ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
© 2025 Watch Tower Bible and Tract Society of Pennsylvania
ಮೇ 5-11
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 12
ಕಷ್ಟಪಟ್ಟು ಕೆಲ್ಸ ಮಾಡಿದ್ರೆ ಒಳ್ಳೇ ಪ್ರತಿಫಲ ಸಿಗುತ್ತೆ
ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ
ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತುಂಬಾ ಕಷ್ಟಪಡಬೇಕಾದ ಪರಿಸ್ಥಿತಿಯಲ್ಲಿ ಕೆಲವು ದೇವರ ಸೇವಕರು ಇದ್ದಾರೆ. ಹಾಗಂತ ಅವರು ಸುಲಭವಾಗಿ ಹಣ ಮಾಡಲು ಮೋಸದ ದಾರಿ ಹಿಡಿಯುವುದಿಲ್ಲ. ಬದಲಿಗೆ ಕಷ್ಟಪಟ್ಟು ದುಡಿಯುತ್ತಾರೆ. ಪ್ರಾಮಾಣಿಕತೆ ಸೇರಿದಂತೆ ದೇವರ ಅಮೂಲ್ಯ ಗುಣಗಳನ್ನು ಅನುಕರಿಸುವುದು ತುಂಬಾ ಅಮೂಲ್ಯವೆಂದು ಅವರು ಗ್ರಹಿಸಿದ್ದಾರೆ.—ಜ್ಞಾನೋ. 12:24; ಎಫೆ. 4:28.
mwbr16.11 3 ¶4-6
ಕಷ್ಟದ ಕೆಲಸದಿಂದ ಆನಂದ ಪಡೆಯುವುದು ಹೇಗೆ?
ವಿಶೇಷವಾಗಿ ಆ ಕೊನೆ ಪ್ರಶ್ನೆ ಬಗ್ಗೆ ಯೋಚಿಸುವುದು ಒಳ್ಳೇದು. ಬೇರೆಯವರಿಗೆ ನಮ್ಮ ಕೆಲಸದಿಂದ ಆಗಲಿರುವ ಪ್ರಯೋಜನಗಳ ಬಗ್ಗೆ ಯೋಚಿಸುವಾಗ ಅತಿ ಹೆಚ್ಚಿನ ತೃಪ್ತಿ ಸಿಗುತ್ತದೆ. ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ಯೇಸುವೇ ಹೇಳಿದ್ದಾನೆ. (ಅ. ಕಾ. 20:35) ನಮ್ಮ ಕೆಲಸದಿಂದ ನೇರ ಪ್ರಯೋಜನ ಪಡೆಯುವ ಗಿರಾಕಿಗಳು ಮತ್ತು ಧಣಿಗಳಲ್ಲದೆ ಬೇರೆಯವರಿಗೂ ಪ್ರಯೋಜನವಾಗುತ್ತದೆ. ನಮ್ಮ ಕುಟುಂಬ ಸದಸ್ಯರು ಮತ್ತು ಸಹಾಯದ ಅಗತ್ಯವಿರುವವರು ಸಹ ಅದರಲ್ಲಿ ಸೇರಿದ್ದಾರೆ.
ನಮ್ಮ ಮನೆಮಂದಿ. ಕುಟುಂಬದ ಯಜಮಾನ ತನ್ನ ಮನೆಮಂದಿಯ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಶ್ರಮಪಡುವಾಗ ಅವರಿಗೆ ಕಡಿಮೆಪಕ್ಷ ಎರಡು ಪ್ರಯೋಜನಗಳು ಸಿಗುತ್ತವೆ. ಮೊದಲನೇದಾಗಿ, ಅವನು ಅವರಿಗೆ ಬದುಕಲು ಅಗತ್ಯವಾದ ವಿಷಯಗಳು ಅಂದರೆ ಊಟ, ಬಟ್ಟೆ, ವಸತಿ ಸಿಗುವಂತೆ ನೋಡಿಕೊಳ್ಳುತ್ತಿದ್ದಾನೆ. ಹೀಗೆ, ‘ತನ್ನ ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸುವ’ ದೇವದತ್ತ ಜವಾಬ್ದಾರಿಯನ್ನು ಪೂರೈಸುತ್ತಿದ್ದಾನೆ. (1 ತಿಮೊಥೆಯ 5:8) ಎರಡನೇದಾಗಿ, ಶ್ರದ್ಧೆಯಿಂದ ಕೆಲಸಮಾಡುವ ಅವನು ಕಷ್ಟಪಟ್ಟು ಕೆಲಸಮಾಡುವುದರ ಮಹತ್ವವನ್ನು ತನ್ನ ಮಾದರಿಯ ಮೂಲಕ ಕಲಿಸಿಕೊಡುತ್ತಿದ್ದಾನೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಶೇನ್ ಹೇಳುವುದು: “ಒಳ್ಳೇ ಕೆಲಸಗಾರನಾಗಿರುವುದು ಹೇಗೆಂಬ ವಿಷಯದಲ್ಲಿ ನನ್ನ ತಂದೆ ತುಂಬ ಉತ್ತಮ ಮಾದರಿ. ಅವರು ಜೀವನವಿಡೀ ಬೆವರುಸುರಿಸಿ ದುಡಿದಿರುವ ಪ್ರಾಮಾಣಿಕ ಮನುಷ್ಯ. ಅವರ ಜೀವನದ ಹೆಚ್ಚಿನಾಂಶ ಬಡಗಿಯಾಗಿ ದುಡಿದರು. ಕೈಗಳಿಂದ ಮಾಡುವ ಕೆಲಸ, ಜನರಿಗೆ ತುಂಬ ಉಪಯುಕ್ತವಾಗಲಿರುವ ವಸ್ತುಗಳನ್ನು ತಯಾರಿಸುವುದರ ಮೌಲ್ಯವನ್ನು ಅವರ ಮಾದರಿಯಿಂದ ಕಲಿತಿದ್ದೇನೆ.”
ಸಹಾಯದ ಅಗತ್ಯವುಳ್ಳವರು. ಅಪೊಸ್ತಲ ಪೌಲನು ಕ್ರೈಸ್ತರಿಗೆ ಈ ಬುದ್ಧಿವಾದ ಕೊಟ್ಟನು: ‘ಕಷ್ಟಪಟ್ಟು ದುಡಿಯಿರಿ. ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ನಿಮ್ಮ ಬಳಿ ಏನಾದರೂ ಇರುವುದು.’ (ಎಫೆಸ 4:28) ನಮ್ಮ ಹಾಗೂ ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ನಾವು ಕಷ್ಟಪಟ್ಟು ಕೆಲಸಮಾಡುವಾಗ, ಸಹಾಯದ ಅಗತ್ಯದಲ್ಲಿರುವವರಿಗೆ ನಾವು ನೆರವು ನೀಡಲೂ ಸಾಧ್ಯವಾಗುತ್ತದೆ. (ಜ್ಞಾನೋಕ್ತಿ 3:27) ಹೀಗೆ ಕಷ್ಟದ ಕೆಲಸವು ‘ಕೊಡುವುದರಿಂದ ಸಿಗುವ ಹೆಚ್ಚಿನ ಸಂತೋಷವನ್ನು’ ನಾವು ಅನುಭವಿಸುವಂತೆ ನೆರವಾಗುತ್ತದೆ.
ಬೈಬಲಿನಲ್ಲಿರುವ ರತ್ನಗಳು
ನನಗೆಷ್ಟು ಸಹಿಸಿಕೊಳ್ಳೋ ಶಕ್ತಿ ಇದೆ?
● ನಿಮ್ಮ ಸಮಸ್ಯೆಗಳು ಎಷ್ಟು ದೊಡ್ಡದು ಅಂತ ಅರ್ಥ ಮಾಡಿಕೊಳ್ಳಿ. ದೊಡ್ಡ ಸಮಸ್ಯೆ ಯಾವುದು ಚಿಕ್ಕ ಸಮಸ್ಯೆ ಯಾವುದು ಅಂತ ಗುರುತಿಸೋಕೆ ಕಲಿಯಿರಿ. ಬೈಬಲ್ ಹೀಗೆ ಹೇಳುತ್ತೆ: “ಮೂರ್ಖ ಕಿರಿಕಿರಿ ಆದ್ರೆ ತಕ್ಷಣ ತೋರಿಸಿಬಿಡ್ತಾನೆ, ಜಾಣ ಅವಮಾನ ಆದ್ರೆ ತಲೆ ಕೆಡಿಸ್ಕೊಳ್ಳಲ್ಲ.” (ಜ್ಞಾನೋಕ್ತಿ 12:16) ಪ್ರತಿಯೊಂದು ಸಮಸ್ಯೆ ಬಗ್ಗೆನೂ ಅತಿಯಾಗಿ ಯೋಚನೆ ಮಾಡಬೇಡಿ.
“ಸ್ಕೂಲಲ್ಲಿ ಮಕ್ಕಳು ಚಿಕ್ಕ ಸಮಸ್ಯೆಯನ್ನ ಸಹ ಏನೋ ದೊಡ್ಡದು ಅನ್ನೋ ತರ ಹೇಳ್ತಿದ್ರು. ನಂತ್ರ ಸೋಶಿಯಲ್ ಮೀಡಿಯಾದಲ್ಲಿರೋ ಅವ್ರ ಫ್ರೆಂಡ್ಸ್ ಸಹ ಆ ಸಮಸ್ಯೆ ಬಗ್ಗೆ ಕಂಪ್ಲೇಂಟ್ ಮಾಡೋ ಹಕ್ಕು ಅವ್ರಿಗಿದೆ ಅಂತ ಹೇಳಿದ್ರು. ಈ ವಿಷ್ಯದಿಂದ ನನ್ನ ಕ್ಲಾಸ್ನಲ್ಲಿ ಇರೋರಿಗೆ ತುಂಬ ಬೇಜಾರಾಯ್ತು. ಇದ್ರಿಂದ ಸಮಸ್ಯೆಗಳು ಬಂದಾಗ ಅದ್ರ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು ಅಂತ ಅವ್ರಿಗೆ ಅರ್ಥಮಾಡಿಕೊಳ್ಳೋಕೆ ಕಷ್ಟ ಆಯ್ತು.”—ಜೋಆ್ಯನ್.
ಮೇ 12-18
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 13
‘ಕೆಟ್ಟವನ ದೀಪಕ್ಕೆ’ ಮರುಳಾಗಬೇಡಿ
it-2-E 196 ¶2-3
ದೀಪ
ಬೇರೆ ಸಾಂಕೇತಿಕ ಉಪಯೋಗ. ದೀಪ ಒಬ್ಬ ವ್ಯಕ್ತಿಯನ್ನ ಮಾರ್ಗದರ್ಶಿಸುವ ವಿಷಯವನ್ನ ಸೂಚಿಸುತ್ತೆ. ಜ್ಞಾನೋಕ್ತಿ ಪುಸ್ತಕವು ನೀತಿವಂತ ಮತ್ತು ಕೆಟ್ಟವನಿಗೆ ಇರೋ ವ್ಯತ್ಯಾಸದ ಬಗ್ಗೆ ಹೀಗೆ ಹೇಳುತ್ತೆ: “ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ, ಆದ್ರೆ ಕೆಟ್ಟವನ ದೀಪ ಆರಿಹೋಗುತ್ತೆ.” (ಜ್ಞಾನೋ 13:9) ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ. ಕೆಟ್ಟವನು ಬೆಳಗೋ ತರ ಮತ್ತು ಏಳಿಗೆ ಆಗೋ ತರ ಕಂಡರೂ ದೇವರು ಅವರನ್ನ ಕೊನೆಗೆ ಕತ್ತಲಿಗೆ ಹಾಕ್ತಾನೆ. ಅಲ್ಲಿ ಅವರು ಖಂಡಿತ ಎಡವಿ ಬೀಳ್ತಾರೆ.
ಕೆಟ್ಟವನ ಭವಿಷ್ಯ ಚೆನ್ನಾಗಿರೋದಿಲ್ಲ ಅಂತ ಸೂಚಿಸೋಕೆ “ಕೆಟ್ಟವನ ದೀಪ ಆರಿಹೋಗುತ್ತೆ” ಅಂತ ಹೇಳಲಾಗಿದೆ. ಅದಕ್ಕೆ ಜ್ಞಾನೋಕ್ತಿ ಪುಸ್ತಕದ ಇನ್ನೊಂದು ಕಡೆ “ಯಾಕಂದ್ರೆ ಕೆಟ್ಟವನಿಗೆ ಒಳ್ಳೇ ಭವಿಷ್ಯ ಇರಲ್ಲ. ಅವನ ದೀಪ ಆರಿಹೋಗುತ್ತೆ” ಅಂತಿದೆ.—ಜ್ಞಾನೋ 24:20.
ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ
3 ಸೈತಾನನು ಇಬ್ಬರು ಪರಿಪೂರ್ಣ ಮನುಷ್ಯರನ್ನು ಮತ್ತು ಅನೇಕ ದೇವದೂತರನ್ನೇ ವಂಚಿಸಿ ದೇವರ ಪರಮಾಧಿಕಾರಕ್ಕೆ ತಿರುಗಿಬೀಳುವಂತೆ ಮಾಡಿರಬೇಕಾದರೆ ನಮ್ಮನ್ನು ಬಿಟ್ಟಾನೇ? ಸೈತಾನನ ಕುತಂತ್ರ ಇಂದಿಗೂ ಬದಲಾಗಿಲ್ಲ. ದೇವರ ಮಟ್ಟಗಳು ಪಾಲಿಸಲು ಕಷ್ಟ, ಅದನ್ನು ಪಾಲಿಸುವುದಾದರೆ ಜೀವನ ಸಪ್ಪೆಯಾಗಿರುತ್ತದೆ ಎಂದು ನಾವು ನೆನಸುವಂತೆ ಮಾಡಲು ಪ್ರಯತ್ನಿಸುತ್ತಾನೆ. (1 ಯೋಹಾ. 5:3) ಇಂಥ ಆಲೋಚನೆಯಿರುವ ಜನರೊಂದಿಗೆ ನಾವು ಹೆಚ್ಚೆಚ್ಚು ಬೆರೆಯುವಾಗ ಆ ಯೋಚನೆ ನಮ್ಮಲ್ಲೂ ಬೇರೂರಬಲ್ಲದು. 24 ವರ್ಷದ ಸಹೋದರಿ ಹೇಳುವುದು: “ನಾನು ನನ್ನ ಫ್ರೆಂಡ್ಸ್ ಥರ ಇಲ್ಲಾಂದ್ರೆ ನನ್ನನ್ನೆಲ್ಲಿ ದೂರಮಾಡ್ತಾರೋ ಎಂಬ ಹೆದರಿಕೆ ನನಗಿತ್ತು. ಅವರ ಸಹವಾಸ ನನ್ನ ಮೇಲೆ ತುಂಬ ಪ್ರಭಾವ ಬೀರಿತು.” ಆ ಪ್ರಭಾವದ ಕಾರಣ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದಳು. ಇಂಥ ಒತ್ತಡ ನಿಮಗೂ ಬಂದಿರಬಹುದು ಅಲ್ಲವೆ?
“ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು”
ನಿಜವಾದ ಜ್ಞಾನದೊಂದಿಗೆ ವರ್ತಿಸುವ ಒಬ್ಬ ವಿವೇಕಯುತ ಹಾಗೂ ಯಥಾರ್ಥಮನಸ್ಸಿನ ವ್ಯಕ್ತಿಯು ಆಶೀರ್ವದಿಸಲ್ಪಡುವನು. ಸೊಲೊಮೋನನು ನಮಗೆ ಆಶ್ವಾಸನೆ ಕೊಡುವುದು: “ಶಿಷ್ಟನು ಹೊಟ್ಟೆತುಂಬಾ ಉಣ್ಣುವನು; ದುಷ್ಟನ ಹೊಟ್ಟೆ ಹಸಿದಿರುವದು.” (ಜ್ಞಾನೋಕ್ತಿ 13:25) ನಮ್ಮ ಜೀವನದ ಯಾವುದೇ ಕ್ಷೇತ್ರದಲ್ಲಿ—ನಮ್ಮ ಕುಟುಂಬ ವ್ಯವಹಾರಗಳು, ಇತರರೊಂದಿಗಿನ ನಮ್ಮ ಸಂಬಂಧಗಳು, ನಮ್ಮ ಶುಶ್ರೂಷೆ ಇಲ್ಲವೆ ನಾವು ಶಿಕ್ಷಿಸಲ್ಪಡುವಾಗ—ನಮಗೇನು ಒಳ್ಳೇದೆಂದು ಯೆಹೋವನಿಗೆ ತಿಳಿದಿದೆ. ಮತ್ತು ಆತನ ವಾಕ್ಯದಲ್ಲಿರುವ ಸಲಹೆಯನ್ನು ವಿವೇಕಯುತವಾಗಿ ಅನ್ವಯಿಸಿಕೊಳ್ಳುವ ಮೂಲಕ ನಾವು ಅತ್ಯುತ್ತಮವಾದ ಜೀವನ ರೀತಿಯನ್ನು ಅನುಭವಿಸುವೆವೆಂಬದಕ್ಕೆ ಮರುಮಾತಿಲ್ಲ.
ಬೈಬಲಿನಲ್ಲಿರುವ ರತ್ನಗಳು
it-2-E 276 ¶2
ಪ್ರೀತಿ
ಪ್ರೀತಿನ ತಪ್ಪಾಗಿ ಅರ್ಥ ಮಾಡ್ಕೊಳ್ಳಬಹುದು. ದೇವರ ಮಾರ್ಗದರ್ಶನ ಮತ್ತು ಆತನ ವಾಕ್ಯವನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋದ್ರಿಂದ ನಿಜವಾದ ಪ್ರೀತಿ ತೋರಿಸೋಕೆ ಆಗುತ್ತೆ. ಉದಾಹರಣೆಗೆ, ಒಬ್ಬ ಅಪ್ಪ ಮಕ್ಕಳ ಮೇಲಿನ ಪ್ರೀತಿಯಿಂದ ಅವ್ರು ಕೇಳಿದ್ದೆಲ್ಲಾ ಕೊಡ್ತಾ ಇದ್ರೆ, ಯಾವುದಕ್ಕೂ ಬೇಡ ಅಂತ ಹೇಳದೆ ಇದ್ರೆ ಅದು ನಿಜವಾದ ಪ್ರೀತಿ ಅಲ್ಲ. ಈ ತರ ಮಾಡೋದ್ರಿಂದ ತುಂಬಾ ಸಮಸ್ಯೆಗಳಾಗಬಹುದು. ಅಗತ್ಯ ಬಂದಾಗ ಮಕ್ಕಳಿಗೆ ಶಿಸ್ತು ಕೊಡೋಕೆ ಅಥವಾ ತಿದ್ದಿ ಬುದ್ದಿ ಹೇಳೋಕೆ ತಮಗೆ ಇರೋ ಅಧಿಕಾರವನ್ನ ಸರಿಯಾಗಿ ಬಳಸದೇ ಹೋಗಬಹುದು. (ಜ್ಞಾನೋ 22:15) ಕುಟುಂಬದ ಮೇಲಿರೋ ಅತಿಯಾದ ಹೆಮ್ಮೆಯಿಂದ ಈ ರೀತಿ ಪ್ರೀತಿ ತೋರಿಸಬಹುದು, ಆದ್ರೆ ಇದು ಒಂದು ರೀತಿಯ ಸ್ವಾರ್ಥ ಆಗಿದೆ. ಈ ತರ ಮಾಡೋದ್ರಿಂದ ಅಪ್ಪ ಅಮ್ಮ ಮಕ್ಕಳನ್ನ ಕಾಪಾಡೋ ಬದಲು ಅವ್ರಿಗೆ ಅಪಾಯ ಆಗೋ ತರ ಮಾಡ್ತಾರೆ. ಅದಕ್ಕೆ ಬೈಬಲ್ ಇಂಥಾ ಪ್ರೀತಿಯನ್ನ ಪ್ರೀತಿಯಲ್ಲ, ದ್ವೇಷ ಅಂತ ಕರೆಯುತ್ತೆ.—ಜ್ಞಾನೋ 13:24; 23:13, 14.
ಮೇ 19-25
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 14
ವಿಪತ್ತುಗಳು ಬಂದಾಗ ಏನೇ ಮಾಡಬೇಕಾದ್ರೂ ಚೆನ್ನಾಗಿ ಯೋಚ್ನೆ ಮಾಡಿ
ಜೀವ ದೇವರು ಕೊಟ್ಟಿರೋ ಒಂದು ದೊಡ್ಡ ಗಿಫ್ಟ್!
10 ಕೆಲವು ಸಂದರ್ಭಗಳಲ್ಲಿ ನಾವೆಷ್ಟೇ ಹುಷಾರಾಗಿ ಇದ್ರೂ ನಮ್ಮ ಜೀವಕ್ಕೆ ಅಪಾಯ ಆಗೋ ಘಟನೆಗಳು ನಡೆದುಬಿಡುತ್ತೆ. ಉದಾಹರಣೆಗೆ ಪ್ರಕೃತಿ ವಿಕೋಪಗಳು, ಅಂಟುರೋಗಗಳು ಮತ್ತು ದೊಂಬಿ ಗಲಾಟೆಗಳು. ಇಂಥ ಸಂದರ್ಭಗಳಲ್ಲಿ ನಾವು ಸುರಕ್ಷಿತವಾಗಿ ಇರೋಕೆ ಪ್ರಯತ್ನ ಮಾಡ್ಬೇಕು. ಸರ್ಕಾರ ಕರ್ಫ್ಯೂ ಹಾಕಿದಾಗ ನಾವು ಪಾಲಿಸ್ಬೇಕು. ಜಾಗ ಖಾಲಿ ಮಾಡಿ ಬೇರೆ ಕಡೆ ಹೋಗಿ ಅಂತ ಹೇಳಿದ್ರೆ ಹೋಗ್ಬೇಕು. (ರೋಮ. 13:1, 5-7) ಇನ್ನು ಕೆಲವೊಮ್ಮೆ ವಿಪತ್ತುಗಳು ಆಗೋ ಮುಂಚೆನೇ ಸರ್ಕಾರ ನಮಗೆ ಎಚ್ಚರಿಕೆ ಕೊಡುತ್ತೆ. ಆಗ ನಾವು ತಯಾರಿ ಮಾಡ್ಕೊಬೇಕು. ಉದಾಹರಣೆಗೆ ಒಂದು ಬ್ಯಾಗಲ್ಲಿ ಕುಡಿಯೋ ನೀರನ್ನ, ತುಂಬ ದಿನ ಇಟ್ರೂ ಕೆಟ್ಟು ಹೋಗದಿರೋ ಆಹಾರನ, ಔಷಧಿಗಳನ್ನ ಇಟ್ಕೊಬೇಕು.
11 ನೀವು ಇರೋ ಕಡೆ ರೋಗ ಹರಡ್ತಾ ಇದ್ರೆ ಏನ್ ಮಾಡ್ಬೇಕು? ಸರ್ಕಾರ ನಿಯಮಗಳನ್ನ ಹಾಕಿದಾಗ ಅದನ್ನ ಪಾಲಿಸ್ಬೇಕು. ಅಂದ್ರೆ ಸಾಮಾಜಿಕ ಅಂತರ ಕಾಪಾಡ್ಕೊಬೇಕು, ಆಗಾಗ ಕೈ ತೊಳಿಬೇಕು, ಮಾಸ್ಕ್ ಹಾಕಬೇಕು, ಕ್ವಾರಂಟೈನ್ ಮಾಡ್ಕೊಬೇಕು. ಇದನ್ನೆಲ್ಲ ಪಾಲಿಸಿದ್ರೆ ದೇವರು ಕೊಟ್ಟ ಜೀವಕ್ಕೆ ನಾವು ಬೆಲೆ ಕೊಡ್ತೀವಿ ಅಂತ ತೋರಿಸ್ತೀವಿ.
12 ವಿಪತ್ತುಗಳು ಬಂದಾಗ ಜನ್ರು ಗಾಳಿಸುದ್ದಿ ಹಬ್ಬಿಸ್ತಾರೆ. ಆಗ ನಮ್ಮ ಅಕ್ಕಪಕ್ಕದ ಮನೆಯವರು, ನಮ್ಮ ಫ್ರೆಂಡ್ಸ್ ಅಥವಾ ನ್ಯೂಸಲ್ಲಿ “ಹೇಳಿದ್ದನ್ನೆಲ್ಲ” ನಾವು ನಂಬಾರ್ದು. ಸರ್ಕಾರದವರು ಅಥವಾ ಡಾಕ್ಟರುಗಳು ಕೊಡೋ ಮಾಹಿತಿನ ನಾವು ನಂಬಬೇಕು. (ಜ್ಞಾನೋಕ್ತಿ 14:15 ಓದಿ.) ಕೂಟಗಳನ್ನ ಹೇಗೆ ನಡೆಸ್ಬೇಕು, ಹೇಗೆ ಸೇವೆ ಮಾಡ್ಬೇಕು ಅನ್ನೋ ನಿರ್ದೇಶನಗಳನ್ನ ಆಡಳಿತ ಮಂಡಲಿ ಮತ್ತು ಬ್ರಾಂಚ್ ಆಫೀಸ್ ನಮಗೆ ಕೊಡುತ್ತೆ. ಆದ್ರೆ ಈ ನಿರ್ದೇಶನಗಳನ್ನ ಕೊಡೋ ಮುಂಚೆ ಅವರು ಪೂರ್ತಿ ಮಾಹಿತಿ ತಿಳ್ಕೊಂಡಿರ್ತಾರೆ. (ಇಬ್ರಿ. 13:17) ಅವರು ಹೇಳೋದನ್ನ ಪಾಲಿಸಿದಾಗ ನಾವು ನಮ್ಮ ಜೀವ ಕಾಪಾಡ್ಕೊಳ್ತೀವಿ. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳಾಗಿ ನಮಗಿರೋ ಒಳ್ಳೇ ಹೆಸ್ರನ್ನೂ ಉಳಿಸ್ಕೊತೀವಿ.—1 ಪೇತ್ರ 2:12.
ಚಾದೋಕನ ತರ ಧೈರ್ಯಶಾಲಿಗಳಾಗಿರಿ
11 ಸಹೋದರ ಸಹೋದರಿಯರು ಅಪಾಯದಲ್ಲಿದ್ದಾಗ ಅವ್ರಿಗೆ ಸಹಾಯ ಮಾಡೋಕೆ ನಾವು ಹೇಗೆ ಚಾದೋಕನ ತರ ಧೈರ್ಯ ತೋರಿಸಬಹುದು? (1) ನಿರ್ದೇಶನ ಪಾಲಿಸಿ. ಕಷ್ಟದ ಸಮಯದಲ್ಲಿ ನಾವೆಲ್ರೂ ಒಗ್ಗಟ್ಟಾಗಿ ಇರೋದು ತುಂಬ ಪ್ರಾಮುಖ್ಯ. ಹಾಗಾಗಿ ಸ್ಥಳೀಯ ಬ್ರಾಂಚ್ ಕೊಡೋ ನಿರ್ದೇಶನ ಪಾಲಿಸಿ. (ಇಬ್ರಿ. 13:17) ವಿಪತ್ತು ಬರೋ ಮುಂಚೆ ಹೇಗೆ ತಯಾರಾಗಿರಬೇಕು ಮತ್ತು ವಿಪತ್ತು ಆದ್ಮೇಲೆ ಏನೆಲ್ಲಾ ಮಾಡಬೇಕು ಅಂತ ಸಂಘಟನೆ ಕೊಡೋ ನಿರ್ದೇಶನದ ಬಗ್ಗೆ ಹಿರಿಯರು ಆಗಾಗ ನೋಡ್ತಾ ಇರಬೇಕು. (1 ಕೊರಿಂ. 14:33, 40) (2) ಧೈರ್ಯ ತೋರಿಸಿ, ಆದ್ರೆ ಹುಷಾರಾಗಿ ಇರಿ. (ಜ್ಞಾನೋ. 22:3) ಯಾವುದೇ ಒಂದು ವಿಷ್ಯ ಮಾಡೋ ಮುಂಚೆ ಚೆನ್ನಾಗಿ ಯೋಚ್ನೆ ಮಾಡಿ, ಅನಗತ್ಯವಾಗಿ ಅಪಾಯದಲ್ಲಿ ಸಿಕ್ಕಿಹಾಕೋಬೇಡಿ. (3) ಯೆಹೋವನ ಮೇಲೆ ಆತುಕೊಳ್ಳಿ. ಯೆಹೋವ ಎಲ್ರನ್ನ ತುಂಬ ಪ್ರೀತಿಸ್ತಾನೆ. ನೀವು ಮತ್ತು ಬೇರೆಲ್ಲಾ ಸಹೋದರ ಸಹೋದರಿಯರು ಚೆನ್ನಾಗಿರಬೇಕು ಅನ್ನೋದೇ ಆತನ ಆಸೆ. ಹಾಗಾಗಿ ಬೇರೆಯವ್ರಿಗೆ ಸಹಾಯ ಮಾಡುವಾಗ ನೀವು ಸುರಕ್ಷಿತವಾಗಿ ಇರೋಕೆ ಆತನು ಸಹಾಯ ಮಾಡ್ತಾನೆ.
