-
ಪಿಲಾತನಿಂದ ಹೆರೋದನ ಬಳಿ ಮತ್ತು ಪುನಃ ಹಿಂದಕ್ಕೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 122
ಪಿಲಾತನಿಂದ ಹೆರೋದನ ಬಳಿ ಮತ್ತು ಪುನಃ ಹಿಂದಕ್ಕೆ
ಯೇಸುವು ತಾನೊಬ್ಬ ಅರಸನು ಆಗಿದ್ದೇನೆ ಎಂಬುದನ್ನು ಮರೆಮಾಡಲು ಯಾವ ಪ್ರಯತ್ನವನ್ನು ಮಾಡದಿದ್ದರೂ, ಅವನ ರಾಜ್ಯವು ರೋಮಿಗೆ ಯಾವುದೇ ರೀತಿಯಲ್ಲಿ ಬೆದರಿಕೆಯಾಗಿರುವದಿಲ್ಲ ಎಂದವನು ವಿವರಿಸಿದನು. “ನನ್ನ ರಾಜ್ಯವು ಈ ಲೋಕದ್ದಲ್ಲ.” ಯೇಸುವನ್ನುತ್ತಾನೆ. “ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದ್ದಲ್ಲ.” ಈ ರೀತಿಯಲ್ಲಿ ಯೇಸುವು, ಐಹಿಕ ಮೂಲದಿಂದ ಅದು ಬರದಿದ್ದರೂ, ತನಗೊಂದು ರಾಜ್ಯವಿದೆಯೆಂದು ಮೂರು ಬಾರಿ ಅಂಗೀಕರಿಸುತ್ತಾನೆ.
ಆದರೂ, ಪಿಲಾತನು ಅವನನ್ನು ಇನ್ನಷ್ಟು ಒತ್ತಡಕ್ಕೆ ಹಾಕುತ್ತಾನೆ: “ಹಾಗಾದರೆ ನೀನು ಅರಸನು ಹೌದೋ?” ಅಂದರೆ ನಿನ್ನ ರಾಜ್ಯವು ಈ ಲೋಕದ ಭಾಗವಲ್ಲದಿದ್ದರೂ ಕೂಡ, ನೀನು ಒಬ್ಬ ಅರಸನೋ?
ಪಿಲಾತನು ಸರಿಯಾದ ಸಮಾಪ್ತಿಗೆ ಬಂದಿದ್ದಾನೆಂದು ತಿಳಿಯುವಂತೆ ಯೇಸುವು ಬಿಡುತ್ತಾ, ಉತ್ತರಿಸುವದು: “ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯ ಪರರೆಲ್ಲರು ನನ್ನ ಮಾತಿಗೆ ಕಿವಿಗೊಡುತ್ತಾರೆ.”
ಹೌದು, ಯೇಸುವಿನ ಭೂಮಿಯ ಮೇಲಿನ ಅಸ್ತಿತ್ವದ ಉದ್ದೇಶವು ತಾನೇ “ಸತ್ಯ”ಕ್ಕೋಸ್ಕರ, ನಿರ್ದಿಷ್ಟವಾಗಿ ಅವನ ರಾಜ್ಯದ ಸತ್ಯದ ಕುರಿತು ಸಾಕ್ಷಿ ನೀಡುವದಕ್ಕಾಗಿದೆ. ಅವನ ಜೀವವನ್ನು ಬೆಲೆಯಾಗಿ ತೆರಬೇಕಾದರೂ, ಯೇಸುವು ನಂಬಿಗಸ್ತನಾಗಿರಲು ಸಿದ್ಧನಾಗಿದ್ದನು. “ಸತ್ಯವಂದರೇನು?” ಎಂದು ಪಿಲಾತನು ಕೇಳಿದರೂ, ಅವನು ಹೆಚ್ಚಿನ ವಿವರಣೆಗಾಗಿ ಕಾಯಲಿಲ್ಲ. ತೀರ್ಪನ್ನು ನೀಡಲು ಸಾಕಷ್ಟು ಅವನು ಕೇಳಿದ್ದನು.
ಅರಮನೆಯ ಹೊರಗಡೆ ಕಾದು ಕೊಂಡಿದ್ದ ಜನರ ಗುಂಪಿನೆಡೆಗೆ ಪಿಲಾತನು ಹಿಂತಿರುಗಿ ಬರುತ್ತಾನೆ. ಯೇಸುವು ಅವನ ಪಕ್ಕದಲ್ಲಿ ಇದ್ದನೆಂದು ತೋಚುತ್ತದೆ, ಮಹಾ ಯಾಜಕರಿಗೆ ಮತ್ತು ಹೊರಗೆ ಇದ್ದವರಿಗೆ ಅವನು ಹೇಳುವದು: “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವದಿಲ್ಲ.”
ಈ ತೀರ್ಪಿನಿಂದ ಕೋಪಗೊಂಡು, ಜನರ ಗುಂಪು ಒತ್ತಾಯಿಸಲು ಪ್ರಾರಂಭಿಸಿತು: “ಗಲಿಲಾಯದಲ್ಲಿ ಪ್ರಾರಂಭ ಮಾಡಿ ಇಲ್ಲಿಯ ವರೆಗೂ ಯೂದಾಯ ಸೀಮೆಯಲ್ಲಿಲ್ಲಾ ಇವನು ಬೋಧನೆ ಮಾಡುತ್ತಾ, ಜನರ ಮನಸ್ಸನ್ನು ಕದಲಿಸುತ್ತಾನೆ.”
ಯೆಹೂದ್ಯರ ಅತಾರ್ಕಿಕವಾಗಿದ್ದ ಉನ್ಮತ್ತಾಭಿಮಾನದಿಂದ ಪಿಲಾತನಿಗೆ ಆಶ್ಚರ್ಯವಾಗಿರಬೇಕು. ಆದುದರಿಂದ, ಮಹಾ ಯಾಜಕರು ಮತ್ತು ಹಿರೀ ಪುರುಷರು ಕೂಗುವದನ್ನು ಮುಂದುವರಿಸಿದಾಗ, ಪಿಲಾತನು ಯೇಸುವಿನ ಕಡೆಗೆ ತಿರುಗಿ, ಕೇಳುವದು: “ಇವರು ನಿನ್ನ ಮೇಲೆ ಎಷ್ಟು ಸಾಕ್ಷಿ ಹೇಳುತ್ತಾರೆ, ನೀನು ಕೇಳುವದಿಲ್ಲವೋ?” ಆದರೂ, ಯೇಸುವು ಯಾವುದೇ ಉತ್ತರ ಕೊಡಲು ಪ್ರಯತ್ನಿಸುವದಿಲ್ಲ. ಸಿಕ್ಕಾಬಟ್ಟೆಯ ಆರೋಪಗಳ ಎದುರಲ್ಲಿ ಅವನ ಶಾಂತಚಿತತ್ತೆಯು ಪಿಲಾತನನ್ನು ಬೆರಗುಗೊಳಿಸುತ್ತದೆ.
ಯೇಸುವು ಗಲಿಲಾಯದವನು ಎಂದು ತಿಳಿದು, ಅವನ ಜವಾಬ್ದಾರಿಕೆಯನ್ನು ತಪ್ಪಿಸಿಕೊಳ್ಳುವ ಒಂದು ದಾರಿಯನ್ನು ಪಿಲಾತನು ಕಂಡುಕೊಳ್ಳುತ್ತಾನೆ. ಗಲಿಲಾಯದ ಅಧಿಪತಿಯಾದ ಹೆರೋದ ಅಂತಿಪನು [ಮಹಾ ಹೆರೋದನ ಮಗನು] ಪಸ್ಕ ಹಬ್ಬಕ್ಕಾಗಿ ಬಂದವನು ಯೆರೂಸಲೇಮಿನಲ್ಲಿ ಇದ್ದನು, ಆದ್ದರಿಂದ ಅವನ ಬಳಿಗೆ ಪಿಲಾತನು ಯೇಸುವನ್ನು ಕಳುಹಿಸುತ್ತಾನೆ. ಈ ಮೊದಲು ಹೆರೋದನು ಸ್ನಾನಿಕನಾದ ಯೋಹಾನನ ತಲೆಯನ್ನು ಕಡಿಸಿದ್ದನು ಮತ್ತು ಯೇಸುವು ನಡಿಸುವ ಮಹತ್ಕಾರ್ಯಗಳನ್ನು ಕೇಳಿದಾಗ ಹೆದರಿದ್ದನು, ಯಾಕಂದರೆ ಯೇಸುವು ಸತ್ತವರೊಳಗಿಂದ ಎದ್ದು ಬಂದ ಯೋಹಾನನೋ ಎಂಬ ಭಯ ಇತ್ತು.
ಈಗ ಯೇಸುವನ್ನು ನೋಡುವ ಪ್ರತೀಕ್ಷೆಯಿಂದ ಹೆರೋದನು ಸಂತೋಷ ಪಟ್ಟನು. ಯೇಸುವಿನ ಶ್ರೇಯೋಭಿವೃದ್ಧಿಯಲ್ಲಿ ಅವನು ಚಿಂತಿತನಾಗಿದ್ದ ಕಾರಣದಿಂದಲ್ಲ, ಯಾ ಅವನ ವಿರುದ್ಧ ಮಾಡಿದ್ದ ಆಪಾದನೆಗಳು ಸತ್ಯವೋ, ಅಲ್ಲವೋ ಎಂದು ತಿಳಿಯುವ ನಿಜವಾದ ಪ್ರಯತ್ನಗಳ ಆಸೆಯಿಂದಲ್ಲ. ಬದಲು, ಅವನು ಕೇವಲ ಕುತೂಹಲವುಳ್ಳವನಾಗಿದ್ದನು ಮತ್ತು ಯಾವದಾದರೂ ಸೂಚಕಕಾರ್ಯ ಯೇಸುವು ನಡಿಸುವದನ್ನು ಅವನು ಆಶಿಸುತ್ತಿದ್ದನು.
ಆದಾಗ್ಯೂ, ಹೆರೋದನ ಕುತೂಹಲವನ್ನು ತಣಿಸಲು ಯೇಸುವು ನಿರಾಕರಿಸುತ್ತಾನೆ. ವಾಸ್ತವದಲ್ಲಿ, ಹೆರೋದನು ಅವನನ್ನು ಪ್ರಶ್ನಿಸಿದಾಗ, ಅವನು ಒಂದು ಮಾತನ್ನೂ ಆಡುವದಿಲ್ಲ. ನಿರಾಶನಾಗಿ, ಹೆರೋದನು ಮತ್ತು ಅವನ ಸಿಪಾಯಿಗಳು ಯೇಸುವಿಗೆ ಗೇಲಿ ಮಾಡಿದರು. ಅವನಿಗೆ ಒಂದು ಶೋಭಾಯಮಾನವಾದ ಉಡುಪನ್ನು ಹಾಕಿಸಿ ಹಾಸ್ಯ ಮಾಡಿದರು. ಅನಂತರ ಅವನನ್ನು ಪಿಲಾತನ ಬಳಿಗೆ ಹಿಂದಕ್ಕೆ ಕಳುಹಿಸಿದರು. ಇದರಿಂದಾಗಿ, ಮೊದಲು ವೈರಿಗಳಾಗಿದ್ದ ಹೆರೋದ ಮತ್ತು ಪಿಲಾತನು, ಈಗ ಒಳ್ಳೆಯ ಸ್ನೇಹಿತರಾದರು.
ಯೇಸುವು ಹಿಂದಕ್ಕೆ ಬಂದಾಗ, ಪಿಲಾತನು ಮಹಾ ಯಾಜಕರನ್ನೂ, ಯೆಹೂದ್ಯರ ಅಧಿಕಾರಿಗಳನ್ನೂ ಮತ್ತು ಪ್ರಜೆಗಳನ್ನೂ ಒಟ್ಟಾಗಿ ಕರಸಿ, ಹೇಳುವದು: “ಈ ಮನುಷ್ಯನು ಪ್ರಜೆಗಳನ್ನು ತಿರುಗಿ ಬೀಳುವಂತೆ ಮಾಡುವವನು ಎಂದು ಇವನನ್ನು ನನ್ನ ಬಳಿಗೆ ತಂದಿರಲ್ಲಾ; ನೀವು ಇವನ ಮೇಲೆ ತಂದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಇವನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ. ಹೆರೋದನಿಗಾದರೂ ಕಾಣಲಿಲ್ಲ; ಅವನು ಇವನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಇವನು ಮರಣ ದಂಡನೆಗೆ ಯೋಗ್ಯವಾದದೇನ್ದೂ ಮಾಡಿದವನಲ್ಲವೆಂದಾಯಿತು. ಆದದರಿಂದ ನಾನು ಇವನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ.”
