ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/13 ಪು. 3
  • ವಿಶ್ವ-ವೀಕ್ಷಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಶ್ವ-ವೀಕ್ಷಣೆ
  • ಎಚ್ಚರ!—2013
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಮೆರಿಕ
  • ಚೀನಾ
  • ಗ್ರೀಸ್‌
  • ಭಾರತ
  • ಇಟಲಿ
  • ಆತ್ಮಹತ್ಯೆ—ಯುವ ಜನತೆಯನ್ನು ಕಾಡಿಸುತ್ತಿರುವ ಒಂದು ಪಿಡುಗು
    ಎಚ್ಚರ!—1998
  • ಆತ್ಮಹತ್ಯೆ—ಮರೆಯಲ್ಲಿದ್ದು ಕಾಡುತ್ತಿರುವ ಪಿಡುಗು
    ಎಚ್ಚರ!—2000
ಎಚ್ಚರ!—2013
g 10/13 ಪು. 3

ವಿಶ್ವ-ವೀಕ್ಷಣೆ

ಅಮೆರಿಕ

ಅಮೆರಿಕದ ಸೇನೆಯ ಮಾಜಿ ಸೈನಿಕರಲ್ಲಿ ದಿನಕ್ಕೆ 20ಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಯು.ಎಸ್‌. ಡಿಪಾರ್ಟ್‌ಮೆಂಟ್‌ ಆಫ್‌ ವೆಟರನ್ಸ್‌ ಅಫೇರ್ಸ್‌ನಿಂದ ಶುಶ್ರೂಷೆ ಪಡೆಯುವವರಲ್ಲಿ ಪ್ರತಿ ತಿಂಗಳು ಸುಮಾರು 950 ಮಂದಿ ಮಾಜಿ ಸೈನಿಕರು ಆತ್ಮಹತ್ಯೆಗೆ ಯತ್ನಿಸುತ್ತಾರೆ.

ಚೀನಾ

ಚೈನಾ ಡೈಲಿ ವಾರ್ತಾಪತ್ರಿಕೆಯ ವರದಿ ಪ್ರಕಾರ “ಉದ್ಯೋಗವನ್ನು ಅರಸಿ ಇನ್ನೊಂದು ಊರಿಗೆ ಹೋಗುವ ಮೂವತ್ತರೊಳಗಿನ ಮಹಿಳಾ ಮಣಿಗಳಲ್ಲಿ ಅರ್ಧದಷ್ಟು ಮಂದಿ ಮದುವೆಗೆ ಮುನ್ನ ತಾಯಿಯಾಗುತ್ತಿದ್ದಾರೆ. ಕಳೆದ ಪೀಳಿಗೆಗೆ ಹೋಲಿಸಿದರೆ ಈ ಸಂಖ್ಯೆ ಏಕಾಏಕಿ ಏರಿದೆ.” ಅಲ್ಲದೆ “ಗಂಡು ಹೆಣ್ಣು ಮದುವೆ ಆಗದೆ ಬಾಳ್ವೆ ನಡೆಸುವ” ಪದ್ಧತಿಯನ್ನು ಚೀನಾ ಸಮಾಜ ಒಪ್ಪಿಕೊಳ್ಳುತ್ತಿದೆ.

ಗ್ರೀಸ್‌

ಗ್ರೀಸ್‌ನಲ್ಲಿ ಮಲೇರಿಯ ಮತ್ತೆ ತಲೆ ಎತ್ತಿದೆ. 1974ರಲ್ಲಿ ಈ ಕಾಯಿಲೆ ಸಂಪೂರ್ಣ ನಿರ್ಮೂಲವಾಗಿತ್ತು. ಆರ್ಥಿಕ ಹಿನ್ನಡೆ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ ಕೊಡಬೇಕಾದ ಸೌಲಭ್ಯಗಳನ್ನು ಕೊಡದೆ ಇದ್ದದ್ದೇ ಮಲೇರಿಯ ಮರುಕಳಿಸಿರುವುದಕ್ಕೆ ಕಾರಣ ಎನ್ನಲಾಗಿದೆ.

