ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/13 ಪು. 12-13
  • ಕ್ಯಾಮರೂನ್‌ ಸುತ್ತೋಣ ಬನ್ನಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ಯಾಮರೂನ್‌ ಸುತ್ತೋಣ ಬನ್ನಿ
  • ಎಚ್ಚರ!—2013
ಎಚ್ಚರ!—2013
g 1/13 ಪು. 12-13

ನಾಡು-ನಿವಾಸಿಗಳು

ಕ್ಯಾಮರೂನ್‌ ಸುತ್ತೋಣ ಬನ್ನಿ

ಬಾಕಾ ಜನರೇ ಬಹುಶಃ ಕ್ಯಾಮರೂನಿನ ಮೂಲನಿವಾಸಿಗಳು. ಇವರನ್ನು ಪಿಗ್ಮಿಗಳೆಂದೂ ಕರೆಯಲಾಗುತ್ತದೆ. ಇಸವಿ 1500ರಲ್ಲಿ ಪೋರ್ಚುಗೀಸರು ಇಲ್ಲಿಗೆ ಬಂದರು. ನೂರಾರು ವರ್ಷಗಳ ನಂತರ ಫುಲಾನಿ ಎಂಬ ಇಸ್ಲಾಮೀ ಜನರು ಉತ್ತರ ಕ್ಯಾಮರೂನ್‌ ಪ್ರದೇಶವನ್ನು ವಶಪಡಿಸಿಕೊಂಡರು. ಇಂದು ಕ್ಯಾಮರೂನ್‌ನಲ್ಲಿ 40% ಜನರು ಕ್ರೈಸ್ತರು. 20% ಮುಸಲ್ಮಾನರು ಮತ್ತು ಉಳಿದ 40% ಜನರು ಸಾಂಪ್ರದಾಯಿಕ ಆಫ್ರಿಕನ್‌ ಧರ್ಮದವರು.

ಕ್ಯಾಮರೂನಿನ ಗ್ರಾಮಾಂತರ ನಿವಾಸಿಗಳು ಅತಿಥಿಸತ್ಕಾರದಲ್ಲಿ ಎತ್ತಿದಕೈ. ಮನೆಗೆ ಬಂದವರನ್ನು ವಂದಿಸಿ, ಸ್ವಾಗತಿಸಿ, ನೀರು ಊಟ ಕೊಡುವುದು ಅಲ್ಲಿನ ವಾಡಿಕೆ. ಅತಿಥಿಸತ್ಕಾರವನ್ನು ನಿರಾಕರಿಸಿದರೆ ಅವಮಾನ ಮಾಡಿದಂತೆ. ಸ್ವೀಕರಿಸಿದರೆ ಗೌರವ ತೋರಿದಂತೆ.

ಮನೆಯವರನ್ನು ವಂದಿಸಿ ಅವರ ಕುಶಲೋಪರಿ ವಿಚಾರಿಸುತ್ತಾ ಮಾತುಕತೆ ಆರಂಭವಾಗುತ್ತೆ. ಜಾನುವಾರುಗಳ ಕ್ಷೇಮದ ಬಗ್ಗೆ ವಿಚಾರಿಸುವುದೂ ಇಲ್ಲಿನ ಸಂಸ್ಕೃತಿ! ಕ್ಯಾಮರೂನ್‌ ನಿವಾಸಿ ಜೋಸೆಫ್‌ ಹೇಳುತ್ತಾರೆ “ಅತಿಥಿ ಹೊರಡುವಾಗ ಬರೀ ‘ಹೋಗಿಬನ್ನಿ’ ಅಂತ ಹೇಳಿದರೆ ಸಾಲದು. ಅತಿಥಿಯ ಜೊತೆ ಸ್ವಲ್ಪ ದೂರ ಮಾತಾಡುತ್ತಾ ಹೋಗಬೇಕು. ಬಳಿಕ ಅವರನ್ನು ಬೀಳ್ಕೊಟ್ಟು ಮನೆಗೆ ಹಿಂದಿರುಗಬೇಕು. ಅತಿಥಿಗೆ ಈ ಎಲ್ಲ ಉಪಚಾರ ಸಿಗದಿದ್ದರೆ ಅವರನ್ನು ಅವಮಾನ ಮಾಡಿದಂತೆ.”

