ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwhf ಲೇಖನ 3
  • ಪ್ರೀತಿ ತೋರಿಸುವುದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರೀತಿ ತೋರಿಸುವುದು ಹೇಗೆ?
  • ಸುಖೀ ಸಂಸಾರಕ್ಕೆ ಸಲಹೆಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮಗಿದು ತಿಳಿದಿರಲಿ
  • ನೀವೇನು ಮಾಡಬಹುದು?
  • “ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಕುಟುಂಬ ಸಂತೋಷಕ್ಕೆ ಸಲಹೆಗಳು: ಪ್ರೀತಿವಾತ್ಸಲ್ಯ ತೋರಿಸಿ
    ಸುಖೀ ಸಂಸಾರಕ್ಕೆ ಸಲಹೆಗಳು
  • ಸಹೋದರ ವಾತ್ಯಲ್ಯಕ್ಕೆ ಕೀಲಿ ಕೈಯನ್ನು ಕಂಡುಕೊಳ್ಳುವುದು
    ಕಾವಲಿನಬುರುಜು—1993
  • ಕುಟುಂಬ ವೃತ್ತದಲ್ಲಿ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಸುಖೀ ಸಂಸಾರಕ್ಕೆ ಸಲಹೆಗಳು
ijwhf ಲೇಖನ 3
ಗಂಡ ತನ್ನ ಹೆಂಡತಿಯನ್ನು ಅಪ್ಪಿಕೊಂಡಿದ್ದಾನೆ

ಸುಖೀ ಸಂಸಾರಕ್ಕೆ ಸಲಹೆಗಳು

ಪ್ರೀತಿ ತೋರಿಸುವುದು ಹೇಗೆ?

ವರ್ಷಗಳು ಉರುಳಿದಂತೆ ಕೆಲವು ದಂಪತಿಗಳು ಪ್ರೀತಿ ತೋರಿಸುವುದನ್ನು ಕಡಿಮೆ ಮಾಡುತ್ತಾರೆ. ನಿಮ್ಮ ಕುಟುಂಬದಲ್ಲೂ ಇದೇ ಸನ್ನಿವೇಶ ಇದ್ದರೆ ನೀವ್ಯಾಕೆ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು?

  • ನಿಮಗಿದು ತಿಳಿದಿರಲಿ

  • ನೀವೇನು ಮಾಡಬಹುದು?

ನಿಮಗಿದು ತಿಳಿದಿರಲಿ

ಬಲವಾದ ಮದುವೆ ಬಂಧಕ್ಕೆ ಪ್ರೀತಿ ಅತ್ಯಗತ್ಯ. ನಾವು ಶಾರೀರಿಕವಾಗಿ ಗಟ್ಟಿಮುಟ್ಟಾಗಿರಬೇಕಾದರೆ ಕ್ರಮವಾಗಿ ಊಟ ಮತ್ತು ನೀರನ್ನು ಸೇವಿಸುವುದು ಅಗತ್ಯ. ಹಾಗೆಯೇ ಮದುವೆ ಬಂಧ ಗಟ್ಟಿಯಾಗಿರಬೇಕಾದರೆ ಸತತವಾಗಿ ಪ್ರೀತಿ ತೋರಿಸುವುದು ಅಗತ್ಯ. ಮದುವೆಯಾಗಿ ಹತ್ತಾರು ವರ್ಷಗಳು ಕಳೆದರೂ ಸಂಗಾತಿಗೆ ತನ್ನ ಕಡೆಗೆ ಆಳವಾದ ಪ್ರೀತಿ ಮತ್ತು ಕಾಳಜಿ ಇದೆ ಎಂಬ ಖಾತರಿ ಗಂಡ ಹೆಂಡತಿ ಇಬ್ಬರಿಗೂ ಇರಬೇಕು.