ಬೈಬಲಿನಲ್ಲಿರುವ ರತ್ನಗಳು
it-2-E 1094
ಯೋಚನಾ ಸಾಮರ್ಥ್ಯ
ಚೆನ್ನಾಗಿ ಯೋಚ್ನೆ ಮಾಡೋ ಜನ್ರನ್ನ ಅಥವಾ ತಮ್ಮ ಯೋಚನಾ ಸಾಮರ್ಥ್ಯವನ್ನ ಚೆನ್ನಾಗಿ ಬಳಸೋರನ್ನ ಕೂಡ ಜನ ದ್ವೇಷಿಸ್ತಾರೆ. ಇಂಥಾ ವ್ಯಕ್ತಿಗಳನ್ನ ಯಾರು ಚೆನ್ನಾಗಿ ಯೋಚ್ನೆ ಮಾಡೋದಿಲ್ವೋ ಅಂಥವ್ರು ಜಾಸ್ತಿ ದ್ವೇಷ ಮಾಡ್ತಾರೆ. ಅದೇ ತರ ದೇವರ ಇಷ್ಟವನ್ನ ಮಾಡೋದಕ್ಕೆ ಸಿದ್ದರಾಗಿರೋರನ್ನ ಕೂಡ ಜನ ದ್ವೇಷಿಸ್ತಾರೆ. ಇದ್ರ ಬಗ್ಗೆ ಯೇಸು ಹೇಳಿದ್ದು, “ನೀವು ಲೋಕದ ಜನ್ರ ತರ ಇಲ್ಲದೇ ಇರೋದ್ರಿಂದ ಮತ್ತು ನಾನು ನಿಮ್ಮನ್ನ ಈ ಲೋಕದಿಂದ ಆರಿಸ್ಕೊಂಡಿರೋದ್ರಿಂದ ಲೋಕ ನಿಮ್ಮನ್ನ ದ್ವೇಷಿಸುತ್ತೆ.” (ಯೋಹಾ 15:19) ಆದ್ರೆ ಮೂಲ ಭಾಷೆಯಲ್ಲಿ ಜ್ಞಾನೋಕ್ತಿ 14:17ರಲ್ಲಿ ಹೇಳಿರೋ “ವಿಷ್ಯಗಳನ್ನ ಜಾಗರೂಕತೆಯಿಂದ ತೂಗಿನೋಡುವವವನು” ಕೆಟ್ಟ ಯೋಜನೆಗಳನ್ನ ಮಾಡೋ ವ್ಯಕ್ತಿಯನ್ನ ಸೂಚಿಸುತ್ತೆ. ಹಾಗಾಗಿ ಈ ವಚನ ಕೆಟ್ಟ ಕುತಂತ್ರಗಳನ್ನ ಮಾಡಿ ದ್ವೇಷಕ್ಕೆ ಗುರಿಯಾಗೋ ವ್ಯಕ್ತಿಯನ್ನೂ ಸೂಚಿಸುತ್ತೆ.
ಮೇ 26–ಜೂನ್ 1
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 15
ಬೇರೆಯವರ ಮುಖದಲ್ಲಿ ಮಂದಹಾಸ ಮೂಡಿಸಿ
ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!
16 ಯೋಬನು ಅತಿಥಿಸತ್ಕಾರವನ್ನೂ ಮಾಡುತ್ತಿದ್ದನು. (ಯೋಬ 31:31, 32) ನಾವು ಐಶ್ವರ್ಯವಂತರಾಗಿರದಿದ್ದರೂ ‘ಅತಿಥಿಸತ್ಕಾರದ ಪಥವನ್ನು ಅನುಸರಿಸಬಲ್ಲೆವು.’ (ರೋಮ. 12:13) ನಾವು ನಮ್ಮ ಅತಿಥಿಗಳಿಗೆ ಭರ್ಜರಿ ಊಟವನ್ನೇ ಕೊಡಬೇಕೆಂದಿಲ್ಲ. ಸರಳವಾದ ಸಾದಾ ಊಟವೇ ಸಾಕು. “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ” ಎಂಬುದನ್ನು ನೆನಪಿನಲ್ಲಿಡಿರಿ. (ಜ್ಞಾನೋ. 15:17) ಜೊತೆ ಸಮಗ್ರತೆ ಪಾಲಕರೊಂದಿಗೆ ಪ್ರೀತಿಪರ ವಾತಾವರಣದಲ್ಲಿ ಊಟಮಾಡುವುದು ಸರಳ ಊಟವನ್ನೂ ಅತ್ಯಂತ ರುಚಿಕರವನ್ನಾಗಿ ಮಾಡಬಲ್ಲದು ಮತ್ತು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸಬಲ್ಲದು ನಿಶ್ಚಯ.
ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ
16 ‘ನಾನಷ್ಟು ಮಾತಾಡುವ ವ್ಯಕ್ತಿಯಲ್ಲ, ಆದ್ದರಿಂದ ನನಗೆ ಬೇರೆಯವರನ್ನು ಪ್ರೋತ್ಸಾಹಿಸಲು ಬರುವುದಿಲ್ಲ’ ಅಂತ ನಮಗನಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಯಾಕೆಂದರೆ, ಇತರರನ್ನು ಪ್ರೋತ್ಸಾಹಿಸುವುದು ಅಷ್ಟೇನು ಕಷ್ಟವಲ್ಲ. ಒಂದು ಮುಗುಳ್ನಗೆ ಬೀರಿದರೂ ಸಾಕು. ಅವರು ಪ್ರತಿಯಾಗಿ ನಗಲಿಲ್ಲ ಅಂದರೆ ಅವರಿಗೆ ಯಾವುದೋ ಚಿಂತೆ ಇರಬಹುದು, ಯಾರ ಹತ್ತಿರವಾದರೂ ಮಾತಾಡಬೇಕು ಎಂದು ಅನಿಸುತ್ತಿರಬಹುದು ಎಂದರ್ಥ. ಅವರು ಮಾತಾಡುವಾಗ ಕೇಳಿಸಿಕೊಳ್ಳುವ ಮೂಲಕ ಅವರಿಗೆ ನೀವು ಸಾಂತ್ವನ ಕೊಡಬಹುದು.—ಯಾಕೋ. 1:19.
17 ಹೆನ್ರಿ ಎಂಬ ಯುವ ಸಹೋದರನಿಗೆ ತನ್ನ ಆಪ್ತ ಸಂಬಂಧಿಕರಲ್ಲಿ ಅನೇಕರು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದಾಗ ತುಂಬ ದುಃಖವಾಯಿತು. ಅವರಲ್ಲಿ ಹಿರಿಯರಾಗಿ ಸೇವೆ ಮಾಡುತ್ತಿದ್ದ ಅವನ ತಂದೆಯೂ ಒಬ್ಬರು. ಒಬ್ಬ ಸಂಚರಣ ಮೇಲ್ವಿಚಾರಕರು ಹೆನ್ರಿ ಬೇಜಾರಾಗಿರುವುದನ್ನು ಗಮನಿಸಿ ಅವನನ್ನು ಕಾಫಿಗೆ ಕರೆದುಕೊಂಡು ಹೋದರು. ಹೆನ್ರಿ ತನ್ನ ಭಾವನೆಗಳನ್ನು ಹೇಳಿಕೊಳ್ಳುವಾಗ ಆ ಸಹೋದರ ಗಮನಕೊಟ್ಟು ಕೇಳಿದರು. ಆ ಸಂಭಾಷಣೆಯ ನಂತರ, ತನ್ನ ಕುಟುಂಬ ಸತ್ಯಕ್ಕೆ ವಾಪಸ್ ಬರಲು ತಾನು ಸಹಾಯ ಮಾಡಬಹುದಾದ ಒಂದೇ ವಿಧ ತಾನು ನಂಬಿಗಸ್ತಿಕೆಯಿಂದ ಇರುವುದೇ ಎಂದು ಹೆನ್ರಿ ಅರ್ಥಮಾಡಿಕೊಂಡನು. ಕೀರ್ತನೆ 46, ಚೆಫನ್ಯ 3:17 ಮತ್ತು ಮಾರ್ಕ 10:29, 30ನ್ನು ಓದುವ ಮೂಲಕವೂ ಸಾಂತ್ವನ ಪಡೆದನು.
18 ಮಾರ್ಥ ಮತ್ತು ಹೆನ್ರಿಯ ಅನುಭವಗಳಿಂದ ನಾವೇನು ಕಲಿಯಬಹುದು? ಸಾಂತ್ವನದ ಅಗತ್ಯವಿರುವ ಸಹೋದರ ಅಥವಾ ಸಹೋದರಿಯರಿಗೆ ನಮ್ಮಲ್ಲಿ ಯಾರು ಬೇಕಾದರೂ ಪ್ರೋತ್ಸಾಹ ಕೊಡಬಹುದು. ರಾಜ ಸೊಲೊಮೋನನು ಹೀಗೆ ಬರೆದನು: “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ! [ನಗುಮುಖವು] ಹೃದಯಕ್ಕೆ ಆನಂದ; ಕಿವಿಗೆ ಬಿದ್ದ ಒಳ್ಳೇ ಸುದ್ದಿ ಎಲುಬಿಗೆ ಪುಷ್ಟಿ.” (ಜ್ಞಾನೋ. 15:23, 30) ನಿಮಗೆ ಗೊತ್ತಿರುವ ಯಾರಾದರೂ ನಿರುತ್ಸಾಹಗೊಂಡಿರುವುದು ಅಥವಾ ದುಃಖದಲ್ಲಿರುವುದು ನೆನಪಾಗುತ್ತಾ? ನೀವು ಅವರ ಹತ್ತಿರ ಹೋಗಿ ಕಾವಲಿನಬುರುಜು ಪತ್ರಿಕೆಯಿಂದ ಅಥವಾ ನಮ್ಮ ವೆಬ್ಸೈಟ್ನಿಂದ ಏನಾದರೂ ಓದಿದರೆ ಸಾಕು ಅವರಿಗೆ ಉತ್ತೇಜನ ಸಿಗುತ್ತದೆ. ಜೊತೆಗೆ, ಅವರೊಟ್ಟಿಗೆ ಸೇರಿ ರಾಜ್ಯ ಗೀತೆಗಳನ್ನು ಹಾಡುವುದರಿಂದಲೂ ಎಷ್ಟೋ ಸಮಾಧಾನ ಸಿಗುತ್ತದೆ. ಇದರ ಕುರಿತು ಪೌಲನು ಬರೆದದ್ದು: “ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ ಸೌಜನ್ಯಭರಿತವಾದ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಬೋಧಿಸುತ್ತಾ ಬುದ್ಧಿಹೇಳುತ್ತಾ ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗಾನಮಾಡಿರಿ.”—ಕೊಲೊ. 3:16; ಅ. ಕಾ. 16:25.
ಬೈಬಲಿನಲ್ಲಿರುವ ರತ್ನಗಳು
ijwbq-E ಲೇಖನ 39 ¶3
ಒಬ್ಬ ಕ್ರೈಸ್ತ ವೈದ್ಯಕೀಯ ಚಿಕಿತ್ಸೆಗಳನ್ನ ಪಡ್ಕೊಬಹುದಾ?
2. ನಾನು ಒಬ್ಬರಲ್ಲ, ಎರಡು ಮೂರು ಡಾಕ್ಟರ್ಗಳ ಅಭಿಪ್ರಾಯ ಕೇಳಬೇಕಾ? ನಿಮಗೆ ಹುಷಾರಿಲ್ಲ ಅಂದ್ರೆ ಅದ್ರಲ್ಲೂ ಗಂಭೀರ ಆರೋಗ್ಯ ಸಮಸ್ಯೆ ಇದ್ರೆ ‘ತುಂಬಾ ಸಲಹೆಗಾರರ’ ಅಭಿಪ್ರಾಯ ಕೇಳೋದ್ರಿಂದ ಸರಿಯಾದ ಚಿಕಿತ್ಸೆ ತಗೊಳ್ಳೋಕೆ ಸಹಾಯ ಆಗುತ್ತೆ.—ಜ್ಞಾನೋಕ್ತಿ15:22.
