ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 22
  • ದೇವರ ಆಳ್ವಿಕೆ ಅಂದರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಆಳ್ವಿಕೆ ಅಂದರೇನು?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡುವ ಉತ್ತರ
  • ದೇವರ ಸರ್ಕಾರದ ಬಗ್ಗೆ ಸತ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ದೇವರ ಸರ್ಕಾರ ಅಂದರೇನು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಶೀಘ್ರದಲ್ಲೇ ಪರದೈಸ್‌ ಭೂಮಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ರಾಜನಾದ ಕ್ರಿಸ್ತನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 22
ದೇವರ ಆಳ್ವಿಕೆಯ ರಾಜನಾದ ಯೇಸು ಸಿಂಹಾಸನದ ಮೇಲೆ ಕೂತಿದ್ದಾನೆ

ದೇವರ ಆಳ್ವಿಕೆ ಅಂದರೇನು?

ಬೈಬಲ್‌ ಕೊಡುವ ಉತ್ತರ

ದೇವರ ಆಳ್ವಿಕೆ ಅಂದರೆ ಯೆಹೋವ ದೇವರು ಸ್ಥಾಪಿಸಿದ ಸರ್ಕಾರ. ‘ದೇವರ ಆಳ್ವಿಕೆಗೆ’ ಬೈಬಲಲ್ಲಿರುವ ಇನ್ನೊಂದು ಹೆಸರು “ಪರಲೋಕ ರಾಜ್ಯ.” ಯಾಕೆಂದರೆ ಇದು ಸ್ವರ್ಗದಿಂದ ಆಳ್ವಿಕೆ ಮಾಡುತ್ತದೆ. (ಮಾರ್ಕ 1:14, 15; ಮತ್ತಾಯ 4:17, ಸತ್ಯವೇದವು) ಒಂದು ಸರ್ಕಾರ ಅಂದಮೇಲೆ ಆಳುವವರು, ಪ್ರಜೆಗಳು, ನಿಯಮ, ಗುರಿ ಈ ತರ ಎಷ್ಟೋ ವಿಷಯಗಳು ಇರುತ್ತದೆ. ದೇವರ ಆಳ್ವಿಕೆಯಲ್ಲೂ ಅದೆಲ್ಲ ಇದೆ. ಆದರೆ ದೇವರ ಸರ್ಕಾರ ಮಾನವ ಸರ್ಕಾರಕ್ಕಿಂತ ನೂರುಪಟ್ಟು ಶ್ರೇಷ್ಠ.

  • ಆಳುವವರು. ದೇವರ ಆಳ್ವಿಕೆಯ ರಾಜ ಯೇಸು ಕ್ರಿಸ್ತ. ಆತನನ್ನು ರಾಜನಾಗಿ ನೇಮಿಸಿದ್ದು ದೇವರು. ಆತನು ಯೇಸುವಿಗೆ ತುಂಬ ಅಧಿಕಾರ ಕೊಟ್ಟಿದ್ದಾನೆ. ಅಷ್ಟೊಂದು ಅಧಿಕಾರ ಆತನು ಯಾವ ಮನುಷ್ಯನಿಗೂ ಕೊಟ್ಟಿಲ್ಲ. (ಮತ್ತಾಯ 28:18) ಯೇಸು ಆತನಿಗಿರುವ ಶಕ್ತಿಯನ್ನು ಒಳ್ಳೇದಕ್ಕೆ ಮಾತ್ರ ಉಪಯೋಗಿಸುತ್ತಾನೆ. ನಂಬಬಹುದಾದ, ಕರುಣಾಮಯಿ ನಾಯಕ ಯೇಸು ಅಂತ ಆತನು ಈಗಾಗಲೇ ತೋರಿಸಿಕೊಟ್ಟಿದ್ದಾನೆ. (ಮತ್ತಾಯ 4:23; ಮಾರ್ಕ 1:40, 41; 6:31-34; ಲೂಕ 7:11-17) ಸ್ವರ್ಗದಲ್ಲಿ ತನ್ನ ಜೊತೆ ‘ರಾಜರಾಗಿ ಈ ಭೂಮಿಯನ್ನ ಆಳಲು’ ಯೇಸು ಎಲ್ಲ ದೇಶಗಳಿಂದ ಜನರನ್ನು ಆರಿಸಿಕೊಂಡಿದ್ದಾನೆ. ದೇವರ ನಿರ್ದೇಶನದ ಪ್ರಕಾರ ಆತನು ಇದನ್ನು ಮಾಡಿದ್ದಾನೆ.—ಪ್ರಕಟನೆ 5:9, 10.