ಈ ರೀತಿಯಲ್ಲಿ ಎರಡು ಸಲ ಪಿಲಾತನು ಯೇಸುವನ್ನು ನಿರಪರಾಧಿ ಎಂದು ಹೇಳುತ್ತಾನೆ. ಕೇವಲ ಮತ್ಸರದ ಕಾರಣ ಯಾಜಕರು ಅವನನ್ನು ಒಪ್ಪಿಸಿದ್ದಾರೆಂದು ಅವನು ತಿಳಿದುಕೊಂಡದ್ದರಿಂದ, ಅವನನ್ನು ಬಿಡಿಸಲು ಪಿಲಾತನು ಆತುರನಾಗಿದ್ದನು. ಯೇಸುವನ್ನು ಬಿಡಿಸಲು ಪಿಲಾತನು ಪ್ರಯತ್ನಿಸುವದನ್ನು ಮುಂದುವರಿಸುತ್ತಿರುವಾಗ, ಹಾಗೆ ಮಾಡಲು ಇನ್ನೊಂದು ಬಲವಾದ ಪ್ರೇರಣೆ ಅವನಿಗೆ ದೊರಕಿತು. ಅವನು ತನ್ನ ನ್ಯಾಯಾಸನದಲ್ಲಿ ಕೂತಿರುವಾಗ ಅವನ ಹೆಂಡತಿಯು ಒಂದು ಸಂದೇಶವನ್ನು ಕಳುಹಿಸಿ, ಅವನಿಗೆ ಒತ್ತಾಯಿಸುವದು: “ನೀನು ಆ ಸತ್ಪುರುಷನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ [ದೈವಿಕ ಮೂಲದಿಂದ ಎಂದು ತೋರುತ್ತದೆ] ಬಹಳ ತೊಂದರೆ ಪಟ್ಟೆನು.”
ಆದರೂ, ಈ ನಿರಪರಾಧಿ ಮನುಷ್ಯನನ್ನು ಪಿಲಾತನು, ಹಾಗೆ ಮಾಡಬೇಕೆಂದು ಅವನು ತಿಳಿದಿದ್ದರೂ, ಹೇಗೆ ಬಿಡುಗಡೆ ಮಾಡ ಶಕ್ತನು? ಯೋಹಾನ 18:36-38; ಲೂಕ 23:4-16; ಮತ್ತಾಯ 27:12-14, 18, 19; 14:1, 2; ಮಾರ್ಕ 15:2-5.
▪ ಅವನ ರಾಜ್ಯತ್ವದ ಕುರಿತಾದ ಪ್ರಶ್ನೆಗೆ ಯೇಸುವು ಹೇಗೆ ಉತ್ತರ ಕೊಡುತ್ತಾನೆ?
▪ ಯೇಸುವು ತನ್ನ ಐಹಿಕ ಜೀವನವನ್ನು ಅದಕ್ಕೋಸ್ಕರ ಸಾಕ್ಷಿ ನೀಡಲು ವ್ಯಯಿಸಿದ ಆ “ಸತ್ಯವು” ಯಾವುದು?
▪ ಪಿಲಾತನ ನ್ಯಾಯತೀರ್ಪು ಏನಾಗಿತ್ತು, ಜನರು ಹೇಗೆ ಪ್ರತಿವರ್ತಿಸಿದರು, ಮತ್ತು ಯೇಸುವಿನೊಂದಿಗೆ ಪಿಲಾತನು ಏನು ಮಾಡಿದನು?
▪ ಹೆರೋದ ಅಂತಿಪನು ಯಾರು, ಯೇಸುವನ್ನು ನೋಡಲು ಅವನು ಸಂತೋಷಪಟ್ಟದ್ದೇಕೆ, ಮತ್ತು ಅವನೊಂದಿಗೆ ಅವನು ಹೇಗೆ ವರ್ತಿಸುತ್ತಾನೆ?
▪ ಯೇಸುವನ್ನು ಬಿಡುಗಡೆಗೊಳಿಸಲು ಪಿಲಾತನು ಯಾಕೆ ಆಸಕ್ತನಾಗಿದ್ದನು?
-
-
“ಇಗೋ, ಈ ಮನುಷ್ಯನು!”ಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 123
“ಇಗೋ, ಈ ಮನುಷ್ಯನು!”
ಯೇಸುವಿನ ನಡತೆಯಿಂದ ಪ್ರಭಾವಿತನಾಗಿ ಮತ್ತು ಅವನ ನಿರಪರಾಧಿತ್ವವನ್ನು ಮನಗಂಡು, ಪಿಲಾತನು ಇನ್ನೊಂದು ರೀತಿಯಲ್ಲಿ ಅವನನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಾನೆ. “ಆದರೆ ಪಸ್ಕ ಹಬ್ಬದಲ್ಲಿ,” ಅವನು ಜನರ ಗುಂಪಿಗೆ ಹೇಳುತ್ತಾನೆ, “ನಾನು ಒಬ್ಬನನ್ನು ನಿಮಗೆ ಬಿಟ್ಟು ಕೊಡುವ ಪದ್ಧತಿ ಉಂಟಷ್ಟೇ.”
ಬರಬ್ಬನು, ಒಬ್ಬ ಕುಖ್ಯಾತ ಕೊಲಿಗಾರನಾಗಿದ್ದು, ಸೆರೆಮನೆಯಲ್ಲಿ ಬಂಧನದಲ್ಲಿದ್ದನು, ಆದುದರಿಂದ ಪಿಲಾತನು ಕೇಳುವದು: “ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನೋ?”
ಬರಬ್ಬನನ್ನು ಬಿಡುಗಡೆ ಮಾಡುವಂತೆ, ಆದರೆ ಯೇಸುವನ್ನು ಕೊಲ್ಲಿಸುವಂತೆ, ಜನರು ಕೇಳುವಂತೆ ಮಹಾ ಯಾಜಕರು ಜನರನ್ನು ಉದ್ರೇಕಿಸಿ, ಒಡಂಬಡಿಸಿದ್ದರು. ಆದರೂ ಬಿಟ್ಟು ಕೊಡದೆ, ಪಿಲಾತನು ಪ್ರತಿವರ್ತಿಸುತ್ತಾ, ಪುನಃ ಕೇಳುವದು: “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟು ಕೊಡಬೇಕನ್ನುತ್ತೀರಿ?”
“ಬರಬ್ಬನನ್ನು” ಜನರು ಕೂಗುತ್ತಾರೆ.
“ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಪಿಲಾತನು ಜಿಗುಪ್ಸೆಯಿಂದ ಕೇಳುತ್ತಾನೆ.
ಅವರೆಲ್ಲರೂ ಕಿವಿಡುಗೊಳಿಸುವ ಆರ್ಭಟದಲ್ಲಿ, ಉತ್ತರಿಸುವದು: “ಅವನನ್ನು ವಧಾಸ್ತಂಭಕ್ಕೆ ಹಾಕಿಸು.” “ವಧಾಸ್ತಂಭಕ್ಕೆ ಹಾಕಿಸು, ಅವನನ್ನು ವಧಾಸ್ತಂಭಕ್ಕೆ ಹಾಕಿಸು!
ನಿರಪರಾಧಿ ಮನುಷ್ಯನ ಮರಣವನ್ನು ಅವರು ಅಪೇಕ್ಷಿಸುತ್ತಾರೆ ಎಂದವನ್ನು ಅರಿತು, ಪಿಲಾತನು ವಿನಂತಿಸುತ್ತಾನೆ: “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣ ದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ; ಆದದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ.”
ಅವನ ಪ್ರಯತ್ನಗಳ ಹೊರತಾಗಿಯೂ, ಅವರ ಧಾರ್ಮಿಕ ಮುಖಂಡರುಗಳಿಂದ ಕೆರಳಸಲ್ಪಟ್ಟು, ಕೋಪೋದ್ರಿಕ್ತ ಜನರ ಗುಂಪು, ದೊಡ್ಡ ಕೂಗಾಟ ಮಾಡಲು ಆರಂಭಿಸಿತು: “ಅವನನ್ನು ವಧಾಸ್ತಂಭಕ್ಕೆ ಏರಿಸು!” ಯಾಜಕರ ರೋಷಾವೇಶದಿಂದ ಕಲಕಿಸಲ್ಪಟ್ಟ, ಜನರ ಗುಂಪು ರಕ್ತಕ್ಕಾಗಿ ಹಾತೊರೆಯಿತು. ಮತ್ತು ನೆನಪಿಸಿರಿ, ಕೇವಲ ಐದು ದಿನಗಳ ಹಿಂದೆ ರಾಜನೋಪಾದಿ ಯೆರೂಸಲೇಮಿನಲ್ಲಿ ಯೇಸುವನ್ನು ಸುಸ್ವಾಗತಿಸಿದವರಲ್ಲಿ ಪ್ರಾಯಶಃ ಕೆಲವರು ಈ ಗುಂಪಿನಲ್ಲಿದಿರ್ದಬಹುದು! ಇದೆಲ್ಲಾದರ ನಡುವೆ, ಒಂದು ವೇಳೆ ಯೇಸುವಿನ ಶಿಷ್ಯರು ಇದ್ದಿರುವದಾದರೆ, ಅವರು ಸುಮ್ಮನೆ, ಮರೆಯಲ್ಲಿ ಇದ್ದಿರಬೇಕು.
ಅವನ ವಿನಂತಿಗಳು ಯಾವುದೇ ಒಳಿತನ್ನು ಮಾಡುವ ಬದಲಾಗಿ, ಕೂಗಾಟವು ಏರುವದನ್ನು ಪಿಲಾತನು ನೋಡಿ, ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡು, ಹೇಳುವದು: “ಈ ಮನುಷ್ಯನನ್ನು ಕೊಲ್ಲಿಸಿದಕ್ಕೆ ನಾನು ಸೇರಿದವನಲ್ಲ; ನೀವೇ ನೋಡಿಕೊಳ್ಳಿರಿ.” ಆಗ ಜನರು ಉತ್ತರಿಸುವದು: “ಅವನನ್ನು ಕೊಲ್ಲಿಸಿದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ.”
ಆದುದರಿಂದ ಅವರ ಕೇಳಿಕೆಗಳ ಮೇರೆಗೆ—ಸರಿ ಯಾವುದು ಎಂದು ಅವನು ತಿಳಿದಿರುವದನ್ನು ಮಾಡುವದಕ್ಕಿಂತಲೂ ಜನರ ಗುಂಪನ್ನು ತೃಪ್ತಿಗೊಳಿಸಲು ಬಯಸಿ, ಪಿಲಾತನು ಬರಬ್ಬನನ್ನು ಅವರಿಗಾಗಿ ಬಿಟ್ಟುಕೊಡುತ್ತಾನೆ. ಅವನು ಯೇಸುವಿನ ವಸ್ತ್ರ ತೆಗೆಸಿ, ಕೊರಡೆಗಳಿಂದ ಹೊಡಿಸುತ್ತಾನೆ. ಇದೊಂದು ಸಾಮಾನ್ಯ ರೀತಿಯ ಕೊರಡೆಯ ಹೊಡೆತಗಳಲ್ಲ. ರೋಮನ್ ಕೊರಡೆಗಳ ಹೊಡೆತದ ಕುರಿತು ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೆಶನ್ ವಿವರಿಸುವದು:
“ಹಲವಾರು ಒಂದೊಂದೇ ಆಗಿ ಇರುವ ಯಾ ಹೆಣೆಯಲ್ಪಟ್ಟ ಚರ್ಮದ ಬೇರೆ ಬೇರೆ ಉದ್ದದ ಬಾರುಗಳಿರುವ ಒಂದು ಗಿಡ್ಡ ಕೊರಡೆಯು (ಚಬುಕು ಯಾ ಚಾವಟಿ) ಸಾಧಾರಣ ಸಾಧನವಾಗಿತ್ತು, ಈ ಬಾರುಗಳಿಗೆ ಅಲ್ಲಲ್ಲಿ ಸ್ಥಳ ಬಿಟ್ಟು ಚಿಕ್ಕ ಕಬ್ಬಿಣದ ಗುಂಡುಗಳು ಯಾ ಕುರಿಯ ಎಲುಬಿನ ಚೂಪಾದ ತುಂಡುಗಳು ಸಿಕ್ಕಿಸಲ್ಪಡುತ್ತಿದ್ದವು. . . . ಪೂರ್ಣ ಬಲವನ್ನುಪಯೋಗಿಸಿ ರೋಮನ್ ಸಿಪಾಯಿಗಳು ಅಪರಾಧಿಯ ಬೆನ್ನ ಮೇಲೆ ಪುನಃ ಪುನಃ ಹೊಡೆದಾಗ, ಕಬ್ಬಿಣದ ಗುಂಡುಗಳು ಆಳವಾದ ಬಾಸುಂಡೆಗಳಿಗೆ ಕಾರಣವಾಗುತ್ತಿದ್ದವು ಮತ್ತು ಚರ್ಮದ ಬಾರುಗಳು ಮತ್ತು ಕುರಿಗಳ ಎಲುಬುಗಳು ಚರ್ಮವನ್ನು ಮತ್ತು ಚರ್ಮದ ಕೆಳಗಡೆಯ ಅಂಗಕಟ್ಟುಗಳನ್ನು [ಅಂಗಾಂಶ-ಟಿಶ್ಯು] ಕತ್ತರಿಸುತ್ತಿದ್ದವು. ಅನಂತರ, ಕೊರಡೆಯೇಟು ಮುಂದರಿಸಲ್ಪಟ್ಟರೆ, ಸೀಳಿರುವ ಮಾಂಸದ ಕೆಳಸ್ತರದಲ್ಲಿರುವ ಎಲುಬುಗೂಡಿನ ಸ್ನಾಯುಗಳನ್ನು ಹರಿಯುತ್ತದೆ ಮತ್ತು ರಕ್ತ ಸೋರುವ ಮಾಂಸದ ಕಂಪಿಸುವ ಚಿಂದಿ ಚಿಂದಿಗಳನ್ನು ಉತ್ಪಾದಿಸುತ್ತದೆ.”