ನಿಜ ಪ್ರೀತಿ ಇದ್ದ ಕಡೆ ಸ್ವಾರ್ಥ ಇರಲ್ಲ. ನಿಜ ಪ್ರೀತಿ ಇರುವವರು ಸಂಗಾತಿಯ ಸಂತೋಷಕ್ಕೆ ಆದ್ಯತೆ ಕೊಡುತ್ತಾರೆ. ತನ್ನ ಸಂಗಾತಿಯಲ್ಲಿ ಲೈಂಗಿಕ ಆಸಕ್ತಿ ಹುಟ್ಟಿದ್ದಾಗ ಮಾತ್ರ ಪ್ರೀತಿ ತೋರಿಸಲ್ಲ, ಬದಲಿಗೆ ತನ್ನ ಸಂಗಾತಿಗೆ ಇರುವ ಪ್ರೀತಿಯ ಹಂಬಲವನ್ನು ಅರ್ಥಮಾಡಿಕೊಂಡು ಅದನ್ನು ಪೂರೈಸಲು ತನ್ನಿಂದಾದದ್ದೆಲ್ಲಾ ಮಾಡುತ್ತಾರೆ ಮತ್ತು ಪರಿಗಣನೆ ತೋರಿಸುತ್ತಾರೆ.

ಸಾಮಾನ್ಯವಾಗಿ ಹೆಂಡತಿಯರಿಗೆ ಗಂಡಂದಿರಿಗಿಂತ ಹೆಚ್ಚು ಪ್ರೀತಿಯ ಅಗತ್ಯವಿದೆ. ಗಂಡ ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿರಬಹುದು. ಆದರೆ ಆ ಪ್ರೀತಿಯನ್ನು ಬರೀ ಎದ್ದೇಳುವಾಗ, ಮಲಗುವಾಗ ಅಥವಾ ಲೈಂಗಿಕತೆಯಲ್ಲಿ ಒಳಗೂಡುವ ಮುಂಚೆ ಮಾತ್ರ ತೋರಿಸಿದರೆ, ಗಂಡ ತನ್ನನ್ನು ನಿಜವಾಗಲೂ ಪ್ರೀತಿಸುತ್ತಿದ್ದಾನಾ ಅಂತ ಹೆಂಡತಿಗೆ ಸಂಶಯ ಬರಬಹುದು. ದಿನವಿಡೀ ಆಗಾಗ ಪ್ರೀತಿ ತೋರಿಸುವುದು ತುಂಬ ಪ್ರಾಮುಖ್ಯ.

ನೀವೇನು ಮಾಡಬಹುದು?

ಪ್ರೀತಿಯ ಮಾತುಗಳನ್ನಾಡಿ. “ನಾನು ನಿನ್ನನ್ನು ಪ್ರೀತಿಸುತ್ತೇನೆ” “ನೀನಿಲ್ಲಾಂದ್ರೆ ಬದುಕನ್ನು ಊಹಿಸಿಕೊಳ್ಳೋಕೂ ಆಗಲ್ಲ” ಎಂಬಂಥ ಚಿಕ್ಕ ಚಿಕ್ಕ ಪ್ರೀತಿಯ ಮಾತುಗಳನ್ನು ಹೇಳುವಾಗ ಸಂಗಾತಿಗೆ ತುಂಬ ಖುಷಿಯಾಗುತ್ತದೆ.

ಬೈಬಲ್‌ ತತ್ವ: “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ.”—ಮತ್ತಾಯ 12:34.

ಸಲಹೆ: ನಿಮ್ಮ ಪ್ರೀತಿಯನ್ನು ಬರೀ ಮಾತಿನಲ್ಲಿ ಮಾತ್ರ ಹೇಳಬೇಕು ಅಂತೇನಿಲ್ಲ, ಅದನ್ನು ಪುಟ್ಟ ಚೀಟಿಯಲ್ಲಿ ಬರೆದು ಕೊಡಬಹುದು ಅಥವಾ ಮೆಸೇಜ್‌ ಕಳುಹಿಸಬಹುದು.

ಕ್ರಿಯೆಯಲ್ಲೂ ಪ್ರೀತಿ ತೋರಿಸಿ: ಪ್ರೀತಿಯ ಮಾತುಗಳನ್ನಾಡುವಾಗ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಅಥವಾ ಸುಮ್ಮನೆ ಕೈಯನ್ನು ಹಿಡಿಯುವುದರ ಮೂಲಕ ನಿಮ್ಮ ಪ್ರೀತಿ ನಿಜ ಅಂತ ಸಂಗಾತಿಗೆ ತೋರಿಸಬಹುದು. ಮೃದುವಾಗಿ ಮುಟ್ಟುವ ಮೂಲಕ, ಪ್ರೀತಿಯ ಒಂದು ನೋಟದ ಮೂಲಕ ಅಥವಾ ಚಿಕ್ಕ ಉಡುಗೊರೆಗಳನ್ನು ಕೊಡುವ ಮೂಲಕವೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಅಷ್ಟು ಮಾತ್ರವಲ್ಲದೆ, ಹೆಂಡತಿ ಮಾಡುವ ಕೆಲಸಗಳಲ್ಲಿ ಸಹಾಯ ಮಾಡುವ ಮೂಲಕ ಸಹ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸಬಹುದು. ಉದಾಹರಣೆಗೆ, ಸಾಮಾನುಗಳ ಬ್ಯಾಗ್‌ ಅನ್ನು ಹಿಡಿಯುವುದು, ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು ಮತ್ತು ಕಸ ಗುಡಿಸುವಂಥ ಚಿಕ್ಕಪುಟ್ಟ ಸಹಾಯಗಳನ್ನು ಮಾಡಬಹುದು.

