ಭಾಗ 2ರ ಪರಿಚಯ
ದೇವರು ಯಾಕೆ ಜಲಪ್ರಳಯವನ್ನು ತಂದನು? ಮಾನವ ಇತಿಹಾಸದ ಆರಂಭದಲ್ಲಿ ಒಳ್ಳೇದು ಮತ್ತು ಕೆಟ್ಟದ್ದರ ಮಧ್ಯೆ ಕಲಹ ಆರಂಭವಾಯಿತು. ಆದಾಮ, ಹವ್ವ ಮತ್ತು ಅವರ ಮಗ ಕಾಯಿನನಂಥ ಜನರು ಕೆಟ್ಟದ್ದನ್ನು ಆರಿಸಿಕೊಂಡರು. ಹೇಬೆಲ ಮತ್ತು ನೋಹರಂಥ ಕೆಲವರು ಮಾತ್ರ ಒಳ್ಳೇದನ್ನು ಆರಿಸಿಕೊಂಡರು. ಹೆಚ್ಚಿನವರು ತುಂಬ ಕೆಟ್ಟ ಕೆಲಸಗಳನ್ನು ಮಾಡಿದ್ದರಿಂದ ಯೆಹೋವನು ಆ ದುಷ್ಟಜನರನ್ನು ಜಲಪ್ರಳಯದಿಂದ ನಾಶಮಾಡಿದನು. ನಾವು ಯಾವುದನ್ನು ಆರಿಸಿಕೊಳ್ಳುತ್ತೇವೆ ಎಂದು ಯೆಹೋವನು ಗಮನಿಸುತ್ತಾನೆ ಹಾಗೂ ಕೆಟ್ಟದ್ದು ಒಳ್ಳೇದನ್ನು ಜಯಿಸುವಂತೆ ಆತನು ಎಂದಿಗೂ ಬಿಡನು ಎಂಬುದನ್ನು ಈ ಭಾಗ ನಿಮ್ಮ ಮಗುವಿಗೆ ಮನಗಾಣಿಸುತ್ತದೆ.