ಈ ಯಾತನಾಮಯ ಹೊಡೆತಗಳ ನಂತರ, ಯೇಸುವನ್ನು ದೇಶಾಧಿಪತಿಯ ಅರಮನೆಯೊಳಕ್ಕೆ ತೆಗೆದುಕೊಂಡು ಹೋದರು ಮತ್ತು ಪಟಾಲಮನ್ನೆಲ್ಲಾ ಆತನ ಸುತ್ತಲೂ ಕೂಡಿಸಿದರು. ಅಲ್ಲಿ ಸಿಪಾಯಿಗಳು ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಂದ ಬಲಾತ್ಕಾರವಾಗಿ ಒತ್ತಿದರು. ಅವನ ಬಲಗೈಯಲ್ಲಿ ಬೆತ್ತವನ್ನು ಇಟ್ಟು, ರಾಜರು ಉಟ್ಟುಕೊಳ್ಳುವಂಥ ಒಂದು ಕೆಂಪು ಒಲ್ಲಿಯನ್ನು ಹೊದಿಸಿದರು. ತದನಂತರ, ಅಪಹಾಸ್ಯಮಾಡುತ್ತಾ, ಅವರಂದದ್ದು: “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಆತನ ಮೇಲೆ ಉಗುಳಿ, ಕೆನ್ನೆಯ ಮೇಲೆ ಹೊಡೆದರು. ಅವನ ಕೈಯಲ್ಲಿದ್ದ ಗಟ್ಟಿಯಾದ ಬೆತ್ತವನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಡೆದರು, ಆ ಮೂಲಕ, ಅವನನ್ನು ಅವಮಾನಿಸುವ “ಕಿರೀಟ”ದ ಚೂಪಾದ ಮುಳ್ಳುಗಳು ಇನ್ನಷ್ಟು ಆಳವಾಗಿ ಅವನ ತಲೆಯ ನೆತ್ತಿಯಲ್ಲಿ ಹೊಗಿಸಿದರು.
ಈ ಕೆಟ್ಟ ನಡವಳಿಕೆಯ ಎದುರಲ್ಲಿಯೂ ಯೇಸುವಿನ ಎದ್ದುಕಾಣುವ ಘನತೆ ಮತ್ತು ಬಲವನ್ನು ಕಂಡು ಪಿಲಾತನು ಎಷ್ಟೊಂದು ಪ್ರಭಾವಿತನಾದನೆಂದರೆ, ಅವನನ್ನು ಬಿಡಿಸಲು ಇನ್ನೊಂದು ಪ್ರಯತ್ನವನ್ನು ಮಾಡುತ್ತಾನೆ. “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ,” ಎಂದವನು ಗುಂಪಿಗೆ ಹೇಳುತ್ತಾನೆ. ಯೇಸುವಿನ ಯಾತನೆ ಪಡುವ ನೋಟವಾದರೂ ಅವರ ಹೃದಯಗಳನ್ನು ಮೃದುಗೊಳಿಸಬಹುದೇನೋ ಎಂದವನು ಊಹಿಸಿರಬಹುದು. ಹೃದಯವಿಲ್ಲದ ಗುಂಪಿನ ಮುಂದೆ ಯೇಸುವು ಮುಳ್ಳಿನ ಕಿರೀಟವನ್ನೂ, ಕೆಂಪು ಹೊರಗಿನ ಒಲ್ಲಿಯನ್ನೂ ಧರಿಸಿದವನಾಗಿ ಮತ್ತು ನೋವಿನಿಂದ ನರಳುತ್ತಿರುವ ರಕ್ತ ಸುರಿಯುವ ಮುಖದಿಂದ ಬಂದು ನಿಂತಾಗ, ಪಿಲಾತನು ಘೋಷಿಸುವದು: “ಇಗೋ, ಈ ಮನುಷ್ಯನು!”
ಚರ್ಮ ವಿವರ್ಣವಾಗುವ ರೀತಿಯಲ್ಲಿ ಹೊಡೆಯಲ್ಪಟ್ಟು, ಜಜ್ಜಲ್ಪಟ್ಟರೂ, ಇತಿಹಾಸದಲ್ಲಿಲ್ಲಾ ಅತಿ ಪ್ರಮುಖನಾದ ವ್ಯಕ್ತಿ, ನಿಜವಾಗಿಯೂ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು ಇಲ್ಲಿ ನಿಂತಿದ್ದಾನೆ! ಹೌದು, ಪಿಲಾತನು ಕೂಡ ಅಂಗೀಕರಿಸಬೇಕಾದ ಒಂದು ದೊಡ್ಡತನವನ್ನು ಸೂಚಿಸುವಂಥ ಒಂದು ಶಾಂತ ಘನತೆಯನ್ನು ಮತ್ತು ನಿಶ್ಚಲತೆಯನ್ನು ಯೇಸುವು ತೋರಿಸುತ್ತಾನೆ, ಯಾಕಂದರೆ ಗೌರವ ಮತ್ತು ಕಾರುಣ್ಯ ಎರಡೂ ಸೇರಿದ್ದ ನುಡಿಗಳು ಪಿಲಾತನದ್ದಾಗಿದ್ದವು. ಯೋಹಾನ 18:39—19:5; ಮತ್ತಾಯ 27:15-17, 20-30; ಮಾರ್ಕ 15:6-19; ಲೂಕ 23:18-25.
▪ ಯೇಸುವನ್ನು ಬಿಡಿಸಲು ಪಿಲಾತನು ಯಾವ ರೀತಿಯಲ್ಲಿ ಪ್ರಯತ್ನಿಸಿದನು?
▪ ಜವಾಬ್ದಾರಿಕೆಯಿಂದ ತಪ್ಪಿಸಿಕೊಳ್ಳಲು ಪಿಲಾತನು ಹೇಗೆ ಪ್ರಯತ್ನಿಸಿದನು?
▪ ಕೊರಡೆಗಳ ಹೊಡೆತಗಳಲ್ಲಿ ಏನು ಒಳಗೂಡಿದೆ?
▪ ಕೊರಡೆಗಳಿಂದ ಹೊಡೆಯಲ್ಪಟ್ಟ ನಂತರ, ಯೇಸುವನ್ನು ಹೇಗೆ ಅವಮಾನಿಸಲಾಯಿತು?
▪ ಯೇಸುವನ್ನು ಬಿಡಿಸಲು ಯಾವ ಹೆಚ್ಚಿನ ಪ್ರಯತ್ನವನ್ನು ಪಿಲಾತನು ಮಾಡಿದನು?
-
-
ಒಪ್ಪಿಸಲ್ಪಟ್ಟು, ಕೊಂಡೊಯ್ಯಲ್ಪಟ್ಟನುಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 124
ಒಪ್ಪಿಸಲ್ಪಟ್ಟು, ಕೊಂಡೊಯ್ಯಲ್ಪಟ್ಟನು
ಪಿಲಾತನು ಕ್ರೂರ ಯಾತನೆಗೊಳಪಟ್ಟ ಯೇಸುವಿನ ಶಾಂತ ಘನತೆಯಿಂದ ಕನಿಕರ ಹೊಂದಿ, ಅವನನ್ನು ಬಿಡುಗಡೆಗೊಳಿಸಲು ಪುನಃ ಪ್ರಯತ್ನಿಸಿದಾಗ, ಮಹಾ ಯಾಜಕರೂ ಇನ್ನಷ್ಟು ಕೋಪಗೊಂಡರು. ಅವರ ದುಷ್ಟ ಉದ್ದೇಶದೊಂದಿಗೆ ಯಾವುದೂ ಮಧ್ಯೆ ಪ್ರವೇಶಿಸಿದಂತೆ ಅವರು ದೃಢ ಮನಸ್ಕರಾಗಿದ್ದರು. ಆದುದರಿಂದ ಅವರು ತಮ್ಮ ಕೂಗಾಟವನ್ನು ಪುನಃ ಪುನಃ ಮಾಡುತ್ತಿದ್ದರು: “ಅವನನ್ನು ವಧಾಸ್ತಂಭಕ್ಕೇರಿಸು! ಅವನನ್ನು ವಧಾಸ್ತಂಭಕ್ಕೇರಿಸು!”
“ಬೇಕಾದರೆ ನೀವೇ ಅವನನ್ನು ತಕ್ಕೊಂಡು ಹೋಗಿ ವಧಾಸ್ತಂಭಕ್ಕೇರಿಸಿರಿ,” ಪಿಲಾತನು ಪ್ರತಿಕ್ರಿಯಿಸುತ್ತಾನೆ. (ಅವರು ಈ ಮೊದಲು ಹೇಳಿದ್ದಕ್ಕೆ ಪ್ರತಿ ವಿರುದ್ಧವಾಗಿ, ಸಾಕಷ್ಟು ಗಂಭೀರತೆಯ ಧಾರ್ಮಿಕ ಆರೋಪಗಳಿಗಾಗಿ ದುಷ್ಕರ್ಮಿಗಳನ್ನು ಕೊಲ್ಲಿಸಲು ಯೆಹೂದ್ಯರಿಗೆ ಅಧಿಕಾರವಿದ್ದರಬಹುದು.) ಅನಂತರ, ಕಡಿಮೆ ಪಕ್ಷ ಐದನೆಯ ಬಾರಿಗೆ, ಯೇಸುವು ನಿರಪರಾಧಿಯೆಂದು ಪಿಲಾತನು ಹೇಳುತ್ತಾನೆ: “ನನಗೆ ಅವನಲ್ಲಿ ಅಪರಾಧವು ಕಾಣಿಸಲಿಲ್ಲ.”
ಅವರ ರಾಜಕೀಯ ಆರೋಪವು ಫಲಿತಾಂಶವನ್ನು ತರಲು ತಪ್ಪಿಹೋಗುವದನ್ನು ಯೆಹೂದ್ಯರು ಕಂಡು, ಸನ್ಹೇದ್ರಿನ್‌ನ ಮುಂದೆ ಯೇಸುವಿನ ವಿಚಾರಣೆಯ ಸಮಯದಲ್ಲಿ ಕೆಲವು ತಾಸುಗಳ ಮುಂಚೆ ತಂದಂಥ ದೇವದೂಷಣೆಯ ಧಾರ್ಮಿಕ ಆಪಾದನೆಯನ್ನು ಪುನಃ ತರುತ್ತಾರೆ. “ನಮಗೆ ಒಂದು ನೇಮ ಉಂಟು,” ಅವರನ್ನುತ್ತಾರೆ, “ಆ ನೇಮದ ಪ್ರಕಾರ ಇವನು ಸಾಯತಕ್ಕವನು; ಯಾಕಂದರೆ ಅವನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ.”
ಈ ಆಪಾದನೆಯು ಪಿಲಾತನಿಗೆ ಹೊಸತು ಮತ್ತು ಇದು ಅವನನ್ನು ಮತ್ತಷ್ಟು ಹೆದರುವಂತೆ ಮಾಡಿತು. ಅವನ ಹೆಂಡತಿಯ ಕನಸು ಮತ್ತು ಯೇಸುವಿನ ವ್ಯಕ್ತಿತ್ವದ ಗಮನಾರ್ಹವಾದ ಬಲವು ಕೂಡ, ಯೇಸುವು ಒಬ್ಬ ಸಾಧಾರಣ ಮನುಷ್ಯನಲ್ಲವೆಂದು ಇಷ್ಟರೊಳಗೆ ಅವನು ತಿಳಿದಿದ್ದನು. ಆದರೆ “ದೇವರ ಮಗನು”? ಯೇಸುವು ಗಲಿಲಾಯದವನು ಎಂದು ಪಿಲಾತನಿಗೆ ಗೊತ್ತಿತ್ತು. ಆದರೂ, ಅವನು ಮೊದಲು ಎಲ್ಲಿಯಾದರೂ ಜೀವಿಸಿರಬಹುದೇ? ಪುನಃ ಅರಮನೆಯೊಳಗೆ ಅವನನ್ನು ಕೊಂಡುಹೋಗಿ, ಪಿಲಾತನು ವಿಚಾರಿಸುವದು: “ನೀನು ಎಲ್ಲಿಂದ ಬಂದವನು?”