ಬೈಬಲ್‌ ತತ್ವ: “ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ . . . ಪ್ರೀತಿಸುವವರಾಗಿರೋಣ.”—1 ಯೋಹಾನ 3:18.

ಸಲಹೆ: ಮದುವೆಗೆ ಮುಂಚೆ ನೀವು ನಿಮ್ಮ ಸಂಗಾತಿಗೆಷ್ಟು ಪ್ರೀತಿ ತೋರಿಸುತ್ತಿದ್ದಿರೋ ಅಷ್ಟೇ ಪ್ರೀತಿ ಈಗಲೂ ತೋರಿಸಲು ಪ್ರಯತ್ನಿಸಿ.

ಒಟ್ಟಿಗೆ ಸಮಯ ಕಳೆಯಿರಿ. ನೀವಿಬ್ಬರೇ ಒಟ್ಟಿಗೆ ಸಮಯ ಕಳೆಯುವುದರಿಂದ ನಿಮ್ಮ ಸಂಬಂಧ ಬಲವಾಗುತ್ತದೆ. ಮಾತ್ರವಲ್ಲ ನೀವವರೊಂದಿಗೆ ಇರಲು ಎಷ್ಟು ಇಷ್ಟಪಡುತ್ತೀರೆಂದು ಸಂಗಾತಿಗೆ ತೋರಿಸಿಕೊಡುತ್ತೀರಿ. ನಿಮಗೆ ಮಕ್ಕಳಿದ್ದರೆ ಅಥವಾ ತುಂಬ ಕೆಲಸಗಳಿದ್ದರೆ ನೀವಿಬ್ಬರು ಮಾತ್ರ ಒಟ್ಟಿಗೆ ಇರಲು ಸಮಯ ಮಾಡಿಕೊಳ್ಳುವುದು ಕಷ್ಟವಾಗಬಹುದು. ಹೀಗಿದ್ದರೆ ನೀವಿಬ್ಬರು ಮಾತ್ರ ಸ್ವಲ್ಪ ದೂರ ವಾಕಿಂಗ್‌ ಹೋಗಲು ಪ್ರಯತ್ನಿಸಿ.

ಬೈಬಲ್‌ ತತ್ವ: ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳೋಣ.’—ಫಿಲಿಪ್ಪಿ 1:10.

ಸಲಹೆ: ತುಂಬ ಬ್ಯುಸಿ ಇರುವ ಕೆಲವು ದಂಪತಿಗಳು ಆಗಾಗ ಇಬ್ಬರೇ ಒಟ್ಟಿಗೆ ಸಮಯ ಕಳೆಯಲು ನಿರ್ದಿಷ್ಟ ದಿನ ಅಥವಾ ವಾರಾಂತ್ಯವನ್ನು ಬದಿಗಿಡುತ್ತಾರೆ.

ಗಂಡ ಹೆಂಡತಿ ಒಂದು ಹೋಟೆಲ್‌ನಲ್ಲಿ ಊಟಮಾಡುತ್ತಿದ್ದಾರೆ

ನಿಮ್ಮ ಸಂಗಾತಿಯನ್ನು ತಿಳಿದುಕೊಳ್ಳಿರಿ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಆದುದರಿಂದ ನೀವು ಪ್ರೀತಿ ತೋರಿಸುವ ವಿಧ ನಿಮ್ಮ ಸಂಗಾತಿಗೆ ಇಷ್ಟವಾಗುತ್ತಿದೆಯಾ ಅಥವಾ ಇನ್ನೂ ಏನಾದರೂ ಬದಲಾವಣೆ ಮಾಡಬೇಕಾ ಎಂದು ಚರ್ಚಿಸಿ. ಆಮೇಲೆ ನಿಮ್ಮ ಸಂಗಾತಿಯ ಅಗತ್ಯದ ಬಗ್ಗೆ ನಿಮಗೇನು ತಿಳಿದು ಬಂತೋ ಅದನ್ನು ಪೂರೈಸಲು ಪ್ರಯತ್ನಿಸಿರಿ. ಬಲವಾದ ಬಂಧಕ್ಕೆ ಪ್ರೀತಿಯು ಅತ್ಯಗತ್ಯ ಎಂಬುದನ್ನು ಯಾವತ್ತೂ ಮರೆಯಬೇಡಿ.