ಜೂನ್ 2-8
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 16
ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡೋ ಮೂರು ಪ್ರಶ್ನೆಗಳು
ಯೌವನದಲ್ಲಿ ವಿವೇಕದಿಂದ ಆಯ್ಕೆಗಳನ್ನು ಮಾಡಿ
11 ಯೆಹೋವನ ಸೇವೆ ಮಾಡುವುದರಿಂದ ನಮಗೆ ಅತ್ಯಧಿಕ ಸಂತೋಷ ಸಿಗುತ್ತದೆ. (ಜ್ಞಾನೋ. 16:20) ಇದನ್ನು ಯೆರೆಮೀಯನ ಕಾರ್ಯದರ್ಶಿಯಾದ ಬಾರೂಕನು ಮರೆತಿದ್ದನೆಂದು ತೋರುತ್ತದೆ. ಒಂದು ಸಮಯದಲ್ಲಿ ಅವನು ಯೆಹೋವನ ಸೇವೆ ಮಾಡುವುದರಲ್ಲಿ ಆನಂದಿಸಲಿಲ್ಲ. ಆಗ ಯೆಹೋವನು ಅವನಿಗೆ, “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು” ಎಂದು ಹೇಳಿದನು. (ಯೆರೆ. 45:3, 5) ಬಾರೂಕನಿಗೆ ಯಾವುದರಿಂದ ಸಂತೋಷ ಸಿಗುತ್ತಿತ್ತೆಂದು ನೀವು ನೆನಸುತ್ತೀರಿ? ತಾನು ಇಚ್ಛಿಸಿದಂತೆ ಮಹಾಪದವಿಯ ಬೆನ್ನು ಹತ್ತುವುದರಿಂದಲೊ? ಅಥವಾ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿ ಯೆರೂಸಲೇಮಿನ ನಾಶನವನ್ನು ಪಾರಾಗುವುದರಿಂದಲೊ?—ಯಾಕೋ. 1:12.
12 ಇತರರ ಸೇವೆ ಮಾಡುವುದರಿಂದ ಸಂತೋಷ ಕಂಡುಕೊಂಡವರಲ್ಲಿ ಒಬ್ಬನು ರಾಮೀರೋ. ಅವನು ಹೀಗನ್ನುತ್ತಾನೆ: “ನನ್ನೂರು ಆ್ಯಂಡಿಸ್ಪರ್ವತದಲ್ಲಿನ ಒಂದು ಹಳ್ಳಿ. ನನ್ನ ಅಣ್ಣ ನನಗೆ ಯೂನಿವರ್ಸಿಟಿ ಶಿಕ್ಷಣಕ್ಕೆ ಬೇಕಾದ ಹಣವನ್ನು ಕೊಡುತ್ತೇನೆಂದು ಹೇಳಿದ. ನನ್ನದು ಬಡಕುಟುಂಬವಾದ ಕಾರಣ ಅದೊಂದು ಸುವರ್ಣಾವಕಾಶವಾಗಿತ್ತು. ಅದೇ ಸಮಯದಲ್ಲಿ ಇನ್ನೊಂದು ಅವಕಾಶವೂ ನನಗೆ ಒದಗಿಬಂದಿತ್ತು. ನಾನು ಆಗ ತಾನೇ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗಿದ್ದೆ. ಒಬ್ಬ ಪಯನೀಯರನು ಚಿಕ್ಕ ಪಟ್ಟಣವೊಂದರಲ್ಲಿ ಸಾರಲು ತನ್ನನ್ನು ಜೊತೆಗೂಡುವಂತೆ ಆಮಂತ್ರಿಸಿದ್ದನು. ನಾನಿದನ್ನೇ ಆರಿಸಿಕೊಂಡೆ. ಅವನ ಜೊತೆ ಆ ಪಟ್ಟಣಕ್ಕೆ ಹೋದೆ. ನನ್ನ ಖರ್ಚಿಗಾಗಿ ನಾನಲ್ಲಿ ಕೂದಲು ಕತ್ತರಿಸುವ ಕೆಲಸ ಕಲಿತು ಕ್ಷೌರದಂಗಡಿ ತೆರೆದೆ. ಬೈಬಲಿನ ಬಗ್ಗೆ ಕಲಿಸುತ್ತೇವೆಂದು ಜನರಿಗೆ ಹೇಳಿದಾಗ ಅನೇಕರು ಸಂತೋಷದಿಂದ ಒಪ್ಪಿಕೊಂಡರು. ನಂತರ ನಾನು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಹೊಸದಾಗಿ ಆರಂಭಗೊಂಡಿದ್ದ ಸಭೆಯ ಜೊತೆಸೇರಿದೆ. ನಾನೀಗ ಅಲ್ಲಿ ಕಳೆದ ಹತ್ತು ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡುತ್ತಿದ್ದೇನೆ. ಜನರು ತಮ್ಮ ಸ್ವಂತ ಭಾಷೆಯಲ್ಲಿ ಸುವಾರ್ತೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುವುದರಿಂದ ನನಗೆ ಸಿಗುತ್ತಿರುವ ಸಂತೋಷವನ್ನು ಬೇರೆ ಯಾವ ಉದ್ಯೋಗವೂ ಕೊಡಸಾಧ್ಯವಿಲ್ಲ.”
ನೀವು ನವೀಕರಿಸಲ್ಪಟ್ಟಿದ್ದೀರಾ?
ನಾವು ಬೆಳೆದುಬಂದಿರುವ ರೀತಿ ಮತ್ತು ಸುತ್ತಮುತ್ತಲಿನ ಪರಿಸರ ನಮ್ಮನ್ನು ತುಂಬ ಪ್ರಭಾವಿಸುತ್ತದೆ. ನಾವು ಧರಿಸುವ ಉಡುಪು ಮತ್ತು ನಮ್ಮ ವರ್ತನೆ ನಿರ್ದಿಷ್ಟ ವಿಧದ್ದಾಗಿರುತ್ತದೆ. ನಿರ್ದಿಷ್ಟ ವಿಧದ ಊಟ ನಮಗೆ ಇಷ್ಟವಾಗುತ್ತದೆ. ಹಾಗೇಕೆ? ನಮ್ಮ ಸುತ್ತಮುತ್ತಲಿರುವ ಜನರು ನಮ್ಮ ಮೇಲೆ ಬೀರುವ ಪ್ರಭಾವ ಮತ್ತು ನಮ್ಮ ಸನ್ನಿವೇಶ ಕೂಡ ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿರುತ್ತದೆ.
2 ಆದರೂ, ನಮ್ಮ ಆಹಾರದ ಆಯ್ಕೆ ಮತ್ತು ಉಡುಪಿನ ಶೈಲಿಗಿಂತ ಎಷ್ಟೋ ಹೆಚ್ಚು ಪ್ರಮುಖವಾದ ವಿಷಯಗಳಿವೆ. ಉದಾಹರಣೆಗೆ, ನಾವು ಬೆಳೆಯುತ್ತಾ ಬಂದಂತೆ ಕೆಲವು ವಿಷಯಗಳು ಸರಿ, ಯೋಗ್ಯವಾದದ್ದು, ಇನ್ನು ಕೆಲವು ವಿಷಯಗಳು ತಪ್ಪು, ಯೋಗ್ಯವಲ್ಲ ಎಂದು ನಾವು ತಿಳಿದುಕೊಂಡಿದ್ದೇವೆ. ಇಂಥ ಅನೇಕ ವಿಷಯಗಳು ವೈಯಕ್ತಿಕವಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ನಮ್ಮ ಮನಸ್ಸಾಕ್ಷಿಯ ಪ್ರಕಾರವೂ ನಾವು ಆಯ್ಕೆಗಳನ್ನು ಮಾಡುತ್ತೇವೆ. “ಧರ್ಮಶಾಸ್ತ್ರವಿಲ್ಲದ ಅನ್ಯಜನಾಂಗಗಳ ಜನರು ಸ್ವಾಭಾವಿಕವಾಗಿಯೇ ಧರ್ಮಶಾಸ್ತ್ರದಲ್ಲಿರುವ ವಿಷಯಗಳನ್ನು” ಮಾಡುತ್ತಾರೆಂದು ಬೈಬಲ್ ಹೇಳುತ್ತದೆ. (ರೋಮ. 2:14) ಹಾಗಾದರೆ ದೇವರು ಒಂದು ವಿಷಯದ ಬಗ್ಗೆ ಸ್ಪಷ್ಟ ನಿಯಮ ಕೊಟ್ಟಿಲ್ಲವಾದರೆ ನಾವು ಬೆಳೆದು ಬಂದ ರೀತಿಯ ಪ್ರಕಾರ ಅಥವಾ ನಮ್ಮ ಸುತ್ತಮುತ್ತಲು ಸಾಮಾನ್ಯವಾಗಿರುವ ಮಟ್ಟಗಳಿಗನುಸಾರ ನಡೆಯಬಹುದೆಂದು ಇದರ ಅರ್ಥವೋ?
3 ಬೆಳೆದುಬಂದ ರೀತಿ, ಪರಿಸರಕ್ಕನುಸಾರ ಕ್ರೈಸ್ತರು ಆಯ್ಕೆ ಮಾಡುವುದಿಲ್ಲ. ಅದಕ್ಕೆ ಕಡಿಮೆಪಕ್ಷ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಬೈಬಲ್ ನಮಗೆ ಜ್ಞಾಪಕ ಹುಟ್ಟಿಸುವುದು: “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ.” (ಜ್ಞಾನೋ. 16:25) ನಾವು ಅಪರಿಪೂರ್ಣರಾದ್ದರಿಂದ ನಮ್ಮ ಹೆಜ್ಜೆಗಳನ್ನು ಪರಿಪೂರ್ಣವಾಗಿ ಮಾರ್ಗದರ್ಶಿಸುವ ಸಾಮರ್ಥ್ಯ ನಮಗಿಲ್ಲ. (ಜ್ಞಾನೋ. 28:26; ಯೆರೆ. 10:23) ಎರಡನೆಯದಾಗಿ, ಲೋಕದ ಪ್ರವೃತ್ತಿ ಮತ್ತು ಮಟ್ಟಗಳು ಇನ್ನಾವನಿಂದಲೂ ಅಲ್ಲ, “ಈ ವಿಷಯಗಳ ವ್ಯವಸ್ಥೆಯ ದೇವನು” ಆದ ಸೈತಾನನಿಂದ ನಿಯಂತ್ರಿಸಲ್ಪಡುತ್ತವೆಂದು ಬೈಬಲ್ ತೋರಿಸುತ್ತದೆ. (2 ಕೊರಿಂ. 4:4; 1 ಯೋಹಾ. 5:19) ಆದಕಾರಣ ಯೆಹೋವನ ಆಶೀರ್ವಾದ, ಒಪ್ಪಿಗೆಯನ್ನು ನಾವು ಬಯಸುತ್ತೇವಾದ್ದರಿಂದ ರೋಮನ್ನರಿಗೆ 12:2ರ (ಓದಿ) ಸಲಹೆಗೆ ಕಿವಿಗೊಡುವುದು ಆವಶ್ಯಕ.
ಬೈಬಲಿನಲ್ಲಿರುವ ರತ್ನಗಳು
it-1-E 629
ಶಿಸ್ತು
ಶಿಸ್ತನ್ನ ಕೇಳಿದ್ರೆ ಏನಾಗುತ್ತೆ? ನಿರ್ಲಕ್ಷ್ಯ ಮಾಡಿದ್ರೆ ಏನಾಗುತ್ತೆ? ಕೆಟ್ಟವರು ಮತ್ತು ಮೂರ್ಖರು ಯೆಹೋವ ದೇವರು ಕೊಡೋ ಶಿಸ್ತನ್ನ ಪೂರ್ತಿಯಾಗಿ ಬೇಡ ಅಂತಾರೆ. (ಕೀರ್ತ 50:16, 17; ಜ್ಞಾನೋ 1:7) ಇದ್ರಿಂದ ತುಂಬಾ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಇದ್ರಿಂದ ಜಾಸ್ತಿ ಶಿಸ್ತು ಸಿಗುತ್ತೆ ಇಲ್ಲಾಂದ್ರೆ ಕಠಿಣ ಶಿಕ್ಷೆನಾ ಅನುಭವಸಿಬೇಕಾಗುತ್ತೆ. ಶಿಸ್ತನ್ನ ತಿರಸ್ಕರಿಸೋದ್ರಿಂದ ಬಡತನ, ಅವಮಾನ, ಆರೋಗ್ಯ ಸಮಸ್ಯೆ ಮತ್ತು ಸಾವನ್ನ ಎದುರಸಬೇಕಾಗುತ್ತೆ. ಇದೆಲ್ಲಾ ನಿಜ ಅಂತ ಇಸ್ರಾಯೇಲ್ಯರ ಉದಾಹರಣೆಯಿಂದ ಗೊತ್ತಾಗುತ್ತೆ. ಪ್ರವಾದಿಗಳ ಮೂಲಕ ಸಿಕ್ಕ ಶಿಸ್ತನ್ನ ಅವರು ನಿರಾಕರಿಸಿದ್ರಿಂದ ಯೆಹೋವ ದೇವರ ಆಶೀರ್ವಾದ ಮತ್ತು ಸಂರಕ್ಷಣೆ ಕಳೆದುಕೊಂಡರು. ಕೊನೆಗೆ ಬೇರೆ ಜನಾಂಗದವರು ಅವರನ್ನ ಸೋಲಿಸಿದ್ರು, ಅಷ್ಟೆ ಅಲ್ಲ ಮುಂಚೆನೇ ಹೇಳಿದ ತರ ಅವರನ್ನ ಸೆರೆಯಾಳುಗಳಾಗಿ ಕರೆದುಕೊಂಡು ಹೋದ್ರು.—ಯೆರೆ 2:30; 5:3; 7:28; 17:23; 32:33; ಹೋಶೇ 7:12-16; 10:10; ಚೆಫ 3:2.
