ಗೀತೆ 86
ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು
1. ಸಾರಳು, ಎಸ್ತೇರ್, ಮರಿಯ,ರೂತರು
ಸಮರ್ಥೆಯರಾದ ಸ್ತ್ರೀ, ಪತ್ನಿಯರು.
ದಿವ್ಯ ಭಕ್ತಿಯೇ ಧ್ಯೇಯ ಅವರದ್ದು.
ನಾಮಧೇಯ ವಿಶ್ವಸ್ಥೆಯರವರು.
ಯೆಹೋವ ಅವರ ಮೆಚ್ಚಿದನು,
ಅನಾಮಧೇಯರೂ ಅವರಲ್ಲಿದ್ದರು.
2. ನಿಷ್ಠೆ, ಧೈರ್ಯ, ಸೌಹಾರ್ದ, ದಯಾಭಾವ
ಮಾನವರಲ್ಲಿ ಪ್ರಿಯ ಗುಣಗಳು.
ಸದ್ಗುಣ ನೆನಪಿಸುವ ಇವರು
ನಮ್ಮ ಅನುಕರಣೆಗೆ ಯೋಗ್ಯರು.
ಸೋದರಿಯರೇ, ನೀವೂ ಹಾಗಿರೆ,
ನಿಮ್ಮ ಸೇವೆ ಯೋಗ್ಯ, ಧನ್ಯರು ನೀವೆಲ್ಲ.
3. ತಾಯಿ, ಮಗಳೇ, ಪತ್ನಿ, ವಿಧವೆಯೇ,
ಇಷ್ಟದಿ ದುಡಿಯುವ ಭಾಗಿಗಳೇ,
ಮಿತ ಸ್ವಭಾವ, ಅಧೀನತೆಗಾಗಿ
ದೇವರಂತೂ ನಿಮ್ಮನ್ನು ಮೆಚ್ಚುವನು.
ಕಾಯುತ್ತಿದೆ ನಿಮ್ಮ ಬಹುಮಾನ.
ಯೆಹೋವ ದೇವರು ನಿಮ್ಮ ಕಾಪಾಡಲಿ.
(ಫಿಲಿ. 4:3; 1 ತಿಮೊ. 2:9, 10; 1 ಪೇತ್ರ 3:4, 5 ಸಹ ನೋಡಿ.)