ಯೇಸುವು ಉತ್ತರ ಕೊಡುವದಿಲ್ಲ. ಅವನೊಬ್ಬ ರಾಜನೆಂದೂ, ಅವನ ರಾಜ್ಯವು ಈ ಲೋಕದ ಭಾಗವಾಗಿಲ್ಲವೆಂದೂ ಅವನು ಈ ಮುಂಚೆ ಪಿಲಾತನಿಗೆ ಹೇಳಿದ್ದನು. ಯಾವುದೇ ಉಪಯುಕ್ತ ಉದ್ದೇಶವು ಇನ್ನೂ ಹೆಚ್ಚಿನ ವಿವರಣೆಯಿಂದ ಲಭಿಸಲಾರದು. ಆದಾಗ್ಯೂ, ಉತ್ತರ ಕೊಡಲು ನಿರಾಕರಿಸಿದ್ದರಿಂದ ಪಿಲಾತನ ಹೆಮ್ಮೆಗೆ ಪೆಟ್ಟು ಬಿದ್ದಿತ್ತು ಮತ್ತು ಯೇಸುವಿನೆಡೆಗೆ ಅವನು ಕೋಪಗೊಂಡು ಹೀಗನ್ನುತ್ತಾನೆ: “ನನ್ನ ಸಂಗಡಲೂ ನೀನು ಮಾತಾಡುವದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ವಧಾಸ್ತಂಭಕ್ಕೇರಿಸುವ ಅಧಿಕಾರವೂ ನನಗೆ ಉಂಟೆಂದು ನಿನಗೆ ಗೊತ್ತಿಲ್ಲವೋ?”
“ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ,” ಯೇಸುವು ಗೌರವಪೂರ್ಣತೆಯಿಂದ ಪ್ರತ್ಯುತ್ತರ ಕೊಡುತ್ತಾನೆ. ಐಹಿಕ ವ್ಯವಹಾರಗಳನ್ನು ನೋಡಿಕೊಳ್ಳಲು ಮಾನವ ಅಧಿಪತಿಗಳಿಗೆ ದೇವರಿಂದ ಕೊಡಲ್ಪಟ್ಟ ಅಧಿಕಾರದ ಕುರಿತು ಅವನು ನಿರ್ದೇಶಿಸುತ್ತಾನೆ. ಯೇಸುವು ಕೂಡಿಸುವದು: “ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪ ಉಂಟು.” ಖಂಡಿತವಾಗಿಯೂ, ಯೇಸುವಿಗೆ ನೀಡಿದ ಅನ್ಯಾಯದ ಉಪಚಾರಕ್ಕಾಗಿ, ಮಹಾ ಯಾಜಕನಾದ ಕಾಯಫನಿಗೆ ಮತ್ತು ಅವನ ಸಹಾಯಕರಿಗೆ ಮತ್ತು ಇಸ್ಕರಿಯೋತ ಯೂದನಿಗೆ, ಪಿಲಾತನಿಗಿಂತ ಹೆಚ್ಚಿನ ಜವಾಬ್ದಾರಿಕೆಯ ಹೊರೆಯನ್ನು ಹೊರಲಿಕ್ಕಿದೆ.
ಯೇಸುವಿನಿಂದ ಇನ್ನಷ್ಟು ಪ್ರಭಾವಿತನಾಗಿ ಮತ್ತು ದೈವಿಕ ಮೂಲವೊಂದು ಯೇಸುವಿಗೆ ಇರಬಹುದು ಎಂಬದರಿಂದ ಭಯಭೀತನಾಗಿ, ಅವನನ್ನು ಬಿಡಿಸಲು ಪಿಲಾತನು ಪುನಃ ತನ್ನ ಪ್ರಯತ್ನವನ್ನು ಮಾಡುತ್ತಾನೆ. ಆದಾಗ್ಯೂ, ಯೆಹೂದ್ಯರಿಂದ ಪಿಲಾತನು ಧಿಕ್ಕಾರವನ್ನು ಪಡೆಯುತ್ತಾನೆ. ಅವರು ರಾಜಕೀಯ ಆರೋಪವನ್ನು ಪುನರುಚ್ಛರಿಸಿ, ಕುತಂತ್ರದಿಂದ ಬೆದರಿಕೆಯನ್ನೂಡ್ಡುತ್ತಾರೆ: “ನೀನು ಇವನನ್ನು ಬಿಡಿಸಿದರೆ ನೀನು ಕೈಸರನಿಗೆ ಮಿತ್ರನಲ್ಲ; ತನ್ನನ್ನು ಅರಸನನ್ನಾಗಿ ಮಾಡಿ ಕೊಳ್ಳುವವನು ಕೈಸರನಿಗೆ ವಿರೋಧಿ.”
ಇಂಥ ವಿಪತ್ಕಾರಕ ಪರಿಣಾಮಗಳು ಒಳಗೂಡಿರುವದಾದರೂ, ಪಿಲಾತನು ಯೇಸುವನ್ನು ಪುನೊಮ್ಮೆ ಹೊರಗೆ ತರಿಸುತ್ತಾನೆ. “ಇಗೋ, ನಿಮ್ಮ ಅರಸನು!” ಎಂದು ಪುನಃ ಅವರಿಗೆ ವಿನಂತಿಸುತ್ತಾನೆ.
“ಅವನನ್ನು ಕೊಲ್ಲಿಸು! ಅವನನ್ನು ಕೊಲ್ಲಿಸು! ವಧಾಸ್ತಂಭಕ್ಕೇರಿಸು!”
“ನಿಮ್ಮ ಅರಸನನ್ನು ವಧಾಸ್ತಂಭಕ್ಕೇರಿಸಲೋ?” ಪಿಲಾತನು ಹತಾಶೆಯಿಂದ ಕೇಳುತ್ತಾನೆ.
ರೋಮನರ ಆಳಿಕೆಯ ಕೆಳಗೆ ಯೆಹೂದ್ಯರು ಒತ್ತಡಕ್ಕೊಳಗಾಗಿದ್ದರು. ಖಂಡಿತವಾಗಿಯೂ ಅವರು ರೋಮನರ ಪ್ರಭುತ್ವವನ್ನು ಹೇಸುತ್ತಿದ್ದರು! ಆದರೂ, ಕಪಟತನದಿಂದ, ಮಹಾ ಯಾಜಕರು ಹೇಳುತ್ತಾರೆ: “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ.”
ತನ್ನ ರಾಜಕೀಯ ಹುದ್ದೆ ಮತ್ತು ಕೀರ್ತಿಗಾಗಿ ಹೆದರಿಕೊಂಡು, ಯೆಹೂದ್ಯರು ಪಟ್ಟುಬಿಡದೆ ಮಾಡಿದ ಕೇಳಿಕೆಗಳಿಗೆ ಕೊನೆಗೂ ಪಿಲಾತನು ಮಣಿಯುತ್ತಾನೆ. ಅವನು ಯೇಸುವನ್ನು ಅವರ ವಶಕ್ಕೆ ಒಪ್ಪಿಸುತ್ತಾನೆ. ಸಿಪಾಯಿಗಳು ಅವನ ಕೆಂಪು ಒಲ್ಲಿಯ ಮೇಲಂಗಿಯನ್ನು ತೆಗೆಯುತ್ತಾರೆ ಮತ್ತು ಅವನ ಮೇಲುಹೊದಿಕೆಯನ್ನು ಹೊದಿಸುತ್ತಾರೆ. ವಧಾಸ್ತಂಭಕ್ಕೇರಿಸಲ್ಪಡಲು ಅವನನ್ನು ಕೊಂಡೊಯ್ದಾಗ, ಆತನು ತನ್ನ ಸ್ವಂತ ಯಾತನಾ ಸ್ತಂಭವನ್ನು ತಾನೇ ಹೊತ್ತುಕೊಂಡು ಹೋಗುವಂತೆ ಮಾಡಿದರು.
ಇಷ್ಟರೊಳಗೆ ನೈಸಾನ್ 14, ಶುಕ್ರವಾರ ಮಧ್ಯೆ ಬೆಳಗ್ಗಿನ ಸಮಯವಾಗಿತ್ತು; ಪ್ರಾಯಶಃ ಮಧ್ಯಾಹ್ನಕ್ಕೆ ಹತ್ತರಿಸುತ್ತಿರಬಹುದು. ಗುರುವಾರ ಮುಂಜಾನೆಯಿಂದಲೇ ಯೇಸು ಎಚ್ಚರದಿಂದ ಇದ್ದನು ಮತ್ತು ಒಂದರ ನಂತರ ಇನ್ನೊಂದು ಮರಣ ಸಂಕಟದ ಅನುಭವಗಳಿಂದ ಬಾಧೆ ಪಡುತ್ತಾ ಇದ್ದನು. ಕಂಭದ ಭಾರದ ಕೆಳಗೆ ಅವನ ಶಕ್ತಿಯು ತಾಳಿಕೊಳ್ಳಲಾರದು ಎಂಬದನ್ನು ಅರ್ಥೈಸಬಹುದು. ಆದುದರಿಂದ ಅಲ್ಲಿಂದ ಹಾದುಹೋಗುತ್ತಿದ್ದ ಆಫ್ರಿಕದ ಕುರೇನೆ ಪಟ್ಟಣದ ಸೀಮೋನನೆಂಬವನನ್ನು ಅವನಿಗಾಗಿ ಹೊರುವದಕ್ಕೆ ಬಿಟ್ಟೀಹಿಡಿದರು. ಅವರು ಮುಂದಕ್ಕೆ ಹೋಗುತ್ತಾ ಇರುವಾಗ, ಎದೆಬಡುಕೊಳ್ಳುತ್ತಾ, ಯೇಸುವಿನ ವಿಷಯದಲ್ಲಿ ಗೋಳಾಡುತ್ತಾ ಇರುವ ಸ್ತ್ರೀಯರ ಸಹಿತ ಅನೇಕ ಜನರು ಅವನನ್ನು ಹಿಂಬಾಲಿಸುತ್ತಿದ್ದರು.
ಸ್ತ್ರೀಯರೆಡೆಗೆ ತಿರುಗುತ್ತಾ, ಯೇಸುವು ಹೇಳುವದು: “ಯೆರೂಸಲೇಮಿನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ. ಯಾಕಂದರೆ ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು ಎಂದು ಜನರು ಹೇಳುವ ದಿವಸಗಳು ಬರುತ್ತವೆ. . . . ಮರ ಹಸಿಯಾಗಿರುವಾಗ ಇಷ್ಟೆಲ್ಲಾ ಮಾಡಿದರೆ ಮರ ಒಣಗಿರುವಾಗ ಏನಾಗಬಹುದು?”
ಯೆಹೂದಿ ಜನಾಂಗದ ಮರಕ್ಕೆ ಸೂಚಿಸಿ ಯೇಸುವು ಮಾತಾಡುತ್ತಾನೆ, ಯೇಸುವು ಇನ್ನು ಇದ್ದುದರಿಂದ ಮತ್ತು ಅವನಲ್ಲಿ ನಂಬಿಕೆ ಇಡುವ ಉಳಿಕೆಯವರು ಇದ್ದುದರಿಂದ ಅದು ಇನ್ನು ಸ್ವಲ್ಪ ಹಸಿಯಾಗಿತ್ತು. ಆದರೆ ಇವರು ಆ ಜನಾಂಗದಿಂದ ತೆಗೆಯಲ್ಪಟ್ಟ ನಂತರ, ಕೇವಲ ಆತ್ಮಿಕವಾಗಿ ಸತ್ತಿರುವ ಮರವು ಉಳಿಯುವದು, ಹೌದು, ಒಣಗಿ ಹೋದ ರಾಷ್ಟ್ರೀಯ ಸಂಸ್ಥಾಪನೆಯೊಂದು ಇರುತ್ತದೆ. ಓ, ದೇವರ ಹತ್ಯಕಾರಿಗಳಾಗಿ ವರ್ತಿಸುತ್ತಾ, ರೋಮನರ ಸೇನೆಗಳು ಯೆಹೂದಿ ಜನಾಂಗವನ್ನು ಧ್ವಂಸ ಮಾಡುವಾಗ ಅಲ್ಲಿ ಗೋಳಾಡಲು ಎಂಥಾ ಒಂದು ಕಾರಣವಿರುವದು! ಯೋಹಾನ 19:6-17; 18:31; ಲೂಕ 23:24-31; ಮತ್ತಾಯ 27:31, 32; ಮಾರ್ಕ 15:20, 21.
▪ ಅವರ ರಾಜಕೀಯ ಆರೋಪಗಳು ನಿರೀಕ್ಷಿತ ಫಲಿತಾಂಶಗಳನ್ನು ತರದಿದ್ದಾಗ ಧಾರ್ಮಿಕ ಮುಖಂಡರು ಯೇಸುವಿನ ವಿರುದ್ಧ ಯಾವ ಆಪಾದನೆಗಳನ್ನು ಹೊರಿಸಿದರು?
▪ ಪಿಲಾತನು ಇನ್ನಷ್ಟು ಭಯಭರಿತನಾದದ್ದು ಯಾಕೆ?
▪ ಯೇಸುವಿಗೆ ಏನು ಸಂಭವಿಸುತ್ತದೋ, ಅದಕ್ಕೆ ಯಾರು ಹೆಚ್ಚು ಪಾಪವನ್ನು ಹೊರುತ್ತಾರೆ?
