ಗೀತೆ 149
ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ
ಮುದ್ರಿತ ಸಂಚಿಕೆ
ಯೆಹೋವನೇ ನಿನ್ನ
ಮುಂದಿದ್ದೇವೆ ಇಂದು
ಕಾರಣ ನೀ ತೋರಿಸಿದ
ಮಹಾ ಪ್ರೀತಿಯು.
ಕೊಟ್ಟೆ ಮಗನನ್ನೇ
ನಮ್ಮ ಉಳಿಸಲು
ಇದಕ್ಕಿಂತ ದೊಡ್ಡ ತ್ಯಾಗ
ಇರಲಾರದು.
(ಪಲ್ಲವಿ)
ಯೇಸು ಪ್ರಾಣ ಅರ್ಪಿಸಿದ
ಬಿಡಿಸಲು ನಮ್ಮನ್ನೆಲ್ಲ,
ಈ ಬಲಿದಾನಕ್ಕಾಗಿ ನಾವು
ಆಭಾರಿ ಸದಾ.
ಸ್ವಇಷ್ಟದಿ ಕ್ರಿಸ್ತ
ಜೀವ ಅರ್ಪಿಸಿದ
ಪ್ರೀತೀಲಿ ಕೊಟ್ಟ ಪರಿಪೂರ್ಣ
ಜೀವ ಮೌಲ್ಯ.
ಇರಲಿಲ್ಲ ಆಗ
ಲೋಕಕ್ಕೆ ನಿರೀಕ್ಷೆ
ಇದೆ ಈಗ
ಅನಂತಜೀವನ ನಿರೀಕ್ಷೆ.
(ಪಲ್ಲವಿ)
ಯೇಸು ಪ್ರಾಣ ಅರ್ಪಿಸಿದ
ಬಿಡಿಸಲು ನಮ್ಮನ್ನೆಲ್ಲ ,
ಈ ಬಲಿದಾನಕ್ಕಾಗಿ ನಾವು
ಆಭಾರಿ ಸದಾ.
(ಇಬ್ರಿ. 9:13, 14; 1 ಪೇತ್ರ 1:18, 19 ಸಹ ನೋಡಿ.)