್ತರಿಸುವದು: “ನಾನೇ; ಇದಲ್ಲದೆ ಮನುಷ್ಯ ಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನು ನೋಡುವಿರಿ.”

      ಆಗ ಕಾಯಫನು, ಒಂದು ನಾಟಕೀಯ ಪ್ರದರ್ಶನದಲ್ಲಿ, ತನ್ನ ಅಂಗಿಗಳನ್ನು ಹರಕೊಂಡು, ಒದರಿಕೊಳ್ಳುವದು: “ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರ್ದಲ್ಲಾ; ನಿಮಗೆ ಹೇಗೆ ತೋರುತ್ತದೆ?”

      “ಇವನು ಮರಣ ದಂಡನೆ ಹೊಂದತಕ್ಕವನು,” ಸನ್ಹೇದ್ರಿನ್‌ ತೀರ್ಪು ಮಾಡುತ್ತದೆ. ಅನಂತರ ಅವರು ಅವನನ್ನು ಅಪಹಾಸ್ಯ ಮಾಡಲು ಆರಂಭಿಸಿದರು ಮತ್ತು ಅವನಿಗೆ ಅನೇಕ ದೂಷಣೆಯ ಮಾತುಗಳನ್ನು ಹೇಳಿದರು. ಅವರು ಅವನ ಮುಖಕ್ಕೆ ಗುದ್ದಿದರು ಮತ್ತು ಅದರ ಮೇಲೆ ಉಗುಳಿದರು. ಇತರರು ಅವನ ಇಡೀ ಮುಖಕ್ಕೆ ಮುಸುಕುಹಾಕಿ ಅವರ ಮುಷ್ಟಿಯಿಂದ ಹೊಡೆದು, ಅವಮಾನಿಸುವ ರೀತಿಯಲ್ಲಿ ಹೇಳುವದು: “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು.” ಈ ದೂಷಣೀಯ, ಕಾನೂನು ಬಾಹಿರವರ್ತನೆಯು ರಾತ್ರಿ ಸಮಯದ ವಿಚಾರಣೆಯಲ್ಲಿ ನಡಿಸಲ್ಪಟ್ಟಿತು. ಮತ್ತಾಯ 26:57-68; 26:3, 4; ಮಾರ್ಕ 14:53-65; ಲೂಕ 22:54, 63-65; ಯೋಹಾನ 18:13-24; 11:45-53; 10:31-39; 5:16-18.

      ▪ ಮೊದಲು ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಅಲ್ಲಿ ಏನು ಸಂಭವಿಸುತ್ತದೆ?

      ▪ ಅನಂತರ ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಯಾವ ಉದ್ದೇಶಕ್ಕಾಗಿ?

      ▪ ಯೇಸುವು ಮರಣ ದಂಡನೆಗೆ ಯೋಗ್ಯನು ಎಂದು ಸನ್ಹೇದ್ರಿನ್‌ ತೀರ್ಪು ಮಾಡುವಂತೆ ಕಾಯಫನು ಮಾಡಶಕ್ತನಾದದ್ದು ಹೇಗೆ?

      ▪ ವಿಚಾರಣೆಯ ಸಮಯದಲ್ಲಿ ಯಾವ ದೂಷಣೀಯ, ಕಾನೂನುಬಾಹಿರ ವರ್ತನೆಯು ನಡಿಸಲ್ಪಡುತ್ತದೆ?

  • ಅಂಗಳದಲ್ಲಿ ನಿರಾಕರಣೆಗಳು
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 120

      ಅಂಗಳದಲ್ಲಿ ನಿರಾಕರಣೆಗಳು

      ಯೇಸುವನ್ನು ಗೆತ್ಸೇಮನೆ ತೋಟದಲ್ಲಿ ತೊರೆದು, ಹೆದರಿಕೆಯಿಂದ ಇತರ ಎಲ್ಲಾ ಅಪೊಸ್ತಲರೊಂದಿಗೆ ಪಲಾಯನ ಮಾಡಿದ ನಂತರ, ಪೇತ್ರ ಮತ್ತು ಯೋಹಾನರು ತಮ್ಮ ಪಲಾಯನವನ್ನು ನಿಲ್ಲಿಸುತ್ತಾರೆ. ಯೇಸುವನ್ನು ಅನ್ನನ ಮನೆಗೆ ಕೊಂಡು ಹೋದಾಗ, ಪ್ರಾಯಶಃ ಅವರು ನಡೆದು ಅಲ್ಲಿಗೆ ತಲುಪುತ್ತಾರೆ. ಅನ್ನನು ಅವನನ್ನು ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದಾಗ, ಅವರ ಸ್ವಂತ ಜೀವಗಳ ಹೆದರಿಕೆ ಮತ್ತು ತಮ್ಮ ಪ್ರಭುವಿಗೆ ಏನು ಸಂಭವಿಸುತ್ತದೋ ಎಂಬ ಅವರ ಗಾಢವಾದ ಕಾತರದ ನಡುವೆ ಪ್ರಾಯಶಃ ತೊಯ್ದಾಡುತ್ತಾ, ಪೇತ್ರ, ಯೋಹಾನರು ಅವನನ್ನು ದೂರದಿಂದ ಹಿಂಬಾಲಿಸುತ್ತಿರಬೇಕು.