ಜೂನ್ 9-15
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 17
ನಿಮ್ಮ ಮದ್ವೆ ಜೀವನದಲ್ಲಿ ಶಾಂತಿಯಿಂದ ಇರಿ
ಅಸಮಾಧಾನದ ಹೊರೆ ಬಂಧನಕ್ಕೆ ಬರೆ
ಸ್ವಪರೀಕ್ಷೆ ಮಾಡಿಕೊಳ್ಳಿ. ಕೆಲವರು ‘ಕೋಪಿಷ್ಠರು’ ‘ಕ್ರೋಧಶೀಲರು’ ಆಗಿರುತ್ತಾರೆ ಎಂದು ಬೈಬಲ್ ತಿಳಿಸುತ್ತದೆ. (ಜ್ಞಾನೋಕ್ತಿ 29:22) ನಿಮ್ಮಲ್ಲೂ ಈ ವ್ಯಕ್ತಿತ್ವ ಇದೆಯಾ ಎಂದು ಯೋಚಿಸಿ. ಹಾಗಿರೋದಾದರೆ ಹೀಗೆ ಕೇಳಿಕೊಳ್ಳಿ: ‘ನಾನು ತಪ್ಪುಗಳನ್ನು ಮಾತ್ರ ಬೇಗ ಕಂಡುಹಿಡಿಯುತ್ತೇನಾ? ಬೇಗ ಕೋಪ ಮಾಡಿಕೊಳ್ಳುತ್ತೇನಾ? ಚಿಕ್ಕ ಪುಟ್ಟ ವಿಷಯಗಳಿಗೂ ದೊಡ್ಡ ರಂಪ ಮಾಡುತ್ತೇನಾ?’. ಬೈಬಲ್ಹೇಳುತ್ತದೆ, “ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.” (ಜ್ಞಾನೋಕ್ತಿ 17:9; ಪ್ರಸಂಗಿ 7:9) ಈ ರೀತಿ ನೀವೂ ಎತ್ತಿ ಆಡುವುದಾದರೆ ನಿಮ್ಮ ವೈವಾಹಿಕ ಬಂಧನ ಸಹ ಮುರಿದುಹೋಗಬಹುದು. ಹಾಗಾಗಿ, ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವ ರೂಢಿ ನಿಮಗಿದ್ದರೆ, ‘ತಾಳ್ಮೆಯಿಂದ ಇರಲಿಕ್ಕೆ ನನ್ನಿಂದ ಸಾಧ್ಯನೇ ಇಲ್ವಾ?’ ಎಂದು ಕೇಳಿಕೊಳ್ಳಿ.—ಬೈಬಲ್ ತತ್ವ: 1 ಪೇತ್ರ 4:8.
ಸಮಸ್ಯೆಗಳನ್ನು ಬಗೆಹರಿಸುವುದು
ಚರ್ಚಿಸಲು ಸಮಯವನ್ನು ಬದಿಗಿರಿಸಿ. “ಪ್ರತಿಯೊಂದು ಕಾರ್ಯಕ್ಕೂ . . . ತಕ್ಕ ಸಮಯವುಂಟು. . . . ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 3:1, 7) ಆರಂಭದಲ್ಲಿ ತಿಳಿಸಲಾದ ಜಗಳದಂತೆ, ಕೆಲವು ಸಮಸ್ಯೆಗಳು ತೀವ್ರ ಭಾವನೆಗಳನ್ನು ಉದ್ರೇಕಿಸಬಲ್ಲವು. ಹಾಗಾಗುವಲ್ಲಿ, ಕೋಪ ಭುಗಿಲೇಳುವ ಮುನ್ನ ಸಂಯಮ ತೋರಿಸಿ ತುಸು ಹೊತ್ತು ಚರ್ಚೆ ನಿಲ್ಲಿಸಿ. ಅಂದರೆ ‘ಸುಮ್ಮನಿರಿ.’ “ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು” ಎಂಬ ಬೈಬಲಿನ ಸಲಹೆಗೆ ಕಿವಿಗೊಟ್ಟರೆ ನಿಮ್ಮ ದಾಂಪತ್ಯವನ್ನು ಬಹಳ ಹಾನಿಯಿಂದ ತಪ್ಪಿಸಬಹುದು.—ಜ್ಞಾನೋಕ್ತಿ 17:14.
ಆದರೆ, “ಮಾತಾಡುವ ಸಮಯ” ಸಹ ಉಂಟು. ಸಮಸ್ಯೆಗಳನ್ನು ಅಲಕ್ಷಿಸಿದರೆ ಅವು ಕಳೆಗಳಂತೆ ಹುಲುಸಾಗಿ ಬೆಳೆಯುತ್ತವೆ. ಆದಕಾರಣ, ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿ ಇಂದಲ್ಲ ನಾಳೆ ಎಲ್ಲವೂ ಸರಿಯಾಗುತ್ತದೆ ಎಂದೆಣಿಸಬೇಡಿ. ನೀವು ಚರ್ಚೆಯನ್ನು ನಿಲ್ಲಿಸಿದ್ದಲ್ಲಿ ಆ ಬಗ್ಗೆ ಇನ್ನೊಮ್ಮೆ ಯಾವಾಗ ಮಾತಾಡುವಿರೆಂದು ಹೇಳಿ. ಈ ಮೂಲಕ ನಿಮ್ಮ ಸಂಗಾತಿಗೆ ಗೌರವವನ್ನು ತೋರಿಸುತ್ತೀರಿ. ಮಾತ್ರವಲ್ಲ ಅದು, ಬೈಬಲಿನ ಈ ಬುದ್ಧಿವಾದವನ್ನು ಪಾಲಿಸಲು ನಿಮಗಿಬ್ಬರಿಗೂ ನೆರವಾಗಬಲ್ಲದು: “ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಅಂತೆಯೇ ನೀವು ಹೇಳಿದ ಮಾತನ್ನು ಖಂಡಿತ ಉಳಿಸಿಕೊಳ್ಳಿ.
ಬೈಬಲಿನಲ್ಲಿರುವ ರತ್ನಗಳು
it-1-E 790 ¶2
ಕಣ್ಣು
ಕಣ್ಣಿನ ಸನ್ನೆಗಳ ಮೂಲಕ ಒಬ್ಬ ವ್ಯಕ್ತಿಯ ಭಾವನೆಗಳನ್ನ ಅರ್ಥ ಮಾಡ್ಕೊಬಹುದು. (ಧರ್ಮೋ 19:13; ಕೀರ್ತ 35:19; ಜ್ಞಾನೋ 6:13; 16:30) ಮೂರ್ಖರ ಕಣ್ಣುಗಳು ಗೊತ್ತು ಗುರಿಯಿಲ್ಲದೆ ಆಕಡೆ ಈಕಡೆ ಅಲೆದಾಡುತ್ತಾ ಇರುತ್ತೆ. ಇದ್ರಿಂದ ಅವ್ರು ಒಂದು ವಿಷ್ಯದ ಮೇಲೆ ಗಮನ ಕೊಡಲ್ಲ ಮತ್ತು ಯಾವುದ್ರ ಬಗ್ಗೆ ಯೋಚ್ನೆ ಮಾಡಬೇಕೋ ಅದ್ರ ಬಗ್ಗೆ ಯೋಚ್ನೆ ಮಾಡಲ್ಲ ಅಂತ ಗೊತ್ತಾಗುತ್ತೆ.
ಜೂನ್ 16-22
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 18
ಹುಷಾರಿಲ್ಲದವರನ್ನ ಪ್ರೋತ್ಸಾಹಿಸೋ ತರ ಮಾತಾಡಿ
ವಿವೇಕದ ಕೂಗನ್ನ ಕೇಳಿಸಿಕೊಳ್ತಾ ಇದ್ದೀರಾ?
17 ಮಾತಾಡೋ ಮುಂಚೆ ಯೋಚನೆ ಮಾಡಿ. ನಾವು ಯೋಚನೆ ಮಾಡದೆ ಮಾತಾಡಿಬಿಟ್ಟರೆ ಬೇರೆಯವರ ಮನಸ್ಸಿಗೆ ತುಂಬಾ ನೋವಾಗುತ್ತೆ. “ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ, ಬುದ್ಧಿವಂತನ ಮಾತು ಮದ್ದಿನಂತೆ ಇರುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 12:18) ನಾವು ಬೇರೆಯವರ ತಪ್ಪುಗಳನ್ನ ಎತ್ತಿ ಆಡ್ತಾ ಎಲ್ಲರಿಗೂ ಹೇಳ್ತಿದ್ರೆ ಅವರ ಜೊತೆಗಿರೋ ನಮ್ಮ ಸಂಬಂಧ ಹಾಳಾಗಿಬಿಡುತ್ತೆ. (ಜ್ಞಾನೋ. 20:19) ನಮ್ಮ ಮಾತು ಬೇರೆಯವರಿಗೆ ಗಾಯ ಮಾಡದೆ ಮದ್ದಿನ ತರ ಇರಬೇಕಂದ್ರೆ ನಾವು ಪ್ರತಿದಿನ ಬೈಬಲ್ ಓದಬೇಕು, ಅದರಲ್ಲಿರೋ ಒಳ್ಳೇ ವಿಷಯಗಳನ್ನು ನಮ್ಮ ಮನಸ್ಸಲ್ಲಿ ತುಂಬಿಸ್ಕೊಬೇಕು. (ಲೂಕ 6:45) ನಾವು ಹೀಗೆ ಮಾಡೋದ್ರಿಂದ ನಮ್ಮ ಮಾತು “ವಿವೇಕ ಹರಿಯೋ ಕಾಲುವೆ ತರ” ಆಗುತ್ತೆ. ತಂಪಾದ ನೀರಿನ ತರ ಎಲ್ಲರ ಮನಸ್ಸಿಗೂ ಖುಷಿ ಕೊಡುತ್ತೆ.—ಜ್ಞಾನೋ. 18:4.
mrt ಲೇಖನ 19 ಚೌಕ
ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?
ಗಮನಕೊಟ್ಟು ಕೇಳಿಸಿಕೊಳ್ಳಿ. ನಿಮ್ಮ ಹತ್ರ ಮಾತಾಡ್ಬೇಕು ಅಂತ ಹೇಳಿದ್ರೆ ದಯವಿಟ್ಟು ಗಮನಕೊಟ್ಟು ಕೇಳಿಸಿಕೊಳ್ಳಿ. ಅವರು ಏನ್ ಹೇಳಿದ್ರೂ ಅದಕ್ಕೆ ಇನ್ನೊಂದು ಮಾತು ಸೇರಿಸ್ಬೇಕಂತೇನಿಲ್ಲ. ಬರೀ ಕೇಳಿಸ್ಕೊಂಡ್ರೆ ಸಾಕು. ‘ಆ ರೀತಿಯೆಲ್ಲಾ ಯೋಚ್ನೆ ಮಾಡ್ಬೇಡ’ ಅಂತೆಲ್ಲಾ ಹೇಳ್ಬೇಡಿ. ನಾನು ಏನೇ ಹೇಳಿದ್ರೂ ನನ್ನ ಫ್ರೆಂಡಿಗೆ ಸಮಾಧಾನ ಸಿಗುತ್ತೆ ಅಂತ ಅಂದ್ಕೊಂಡು ಮನ್ಸಿಗೆ ಬಂದ ಹಾಗೆ ಮಾತಾಡ್ಬೇಡಿ.—ಜ್ಞಾನೋಕ್ತಿ 11:2.
ನಿಮ್ಮ ಮಾತಿಂದ ಅವರಿಗೆ ಭರವಸೆ ತುಂಬಿಸಿ. ಕೆಲವೊಮ್ಮೆ ನಿಮಗೆ ಏನ್ ಹೇಳ್ಬೇಕಂತಾನೇ ಹೊಳಿಲಿಕ್ಕಿಲ್ಲ. ಹಾಗಾಗಿ ಏನೂ ಹೇಳದೆ ಸುಮ್ನೆ ಇರೋದಕ್ಕಿಂತ ಅವರ ಸನ್ನಿವೇಶ ನಿಮಗೆ ಅರ್ಥ ಆಗ್ತಿದೆ ಅಂತ ಹೇಳಿದ್ರೆನೇ ಅವರಿಗೆ ಭರವಸೆ ಕೊಟ್ಟ ಹಾಗೆ ಇರುತ್ತೆ. ನಿಜವಾಗ್ಲೂ ನಿಮಗೆ ಹೇಗೆ ಅನಿಸುತ್ತೊ ಅದನ್ನ ಹೇಳಿ. ಅಂದ್ರೆ “ನಂಗೆ ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ, ಆದ್ರೆ ಚಿಂತೆ ಮಾಡ್ಬೇಡ ನಾನಿದ್ದೀನಿ” ಅಂತ ಹೇಳಿದ್ರೆ ಚೆನ್ನಾಗಿರುತ್ತೆ. ಆದ್ರೆ “ನಿಮ್ಮ ಪರಿಸ್ಥಿತಿನೇ ಪರವಾಗಿಲ್ಲ . . . ಇನ್ನೊಬ್ರಿಗೆ ಹೀಗಾಯ್ತು” ಅಂತೆಲ್ಲಾ ಹೇಳ್ಬೇಡಿ.
ನಿಮ್ಮ ಫ್ರೆಂಡ್ಗೆ ಇರೋ ಕಾಯಿಲೆ ಬಗ್ಗೆ ತಿಳ್ಕೊಂಡು ಅವನಿಗೆ ಬೇಕಾಗಿರೋ ಸಹಾಯ ಮಾಡಿದ್ರೆ ಅವನಿಗೆ ಖುಷಿ ಆಗ್ಬಹುದು. ಹೀಗೆ, ನೀವು ಮಾತಾಡೋ ವಿಷಯಗಳಿಂದ ಮತ್ತು ಮಾಡೋ ಕೆಲಸಗಳಿಂದ ಸಹಾಯ ಸಿಗುತ್ತೆ. (ಜ್ಞಾನೋಕ್ತಿ 18:13) ಅವನಿಗೂ ಅದು ಇಷ್ಟ ಆಗಬಹುದು. ಹಾಗಂತ ಅವರ ಎಲ್ಲಾ ವಿಷ್ಯಗಳಿಗೆ ಸಲಹೆ ಕೊಡಬೇಡಿ.