▪ ಕೊನೆಗೆ, ಕೊಲ್ಲುವಂತೆ ಯೇಸುವನ್ನು ಪಿಲಾತನು ಅವರ ವಶಕ್ಕೆ ಒಪ್ಪಿಸಲು ಯಾಜಕರು ಹೇಗೆ ಶಕ್ತರಾದರು?
▪ ಅವನಿಗಾಗಿ ಗೋಳಾಡುವ ಸ್ತ್ರೀಯರಿಗೆ ಯೇಸುವು ಏನು ಹೇಳುತ್ತಾನೆ ಮತ್ತು ಮರವು “ಹಸಿಯಾಗಿರುವ” ಮತ್ತು ನಂತರ “ಒಣಗಿರುವಾಗ” ಎಂದು ಸೂಚಿಸಿ ಅವನು ಮಾತಾಡಿದ್ದು ಯಾವ ಅರ್ಥದಲ್ಲಿ?
-
-
ಕಂಭದ ಮೇಲೆ ಯಾತನೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 125
ಕಂಭದ ಮೇಲೆ ಯಾತನೆ
ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ಕೊಲ್ಲುವದಕ್ಕಾಗಿ ಕೊಂಡೊಯ್ದರು. ಪಟ್ಟಣದಿಂದ ಅನತಿ ದೂರದಲ್ಲಿ, ಗೊಲ್ಗೊಥಾ ಯಾ ಕಪಾಲಸ್ಥಳವೆಂದು ಕರೆಯಲ್ಪಡುವಲ್ಲಿ ಮೆರವಣಿಗೆಯು ನಿಂತಿತು.
ಅಲ್ಲಿ ಸೆರೆಹಿಡಿದವರ ಬಟ್ಟೆಗಳನ್ನು ತೆಗೆಯಲಾಯಿತು. ಅನಂತರ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು. ಇದು ಯೆರೂಸಲೇಮಿನ ಸ್ತ್ರೀಯರು ತಯಾರಿಸಿದ್ದಿರಬೇಕು, ಮತ್ತು ವಧಾಸ್ತಂಭಕ್ಕೆ ಏರಲಿರುವವರಿಗೆ ಈ ನೋವು-ನಿವಾರಕ ಮಿಶ್ರಣವನ್ನು ಕೊಡುವದನ್ನು ರೋಮನರು ನಿರಾಕರಿಸತ್ತಿರಲಿಲ್ಲ. ಆದಾಗ್ಯೂ, ಯೇಸುವು ರುಚಿ ನೋಡಿ ಕುಡಿಯಲು ನಿರಾಕರಿಸಿದನು. ಯಾಕೆ? ಅವನ ನಂಬಿಕೆಯ ಈ ಅತಿ ಶ್ರೇಷ್ಠ ಪರೀಕ್ಷೆಯ ಸಮಯದಲ್ಲಿ, ಅವನ ಎಲ್ಲಾ ಸಹಜ ಮನ ಶಕ್ತಿಗಳು ಅವನ ಪೂರ್ಣ ಸ್ವಾಧೀನದಲ್ಲಿರುವಂತೆ ಅವನು ಬಯಸಿದನು.
ಅವನ ತಲೆಯ ಮೇಲೆ ಎಳೆಯಲ್ಪಟ್ಟ ಕೈಗಳಿದ್ದು ಕಂಭದ ಮೇಲೆ ಈಗ ಯೇಸುವು ತೂಗುತ್ತಿದ್ದನು. ಸಿಪಾಯಿಗಳು ಈಗ ಅವನ ಹಸ್ತಗಳೊಳಗೆ ಮತ್ತು ಅವನ ಕಾಲುಗಳೊಳಗೆ ದೊಡ್ಡ ಮೊಳೆಗಳನ್ನು ಜಡಿಯುತ್ತಾರೆ. ಅವನ ಮಾಂಸ ಮತ್ತು ತಂತುಕಟ್ಟುಗಳನ್ನು [ಲಿಗಾಮೆಂಟ್ಸ್] ಮೊಳೆಗಳು ತೂರಿಹೋದಾಗ ಅವನು ನೋವಿನಿಂದ ನರಳುತ್ತಾನೆ. ಕಂಭವನ್ನು ಮೇಲ್ಮುಖವಾಗಿ ನೇರಗೊಳಿಸಿದಾಗ, ದೇಹದ ಭಾರವು ಮೊಳೆಗಳ ಗಾಯಗಳನ್ನು ಬಗಿದು ಹಾಕುವುದರಿಂದ ತಾಳಲಾರದ ನೋವು. ಆದರೂ, ಬೆದರಿಕೆಯನ್ನೊಡ್ಡುವ ಬದಲು, ಯೇಸುವು ರೋಮನ್ ಸಿಪಾಯಿಗಳಿಗೋಸ್ಕರ ಪ್ರಾರ್ಥಿಸುತ್ತಾನೆ: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”
ಪಿಲಾತನು ಈ ರೀತಿ ಓದಲ್ಪಡುವ ಒಂದು ಸೂಚಿಕೆಯನ್ನು ಬರೆದು ಕಂಭದ ಮೇಲ್ಗಡೆ ಹಚ್ಚಿದನು: “ನಜರೇತಿನ ಯೇಸು, ಯೆಹೂದ್ಯರ ಅರಸನು.” ಇದನ್ನು ಆತನು ಬರೆದದ್ದು ಯಾಕಂದರೆ ಅವನು ಯೇಸುವನ್ನು ಗೌರವಿಸಿದರಿಂದ ಮಾತ್ರವಲ್ಲ, ಅವನಿಂದ ಯೇಸುವಿನ ಮರಣವನ್ನು ಅವರು ಹಿಂಡಿಪಡೆದದ್ದರಿಂದಲೂ ಅವನು ಯೆಹೂದಿ ಯಾಜಕರನ್ನು ಹೇಸುತ್ತಿದ್ದನು. ಎಲ್ಲರೂ ಫಲಕವನ್ನು ಓದಲಾಗುವಂತೆ ಪಿಲಾತನು ಅದನ್ನು ಮೂರು ಭಾಷೆಗಳಲ್ಲಿ ಬರಸಿದನು—ಇಬ್ರಿಯ, ಅಧಿಕೃತ ಲಾತೀನ್ ಮತ್ತು ಸಾಮಾನ್ಯ ಗ್ರೀಕ್.
ಕಾಯಫ ಮತ್ತು ಅನ್ನನ ಸಹಿತ ಮಹಾ ಯಾಜಕರು ಇದರಿಂದ ನಿರುತ್ಸಾಹಗೊಂಡರು. ಅವರ ವಿಜಯದ ಗಳಿಗೆಯನ್ನು ಈ ನಿರ್ಧಾರಕ ಘೋಷಣೆಯು ಹಾಳುಗೆಡವಿತು. ಆದಕಾರಣ ಅವರು ಪ್ರತಿಭಟಿಸುವದು: “ಯೆಹೂದ್ಯರ ಅರಸನು ಎಂದು ಬರೆಯದೆ ನಾನು ಯೆಹೂದ್ಯರ ಅರಸನೆಂದು ಹೇಳಿದವನು ಎಂಬದಾಗಿ ಬರೆಯಬೇಕು.” ಯಾಜಕರ ಒತ್ತೆಯೋಪಾದಿ ಸಿಕ್ಕಿಬಿದ್ದು ಕಾರ್ಯ ನಡಿಸಿದ್ದರಿಂದ ಹೊರಬಂದು, ದೃಢ ತಿರಸ್ಕಾರದಿಂದ ಪಿಲಾತನು ಉತ್ತರಿಸುವದು: “ನಾನು ಬರೆದದ್ದು ಬರೆದಾಯಿತು.”
ವಧಿಸಲ್ಪಟ್ಟ ಸ್ಥಳದಲ್ಲಿ ಈಗ ಜನರ ದೊಡ್ಡ ಗುಂಪಿನೊಟ್ಟಿಗೆ ಯಾಜಕರು ಒಟ್ಟಾಗಿ ಸೇರಿದರು ಮತ್ತು ಯಾಜಕರು ಫಲಕ ಸಾಕ್ಷ್ಯವನ್ನು ಅಲ್ಲಗಳೆಯುತ್ತಿದ್ದರು. ಮೊದಲು ಸನ್ಹೇದ್ರಿನ್‌ನ ವಿಚಾರಣೆಗಳಲ್ಲಿ ಕೊಡಲ್ಪಟ್ಟ ಸುಳ್ಳು ಸಾಕ್ಷ್ಯಗಳನ್ನು ಅವರು ಪುನರುಚ್ಛರಿಸುತ್ತಿದ್ದರು. ಆದಕಾರಣ, ಹಾದುಹೋಗುವವರು ಹಂಗಿಸಿ ಮಾತಾಡುತ್ತಾ, ತಲೇ ಆಡಿಸುತ್ತಾ, ಹೀಗೆ ಹೇಳಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ: “ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೋ; ದೇವರ ಮಗನು ಆಗಿದ್ದರೆ ಯಾತನೆಯ ಕಂಭದಿಂದ ಇಳಿದು ಬಾ!”
“ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು!” ಮಹಾ ಯಾಜಕರೂ ಅವರ ಧಾರ್ಮಿಕ ಗೆಳೆಯರೂ ಅದಕ್ಕೆ ಧ್ವನಿಗೂಡಿಸಿದರು. “ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಯಾತನೆಯ ಕಂಭದಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ಭರವಸಯಿಟ್ಟೀವು. ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರು ಅವನಲ್ಲಿ ಇಷ್ಟ ಪಟ್ಟರೆ ಈಗ ಅವನನ್ನು ಬಿಡಿಸಲಿ; ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ.”
ಈ ಆತ್ಮದಲ್ಲಿ ಸಿಪಾಯಿಗಳೂ ಸೇರ್ಪಡೆಗೊಂಡು, ಯೇಸುವನ್ನು ಗೇಲಿ ಮಾಡಲಾರಂಭಿಸಿದರು. ಅವರು ಆತನಿಗೆ ಹಾಸ್ಯಮಾಡುವ ರೀತಿಯಲ್ಲಿ ಹುಳಿಮದ್ಯವನ್ನು, ಪ್ರಾಯಶಃ ಅದನ್ನು ಅವನ ಒಣಗಿದ ತುಟಿಗಳಿಂದ ಸ್ವಲ್ಪ ದೂರದಲ್ಲಿ ಹಿಡಿದುಕೊಂಡು ಅವನಿಗೆ ನೀಡಿದರು. “ನೀನು ಯೆಹೂದ್ಯರ ಅರಸನಾಗಿದ್ದರೆ,” ಅವರು ಅಣಕಿಸುವದು, “ನಿನ್ನನ್ನು ರಕ್ಷಿಸಿಕೋ.” ಕಳ್ಳರು ಕೂಡ—ಒಬ್ಬನು ಯೇಸುವಿನ ಬಲಗಡೆಯಲ್ಲಿ ಮತ್ತು ಇನ್ನೊಬ್ಬನು ಎಡಗಡೆಯಲ್ಲಿ ತೂಗಹಾಕಲ್ಪಟ್ಟಿದ್ದು—ಅವನನ್ನು ದೂಷಿಸಿದರು. ಅದರ ಕುರಿತು ಯೋಚಿಸಿರಿ! ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು, ಹೌದು, ಎಲ್ಲಾ ವಸ್ತುಗಳನ್ನು ಸೃಷ್ಟಿಸುವದರಲ್ಲಿ ಯೆಹೋವ ದೇವರೊಂದಿಗೆ ಸಹಭಾಗಿಯಾದವನು, ನಿರ್ಧಾರಾತ್ಮದಿಂದ ಈ ಎಲ್ಲಾ ದೂಷಣೆಗಳನ್ನು ಅನುಭವಿಸುತ್ತಾನೆ!