ಕೆಲವೊಂದು ಸಲ ಸ್ನೇಹಿತರೆಲ್ಲ ಸೇರಿ ಒಂದೇ ತಟ್ಟೆಯಲ್ಲಿ ಊಟಮಾಡುತ್ತಾರೆ. ಕೆಲವೊಮ್ಮೆ ಕೈಯಲ್ಲೇ ತಿನ್ನುತ್ತಾರೆ. ಈ ಪದ್ಧತಿ ಒಗ್ಗಟ್ಟಿನ ಸಂಕೇತ ಅಂತ ಭಾವಿಸುತ್ತಾರೆ. ಕಾರಣಾಂತರಗಳಿಂದ ಮುರಿದುಹೋದ ಸ್ನೇಹವನ್ನು ಬೆಸೆಯಲು ಈ ರೀತಿಯ ಊಟದ ಏರ್ಪಾಡು ಮಾಡುತ್ತಾರೆ. ಸಾಮೂಹಿಕ ಭೋಜನ “ನಾವೀಗ ರಾಜಿಯಾಗಿದ್ದೇವೆ” ಅನ್ನೋ ಸಂದೇಶ ಕೊಡುತ್ತೆ. ◼ (g13-E 01)

[ಪುಟ 12ರಲ್ಲಿರುವ ಚಿತ್ರ]

[ಪುಟ 12ರಲ್ಲಿರುವ ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕ್ಯಾಮರೂನ್‌

ಸಾನಾಗ ನದಿ

ಯಾವುಂಡೆ

ಜಾ ನದಿ

ಗಿನೀ ಕೊಲ್ಲಿ

[ಪುಟ 13ರಲ್ಲಿರುವ ಚಿತ್ರ]

ಪಿಗ್ಮಿಗಳಲ್ಲಿ ಹೆಚ್ಚಿನವರ ಎತ್ತರ ನಾಲ್ಕು ಅಡಿಯಿಂದ (1.2 ಮೀ.) ನಾಲ್ಕು ಅಡಿ ಎಂಟು ಇಂಚು (1.42 ಮೀ.) ಇರುತ್ತೆ

[ಪುಟ 13ರಲ್ಲಿರುವ ಚಿತ್ರ]

ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು ಕ್ಯಾಮರೂನ್‌ನಲ್ಲೂ ಇದ್ದಾರೆ. 300ಕ್ಕೂ ಹೆಚ್ಚು ಕ್ರೈಸ್ತ ಸಭೆಗಳನ್ನು ಸ್ಥಾಪಿಸಿದ್ದಾರೆ. ಸುಮಾರು 65,000ಕ್ಕೂ ಹೆಚ್ಚು ಜನರಿಗೆ ಬೈಬಲ್‌ ಕಲಿಸುತ್ತಿದ್ದಾರೆ

[ಪುಟ 13ರಲ್ಲಿರುವ ಚಿತ್ರ]

ಸಾನಾಗ ನದಿಯಲ್ಲಿ ತೋಡುದೋಣಿಯದ್ದೇ ಕಾರುಬಾರು. ಈ ದೋಣಿಯನ್ನು ಮಾಡಲು ಇದೇ ವಸ್ತು ಅಂತ ಉಪಯೋಗಿಸುವುದಿಲ್ಲ

[ಪುಟ 13ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳು ಕ್ಯಾಮರೂನ್‌ನ ಬಾಸಾ ಭಾಷೆಯಲ್ಲಿ ಬೈಬಲಾಧರಿತ ಸಾಹಿತ್ಯವನ್ನು ಪ್ರಕಾಶಿಸಿದ್ದಾರೆ

[ಪುಟ 13ರಲ್ಲಿರುವ ಚಿತ್ರ]

ಒಂದು ಕಿರುನೋಟ

ಜನಸಂಖ್ಯೆ: ಸುಮಾರು 2 ಕೋಟಿ

ರಾಜಧಾನಿ: ಯಾವುಂಡ

ಹವಾಮಾನ: ಉತ್ತರ ಭಾಗದಲ್ಲಿ ಒಣಹವೆ. ಕರಾವಳಿ ಪ್ರದೇಶದಲ್ಲಿ ಆರ್ದ್ರತೆ

ರಫ್ತು-ರವಾನೆ: ಪೆಟ್ರೋಲಿಯಂ, ಕೋಕೋ ಬೀಜ, ಕಾಫಿ, ಹತ್ತಿ, ಮರ, ಅಲ್ಯುಮಿನಿಯಂ

ಭಾಷೆ: ಇಂಗ್ಲಿಷ್‌, ಫ್ರೆಂಚ್‌ ಮತ್ತು ಸುಮಾರು 270 ಆಫ್ರಿಕನ್‌ ಭಾಷೆಗಳು, ಇನ್ನಿತರ ಪ್ರಾಂತೀಯ ಭಾಷೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