ಭಾರತ

ಒಂದು ಸಮೀಕ್ಷೆಗನುಸಾರ ಭಾರತದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹೆಚ್ಚುತ್ತಿದ್ದರೂ 74% ಜನರು ಪ್ರೀತಿಸಿ ಮದುವೆಯಾಗುವುದಕ್ಕಿಂತ ಮನೆಯವರು ನೋಡಿ ಒಪ್ಪುವವರನ್ನೇ ಮದುವೆಯಾಗಲು ಇನ್ನೂ ಇಷ್ಟಪಡುತ್ತಾರೆ. ಇನ್ನು 89% ಜನರು ಸಂಬಂಧಿಕರ ಜೊತೆ ಕೂಡು-ಕುಟುಂಬದಲ್ಲಿ ಬಾಳಲು ಇಷ್ಟಪಡುತ್ತಾರೆ. ಅಪ್ಪ-ಅಮ್ಮ-ಮಕ್ಕಳು ಅಂತ ಪ್ರತ್ಯೇಕವಾಗಿ ವಾಸಿಸುವುದನ್ನು ಇಷ್ಟಪಡುವುದಿಲ್ಲ. (g13-E 08)

ಇಟಲಿ

“ಶ್ರೀಮಂತ ರಾಷ್ಟ್ರ ಯುರೋಪ್‌ ಮತ್ತು ಅಮೆರಿಕದಲ್ಲಿ [ಕ್ಯಾಥೋಲಿಕ್‌] ಚರ್ಚ್‌ಗೆ ಜನರು ಹೋಗುವುದು ಕಡಿಮೆಯಾಗಿದೆ. ನಮ್ಮ ಸಂಸ್ಕೃತಿ ಹಳೆಯದು, ಚರ್ಚುಗಳೇನೋ ದೊಡ್ಡ ದೊಡ್ಡದು ಆದರೆ ಕಾನ್ವೆಂಟ್‌ಗಳಲ್ಲಿ ಜನರೇ ಇಲ್ಲ. ಚರ್ಚಿನ ಆಡಳಿತ ನಡೆಸುವ ಜನರಲ್ಲಿ ದರ್ಪ ತುಂಬಿದೆ. ಸಂಪ್ರದಾಯ, ಉಡುಗೆ-ತೊಡುಗೆಗಳು ಬರೀ ಆಡಂಬರಕ್ಕೆ ಮಾತ್ರ . . . ಅಂದರೆ 200 ವರ್ಷಗಳಷ್ಟು ಹಿಂದೆ ಚರ್ಚ್‌ ಇದ್ದ ಸ್ಥಿತಿಯಲ್ಲೇ ಇದೆ” ಎಂದಿದ್ದರು ಕ್ಯಾಥೋಲಿಕ್‌ ಕಾರ್ಡಿನಲ್‌ ಕಾರ್ಲೊ ಮರಿಯ ಮಾರ್ಟಿನಿ ಸಂದರ್ಶನವೊಂದರಲ್ಲಿ. ಅವರು ಸತ್ತಮೇಲೆ ಕೋರೀಯೇರೆ ಡೆಲ್ಲಾ ಸೇರಾ ವಾರ್ತಾಪತ್ರಿಕೆ ಇದನ್ನು ಪ್ರಕಟಿಸಿತು.

[ಪುಟ 3ರಲ್ಲಿರುವ ಚಿತ್ರ]

[ಕೃಪೆ]

ಸೈನಿಕರು: U.S. Marine Corps photo by Spc. Cory Grogan/Released; ಕಾರ್ಡಿನಲ್‌: AP Photo/Luca Bruno

[ಪುಟ 3ರಲ್ಲಿರುವ ಚಿತ್ರ]

[ಪುಟ 3ರಲ್ಲಿರುವ ಚಿತ್ರ]

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