      ಕಾಯಫನ ವಿಶಾಲ ನಿವಾಸದ ಬಳಿಗೆ ಬಂದಾಗ, ಯೋಹಾನನಿಗೆ ಮಹಾ ಯಾಜಕನ ಪರಿಚಿತಿ ಇದ್ದದರಿಂದ, ಅಂಗಳದೊಳಕ್ಕೆ ಪ್ರವೇಶವನ್ನು ಪಡೆಯಲು ಶಕ್ತನಾಗುತ್ತಾನೆ. ಆದರೆ ಪೇತ್ರನಾದರೋ ಹೊರಗೆ ಬಾಗಲ ಹತ್ತರ ನಿಂತಿದ್ದನು. ಆದರೆ ಕೂಡಲೇ ಯೋಹಾನನು ಹಿಂತೆರಳಿ ಬಂದು, ದಾಸಿಯಾಗಿದ್ದ ಬಾಗಲು ಕಾಯುವವಳ ಸಂಗಡ ಮಾತಾಡುತ್ತಾನೆ ಮತ್ತು ಪೇತ್ರನಿಗೆ ಒಳಕ್ಕೆ ಹೋಗಲು ಅನುಮತಿಸಲಾಗುತ್ತದೆ.

      ಈಗ ಚಳಿಯಾಗಿತ್ತು ಮತ್ತು ಮಹಾ ಯಾಜಕನ ಆಳುಗಳೂ ಒಲೇಕಾರರೂ ಇದ್ದಲಿನ ಬೆಂಕಿಯನ್ನು ಮಾಡಿದ್ದರು. ಯೇಸುವಿನ ವಿಚಾರಣೆಯ ಫಲಿತಾಂಶವೇನು ಎಂದು ಕಾಯುತ್ತಾ, ಪೇತ್ರನು ಅವರೊಂದಿಗೆ ಸೇರಿ ಚಳಿಕಾಸಿಕೊಳ್ಳುತ್ತಿದ್ದನು. ಅಲ್ಲಿ, ಬೆಂಕಿಯ ಬೆಳಕಿನ ಪ್ರಕಾಶದಲ್ಲಿ ಪೇತ್ರನನ್ನು ಒಳಗೆ ಬಿಟ್ಟ ಬಾಗಲು ಕಾಯುವವಳು ಅವನನ್ನು ಚೆನ್ನಾಗಿ ದೃಷ್ಟಿಸಿ ನೋಡಿದಳು. “ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು!” ಎಂದು ಆಕೆ ಉದ್ಗರಿಸುತ್ತಾಳೆ.

      ಗುರುತು ಹಿಡಿಯಲ್ಪಟ್ಟದರ್ದಿಂದ ಕ್ಷೋಭೆಗೊಂಡವನಾಗಿ, ಪೇತ್ರನು ಎಲ್ಲರ ಮುಂದೆ ತಾನು ಯೇಸುವನ್ನು ಅರಿಯನೆಂದು ನಿರಾಕರಿಸುತ್ತಾನೆ: “ಅಲ್ಲ; ಅವನು ಯಾರೆಂದು ನಾನು ಗೊತ್ತಿಲ್ಲ, ಹಾಗೂ ನೀನು ಏನನ್ನುತೀಯ್ತೋ ನನಗೆ ತಿಳಿಯುವದಿಲ್ಲ,” ಎಂದನು ಅವನು.

      ಆಗ, ಪೇತ್ರನು ಅಲ್ಲಿಂದ ಬಾಗಲಿನ ಕಡೆಗೆ ಹೊರಟುಹೋದನು. ಅಲ್ಲಿ ಇನ್ನೊಬ್ಬ ಹುಡುಗಿಯು ಅವನನ್ನು ಕಂಡು ಅಲ್ಲಿ ನಿಂತಿದ್ದವರಿಗೆ ಅವಳು ಕೂಡ ಹೇಳುವದು: “ಇವನೂ ನಜರೇತಿನ ಯೇಸುವಿನ ಕೂಡ ಇದ್ದನು.” ಪುನೊಮ್ಮೆ ಪೇತ್ರನು ಅದನ್ನು ನಿರಾಕರಿಸುತ್ತಾ, ಆಣೆಯಿಡಲಾರಂಭಿಸಿದನು: “ಅಲ್ಲ, ಆ ಮನುಷ್ಯನನ್ನು ನಾನರಿಯೆನು!”