ನಿಮ್ಮಿಂದಾಗೋ ಸಹಾಯ ಮಾಡಿ. ಅವರಿಗೆ ಏನ್ ಸಹಾಯ ಬೇಕಾಗ್ಬಹುದು ಅಂತ ಊಹೆ ಮಾಡೋದಕ್ಕಿಂತ ಅವರ ಹತ್ರನೇ ಕೇಳಿ. ಆದ್ರೆ ನೆನಪಿಡಿ, ಎಲ್ರೂ ಬಾಯಿಬಿಟ್ಟು ಸಹಾಯ ಬೇಕು ಅಂತ ಹೇಳಲ್ಲ. ಯಾಕಂದ್ರೆ ಬೇರೆಯವರಿಗೆ ಯಾಕೆ ಕಷ್ಟಕೊಡ್ಬೇಕು ಅಂತ ಯೋಚಿಸ್ತಾರೆ. ವಿಷಯ ಹೀಗಿರೋದಾದ್ರೆ ಅವರಿಗೆ ಬೇಕಾಗಿರೋ ವಸ್ತುಗಳನ್ನು ತಗೊಂಡು ಹೋಗ್ಬಹುದು, ಅವರ ಮನೆ ಕ್ಲೀನ್ ಮಾಡ್ಬಹುದು ಅಥವಾ ಅವರಿಗೆ ಬೇಕಾಗಿರೋ ಬೇರೆ ಕೆಲಸನೂ ಮಾಡಬಹುದು.—ಗಲಾತ್ಯ 6:2.
ಸಹಾಯ ಮಾಡೋದನ್ನ ನಿಲ್ಲಿಸಬೇಡಿ. ನಿಮ್ಮ ಫ್ರೆಂಡ್ಗೆ ಹುಷಾರಿಲ್ಲದೆ ಇರೋದ್ರಿಂದ ಕೆಲವು ಸಲ ನಿಮ್ಮ ಜೊತೆ ಅವರಿಗೆ ಸಮಯ ಕಳೆಯೋಕೆ ಆಗದೆ ಇರಬಹುದು, ನಿಮ್ಮ ಜೊತೆ ಮಾತಾಡದೆನೂ ಇರಬಹುದು. ಅಂಥ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಬೇಡಿ, ಕೋಪ ಮಾಡ್ಕೋಬೇಡಿ ಅವರನ್ನ ಅರ್ಥಮಾಡ್ಕೊಳ್ಳಿ. ಅವರಿಗೆ ಸಹಾಯ ಮಾಡೋದನ್ನ ನಿಲ್ಲಿಸಬೇಡಿ.—ಜ್ಞಾನೋಕ್ತಿ 18:24.
wp23.1 14 ¶3-15 ¶1
ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ
“ಸಂತೈಸೋ ತರ ಮಾತಾಡಿ.”—1 ಥೆಸಲೊನೀಕ 5:14.
ನಿಮ್ಮ ಸ್ನೇಹಿತನಿಗೆ ಆತಂಕ ಇರಬಹುದು ಅಥವಾ ನಾನು ಯಾವುದಕ್ಕೂ ಯೋಗ್ಯತೆ ಇಲ್ಲದವನು ಅನ್ನೋ ಭಾವನೆ ಕಾಡ್ತಾ ಇರಬಹುದು. ಹಾಗಾಗಿ ಅವ್ರತ್ರ ಮಾತಾಡ್ವಾಗ ‘ನೀನು ಯಾವುದಕ್ಕೂ ಚಿಂತೆ ಮಾಡ್ಬೇಡ,’ ‘ನಿಂಗೇನು ಅನಿಸುತ್ತೋ ಅದನ್ನ ನನತ್ರ ಮನಸ್ಸು ಬಿಚ್ಚಿ ಹೇಳು,’ ‘ನಿನ್ನ ಜೊತೆ ನಾನಿದ್ದೀನಿ, ನಿನ್ನ ಬಗ್ಗೆ ನಾನು ಚಿಂತಿಸ್ತೀನಿ’ ಅಂತ ಧೈರ್ಯ ತುಂಬೋ ಹಾಗೆ ಮಾತಾಡಿ.
“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.”—ಜ್ಞಾನೋಕ್ತಿ 17:17.
ಅವ್ರಿಗೆ ಬೇಕಾದ ಸಹಾಯ ಮಾಡಿ. ಅವ್ರಿಗೆ ಏನು ಸಹಾಯ ಬೇಕು ಅಂತ ನೀವೇ ಯೋಚಿಸ್ತಾ ಕೂರೋ ಬದಲು ಅವ್ರ ಹತ್ರನೇ ಕೇಳಿ. ಒಂದುವೇಳೆ ನಿಮ್ಮ ಸ್ನೇಹಿತನಿಗೆ ಸಹಾಯ ಬೇಕು ಅಂತ ಹೇಳೋಕೆ ಮುಜುಗರ ಆಗ್ತಿದ್ರೆ, ಅವ್ರ ಜೊತೆ ಸಮಯ ಕಳೆಯೋಕೆ ಪ್ಲಾನ್ ಮಾಡಿ. ಉದಾಹರಣೆಗೆ, ಇಬ್ರೂ ವಾಕಿಂಗ್ ಹೋಗಿ, ಒಟ್ಟಿಗೆ ಶಾಪಿಂಗ್ ಮಾಡಿ, ಮನೆ ಕ್ಲೀನ್ ಮಾಡಿ.—ಗಲಾತ್ಯ 6:2.
“ತಾಳ್ಮೆಯಿಂದ ಇರಿ.”—1 ಥೆಸಲೊನೀಕ 5:14.
ಕೆಲವೊಮ್ಮೆ ನಿಮ್ಮ ಸ್ನೇಹಿತನಿಗೆ ಮಾತಾಡೋಕೆ ಇಷ್ಟ ಆಗದೆ ಇರಬಹುದು. ಆಗ ಅವ್ರೇನೇ ಹೇಳಿದ್ರು ನೀವು ತಾಳ್ಮೆಯಿಂದ ಕೇಳಿಸ್ಕೊಳ್ತೀರ ಅಂತ ಅವ್ರಿಗೆ ಹೇಳಿ. ಅವ್ರಿಗೆ ಇರೋ ಆರೋಗ್ಯದ ಸಮಸ್ಯೆಯಿಂದ ಅವರು ಹೇಳೋ ಕೆಲವು ವಿಷ್ಯಗಳು ನಿಮಗೆ ನೋವು ತರಬಹುದು. ನೀವಿಬ್ರು ಸೇರಿ ಮಾಡಿರೋ ಪ್ಲಾನ್ನ ಅವರು ಕ್ಯಾನ್ಸಲ್ ಮಾಡಬಹುದು ಅಥವಾ ಯಾವಾಗ್ಲೂ ಕಿರಿಕಿರಿಯಾಗೋ ತರ ನಡ್ಕೊಬಹುದು. ಏನೇ ಆದ್ರೂ ನೀವು ತಾಳ್ಮೆಯಿಂದ ಅವ್ರನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ ಮತ್ತು ನಿಮ್ಮಿಂದ ಆದಷ್ಟು ಸಹಾಯ ಮಾಡ್ತಾ ಇರಿ.—ಜ್ಞಾನೋಕ್ತಿ 18:24.
ಬೈಬಲಿನಲ್ಲಿರುವ ರತ್ನಗಳು
it-2-E 271-272
ಚೀಟು
ಹಿಂದಿನ ಕಾಲದಲ್ಲಿ ತೀರ್ಮಾನಗಳನ್ನ ಮಾಡೋಕೆ ಚೀಟು ಹಾಕೋ ಪದ್ಧತಿಯನ್ನ ಬಳಸ್ತಿದ್ರು. ಈ ವಿಧಾನದಲ್ಲಿ ಕಲ್ಲುಗಳನ್ನ, ಮರದ ತುಂಡುಗಳನ್ನ ಅಥವಾ ಕಲ್ಲಿನ ಫಲಕಗಳನ್ನ ಅಲ್ಲಾಡಿಸಿ ಬಟ್ಟೆ ಮೇಲೆ ಹಾಕ್ತಿದ್ರು ಅಥವಾ ಡಬ್ಬದಲ್ಲಿ ಕುಲುಕುತ್ತಿದ್ದರು. ಬಟ್ಟೆಯಿಂದ ಆಚೆ ಬಿದ್ದಿದ್ದನ್ನ ಅಥವಾ ಡಬ್ಬದಿಂದ ಒಂದನ್ನ ಆರಿಸಿಕೊಳ್ತಿದ್ರು. ಇದನ್ನ ಮಾಡೋಕೂ ಮುಂಚೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿ ಆತನ ಮಾರ್ಗದರ್ಶನ ಕೇಳ್ತಿದ್ರು. (ಯೆಹೋ 15:1; ಕೀರ್ತ 16:5; 125:3; ಯೆಶಾ 57:6; ಯೆರೆ 13:25) ಇಸ್ರಾಯೇಲ್ಯರ ಕಾಲದಲ್ಲಿ ಜಗಳ ಮತ್ತಿತರ ಸಮಸ್ಯೆಗಳನ್ನ ಬಗೆಹರಿಸೋಕೆ ಈ ಚೀಟು ಹಾಕೋ ಪದ್ಧತಿಯನ್ನೇ ಬಳಸ್ತಿದ್ರು.—ಜ್ಞಾನೋ. 18:18; 16:33.
ಜೂನ್ 23-29
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 19
ನಿಮ್ಮ ಸಹೋದರ ಸಹೋದರಿಯರಿಗೆ ಒಳ್ಳೇ ಸ್ನೇಹಿತರಾಗಿ
ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳಿ
16 ನಾವು ಸಹೋದರ ಸಹೋದರಿಯರು ಮಾಡೋ ತಪ್ಪುಗಳನ್ನಲ್ಲ, ಅವರು ಇಲ್ಲಿ ತನಕ ಏನೆಲ್ಲಾ ಒಳ್ಳೇದನ್ನ ಮಾಡಿದ್ದಾರೋ ಅದನ್ನ ನೆನಪಿಸ್ಕೊಬೇಕು. ಒಂದು ಉದಾಹರಣೆ ನೋಡಿ. ನೀವು ಮತ್ತು ಸಹೋದರ ಸಹೋದರಿಯರೆಲ್ಲಾ ಒಂದು ಗೆಟ್ ಟುಗೆದರ್ಗೆ ಬಂದಿದ್ದೀರಾ ಅಂದ್ಕೊಳ್ಳಿ. ಅಲ್ಲಿ ನೀವೆಲ್ರೂ ಚೆನ್ನಾಗಿ ಸಮಯ ಕಳಿತೀರ, ಆಮೇಲೆ ಮನೆಗೆ ಹೋಗೋಕೆ ಮುಂಚೆ ಫೋಟೋ ತಗೊಳ್ತೀರ. ಆಗ ನೀವು ಒಂದಲ್ಲ, ಎರಡು ಮೂರು ಫೋಟೋ ತಗೊಳ್ತೀರ. ಆದ್ರೆ ಒಂದು ಫೋಟೋದಲ್ಲಿ ಒಬ್ಬ ಸಹೋದರನ ಮುಖ ಚೆನ್ನಾಗಿ ಬಂದಿಲ್ಲಾ ಅಂದ್ರೆ ಆ ಫೋಟೋ ಡಿಲೀಟ್ ಮಾಡಿ ಚೆನ್ನಾಗಿರೋದನ್ನ ಇಟ್ಕೊಳ್ತೀರ ಅಲ್ವಾ?
17 ಈಗ ನಾವು ಫೋನಲ್ಲಿ ಇಟ್ಕೊಳ್ಳೋ ಫೋಟೋಗಳನ್ನ ನಮ್ಮ ನೆನಪಿಗೆ ಹೋಲಿಸೋಣ. ನಮ್ಮ ನೆನಪಲ್ಲಿ ಸಹೋದರ ಸಹೋದರಿಯರ ಜೊತೆ ಕಳೆದಿರೋ ಎಷ್ಟೋ ಒಳ್ಳೇ ಕ್ಷಣಗಳನ್ನ ಇಟ್ಕೊಂಡಿರ್ತೀವಿ. ಆದ್ರೆ ಅವರು ಕೆಲವೊಮ್ಮೆ ನಮಗೆ ಬೇಜಾರಾಗೋ ತರ ಮಾತಾಡಿ ಬಿಡಬಹುದು ಅಥವಾ ನಡ್ಕೊಂಡು ಬಿಡಬಹುದು. ಆಗ ನಾವೇನು ಮಾಡಬೇಕು? ಅವ್ರ ಜೊತೆ ಕಳೆದಿರೋ ಒಳ್ಳೇ ಕ್ಷಣಗಳನ್ನ ಜೋಪಾನವಾಗಿ ಇಟ್ಕೊಬೇಕು, ಅವರು ಮಾಡಿರೋ ಚಿಕ್ಕಪುಟ್ಟ ತಪ್ಪುಗಳನ್ನ ಡಿಲೀಟ್ ಮಾಡಿಬಿಡಬೇಕು.—ಜ್ಞಾನೋಕ್ತಿ 19:11; ಎಫೆಸ 4:32.
ನಿಮ್ಮ ಪ್ರೀತಿ ಇನ್ನೂ ಬೆಳೀಲಿ
10 ನಮಗೂ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ಅವ್ರಿಗೆ ಸಹಾಯ ಮಾಡೋಕೆ ಮುಂದೆ ಬರ್ತೀವಿ. (ಇಬ್ರಿ. 13:16) ಹಿಂದಿನ ಲೇಖನದಲ್ಲಿದ್ದ ಆ್ಯನ ಮತ್ತು ಅವ್ರ ಗಂಡ ಏನು ಮಾಡಿದ್ರು ಅಂತ ನೋಡಿ. ಅವ್ರಿದ್ದ ಜಾಗದಲ್ಲಿ ಒಂದು ದೊಡ್ಡ ಬಿರುಗಾಳಿ ಬಂತು. ಇದ್ರಿಂದ ಒಬ್ಬ ಸಹೋದರನ ಮನೆಯ ಚಾವಣಿ ಬಿದ್ದು ಹೋಯ್ತು. ಅವ್ರ ಮನೆಯಲ್ಲಿದ್ದ ಎಲ್ಲಾ ಬಟ್ಟೆಗಳು ಗಲೀಜಾಗಿ ಹೋಯ್ತು. ಆಗ ಆ್ಯನ ಏನು ಮಾಡಿದ್ರು? “ನಾವು ಆ ಸಹೋದರ ಮತ್ತು ಅವ್ರ ಮನೆಯವ್ರ ಬಟ್ಟೆಗಳನ್ನ ತಗೊಂಡು ಬಂದು ಒಗೆದ್ವಿ. ಆಮೇಲೆ ಅದನ್ನೆಲ್ಲ ಇಸ್ತ್ರಿ ಮಾಡಿ ಮಡಚಿ ಕೊಟ್ವಿ. ನಾವು ಮಾಡಿದ್ದು ಅಷ್ಟು ದೊಡ್ಡ ಸಹಾಯ ಏನೂ ಅಲ್ಲ. ಆದ್ರೆ ಅದ್ರಿಂದ ನಮ್ಮ ಮಧ್ಯ ಬಾಂಧವ್ಯ ಬೆಳೀತು. ಅದು ಇವತ್ತಿಗೂ ಹಾಗೇ ಇದೆ.” ಆ್ಯನ ಮತ್ತು ಅವ್ರ ಗಂಡನಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇದ್ದಿದ್ದಕ್ಕೆ ಸಹಾಯ ಮಾಡೋಕಾಯ್ತು.—1 ಯೋಹಾ. 3:17, 18.