ಯೇಸುವಿನ ಮೇಲುಹೊದಿಕೆಯನ್ನು ಸಿಪಾಯಿಗಳು ತಕ್ಕೊಂಡು ತಮ್ಮೊಳಗೆ ನಾಲ್ಕು ಪಾಲು ಮಾಡಿಕೊಂಡು ಹಂಚುತ್ತಾರೆ. ಯಾರ್ಯಾರಿಗೆ ಯಾವ ಯಾವ ಪಾಲು ಬರುವಂತೆ ನೋಡಲು ಅವರು ಚೀಟುಹಾಕಿದರು. ಆದರೆ, ಒಳಂಗಿಯು ಯಾವುದೇ ಹೊಲಿಗೆಯಿರದೆ ಅಖಂಡವಾಗಿದ್ದು, ಶ್ರೇಷ್ಠ ಗುಣ ಮಟ್ಟದ್ದಾಗಿತ್ತು. ಆದುದರಿಂದ ಸಿಪಾಯಿಗಳು ತಮ್ಮೊಳಗೆ ಮಾತಾಡಿಕೊಂಡರು: “ನಾವು ಇದನ್ನು ಹರಿಯಬಾರದು; ಚೀಟು ಹಾಕಿ ಯಾರಿಗೆ ಬರುವದೋ ನೋಡೋಣ.” ಈ ರೀತಿಯಲ್ಲಿ ಅವರಿಗೆ ತಿಳಿಯದೇ, ಶಾಸ್ತ್ರದ ಮಾತನ್ನು ಅವರು ನೆರವೇರಿಸುತ್ತಾರೆ: “ನನ್ನ ಮೇಲುಹೊದಿಕೆಯನ್ನು ತಮ್ಮಲ್ಲಿ ಪಾಲುಮಾಡಿಕೊಂಡರು, ಮತ್ತು ನನ್ನ ಅಂಗಿಗೋಸ್ಕರ ಚೀಟುಹಾಕಿದರು.”(NW)
ತಕ್ಕ ಸಮಯದಲ್ಲಿ ಒಬ್ಬ ಕಳ್ಳನು ಯೇಸುವು ನಿಜವಾಗಿಯೂ ಒಬ್ಬ ಅರಸನೆಂದು ಗಣ್ಯ ಮಾಡಲಾರಂಭಿಸಿದನು. ಆದಕಾರಣ, ಅವನ ಜತೆಯವನಿಗೆ ಗದರಿಸುತ್ತಾ ಅವನು ಹೇಳುವದು: “ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವದಿಲ್ಲವೋ? ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ಅಲ್ಲದದ್ದೇನೂ ಮಾಡಲಿಲ್ಲ.” ಅನಂತರ ಯೇಸುವಿಗೆ ಸಂಬೋಧಿಸುತ್ತಾ ಅವನು ವಿನಂತಿಸುವದು: “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.”
“ಈ ಹೊತ್ತೇ ನಿನಗೆ ಸತ್ಯವಾಗಿ ನಾನು ಹೇಳುತ್ತೇನೆ,” ಯೇಸುವು ಉತ್ತರಿಸುವದು, “ನನ್ನ ಸಂಗಡ ಪರದೈಸದಲ್ಲಿರುವಿ.” ಪರಲೋಕದಲ್ಲಿ ಯೇಸುವು ರಾಜನಾಗಿ ಆಳುತ್ತಿರುವಾಗ, ಅರ್ಮಗೆದ್ದೋನ್ ಪಾರಾದವರು ಮತ್ತು ಅವರ ಸಂಗಡಿಗರು ವ್ಯವಸಾಯ ಮಾಡಲಿರುವ ಪರದೈಸದಲ್ಲಿ ಭೂಮಿಯ ಮೇಲಿನ ಜೀವಿತಕ್ಕೆ, ಈ ಪಶ್ಚಾತ್ತಾಪ ಪಟ್ಟ ದುಷ್ಕರ್ಮಿಯು ಪುನರುತ್ಥಾನಗೊಳಿಸಲ್ಪಡುವಾಗ, ಈ ವಾಗ್ದಾನವು ನೆರವೇರಲ್ಪಡಲಿರುವದು. ಮತ್ತಾಯ 27:33-44; ಮಾರ್ಕ 15:22-32; ಲೂಕ 23:27, 32-43; ಯೋಹಾನ 19:17-24.
▪ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಕುಡಿಯಲು ಯೇಸುವು ನಿರಾಕರಿಸಿದ್ದು ಯಾಕೆ?
▪ ಯೇಸುವಿನ ಕಂಭದ ಮೇಲೆ ಸೂಚಿಕೆ ಯಾಕೆ ಹಚ್ಚಿರಬಹುದೆಂದು ಸ್ಪಷ್ಟವಾಗಿಗುತ್ತದೆ ಮತ್ತು ಅದು ಪಿಲಾತ ಮತ್ತು ಮಹಾ ಯಾಜಕರುಗಳ ನಡುವೆ ಯಾವ ವಿನಿಮಯಕ್ಕೆ ನಡಿಸಿತು?
▪ ಕಂಭದಲ್ಲಿರುವಾಗ ಇನ್ನು ಹೆಚ್ಚಿನ ಯಾವ ದೂಷಣೆಗಳನ್ನು ಯೇಸುವು ಪಡೆದನು, ಮತ್ತು ಇದನ್ನು ಪ್ರೇರಿಸಿದ್ದು ಯಾವದೆಂದು ತೋಚುತ್ತದೆ?
▪ ಯೇಸುವಿನ ಬಟ್ಟೆಗಳಿಗೆ ಏನು ಮಾಡಲಾಯಿತೋ, ಅದರಿಂದ ಪ್ರವಾದನೆಯು ಹೇಗೆ ನೆರವೇರಿಸಲ್ಪಟ್ಟಿತು?
▪ ಕಳ್ಳರಲ್ಲಿ ಒಬ್ಬನು ಯಾವ ಪರಿವರ್ತನೆ ಮಾಡಿದನು, ಮತ್ತು ಯೇಸುವು ಅವನ ವಿನಂತಿಯನ್ನು ಹೇಗೆ ನೆರವೇರಿಸಲಿರುವನು?
-
-
“ನಿಜವಾಗಿ ಈತನು ದೇವಕುಮಾರನಾಗಿದ್ದನು”ಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 126
“ನಿಜವಾಗಿ ಈತನು ದೇವಕುಮಾರನಾಗಿದ್ದನು”
ಯೇಸುವು ಕಂಭದ ಮೇಲೆ ಇದ್ದು ತುಂಬಾ ಸಮಯವಾಗಿರಲಿಲ್ಲ, ಆಗ ಮಧ್ಯಾಹ್ನದ ಹೊತ್ತಿಗೆ ಒಂದು ರಹಸ್ಯಕರವಾದ ಮೂರು ತಾಸುಗಳ ತನಕ ಕತ್ತಲೆಗವಿಯುತ್ತದೆ. ಒಂದು ಸೂರ್ಯಗ್ರಹಣವು ಇದಕ್ಕೆ ಕಾರಣವಾಗಿರಲಿಕ್ಕಿಲ್ಲ, ಯಾಕಂದರೆ ಅದು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ ಆಗುತ್ತದೆ, ಆದರೆ ಪಸ್ಕ ಹಬ್ಬದ ಸಮಯದಲ್ಲಿ ಪೂರ್ಣ ಹುಣ್ಣಿಮೆ ಇದೆ. ಅಲ್ಲದೆ, ಸೂರ್ಯಗ್ರಹಣವು ಕೇವಲ ಕೆಲವು ನಿಮಿಷಗಳ ತನಕ ಇರುತ್ತದೆ. ಆದುದರಿಂದ ಆ ಕತ್ತಲೆಯು ದೈವಿಕ ಮೂಲದಿಂದ ಆಗಿರಬೇಕು! ಯೇಸುವನ್ನು ಅಪಹಾಸ್ಯಮಾಡುವವರಿಗೆ ಅದನ್ನು ಕೆಲವು ಸಮಯ ತಡೆಯುವಂತೆ, ಇಲ್ಲವೇ ಅವರ ಹಂಗಿಸುವಿಕೆಯನ್ನು ನಿಲ್ಲಿಸುವಂತೆ ಅದು ಬಹುಶಃ ಕಾರಣಮಾಡಿರಬಹುದು.
ಒಬ್ಬ ದುಷ್ಕರ್ಮಿಯು ಅವನ ಸಂಗಾತಿಯನ್ನು ಗದರಿಸುವ ಮತ್ತು ಅವನ ನೆನಪನ್ನು ಮಾಡುವಂತೆ ಯೇಸುವನ್ನು ಕೇಳುವದರ ಮೊದಲು ಈ ಭಯ ಹುಟ್ಟಿಸುವ ಈ ಅದ್ಭುತವು ನಡೆದಿದ್ದರೆ, ಅವನ ಪಶ್ಚಾತ್ತಾಪಕ್ಕೆ ಅದೊಂದು ಕಾರಣವಾಗಿದ್ದಿರಬಹುದು. ಪ್ರಾಯಶಃ ಈ ಕತ್ತಲಿನ ಸಮಯದಲ್ಲಿ ನಾಲ್ವರು ಸ್ತ್ರೀಯರು, ವಿಶೇಷವಾಗಿ, ಯೇಸುವಿನ ತಾಯಿ, ಅವಳ ತಂಗಿ ಸಲೋಮೆ, ಮಗಲ್ದದ ಮರಿಯ ಮತ್ತು ಅಪೊಸ್ತಲನಾದ ಚಿಕ್ಕ ಯಾಕೋಬನ ತಾಯಿ, ಯಾತನೆಯ ಕಂಭದ ಬಳಿಗೆ ಬಂದಿರಬೇಕು. ಯೇಸುವಿನ ಪ್ರೀತಿಯ ಅಪೊಸ್ತಲನಾಗಿದ್ದ ಯೋಹಾನನೂ ಅವರೊಂದಿಗೆ ಇದ್ದನು.
ತಾನು ಮೊಲೆಯುಣಿಸಿ, ಬೆಳಸಿದ ತನ್ನ ಮಗನು ಅಲ್ಲಿ ಯಾತನೆಯಿಂದ ತೂಗಾಡುವದನ್ನು ಅವಳು ನೋಡುತ್ತಿರುವಾಗ, ಯೇಸುವಿನ ತಾಯಿಯ ಹೃದಯವು ಎಷ್ಟೊಂದು ‘ಇರಿದಂತೆ’ ಆಗಿರಬೇಕು! ಆದರೂ, ಯೇಸುವು ಅವನ ಸ್ವಂತ ನೋವನ್ನು ಯೋಚಿಸುವದಿಲ್ಲ, ಬದಲಿಗೆ ಅವಳ ಒಳಿತನ್ನು ಯೋಚಿಸುತ್ತಾನೆ. ಬಹಳಷ್ಟು ಕಷ್ಟದಿಂದ ಅವನು ಯೋಹಾನನ ಕಡೆಗೆ ತಲೆ ಅಲುಗಿಸುತ್ತಾ, ಅವನ ತಾಯಿಗೆ ಹೇಳುತ್ತಾನೆ: “ಅಮ್ಮಾ, ಇಗೋ, ನಿನ್ನ ಮಗನು!” ಅನಂತರ ಮರಿಯಳ ಕಡೆಗೆ ತಲೆ ಅಲ್ಲಾಡಿಸುತ್ತಾ, ಅವನು ಯೋಹಾನನಿಗೆ ಹೇಳುವದು: “ಇಗೋ, ನಿನ್ನ ತಾಯಿ!”
ಈಗ ವಿಧವೆಯಾಗಿರಬಹುದೆಂದು ತೋರುವ ಅವನ ತಾಯಿಯ ಜಾಗ್ರತೆಯನ್ನು ಆ ಮೂಲಕ ಯೇಸು ತನ್ನ ವಿಶೇಷ ಪ್ರೀತಿಯ ಅಪೊಸ್ತಲನಿಗೆ ಒಪ್ಪಿಸುತ್ತಾನೆ. ಮರಿಯಳ ಇತರ ಪುತ್ರರು ಅವನ ಮೇಲೆ ಇನ್ನೂ ನಂಬಿಕೆಯನ್ನು ತೋರಿಸಿರಲಿಲ್ಲವಾದ್ದರಿಂದ ಅವನದನ್ನು ಮಾಡುತ್ತಾನೆ. ಈ ಮೂಲಕ ಅವನ ತಾಯಿಯ ಶಾರೀರಿಕ ಆವಶ್ಯಕತೆಗಳಿಗೆ ಮಾತ್ರವಲ್ಲ, ಅವಳ ಆತ್ಮಿಕ ಆವಶ್ಯಕತೆಗಳಿಗೂ ಬೇಕಾದ ಒದಗಿಸುವಿಕೆಗಳನ್ನು ಮಾಡುವದರಲ್ಲಿ ಒಂದು ಉತ್ತಮ ಮಾದರಿಯನ್ನು ಇಡುತ್ತಾನೆ.
ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ, ಯೇಸುವು ಹೇಳುವದು: “ನನಗೆ ನೀರಡಿಕೆ ಆಗಿದೆ.” ಕಡೆಯ ಹಂತದ ತನಕ ಅವನ ಯಥಾರ್ಥತೆಯನ್ನು ಪರೀಕ್ಷಿಸಲು ಅವನ ತಂದೆಯು ಅವನಿಂದ ಸುರಕ್ಷತೆಯನ್ನು ತೆಗೆದಿದ್ದಾನೋ ಎಂಬಂತೆ ಯೇಸುವು ಭಾವಿಸುತ್ತಾನೆ. ಆದುದರಿಂದ ಅವನು ಮಹಾಧ್ವನಿಯಿಂದ ಕೂಗಿ ಕರೆಯುತ್ತಾನೆ: “ನನ್ನ ತಂದೆಯೇ, ನನ್ನ ತಂದೆಯೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಇದನ್ನು ಕೇಳಿ, ಹತ್ತಿರದಲ್ಲಿ ನಿಂತಿದ್ದವರಲ್ಲಿ ಕೆಲವರು, ಹೇಳುವದು: “ಇವನು ಎಲೀಯನನ್ನು ಕರೆಯುತ್ತಾನೆ.” ಆಗ ಒಬ್ಬನು ಓಡಿಹೋಗಿ ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಡುತ್ತಾನೆ. ಆದರೆ ಇತರರು ಹೇಳಿದ್ದು: “ಬಿಡಿರಿ, ಎಲೀಯನು ಇವನನ್ನು ಇಳಿಸುವದಕ್ಕೆ ಬರುವನೇನೋ ನೋಡೋಣ.”
