ಗೀತೆ 81
ನಿನ್ನ ಸೇವೆಯಿಂದ ಬಾಳು ಚೆಂದ!
1. ಮುಂಜಾನೇ ಮಂಜಲ್ಲಿ, ನಗುವನ್ನು ಚೆಲ್ಲಿ,
ಜನಕ್ಕೆ ನೆಮ್ಮದಿ
ನೀಡುವ ವಾಕ್ಯವ ಸಾರುವೆ.
ಸಾರಲು ಸಂದೇಶ, ಮನದಿ ಉಲ್ಲಾಸ.
ಜನರು ಕೇಳಲಿ ಬಿಡಲಿ
ಸಾರುವೆ ಪ್ರೀತಿಲಿ.
(ಪಲ್ಲವಿ)
ನಿನ್ನ ಸೇವೆಯಿಂದ, ಬಾಳು ಈಗ ಚೆಂದ
ಸಾರುವಾಗ ಎಂಥ ಆನಂದ!
ಏನೇ ಆದ್ರೂ ದೇವ
ನೀನೇ ನನ್ನ ಜೀವ
ಬಿಡದೆ ಎಂದೆಂದೂ ಸಾರುವೆ
ಓ ದೇವ!
2. ಮುಸ್ಸಂಜೆ ಸಮಯ, ಮುಗಿಸಿ ಸೇವೆಯ
ಬರಲು ನನ್ನಯ
ಹೃದಯ ಕುಣಿದು ಹಾಡಿದೆ.
ವಾಕ್ಯವ ಸಾರುತ್ತಾ, ಜೀವನ ಸಾರ್ಥಕ
ಮಳೆಲೂ ಚಳಿಲೂ ಸಾರುವೆ
ಎಂದಿಗೂ ಯೆಹೋವ
(ಪಲ್ಲವಿ)
ನಿನ್ನ ಸೇವೆಯಿಂದ, ಬಾಳು ಈಗ ಚೆಂದ
ಸಾರುವಾಗ ಎಂಥ ಆನಂದ!
ಏನೇ ಆದ್ರೂ ದೇವ
ನೀನೇ ನನ್ನ ಜೀವ
ಬಿಡದೆ ಎಂದೆಂದೂ ಸಾರುವೆ
ಓ ದೇವ!
(ಯೆಹೋ. 24:15; ಕೀರ್ತ. 92:2; ರೋಮ. 14:8 ಸಹ ನೋಡಿ.)