11 ನಾವು ಬೇರೆಯವ್ರಿಗೆ ಪ್ರೀತಿ, ದಯೆ ತೋರಿಸಿದಾಗ ಯೆಹೋವ ದೇವರ ತರ ನಡ್ಕೊಳ್ತಾ ಇದ್ದೀವಿ ಅನ್ನೋದನ್ನ ಅವರು ಗಮನಿಸ್ತಾರೆ. ಅಷ್ಟೇ ಅಲ್ಲ ನಾವು ಅವ್ರಿಗೆ ಮಾಡಿರೋ ಸಹಾಯನ ಕೂಡ ಮರಿಯಲ್ಲ. ಸಹೋದರಿ ಕೇರನ್ ಏನು ಹೇಳ್ತಾರೆ ನೋಡಿ. “ಸಹೋದರಿಯರು ನಮ್ಮ ಮನೆಗೇ ಬಂದು ನನ್ನನ್ನ ಸೇವೆಗೆ ಕರ್ಕೊಂಡು ಹೋಗ್ತಿದ್ರು. ಆಮೇಲೆ ನನ್ನನ್ನ ಊಟಕ್ಕೆ ಕರೀತಾ ಇದ್ರು. ಸೇವೆ ಮುಗಿದ ಮೇಲೆ ನನ್ನನ್ನ ಮನೆಗೆ ವಾಪಸ್ ತಂದು ಬಿಡ್ತಿದ್ರು. ಇದೆಲ್ಲ ಅಷ್ಟು ಸುಲಭ ಅಲ್ಲ. ಆದ್ರೂ ಅವ್ರಿಗೆ ನನ್ನ ಮೇಲೆ ಪ್ರೀತಿ ಇದ್ದಿದ್ರಿಂದ ಅವರು ಹೀಗೆಲ್ಲ ಮಾಡಿದ್ರು. ಅವರು ಮಾಡಿರೋ ಸಹಾಯಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.” ಆ ಸಹೋದರಿಯರನ್ನ ಕೇರನ್ ಈಗ್ಲೂ ನೆನಪಿಸ್ಕೊಳ್ತಾರೆ. ಕೇರನ್ ಹೇಳೋದು: “ಅವ್ರ ಋಣ ತೀರಿಸಬೇಕು ಅಂತ ನಂಗೆ ತುಂಬ ಆಸೆ ಇದೆ. ಆದ್ರೆ ಅವ್ರೆಲ್ಲ ಈಗ ಎಲ್ಲಿದ್ದಾರೆ ಅಂತ ನಂಗೊತ್ತಿಲ್ಲ. ಆದ್ರೆ ಯೆಹೋವನಿಗೆ ಗೊತ್ತು. ಅದಕ್ಕೆ ಅವರು ನಂಗೆ ಮಾಡಿರೋ ಸಹಾಯಕ್ಕೆ ಯೆಹೋವನೇ ಅವ್ರಿಗೆ ಪ್ರತಿಫಲ ಕೊಡ್ಲಿ ಅಂತ ಯಾವಾಗ್ಲೂ ಬೇಡ್ಕೊಳ್ತಾ ಇರ್ತೀನಿ.” ನಾವು ಮಾಡಿರೋ ಸಹಾಯನ ಜನ್ರು ಮರೆತುಬಿಡಬಹುದು. ಆದ್ರೆ ಯೆಹೋವ ದೇವರು ಮರಿಯಲ್ಲ. ನಾವು ಬೇರೆಯವ್ರಿಗೆ ಒಂದು ಚಿಕ್ಕ ಸಹಾಯ ಮಾಡಿದ್ರೂ ಅದಕ್ಕೆ ತುಂಬ ಬೆಲೆ ಕೊಡ್ತಾನೆ. ಅದನ್ನ ನಾವು ಆತನಿಗೆ ಕೊಟ್ಟಿರೋ ಸಾಲದ ತರ ನೋಡ್ತಾನೆ. ಅದಕ್ಕೆ ತಕ್ಕ ಪ್ರತಿಫಲ ಕೊಡ್ತಾನೆ.—ಜ್ಞಾನೋಕ್ತಿ 19:17 ಓದಿ.
ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿ
6 ಒಬ್ಬ ವ್ಯಕ್ತಿ ಒಂದೇ ಕಂಪನಿಯಲ್ಲಿ ತುಂಬ ವರ್ಷಗಳಿಂದ ಕೆಲಸ ಮಾಡ್ತಾ ಇದ್ರೆ ಜನ ಅವನನ್ನ ನಿಯತ್ತಿನ ಮನುಷ್ಯ ಅಂತ ಕರೀತಾರೆ. ಅವನಿಗೆ ಆ ಕಂಪನಿಯ ಬಾಸ್ನ ಪರಿಚಯನೇ ಇಲ್ಲದಿದ್ರೂ, ಕಂಪನಿಯ ಕೆಲವು ನಿಯಮಗಳು ಇಷ್ಟ ಇಲ್ಲದೇ ಇದ್ರೂ ಅವನು ಅಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರರ್ಥ ಅವನಿಗೆ ಕಂಪನಿ ಅಂದ್ರೆ ತುಂಬ ಇಷ್ಟ ಅಂತಾನಾ? ಇಲ್ಲ. ಪ್ರತಿ ತಿಂಗಳು ಅವನಿಗೆ ಸಂಬಳ ಬರುತ್ತೆ ಅಂತ ಅವನು ಅಲ್ಲಿ ದುಡಿತಾನೆ. ಒಂದುವೇಳೆ ಬೇರೆ ಕಡೆ ಒಳ್ಳೆ ಸಂಬಳ ಸಿಗೋ ಕೆಲಸ ಸಿಕ್ಕಿಬಿಟ್ರೆ ಈ ಕಂಪನಿನ ಬಿಟ್ಟುಬಿಡುತ್ತಾನೆ.
7 ಈ ಉದಾಹರಣೆಯಲ್ಲಿ ನೋಡಿದ ಹಾಗೆ ಜನರು ಬೇರೆ ದಾರಿ ಇಲ್ಲವಲ್ಲಾ ಅಂತ ನಿಯತ್ತು ತೋರಿಸ್ತಾರೆ. ಆದ್ರೆ ದೇವಜನರು ಮನಸಾರೆ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾರೆ. ದಾವೀದನ ಉದಾಹರಣೆ ನೋಡಿ. ಅವನು ಯೋನಾತಾನನಿಗೆ ಮನಸಾರೆ ಶಾಶ್ವತ ಪ್ರೀತಿ ತೋರಿಸಿದ. ಯೋನಾತಾನನ ಅಪ್ಪ ದಾವೀದನನ್ನ ಕೊಲ್ಲೋಕೆ ಪ್ರಯತ್ನ ಮಾಡಿದಾಗಲೂ ದಾವೀದ ಶಾಶ್ವತ ಪ್ರೀತಿ ತೋರಿಸೋದನ್ನ ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ, ಯೋನಾತಾನ ಸತ್ತು ಎಷ್ಟೋ ವರ್ಷಗಳು ಆದಮೇಲೂ ಅವನ ಮಗ ಮೆಫೀಬೋಶೆತನಿಗೆ ದಾವೀದ ಶಾಶ್ವತ ಪ್ರೀತಿ ತೋರಿಸಿದ.—1 ಸಮು. 20:9, 14, 15; 2 ಸಮು. 4:4; 8:15; 9:1, 6, 7.
ಬೈಬಲಿನಲ್ಲಿರುವ ರತ್ನಗಳು
it-1-E 515
ಸಲಹೆ, ಸಲಹೆಗಾರ
ಯೆಹೋವ ದೇವರಷ್ಟು ವಿವೇಕ ಬೇರೆ ಯಾರಿಗೂ ಇಲ್ಲ. ಹಾಗಾಗಿ ನಾವು ಸಲಹೆ ಕೊಡೋವಾಗ ಯೆಹೋವ ದೇವರ ಯೋಚ್ನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಬೇಕು. (ಯೆಶಾ 40:13; ರೋಮ 11:34) ಯೇಸು ಯೆಹೋವ ದೇವರ ಮಾರ್ಗದರ್ಶನೆಯನ್ನ ಪಾಲಿಸಿದ್ರಿಂದ ಮತ್ತು ಪವಿತ್ರಶಕ್ತಿಯ ಸಹಾಯ ಇದ್ದಿದ್ದರಿಂದ “ಅದ್ಭುತ ಸಲಹೆಗಾರ”ನಾದ. (ಯೆಶಾ 9:6; 11:2; ಯೋಹಾ 5:19, 30) ನಾವು ಸಲಹೆ ಕೊಡೋವಾಗ ಯಾವಾಗ್ಲೂ ಯೆಹೋವ ದೇವರ ಮಾರ್ಗದರ್ಶನ ಕೇಳಿದ್ರೆ ಅದ್ರಿಂದ ತುಂಬಾ ಪ್ರಯೋಜನ ಆಗುತ್ತೆ. ಯೆಹೋವ ದೇವರ ಮಾರ್ಗದರ್ಶನೆ ಇಲ್ಲದೇ ಕೊಡೋ ಸಲಹೆಗಳಿಂದ ಯಾವ ಪ್ರಯೋಜನನೂ ಆಗಲ್ಲ.—ಜ್ಞಾನೋ 19:21; 21:30.
ಜೂನ್ 30–ಜುಲೈ 6
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 20
ಡೇಟಿಂಗ್ ಮಾಡೋವಾಗ ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡೋ ವಿಷ್ಯಗಳು
ಮದುವೆ ಆಗೋ ಮುಂಚೆ ಒಳ್ಳೇ ತೀರ್ಮಾನ ಮಾಡೋದು ಹೇಗೆ?
3 ಡೇಟಿಂಗ್ ಮಾಡೋದು ಚೆನ್ನಾಗೇ ಇರುತ್ತೆ. ಆದ್ರೆ ಇದನ್ನ ಒಂದು ಚಿಕ್ಕ ವಿಷ್ಯವಾಗಿ ನೋಡಬಾರದು. ಯಾಕಂದ್ರೆ ಒಂದು ಹುಡುಗ, ಹುಡುಗಿ ಮದುವೆ ಆಗಬೇಕಾ ಅಂತ ತೀರ್ಮಾನ ಮಾಡೋದು ಡೇಟಿಂಗ್ ಮಾಡೋವಾಗನೇ. ಮದುವೆ ದಿನದಲ್ಲಿ ಹುಡುಗ ಹುಡುಗಿ ಬದುಕಿರೋ ತನಕ ಸಂಗಾತಿಯನ್ನ ಪ್ರೀತಿಸ್ತಾರೆ, ಗೌರವಿಸ್ತಾರೆ ಅಂತ ಯೆಹೋವನ ಮುಂದೆ ಮಾತು ಕೊಡ್ತಾರೆ. ಹಾಗಾಗಿ ಯಾವುದೇ ಒಂದು ಮಾತು ಕೊಡೊ ಮುಂಚೆ ಚೆನ್ನಾಗಿ ಯೋಚ್ನೆ ಮಾಡಬೇಕು. (ಜ್ಞಾನೋಕ್ತಿ 20:25 ಓದಿ.) ಅದಕ್ಕೇ ಡೇಟಿಂಗ್ ಮಾಡ್ತಿರೋ ಹುಡುಗ, ಹುಡುಗಿ ಮದುವೆ ಆಗ್ತೀನಿ ಅಂತ ಮಾತು ಕೊಡುವಾಗ ಚೆನ್ನಾಗಿ ಯೋಚ್ನೆ ಮಾಡಬೇಕು. ಡೇಟಿಂಗ್ ಮಾಡುವಾಗ ಒಬ್ಬ ಹುಡುಗ ಹುಡುಗಿ ಒಬ್ರನ್ನೊಬ್ರು ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ಆಗುತ್ತೆ ಮತ್ತು ಒಳ್ಳೆ ತೀರ್ಮಾನ ತಗೊಳ್ಳೋಕೆ ಆಗುತ್ತೆ. ಹಾಗಾಗಿ ಕೆಲವರು ಮದುವೆ ಆಗ್ತೀನಿ ಅಂತ ತೀರ್ಮಾನ ಮಾಡಬಹುದು. ಇನ್ನು ಕೆಲವರು ಮದುವೆ ಆಗಲ್ಲ ಅಂತ ತೀರ್ಮಾನ ಮಾಡಬಹುದು. ಮದುವೆ ಆಗಲ್ಲ ಅಂತ ತೀರ್ಮಾನ ಮಾಡಿದ್ರೆ ಅದು ತಪ್ಪಲ್ಲ. ಯಾಕಂದ್ರೆ ಡೇಟಿಂಗ್ನ ಉದ್ದೇಶ ಒಬ್ಬ ವ್ಯಕ್ತಿನ ಚೆನ್ನಾಗಿ ತಿಳ್ಕೊಂಡು ಸರಿಯಾದ ನಿರ್ಣಯ ಮಾಡೋದೇ.