ಹುಳಿರಸವನ್ನು ಯೇಸುವು ತಕ್ಕೊಂಡ ಮೇಲೆ, ಅವನು ಮಹಾಧ್ವನಿಯಿಂದ ಕೂಗಿದ್ದು: “ಈಗ ತೀರಿತು! [ಪೂರೈಸಲ್ಪಟ್ಟಿತು! NW]” ಹೌದು, ಭೂಮಿಯ ಮೇಲೆ ಮಾಡಲು ಅವನ ತಂದೆಯು ಕಳುಹಿಸಿಕೊಟ್ಟ ಎಲ್ಲವನ್ನೂ ಅವನು ಮುಗಿಸಿದನು. ಕೊನೆಯಲ್ಲಿ, ಅವನು ಅಂದದ್ದು: “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ.” ಈ ಮೂಲಕ, ದೇವರು ಅವನಿಗೆ ಪುನಃ ಜೀವ-ಶಕ್ತಿಯನ್ನು ಕೊಡುವನು ಎಂಬ ಭರವಸೆಯಲ್ಲಿ ದೇವರ ವಶದಲ್ಲಿ ತನ್ನ ಜೀವ-ಶಕ್ತಿಯನ್ನು ಕೊಡುತ್ತಾನೆ. ತದನಂತರ ಅವನು ತಲೇ ಬಾಗಿಸಿ, ಸಾಯುತ್ತಾನೆ.
ಯೇಸುವು ತನ್ನ ಕೊನೆಯ ಉಸಿರನ್ನು ಬಿಟ್ಟಾಗ, ಒಂದು ಭಯಂಕರ ಭೂಕಂಪವು ಸಂಭವಿಸುತ್ತದೆ, ಬಂಡೆಗಳು ಸೀಳಿಹೋಗುತ್ತವೆ. ಭೂಕಂಪವು ಎಷ್ಟೊಂದು ಬಲವತ್ತಾಗಿತ್ತೆಂದರೆ ಯೆರೂಸಲೇಮಿನ ಹೊರಗಿದ್ದ ಸಮಾಧಿಗಳು ಒಡೆಯಲ್ಪಟ್ಟು, ಅದರೊಳಗಿಂದ ಹೆಣಗಳು ಹೊರಗೆ ಎಸೆಯಲ್ಪಟ್ಟವು. ಹೊರಗೆ ಎಸೆಯಲ್ಪಟ್ಟ ಮೃತ ದೇಹಗಳನ್ನು ಹಾದುಹೋಗುವವರು ಕಂಡುಕೊಂಡು, ಪಟ್ಟಣದೊಳಕ್ಕೆ ಪ್ರವೇಶಿಸಿ, ವರದಿ ಮಾಡಿದರು.
ಅಷ್ಟಲ್ಲದೆ, ಯೇಸುವು ಸತ್ತ ಕ್ಷಣದಲ್ಲಿ, ದೇವರ ಆಲಯದಲ್ಲಿ, ಪವಿತ್ರ ಸ್ಥಾನದಿಂದ ಮಹಾ ಪವಿತ್ರ ಸ್ಥಾನವನ್ನು ಪ್ರತ್ಯೇಕಿಸುವ ಮಹಾ ತೆರೆಯು ಮೇಲಿಂದ ಕೆಳಗಿನ ವರೆಗೂ ಹರಿದು ಎರಡು ಭಾಗವಾಯಿತು. ಈ ಸುಂದರವಾಗಿರುವ ಅಲಂಕೃತ ತೆರೆಯು ಸುಮಾರು 18 ಮೀಟರ್ ಉದ್ದವಿದ್ದು, ಬಹಳ ಭಾರವಾಗಿತ್ತೆಂದು ತೋರುತ್ತದೆ! ತನ್ನ ಮಗನ ಕೊಲೆಗಾರರ ವಿರುದ್ಧ ದೇವರ ಕೋಪವನ್ನು ಈ ಆಶ್ಚರ್ಯಗೊಳಿಸುವ ಅದ್ಭುತವು ವ್ಯಕ್ತಪಡಿಸಿದ್ದು ಮಾತ್ರವಲ್ಲ, ಮಹಾ ಪವಿತ್ರ ಸ್ಥಾನವಾಗಿರುವ ಪರಲೋಕಕ್ಕೆ ಸ್ವತಃ ಹೋಗಲು ದಾರಿಯು ಯೇಸುವಿನ ಮರಣದಿಂದ ಈಗ ಸಾಧ್ಯವಾಯಿತು ಎಂಬುದನ್ನು ಸೂಚಿಸಿತು.
ಒಳ್ಳೇದು, ಭೂಕಂಪದ ಅನುಭವ ಮತ್ತು ನಡೆದ ಸಂಗತಿಗಳನ್ನು ನೋಡಿದ ಜನರು ಬಹಳ ಹೆದರಿದರು. ಈ ಹತ್ಯೆಯನ್ನು ನಿರ್ವಹಿಸುತ್ತಿದ್ದ ಶತಾಧಿಪತಿಯು ದೇವರಿಗೆ ಮಹಿಮೆಯನ್ನು ಕೊಡುತ್ತಾನೆ. “ನಿಜವಾಗಿ ಈತನು ದೇವಕುಮಾರನಾಗಿದ್ದನು,” ಎಂದು ಹೇಳುತ್ತಾನೆ. ಪಿಲಾತನ ಮುಂದೆ ಯೇಸುವಿನ ವಿಚಾರಣೆಯಲ್ಲಿ ದೈವಿಕ ಪುತ್ರತ್ವದ ವಾದವನ್ನು ಚರ್ಚಿಸುತ್ತಿರುವಾಗ ಇವನು ಹಾಜರಿದ್ದಿರಬೇಕು. ಮತ್ತು ಈಗ ಯೇಸುವು ದೇವರ ಕುಮಾರನೆಂದೂ, ಹೌದು, ಅವನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ವ್ಯಕ್ತಿಯೆಂದೂ ಅವನಿಗೆ ಮನವರಿಕೆಯಾಯಿತು.
ಈ ಅದ್ಭುತಕರ ಘಟನೆಗಳಿಂದ ಇತರರೂ ಪ್ರಭಾವಿತರಾದರು ಮತ್ತು ಅವರ ಆಳವಾದ ದುಃಖವನ್ನೂ, ಲಜ್ಜೆಯನ್ನೂ ತೋರಿಸುವ ಒಂದು ಕೃತ್ಯವಾಗಿ, ಅವರು ಎದೆಬಡುಕೊಳ್ಳುತ್ತಾ ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಲು ಆರಂಭಿಸಿದರು. ದೂರದಿಂದ ಈ ನೋಟವನ್ನು ನೋಡುತ್ತಿದ್ದ ಯೇಸುವಿನ ಶಿಪಷ್ಯೆಯರಾಗಿದ್ದ ಅನೇಕ ಸ್ತ್ರೀಯರು, ಈ ಬಹು ಪರಿಣಾಮಕಾರಿಯಾದ ಘಟನೆಗಳಿಂದ ಗಾಢವಾಗಿ ಪ್ರಭಾವಿತರಾದರು. ಅಪೊಸ್ತಲ ಯೋಹಾನನು ಸಹಾ ಅಲ್ಲಿದ್ದನು. ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49; 2:34, 35; ಯೋಹಾನ 19:25-30.
▪ ಮೂರು ತಾಸುಗಳ ಕತ್ತಲೆಗೆ ಸೂರ್ಯಗ್ರಹಣ ಕಾರಣವಲ್ಲ ಯಾಕೆ?
▪ ಅವನ ಮರಣದ ಕೊಂಚ ಮೊದಲು, ವಯಸ್ಸಾದ ಹೆತ್ತವರಿರುವವರಿಗೆ ಯೇಸುವು ಯಾವ ಉತ್ತಮ ಮಾದರಿಯನ್ನು ಒದಗಿಸಿದನು?
▪ ಅವನು ಸಾಯುವ ಮೊದಲು ಯೇಸುವು ಮಾಡಿದ ಕೊನೆಯ ನಾಲ್ಕು ಹೇಳಿಕೆಗಳು ಯಾವವು?
▪ ಭೂಕಂಪವು ಏನನ್ನು ಪೂರೈಸಿತು, ಮತ್ತು ದೇವಾಲಯ ತೆರೆಗಳು ಇಬ್ಭಾಗವಾಗಿ ಹರಿದದರ್ದ ವೈಶಿಷ್ಟ್ಯತೆಯೇನು?
▪ ಹತ್ಯೆಯ ನಿರ್ವಹಣೆ ಮಾಡುತ್ತಿದ್ದ ಶತಾಧಿಪತಿಯು ಈ ಅದ್ಭುತಗಳಿಂದ ಹೇಗೆ ಪ್ರಭಾವಿತನಾದನು?
-
-
ಶುಕ್ರವಾರ ಹೂಣಿಡಲ್ಪಟ್ಟನು—ಆದಿತ್ಯವಾರ ಖಾಲಿ ಸಮಾಧಿಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 127
ಶುಕ್ರವಾರ ಹೂಣಿಡಲ್ಪಟ್ಟನು—ಆದಿತ್ಯವಾರ ಖಾಲಿ ಸಮಾಧಿ
ಇಷ್ಟರೊಳಗೆ ಶುಕ್ರವಾರ ಮಧ್ಯಾಹ್ನದ ಕೊನೆಯ ಭಾಗವಾಗಿತ್ತು, ಮತ್ತು ನೈಸಾನ್ 15ರ ಸೂರ್ಯಾಸ್ತಮಾನದಲ್ಲಿ ಸಬ್ಬತ್ ಆರಂಭಗೊಳ್ಳಲಿತ್ತು. ಯೇಸುವಿನ ಮೃತ ದೇಹವು ತಿರುಚಿಕೊಂಡು ಕಂಭದ ಮೇಲೆ ತೂಗಿಕೊಂಡಿತ್ತು, ಆದರೆ ಅವನ ಪಕ್ಕಗಳಲ್ಲಿದ್ದ ಇಬ್ಬರು ಕಳ್ಳರು ಇನ್ನೂ ಜೀವಂತವಾಗಿದ್ದರು. ಶುಕ್ರವಾರ ಮಧ್ಯಾಹ್ನ ಸೌರಣೆಯ ದಿನವಾಗಿತ್ತು, ಕಾರಣವೇನಂದರೆ ಜನರು ಊಟಗಳನ್ನು ತಯಾರಿಸಲು ಮತ್ತು ಸಬ್ಬತ್ ನಂತರದ ತನಕ ಕಾದಿಡಲು ಸಾಧ್ಯವಿಲ್ಲದ ತುರ್ತಿನ ಕೆಲಸಗಳನ್ನು ಪೂರೈಸಲು ಇದಿತ್ತು.
ಆರಂಭಗೊಳ್ಳಲಿದ್ದ ಸಬ್ಬತ್ ಕೇವಲ ಕ್ರಮದ ಸಬ್ಬತ್ (ವಾರದ ಏಳನೆಯ ದಿನ) ಮಾತ್ರವಾಗಿರಲಿಲ್ಲ, ಬದಲು ಅದು ಇಮ್ಮಡಿ, ಅಥವಾ “ಬಹು ವಿಶೇಷ” ಸಬ್ಬತ್ ಆಗಿತ್ತು. ಈ ರೀತಿಯಲ್ಲಿ ಅದನ್ನು ಕರೆಯುವದು ಯಾಕಂದರೆ ಹುಳಿಯಿಲ್ಲದ ರೊಟ್ಟಿಗಳ ಏಳು ದಿನಗಳ ಹಬ್ಬದ ಮೊದಲನೆಯ ದಿನವು ನೈಸಾನ್ 15 ಆಗಿದ್ದು (ಮತ್ತು ಇದು ವಾರದ ಯಾವುದೇ ದಿನದಲ್ಲಿ ಬರಲಿ, ಅದು ಯಾವಾಗಲೂ ಒಂದು ಸಬ್ಬತ್ ಆಗಿತ್ತು) ಕ್ರಮದ ಸಬ್ಬತ್ ದಿನವು ಕೂಡ ಅದೇ ದಿನ ಬರುತ್ತದೆ.