      ಪೇತ್ರನು ಹೊರಂಗಳದಲ್ಲಿ ನಿಂತುಕೊಂಡು, ಸಾಧ್ಯವಾದಷ್ಟು ಮರೆಯಾಗಿರಲು ಪ್ರಯತ್ನಿಸುತ್ತಿದ್ದಿರಬೇಕು. ಇಷ್ಟರೊಳಗೆ ಪ್ರಾಯಶಃ ಬೆಳಗ್ಗಿನ ಜಾವದ ಕತ್ತಲೆಯಲ್ಲಿ ಕೋಳಿಯ ಕೂಗಿನಿಂದ ಅವನು ಬೆಚ್ಚಿಬಿದ್ದಿರಬೇಕು. ತನ್ಮಧ್ಯೆ, ಯೇಸುವಿನ ವಿಚಾರಣೆಯು ಅಂಗಳದ ಮೇಲ್ಭಾಗದಲ್ಲಿರುವ ಮನೆಯಲ್ಲಿ ನಡೆಯುತ್ತಿದ್ದಿರಬೇಕೆಂದು ತೋರುತ್ತದೆ. ಸಾಕ್ಷ್ಯ ನುಡಿಯಲು ತರಲ್ಪಟ್ಟ ಬೇರೆ ಬೇರೆ ಸಾಕ್ಷಿಗಳು ಬರುವದನ್ನು ಮತ್ತು ಹೋಗುವದನ್ನು ಕೆಳಗಡೆ ಇದ್ದ ಪೇತ್ರನೂ, ಇತರರೂ ಕಾದುಕೊಂಡು ನೋಡುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ.

      ಯೇಸುವಿನ ಸಂಗಡಿಗನೆಂದು ಪೇತ್ರನನ್ನು ಗುರುತಿಸಿ ಈಗ ಸುಮಾರು ಒಂದು ತಾಸು ಕಳೆದಿರಬೇಕು. ಅಲ್ಲಿ ನಿಂತಿದ್ದವರಲ್ಲಿ ಅನೇಕರು ಈಗ ಪೇತ್ರನ ಬಳಿಗೆ ಬಂದು, ಹೀಗೆ ಹೇಳಿದರು: “ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು, ನಿನ್ನ ಭಾಪಷೆಯೇ ನಿನ್ನನ್ನು ತೋರಿಸಿ ಕೊಡುತ್ತದೆ.” ಪೇತ್ರನು ಕಿವಿ ಕತ್ತರಿಸಿದವನಾಗಿದ್ದ ಮಲ್ಕನ ಬಂಧುವಾಗಿದ್ದ ಒಬ್ಬನು ಆ ಗುಂಪಿನಲ್ಲಿ ಇದ್ದನು. “ನಾನು ನಿನ್ನನ್ನು ತೋಟದಲ್ಲಿ ಅವನ ಸಂಗಡ ಕಂಡೆನಲ್ಲವೇ?” ಅಂದನು ಅವನು.

      “ನೀನು ಹೇಳುವ ಆ ಮನುಷ್ಯನನ್ನು ನಾನರಿಯೆನು!” ಎಂದು ದೃಢವಾಗಿ ನಿರಾಕರಿಸಿದನು ಪೇತ್ರನು. ವಾಸ್ತವದಲ್ಲಿ ಅವರೆಲ್ಲರೂ ತಪ್ಪು ಮಾಡಿದ್ದಾರೆಂದು ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ಆ ವಿಷಯವಾಗಿ ಅವನು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು, ಆ ಮೂಲಕ ಅವನು ಸತ್ಯವನ್ನು ಹೇಳದಿದ್ದರೆ ಕೆಡುಕು ಅವನ ಮೇಲೆ ಬರಲಿ ಎಂದು ಸ್ವತಃ ಹೇಳಿಕೊಳ್ಳುವದಾಗಿದೆ.

      ಪೇತ್ರನು ಈ ಮೂರನೆಯ ನಿರಾಕರಣೆಯ ಮಾಡಿದ ಕೂಡಲೆ ಕೋಳಿ ಕೂಗಿತು. ಮತ್ತು ಆ ಕ್ಷಣದಲ್ಲಿ ಅಂಗಳದ ಮೇಲಿರುವ ಕೈಸಾಲೆಗೆ ಬಂದಿರಬಹುದಾದ ಯೇಸು, ತಿರಿಗಿಕೊಂಡು ಅವನನ್ನು ದೃಷ್ಟಿಸುತ್ತಾನೆ. ತಕ್ಷಣವೇ, ಮೇಲಂತಸ್ತಿನ ಕೋಣೆಯಲ್ಲಿ ಕೇವಲ ಕೆಲವು ತಾಸುಗಳ ಹಿಂದೆ ಯೇಸುವು ಹೇಳಿದ್ದನ್ನು ಪೇತ್ರನು ನೆನಪಿಸಿಕೊಳ್ಳುತ್ತಾನೆ: “ಕೋಳಿ ಎರಡು ಸಾರಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅರಿಯೆನು ಎಂದು ಹೇಳುವಿ.” ತನ್ನ ಪಾಪದ ಭಾರದಿಂದ ಜಜ್ಜಲ್ಪಟ್ಟು, ಪೇತ್ರನು ಹೊರಗೆ ಹೋಗಿ ಬಹು ವ್ಯಥೆ ಪಟ್ಟು ಅತನ್ತು.