  • ಆಳ್ವಿಕೆಯ ವರ್ಷ. ಮಾನವ ಸರ್ಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಆದರೆ ದೇವರ ಆಳ್ವಿಕೆಗೆ “ನಾಶನೇ ಇಲ್ಲ.”—ದಾನಿಯೇಲ 2:44.

  • ಪ್ರಜೆಗಳು. ದೇವರು ಹೇಳಿದ ಪ್ರಕಾರ ನಡೆಯುವವರೇ ದೇವರ ಆಡಳಿತದ ಪ್ರಜೆ ಆಗುತ್ತಾರೆ. ಅವರ ವಂಶಪರಂಪರೆ, ಹುಟ್ಟೂರು ಯಾವುದಿದ್ದರೂ ಪರವಾಗಿಲ್ಲ.—ಅಪೊಸ್ತಲರ ಕಾರ್ಯ 10:34, 35.

  • ನಿಯಮಗಳು. ದೇವರ ಆಳ್ವಿಕೆಯ ನಿಯಮಗಳು (ಅಥವಾ ಆಜ್ಞೆಗಳು) ಕೆಟ್ಟದ್ದು ಮಾಡದಂತೆ ಪ್ರಜೆಗಳನ್ನು ತಡೆಯುವುದು ಮಾತ್ರ ಅಲ್ಲ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯಮಾಡುತ್ತದೆ. ಉದಾಹರಣೆಗೆ, “‘ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.’ ಇದೇ ಪ್ರಾಮುಖ್ಯವಾದ ಮತ್ತು ಮೊದಲು ಪಾಲಿಸಬೇಕಾದ ಆಜ್ಞೆ. ಇದೇ ತರ ಎರಡನೇ ಆಜ್ಞೆ ‘ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು’” ಅನ್ನುತ್ತದೆ ಬೈಬಲ್‌. (ಮತ್ತಾಯ 22:37-39) ದೇವರ ಆಳ್ವಿಕೆಯ ಪ್ರಜೆಗಳಿಗೆ ದೇವರ ಮೇಲೆ ಬೇರೆಯವರ ಮೇಲೆ ಪ್ರೀತಿ ಇರುತ್ತದೆ. ಹಾಗಾಗಿ ಅವರು ಎಲ್ಲರಿಗೆ ಒಳ್ಳೇದನ್ನೇ ಮಾಡುತ್ತಾರೆ.

  • ಶಿಕ್ಷಣ. ದೇವರ ಆಳ್ವಿಕೆಯಲ್ಲಿ ಇರಬೇಕಾದರೆ ದೇವರು ಇಟ್ಟಿರುವ ಉನ್ನತ ಮಟ್ಟಗಳನ್ನು ಪ್ರಜೆಗಳು ಪಾಲಿಸಬೇಕು. ಅದನ್ನು ಹೇಗೆ ಪಾಲಿಸಬೇಕು ಅಂತ ದೇವರು ಹೇಳಿಕೊಡುತ್ತಾನೆ.

  • ಗುರಿ. ದೇವರ ಆಳ್ವಿಕೆಯಲ್ಲಿ ಆಳುವವರು ಪ್ರಜೆಗಳಿಂದ ಸುಲುಕೊಂಡು ಶ್ರೀಮಂತರಾಗಲ್ಲ. ದೇವರ ಆಳ್ವಿಕೆಯ ಮುಖ್ಯ ಗುರಿ ದೇವರ ಇಷ್ಟಗಳನ್ನು ನೆರವೇರಿಸುವುದೇ. ಆತನನ್ನು ಪ್ರೀತಿಸುವವರು ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಬೇಕು ಅನ್ನುವುದು ಆತನ ಇಷ್ಟಗಳಲ್ಲಿ ಒಂದು. ಇದು ಕೂಡ ಅಲ್ಲಿ ನೆರವೇರುತ್ತೆ.—ಯೆಶಾಯ 35:1, 5, 6; ಮತ್ತಾಯ 6:10; ಪ್ರಕಟನೆ 21:1-4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