ಬೈಬಲ್‌ ತತ್ವ: “ಪ್ರೀತಿಯು . . . ಸ್ವಹಿತವನ್ನು ಹುಡುಕುವುದಿಲ್ಲ.”—1 ಕೊರಿಂಥ 13:4, 5.

ಸಲಹೆ: ನಿಮಗೆ ಇನ್ನೂ ಹೆಚ್ಚು ಪ್ರೀತಿ ತೋರಿಸಬೇಕು ಅಂತ ನಿಮ್ಮ ಸಂಗಾತಿಗೆ ಹೇಳುವುದಕ್ಕಿಂತ ‘ನನ್ನ ಸಂಗಾತಿಗೆ ನನ್ನ ಮೇಲೆ ಇನ್ನೂ ಹೆಚ್ಚು ಪ್ರೀತಿ ಬೆಳೆಯಲು ನಾನೇನು ಮಾಡಬೇಕು?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.

ಡಗ್ಲಸ್‌ ಮತ್ತು ಡೆಬ್ರ

“ನನ್ನ ಅಗತ್ಯಗಳು ಮತ್ತು ನನ್ನ ಬಯಕೆಗಳ ಬಗ್ಗೇನೆ ಹೆಚ್ಚು ಯೋಚಿಸದಿರಲು ನಾನು ಕ್ರಮೇಣವಾಗಿ ಕಲಿತೆ. ನನ್ನ ಗಂಡ ನಮ್ಮ ಕುಟುಂಬಕ್ಕಾಗಿ ಮಾಡುತ್ತಿರುವ ವಿಷಯಗಳಿಗೆ ಇನ್ನೂ ಹೆಚ್ಚು ಗಣ್ಯತೆ ತೋರಿಸಲು ಆರಂಭಿಸಿದೆ. ನಾನು ನನ್ನ ಗಂಡನಿಗೆ ಹೆಚ್ಚು ಪ್ರೀತಿ ತೋರಿಸಿದಾಗ ಅವರು ಸಹ ನನಗೆ ಪ್ರೀತಿ ತೋರಿಸುವುದನ್ನು ಹೆಚ್ಚಿಸಿದರು.”—ಡಗ್ಲಸ್‌ರ ಪತ್ನಿ ಡೆಬ್ರ.

ಏರನ್‌ ಮತ್ತು ಫ್ಲೇವಿಯ

“ಒಬ್ಬರಿನ್ನೊಬ್ಬರ ಇಷ್ಟಗಳೇನು ಅಂತ ಮನಸ್ಸಲ್ಲಿಡಲು ನಾವಿಬ್ಬರೂ ಪ್ರಯತ್ನಿಸುತ್ತೇವೆ. ನನ್ನ ಗಂಡ ಮಾಡಿರುವ ಕೆಲಸಗಳಿಗೆ ನಾನು ಕೃತಜ್ಞತೆ ಹೇಳಿದರೆ ಅವರಿಗೆ ತುಂಬ ಇಷ್ಟವಾಗುತ್ತೆ. ಅದರಿಂದ ನಾನು ಅವರ ಬಗ್ಗೆ ಚಿಂತಿಸುತ್ತೇನೆ ಅಂತ ಅವರಿಗೆ ತಿಳಿಯುತ್ತೆ. ಅವರು ‘ನೀನು ಹೇಗಿದ್ದೀಯಾ’ ಅಂತ ನನ್ನನ್ನು ಕೇಳಿದರೆ ನನಗೆ ತುಂಬ ಇಷ್ಟವಾಗುತ್ತೆ. ಅದರಿಂದ ಅವರು ನನ್ನನ್ನು ಪ್ರೀತಿಸುತ್ತಾರೆ ಎಂದು ನನಗೆ ಗೊತ್ತಾಗುತ್ತೆ.”—ಏರನ್‌ರ ಪತ್ನಿ ಫ್ಲೇವಿಯ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