      ಇದು ಹೇಗೆ ಸಂಭವಿಸಸಾಧ್ಯವಿದೆ? ತನ್ನ ಆತ್ಮಿಕ ಬಲದ ಕುರಿತು ಅಷ್ಟೊಂದು ನಿಶ್ಚಿತನಾಗಿದ್ದ ಮೇಲೆ, ಬೇಗ ಬೇಗನೆ ಮೂರು ಬಾರಿ ಪೇತ್ರನು ಅವನ ಪ್ರಭುವನ್ನು ಹೇಗೆ ನಿರಾಕರಿಸಸಾಧ್ಯವಿದೆ? ಪೇತ್ರನನ್ನು ಪರಿಸ್ಥಿತಿಗಳು ಅವನಿಗರಿವಿಲ್ಲದೆ ಮುತ್ತಿದವು ಎನ್ನುವದರಲ್ಲಿ ಸಂದೇಹವಿಲ್ಲ. ಸತ್ಯವು ತಿರಿಚಲ್ಪಟ್ಟಿತು ಮತ್ತು ಯೇಸುವು ಒಬ್ಬ ಅಧಮನಾದ ಪಾತಕಿಯಂತೆ ಚಿತ್ರಿಸಲ್ಪಟ್ಟನು. ಸರಿಯಾದದ್ದು ಯಾವುದಾಗಿತ್ತೋ ಅದನ್ನು ತಪ್ಪು ಎಂದೂ, ನಿರಪರಾಧಿಯು ತಪ್ಪಿತಸ್ಥನೆಂದೂ ತೋರಿಸಲ್ಪಟ್ಟಿತು. ಆದುದರಿಂದ, ಸಂದರ್ಭದ ಒತ್ತಡಗಳ ಕೆಳಗೆ, ಪೇತ್ರನ ಸಮತೂಕವು ತಪ್ಪಿಹೋಯಿತು. ನಿಷ್ಠೆಯ ಯೋಗ್ಯ ಚಿತ್ತವು ಫಕ್ಕನೇ ಬುಡಮೇಲಾಯಿತು; ಅವನ ದುಃಖಕ್ಕೆ ಮನುಷ್ಯರ ಭಯವು ಅವನನ್ನು ನಿಷ್ಕ್ರಿಯನನ್ನಾಗಿ ಮಾಡಿತು. ಅದು ನಮಗೆಂದಿಗೂ ಸಂಭವಿಸದಿರಲಿ! ಮತ್ತಾಯ 26:57, 58, 69-75; ಮಾರ್ಕ 14:30, 53,54, 66-72; ಲೂಕ 22:54-62; ಯೋಹಾನ 18:15-18, 25-27.

      ▪ ಮಹಾ ಯಾಜಕನ ಅಂಗಳದೊಳಗೆ ಪೇತ್ರ , ಯೋಹಾನರು ಪ್ರವೇಶವನ್ನು ಪಡೆದದ್ದು ಹೇಗೆ?

      ▪ ಪೇತ್ರ , ಯೋಹಾನರು ಅಂಗಳದಲ್ಲಿದ್ದಾಗ, ಮನೆಯಲ್ಲಿ ಏನು ನಡೆಯುತ್ತಾ ಇತ್ತು?

      ▪ ಕೋಳಿಯು ಎಷ್ಟು ಸಾರಿ ಕೂಗಿತು, ಮತ್ತು ಕ್ರಿಸ್ತನನ್ನು ಅರಿಯನೆಂದು ಎಷ್ಟು ಬಾರಿ ಪೇತ್ರನು ನಿರಾಕರಿಸಿದನು?

      ▪ ಪೇತ್ರನು ಶಪಿಸುವದೂ, ಆಣೆಯಿಡುವದೂ, ಅದರ ಅರ್ಥವೇನು?

      ▪ ಯೇಸುವನ್ನು ತಾನು ತಿಳಿದಿರುವದನ್ನು ನಿರಾಕರಿಸಲು ಪೇತ್ರನಿಗೆ ಕಾರಣವಾದದ್ದು ಯಾವುದು?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