ದೇವರ ನಿಯಮಗಳಿಗನುಸಾರ, ರಾತ್ರಿ ಸಮಯದಲ್ಲಿ ಮೃತ ದೇಹಗಳು ತೂಗಹಾಕಲ್ಪಟ್ಟು ಕಂಭದ ಮೇಲೆ ಬಿಡಬಾರದು. ಆದುದರಿಂದ ಮರಣವು ಬೇಗ ಬರುವಂತೆ ಮಾಡಲಿಕ್ಕಾಗಿ ಮರಣ ದಂಡನೆಗೆ ಒಳಗಾದವರ ಕಾಲುಗಳನ್ನು ಮುರಿಸಲು ಪಿಲಾತನನ್ನು ಯೆಹೂದ್ಯರು ಕೇಳಿಕೊಂಡರು. ಆದಕಾರಣ ಸಿಪಾಯಿಗಳು ಆ ಇಬ್ಬರು ಕಳ್ಳರ ಕಾಲುಗಳನ್ನು ಮುರಿದರು. ಆದರೆ ಯೇಸುವು ಸತ್ತದರ್ದಿಂದ, ಅವನ ಕಾಲು ಮುರಿಯಲಿಲ್ಲ. ಇದು ಒಂದು ಶಾಸ್ತ್ರವಚನವನ್ನು ನೆರವೇರಿಸಿತು: “ಆತನ ಒಂದು ಎಲುಬನ್ನಾದರೂ ಮುರಿಯಕೂಡದು.”
ಆದಾಗ್ಯೂ, ಯೇಸುವು ನಿಜವಾಗಿ ಸತ್ತಿದ್ದಾನೋ ಎಂಬ ವಿಷಯದಲ್ಲಿ ಯಾವುದೇ ಸಂಶಯವನ್ನು ನಿವಾರಿಸಲು, ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಈಟಿಯು ಅವನ ಹೃದಯದ ಪ್ರದೇಶದಲ್ಲಿ ಹೋಗಿ ಇರಿಯಿತು, ಮತ್ತು ಕೂಡಲೇ ರಕ್ತವೂ, ನೀರೂ ಹೊರಗೆ ಬಂತು. ಇದನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದ ಅಪೊಸ್ತಲ ಯೋಹಾನನು, ಇದು ಇನ್ನೊಂದು ಶಾಸ್ತ್ರವಚನವನ್ನು ನೆರವೇರಿಸಿತು ಎಂದು ವರದಿ ಮಾಡುತ್ತಾನೆ: “ಅವರು ತಾವು ಇರಿದವನನ್ನು ದಿಟ್ಟಿಸು ನೋಡುವರು.”
ಸನ್ಹೇದ್ರಿನ್‌ನ ಸತ್ಕೀರ್ತಿಯುಳ್ಳ ಸದಸ್ಯನಾಗಿದ್ದ ಅರಿಮಥಾಯ ಪಟ್ಟಣದ ಯೋಸೇಫನು ಕೂಡ ಆ ವಧಿಸಲ್ಪಟ್ಟ ಸ್ಥಳದಲ್ಲಿ ಇದ್ದನು. ಯೇಸುವಿನ ವಿರುದ್ಧವಾಗಿ ಮುಖ್ಯ ನ್ಯಾಯಾಲಯ [ಹಿರೀಸಭೆ] ಮಾಡಿದ ಅನ್ಯಾಯದ ಕೃತ್ಯಕ್ಕೆ ಅವನು ಸಮ್ಮತಿಪಟ್ಟಿರಲಿಲ್ಲ. ಯೋಸೇಫನು ನಿಜವಾಗಿಯೂ ಯೇಸುವಿನ ಶಿಷ್ಯನಾಗಿದ್ದನು, ಆದರೂ ಹಾಗೆಂದು ಗುರುತಿಸಿಕೊಳ್ಳಲು ಅವನು ಹೆದರುತ್ತಿದ್ದನು. ಈಗಲಾದರೋ, ಅವನು ಧೈರ್ಯ ತೆಗೆದುಕೊಂಡು, ಯೇಸುವಿನ ದೇಹಕ್ಕಾಗಿ ಪಿಲಾತನ ಬಳಿಗೆ ಹೋಗಿ ಕೇಳುತ್ತಾನೆ. ಪಿಲಾತನು ನಿರ್ವಹಣೆ ವಹಿಸಿದ್ದ ಶತಾಧಿಪತಿಯನ್ನು ಕರೆಸಿ, ಅವನಿಂದ ಯೇಸುವು ಸತ್ತಿದ್ದಾನೆಂಬುದನ್ನು ಸ್ಥಿರೀಕರಿಸಿದ ನಂತರ, ಶವವನ್ನು ಒಪ್ಪಿಸುತ್ತಾನೆ.
ಯೋಸೇಫನು ದೇಹವನ್ನು ಕೊಂಡು ಹೋಗಿ, ಸಮಾಧಿ ಮಾಡುವ ಸಿದ್ಧತೆಯಲ್ಲಿ ಒಂದು ಶುದ್ಧವಾದ ನಾರುಮಡಿಯಲ್ಲಿ ಸುತ್ತುತ್ತಾನೆ. ಸನ್ಹೇದ್ರಿನ್‌ನ ಇನ್ನೊಬ್ಬ ಸದಸ್ಯನಾಗಿದ್ದ ನಿಕೊದೇಮನು ಅವನಿಗೆ ಸಹಾಯ ಕೊಡುತ್ತಾನೆ. ತನ್ನ ಸ್ಥಾನವನ್ನು ಕಳಕೊಳ್ಳುವ ಅಂಜಿಕೆಯ ಕಾರಣ, ನಿಕೊದೇಮನು ಕೂಡ ಯೇಸುವಿನಲ್ಲಿ ನಂಬಿಕೆಯನ್ನು ಅರಿಕೆ ಮಾಡಲು ತಪ್ಪಿಹೋದನು. ಆದರೆ ಈಗ ಅವನು ರಕ್ತಬೋಳ ಮತ್ತು ಬೆಲೆಬಾಳುವ ಅಗರುಗಳನ್ನು ಕಲಸಿದ ರೋಮನರ ನೂರು ಪೌಂಡುಗಳಷ್ಟು [33 ಕಿಲೊಗ್ರಾಮ್] ಚೂರ್ಣವನ್ನು ತರುತ್ತಾನೆ. ಯೇಸುವಿನ ದೇಹವನ್ನು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.
ಅನಂತರ ದೇಹವನ್ನು ಹತ್ತರದ ತೋಟದಲ್ಲಿದ್ದ ಬಂಡೆಯಲ್ಲಿ ತೋಡಿದ್ದ ಯೋಸೇಫನ ಹೊಸ ಸಮಾಧಿಯಲ್ಲಿ ಇಟ್ಟರು. ಕಡೆಗೆ ಸಮಾಧಿಯ ಬಾಗಲಿಗೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಇಡಲಾಯಿತು. ಸಬ್ಬತ್‌ನ ಮೊದಲು ಹೂಣಿಡುವಿಕೆಯನ್ನು ಪೂರೈಸುವ ಸಲುವಾಗಿ, ದೇಹದ ಸಿದ್ಧತೆಯನ್ನು ಅವಸರದಿಂದ ಮಾಡಲಾಯಿತು. ಆದಕಾರಣ, ಪ್ರಾಯಶಃ ಸಿದ್ಧತೆಗಳಿಗಾಗಿ, ಮೊದಲು ಸಹಾಯ ಮಾಡುತ್ತಿದ್ದ ಮಗಲ್ದದ ಮರಿಯಳು ಮತ್ತು ಮರಿಯಳು ಮತ್ತು ಚಿಕ್ಕ ಯಾಕೋಬನ ತಾಯಿಯಾದ ಮರಿಯಳು, ಇನ್ನಷ್ಟು ಪರಿಮಳದ್ರವ್ಯಗಳನ್ನೂ, ಸುಗಂಧತೈಲವನ್ನೂ ಸಿದ್ಧಗೊಳಿಸಲು ಮನೆಗೆ ಧಾವಿಸುತ್ತಾರೆ. ಸಬ್ಬತ್ತಿನ ನಂತರ ಅದಕ್ಕೆ ಇನ್ನಷ್ಟು ಲೇಪಿಸಿ, ಹೆಚ್ಚು ಸಮಯದ ತನಕ ಯೇಸುವಿನ ದೇಹವನ್ನು ಸಂರಕ್ಷಿಸಲು ಸಾಧ್ಯವಾಗುವಂತೆ ಅವರು ಯೋಜಿಸುತ್ತಾರೆ.
ಮರುದಿನ, ಶನಿವಾರ (ಸಬ್ಬತ್), ಮಹಾ ಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, ಅಂದದ್ದು: “ದೊರೆಯೇ, ಆ ಮೋಸಗಾರನು ಬದುಕಿದ್ದಾಗ ತಾನು ಮೂರು ದಿನದ ಮೇಲೆ ಏಳುತ್ತೇನೆ ಅಂತ ಹೇಳಿದ್ದು ನೆನಪಿಗೆ ಬಂತು; ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವದಕ್ಕೆ ಅಪ್ಪಣೆ ಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ ಎಂದು ಹೇಳಾರು; ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು.”
“ಕಾವಲುಗಾರರನ್ನು ತಕ್ಕೊಳ್ಳಿ,” ಪಿಲಾತನು ಉತ್ತರಿಸುತ್ತಾನೆ. “ಹೋಗಿ ನಿಮಗೆ ತಿಳಿದ ಹಾಗೆ ಭದ್ರ ಮಾಡಿ ಕಾಯಿರಿ.” ಆದುದರಿಂದ ಅವರು ಹೊರಟು ಹೋಗಿ, ಆ ಕಲ್ಲಿಗೆ ಮುದ್ರೆ ಹಾಕಿ, ಕಾವಲುಗಾರರನ್ನಾಗಿ ರೋಮನ್ ಸಿಪಾಯಿಗಳನ್ನು ನೇಮಿಸಿ, ಸಮಾಧಿಯನ್ನು ಭದ್ರ ಪಡಿಸುತ್ತಾರೆ.
ಆದಿತ್ಯವಾರ ಮುಂಜಾನೆಯೇ ಮಗಲ್ದದ ಮರಿಯಳು ಮತ್ತು ಯಾಕೋಬನ ತಾಯಿಯಾದ ಮರಿಯಳು, ಸಲೋಮೆ, ಯೊಹನ್ನಳು ಮತ್ತು ಇತರ ಸ್ತ್ರೀಯರೂ ಯೇಸುವಿನ ದೇಹಕ್ಕೆ ಹಚ್ಚಲು ಸಿದ್ಧ ಮಾಡಿದ್ದ ಸುಗಂಧ ದ್ರವ್ಯಗಳನ್ನು ತಂದರು. ದಾರಿಯಲ್ಲಿ ಅವರು ತಮ್ಮತಮ್ಮೊಳಗೆ ಮಾತಾಡಿಕೊಳ್ಳುವದು: “ಸಮಾಧಿಯ ಬಾಗಲಿಂದ ಆ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರಿದ್ದಾರೆ?” ಆದರೆ ಅವರು ಬಂದಾಗ, ಒಂದು ಮಹಾ ಭೂಕಂಪವಾದುದನ್ನೂ, ಯೆಹೋವನ ದೂತನು ಕಲ್ಲನ್ನು ಉರುಳಿಸಿರುವದನ್ನು ಕಂಡರು. ಕಾವಲುಗಾರರು ಅಲ್ಲಿಂದ ಹೋಗಿದ್ದರು ಮತ್ತು ಸಮಾಧಿಯು ಖಾಲಿಯಾಗಿತ್ತು! ಮತ್ತಾಯ 27:57–28:2; ಮಾರ್ಕ 15:42–16:4; ಲೂಕ 23:50–24:3, 10; ಯೋಹಾನ 19:14, 31–ಯೋಹಾನ 19:31 ರಿಂದ 20:1; ಯೋಹಾನ 12:42; ಯಾಜಕಕಾಂಡ 23:5-7; ಧರ್ಮೋಪದೇಶಕಾಂಡ 21:22, 23; ಕೀರ್ತನೆ 34:20; ಜೆಕರ್ಯ 12:10.
▪ ಶುಕ್ರವಾರವನ್ನು ಸೌರಣೆಯ ದಿನವೆಂದು ಯಾಕೆ ಕರೆಯಲಾಗಿದೆ, ಮತ್ತು “ಬಹು ವಿಶೇಷ” ಸಬ್ಬತ್ ಅಂದರೇನು?
▪ ಯೇಸುವಿನ ದೇಹದ ಸಂಬಂಧದಲ್ಲಿ ಯಾವ ಶಾಸ್ತ್ರವಚನಗಳು ನೆರವೇರಿದವು?
▪ ಯೇಸುವಿನ ಹೂಣಿಡುವಿಕೆಯಲ್ಲಿ ಯೋಸೇಫನು ಮತ್ತು ನಿಕೊದೇಮನು ಏನು ಮಾಡಲಿದ್ದರು, ಮತ್ತು ಯೇಸುವಿನೊಂದಿಗೆ ಅವರ ಸಂಬಂಧ ಏನಾಗಿತ್ತು?
▪ ಪಿಲಾತನಿಗೆ ಯಾಜಕರು ಯಾವ ಕೇಳಿಕೆಯನ್ನು ಮಾಡುತ್ತಾರೆ, ಮತ್ತು ಅವನು ಹೇಗೆ ಪ್ರತಿಕ್ರಿಯಿಸುತ್ತಾನೆ?
▪ ಆದಿತ್ಯವಾರ ಮುಂಜಾನೆಯಲ್ಲಿಯೇ ಏನು ಸಂಭವಿಸುತ್ತದೆ?
-