ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 7 ಪು. 24-ಪು. 25 ಪ್ಯಾ. 1
  • ಬಾಬೆಲಿನ ಗೋಪುರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಾಬೆಲಿನ ಗೋಪುರ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ನೋಹನ ಹಡಗು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅವರು ತಮಗಾಗಿ ದೊಡ್ಡ ಹೆಸರನ್ನು ಮಾಡಿಕೊಳ್ಳಲಿಲ್ಲ
    ಕಾವಲಿನಬುರುಜು—1998
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 7 ಪು. 24-ಪು. 25 ಪ್ಯಾ. 1
ಯೆಹೋವನು ಜನರ ಭಾಷೆಯನ್ನು ಗಲಿಬಿಲಿ ಮಾಡಿದ ನಂತರ ಅವರಿಗೆ ಬಾಬೆಲಿನ ಗೋಪುರವನ್ನು ಕಟ್ಟುವ ಕೆಲಸವನ್ನು ಮಾಡಲು ಆಗಲಿಲ್ಲ

ಪಾಠ 7

ಬಾಬೆಲಿನ ಗೋಪುರ

ಜಲಪ್ರಳಯ ಆದ ಮೇಲೆ ನೋಹನ ಪುತ್ರರಿಗೆ ಅನೇಕ ಮಕ್ಕಳು ಹುಟ್ಟಿದರು. ಅವರ ಕುಟುಂಬ ದೊಡ್ಡದಾಗುತ್ತಾ ಹೋದಂತೆ ಅವರು ಒಂದೊಂದು ದಿಕ್ಕಿಗೆ ಹೋದರು. ಹೀಗೆ ಯೆಹೋವನು ಹೇಳಿದಂತೆ ಭೂಮಿಯ ತುಂಬ ಜನರಾದರು.

ಆದರೆ ಕೆಲವು ಕುಟುಂಬಗಳು ಯೆಹೋವನ ಮಾತನ್ನು ಕೇಳಲಿಲ್ಲ. ಅವರು ‘ನಾವೆಲ್ಲ ಸೇರಿ ಒಂದು ಪಟ್ಟಣ ಕಟ್ಟೋಣ. ಆಕಾಶ ಮುಟ್ಟೊ ತರ ಎತ್ತರದ ಗೋಪುರ ಕಟ್ಟಿ ದೊಡ್ಡ ಹೆಸ್ರು ಮಾಡಿಕೊಳ್ಳೋಣ’ ಎಂದು ಹೇಳಿದರು.

ಜನರ ಈ ಯೋಚನೆ ಯೆಹೋವನಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಆದ್ದರಿಂದ ಕಟ್ಟೋ ಕೆಲಸವನ್ನೇ ನಿಲ್ಲಿಸಿಬಿಟ್ಟನು. ಹೇಗೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಜನರೆಲ್ಲ ಬೇರೆ ಬೇರೆ ಭಾಷೆ ಮಾತಾಡುವ ಹಾಗೆ ಯೆಹೋವನು ಮಾಡಿದನು. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಅರ್ಥ ಆಗುತ್ತಿರಲಿಲ್ಲ. ಆದ್ದರಿಂದ ಜನರು ಕೆಲಸವನ್ನು ನಿಲ್ಲಿಸಲೇಬೇಕಾಯಿತು. ಅವರು ಕಟ್ಟುತ್ತಿದ್ದ ಪಟ್ಟಣಕ್ಕೆ ಬಾಬೆಲ್‌ ಎಂಬ ಹೆಸರು ಬಂತು. ಬಾಬೆಲ್‌ ಅಂದರೆ “ಗಲಿಬಿಲಿ.” ಹೀಗೆ ಭಾಷೆಯ ಗಲಿಬಿಲಿಯಿಂದ ಬೇಸತ್ತ ಜನ ಗಂಟು ಮೂಟೆ ಕಟ್ಟಿಕೊಂಡು ಒಂದೊಂದು ದಿಕ್ಕಿಗೆ ಹೋಗಿ ವಾಸಿಸಲು ಶುರುಮಾಡಿದರು. ಆದರೆ ಇದರಿಂದ ಬುದ್ಧಿ ಕಲಿತರಾ? ಇಲ್ಲ. ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಅನ್ನುವ ಹಾಗೆ ಅವರು ಕೆಟ್ಟದ್ದನ್ನು ಮಾಡುತ್ತಾ ಹೋದರು. ಇಂಥವರ ಮಧ್ಯೆ ಯೆಹೋವನನ್ನು ಪ್ರೀತಿಸುವವರು ಯಾರಾದರೂ ಇದ್ದರಾ? ಉತ್ತರ ಮುಂದಿನ ಅಧ್ಯಾಯದಲ್ಲಿದೆ.

“ಹೆಚ್ಚಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ಮೇಲೆ ಎತ್ತುತ್ತಾನೆ.”—ಲೂಕ 18:14

ಪ್ರಶ್ನೆಗಳು: ಬಾಬೆಲಿನ ಜನರು ಏನು ಮಾಡಿದರು? ಅವರ ಕೆಲಸವನ್ನು ಯೆಹೋವನು ಹೇಗೆ ನಿಲ್ಲಿಸಿದನು?

ಆದಿಕಾಂಡ 11:1-9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