ಗೀತೆ 151
ಆತ ಕರೆಯುವ
1. ಈ ಜೀವವು, ಮುಂಜಾನೆಯ ಮಂಜು,
ಕ್ಷಣಿಕ ನಮ್ಮ ಬಾಳು
ಸ್ನೇಹಿತರ ಜೀವವು ಹೋದಾಗ
ಕಣ್ಣೀರ ಜೊತೆ ನೋವು.
ಮೃತರು ಪುನಃ ಬದುಕುವರೇ?
ಕೇಳು ದೇವ ವಾಗ್ದಾನ.
(ಪಲ್ಲವಿ)
ಮೃತರು ಬರುವರಾಗ,
ಆತನು ಕರೆದಾಗ.
ನೋಡು ಕಣ್ಣಾರೆ ನೀನು,
ದೇವರ ಶಕ್ತಿಯನ್ನು.
ಸಾವನ್ನೇ ಗೆಲ್ಲಲು ಆಗ,
ನಂಬಿಕೆ ಬೇಕು ಈಗ.
ಹೌದು ಶಾಶ್ವತ ಜೀವ,
ಕೊಡುವ ನಮ್ಮ ದೇವ.
2. ದೇವ ಪ್ರಿಯ ಇಲ್ಲದೆ ಹೋದರೂ
ನೆನಪಿಡುವ ದೇವ
ಆ ನೆನಪು ಎಂದೆಂದೂ ಶಾಶ್ವತ
ಕೊಡುವ ಮತ್ತೆ ಜೀವ.
ನಮ್ಮ ಕಣ್ಣಲ್ಲಿ ಆನಂದಬಾಷ್ಪ!
ದೇವ ರಾಜ್ಯ ಬಂದಾಗ.
(ಪಲ್ಲವಿ)
ಮೃತರು ಬರುವರಾಗ,
ಆತನು ಕರೆದಾಗ.
ನೋಡು ಕಣ್ಣಾರೆ ನೀನು,
ದೇವರ ಶಕ್ತಿಯನ್ನು.
ಸಾವನ್ನೇ ಗೆಲ್ಲಲು ಆಗ,
ನಂಬಿಕೆ ಬೇಕು ಈಗ.
ಹೌದು ಶಾಶ್ವತ ಜೀವ,
ಕೊಡುವ ನಮ್ಮ ದೇವ.
(ಯೋಹಾ. 6:40; 11:11, 43; ಯಾಕೋ. 4:14 ಸಹ ನೋಡಿ)