4 ಡೇಟಿಂಗ್ನ ಉದ್ದೇಶ ಏನು ಅಂತ ತಿಳ್ಕೊಳ್ಳೋದು ತುಂಬ ಪ್ರಾಮುಖ್ಯ ಯಾಕೆ? ಇದ್ರ ಉದ್ದೇಶ ತಿಳ್ಕೊಂಡ್ರೆ ಒಬ್ಬ ಹುಡುಗ, ಹುಡುಗಿ ಮದುವೆ ಆಗೋ ಉದ್ದೇಶ ಇಲ್ಲದೇ ಸುಮ್ಸುಮ್ಮನೆ ಡೇಟಿಂಗ್ ಮಾಡೋಕೆ ಹೋಗಲ್ಲ. ಮದುವೆ ಆಗೋರು ಮಾತ್ರ ಅಲ್ಲ, ಎಲ್ರೂ ಈ ವಿಷ್ಯದ ಬಗ್ಗೆ ಚೆನ್ನಾಗಿ ತಿಳ್ಕೊಂಡಿರಬೇಕು. ಯಾಕಂದ್ರೆ ಒಂದು ಹುಡುಗ ಹುಡುಗಿ ಡೇಟಿಂಗ್ ಮಾಡ್ತಿದ್ರೆ ಅವರು ಮದುವೆ ಆಗ್ಲೇಬೇಕು ಅಂತ ಕೆಲವರು ಅಂದ್ಕೊಳ್ತಾರೆ. ಈ ತರ ಮಾಡಿದ್ರೆ ಮದುವೆ ಆಗದೆ ಇರೋರಿಗೆ ಹೇಗೆ ಅನಿಸುತ್ತೆ? ಅಮೆರಿಕದಲ್ಲಿರೋ ಮದುವೆ ಆಗದಿರೋ ಮೆಲಿಸಾ ಅನ್ನೋ ಸಹೋದರಿ ಹೀಗೆ ಹೇಳ್ತಾರೆ: “ಒಂದು ಹುಡುಗ ಹುಡುಗಿ ಡೇಟಿಂಗ್ ಮಾಡುವಾಗ ಅವರು ಮದುವೆ ಆಗ್ಲೇಬೇಕು ಅಂತ ಕೆಲವು ಸಹೋದರ ಸಹೋದರಿಯರು ಅಂದ್ಕೊಳ್ತಾರೆ. ಇದ್ರಿಂದ ಹುಡುಗ ಹುಡುಗಿಗೆ ತುಂಬ ಒತ್ತಡ ಆಗುತ್ತೆ. ಅದಕ್ಕೇ ಕೆಲವ್ರಿಗೆ ಡೇಟಿಂಗ್ ನಿಲ್ಲಿಸಬೇಕು ಅಂತ ಅನಿಸಿದ್ರೂ ಅವರು ಅದನ್ನ ನಿಲ್ಲಿಸಲ್ಲ. ಇನ್ನು ಕೆಲವರು ಡೇಟಿಂಗ್ ಮಾಡೋದೇ ಬೇಡ. ಸುಮ್ನೆ ಯಾಕೆ ತಲೆನೋವು ಅಂದ್ಕೊಳ್ತಾರೆ.”
ಒಳ್ಳೇ ಸಂಗಾತಿಯನ್ನ ಹುಡುಕೋದು ಹೇಗೆ?
8 ಒಬ್ಬ ವ್ಯಕ್ತಿಯನ್ನ ಹೇಗೆ ಗಮನಿಸಬಹುದು? ಕೂಟಗಳಿಗೆ ಹೋದಾಗ, ಗೆಟ್ಟುಗೆದರ್ನಲ್ಲಿ ಸಿಕ್ಕಾಗ ನೀವು ಅವ್ರನ್ನ ಗಮನಿಸಬಹುದು. ಆಗ ಅವರು ಯೆಹೋವನನ್ನ ಪ್ರೀತಿಸ್ತಾರಾ, ಅವರು ಎಂಥ ವ್ಯಕ್ತಿ ಮತ್ತು ಅವರು ಹೇಗೆ ನಡ್ಕೊಳ್ತಾರೆ ಅಂತ ಗೊತ್ತಾಗುತ್ತೆ. ಅವ್ರ ಸ್ನೇಹಿತರು ಯಾರು, ಅವರು ಯಾವುದ್ರ ಬಗ್ಗೆ ಮಾತಾಡ್ತಾರೆ ಅಂತೆಲ್ಲ ಗಮನಿಸಿ. (ಲೂಕ 6:45) ಅಷ್ಟೇ ಅಲ್ಲ ನಿಮಗೆ ಇರೋ ಗುರಿಗಳು ಅವ್ರಿಗೂ ಇದ್ಯಾ ಅಂತ ಗಮನಿಸಿ. ಅವ್ರ ಬಗ್ಗೆ ಇನ್ನೂ ತಿಳ್ಕೊಳ್ಳೋಕೆ ಅವ್ರ ಸಭೆಯ ಹಿರಿಯರ ಹತ್ರ, ಅವ್ರ ಬಗ್ಗೆ ಚೆನ್ನಾಗಿ ಗೊತ್ತಿರೋ ಪ್ರೌಢ ಕ್ರೈಸ್ತರ ಹತ್ರ ಕೇಳಿ. (ಜ್ಞಾನೋ. 20:18) ನೀವು ಅವ್ರ ಹತ್ರ ಆ ವ್ಯಕ್ತಿಗೆ ಒಳ್ಳೇ ಹೆಸ್ರಿದ್ಯಾ, ಅವ್ರಲ್ಲಿ ಯಾವೆಲ್ಲ ಗುಣಗಳಿವೆ ಅಂತ ಕೇಳಬಹುದು. (ರೂತ್ 2:11) ಆದ್ರೆ ಒಂದು ವಿಷ್ಯ ನೆನಪಿಡಿ: ನೀವು ಆ ವ್ಯಕ್ತಿಯನ್ನ ಗಮನಿಸುವಾಗ ಅವ್ರಿಗೆ ಮುಜುಗರ ಆಗೋ ತರ ನಡ್ಕೊಬೇಡಿ. ಪ್ರತಿಯೊಂದು ವಿಷ್ಯನ ಹುಡುಕ್ತಾ ಯಾವಾಗ್ಲೂ ಅವ್ರ ಹಿಂದೆನೇ ಇರಬೇಡಿ.
ಮದುವೆ ಆಗೋ ಮುಂಚೆ ಒಳ್ಳೇ ತೀರ್ಮಾನ ಮಾಡೋದು ಹೇಗೆ?
7 ಒಳಗಿನ ರಹಸ್ಯ ವ್ಯಕ್ತಿಯನ್ನ ತಿಳ್ಕೊಳ್ಳೋಕೆ ಏನು ಮಾಡಬೇಕು? ಮುಖ್ಯವಾಗಿ ಮುಚ್ಚುಮರೆ ಇಲ್ಲದೆ ಮಾತಾಡಬೇಕು. ಪ್ರಶ್ನೆಗಳನ್ನ ಕೇಳಬೇಕು, ಅವರು ಮಾತಾಡುವಾಗ ಚೆನ್ನಾಗಿ ಕೇಳಿಸ್ಕೊಬೇಕು. (ಜ್ಞಾನೋ. 20:5; ಯಾಕೋ. 1:19) ಒಟ್ಟಿಗೆ ಊಟ ಮಾಡಿದ್ರೆ, ವಾಕಿಂಗಿಗೆ ಹೋದ್ರೆ, ಸಿಹಿಸುದ್ದಿ ಸಾರೋಕೆ ಹೋದ್ರೆ ಮಾತಾಡೋಕೆ ಇನ್ನೂ ಅವಕಾಶ ಸಿಗುತ್ತೆ. ನೀವಿಬ್ರೂ ಕುಟುಂಬದವ್ರ ಜೊತೆ, ಸ್ನೇಹಿತರ ಜೊತೆ ಒಟ್ಟಿಗೆ ಸಮಯ ಕಳೆಯುವಾಗ ಒಬ್ರು ಇನ್ನೊಬ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ ಬೇರೆಯವ್ರ ಜೊತೆ ಕೆಲವು ಕೆಲಸಗಳನ್ನ ಮಾಡೋಕೆ ಪ್ಲ್ಯಾನ್ ಮಾಡಿ. ಆಗ ಬೇರೆಬೇರೆ ಸನ್ನಿವೇಶದಲ್ಲಿ ಬೇರೆಬೇರೆ ಜನ್ರ ಜೊತೆ ಅವರು ಹೇಗೆ ನಡ್ಕೊಳ್ತಾರೆ ಅಂತ ಗೊತ್ತಾಗುತ್ತೆ. ನೆದರ್ಲೆಂಡ್ಸ್ನಲ್ಲಿರೋ ಅಶ್ವಿನ್ ಅನ್ನೋ ಸಹೋದರ ಅಲಿಶಾ ಜೊತೆ ಡೇಟಿಂಗ್ ಮಾಡಿದಾಗ ಇದನ್ನೇ ಮಾಡಿದ್ರು. “ನಾವು ಒಬ್ರಿಗೊಬ್ರು ಚೆನ್ನಾಗಿ ತಿಳ್ಕೊಳೋಕೆ ಒಟ್ಟಿಗೆ ಕೆಲಸ ಮಾಡಿದ್ವಿ, ಒಟ್ಟಿಗೆ ಅಡಿಗೆ ಮಾಡಿದ್ವಿ ಮತ್ತು ಬೇರೆ ಕೆಲಸಾನೂ ಮಾಡಿದ್ವಿ. ಇದ್ರಿಂದ ಒಬ್ರು ಇನ್ನೊಬ್ರಲ್ಲಿ ಇರೋ ಒಳ್ಳೆ ಗುಣಗಳ ಬಗ್ಗೆ ಮತ್ತು ಬಲಹೀನತೆಗಳ ಬಗ್ಗೆ ತಿಳ್ಕೊಳ್ಳೋಕೆ ಆಯ್ತು.”
8 ನೀವು ಒಬ್ರು ಇನ್ನೊಬ್ರನ್ನ ಚೆನ್ನಾಗಿ ತಿಳ್ಕೊಳ್ಳೋಕೆ ಬೈಬಲ್ ವಿಷ್ಯಗಳ ಬಗ್ಗೆ ಚರ್ಚೆ ಮಾಡಿ. ನೀವು ಮುಂದೆ ಒಂದು ದಿನ ಮದುವೆ ಆದ್ರೆ ಯೆಹೋವ ದೇವರು ನಿಮ್ಮ ಜೀವನದಲ್ಲಿ ತುಂಬ ಮುಖ್ಯ ಆಗಿರಬೇಕು. ಅದಕ್ಕೇ ಕುಟುಂಬ ಆರಾಧನೆ ಮಾಡೋಕೆ ಸಮಯ ಮಾಡ್ಕೋಬೇಕಾಗುತ್ತೆ. (ಪ್ರಸಂ. 4:12) ಹಾಗಾಗಿ ನೀವು ಡೇಟಿಂಗ್ ಮಾಡುವಾಗ್ಲೇ ಈ ವಿಷ್ಯಗಳನ್ನ ಚರ್ಚೆ ಮಾಡೋಕೆ ಸಮಯ ಮಾಡ್ಕೊಳ್ಳಿ. ಆದ್ರೆ ನೀವು ಇನ್ನೂ ಒಂದು ಕುಟುಂಬ ಆಗಿರಲ್ಲ, ಸಹೋದರ ಆ ಸಹೋದರಿಯ ಯಜಮಾನ ಆಗಿರಲ್ಲ ನಿಜ. ಆದ್ರೂ ಈ ರೀತಿ ಆಗಾಗ ಚರ್ಚೆ ಮಾಡಿದ್ರೆ ಯೆಹೋವನಿಗೆ ಎಷ್ಟು ಹತ್ರ ಆಗಿದ್ದೀರಾ ಅಂತ ಪರಸ್ಪರ ತಿಳ್ಕೊಳ್ಳೋಕೆ ಆಗುತ್ತೆ. ಅಮೆರಿಕದಲ್ಲಿರೋ ಮ್ಯಾಕ್ಸ್ ಮತ್ತು ಲೀಸಾಗೆ ಇನ್ನು ಯಾವ ಪ್ರಯೋಜನ ಆಯ್ತು ಅಂತ ನೋಡಿ. ಮ್ಯಾಕ್ಸ್ ಹೀಗೆ ಹೇಳ್ತಾರೆ: “ನಾವು ಡೇಟಿಂಗ್ ಶುರು ಮಾಡಿದಾಗ ನಮ್ಮ ಪ್ರಕಾಶನಗಳಲ್ಲಿ ಡೇಟಿಂಗ್ ಬಗ್ಗೆ, ಮದುವೆ ಬಗ್ಗೆ, ಕುಟುಂಬ ಜೀವನದ ಬಗ್ಗೆ ಇದ್ದ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಾ ಇದ್ವಿ. ಇದ್ರಿಂದ ಮಾತಾಡೋಕೆ ಕಷ್ಟ ಆಗ್ತಿದ್ದ ತುಂಬ ಪ್ರಾಮುಖ್ಯವಾದ ವಿಷ್ಯಗಳ ಬಗ್ಗೆನೂ ನಮಗೆ ಚರ್ಚೆ ಮಾಡೋಕೆ ಆಯ್ತು.”
ಬೈಬಲಿನಲ್ಲಿರುವ ರತ್ನಗಳು
it-2-E 196 ¶7
ದೀಪ
ಜ್ಞಾನೋಕ್ತಿ 20:27ರಲ್ಲಿ ಹೇಳಿರೋ “ಮನುಷ್ಯನ ಉಸಿರು” ಅಥವಾ ಅವನ ಭಾವನೆಗಳು ಅದು ಒಳ್ಳೇದಾಗಿರಲಿ ಕೆಟ್ಟದಾಗಿರಲಿ ಅವನು ನಿಜವಾಗಲೂ ಎಂಥವನು ಅಂತ ತೋರಿಸಿಕೊಡುತ್ತೆ. ಅವನ ಒಳಗಿನ ವ್ಯಕ್ತಿತ್ವ ಏನು ಅಂತ ಅದು ತೋರಿಸುತ್ತೆ.—ಅಕಾ 9:1 ಹೋಲಿಸಿ.